Tag: wedding

  • ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ

    ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ

    ಟಾಲಿವುಡ್‌ನಲ್ಲಿ (Tollywood) ಸಾಕಷ್ಟು ಸಮಯದಿಂದ ವರುಣ್ ತೇಜ್ -ಲಾವಣ್ಯ ತ್ರಿಪಾಠಿ (Lavanya Tripati) ಡೇಟಿಂಗ್ ಸುದ್ದಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಇತ್ತೀಚಿಗೆ ಈ ಜೋಡಿಯ ಮದುವೆಯ ಬಗ್ಗೆ ಸಖತ್ ಸುದ್ದಿಯಾಗಿತ್ತು. ಈ ವರ್ಷ ಹಸೆಮಣೆ (Wedding) ಏರಲಿದ್ದಾರೆ ಎಂದೇ ನ್ಯೂಸ್ ಆಗಿತ್ತು. ಅದಕ್ಕೆಲ್ಲಾ ಈಗ ನಟಿ ಲಾವಣ್ಯ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಟ್ರೆಡಿಷನಲ್ ಫೋಟೋಶೂಟ್‌ನಲ್ಲಿ ಮಿಂಚಿದ ಸೋನಂ ಕಪೂರ್

    ತೆರೆಯ ಮೇಲೆ ವರುಣ್- ಲಾವಣ್ಯ ಜೋಡಿಯ ಕೆಮಿಸ್ಟ್ರಿ ಕಮಾಲ್ ಮಾಡಿದೆ. `ಮಿನಿಸ್ಟರ್’, ಮತ್ತು `ರಾಯಭಾರಿ’ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಎಲ್ಲೂ ಅಧಿಕೃತವಾಗಿ ಈ ಜೋಡಿ ಸ್ಪಷ್ಟನೆ ನೀಡಿಲ್ಲ. ಇತ್ತೀಚಿಗಷ್ಟೇ ತೆಲುಗಿನ ಹಿರಿಯ ನಟ ನಾಗ ಬಾಬು (Actor Naga Babu) ಅವರು ಮಗ ವರುಣ್ ಮದುವೆ ಬಗ್ಗೆ ಸದ್ಯದಲ್ಲೇ ಸಿಹಿಸುದ್ದಿ ನೀಡುತ್ತೇವೆ ಎಂದು ಹೇಳಿದರು.

    ಹಾಗಾಗಿ ವರುಣ್ ತೇಜ್ ಜೊತೆಗಿನ ಲಾವಣ್ಯ ಮದುವೆ ಎಂದು ಸುದ್ದಿ ಸದ್ದು ಮಾಡಿತ್ತು. ಇದೀಗ ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಮದುವೆ ಅನ್ನೋದು ನಿಜಕ್ಕೂ ಸುಂದರ. ಅದು ಸರಿಯಾದ ವ್ಯಕ್ತಿಯೊಂದಿಗೆ ಆಗಬೇಕು ಎಂಬುದು ನನ್ನ ಭಾವನೆ. ಮದುವೆ ಆಗುವ ಕಾಲಕ್ಕೆ ಆಗುತ್ತದೆ. ಹೀಗೆಯೇ ಮದುವೆ ಆಗಬೇಕು ಎಂದು ಕನಸು ಕಂಡವಳು ನಾನಲ್ಲ ಎಂದಿದ್ದಾರೆ ಲಾವಣ್ಯ.

    ಪ್ರಸ್ತುತ್ತ ನನ್ನ ಜೀವನದಲ್ಲಿ ಸಿನಿಮಾಗಳಲ್ಲಿ ನಟಿಸುವುದೇ ಮುಖ್ಯ. ಸಿನಿಮಾ ಬಿಟ್ಟು ಮದುವೆ ಬಗ್ಗೆ ನಾನು ಆಲೋಚನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
    ಈ ಮೂಲಕ ವರುಣ್ ತೇಜ್ ಜೊತೆಗಿನ ಮದುವೆ ಬಗ್ಗೆ ನಟಿ ಬ್ರೇಕ್ ಹಾಕಿದ್ದಾರೆ.

  • ಭೂಮಾ ಮೌನಿಕಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೆಲುಗು ನಟ ಮಂಚು ಮನೋಜ್‌

    ಭೂಮಾ ಮೌನಿಕಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೆಲುಗು ನಟ ಮಂಚು ಮನೋಜ್‌

    ಟಾಲಿವುಡ್ (Tollywood) ನಟ ಮಂಚು ಮನೋಜ್ & ಭೂಮಾ ಮೌನಿಕಾ ರೆಡ್ಡಿ ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಹೊಸ ಬಾಳಿಗೆ ಭೂಮಾ ಮೌನಿಕಾ ರೆಡ್ಡಿ ಜೊತೆ ಮಂಚು ಮನೋಜ್ (Manchu Manoj) ಕಾಲಿಟ್ಟಿದ್ದಾರೆ.

    ಮಾರ್ಚ್ 3ರಂದು ನಡೆದ ಅದ್ಧೂರಿ ಕಲ್ಯಾಣದಲ್ಲಿ ಮಂಚು ಮನೋಜ್- ಭೂಮಾ ಮೌನಿಕಾ ರೆಡ್ಡಿ (Bhuma Mounika Reddy) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರಿಗೂ ಇದು 2ನೇ ಮದುವೆ (Wedding) ಆಗಿದೆ. ಇಬ್ಬರೂ ತಮ್ಮ ಜೀವನದಲ್ಲಿ ಏಳು ಹೆಜ್ಜೆ ಇಡುತ್ತಾ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಭೂಮಾ ಮೌನಿಕಾ ರೆಡ್ಡಿ ದಿವಂಗತ ಭೂಮಾ ನಾಗಿರೆಡ್ಡಿ ಮತ್ತು ಶೋಭಾ ರೆಡ್ಡಿ ಅವರ 2ನೇ ಪುತ್ರಿಯಾಗಿದ್ದಾರೆ. ಮೌನಿಕಾಳನ್ನು ಪ್ರೀತಿಸುತ್ತಿದ್ದ ಮಂಚು ಮನೋಜ್ ಈಗ ಅವಳಿಗೆ ಮೂರು ಗಂಟು ಹಾಕಿದ್ದಾರೆ. ಈ ಜೋಡಿಗೆ ಅನೇಕ ಸಿನಿ ಮತ್ತು ರಾಜಕೀಯ ಗಣ್ಯರು ಮದುವೆಗೆ ಆಗಮಿಸಿ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ತಂದೆ ಮೋಹನ್ ಬಾಬು (Mohan Babu) ಮತ್ತು ಸಹೋದರಿ ಮಂಚು ಲಕ್ಷ್ಮಿ (Manchu Lakshmi) ಮದುವೆಯಲ್ಲಿ ಮಿಂಚಿದ್ದಾರೆ. ಮಂಚು ಮನೋಜ್- ಮೌನಿಕಾಗೆ 2ನೇ ಮದುವೆ ಆಗಿದ್ದರೂ ಕೂಡ ಅದ್ದೂರಿಯಾಗಿ ಮದುವೆ ಮಾಡಲಾಯಿತು. ನವಜೋಡಿಗೆ ಇದೀಗ ಅಭಿಮಾನಿಗಳಿಂದ ಸೆಲೆಬ್ರಿಟಿ ಸ್ನೇಹಿತರಿಂದ ಶುಭಾಶಯಗಳು ಹರಿದುಬರುತ್ತಿದೆ.

  • ಫಸ್ಟ್ ನೈಟ್‌ನ ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್

    ಫಸ್ಟ್ ನೈಟ್‌ನ ಬೆಡ್‌ರೂಮ್ ಫೋಟೋ ಹಂಚಿಕೊಂಡ ನಟಿ ಸ್ವರಾ ಭಾಸ್ಕರ್

    ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ ಇತ್ತೀಚಿಗೆ ಪೊಲಿಟಿಕಲ್ ಲೀಡರ್ ಫಹಾದ್ ಅಹ್ಮದ್ (Fahad Ahamad) ಅವನ್ನ ಮದುವೆಯಾಗಿ ಅಚ್ಚರಿ ಮೂಡಿಸಿದ್ದರು. ಬಹುಕಾಲದ ಗೆಳೆಯನ ಜೊತೆ ಸ್ವರಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ತಮ್ಮ ಮೊದಲ ರಾತ್ರಿಯ ಬೆಡ್‌ರೂಮ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

    ಸಮಾಜವಾದಿ ಪಕ್ಷದ ಯುವ ಅಧ್ಯಕ್ಷ ಫಹಾದ್ ಜೊತೆ ಸ್ವರಾ ವಿಶೇಷ ಕಾಯ್ದೆಯಡಿ ಜ.6ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಬಳಿಕ ಇತ್ತೀಚಿಗೆ ತಮ್ಮ ಮದುವೆಯ ಬಗ್ಗೆ ಸ್ವರಾ ಅಧಿಕೃತವಾಗಿ ತಿಳಿಸಿದ್ದರು. ಅಣ್ಣ ಎಂದು ಕರೆದು ಈಗ ಅವರನ್ನೇ ಮದುವೆಯಾಗಿದ್ದೀರಾ ಎಂದು ಟ್ರೋಲ್ ಮಾಡಲಾಯ್ತು. ಹೀಗೆ ಸಾಕಷ್ಟು ಟೀಕೆಗಳ ನಡುವೆ ಈ ನವಜೋಡಿ ದಾಂಪತ್ಯ ಜೀವನವನ್ನು ಖುಷಿಯಿಂದ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಮದುವೆ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್

    ಇತ್ತೀಚಿಗಷ್ಟೇ ಸ್ವರಾ- ಫಯಾದ್ ಜೋಡಿ ಮೊದಲ ರಾತ್ರಿಯನ್ನು ಆಚರಿಸಿದ್ದಾರೆ. ಸ್ವರಾ ಅವರ ತಾಯಿ ಮಲಗುವ ಕೋಣೆಯನ್ನು ಸುಂದರವಾಗಿ ಅಲಂಕರಿಸಿದರು. ಈ ಕುರಿತ ಫೋಟೋವನ್ನ ಸ್ವರಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಇದು ಕೂಡ ಈಗ ಟ್ರೋಲಿಗರ ಬಾಯೊಗೆ ಆಹಾರವಾಗಿದೆ. ಫಸ್ಟ್ ನೈಟ್‌ನ ಬೆಡ್‌ರೂಮ್ ಫೋಟೋವನ್ನ ಹಂಚಿಕೊಂಡಿದ್ದ ನಟಿಯ ಪೋಸ್ಟ್ ಸಖತ್ ಟ್ರೋಲ್ ಮಾಡಲಾಗುತ್ತಿದೆ.

  • ಹೃತಿಕ್ ರೋಷನ್- ಸಬಾ ಮದುವೆ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್

    ಹೃತಿಕ್ ರೋಷನ್- ಸಬಾ ಮದುವೆ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್

    ಬಾಲಿವುಡ್ (Bollywood) ನಟ ಹೃತಿಕ್ ರೋಷನ್ (Hrithik Roshan) ಮತ್ತು ಸಬಾ ಅಜಾದ್ (Saba Azad) ಲವ್ ವಿಚಾರ ಇದೀಗ ಗುಟ್ಟಾಗಿಯೇನು ಉಳಿದಿಲ್ಲ. ಇತ್ತೀಚಿಗೆ ಸಾರ್ವಜನಿಕ ಸ್ಥಳದಲ್ಲಿ ಸಬಾ- ಹೃತಿಕ್ ಇಬ್ಬರು ಲಿಪ್ ಕಿಸ್ ಮಾಡಿ ಅಚ್ಚರಿ ಮೂಡಿಸಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಹೃತಿಕ್- ಸಬಾ ಬಗ್ಗೆ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ.

    ನಟ ಹೃತಿಕ್ ರೋಷನ್ ತಮ್ಮ ಮೊದಲ ಪತ್ನಿಗೆ ಡಿವೋರ್ಸ್ ಕೊಟ್ಟ ಮೇಲೆ ಸಬಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ. ಮುಂಬೈ ಮಹಾನಗರಿಯಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಬಿಟೌನ್ ಸ್ಟಾರ್ ಪಾರ್ಟಿಗಳಿಗೂ ಜೊತೆಯಾಗಿ ಹೋಗುತ್ತಿದ್ದಾರೆ. ಹೀಗಿರುವಾಗ ಹೃತಿಕ್ ಮದುವೆ (Wedding) ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ: ನಟ ಗೋಪಿಚಂದ್‌ಗೆ ಸ್ಯಾಂಡಲ್‌ವುಡ್‌ ನಿರ್ದೇಶಕ ಎ.ಹರ್ಷ ಆ್ಯಕ್ಷನ್ ಕಟ್

    ಈ ವರ್ಷ ನವೆಂಬರ್‌ನಲ್ಲಿ ಹೃತಿಕ್ ರೋಷನ್- ಸಬಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಟ್ವೀಟ್ ವೈರಲ್ ಆಗಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಈ ಮದುವೆ ಸುದ್ದಿ ನಿಜಾನಾ ಎಂಬುದನ್ನ ಹೃತಿಕ್-ಸಬಾ ಇಬ್ಬರು ಸ್ಪಷ್ಟನೆ ನೀಡಿಲ್ಲ.

    ಹೃತಿಕ್ ರೋಷನ್ ಸದ್ಯ ʻಫೈಟರ್ʼ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ತೆರೆಯ ಮೇಲೆ ರೊಮ್ಯಾನ್ಸ್ ಮಾಡಲು ಈ ಜೋಡಿ ರೆಡಿಯಾಗಿದೆ.

  • `ಸೀತಾ ರಾಮಂ’ ನಾಯಕಿಗೆ ಮದುವೆ ಪ್ರಪೋಸಲ್‌, ಖಡಕ್‌ ಉತ್ತರ ಕೊಟ್ಟ ನಟಿ

    `ಸೀತಾ ರಾಮಂ’ ನಾಯಕಿಗೆ ಮದುವೆ ಪ್ರಪೋಸಲ್‌, ಖಡಕ್‌ ಉತ್ತರ ಕೊಟ್ಟ ನಟಿ

    `ಸೀತಾ ರಾಮಂ’ (Seetha Ramam) ಖ್ಯಾತಿಯ ನಟಿ ಮೃಣಾಲ್ ಠಾಕೂರ್ ಸೌತ್ ಮತ್ತು ಬಾಲಿವುಡ್ (Bollywood) ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ನಟಿ ಮೃಣಾಲ್‌ಗೆ ಮದುವೆ ಪ್ರಪೋಸಲ್‌ವೊಂದು ಅರಸಿ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ನಟಿಗೆ ಮದುವೆಯಾಗುವಂತೆ ಅಭಿಮಾನಿಯೊಬ್ಬ ಮನವಿ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.

    ದುಲ್ಕರ್ ಸಲ್ಮಾನ್‌ಗೆ (Dulquer Salman) ನಾಯಕಿಯಾಗುವ ಮೂಲಕ ಸೌಂಡ್ ಮಾಡಿದ್ದ ನಟಿ ಮೃಣಾಲ್‌ಗೆ ಚಿತ್ರರಂಗದಲ್ಲಿ ಬಂಪರ್ ಅವಕಾಶಗಳು ಅರಸಿ ಬರುತ್ತಿದೆ. ತೆಲುಗಿನಲ್ಲಿ ನಾನಿಗೆ ಮತ್ತು ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್‌ಗೆ (Akshay Kumar) ನಾಯಕಿಯಾಗುವ ಮೂಲಕ ಮೃಣಾಲ್ ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ: ಪವನ್ ಕಲ್ಯಾಣ್ ಚಿತ್ರದಲ್ಲಿ ಸೊಂಟ ಬಳುಕಿಸಲು ಸಜ್ಜಾದ ನಟಿ ಶ್ರೀಲೀಲಾ

    ಇದೀಗ ಸೋಷಿಯಲ್ ಮೀಡಿಯಾದಲ್ಲಿ ನಟಿ ಮೃಣಾಲ್‌ಗೆ ಅಭಿಮಾನಿ ಕಡೆಯಿಂದ ಮದುವೆ ಪ್ರಪೋಸಲ್ ಬಂದಿದೆ. ಅದಕ್ಕೆ ಪ್ರತಿಯಾಗಿ ನಟಿ ಖಡಕ್ ಉತ್ತರ ನೀಡಿದ್ದಾರೆ.

     

    View this post on Instagram

     

    A post shared by Mrunal Thakur (@mrunalthakur)

    ಇತ್ತೀಚಿಗೆ ನಟಿ ಮೃಣಾಲ್ ಚೆಂದದ ವೀಡಿಯೋವೊಂದು ಶೇರ್ ಮಾಡಿದ್ದರು. ಈ ವೀಡಿಯೋ ಕ್ಯೂಟ್ ಎನಿಸಿತು. ಆಮೇಲೆ ಡಿಲೀಟ್ ಮಾಡಬಹುದು ಎಂದು ಅಡಿಬರಹ ನೀಡಿದ್ದರು. ಈ ವೀಡಿಯೋಗೆ ಅಭಿಮಾನಿಯೊಬ್ಬ, ನನ್ನ ಕಡೆಯಿಂದ ಸಂಬಂಧ ಪಕ್ಕಾ ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ನಟಿ, ನನ್ನ ಕಡೆಯಿಂದ ನೋ ಎಂದು ಹೇಳಿದ್ದಾರೆ. ಅಭಿಮಾನಿಯ ಮದುವೆ ಪ್ರಪೋಸಲ್‌ಗೆ ಮೃಣಾಲ್, ನೋ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ.

  • ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ 19ರ ಯುವಕ ಕುಸಿದು ಬಿದ್ದು ಸಾವು

    ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ 19ರ ಯುವಕ ಕುಸಿದು ಬಿದ್ದು ಸಾವು

    ಹೈದರಾಬಾದ್: ಯುವಕನೊಬ್ಬ ಸಂಬಂಧಿಕರ ಮದುವೆಯಲ್ಲಿ (Wedding) ನೃತ್ಯ (Dance) ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

    ಮಹಾರಾಷ್ಟ್ರ ಮೂಲದ ಮುತ್ಯಂ (19) ಮೃತ ಯುವಕ. ತೆಲಂಗಾಣದ ನಿರ್ಮಲ್ ಜಿಲ್ಲೆಯ ಪಾರ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುತ್ಯುಂ ಸಂಬಂಧಿಕರ ವಿವಾಹ ಆರತಕ್ಷತೆಯಲ್ಲಿ ನೃತ್ಯ ಮಾಡುತ್ತಿದ್ದ.

    ಈ ವೇಳೆ ಆತ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾನೆ. ತಕ್ಷಣ ಮದುವೆಯಲ್ಲಿ ನೆರೆದಿದ್ದ ಅತಿಥಿಗಳು ಮುತ್ಯಂನನ್ನು ಭೈಂಸಾ ಏರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಮುತ್ಯುಂ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈಗೆ ಹೈಕಮಾಂಡ್ ಬಹುಪರಾಕ್ – ಸಕ್ಸಸ್ ಆಗುತ್ತಾ ನಮೋ ಗೇಮ್‍ಪ್ಲಾನ್?

    ಕಳೆದ 4 ದಿನಗಳಲ್ಲಿ ತೆಲಂಗಾಣದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಇದಕ್ಕೂ ಮೊದಲು, 24 ವರ್ಷದ ಪೊಲೀಸ್ ಪೇದೆಯೊಬ್ಬರು ಫೆ. 22ರಂದು ಹೈದರಾಬಾದ್‍ನ ಜಿಮ್‍ನಲ್ಲಿ ವ್ಯಾಯಾಮ ಮಾಡುವಾಗ ಹೃದಯ ಸ್ತಂಭನದಿಂದ ಸಾವನ್ನಪ್ಪಿದರು. ಇದನ್ನೂ ಓದಿ: UK ನಲ್ಲಿ ಕೆಲಸ ಕೊಡಿಸೋದಾಗಿ ಮಹಿಳೆಯರಿಗೆ ವಂಚನೆ- ಬೆಂಗ್ಳೂರಲ್ಲಿ ನೈಜೀರಿಯಾ ಪ್ರಜೆ ಅರೆಸ್ಟ್

  • ಮದುವೆ ವೇಳೆ ಹೃದಯಾಘಾತದಿಂದ ವಧು ಸಾವು – ತಂಗಿಗೆ ತಾಳಿ ಕಟ್ಟಿದ ವರ

    ಮದುವೆ ವೇಳೆ ಹೃದಯಾಘಾತದಿಂದ ವಧು ಸಾವು – ತಂಗಿಗೆ ತಾಳಿ ಕಟ್ಟಿದ ವರ

    ಗಾಂಧಿನಗರ: ವಧುವೊಬ್ಬಳು (Bride) ಮದುವೆ (Wedding) ದಿನವೇ ಹೃದಯಘಾತದಿಂದ ಮೃತಪಟ್ಟ ಘಟನೆ ಗುಜರಾತಿನ (Gujarat) ಸುಭಾಷ್‍ನಗರದ ಭಾವನಗರದಲ್ಲಿ ನಡೆದಿದೆ.

    ಭಾವನಗರದ ಭಗವಾನೇಶ್ವರ ಮಹಾದೇವ ದೇವಸ್ಥಾನದ ಮುಂಭಾಗದಲ್ಲಿ ಈ ಅಹಿತಕರ ಘಟನೆ ನಡೆದಿದೆ. ಜಿನಾಭಾಯಿ ರಾಥೋಡ್ ಎಂಬವರ ಪುತ್ರಿ ಹೇತಾಲ್ ಹಾಗೂ ನಾರಿ ಗ್ರಾಮದ ರಾಣಾಭಾಯ್ ಬೂತಭಾಯ್ ಅಲ್ಗೋಟಾರ್ ಅವರ ಮಗ ವಿಶಾಲ್ ಅವರಿಬ್ಬರಿಗೂ ಮದುವೆ ನಡೆಯುತ್ತಿತ್ತು.

    ಮದುವೆಯ ವಿಧಿವಿಧಾನಗಳನ್ನು ನಡೆಸುತ್ತಿದ್ದಾಗ ಹೇತಾಲ್ ತಲೆ ಸುತ್ತಿ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಹೇತಾಲ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

    ಹೇತಾಲ್‍ನ ಸಾವಿನಿಂದ ಕುಟುಂಬ ಶೋಕದಲ್ಲಿದ್ದರೂ ಮದುವೆಯ ಆಚರಣೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ಹೇತಾಲ್‍ನ ತಂಗಿಗೆ ವರ ವಿಶಾಲ್ ತಾಳಿ ಕಟ್ಟಿದ್ದಾನೆ. ಸಮಾರಂಭ ಮುಗಿಯುವವರೆಗೂ ಹೇತಲ್ ಅವರ ಮೃತದೇಹವನ್ನು ಕೋಲ್ಡ್ ಸ್ಟೋರೇಜ್‍ನಲ್ಲಿ ಇಡಲಾಗಿತ್ತು ಎಂದು ವರದಿಯಾಗಿದೆ. ಇದನ್ನೂ ಓದಿ: ತಂದೆ, ತಾಯಿಯ ದೇವಸ್ಥಾನ ನಿರ್ಮಿಸಿ ದಿನನಿತ್ಯ ಪೂಜೆ ಸಲ್ಲಿಸುತ್ತಿರುವ ಪುತ್ರ

    ಭಾವನಗರ ನಗರದ ಕಾರ್ಪೋರೇಟರ್ ಮತ್ತು ಮಾಲ್ಧಾರಿ ಸಮಾಜದ ಮುಖಂಡ ಲಕ್ಷ್ಮಣಭಾಯ್ ರಾಥೋಡ್ ಮಾತನಾಡಿ, ಘಟನೆಯನ್ನು ಅತ್ಯಂತ ದುಃಖಕರವಾಗಿದೆ. ಮಗಳ ಸಾವಿನಿಂದ ಕುಟುಂಬವು ಆಘಾತಕ್ಕೊಳಗಾಗಿದ್ದರೂ, ವರ ಮತ್ತು ಅವರ ಕುಟುಂಬವನ್ನು ಬರಿಗೈಯಲ್ಲಿ ಕಳುಹಿಸದೆ ಮಾದರಿಯಾಗಿದ್ದಾರೆ ಎಂದರು. ಇದನ್ನೂ ಓದಿ: ಸಿದ್ರಾಮಣ್ಣನಿಗೆ ಕಟು ಸತ್ಯ ಎದುರಿಸುವ ಕಾಲ ಬಂದಿದೆ: ಬೊಮ್ಮಾಯಿ ವಾಗ್ದಾಳಿ

  • ಅನ್ಯಕೋಮಿನ ವ್ಯಕ್ತಿಯನ್ನು ಸ್ವರಾ ಭಾಸ್ಕರ್‌ ಮದುವೆಯಾಗಿದ್ದಕ್ಕೆ ಶ್ರದ್ಧಾ ವಾಕರ್‌ ಪ್ರಕರಣ ನೆನಪಿಸಿದ ಸಾಧ್ವಿ

    ಅನ್ಯಕೋಮಿನ ವ್ಯಕ್ತಿಯನ್ನು ಸ್ವರಾ ಭಾಸ್ಕರ್‌ ಮದುವೆಯಾಗಿದ್ದಕ್ಕೆ ಶ್ರದ್ಧಾ ವಾಕರ್‌ ಪ್ರಕರಣ ನೆನಪಿಸಿದ ಸಾಧ್ವಿ

    ಬಾಲಿವುಡ್ (Bollywoo) ನಟಿ ಸ್ವರಾ ಭಾಸ್ಕರ್ (Swara Bhaskar) ಅವರು ಇತ್ತೀಚಿಗೆ ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಅವರನ್ನು ಮದುವೆಯಾದರು. ಹಿಂದೂ ಹುಡುಗಿ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದಕ್ಕೆ ಈ ಜೋಡಿಯ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈಗ ನಟಿ ಸ್ವರಾ ಭಾಸ್ಕರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ (Sadhvi Prachi) ರಾಂಗ್ ಆಗಿದ್ದಾರೆ. ಶ್ರದ್ಧಾ ವಾಕರ್ (Shraddha Walker) ಕಥೆ ನೆನಪಿಸಿ ನಿಮಗೂ ಫ್ರಿಡ್ಜ್ ಗತಿ ಬರಬಹುದು ಎಂದು ಸ್ವರಾಗೆ ಎಚ್ಚರಿಸಿದ್ದಾರೆ.

    ಶ್ರದ್ಧಾ ವಾಕರ್ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಫ್ತಾಬ್ ತನ್ನ ಲವರ್ ಶ್ರದ್ಧಾ ವಾಕರ್ ಅವರ ದೇಹವನ್ನು ಕತ್ತರಿಸಿ 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟಿದ್ದ. ಈ ಪ್ರಕರಣ ಬೆಳಕಿಗೆ ಬಂದ ನಂತರ ಶಾಕ್ ಆಗಿತ್ತು. ಈಗ ಈ ಪ್ರಕರಣಕ್ಕೂ ಸ್ವರಾ ಭಾಸ್ಕರ್ ಮದುವೆಗೂ ಲಿಂಕ್ ಮಾಡಿ ಸಾಧ್ವಿ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನೀಲಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ ಅನುಪಮಾ ಗೌಡ

    ಶ್ರದ್ಧಾ ಅವರ ದೇಹವನ್ನು 35 ತುಂಡುಗಳನ್ನಾಗಿ ಮಾಡಿದ ಪ್ರಕರಣದ ಬಗ್ಗೆ ಸ್ವರಾ ಅವರು ಹೆಚ್ಚು ಗಮನವಹಿಸಿಲ್ಲ ಅನಿಸುತ್ತದೆ. ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರು ಫ್ರಿಡ್ಜ್‌ ಒಮ್ಮೆ ನೋಡಬೇಕು. ಮದುವೆ ಅವರ ವೈಯಕ್ತಿಕ ಆಯ್ಕೆ. ಆದ್ದರಿಂದ ನನಗೇನು ಆಗುವುದಿಲ್ಲ. ಆದರೆ, ಶ್ರದ್ಧಾಗೆ ಬಂದ ಗತಿ ಸ್ವರಾಗೂ ಬರಬಹುದು ಎಂದಿದ್ದಾರೆ.

    ನಟಿ ಸ್ವರಾ ಭಾಸ್ಕರ್ ಅವರು ಈ ಮೊದಲಿನಿಂದಲೂ ಹಿಂದೂ ಧರ್ಮದ ವಿರೋಧಿಯೇ ಆಗಿದ್ದರು. ಬೇರೆ ಧರ್ಮದವರನ್ನು ಅವರು ಮದುವೆ ಆಗುತ್ತಾರೆ ಎಂದು ನಾನು ಮೊದಲೇ ಊಹೆ ಮಾಡಿದ್ದೆ, ಅದು ಈಗ ಆಗಿದೆ. ಅವರು ಮುಸ್ಲಿಂನನ್ನು ಮದುವೆ ಆಗಿದ್ದಾರೆ ಎಂದು ಸಾಧ್ವಿ ಹೇಳಿದ್ದಾರೆ. ಸದ್ಯ ಸಾಧ್ವಿ ಮಾತಿಗೆ ಸ್ವರಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟ ನಿಹಾಲ್- ರಿಷಿಕಾ ಶರ್ಮಾ ಅದ್ದೂರಿ ರಿಸೆಪ್ಷನ್ ಫೋಟೋಗಳು

    ನಟ ನಿಹಾಲ್- ರಿಷಿಕಾ ಶರ್ಮಾ ಅದ್ದೂರಿ ರಿಸೆಪ್ಷನ್ ಫೋಟೋಗಳು

    `ಟ್ರಂಕ್’ ಮತ್ತು `ವಿಜಯಾನಂದ’ ಚಿತ್ರ ಖ್ಯಾತಿಯ ನಟ ನಿಹಾಲ್ (Actor Nihal)  ಮತ್ತು ನಿರ್ದೇಶಕಿ ರಿಷಿಕಾ ಶರ್ಮಾ (Director Rishika Sharma) ಅವರು ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಗ್ರ್ಯಾಂಡ್ ರಿಸೆಪ್ಷನ್ (Grand Reception) ಫೋಟೋಗಳು ನಟ ನಿಹಾಲ್ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನವದಂಪತಿ ಫೋಟೋಗಳು ಸದ್ದು ಮಾಡ್ತಿದೆ.

    ಸ್ಯಾಂಡಲ್ವುಡ್ (Sandalwood) ನಟ ನಿಹಾಲ್- ರಿಷಿಕಾ ಶರ್ಮಾ ಮದುವೆ (ಫೆ.15)ರಂದು ಬೆಂಗಳೂರಿನ ಮಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ನಡೆದಿತ್ತು. ಕುಟುಂಬಸ್ಥರು ಮತ್ತು ಆಪ್ತರು ಈ ಮದುವೆಯಲ್ಲಿ ಭಾಗಿಯಾಗಿದ್ದರು. ಇನ್ನೂ ನಿಹಾಲ್ ಮತ್ತು ರಿಷಿಕಾ ಅವರದ್ದು ಪಕ್ಕಾ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. 9 ವರ್ಷಗಳ ಪ್ರೀತಿಯನ್ನು ಕುಟುಂಬಸ್ಥರಿಗೆ ತಿಳಿಸಿ, ಹಿರಿಯರ ಒಪ್ಪಿಗೆಯ ಮೇರೆಗೆ ಹಸೆಮಣೆ ಏರಿದ್ದಾರೆ.

    ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಜಿ.ವಿ ಅಯ್ಯರ್ ಅವರ ಮೊಮ್ಮಗಳು ರಿಷಿಕಾ ಶರ್ಮಾ. ನಿರ್ದೇಶನದ ಕಡೆ ಹೆಚ್ಚಿನ ಒಲವಿದ್ದ ಕಾರಣ `ಟ್ರಂಕ್ ಮತ್ತು `ವಿಜಯಾನಂದ’ ಸಿನಿಮಾವನ್ನು ರಿಷಿಕಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು. ಈ ಎರಡು ಸಿನಿಮಾಗಳಿಗೆ ನಿಹಾಲ್ ನಾಯಕನಾಗಿ ಮಿಂಚಿದ್ದರು.

    ಇದೀಗ ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರ ಧಾರವಾಡದಲ್ಲಿ (Dharwad) ಫೆ.17ರಂದು ವಿಜಯಾನಂದ ನಟ ನಿಹಾಲ್-ರಿಷಿಕಾ ರಿಸೆಪ್ಷನ್ ಅದ್ದೂರಿಯಾಗಿ ನಡೆದಿದೆ. ರಿಷಿಕಾ ಕೆಂಪು ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಿಹಾಲ್ ಕಂದು ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ. ರೆಟ್ರೋ ಲುಕ್‌ನಲ್ಲಿ ಕೂಡ ಈ ಜೋಡಿ ಮಿಂಚಿದ್ದಾರೆ.

    ನಿಹಾಲ್-ರಿಷಿಕಾ ಶರ್ಮಾ ದಂಪತಿಯ ಸುಂದರ ಫೋಟೋಶೂಟ್‌ಗಳು `ಯುವ ಆರ್ಟ್ಸ್ ಸ್ಟುಡಿಯೋಸ್‌’ನ (Yuva Art Studio’s) ರೂವಾರಿ ಹರ್ಷದ್ ಉದಯ್ ಕಾಮತ್ ಅವರ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಹರ್ಷದ್ ಅವರ ಕ್ಯಾಮೆರಾ ಕೈಚಳಕಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k