Tag: wedding

  • 12 ವರ್ಷದ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ಯಾಕೆ? ಡಿವೋರ್ಸ್ ಬಗ್ಗೆ ಬಾಯ್ಬಿಟ್ಟ ಅನುಪ್ರಭಾಕರ್

    12 ವರ್ಷದ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ಯಾಕೆ? ಡಿವೋರ್ಸ್ ಬಗ್ಗೆ ಬಾಯ್ಬಿಟ್ಟ ಅನುಪ್ರಭಾಕರ್

    ಸ್ಯಾಂಡಲ್‌ವುಡ್‌ನ (Sandalwood) ಪ್ರತಿಭಾನ್ವಿತ ನಟಿ ಅನುಪ್ರಭಾಕರ್ (Anuprabhakar) ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. `ಹೃದಯ ಹೃದಯ’ (Hrudaya Hrudaya) ಚಿತ್ರದ ಮೂಲ ಶಿವಣ್ಣನಿಗೆ ನಾಯಕಿಯಾದರು. ಕೆರಿಯರ್ ಪೀಕ್‌ನಲ್ಲಿರುವಾಗಲೇ ಹಿರಿಯ ನಟಿ ಜಯಂತಿ (Jayanthi) ಅವರ ಮಗ ಕೃಷ್ಣ ಕುಮಾರ್ ಜೊತೆ ಅನು ಹಸೆಮಣೆ ಏರಿದ್ದರು. 12 ವರ್ಷಗಳ ದಾಂಪತ್ಯಕ್ಕೆ ಡಿವೋರ್ಸ್ (Divorce) ತೆಗೆದುಕೊಳ್ಳುವ ಮೂಲಕ ಅಂತ್ಯವಾಗಿದ್ದೇಕೆ ಎಂಬುದರ ಬಗ್ಗೆ ಈಗ ನಟಿ ಅನುಪ್ರಭಾಕರ್ ಇದೀಗ ಮೌನ ಮುರಿದಿದ್ದಾರೆ. ಮೊದಲ ಮದುವೆ ಬಗ್ಗೆ ಮೊದಲ ಬಾರಿಗೆ ನಟಿ ಮಾತನಾಡಿದ್ದಾರೆ.

    ಕನ್ನಡ, ಇಂಗ್ಲೀಷ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಅನುಪ್ರಭಾಕರ್ (Anuprabhakar) ಅವರು ನಟಿ ಜಯಂತಿ ಜೊತೆಗಿನ ಒಡನಾಟದ ಬಗ್ಗೆ ಮತ್ತು ಮೊದಲ ಪತಿ ಜೊತೆಗಿನ ಡಿವೋರ್ಸ್ ಬಗ್ಗೆ ಮೊದಲ ಬಾರಿಗೆ ನಟಿ  ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ಡಿವೋರ್ಸ್ ನಂತರ ವಾಪನ್ ನಾನು, ನನ್ನ ತಾಯಿ ಮನೆಗೆ ಬಂದೆ. ನನ್ನ ಬಗ್ಗೆ ಹುಡುಕಿದರೆ ಬರುವ ಮೊದಲ ವಿಚಾರವೇ ನನ್ನ ಡಿವೋರ್ಸ್. ನೆಗೆಟಿವ್ ಕಾಮೆಂಟ್ ನಮ್ಮ ಜೀವನದ ಒಂದು ಭಾಗ. ಅದನ್ನು ಸ್ವೀಕರಿಸಿ, ಮುಂದೆ ಸಾಗಿಸಬೇಕು. ಮದುವೆ ಆದ್ಮೇಲೆ ನಾನು ಕೆಲಸ ನಿಲ್ಲಿಸಬಾರದೆಂದು ಎಂದು ಜಯಂತಿ ಅಮ್ಮನವರು ಹೇಳಿದ್ದರು. ಮದುವೆ ಆದ ವರ್ಷವೇ 9 ಸಿನಿಮಾಗಳಲ್ಲಿ ನಟಿಸಿದೆ. ಮೊದಲಿನಿಂದಲೂ ಡ್ರೆಸ್ ತುಂಬಾ ಸಿಂಪಲ್ ಹಾಕಿಕೊಳ್ಳುವುದು. ಗ್ರ‍್ಯಾಂಡ್ ಆಗಿ ರೆಡಿ ಆಗಬೇಕು ಅಂತ ಅವರೇ ಸಲಹೆ ಕೊಡುತ್ತಿದ್ದರು. ಮೊದಲ ಮದುವೆಯಲ್ಲಿ ಏನಾಯ್ತು, ಯಾಕಾಯ್ತು ಎನ್ನುವ ವಿಚಾರವನ್ನು ನಾನು ಮಾತನಾಡುವುದಿಲ್ಲ ಎಂದು ಅನು ಹೇಳಿದ್ದಾರೆ. ಇದನ್ನೂ ಓದಿ: ರಂಜಾನ್ ಬರ್ತಿದೆ ಪತಿ ಆದಿಲ್ ರಿಲೀಸ್ ಮಾಡಿ : ಕಣ್ಣೀರಿಟ್ಟ ನಟಿ ರಾಖಿ

    ನಾನಲ್ಲದೆ ನಮ್ಮ ದಾಂಪತ್ಯ ಜೀವನದಲ್ಲಿ ಮತ್ತೊಬ್ಬ ವ್ಯಕ್ತಿ ಪ್ರವೇಶ ಮಾಡಿದ್ದರಾ ಅನ್ನೋ ಪ್ರಶ್ನೆಗಳೆಲ್ಲ ತೀರಾ ನನ್ನ ಪರ್ಸನಲ್ ವಿಚಾರ. ಹೀಗಾಗಿ ನಾನು ಮಾತನಾಡಬಾರದೆಂದು ತೀರ್ಮಾನ ಮಾಡಿರುವೆ. ಇಬ್ಬರೂ ವ್ಯಕ್ತಿಗಳ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೂ ಅದು ಆ ರೂಮ್‌ನ ನಾಲ್ಕು ಗೋಡೆಗಳ ನಡುವೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರುವುದಿಲ್ಲ. ನನ್ನ ತಂದೆ, ತಾಯಿ ಅವರ ತಂದೆ ತಾಯಿಗೂ ಕರೆಕ್ಟ್ ಆಗಿ ಯಾವ ವಿಚಾರವೂ ಗೊತ್ತಿರುವುದಿಲ್ಲ ಇದೆಲ್ಲಾ ತುಂಬಾ ಪರ್ಸನಲ್ ವಿಚಾರ. ಮುಖ್ಯವಾಗಿ ಏನು ಹೇಳಬೇಕು ಅಂದ್ರೆ ಮನುಷ್ಯನಿಗೆ ಇರೋದು ಒಂದೇ ಜೀವನ. ಆ ಜೀವನವನ್ನು ಸಂತೋಷದಿಂದ ಬಾಳಬೇಕು. ಖುಷಿಯಾಗಿ ಬದುಕಬೇಕು. ನೋವಿನಲ್ಲಿಯೇ ಜೀವನ ಸಾಗಿಸುವಂತೆ ಆಗಬಾರದು. ನಾವಿಬ್ಬರೂ ಒಟ್ಟಿಗೆ ಇರಲು ಆಗುವುದಿಲ್ಲ. ಸಂತೋಷ ಅಸಾಧ್ಯವೆಂದೆನಿಸಿದಾಗ ನೋವು ಕೊಡುವ ನಿರ್ಧಾರಗಳಾದರೂ ಸರಿ, ತೆಗೆದುಕೊಳ್ಳಬೇಕಾಗುತ್ತದೆ. ಆದರಿಂದ ಮುಂದೆ ಆಗಿದ್ದೆಲ್ಲವೂ ಆಯಿತು ಎಂದಿದ್ದಾರೆ.

    ಒಂದು ಮುಖ್ಯವಾದ ಮಾತು ಹೇಳಬೇಕು. ನಿಮ್ಮ ಮನೆ ಹೆಣ್ಣು ಮಕ್ಕಳು ಕಣ್ಣೀರು ಹಾಕಿಕೊಂಡು, ಗಂಡನ ಮನೆಯಲ್ಲಿ ನೋವಾಗುತ್ತಿದೆ. ಜೀವನ ಸಾಗಿಸಲು ಆಗುತ್ತಿಲ್ಲ ಎಂದರೆ, ತಂದೆ ತಾಯಿಯಾಗಿ ಆವರನ್ನು ದಯವಿಟ್ಟು ಸಪೋರ್ಟ್ ಮಾಡಿ. ನಾನು ಆ ಘಟನೆ ಬಗ್ಗೆ ಯೋಚಿಸಿದಾಗ, ನನ್ನ ತಾಯಿ ಅಣ್ಣ ಮತ್ತು ಸ್ಕೂಲ್ ಫ್ರೆಂಡ್ಸ್ ನನ್ನ ಪರ ನಿಂತುಕೊಂಡರು. ಆಗ ನನ್ನ ತಂದೆ ಇರಲಿಲ್ಲ. ಈ ರೀತಿ ಘಟನೆ ಹೆಣ್ಣು ಮಕ್ಕಳ ಜೀವನದಲ್ಲಿ ನಡೆದರೆ, ಕುಗ್ಗುತ್ತಾರೆ. ಫ್ಯಾಮಿಲಿ ಸಪೋರ್ಟ್ ಇದ್ದಿದ್ದರಿಂದ ನನಗೆ ಮತ್ತೊಂದು ಲೈಫ್ ಕ್ರಿಯೇಟ್ ಮಾಡಿಕೊಳ್ಳಲು ಸಾಧ್ಯವಾಯ್ತು. ಸಮಾಜದಲ್ಲಿ ಯಾರೂ ಯಾರಿಗೂ ಸಪೋರ್ಟ್ ಮಾಡುವುದಿಲ್ಲ. ಕೊನೆಗೆ ನಮ್ಮ ಪರ ನಿಲ್ಲುವುದು ತಂದೆ- ತಾಯಿ ಮಾತ್ರ. ಡಿವೋರ್ಸ್ ಪರಿಹಾರ ಎಂದು ನಾನು ಹೇಳುವುದಿಲ್ಲ. ಸರಿ ಮಾಡಿಕೊಳ್ಳಿ, ಇಲ್ಲ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಿ. ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡುತ್ತಾರೆ. ಅಲ್ಲಿ ವರದಕ್ಷಿಣಿಗಾಗಿ ಅವಳ ಪ್ರಾಣ ತೆಗೆದರೆ, ನೀವು ಆಮೇಲೆ ಮಾತನಾಡಿ ಏನು ಉಪಯೋಗ ಎಂದು ಅನು ಪೋಷಕರಿಗೆ ಕಿವಿ ಮಾತು ಹೇಳಿದ್ದಾರೆ.

    ನಟಿ ಅನುಪ್ರಭಾಕರ್ ಅವರು 2016ರಲ್ಲಿ ನಟ ರಘು ಮುಖರ್ಜಿ (Raghu Mukherjee) ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ದಂಪತಿಗೆ ನಂದನಾ ಎಂಬ ಮುದ್ದಾದ ಮಗಳಿದ್ದಾಳೆ. ಇಬ್ಬರೂ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ದಾರೆ.

  • ಕಂಠಪೂರ್ತಿ ಕುಡಿದು ತನ್ನ ಮದುವೆಗೆ ಹೋಗುವುದನ್ನೇ ಮರೆತ ವರ – ನೀನು ಬೇಡ ಎಂದ ವಧು

    ಕಂಠಪೂರ್ತಿ ಕುಡಿದು ತನ್ನ ಮದುವೆಗೆ ಹೋಗುವುದನ್ನೇ ಮರೆತ ವರ – ನೀನು ಬೇಡ ಎಂದ ವಧು

    ಪಾಟ್ನಾ: ಬಿಹಾರದ (Bihar) ವರನೊಬ್ಬ (Groom) ಕಂಠಪೂರ್ತಿ ಕುಡಿದು ಮರುದಿನ ಮದುವೆಗೆ (Wedding) ಹಾಜರಾಗಲು ಮರೆತಿರುವ ವಿಲಕ್ಷಣ ಘಟನೆ ನಡೆದಿದೆ.

    ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯ ಹಿಂದಿನ ರಾತ್ರಿ ಖುಷಿಯಲ್ಲಿ ವರ ಮದ್ಯ ಸೇವಿಸಿದ್ದ. ಆದರೆ ಮರುದಿನ ಮದ್ಯದ ಅಮಲಿನಲ್ಲಿ ತನ್ನ ಮದುವೆಯಿದೆ ಎಂಬುದನ್ನ ಮರೆತು ಮದುವೆಗೆ ಗೈರಾಗಿದ್ದಾನೆ.

    ಮದುವೆ ಸ್ಥಳದಲ್ಲಿ ವಧು ಮತ್ತು ಆಕೆಯ ಕುಟುಂಬದವರು ವರನಿಗಾಗಿ ಕಾಯುತ್ತಿದ್ದರೂ ಆತ ಬಂದಿರಲಿಲ್ಲ. ಅದಾದ ಒಂದು ದಿನದ ನಂತರ ವರನಿಗೆ ಪ್ರಜ್ಞೆ ಬಂದು ವಧುವಿನ ಮನೆಗೆ ಬಂದಿದ್ದಾನೆ. ಈ ವೇಳೆ ವಧು ನನಗೆ ನೀನು ಬೇಡ ಎಂದು ಮದುವೆಯಾಗಲು ನಿರಾಕರಿಸಿದ್ದಾಳೆ. ಇದನ್ನೂ ಓದಿ: ಅಜ್ಜನಿಂದ ಮೊಮ್ಮಗಳ ಮೇಲೆ ರೇಪ್ – ಯಾರಿಗೂ ಹೇಳ್ಬೇಡ ಎಂದು 10 ರೂ. ಕೊಟ್ಟ

    ಅಷ್ಟೇ ಅಲ್ಲದೇ ತನ್ನ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾಳೆ. ವಧುವಿನ ಮನೆಯವರು ಕೂಡ ವರನ ಕುಟುಂಬಕ್ಕೆ ಮದುವೆಯ ವ್ಯವಸ್ಥೆಗೆ ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ.

    ಈ ವೇಳೆ ವಧುವಿನ ಸಂಬಂಧಿಕರು ವರನ ಕಡೆಯವರನ್ನು ಒತ್ತೆಯಾಳಾಗಿ ಇರಿಸಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಇತ್ಯರ್ಥಗೊಳಿಸಿದರು. ಇದನ್ನೂ ಓದಿ: ಟ್ರ್ಯಾಕ್ಟರ್, ಬರೋಬ್ಬರಿ 3 ಕೋಟಿ ಹಣವನ್ನೇ ಗಿಫ್ಟ್ ಪಡೆದ ವಧು!

  • ಪವಿತ್ರಾ ಲೋಕೇಶ್ ಗೆ ದುಡ್ಡಿನ ದಾಹ : ನಟ ಸುಚೇಂದ್ರ ಪ್ರಸಾದ್ ಹೇಳಿಕೆ ವೈರಲ್

    ಪವಿತ್ರಾ ಲೋಕೇಶ್ ಗೆ ದುಡ್ಡಿನ ದಾಹ : ನಟ ಸುಚೇಂದ್ರ ಪ್ರಸಾದ್ ಹೇಳಿಕೆ ವೈರಲ್

    ತೆಲುಗು ನಟ ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh) ದುಬೈನಲ್ಲಿ ಒಟ್ಟಿಗೆ ಓಡಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಸುಚೇಂದ್ರ ಪ್ರಸಾದ್ (Suchendra Prasad) ಹೇಳಿದ್ದಾರೆ ಎನ್ನಲಾದ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮಾಜಿ ಪತ್ನಿ ಪವಿತ್ರಾ ಲೋಕೇಶ್ ದುಡ್ಡಿಗಾಗಿ ಏನೆಲ್ಲ ಮಾಡುತ್ತಾಳೆ. ನರೇಶ ಹಿಂದೆ ಬಿದ್ದಿರುವ ಕಾರಣವೂ ಅದೆ. ಆಕೆಗೆ ದುಡ್ಡಿನ ದಾಹ ಎಂದು ಆಡಿಯೋದಲ್ಲಿ ಹೇಳಿದ್ದು, ಆಡಿಯೋ ಕೇಳಿದ ಅನೇಕರು ನಾನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ.

    ಪವಿತ್ರಾ ಲೋಕೇಶ್ ಮತ್ತು ನರೇಶ್ ದುಬೈನಲ್ಲಿ (Dubai) ಜೋಡಿಯಾಗಿ ಕಾಣಿಸಿಕೊಂಡ ಮೂರು ದಿನಗಳ ಮುಂಚೆ ಇಬ್ಬರೂ ಮದುವೆಯಾಗಿದ್ದಾರೆ (Wedding) ಎನ್ನುವ ವಿಡಿಯೋವನ್ನು ಸ್ವತಃ ನರೇಶ್ ಪೋಸ್ಟ್ ಮಾಡಿಕೊಂಡಿದ್ದರು. ಈ ವಿಡಿಯೋ ರಿಲೀಸ್ ಆದ ಬೆನ್ನಲ್ಲೇ ದುಬೈ ಟ್ರೀಪ್ ಫೋಟೋಗಳು ಕೂಡ ವೈರಲ್ ಆದವು. ಮದುವೆ ಮುಗಿಸಿಕೊಂಡು ಇಬ್ಬರೂ ಹನಿಮೂನ್ ಗೆ (Honeymoon) ಹೋಗಿದ್ದಾರೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

    ನರೇಶ್ ಅವರ ಆಪ್ತರ ಪ್ರಕಾರ ಸಿನಿಮಾ ಮತ್ತು ಮದುವೆ ಎರಡನ್ನೂ ಮಿಕ್ಸ್ ಮಾಡಿ ಅಭಿಮಾನಿಗಳಲ್ಲಿ ಮತ್ತು ಸ್ವತಃ ಅವರ ಕುಟುಂಬಸ್ಥರಿಗೆ ಗೊಂದಲ ಮೂಡಿಸುತ್ತಿದ್ದಾರಂತೆ ನರೇಶ್. ವಿಡಿಯೋದಿಂದ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ತಗೆದುಕೊಂಡು ಒಂದು ರೀತಿಯಲ್ಲಿ ನರೇಶ್ ಪತ್ನಿಯ ಜೊತೆ ಭಾವನಾತ್ಮಕವಾಗಿ ಆಟವಾಡುತ್ತಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ.

    ಈ ಮದುವೆ, ಹನಿಮೂನ್ ಬಗ್ಗೆ ಮಾಧ್ಯಮಗಳಿಗೆ ಯಾವುದೇ ರೀತಿಯಲ್ಲಿ ಸ್ಪಷ್ಟನೆ ನೀಡಿಲ್ಲ ನರೇಶ್. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳುವ ಮೂಲಕ ಮಾಧ್ಯಮಗಳಿಂದ ನರೇಶ್ ಜಾರಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಸುದ್ದಿಗಳು ಹರಿದಾಡಿದರೂ, ಪವಿತ್ರಾ ಲೋಕೇಶ್ ಕೂಡ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಅಚ್ಚರಿ ತಂದಿದೆ.

  • ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

    ನಟಿ ಸ್ವರಾ ಭಾಸ್ಕರ್ ಆರತಕ್ಷತೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ

    ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhaskar) ಅವರು ಫಹಾದ್ ಅಹ್ಮದ್ (Fahad Ahmad) ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದೆ. ಸ್ವರಾ ಮದುವೆ ಆರತಕ್ಷತೆಯಲ್ಲಿ (Reception) ರಾಹುಲ್ ಗಾಂಧಿ (Rahul Gandhi) ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ನಟ ಜಗ್ಗೇಶ್ ಹುಟ್ಟು ಹಬ್ಬಕ್ಕೆ ಡಬಲ್ ಧಮಾಕಾ

    ಫೆಬ್ರವರಿಯಲ್ಲಿ ರಿಜಿಸ್ಟರ್ ಮದುವೆಯಾಗಿರುವುದಾಗಿ ನಟಿ ಸ್ವರಾ ತಿಳಿಸಿದ್ದರು. ಇದೀಗ ಗುರುಹಿರಿಯರ ಇಷ್ಟದಂತೆ ಹಿಂದೂ ಸಂಪ್ರದಾಯದಂತೆ ಸಮಾಜವಾದಿ ಪಕ್ಷದ ನಾಯಕ ಫಹಾದ್ – ಸ್ವರಾ ಮದುವೆಯಾಗಿದ್ದಾರೆ. ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ಕೂಡ ದೆಹಲಿಯಲ್ಲಿ ನಡೆದಿದೆ. ಸಿನಿಮಾ ಸೆಲೆಬ್ರಿಟಿಗಳು ಮತ್ತು ರಾಜಕೀಯ ಪಕ್ಷದ ನಾಯಕರು ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ.

    ಸ್ವರಾ- ಫಹಾದ್ ಆರತಕ್ಷತೆ ಸಂಭ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಣಿಸಿಕೊಂಡಿದ್ದಾರೆ. ನವಜೋಡಿಗೆ ಶುಭಹಾರೈಸಿ, ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ.

    ಇನ್ನೂ ರಾಹುಲ್ ಗಾಂಧಿ- ಸ್ವರಾ ಮೊದಲಿನಿಂದಲೇ ಪರಿಚಿತರು. ಕಳೆದ ವರ್ಷ ಮಧ್ಯಪ್ರದೇಶ ಉಜ್ಜಯಿನಿಯಲ್ಲಿ ನಡೆದ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪಾಲ್ಗೊಳ್ಳುವ ಮೂಲಕ ಗುರುತಿಸಿಕೊಂಡಿದ್ದರು.

  • ಮದುವೆಯಾಗಿ ಮೂರೇ ದಿನಕ್ಕೆ ಪರಾರಿ – ಇದು ಫೋಟೋಶೂಟ್ ಮದ್ವೆ ಎಂದ ಪತಿ

    ಮದುವೆಯಾಗಿ ಮೂರೇ ದಿನಕ್ಕೆ ಪರಾರಿ – ಇದು ಫೋಟೋಶೂಟ್ ಮದ್ವೆ ಎಂದ ಪತಿ

    ಬೆಂಗಳೂರು: ಮದುವೆಯಾಗಿ (Wedding) ಮೂರೇ ದಿನಕ್ಕೆ ಪತಿ ಪರಾರಿಯಾಗಿದ್ದು ಎಂದು ಆರೋಪಿಸಿ ಪತ್ನಿ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ (KR Puram Police Station) ದೂರು ನೀಡಿದ್ದಾರೆ.

    ಧರಣಿ ಹಾಗೂ ಸುರೇಶ್ ಇಬ್ಬರು ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದು ಫೆ.15ರಂದು ಇಬ್ಬರು ಮದುವೆಯೂ ಆಗಿದ್ದರು. ಆದರೆ ಮದುವೆಯಾಗಿ ಮೂರೇ ದಿನಕ್ಕೆ ಪತಿ ಸುರೇಶ್ ಇದ್ದಕ್ಕಿದ್ದಂತೆ ಪರಾರಿಯಾಗಿದ್ದಾನೆ ಎಂದು ಆರೋಪಿಸಿ ಧರಣಿ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

    ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ಪ್ರಾರಂಭಿಸಿದ್ದಾರೆ. ಈ ವೇಳೆ ಸುರೇಶ್‍ನನ್ನು ವಿಚಾರಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿ, ನಾನು ಧರಣಿಯನ್ನು ಮದುವೆಯಾಗಿಲ್ಲ. ನಾವಿಬ್ಬರು ಸ್ನೇಹಿತರಾಗಿದ್ದೆವು. ಅದು ಶಾರ್ಟ್ ಮೂವಿಗಾಗಿ ತೆಗೆದ ಫೋಟೋ ಆಗಿತ್ತು ಎಂದು ಪ್ರತಿಕ್ರಿಯೆ ನೀಡಿದ್ದಾನೆ. ಅಷ್ಟೇ ಅಲ್ಲದೇ 2016ರಲ್ಲಿ ಧರಣಿಗೆ ಮೊದಲ ವಿವಾಹ ಆಗಿತ್ತು. ನಂತರ ಪತಿಯನ್ನು ಬಿಟ್ಟು ದೂರವಾಗಿದ್ದರು ಎಂದು ಆರೋಪಿಸಿದ್ದಾನೆ. ಇದನ್ನೂ ಓದಿ: ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮದರಸಾ ಸಂಪೂರ್ಣ ಬಂದ್: ಯತ್ನಾಳ್

    ಸದ್ಯ ಈ ವಿಚಾರ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಇದನ್ನೂ ಓದಿ: ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

  • ಮತ್ತೊಂದು ಮದುವೆ ಸಂಭ್ರಮದಲ್ಲಿ ಸ್ವರಾ ಭಾಸ್ಕರ್

    ಮತ್ತೊಂದು ಮದುವೆ ಸಂಭ್ರಮದಲ್ಲಿ ಸ್ವರಾ ಭಾಸ್ಕರ್

    ಬಾಲಿವುಡ್ (Bollywood) ನಟಿ ಸ್ವರಾ ಭಾಸ್ಕರ್ (Swara Bhaskar) ಮತ್ತೊಂದು ಮದುವೆ ಆಗುವ ಸಂಭ್ರಮದಲ್ಲಿದ್ದಾರೆ. ಸ್ವರಾ ಕುಟುಂಬದವರ ಆಸೆಯಂತೆ ಫಹಾದ್ ಜೊತೆ ಹಿಂದೂ ಸಂಪ್ರದಾಯದಂತೆ ನಟಿ ಮದುವೆಯಾಗುತ್ತಿದ್ದಾರೆ. ಸದ್ಯ ಸಂಗೀತ, ಹಳದಿ ಶಾಸ್ತ್ರದ ಸಂಭ್ರಮದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Swara Bhasker (@reallyswara)

    ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ (Fahad Ahamad) ಜೊತೆ ರಿಜಿಸ್ಟರ್ ಮದುವೆಯಾಗುವ (Wedding) ಮೂಲಕ ನಟಿ ಸ್ವರಾ ಭಾಸ್ಕರ್ ಅಚ್ಚರಿ ಮೂಡಿಸಿದ್ದರು. ಈ ಸರಳ ಮದುವೆ ಸ್ವರಾ ಅವರ ತಂದೆ- ತಾಯಿ ಕುಟುಂಬಸ್ಥರಿಗೆ ಇಷ್ಟವಾಗಿಲ್ಲ. ಇದೀಗ ಅವರ ಆಸೆಯಂತೆಯೇ ನಟಿ ಅದ್ದೂರಿಯಾಗಿ ಮದುವೆಯಾಗುತ್ತಿದ್ದಾರೆ. ಇದನ್ನೂ ಓದಿ: ಪುನೀತ್ ಜನ್ಮ ದಿನದಂದು ಓಟಿಟಿಯಲ್ಲಿ ‘ಗಂಧದ ಗುಡಿ’

     

    View this post on Instagram

     

    A post shared by Swara Bhasker (@reallyswara)

    ದೆಹಲಿ ಮನೆಯಲ್ಲಿ ಈಗಾಗಲೇ ಸಂಗೀತ ಮತ್ತು ಹಳದಿ ಶಾಸ್ತ್ರವು ಸಡಗರದಿಂದ ನಡೆದಿದ್ದು, ಈ ಕುರಿತ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಖಾಸಗಿ ರೆಸಾರ್ಟ್‌ವೊಂದರಲ್ಲಿ ಸ್ವರಾ ಮತ್ತು ಫಹಾದ್ ಮಾರ್ಚ್ 16ರಂದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

  • `ಜೊತೆ ಜೊತೆಯಲಿ’ ಖ್ಯಾತಿಯ ಶಿಲ್ಪಾ ಅಯ್ಯರ್ ಮದುವೆ ಆಲ್ಬಂ

    `ಜೊತೆ ಜೊತೆಯಲಿ’ ಖ್ಯಾತಿಯ ಶಿಲ್ಪಾ ಅಯ್ಯರ್ ಮದುವೆ ಆಲ್ಬಂ

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ನಟ-ನಟಿಯರು ಸಾಲು ಸಾಲಾಗಿ ಹಸೆಮಣೆ ಏರುತ್ತಿದ್ದಾರೆ. ಇದೀಗ `ಜೊತೆ ಜೊತೆಯಲಿ’ (Jothe Jotheyali) ಖ್ಯಾತಿಯ ಶಿಲ್ಪಾ ಅಯ್ಯರ್ (Shilpa Iyer) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಮುದ್ದಾದ ಜೋಡಿಯ ಚೆಂದದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ಸದ್ದು ಮಾಡ್ತಿದೆ. ಅವರ ಮದುವೆಯ ಸುಂದರ ಆಲ್ಬಂ ಇಲ್ಲಿದೆ ನೋಡಿ.

    ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲವಿನ ನಿಲ್ದಾಣ ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ಬಣ್ಣ ಹಚ್ಚಿರುವ ನಟಿ ಶಿಲ್ಪಾ ಅವರು ಸಚಿನ್‌ ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಬಿದಿರಿನ ಉಡುಪಿನಲ್ಲಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ಉರ್ಫಿ ಜಾವೇದ್

    ಪ್ರೇಮಿಗಳ ದಿನಾಚರಣೆಯಂದು ಎಂಗೇಜ್ ಆಗಿರುವ ಸುದ್ದಿಯನ್ನು ನಟಿ ಸೋಷಿಯಲ್ ಮೀಡಿಯಾ ಮುಖಾಂತರ ತಿಳಿಸಿದ್ದರು. ಭಾವಿ ಪತಿ ಜೊತೆಗಿನ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಈಗ ಸೈಲೆಂಟ್ ಆಗಿ ಮದುವೆಯಾಗಿದ್ದಾರೆ.

    ಸಚಿನ್ ವಿಶ್ವನಾಥ್ (Sachin Vishwanath) ಅವರು ಲಾಯರ್ ಆಗಿದ್ದು, ಮನೆಯವರೇ ನೋಡಿ ನಿಶ್ಚಯಿಸಿರುವ ಮದುವೆಯಾಗಿದೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದ್ದಾರೆ.

    ಶಿಲ್ಪಾ ಅಯ್ಯರ್- ಸಚಿನ್ ಮದುವೆಗೆ `ಜೊತೆ ಜೊತೆಯಲಿ’ ಟೀಂ ಮತ್ತು ʻಒಲವಿನ ನಿಲ್ದಾಣʼ ಸೇರಿದಂತೆ ಹಲವು ನಟ-ನಟಿಯರು ಭಾಗಿಯಾಗಿದ್ದರು. ನವಜೋಡಿಗೆ ಕಲಾವಿದರು, ಅಭಿಮಾನಿಗಳು ಶುಭಹಾರೈಸಿದ್ದಾರೆ.

    ಇನ್ನೂ ʻಜೊತೆ ಜೊತೆಯಲಿʼ ಸೀರಿಯಲ್‌ನಿಂದ ನಟ ಅನಿರುದ್ಧ್‌ ದೂರ ಸರಿದಿದ್ದರು ಕೂಡ ಸಹನಟಿ ಶಿಲ್ಪಾ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ತಂಡದ ಜೊತೆ ಸೇರಿ ನಟಿ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಹಿರಿಯ ನಟಿ ವಿಜಯ್‌ ಲಕ್ಷ್ಮಿ ಸಿಂಗ್‌, ಪ್ರಥಮಾ ಪ್ರಸಾದ್‌ ಕೂಡ ಭಾಗಿಯಾಗಿದ್ದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಜೊತೆ ಜೊತೆಯಲಿ’ ನಟಿ ಶಿಲ್ಪಾ ಅಯ್ಯರ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಜೊತೆ ಜೊತೆಯಲಿ’ ನಟಿ ಶಿಲ್ಪಾ ಅಯ್ಯರ್

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ನಟ-ನಟಿಯರು ಸಾಲು ಸಾಲಾಗಿ ಹಸೆಮಣೆ ಏರುತ್ತಿದ್ದಾರೆ. ಇದೀಗ `ಜೊತೆ ಜೊತೆಯಲಿ’ (Jothe Jotheyali) ಖ್ಯಾತಿಯ ಶಿಲ್ಪಾ ಅಯ್ಯರ್ (Shilpa Iyer) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲವಿನ ನಿಲ್ದಾಣ (Olavina Nildana) ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ಬಣ್ಣ ಹಚ್ಚಿರುವ ನಟಿ ಶಿಲ್ಪಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೇಮಿಗಳ ದಿನಾಚರಣೆಯಂದು ಎಂಗೇಜ್ (Engage) ಆಗಿರುವ ಸುದ್ದಿಯನ್ನು ನಟಿ ಸೋಷಿಯಲ್ ಮೀಡಿಯಾ ಮುಖಾಂತರ ತಿಳಿಸಿದ್ದರು. ಭಾವಿ ಪತಿ ಜೊತೆಗಿನ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ್ದರು. ಈಗ ಸೈಲೆಂಟ್ ಆಗಿ ಮದುವೆಯಾಗಿದ್ದಾರೆ.

    ಸಚಿನ್ ವಿಶ್ವನಾಥ್ (Sachin Vishwanath) ಅವರು ಲಾಯರ್ (Lawyer) ಆಗಿದ್ದು, ಮನೆಯವರೇ ನೋಡಿ ನಿಶ್ಚಯಿಸಿರುವ ಮದುವೆಯಾಗಿದೆ. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ (Wedding) ಏರಿದ್ದಾರೆ.

    ಶಿಲ್ಪಾ ಅಯ್ಯರ್- ಸಚಿನ್ ಮದುವೆಗೆ `ಜೊತೆ ಜೊತೆಯಲಿ’ ಟೀಂ ಮತ್ತು ಹಲವು ನಟ-ನಟಿಯರು ಭಾಗಿಯಾಗಿದ್ದರು. ನವಜೋಡಿಗೆ ಕಲಾವಿದರು, ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ಇಬ್ಬರ ಜೊತೆ ಲಿವ್ ಇನ್ ರಿಲೇಶನ್‍ಶಿಪ್- ಮಕ್ಕಳು ಹುಟ್ಟಿದ ಬಳಿಕ ಒಂದೇ ಮಂಟಪದಲ್ಲಿ ಇಬ್ಬರನ್ನೂ ವರಿಸಿದ!

    ಇಬ್ಬರ ಜೊತೆ ಲಿವ್ ಇನ್ ರಿಲೇಶನ್‍ಶಿಪ್- ಮಕ್ಕಳು ಹುಟ್ಟಿದ ಬಳಿಕ ಒಂದೇ ಮಂಟಪದಲ್ಲಿ ಇಬ್ಬರನ್ನೂ ವರಿಸಿದ!

    ಹೈದರಾಬಾದ್: ಯುವಕನೊಬ್ಬ ಕಳೆದ 3 ವರ್ಷಗಳಿಂದ ಲಿವ್- ಇನ್ ಸಂಬಂಧದಲ್ಲಿದ್ದ (Live In Relationship) ಇಬ್ಬರು ಮಹಿಳೆಯರನ್ನು (Women) ಮದುವೆಯಾದ (Wedding) ಘಟನೆ ತೆಲಂಗಾಣದಲ್ಲಿ ನಡೆದಿದೆ.

    ತೆಲಂಗಾಣದ (Telangana) ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಸಮಾರಂಭ ನಡೆದಿದೆ. ಎಂ. ಸತ್ತಿಬಾಬು ಎಂಬಾತ ಸ್ವಪ್ನಾ ಹಾಗೂ ಸುನೀತಾ ಎನ್ನುವ ಇಬ್ಬರು ಯುವತಿಯನ್ನು ಪ್ರೀತಿಸುತ್ತಿದ್ದ. ಅಷ್ಟೇ ಅಲ್ಲದೇ ಇವರೊಂದಿಗೆ ಕಳೆದ ಮೂರು ವರ್ಷಗಳಿಂದ ದೈಹಿಕ ಸಂಪರ್ಕವನ್ನು ಹೊಂದಿದ್ದ. ಈ ಮೂವರು ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದರು.

    ಸುನೀತಾ ಗಂಡು ಮಗುವಿಗೆ, ಸ್ವಪ್ನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮದುವೆ ವಿಚಾರವಾಗಿ ಇಬ್ಬರು ಯುವತಿಯರ ಕುಟುಂಬದ ನಡುವೆ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸತ್ತಿಬಾಬು ಈ ಇಬ್ಬರನ್ನು ಯುವತಿಯರನ್ನು ಮದುವೆಯಾಗಲು ನಿರ್ಧರಿಸಿದ್ದಾನೆ. ಅಷ್ಟೇ ಅಲ್ಲದೇ ಆ ಇಬ್ಬರು ಯುವತಿಯರ ಕುಟುಂಬದವರನ್ನು ಒಪ್ಪಿಸಿದ್ದಾನೆ. ಇದನ್ನೂ ಓದಿ: ಅಘೋರಿ ಪೂಜೆಗಾಗಿ ಮಹಿಳೆಯ ಮುಟ್ಟಿನ ರಕ್ತ ಮಾರಾಟ – ಪತಿ, ಅತ್ತೆ, ಮಾವನ ವಿರುದ್ಧ ದೂರು

    ಅದಾದ ಬಳಿಕ ಈ ಮೂರು ಕುಟುಂಬಗಳು ಮದುವೆಯನ್ನು ಯಾರಾದರೂ ನಿಲ್ಲಿಸಿದರೇ ಎಂಬ ಭೀತಿಯನ್ನು ಹೊರಹಾಕಿದರು. ಈ ಹಿನ್ನೆಲೆಯಲ್ಲಿ ಸತ್ತಿಬಾಬು ಇಬ್ಬರನ್ನು ಹಿಂದಿನ ದಿನದ ರಾತ್ರಿಯೇ ಮದುವೆಯಾಗಿದ್ದಾನೆ. ಇದನ್ನೂ ಓದಿ: ಪತ್ನಿಗೆ ಕ್ಯಾನ್ಸರ್ ಇದ್ರೂ ಲೆಕ್ಕಿಸದೆ ರಾಜಕೀಯದಲ್ಲಿ ತೊಡಗಿಸಿಕೊಂಡು ಮೆಚ್ಚುಗೆ ಗಳಿಸಿದ್ದರು: ಜಿ.ಟಿ ದೇವೇಗೌಡ

  • ಶೀಘ್ರದಲ್ಲೇ ನಡೆಯಲಿದೆ ಪುಲ್ಕಿತ್ ಜೊತೆ `ಗೂಗ್ಲಿ’ ನಟಿ ಕೃತಿ ಮದುವೆ

    ಶೀಘ್ರದಲ್ಲೇ ನಡೆಯಲಿದೆ ಪುಲ್ಕಿತ್ ಜೊತೆ `ಗೂಗ್ಲಿ’ ನಟಿ ಕೃತಿ ಮದುವೆ

    ಚಿತ್ರರಂಗದಲ್ಲಿ ಒಬ್ಬರ ಹಿಂದೆ ಒಬ್ಬರು ಹಸೆಮಣೆ ಏರುತ್ತಿದ್ದಾರೆ. ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಸಿದ್ ಮತ್ತು ಕಿಯಾರಾ ಇತ್ತೀಚಿಗೆ ಮದುವೆಯಾದರು. ಈ ಬೆನ್ನಲ್ಲೇ ಕನ್ನಡದ ಗೂಗ್ಲಿ ನಟಿ ಕೃತಿ ಮದುವೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಪುಲ್ಕಿತ್ ಸಾಮ್ರಾಟ್  (Pulkit Samrat) ಜೊತೆ ಕೃತಿ ಕರಬಂದ (Kriti Kharbanda) ಮದುವೆ (Wedding) ಮಾತು ಚಾಲ್ತಿಯಲ್ಲಿದೆ.

    ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ `ಗೂಗ್ಲಿ’ (Googly) ಚಿತ್ರದಲ್ಲಿ ಯಶ್‌ಗೆ (Yash) ನಾಯಕಿಯಾಗಿ ಕೃತಿ ಮೋಡಿ ಮಾಡಿದ್ದರು. ಇದೀಗ ಬಾಲಿವುಡ್ (Bollywood) ಸಿನಿಮಾದಲ್ಲಿ ನಟಿಸುತ್ತ ಅಲ್ಲಿಯೇ ಸೆಟಲ್ ಆಗಿದ್ದಾರೆ. ಇನ್ನೂ ಪುಲ್ಕಿತ್ ಸಾಮ್ರಾಟ್ ಜೊತೆಗಿನ ಕೃತಿ ಡೇಟಿಂಗ್ ವಿಚಾರವೇನು ಇದೀಗ ಗುಟ್ಟಾಗಿ ಉಳಿದಿಲ್ಲ. ಬಾಲಿವುಡ್‌ನಲ್ಲಿ ಸದ್ಯದಲ್ಲಿಯೇ ಈ ಜೋಡಿ ಮದುವೆಯಾಗುತ್ತಿದ್ದಾರೆ ಎಂದು ಹರಿದಾಡುತ್ತಿದೆ. ಇದನ್ನೂ ಓದಿ: ವರುಣ್ ತೇಜ್ ಜೊತೆ ಲಾವಣ್ಯ ಮದುವೆ? ಸ್ಪಷ್ಟನೆ ನೀಡಿದ ನಟಿ

    ಪುಲ್ಕಿತ್ ಮತ್ತು ಕೃತಿ ಈ ವರ್ಷದ ಅಂತ್ಯದೊಳಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲಿಯೇ ಈ ಕುರಿತು ಅಧಿಕೃತ ಅಪ್‌ಡೇಟ್ ಕೂಡ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಮದುವೆ ಅದೆಷ್ಟರ ಮಟ್ಟಿಗೆ ನಿಜಾ ಎಂದು ಈ ಜೋಡಿಯೇ ತಿಳಿಸಬೇಕಿದೆ.

    ಇನ್ನೂ ಎಲ್ಲರ ಮದುವೆಯಾಯ್ತು ಮುಂದಿನ ಮದುವೆ ಜೋಡಿ ನೀವೇ.. ಬೇಗ ಮದುವೆಯ ಗುಡ್ ನ್ಯೂಸ್ ಕೊಡಿ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡ್ತಿದ್ದಾರೆ.