Tag: wedding

  • ದುಷ್ಮನ್ ಸುತ್ತಲೂ ಇದ್ದಾರೆ ಎಂದು ಯಶ್ ಡೈಲಾಗ್ ಹೊಡೆದ ವಿನೋದ್ ರಾಜ್

    ದುಷ್ಮನ್ ಸುತ್ತಲೂ ಇದ್ದಾರೆ ಎಂದು ಯಶ್ ಡೈಲಾಗ್ ಹೊಡೆದ ವಿನೋದ್ ರಾಜ್

    ಳೆದ ಒಂದು ವಾರದಿಂದ ಹಿರಿಯ ನಟಿ ಲೀಲಾವತಿ (Leelavati) ಅವರ ಪುತ್ರನ ಮದುವೆ (Wedding) ವಿಚಾರವಾಗಿ ಸಾಕಷ್ಟು ಚರ್ಚೆ ಆಗುತ್ತಿದೆ. ನಿರ್ದೇಶಕ ಪ್ರಕಾಶ್ ರಾಜ್ ಮೆಹು (Prakash Raj Mehu) ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಲೀಲಾವತಿ ಅವರ ಪುತ್ರ ವಿನೋದ್ ರಾಜ್ (Vinod Raj) ಮದುವೆ ವಿಚಾರ ಪ್ರಸ್ತಾಪ ಮಾಡಿದ್ದರು. ವಿನೋದ್ ರಾಜ್, ಅವರ ಪತ್ನಿ ಮತ್ತು ಮಗನ ಫೋಟೋ ಅದಾಗಿತ್ತು. ಈ ವಿಷಯ ಆಚೆ ಬರುತ್ತಿದ್ದಂತೆಯೇ ಲೀಲಾವತಿ ಅವರು ಮಗನ ಮದುವೆ ಆಗಿದೆ ಎನ್ನುವ ಸತ್ಯವನ್ನು ಆಚೆ ಹಾಕಿದ್ದರು.

    ಈವರೆಗೂ ಮುಚ್ಚಿಟ್ಟುಕೊಂಡು ಬಂದಿದ್ದ ಸತ್ಯವನ್ನು ಆ ಫೋಟೋ ಬಿಚ್ಚಿಟ್ಟಿತ್ತು. ಹಾಗಾಗಿ ಆ ಫೋಟೋವನ್ನು ಕಳುಹಿಸಿದವರು ಯಾರು? ಆ ಫೋಟೋ ಹೇಗೆ ಸಿಕ್ಕಿತು ಹೀಗೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಈ ಕುರಿತು ವಿನೋದ್ ರಾಜ್ ಮಾತನಾಡಿದ್ದಾರೆ. ‘ಆ ಫೋಟೋ ಹೇಗೆ ಸಿಕ್ಕಿತು, ಯಾರು ಕೊಟ್ಟರು ಎನ್ನುವುದು ಗೊತ್ತಿಲ್ಲ. ಯಶ್ ಅವರ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ, ದುಷ್ಮನ್ ಕಿದರ್ ಹೈ ಅಂದರೆ, ಊರುತುಂಬಾ ಹೈ’ ಅಂತ. ನಮಗೂ ಹಾಗೆ ಆಗಿರಬಹುದು ಎಂದಿದ್ದಾರೆ.

    ಪ್ರಕಾಶ್ ರಾಜ್ ಮೆಹು ಅವರ ಈ ನಡೆಗೆ ವಿನೋದ್ ರಾಜ್ (Vinod Raj) ಬೇಸರವನ್ನು ವ್ಯಕ್ತಪಡಿಸಿದ್ದು ‘ಅಮ್ಮ ಇಳಿವಯಸ್ಸಿನಲ್ಲಿ ನೆಮ್ಮದಿಯಾಗಿ ಇದ್ದಾರೆ. ಅವರು ಕರ್ನಾಟಕದ ಆಸ್ತಿ. ದಯವಿಟ್ಟು ಅವರನ್ನು ನೆಮ್ಮದಿಯಾಗಿ ಇರಲಿಬಿಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ. ಮಗನ ಮದುವೆ ಹಾಗೂ ಪತಿಯ ಕುರಿತಾಗಿ ವಿಷಯವನ್ನು ಕೆದಕಿ ನೋವು ಮಾಡುತ್ತಿರುವವರು ಕುರಿತು ಲೀಲಾವತಿ ಅವರು ನೋವಿನಿಂದಲೇ ಮಾತನಾಡಿ, ‘ಈ ರೀತಿ ಪದೇ ಪದೇ ನನ್ನ ವಿಚಾರಗಳನ್ನು ಮಾತನಾಡಿ ನೋವು ಮಾಡುವವರು ನರಕಕ್ಕೆ ಬೀಳ್ತಾರೆ. ನಮ್ಮ ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತಿದೆ. ಯಾರು ಏನಾದರೂ ಹೇಳಲಿ, ನನ್ನ ಆತ್ಮಸಾಕ್ಷಿಯಂತೆ ನಾನು ನಡೆದುಕೊಂಡಿದ್ದೇನೆ’ ಎಂದಿದ್ದಾರೆ.

    ಯೂಟ್ಯೂಬ್ ಚಾನೆಲ್ ವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಲೀಲಾವತಿ ಅವರು ಮಗನ ಮದುವೆ ವಿಚಾರವನ್ನೂ ಮಾತನಾಡಿದ್ದಾರೆ. ‘ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ   ತಿರುಪತಿ ಬೆಟ್ಟದ ಮೇಲೆ ಮಾಡಿದೆ. ಎಂತೆಂಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ’ ಎಂದು ಹೇಳಿದ್ದಾರೆ.

    ಮುಂದುವರೆದು ಮಾತನಾಡಿರುವ ಲೀಲಾವತಿ, ‘ನನ್ನ ಮಗನ ಮದುವೆಗೆ ಏಳು ಜನ ಕನ್ನಡಿಗರು ಬಂದಿದ್ದರು. ಏನ್ ಲೀಲಾವತಿ ಅವರೇ ನಿಮ್ಮ ಮಗನ ಮದುವೆಗೆ ಏಳೇ ಏಳು ಜನ ಬಂದಿದ್ದಾರೆ. ಜನ ಸಿಗಲಿಲ್ಲವಾ ಎಂದು ಕುಹಕವಾಡಿದರು. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಕೊರತೆ ಮಾಡಿಲ್ಲ. ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತದೆ. ಯಾರು ಏನೇ ಹೇಳಲಿ ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವೆ’ ಎಂದಿದ್ದಾರೆ.

  • ಸಿನಿಮಾದವರಿಗೆ ಹೆಣ್ಣು ಯಾಕೆ ಕೊಡಲ್ಲ ಎಂದು ರೇಗಾಡಿದ ಡಾಲಿ

    ಸಿನಿಮಾದವರಿಗೆ ಹೆಣ್ಣು ಯಾಕೆ ಕೊಡಲ್ಲ ಎಂದು ರೇಗಾಡಿದ ಡಾಲಿ

    ಟರಾಕ್ಷಸ ಡಾಲಿ (Daali) ಚಂದನವನದ ಸಕ್ಸಸ್‌ಫುಲ್ ನಟ, ನಾಯಕ, ವಿಲನ್, ನಿರ್ಮಾಪಕ, ಲಿರಿಕ್ಸ್ ರೈಟರ್ ಆಗಿ ಸೈ ಎನಿಸಿಕೊಂಡಿದ್ದಾರೆ. ಆಗಾಗ ಸಿನಿಮಾಗಿಂತ ಡಾಲಿ ಮದುವೆ ವಿಚಾರವೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದೀಗ ಧನಂಜಯ ಸಿನಿಮಾದವರಿಗೆ ಹೆಣ್ಣು ಯಾಕೆ ಕೊಡಲ್ಲ ಅಂತಾ ಫುಲ್ ಗರಂ ಆಗಿದ್ದಾರೆ. ಇದನ್ನೂ ಓದಿ:ಸಿಎಂ ಬೊಮ್ಮಾಯಿ ಜೊತೆ ಕಾಣಿಸಿಕೊಂಡ ರಿಷಬ್ ಶೆಟ್ಟಿ

    ಆಗಾಗ ನೆಟ್ಟಿಗರ ಬಾಯಿಗೆ ಚರ್ಚೆಯಾಗುವ ವಿಷ್ಯ ಅಂದರೆ ಡಾಲಿ – ಅಮೃತಾ ಡೇಟಿಂಗ್ ಸುದ್ದಿ. ಅದೆಷ್ಟೇ ಬಾರಿ ನಾವಿಬ್ಬರು ಫ್ರೆಂಡ್ಸ್‌ ಅಷ್ಟೇ ಎಂದು ಸ್ಪಷ್ಟನೆ ಕೊಟ್ರು ಕೂಡ ಈ ಜೋಡಿ ಹೆಸರು ತಳಕು ಹಾಕಿಕೊಳ್ಳುತ್ತಲೇ ಇರುತ್ತದೆ. ಈಗ ನಾನಿನ್ನೂ ಸಿಂಗಲ್ ನನ್ನ ಹೃದಯ ಖಾಲಿ ಇದೆ ಅಂತಿದ್ದಾರೆ ಡಾಲಿ. ಸಿನಿಮಾದವ್ರು ಅಂತಾ ಹೆಣ್ಣು ಕೊಡುತ್ತಿಲ್ಲ ಅಂದ್ರೆ ಬೇಡ ಬಿಡಯ್ಯ. ತೆರೆಯ ಮೇಲೆ 10 ಮದುವೆ ಆಗ್ತೀನಿ ಎಂದು ಡಾಲಿ ರೇಗಾಡಿದ್ದಾರೆ. ಈ ಕುರಿತ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Hombale Films (@hombalefilms)

    ಅಂದಹಾಗೆ ಜಗ್ಗೇಶ್ ನಟನೆಯ Raghavendra Stores ಚಿತ್ರದ ಸಿಂಗಲ್ ಸುಂದ್ರ ಎಂಬ ಸಾಂಗ್ ಏ.12ಕ್ಕೆ ರಿಲೀಸ್ ಆಗಿದೆ. ಹಾಗಾಗಿ ಸಿಂಗಲ್ ಆಗಿರುವ ಡಾಲಿ ಕಡೆಯಿಂದ ವಿಶೇಷವಾಗಿ ಅನೌನ್ಸ್‌ಮೆಂಟ್ ಮಾಡಿಸಿದ್ದಾರೆ ಸಿನಿಮಾ ಟೀಂ. ಮದುವೆಯಾಗದೇ ಸಿಂಗಲ್ ಆಗಿ ಇರೋರಿಗಾಗಿ ಈ ಹಾಡು ಮೂಡಿ ಬಂದಿದೆ. ಈ ಹಾಡನ್ನ ಸ್ಯಾಂಡಲ್‌ವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ Rakshit Shetty ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

    ನವರಸ ನಾಯಕ ಜಗ್ಗೇಶ್, ಶ್ವೇತಾ ಶ್ರೀವಾಸ್ತವ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಇದೇ ಏ.28ಕ್ಕೆ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್‌ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದೆ.

  • ಡಿವೋರ್ಸ್‍ನ್ನು ಫೋಟೋಶೂಟ್ ಮಾಡಿಸಿ ಸೆಲೆಬ್ರೆಟ್ ಮಾಡಿದ ಮಹಿಳೆ

    ಡಿವೋರ್ಸ್‍ನ್ನು ಫೋಟೋಶೂಟ್ ಮಾಡಿಸಿ ಸೆಲೆಬ್ರೆಟ್ ಮಾಡಿದ ಮಹಿಳೆ

    ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಮದುವೆಯೊಂದೇ (Wedding) ಅಲ್ಲದೇ ಪ್ರೀ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್‍ಗಳು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಮಹಿಳೆಯೂ (Woman) ವಿಚ್ಛೇದನ (Divorce) ದಿನವನ್ನು ಆಚರಿಸಿಕೊಳ್ಳಲು ಫೋಟೋಶೂಟ್ (photoshoot) ಅನ್ನು ಮಾಡಿಸಿಕೊಂಡಿದ್ದಾಳೆ.

    ಲಾರೆನ್ ಬ್ರೂಕ್ ಎಂಬ ಮಹಿಳೆ ವಿಚ್ಛೇದನ ದಿನವನ್ನು ಆಚರಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ವಿಚ್ಛೇದನದ ಫೋಟೋಶೂಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ 3-4 ಫೋಟೋ ಹರಿದಾಡುತ್ತಿದೆ. ಅದರಲ್ಲಿರುವ ಮೊದಲ ಫೋಟೋದಲ್ಲಿ ಮಹಿಳೆಯೂ ಕೆಂಪು ಬಣ್ಣದ ಡ್ರೇಸ್‍ನಲ್ಲಿ ವಿಚ್ಛೇದನ ಎಂಬ ಫಲಕವನ್ನು ಹಿಡಿದಿಟ್ಟುಕೊಂಡಿದ್ದಾಳೆ. ಅಷ್ಟೇ ಅಲ್ಲದೇ ನಾನು ನಿಮಗೆ ಶುಭ ಹಾರೈಸುತ್ತೇನೆ. ಆದರೆ ನೀವು ಈಗಾಗಲೇ ಅದನ್ನು ಹೊಂದಿದ್ದೀರಿ ಎಂದು ಬರೆದುಕೊಂಡಿದ್ದಾಳೆ.

     

    View this post on Instagram

     

    A post shared by Pubity (@pubity)

    ಅದೇ ರೀತಿ ಮತ್ತೊಂದು ಫೋಟೋದಲ್ಲಿ ಲಾರೆನ್ ತನ್ನ ಮದುವೆಯ ಡ್ರೇಸ್ ಮೇಲೆ ನಿಂತುಕೊಂಡು ಶಾಂಪೇನ್ ಬಾಟಲಿಯನ್ನು ತೆರೆಯುತ್ತಿದ್ದಾಳೆ. ಇನ್ನೊಂದರಲ್ಲಿ, ಅವಳು ತನ್ನ ಮದುವೆಯ ಡ್ರೇಸ್ ಅನ್ನು ಬೆಂಕಿಗೆ ಹಾಕುತ್ತಿದ್ದು, ಜೊತೆಗೆ ಲಾರೆನ್ ತನ್ನ ಮದುವೆಯ ಫೋಟೋ ಫ್ರೇಮ್ ಅನ್ನು ತನ್ನ ಚಪ್ಪಲಿಯಿಂದ ಒಡೆದು ಹಾಕಿದ್ದಾಳೆ. ಮತ್ತೊಂದರಲ್ಲಿ ಮದುವೆಯ ಫೋಟೋವನ್ನು ಹರಿದು ಹಾಕುತ್ತಿದ್ದಾಳೆ. ಇದನ್ನೂ ಓದಿ: ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್‌ ಕೊಡ್ತೀನಿ ಅಂದ್ರೂ ಓಕೆ – ರೇವಣ್ಣ

    ಈ ಫೋಟೋಶೂಟ್‍ಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್‍ಗಳನ್ನು ಮಾಡಿದ್ದಾರೆ. ಓರ್ವ ಕಾಮೆಂಟ್ ಮಾಡಿ, ನಾನು ಇದನ್ನು ಪ್ರೀತಿಸುತ್ತೇನೆ. ಅವಳಿಗೆ ಒಳ್ಳೆಯದಾಗಿದೆ. ಇದು ಅವಳ ವಿಮೋಚನೆಯಾಗಿದೆ ಎಂದು ಬರೆದುಕೊಂಡಿದ್ದಾನೆ. ಮತ್ತೊಬ್ಬ, ಇದು ಹುಚ್ಚುತನದ ಪರಮಾವಧಿ ಎಂದು ತಿಳಿಸಿದ್ದಾನೆ. ಇನ್ನೋರ್ವ ಕಾಮೆಂಟ್ ಮಾಡಿದ್ದು, ಅವಳ ಹಿಂದಿನ ಕಥೆ ನನಗೆ ತಿಳಿದಿಲ್ಲ. ಇದು ಆಘಾತದಿಂದ ಹೊರಬರಲು ಅವಳ ಮಾರ್ಗವಾಗಿದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಮಗಳು ಬಿಜೆಪಿ ಸೇರಿದ್ದು ಎದೆಗೆ ಚೂರಿ ಇರಿದಂತಾಗಿದೆ – ಕಾಗೋಡು ತಿಮ್ಮಪ್ಪ

  • ಮದುವೆ ಆಗುವ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಶರ್ಮಿಳಾ ಮಾಂಡ್ರೆ

    ಮದುವೆ ಆಗುವ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ಶರ್ಮಿಳಾ ಮಾಂಡ್ರೆ

    ‘ಗಾಳಿಪಟ 2′ (Galipata 2) ನಾಯಕಿ ಶರ್ಮಿಳಾ ಮಾಂಡ್ರೆ (Sharmiela Mandre) ಸದ್ಯ ನಿರ್ಮಾಪಕಿಯಾಗಿ (Producer)  ಗುರುತಿಸಿಕೊಳ್ತಿದ್ದಾರೆ. ಹೊಸ ಬಗೆಯ ಕಂಟೆಂಟ್‌ಗಳಿಗೆ ಹೆಚ್ಚಿನ ಆದ್ಯತೆ ಕೊಡ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿಯ ಮದುವೆ ಬಗ್ಗೆ ಕೇಳಲಾಗಿದೆ. ತಾವು ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ನಟಿ ಬಿಚ್ಚಿಟ್ಟಿದ್ದಾರೆ.

    ‘ಸಜನಿ’ ಸಿನಿಮಾ ಮೂಲಕ ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಎಂಟ್ರಿ ಕೊಟ್ಟರು. ಬಳಿಕ ನವಗ್ರಹ, ಗಾಳಿಪಟ 2 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಸದ್ಯ ತಮ್ಮ ನಿರ್ಮಾಣ ಸಂಸ್ಥೆಯ ಜವಬ್ದಾರಿಯನ್ನ ನಟಿ ಹೊತ್ತಿದ್ದಾರೆ. ಸದ್ಯ ಮದುವೆ ಬಗ್ಗೆ ಶರ್ಮಿಳಾ ಮಾತನಾಡಿದ್ದಾರೆ. ಇದನ್ನೂ ಓದಿ:ಸ್ಪರ್ಧಿಗಳಿಂದ ಅಗೌರವ: ಬಿಗ್ ಬಾಸ್ ಶೋ ಮಧ್ಯೆಯೇ ಹೊರನಡೆದ ನಟ ಮೋಹನ್ ಲಾಲ್

    ನನಗೆ ಯಾವುದೇ ಮದುವೆಗೆ ಹೋಗುವುದು ಎಂದರೆ ಭಯವಾಗುತ್ತದೆ. ಏಕೆಂದರೆ ಅಲ್ಲಿರುವ ಎಲ್ಲಾ ಆಂಟಿಯರ ಕಣ್ಣು ನನ್ನ ಮೇಲೆ ಬೀಳುತ್ತದೆ. ಅವರ ನೋಟ ನೋಡಿದರೇನೇ ನನಗೆ ಮುಂದೇ ಏನು ಪ್ರಶ್ನೆ ಎದುರಾಗುತ್ತದೆ ಎನ್ನುವುದು ಅರ್ಥವಾಗುತ್ತದೆ. ಅದಕ್ಕಾಗಿಯೇ ಮದುವೆಯ ಮನೆಗೆ ಹೋಗುವುದು ಎಂದರೆ ಕಿರಿಕಿರಿ ಎನಿಸುತ್ತದೆ. ಅಷ್ಟಕ್ಕೂ ಆ ಆಂಟಿಯರ ಮುಂದಿನ ಪ್ರಶ್ನೆ ಬರುವುದೇ ನಿನ್ನ ಮದುವೆ ಯಾವಾಗ ಎನ್ನುವುದು. ಮದುವೆ ಯಾವಾಗ ಆಗುತ್ತಿಯಾ, ಮದುವೆಯ ಯೋಚನೆ ಇಲ್ವಾ ಅಂತ ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಯಾವುದೇ ಫಂಕ್ಷನ್‌ಗೆ ಹೋಗುವುದರಿಂದ ತಪ್ಪಿಸಿಕೊಳ್ಳುತ್ತೇನೆ, ಮದುವೆ ಮನೆಗಳಿಗೆ ಹೋಗುವುದು ಎಂದರೆ ಭಯ ಎಂದಿದ್ದಾರೆ.

    ಅಷ್ಟಕ್ಕೂ ತಮಗೆ ಮದುವೆ ಆಗುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಈಗ ಅನೇಕ ಮಂದಿ ಹುಡುಗಿಯರು ಮದುವೆಯಾಗಲು ಹಿಂಜರಿಯುತ್ತಾರೆ. ತಮಗೆ ಮದುವೆ ಬೇಡ ಎಂದು ಹೇಳುತ್ತಾರೆ. ಆದರೆ ನಾನು ಅಂತವಳಲ್ಲ, ನಾನು ಮದುವೆಯಾಗುವುದಿಲ್ಲ ಎಂದು ಯಾವಾಗಲೂ ಹೇಳಿಲ್ಲ. ಮದುವೆಯಾಗುತ್ತೇನೆ ಎಂದಿದ್ದಾರೆ. ಎಂಥ ಹುಡುಗ ಬೇಕು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶರ್ಮಿಳಾ, ಚಿಕ್ಕವಳಿರುವಾಗ ಹುಡುಗ ಹಾಗಿರಬೇಕು, ಹೀಗಿರಬೇಕು ಎಂದು ಅಂದುಕೊಂಡಿದ್ದೆ. ಈಗ ಅದ್ಯಾವುದೂ ಆಸೆ ಇಲ್ಲ. ಅವೆಲ್ಲಾ 23-24ನೇ ವಯಸ್ಸಿಗೆ ಮುಗಿದುಹೋದವು. ಈಗ ಸ್ವೀಟ್, ನೈಸ್ ಮತ್ತು ಒಳ್ಳೆಯ ಪರ್ಸನ್ಯಾಲಿಟಿ ಇರೋ ಹುಡುಗ ಬೇಕು ಅಷ್ಟೇ ಎಂದಿದ್ದಾರೆ. ಸಿನಿಮಾ ಇಂಡಸ್ಟ್ರಿಯ ಹುಡುಗನೇ ಬೇಕೆಂದೇನೂ ಇಲ್ಲ, ಯಾವ ಕ್ಷೇತ್ರದವನಾದರೂ ಓಕೆ ಎಂದಿದ್ದಾರೆ.

  • ಪತ್ನಿ, ಪುತ್ರನ ಜೊತೆ ವಿನೋದ್ ರಾಜ್? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ

    ಪತ್ನಿ, ಪುತ್ರನ ಜೊತೆ ವಿನೋದ್ ರಾಜ್? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಡ್ಯಾನ್ಸ್‌ಗೆ ಹೆಸರುವಾಸಿಯಾಗಿದ್ದ ವಿನೋದ್ ರಾಜ್ (Vinodraj) ಕಾರಣಾಂತರಗಳಿಂದ ನಟನೆಯಿಂದ ದೂರ ಸರಿದು ತಮ್ಮ ತಾಯಿ ಲೀಲಾವತಿ ಜೊತೆ ಜೀವನ ಸಾಗಿಸುತ್ತಿದ್ದಾರೆ. ವಿನೋದ್ ರಾಜ್‌ಗೆ ಮದುವೆಯಾಗಿಲ್ಲ. ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಫ್ಯಾನ್ಸ್‌ ಅಂದುಕೊಂಡಿದ್ದರು. ಇದೀಗ ವಿನೋದ್ ರಾಜ್‌ಗೆ ಮದುವೆಯಾಗಿ ಮಗನಿರುವ ಬಗ್ಗೆ ‘ಡಿಎನ್‌ಎ’ ಖ್ಯಾತಿಯ ನಿರ್ದೇಶಕ ಪ್ರಕಾಶ್ ಮೆಹು (Director Prakash Mehu) ಸೋಷಿಯಲ್ ಮೀಡಿಯಾದಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

    ಹಿರಿಯ ನಟಿ ಲೀಲಾವತಿ (Leelavathi) ಮತ್ತು ಅವರ ಪುತ್ರ ವಿನೋದ್‌ರಾಜ್‌ಗೆ ಸಂಬಂಧಿಸಿದಂತೆ ಸ್ಫೋಟಕ ಸುದ್ದಿಯೊಂದನ್ನು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ. ಇದರ ಬಗ್ಗೆ ಅಸಲಿ ಸತ್ಯವನ್ನ ಸ್ವತಃ ನಟಿ ಲೀಲಾವತಿ- ಪುತ್ರ ವಿನೋದ್ ರಾಜ್ ಅವರೇ ಬಹಿರಂಗಪಡಿಸಬೇಕಿದೆ.

    ಸದ್ಯ ವಯೋಸಹಜ ಅನಾರೋಗ್ಯದಿಂದ (Health Issue) ಇರುವ ಲೀಲಾವತಿ ಅವರನ್ನು ಅವರ ಪುತ್ರ ವಿನೋದ್ ರಾಜ್ ನೋಡಿಕೊಳ್ಳುತ್ತಿದ್ದು, ಇದರ ಜೊತೆಗೆ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು ನೆಲಮಂಗಲ ಹತ್ತಿರ ನೆಲೆಸಿದ್ದಾರೆ. ವಿನೋದ್ ರಾಜ್ ಅವರಿಗೆ ಈವರೆಗೆ ಮದುವೆಯಾಗಿಲ್ಲ ಎಂದೇ ಹೇಳಲಾಗಿತ್ತು. ಅವರೇಕೆ ಇನ್ನೂ ಮದುವೆಯಾಗಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ನಿರ್ದೇಶಕ ಪ್ರಕಾಶ್ ರಾಜ್ ಮೆಹು ತಮ್ಮ Facebook ಪುಟದಲ್ಲಿ ವಿನೋದ್ ರಾಜ್‌ಗೆ ಮದುವೆಯಾಗಿ ಓರ್ವ ಮಗನಿದ್ದಾನೆ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

    ವಿನೋದ್ ರಾಜ್ ಅವರಿಗೆ ಮದುವೆಯಾಗಿ ಪುತ್ರನಿದ್ದು, ಚೆನ್ನೈನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವಿನೋದ್ ಪತ್ನಿ ಮತ್ತು ಮಗ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ. ಲೀಲಾವತಿಯವರ ಜೊತೆಗೆ ಕುಳಿತಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ನಿರ್ದೇಶಕ ಪ್ರಕಾಶ್ ಮೆಹು ಪ್ರಕಟಿಸಿದ್ದಾರೆ. ಅದರಲ್ಲಿ ಮಹಾಲಿಂಗ ಭಾಗವತರ್ ಪತ್ನಿ ಲೀಲಾವತಿ ಅಮ್ಮಾಳ್ ಎಂದು ಬರೆದುಕೊಂಡಿದ್ದಾರೆ. ವಿನೋದ್ ಪುತ್ರನ ಹೆಸರು ಯುವರಾಜ್ ಎಂದು ಇದ್ದು, ಈ ಸಂಬಂಧ ಆತನ ಅಂಕಪಟ್ಟಿಯ ಫೋಟೋವನ್ನು ಕೂಡ ಹಾಕಿದ್ದಾರೆ. ಅದರಲ್ಲಿ ತಾಯಿ ಹೆಸರು ಅನು ಬಿ ಎಂದಿದೆ. ತಂದೆ/ಗಾರ್ಡಿಯನ್ ಜಾಗದಲ್ಲಿ ವಿನೋದ್ ರಾಜ್ ಎಂದಿದೆ.

    ಕಳೆದ ಎರಡು ದಿನಗಳಿಂದ ವಿನೋದ್ ರಾಜ್ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತುದ್ದರು. ಲೀಲಾವತಿ- ವಿನೋದ್ ರಾಜ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿಚಾರ ಅದೆಷ್ಟರ ಮಟ್ಟಿಗೆ ನಿಜಾ ಎಂಬುದನ್ನ ಕಾದುನೋಡಬೇಕಿದೆ.

  • ಸಿಡ್ನಿ ವರನ ಜೊತೆ ನಟಿ ಸುಕೃತಾ ನಾಗ್ ಮದುವೆ ಫಿಕ್ಸ್

    ಸಿಡ್ನಿ ವರನ ಜೊತೆ ನಟಿ ಸುಕೃತಾ ನಾಗ್ ಮದುವೆ ಫಿಕ್ಸ್

    ‘ಲಕ್ಷಣ’ ಸೀರಿಯಲ್ ಕೆಡಿ ಶ್ವೇತಾ ಅಲಿಯಾಸ್ ಸುಕೃತಾ ನಾಗ್ (Sukrutha Nag) ಅವರು ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕುಟುಂಬಸ್ಥರು ನೋಡಿರುವ ಸಿಡ್ನಿ (Sydney) ಹುಡುಗನ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಇದನ್ನೂ ಓದಿ: ಅನುಷ್ಕಾ ಕೆರಿಯರ್ ಹಾಳು ಮಾಡಲು ಹೊರಟಿದ್ರಾ ಕರಣ್ ಜೋಹರ್?

    ಕಿರುತೆರೆ Lakshana ಸೀರಿಯಲ್‌ನಲ್ಲಿ ಹೀರೋ ಭೂಪತಿಗೆ ನಕ್ಷತ್ರಾ ಜೊತೆ ಮದುವೆಯಾಗಿದೆ ಆದ್ರೂ ಅವನೇ ಬೇಕು ಅಂತಾ ಭೂಪತಿ ಹಿಂದೆ ಬಿದ್ದಿರುವ ಕೆಡಿ ಶ್ವೇತಾ ಅಲಿಯಾಸ್ ಸುಕೃತಾ ನಾಗ್ ರಿಯಲ್ ಲೈಫ್‌ನಲ್ಲಿ ಮದುವೆಗೆ ತಯಾರಿ ಮಾಡ್ತಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಸ್ನೇಹಿತರಿಗೆ ಕರೆ ಮಾಡಿ ರಿವೀಲ್ ಮಾಡಿದ್ದಾರೆ.

    ತನ್ನ ಸೀರಿಯಲ್ ಫ್ರೆಂಡ್ಸ್, ಬೆಸ್ಟ್ ಫ್ರೆಂಡ್‌ಗೆ ಕಾಲ್ ಮಾಡಿ, ತಾನು ಸಿಡ್ನಿ ಹುಡುಗನನ್ನು ಮದುವೆ ಆಗ್ತಿದ್ದೀನಿ. ಈ ವರ್ಷದ ಕೊನೆಯಲ್ಲಿ ಮದುವೆ. ಅಮ್ಮನೆ ನೋಡಿರೋ ಹುಡುಗ. ಅರೇಂಜ್ಡ್ ಮ್ಯಾರೇಜ್ ಅನ್ನೋ ಸಂಗತಿಯನ್ನು ಸುಕೃತಾ ಹೇಳಿದ್ದಾರೆ. ಅದನ್ನು ಕೇಳಿ ಫ್ರೆಂಡ್ಸ್ ಎಲ್ಲ ಸಖತ್ ಖುಷಿಯಾಗಿ ವಿಶ್ ಮಾಡಿದ್ದಾರೆ. ಈ ವಿಷ್ಯಾ ಈಗ ಹೇಳಿದ್ಯಾ ಅಂತಾ ಫ್ರೆಂಡ್ಸ್ ಚೆನ್ನಾಗಿಯೇ ಚೆನ್ನಾಗಿಯೇ ಕ್ಲಾಸ್ ತಗೊಂಡಿದ್ದಾರೆ.

    ಸುಕೃತಾ ಕಾಲ್ ಮಾಡಿ ತನ್ನ ಮದುವೆ ವಿಚಾರ ತಿಳಿಸಿದ್ದು ‘ಲಕ್ಷಣ’ ಸೀರಿಯಲ್‌ನಲ್ಲಿ ಡೆವಿಲ್ ಭಾರ್ಗವಿ ಪಾತ್ರದಲ್ಲಿ ಮಿಂಚುತ್ತಿರುವ ಪ್ರಿಯಾ, ವಿಜಯಲಕ್ಷ್ಮಿ ಹಾಗೂ ಆಕೆಯ ಸ್ನೇಹಿತರಿಗೆ. ಮೊದಲಿಗೆ ಪ್ರಿಯಾಗೆ ಕಾಲ್ ಮಾಡಿ ವಿಷಯ ತಿಳಿಸಿದಾಗ ಅವರು ಸಖತ್ ಥ್ರಿಲ್ ಆದ್ರು. ತನ್ನ ಬೆಸ್ಟ್ ಫ್ರೆಂಡ್‌ಗೆ ಅಭಿನಂದನೆಯನ್ನು ತನ್ನದೇ ಸ್ಟೈಲಲ್ಲಿ ತಿಳಿಸಿದ್ರು. ಆಮೇಲೆ ಸೀರಿಯಲ್‌ ಸಹನಟಿ(Nakshatra)  ವಿಜಯಲಕ್ಷ್ಮಿಗೆ ಕಾಲ್ ಮಾಡಿ ಹೇಳಿದಾಗಲೂ ಆಕೆ ಇದನ್ನು ಕೇಳಿ ಖುಷಿಪಟ್ಟರು.

    ಅಂದಹಾಗೆ ವೀಡಿಯೋ ಮಾಡಿರೋದು ಏಪ್ರಿಲ್ 1ಕ್ಕೆ, ತನ್ನ ಮದುವೆ ಅಂತಾ ಹೇಳಿ ನಟಿ ಸುಕೃತಾ ನಾಗ್ ಸಖತ್ ಆಗಿ ಎಲ್ಲರಿಗೂ ಬಕ್ರಾ ಮಾಡಿದ್ದಾರೆ. ಸಖತ್ ಆಗಿ ಆಕ್ಟ್ ಮಾಡಿ, ಎಲ್ಲರಿಗೂ ಫೂಲ್ ಮಾಡಿದ್ದಾರೆ.

  • 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

    2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

    ಕಿರುತೆರೆಯ ಗಟ್ಟಿಮೇಳ, ಗೀತಾ, ಬೆಟ್ಟದ ಹೂ, ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿರುವ ಸ್ವಾತಿ ಎಚ್.ವಿ (Swathi Hv) ಅವರು ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಬೆನ್ನಲ್ಲೇ ಸ್ವಾತಿ ಅವರು 2ನೇ ಮದುವೆ (Wedding) ಆಗಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಈ ಸುದ್ದಿಗೆ ಇದೀಗ ನಟಿ ಸ್ಪಷ್ಟನೆ ನೀಡಿದ್ದಾರೆ.

    ನಾಗಾರ್ಜುನ ರವಿ (Nagarjuna Ravi) ಎಂಬುವವರ ಜೊತೆ ನಟಿ ಸ್ವಾತಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಬೆನ್ನಲ್ಲೇ ಸ್ವಾತಿಗೆ ಇದು ಮೊದಲ ಮದುವೆಯಲ್ಲ, 2ನೇ ಮದುವೆಯಾಗಿದ್ದಾರೆ ಎಂಬ ಸುದ್ದಿ  ಅನೇಕರ ಚರ್ಚೆಗೆ ಗ್ರಾಸವಾಗಿತ್ತು. ಸಂದರ್ಶನವೊಂದರಲ್ಲಿ 2ನೇ ಮದುವೆ ವದಂತಿ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಐಟಂ ಸಾಂಗ್ ಒಪ್ಪಿಕೊಂಡಿದ್ದಕ್ಕೆ ಕಾರಣವಿದೆ : ಸಮಂತಾ ಸಿಡಿಸಿಸ ಹೊಸ ಬಾಂಬ್

    ವೈವಾಹಿಕ ಜೀವನದಲ್ಲಿ ಖುಷಿಯಾಗಿರುವೆ. ನನ್ನ ಸ್ನೇಹಿತನನ್ನು ಮದುವೆ ಮಾಡಿಕೊಂಡಿರುವೆ ಹೀಗಾಗಿ ನನ್ನ ಬೆಸ್ಟ್ ಫ್ರೆಂಡ್ ನನ್ನ ಲೈಫ್ ಪಾರ್ಟನರ್ ಆಗಿದ್ದಾರೆ. ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿರುವ ಕಾರಣ ಎಲ್ಲವೂ ಸ್ಮೂತ್ ಆಗಿ ನಡೆಯುತ್ತಿದೆ ಎಂದು ನಟಿ ಸ್ವಾತಿ ಮಾತನಾಡಿದ್ದಾರೆ.

    ನನ್ನ ಗಂಡನ ಮನೆ ಕಡೆ ತುಂಬಾ ತಪ್ಪು ತಿಳಿದುಕೊಂಡಿದ್ದು, ಹುಡುಗಿಗೆ ಎರಡನೇ ಮದುವೆ ಮೂರನೇ ಮದುವೆ ನಾ ಎಂದು ಕೇಳಿದರು. ಆ ನಂತರ ಅದು ಸೀರಿಯಲ್ ಮದುವೆ ಎಂದು ಕ್ಲಾರಿಟಿ ಕೊಟ್ಟರು. ಮದುವೆ ಫೋಟೋ ಹಾಕಿದಾಗ ಅನೇಕರು ಎರಡನೇ ಮದುವೆ ಎನ್ನುತ್ತಿದ್ದರು ಹೀಗಾಗಿ ಅನೇಕರಿಗೆ ಕ್ಲಾರಿಟಿ ಕೊಡಬೇಕು ಅನಿಸಿತು. ಸೀರಿಯಲ್‌ನಲ್ಲಿ ತಾಯಿ ಪಾತ್ರ ಮಾಡ್ತೀನಿ, ಆದರೆ ರಿಯಲ್ ಲೈಫ್‌ನಲ್ಲಿ ನನಗೆ ಅಷ್ಟೊಂದು ಮದುವೆ ಆಗಿಲ್ಲ. ಇತ್ತೀಚಿಗೆ ನಾನು ಮದುವೆ ಆಗಿದೆ. ಇದು ನನ್ನ ಮೊದಲನೇ ಮದುವೆ ಎಂದು ಸ್ವಾತಿ ಸ್ಪಷ್ಟನೆ ನೀಡಿದ್ದಾರೆ.

  • ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆಗೆ ಮನೆಯವರಿಂದ ಸಿಕ್ತು ಗ್ರೀನ್ ಸಿಗ್ನಲ್

    ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆಗೆ ಮನೆಯವರಿಂದ ಸಿಕ್ತು ಗ್ರೀನ್ ಸಿಗ್ನಲ್

    ಚಿತ್ರರಂಗದಲ್ಲಿ ಗಟ್ಟಿಮೇಳದ ಸದ್ದು ಜೋರಾಗಿದೆ. ರಾಹುಲ್ -ಅಥಿಯಾ, ಸಿದ್-ಕಿಯಾರಾ ಬಳಿಕ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghva Chadha) ಜೋಡಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಾಲಿವುಡ್ (Bollywood) ಅಡ್ಡಾದಲ್ಲಿ ಸೌಂಡ್ ಮಾಡ್ತಿದೆ.

    ಇತ್ತೀಚಿಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಪರಿಣಿತಿ (Parineeti Chopra) ಮತ್ತು ಎಎಪಿ ಸಂಸದ ರಾಘವ್ ಚಡ್ಡಾ ಒಟ್ಟಿಗೆ ಕಾಣಿಸಿಕೊಂಡಿದ್ದು, ಡೇಟಿಂಗ್ ರೂಮರ್ಸ್ ಹರಡಲು ಕಾರಣವಾಯ್ತು. ಹೊಟೇಲ್ ಭೇಟಿಯ ವೇಳೆ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಮೂಲಗಳ ಪ್ರಕಾರ, ಪರಿಣಿತಿ- ರಾಘವ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಕುಟುಂಬಗಳು ಈಗಾಗಲೇ ರೋಕಾ (ನಿಶ್ಚಯ) ಸಮಾರಂಭಕ್ಕೆ ಸಿದ್ಧತೆಗಳನ್ನು ನಡೆಸುತ್ತಿವೆ. ಅಂದಹಾಗೆ ರೋಕಾ ಎನ್ನುವುದು ಪಂಜಾಬಿ ವಿವಾಹದ ಮೊದಲು ನಡೆಯುವ ಅತ್ಯಂತ ಮಹತ್ವದ ಸಮಾರಂಭಗಳಲ್ಲಿ ಒಂದಾಗಿದೆ.

    ರಾಘವ್ ಮತ್ತು ಪರಿಣಿತಿ ಚೋಪ್ರಾ ಇಬ್ಬರೂ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಒಟ್ಟಿಗೆ ಓದಿದ್ದಾರೆ. ಹಾಗೆಯೇ ಇಬ್ಬರೂ ಅನೇಕ ಕಾಮನ್ ಫ್ರೆಂಡ್ಸ್ ಹೊಂದಿದ್ದಾರೆ ಎಂಬ ಅಂಶವನ್ನು ಹೊರತುಪಡಿಸಿ, ತಮ್ಮ ಸಂಬಂಧದ ಸ್ಥಿತಿಯ ಬಗ್ಗೆ ಯಾರಿಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಸಿದ್-ಕಿಯಾರಾ ಮದುವೆ ನಂತರ ಇದೀಗ ಪರಿಣಿತಿ ಚೋಪ್ರಾ ಹಸೆಮಣೆ ಏರುವುದು ಗ್ಯಾರೆಂಟಿ ಎಂದು ಹೇಳಲಾಗುತ್ತಿದೆ.

  • ಡಿವೋರ್ಸ್‌ ಬಳಿಕ ಐಟಂ ಡ್ಯಾನ್ಸ್‌ ಮಾಡಬೇಡ ಎಂದಿದ್ರು: ನಟಿ ಸಮಂತಾ

    ಡಿವೋರ್ಸ್‌ ಬಳಿಕ ಐಟಂ ಡ್ಯಾನ್ಸ್‌ ಮಾಡಬೇಡ ಎಂದಿದ್ರು: ನಟಿ ಸಮಂತಾ

    ಸೌತ್ ಬ್ಯೂಟಿ ಸಮಂತಾ – ನಾಗಚೈತನ್ಯ (Nagachaitanya) ಡಿವೋರ್ಸ್ (Divorce) ಪಡೆದು ಒಂದೂವರೆ ವರ್ಷವಾಗಿದೆ. ಆದರೂ ಇಬ್ಬರು ಯಾವ ಕಾರಣಕ್ಕೆ ಬೇರೆಯಾದ್ರು ಎಂಬುದು ಯಾರಿಗೂ ಗೊತ್ತಿಲ್ಲ. ಸದ್ಯ `ಶಾಕುಂತಲಂ’ (Shakuntalam) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಇಂಟ್ರಸ್ಟಿಂಗ್ ಮಾಹಿತಿಯನ್ನ ನಟಿ ಬಿಚ್ಚಿಟ್ಟಿದ್ದಾರೆ. ಡಿವೋರ್ಸ್ ನಂತರ ಐಟಂ ಹಾಡಿಗೆ ಡ್ಯಾನ್ಸ್ ಮಾಡಬೇಡ ಅಂದಿದ್ರು ಎಂದು ನಟಿ ಹೇಳಿಕೊಂಡಿದ್ದಾರೆ.

    ನಾಗಚೈತನ್ಯ ಅವರಿಂದ ದೂರ ಆದ ಬಳಿಕ ಸಮಂತಾ, ಅಲ್ಲು ಅರ್ಜುನ್ ನಟನೆಯ `ಪುಷ್ಪ’ (Pushpa) ಸಿನಿಮಾದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ದೊಡ್ಡ ಖ್ಯಾತಿ ಗಳಿಸಿದರು. ಡಿವೋರ್ಸ್ ಪಡೆದ ಸಮಯದಲ್ಲೇ ಈ ಹಾಡಿಗೆ ಹೆಜ್ಜೆ ಹಾಕುವುದು ಸ್ನೇಹಿತರಿಗೆ, ಕುಟುಂಬದವರಿಗೆ ಇಷ್ಟವಿರಲಿಲ್ಲ ಎಂದು ಸಮಂತಾ (Samantha) ಹೇಳಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಸಮಂತಾ, ʻಪುಷ್ಪʼ (Pushpa) ಚಿತ್ರದ ಹಾಡಿಗೆ ಆಫರ್ ಬಂದಾಗ, ನಾನು ಡಿವೋರ್ಸ್ ಘೋಷಣೆ ಮಾಡುವ ಮಧ್ಯದಲ್ಲಿದ್ದೆ. ನಾನು ಘೋಷಣೆ ಮಾಡಿದಾಗ ನನ್ನ ಪ್ರತಿಯೊಬ್ಬ ಸ್ನೇಹಿತರು, ಪ್ರತಿಯೊಬ್ಬ ಹಿತೈಷಿಗಳು ಮತ್ತು ನನ್ನ ಕುಟುಂಬದವರು ನೀನು ಮನೆಯಲ್ಲೇ ಇರು ಡಿವೋರ್ಸ್ ಐಟಂ ಸಾಂಗ್ ಮಾಡಬೇಡ. ಬೇಡ ಎಂದು ಹೇಳು ಎಂದಿದ್ದರು. ಆದರೂ ನಾನು ಡ್ಯಾನ್ಸ್ ಮಾಡುವ ನಿರ್ಧಾರಕ್ಕೆ ಬಂದಿದ್ದೆ ಎಂದು ಸಮಂತಾ ಮಾತನಾಡಿದ್ದಾರೆ.

    ನಾನೇಕೆ ಅವಿತುಕೊಳ್ಳಲಿ ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾವುದೇ ಕ್ರೈಂ ಮಾಡಿರಲಿಲ್ಲ. ಹೀಗಾಗಿ, ಅವಿತು ಕೂರೋ ಮಾತೇ ಇರಲಿಲ್ಲ. ನಾನು ನನ್ನ ದಾಂಪತ್ಯ ಜೀವನಕ್ಕೆ 100% ನೀಡಿದ್ದೆ. ಆದರೂ ಆ ಸಂಬಂಧ ಉಳಿದುಕೊಂಡಿಲ್ಲ. ನಾನು ಮಾಡದೇ ಇರುವ ಕೆಲಸಕ್ಕೆ ನಾನು ಪಶ್ಚಾತಾಪ ಪಡೋದಿಲ್ಲ ಎಂದಿದ್ದಾರೆ ಸಮಂತಾ.

  • `ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್

    `ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್

    ಕಿರುತೆರೆಯ ಬಿಗ್ ಬಾಸ್ (Bigg Boss Kannada) ಮೂಲಕ ಮೋಡಿ ಮಾಡಿದ್ದ ಚೆಲುವೆ ಅಕ್ಷತಾ ಕುಕಿ (Akshatha Kukki) ಅವರು ಸೋಮವಾರ (ಮಾ.27)ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಅವಿನಾಶ್ ಎಂಬುವವರ ಜೊತೆ ಅರೆಂಜ್ ಮ್ಯಾರೇಜ್ ಆಗಿದ್ದಾರೆ. ಇದೀಗ ಈ ಜೋಡಿಯ ಮದುವೆಯ ಸುಂದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಬಿಗ್ ಬಾಸ್ ಒಟಿಟಿಗೆ ಕಾಲಿಡುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಸ್ಪರ್ಧಿ ಅಕ್ಷತಾ ಕುಕಿ ಅವರು ಸೀರಿಯಲ್ ಮತ್ತು ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. `ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ಜೊತೆ ಅಕ್ಷತಾ ಕುಕಿ ನಟಿಸಿದ್ದಾರೆ.

    ಅಕ್ಷತಾ ಕುಕಿ ಅವರು ಹಸೆಮಣೆ ಏರಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ವರನ ಜೊತೆ ಎರಡು ತಿಂಗಳ ಹಿಂದೆ ಎಂಗೇಜ್‌ಮೆಂಟ್ ಆಗಿತ್ತು. ಅವಿನಾಶ್ ಜೊತೆ ಮಾರ್ಚ್ 27ರಂದು ಅಕ್ಷತಾ ಸಪ್ತಪದಿ ತುಳಿದುದ್ದಾರೆ. ಬೆಳಗಾವಿಯಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ. ಗೋಲ್ಡನ್‌ ಬಣ್ಣದ ಸೀರೆಯಲ್ಲಿ ನಟಿ ಅಕ್ಷತಾ ಮಿಂಚಿದ್ದಾರೆ.

    ಅಕ್ಷತಾ ಮದುವೆಯಾಗಿರುವ ವರ ಅವಿನಾಶ್, ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಷತಾ ಅವರ ಮದುವೆಯಲ್ಲಿ ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದಾರೆ. ನವಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.