Tag: wedding

  • ಮದುವೆಯಲ್ಲಿ ಡಾನ್ಸ್‌ ಮಾಡುತ್ತಿದ್ದಾಗಲೇ ಹೃದಯ ಸ್ತಂಭನ – ವೇದಿಕೆಯಲ್ಲೇ ಎಂಬಿಎ ಪದವೀಧರೆ ಸಾವು

    ಮದುವೆಯಲ್ಲಿ ಡಾನ್ಸ್‌ ಮಾಡುತ್ತಿದ್ದಾಗಲೇ ಹೃದಯ ಸ್ತಂಭನ – ವೇದಿಕೆಯಲ್ಲೇ ಎಂಬಿಎ ಪದವೀಧರೆ ಸಾವು

    – 12ನೇ ವಯಸ್ಸಿನಲ್ಲೇ ಆಕೆಯ ಸಹೋದರನೂ ಹೃದಯಾಘಾತದಿಂದಲೇ ಸಾವು

    ಭೋಪಾಲ್‌: ಮದುವೆ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದಾಗಲೇ ಹೃದಯಸ್ತಂಭನದಿಂದ (Cardiac Arrest) 23ರ ಯುವತಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ವಿದಿಶಾ ಜಿಲ್ಲೆಯ ರೆಸಾರ್ಟ್‌ನಲ್ಲಿ ನಡೆದಿದೆ.

    ಯುವತಿಯನ್ನು ಇಂದೋರ್ ನಿವಾಸಿ ಪರಿಣಿತಾ ಜೈನ್ ಎಂದು ಗುರುತಿಸಲಾಗಿದ್ದು, ಆಕೆಯ ಸೋದರ ಸಂಬಂಧಿ ಮದುವೆಯಲ್ಲಿ (Wedding) ಪಾಲ್ಗೊಂಡಿದ್ದರು. 200ಕ್ಕೂ ಹೆಚ್ಚು ಗಣ್ಯರು ಉಪಸ್ಥಿತರಿದ್ದರು. ಈ ವೇಳೆ ಪರಿಣಿತಾ ವೇದಿಕೆಯಲ್ಲಿ ಬಾಲಿವುಡ್‌ ಗೀತೆಯೊಂದಕ್ಕೆ ನೃತ್ಯ ಮಾಡುತ್ತಿದ್ದಾಗಲೇ ಹೃದಯ ಸ್ತಂಬನದಿಂದ ಸಾವನ್ನಪ್ಪಿದ್ದಾರೆ. ಆಕೆ ಕುಸಿದು ಬಿದ್ದ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ ನಂತರ ಘಟನೆ ಬೆಳಕಿಗೆ ಬಂದಿದೆ.

    ಈ ವೇಳೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವೈದ್ಯರು ಆಕೆಗೆ ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸಸಿಟೇಶನ್) ನೀಡಲು ಪ್ರಯತ್ನಿಸಿದ್ರು, ಆದ್ರೆ ಪ್ರಯೋಜನವಾಗಲಿಲ್ಲ. ತಕ್ಷಣ ಅಲ್ಲಿಂದ ಖಾಸಗಿ ಅಸ್ಪತ್ರೆಗೆ ಕರೆದೊಯ್ಯಲಾಯಿತು ಅಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ರು. ಇದನ್ನೂ ಓದಿ: ಇಂದಿನಿಂದ ಟಿ.ನರಸೀಪುರದಲ್ಲಿ ದಕ್ಷಿಣ ಭಾರತದ ಏಕೈಕ ಕುಂಭಮೇಳ

    ಎಂಬಿಎ ಪದವೀಧರರಾಗಿದ್ದ ಪರಿಣಿತಾ ತಮ್ಮ ಪೋಷಕರೊಂದಿಗೆ ಇಂದೋರ್‌ನ ದಕ್ಷಿಣ ತುಕೋಗಂಜ್‌ನಲ್ಲಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ, ಆಕೆಯ ಸಹೋದರನೊಬ್ಬ 12ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ. ಇದನ್ನೂ ಓದಿ:  Aero India 2025 | ವೈಮಾನಿಕ ಪ್ರದರ್ಶನಕ್ಕಿಂದು ಚಾಲನೆ – ರಷ್ಯಾ, ಅಮೆರಿಕ ಸೇರಿ 90 ದೇಶಗಳು ಭಾಗಿ

  • ಸ್ನೇಹಿತೆಯ ಅರಿಶಿನ ಶಾಸ್ತ್ರದಲ್ಲಿ ‘ಬಿಗ್‌ ಬಾಸ್’ ಮೋಕ್ಷಿತಾ ಮಿಂಚಿಂಗ್

    ಸ್ನೇಹಿತೆಯ ಅರಿಶಿನ ಶಾಸ್ತ್ರದಲ್ಲಿ ‘ಬಿಗ್‌ ಬಾಸ್’ ಮೋಕ್ಷಿತಾ ಮಿಂಚಿಂಗ್

    ‘ಪಾರು’ ಸೀರಿಯಲ್ (Paaru Serial) ಖ್ಯಾತಿಯ ಮಾನ್ಸಿ ಜೋಶಿ (Mansi Joshi) ಅವರು ಇದೇ ಫೆ.16ರಂದು ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ರೆಸಾರ್ಟ್‌ವೊಂದರಲ್ಲಿ ಅರಿಶಿನ ಶಾಸ್ತ್ರ ಅದ್ಧೂರಿಯಾಗಿ ಜರುಗಿದೆ. ಈ ಕಾರ್ಯಕ್ರಮದಲ್ಲಿ ‘ಬಿಗ್ ಬಾಸ್’ (Bigg Boss Kannada 11) ಬೆಡಗಿ ಮೋಕ್ಷಿತಾ ಪೈ (Mokshitha Pai) ಕೂಡ ಭಾಗಿಯಾಗಿದ್ದಾರೆ.

    ರಾಘವ್ ಜೊತೆ ಮಾನ್ಸಿ ಜೋಶಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ಮಾನ್ಸಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ವರ ರಾಘವ್ ಹಳದಿ ಬಣ್ಣದ ಉಡುಗೆ ಧರಿಸಿದ್ದಾರೆ. ಸ್ನೇಹಿತೆ ಮಾನ್ಸಿ ಹಳದಿ ಶಾಸ್ತ್ರದಲ್ಲಿ ಮೋಕ್ಷಿತಾ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಹಳದಿ ಬಣ್ಣದ ಡ್ರೆಸ್ ಧರಿಸಿ, ಕೂದಲು ಕರ್ಲಿ ಮಾಡಿಸಿದ್ದಾರೆ. ಸ್ಟೈಲೀಶ್ ಆಗಿ ಮೋಕ್ಷಿತಾ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Mokshitha Pai (@mokshitha22)

    ಇನ್ನೂ ಮೋಕ್ಷಿತಾ ಬಿಗ್ ಬಾಸ್‌ಗೆ (BBK 11) ಹೋಗಿದ್ದ ಸಂದರ್ಭದಲ್ಲಿ ಮಾನ್ಸಿ ನಿಶ್ಚಿತಾರ್ಥ ನಡೆದಿತ್ತು. ಆಗ ಮೋಕ್ಷಿತಾ ಅನುಪಸ್ಥಿತಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದೀರಾ ಎಂದು ಸಿಕ್ಕಾಪಟ್ಟೆ ಮಾನ್ಸಿ ಅವರನ್ನು ಟ್ರೋಲ್ ಮಾಡಲಾಗಿತ್ತು. ಈಗ ಮಾನ್ಸಿ ಅರಿಶಿನ ಸಂಭ್ರಮದಲ್ಲಿ ಮೋಕ್ಷಿತಾ ಭಾಗಿಯಾಗಿ ಟ್ರೋಲ್ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ.

    ಫೆ.16ರಂದು ನಡೆಯಲಿರುವ ಮಾನ್ಸಿ ಮದುವೆಗೂ ಮೋಕ್ಷಿತಾಗೆ ಆಹ್ವಾನವಿದೆ. ಕಿರುತೆರೆ ನಟ ನಟಿಯರು ಈ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

  • ಭಾವಿ ಪತ್ನಿಗೆ ಡಾಲಿ ಪ್ರಪೋಸ್- ವಿಡಿಯೋ ವೈರಲ್

    ಭಾವಿ ಪತ್ನಿಗೆ ಡಾಲಿ ಪ್ರಪೋಸ್- ವಿಡಿಯೋ ವೈರಲ್

    ಟ ರಾಕ್ಷಸ ಡಾಲಿ ಧನಂಜಯ (Daali Dhananjay) ಅವರು ಇದೇ ಫೆ.16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ಆಕ್ಟರ್ ಡಾಲಿ ಲೈಫ್‌ಗೆ ಡಾಕ್ಟರ್ ಧನ್ಯತ ಎಂಟ್ರಿ ಕೊಟ್ಟಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಇದರ ನಡುವೆ ಭಾವಿ ಪತ್ನಿ ಧನ್ಯತಾಗೆ (Dhanyatha) ಉಂಗುರ ತೊಡಿಸಿ ವಿಶೇಷವಾಗಿ ಡಾಲಿ ಪ್ರಪೋಸ್ ಮಾಡಿದ್ದಾರೆ. ಹೊಸ ಜೋಡಿಯ ಪ್ರಪೋಸಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಧನ್ಯತ ಬರುವ ಮುನ್ನ ಡಾಲಿ ಸಿಂಗಲ್ ಲೈಫ್ ಹೇಗಿತ್ತು? ಎಂಬುದನ್ನು ವಿಡಿಯೋ ಮೂಲಕ ವಿವರಿಸಿದ್ದಾರೆ. ಡಾಲಿ ಆಪ್ತ ಸ್ನೇಹಿತ ನಾಗಭೂಷಣ್ ಧ್ವನಿಯಲ್ಲಿ ಈ ವಿಡಿಯೋ ಮೂಡಿ ಬಂದಿದೆ. ಬ್ಯಾಚುಲರ್ ಲೈಫ್ ಹೇಗಿತ್ತು? ಎಂಬುದನ್ನು ವಿವರಿಸಿ ನಂತರ ಧನ್ಯತ ಎಂಟ್ರಿ ಕೊಟ್ಟಿರೋದನ್ನು ತೋರಿಸಿದ್ದಾರೆ. ಇದನ್ನೂ ಓದಿ:ಕ್ರೇಜಿ ಕ್ವೀನ್‌ ರಕ್ಷಿತಾ ಸಹೋದರನ ಆರತಕ್ಷತೆ ಸಂಭ್ರಮದಲ್ಲಿ ದರ್ಶನ್

    ಡಾಕ್ಟರ್ ಅಮ್ಮ ಎಂದು ಡಾಲಿ ಹೇಳುತ್ತಾ, ಭಾವಿ ಪತ್ನಿಗೆ ಪ್ರೀತಿಯಿಂದ ಬೆರಳಿಗೆ ರಿಂಗ್ ತೊಡಿಸಿದ್ದಾರೆ. ಸಿಂಗಲ್ ಲೈಫ್ ಶುಭಂ ಹೇಳೋ ಸಮಯ ಬಂದಾಯ್ತು. ನೂರು ಬ್ಯಾಚುರಲ್ ಪಾರ್ಟಿಗಳೇ ಬರಲಿ. ನೂರು ಬ್ಯಾಚುಲರ್ ಪಾರ್ಟಿಗಳೇ ಬರಲಿ, ಸಾವಿರ ಸೋಲೋ ಟ್ರಿಪ್‌ಗಳೇ ಇರಲಿ. ನಿನ್ನಾ ಜೊತೆ ರೀಲ್ಸ್ ಮಾಡಿಕೊಂಡು ಇರುತ್ತೇನೆ. ಬನ್ನಿ ನಾವಿಬ್ಬರೂ ಹಸೆಮಣೆ ಏರುತ್ತಿರುವಾಗ ನೀವೆಲ್ಲಾ ಸಾಕ್ಷಿಯಾಗಿರಬೇಕು. ನೀವು ಅಕ್ಷತೆ ಹಾಕಬೇಕು. ಮಿಸ್ ಮಾಡದೇ ಬಂದು ಹಾರೈಸಿ ಹೋಳಿಗೆ ಊಟ ಮಾಡಿಕೊಂಡು ಹೋಗಿ. ಬ್ಯಾಚುಲರ್ ಆಗಿ ಉಳಿಯುವ ಗಂಡಿಗೆ ಬೆಲೆಯಿಲ್ಲ. ನಿಮ್ಮೆಲ್ಲರ ಹಾರೈಕೆಯೊಂದಿಗೆ ನಾನು ಬಿತ್ತಬೇಕಾಗಿರೋದು ಪ್ರೀತಿಯ ತೋಟ ಎಂದು ಡೈಲಾಗ್ ಹೊಡೆಯುತ್ತಾ ಭಾವಿ ಪತ್ನಿಗೆ ಕಿಸ್ ಮಾಡಿದ್ದಾರೆ ಡಾಲಿ.

     

    View this post on Instagram

     

    A post shared by Daali Pictures (@daalipictures)

    ಇನ್ನೂ ಇದೇ ಫೆ.15 ಹಾಗೂ ಫೆ.16ರಂದು ಡಾಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ವಸ್ತುಪ್ರದರ್ಶನ ಮೈದಾನ, ಅಂಬಾವಿಲಾಸ ಅರಮನೆ ಮುಂಭಾಗ ಮೈಸೂರಿನಲ್ಲಿ ಮದುವೆ ಜರುಗಲಿದೆ. ಈ ಸಂಭ್ರಮದಲ್ಲಿ ಸಿನಿಮಾ ರಂಗದ ಸ್ಟಾರ್ಸ್ ಹಾಗೂ ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.

  • ಅದ್ಧೂರಿಯಾಗಿ ಮದುವೆಯಾದ ‘ಸನಮ್ ತೇರಿ ಕಸಂ’ ಚಿತ್ರದ ನಟಿ ಮೌರಾ

    ಅದ್ಧೂರಿಯಾಗಿ ಮದುವೆಯಾದ ‘ಸನಮ್ ತೇರಿ ಕಸಂ’ ಚಿತ್ರದ ನಟಿ ಮೌರಾ

    ‘ಸನಮ್ ತೇರಿ ಕಸಮ್’ (Sanam Teri Kasam) ಸಿನಿಮಾ ಮೂಲಕ ಬಾಲಿವುಡ್‌ಗೆ (Bollywood) ಎಂಟ್ರಿ ಕೊಟ್ಟಿದ್ದ ಪಾಕ್ ನಟಿ ಮೌರಾ ಹೊಕಾನೆ (Mawra Hocane) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಡೇಟಿಂಗ್ ಸುದ್ದಿ ನಡುವೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸಮಂತಾ ಶಾಕಿಂಗ್ ಕಾಮೆಂಟ್

     

    View this post on Instagram

     

    A post shared by MAWRA (@mawrellous)

    ಫ್ಯಾನ್ಸ್‌ಗೆ ಮದುವೆ ಸುದ್ದಿ ತಿಳಿಸುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಫೆ.5ರಂದು ಪಾಕಿಸ್ತಾನದ ಲಾಹೋರ್ ಪೋರ್ಟ್‌ನಲ್ಲಿ ಪಾಕಿಸ್ತಾನಿ ನಟ ಅಮೀರ್ ಗಿಲಾನಿ ಅವರೊಂದಿಗೆ ಮದುವೆಯಾಗಿದ್ದಾರೆ. ಗುರುಹಿರಿಯರ ಹಾಗೂ ಆಪ್ತರ ಸಮ್ಮುಖದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆ (Wedding) ಜರುಗಿದೆ.

     

    View this post on Instagram

     

    A post shared by MAWRA (@mawrellous)

    ಇನ್ನೂ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಶೇರ್ ಮಾಡಿ ಗೊಂದಲದ ಮಧ್ಯದಲ್ಲಿ ನಾನು ನಿನ್ನನ್ನು ಕಂಡುಕೊಂಡೆ ಎಂದು ನಟಿ ಬರೆದುಕೊಂಡಿದ್ದಾರೆ. ಇದೀಗ ಹೊಸ ಜೋಡಿಗೆ ಫ್ಯಾನ್ಸ್ ಶುಭಕೋರಿದ್ದಾರೆ.

  • ಜಯಮಾಲಾ ಮಗಳ ಹಳದಿ ಸಂಭ್ರಮ- ಸ್ಯಾಂಡಲ್‌ವುಡ್ ಸ್ಟಾರ್ಸ್ ಭಾಗಿ

    ಜಯಮಾಲಾ ಮಗಳ ಹಳದಿ ಸಂಭ್ರಮ- ಸ್ಯಾಂಡಲ್‌ವುಡ್ ಸ್ಟಾರ್ಸ್ ಭಾಗಿ

    ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಒಂದ್ ಕಡೆ ಡಾಲಿ ಹಸೆಮಣೆ ಏರೋಕೆ ರೆಡಿಯಾಗಿದ್ರೆ, ಇನ್ನೊಂದ್ ಕಡೆ ಜಯಮಾಲಾ ಪುತ್ರಿ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಸೌಂದರ್ಯ ಜಯಮಾಲಾ ಹಳದಿ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ನಟಿಯರು ಮಿಂಚಿದ್ದಾರೆ. ನಟಿಯ ಹಳದಿ ಶಾಸ್ತ್ರ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಜಯಮಾಲಾ (Jayamala) ಪುತ್ರಿ ಸೌಂದರ್ಯ (Soundarya) ಅವರ ಫೆ.5ರಂದು ಮೆಹೆಂದಿ ಹಾಗೂ ಹಳದಿ ಶಾಸ್ತ್ರ ನಗರದ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ವಧು ಸೌಂದರ್ಯ ಹಳದಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:ಡೇಟಿಂಗ್ ಸುದ್ದಿ ನಡುವೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸಮಂತಾ ಶಾಕಿಂಗ್ ಕಾಮೆಂಟ್

    ಈ ಸಂಭ್ರಮದಲ್ಲಿ ಹಿರಿಯ ನಟಿ ಶ್ರುತಿ, ಮಾಳವಿಕಾ ಅವಿನಾಶ್, ಸುಧಾರಾಣಿ, ಉಮಾಶ್ರೀ, ಪ್ರಮೀಳಾ ಜೋಷಾಯ್, ಗಿರಿಜಾ ಲೋಕೇಶ್, ಹರ್ಷಿಕಾ, ಅನು ಪ್ರಭಾಕರ್, ಪ್ರಿಯಾಂಕಾ ಉಪೇಂದ್ರ, ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ, ಸುಧಾ ನರಸಿಂಹರಾಜು ಮುಂತಾದ ಹಿರಿಯ ನಟಿಯರು ಭಾಗವಹಿಸಿದ್ದಾರೆ. ಎಲ್ಲರೂ ಹಳದಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಹಿರಿಯ ನಟಿಯರು ಜಯಮಾಲಾ ಜೊತೆ ಸಖತ್ ಆಗಿ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.

    ಇನ್ನೂ ರುಷಬ್ ಕೆ ಎನ್ನುವವರ ಜೊತೆ ಸೌಂದರ್ಯ ಹಸೆಮಣೆ (Wedding) ಏರೋಕೆ ರೆಡಿಯಾಗಿದ್ದಾರೆ. ಆದರೆ ಇವರದ್ದು ಅರೇಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಎಂಬುದು ರಿವೀಲ್ ಆಗಿಲ್ಲ. ಹುಡುಗನ ವಿವರ ಕೂಡ ರಿವೀಲ್ ಆಗಿಲ್ಲ.

     

    View this post on Instagram

     

    A post shared by Shruthi (@shruthi__krishnaa)

    ಇನ್ನೂ ಸೌಂದರ್ಯ ಜಯಮಾಲಾ ಅವರ ವಿವಾಹ (Wedding) ಫೆ.7 ಹಾಗೂ 8ರಂದು ಜರುಗಲಿದೆ. ಈ ಮದುವೆ ಸಂಭ್ರಮದಲ್ಲಿ ರಾಜಕೀಯ ಗಣ್ಯರಿಗೆ ಹಾಗೂ ಸಿನಿಮಾ ಸ್ಟಾರ್ಸ್ ಆಹ್ವಾನ ನೀಡಲಾಗಿದೆ.

    ಇನ್ನೂ ಸೌಂದರ್ಯ ಜಯಮಾಲಾ ಅವರು ಚಿತ್ರರಂಗದಲ್ಲಿದ್ದ 2 ವರ್ಷಗಳಲ್ಲಿ 4 ಸಿನಿಮಾಗಳನ್ನು ಮಾಡಿದ್ದರು. ತೆಲುಗಿನಲ್ಲಿ ಮಿಸ್ಟರ್ ಪ್ರೇಮಿಕುಡು, ದುನಿಯಾ ವಿಜಯ್ ಜೊತೆ ಸಿಂಹಾದ್ರಿ, ಉಪೇಂದ್ರ ಜೊತೆ ಗಾಢ್ ಫಾದರ್, ಶ್ರೀನಗರ ಕಿಟ್ಟಿ ಜೊತೆ ಪಾರು ವೈಫ್ ಆಫ್ ದೇವದಾಸ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಸದ್ಯ ಅವರು ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡಿದ್ದಾರೆ.

  • ಡೇಟಿಂಗ್ ಸುದ್ದಿ ನಡುವೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸಮಂತಾ ಶಾಕಿಂಗ್ ಕಾಮೆಂಟ್

    ಡೇಟಿಂಗ್ ಸುದ್ದಿ ನಡುವೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸಮಂತಾ ಶಾಕಿಂಗ್ ಕಾಮೆಂಟ್

    ತೆಲುಗಿನ ನಟಿ ಸಮಂತಾ (Samantha) ಈಗೀಗ ಸಿನಿಮಾಗಿಂತ ಹೆಚ್ಚು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನಿರ್ಮಾಪಕ ರಾಜ್ ನಿಡಿಮೋರು ಜೊತೆಗಿನ ಡೇಟಿಂಗ್ ವಿಚಾರದ ನಡುವೆ ಮಾಜಿ ಪತಿ ನಾಗಚೈತನ್ಯ (Nagachaitanya) ಮದುವೆ (Wedding) ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ:ದರ್ಶನ್‌ರನ್ನು ಮದುವೆಗೆ ಯಾಕೆ ಕರೆದಿಲ್ಲ? – ಖಡಕ್ ಪ್ರಶ್ನೆಗೆ ಡಾಲಿ ಧನಂಜಯ್ ಉತ್ತರ

    ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸಮಂತಾಗೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಮಾಜಿ ಪತಿಯ ಹೊಸ ಜೀವನದ ಬಗ್ಗೆ ನಿಮಗೆ ಅಸೂಯೆ ಇದೆಯೇ? ಎಂದು ಕೇಳಲಾಗಿದೆ. ಈ ಕುರಿತು ಮಾತನಾಡಿದ ನಟಿ, ಅಸೂಯೆಗೆ ನನ್ನ ಜೀವನದಲ್ಲಿ ಜಾಗವಿಲ್ಲ. ಅದು ನನ್ನ ಜೀವನದ ಭಾಗವಾಗುವುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಎಲ್ಲಾ ಕೆಟ್ಟ ವಿಷಯಗಳಿಗೆ ಅಸೂಯೆಯೇ ಕಾರಣ ಎಂದು ನಾನು ನಂಬುತ್ತೇನೆ.

    ಅಸೂಯೆ ಎಲ್ಲ ಕೆಟ್ಟದ್ದಕ್ಕೂ ಮೂಲ ಎಂದು ನಾನು ಭಾವಿಸುತ್ತೇನೆ. ಉಳಿದಂತೆ ಎಲ್ಲವೂ ಉತ್ತಮವಾಗಿದೆ. ಆದರೆ, ಅಸೂಯೆಗಿಂತ ಅನಾರೋಗ್ಯಕರ ವಿಚಾರಗಳಿಗೆ ಸ್ಥಳವಿಲ್ಲ ಎಂದಿದ್ದಾರೆ ಸಮಂತಾ.

    ಇನ್ನೂ ಕೆಲ ವರ್ಷಗಳ ಡೇಟಿಂಗ್ ಬಳಿಕ 2017ರಲ್ಲಿ ಸಮಂತಾ ಹಾಗೂ ನಾಗಚೈತನ್ಯ ಮದುವೆಯಾದರು. ಆದರೆ ಕೆಲ ಮನಸ್ತಾಪಗಳಿಂದ ಅವರು 2021ರಲ್ಲಿ ಡಿವೋರ್ಸ್ ಘೋಷಿಸಿದರು. ಇದೀಗ ಕಳೆದ ವರ್ಷ ಡಿ.4ರಂದು ಶೋಭಿತಾ ಜೊತೆ ನಾಗಚೈತನ್ಯ ಮದುವೆಯಾದರು.

  • ಡಾಕ್ಟರ್ ಧನ್ಯತಾರನ್ನು ಮೊದಲು ಭೇಟಿಯಾಗಿದ್ದು ಎಲ್ಲಿ?- ಲವ್ ಸ್ಟೋರಿ ಬಿಚ್ಚಿಟ್ಟ ಡಾಲಿ

    ಡಾಕ್ಟರ್ ಧನ್ಯತಾರನ್ನು ಮೊದಲು ಭೇಟಿಯಾಗಿದ್ದು ಎಲ್ಲಿ?- ಲವ್ ಸ್ಟೋರಿ ಬಿಚ್ಚಿಟ್ಟ ಡಾಲಿ

    ಸ್ಯಾಂಡಲ್‌ವುಡ್‌ನ ನಟ ರಾಕ್ಷಸ ಡಾಲಿ (Daali) ಇದೇ ಫೆ.16ರಂದು ಡಾಕ್ಟರ್ ಧನ್ಯತಾ ಜೊತೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ಕುರಿತು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಧನ್ಯತಾ (Dhanyatha) ಅವರನ್ನು ಮೊದಲು ಭೇಟಿಯಾಗಿದ್ದು ಎಲ್ಲಿ? ಇಬ್ಬರ ಪ್ರೀತಿಯ ಪಯಣ ಶುರುವಾಗಿದ್ದು ಯಾವಾಗ ಎಂಬುದನ್ನು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಆ್ಯಂಕರ್ ಜಾನ್ವಿಯೀಗ ಅಧಿಪತ್ರದ ಅಧಿನಾಯಕಿ!

    ಡಾಲಿ ಮಾತನಾಡಿ, ಮೊದಲಿಗೆ ಅಭಿಮಾನಿಯಾಗಿ ಧನ್ಯತಾ ಭೇಟಿ ಮಾಡಿದ್ದರು. ಆಗ ಅವರು ಇನ್ನೂ ಓದುತ್ತಿದ್ದರು. ಜಯನಗರ 4ನೇ ಬ್ಲಾಕ್‌ನಲ್ಲಿ ಮೊದಲಿಗೆ ಭೇಟಿ ಆಗಿದ್ದೆವು. ಅವತ್ತು ಉತ್ತರ ಕರ್ನಾಟಕ ಹೋಟೆಲ್‌ನಲ್ಲಿ ಊಟ ಮಾಡಿಸಿ ಮಾತನಾಡಿಸಿ ಕಳುಹಿಸಿದ್ದೆ ಎಂದು ಡಾಲಿ ಒಂದು ವರ್ಷದ ಹಿಂದಿನ ವಿಚಾರವನ್ನು ಸ್ಮರಿಸಿದ್ದಾರೆ. ಆ ಭೇಟಿ ಬಳಿಕ ಆಗಾಗ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡುತ್ತಿದ್ದರು. ನನ್ನ ಸಿನಿಮಾ ಬಿಡುಗಡೆ ಆದಾಗ, ಪ್ರಶಸ್ತಿ ಬಂದಾಗ ಅಭಿನಂದನೆ ಹೇಳುತ್ತಿದ್ದರು. ನಾನು ಚೆನ್ನಾಗಿದ್ದೀನಿ ಡಾಕ್ಟರೇ ಎಂದು ಉತ್ತರಿಸಿ ಸುಮ್ಮನಾಗುತ್ತಿದ್ದೆ. ವರ್ಷದ ಹಿಂದೆ ಮತ್ತೆ ಭೇಟಿ ಮಾಡೋಣ ಅಂತ ಅನ್ನಿಸಿ ಭೇಟಿ ಮಾಡಿದ್ದೆ. ಆ ಬಳಿಕ ನಮ್ಮ ಜರ್ನಿ ಶುರುವಾಯಿತು. ಬಳಿಕ ಸ್ನೇಹಿತರಿಗೆ ಪರಿಚಯ ಮಾಡಿಸಿದೆ. ಅವರು ನಮ್ಮ ತಂದೆ ತಾಯಿಗೆ ಪರಿಚಯಿಸಿದರು ಎಂದು ಡಾಲಿ ಲವ್ ಸ್ಟೋರಿ ಬಿಚ್ಚಿಟ್ಟಿದ್ದಾರೆ. ನಮ್ಮ ತಂದೆ ಅವರ ಮನೆಯಲ್ಲಿ ಮಾತನಾಡಬೇಕು ಎಂದು ಹಿಂದೆ ಬಿದ್ದರು. ಹಾಗೆ ಮಾತನಾಡುತ್ತಾ ಮದುವೆವರೆಗೂ ಬಂದು ನಿಂತಿದೆ. ನಮ್ಮ ತಂದೆಗೆ ನಾನು ಡಾಕ್ಟರ್‌ ಆಗಬೇಕು ಎಂದು ಆಸೆಯಿತ್ತು. ಆದರೆ ಆಗಲಿಲ್ಲ. ಈಗ ಡಾಕ್ಟರೇ ಸೊಸೆಯಾಗಿ ಬರುತ್ತಿದ್ದಾರೆ. ಇನ್ನೂ ನಮ್ಮ ಅಜ್ಜಿಗೆ ಧನ್ಯತಾರನ್ನು ಭೇಟಿ ಮಾಡಿಸಿದ್ದೆ. ಅದು ಖುಷಿ ಇದೆ. ಈಗ ಅವರು ಇಲ್ಲ ಎಂದು ಡಾಲಿ ಹೇಳಿದ್ದಾರೆ.

    ಡಾಲಿ ಭಾವಿ ಪತ್ನಿ ಮಾತನಾಡಿ, ಭೇಟಿಯಾದ ಬಳಿಕ ಅವರ ಆಲೋಚನೆ ರೀತಿ ಬಹಳ ಇಷ್ಟ ಆಯಿತು. ನಮ್ಮಿಬ್ಬರದ್ದು ಒಂದೇ ರೀತಿ ಇದೆ. ಧನಂಜಯ ಅವರ ಸಿಂಪ್ಲಿಟಿಸಿ ನನಗಿಷ್ಟ ಆಯ್ತು ಎಂದಿದ್ದಾರೆ. ಧನಂಜಯ ನನಗೆ ಹತ್ತಿರವಾದಂತೆ ಅವರ ಕುಟುಂಬದವರು ನನಗೆ ಹತ್ತಿರವಾದರು. ನಾನು ಸಿನಿಮಾಗಳಿಂದ ಕೊಂಚ ದೂರ. ಕಾರಣ ನನ್ನ ವೃತ್ತಿ ಹಾಗೆಯಿದೆ. ಇಷ್ಟು ದಿನ ಅಷ್ಟೇನು ಸಿನಿಮಾಗಳು ನೋಡಿರಲಿಲ್ಲ. ಈಗ ನೋಡುತ್ತಿದ್ದೇನೆ. ಧನಂಜಯ ನಟನೆಯ `ರತ್ನನ್ ಪ್ರಪಂಚ’ ಸಿನಿಮಾ ನನಗೆ ಬಹಳ ಇಷ್ಟ. ಅವರು ಪಾಸಿಟಿವ್, ನೆಗೆಟಿವ್ ಎರಡೂ ಪಾತ್ರಗಳನ್ನು ಚೆನ್ನಾಗಿ ಮಾಡ್ತಾರೆ. ನೆಗೆಟಿವ್ ಪಾತ್ರದಲ್ಲಿರುವ ಕ್ರೂರತೆಯನ್ನು ಒಬ್ಬ ನಟನಾಗಿ ಚೆನ್ನಾಗಿ ನಟಿಸಿ ತೋರಿಸುತ್ತಾರೆ ಎಂದು ಭಾವಿ ಪತಿಯ ನಟನೆಯನ್ನು ಹಾಡಿ ಹೊಗಳಿದ್ದಾರೆ.

    ಸರಳವಾಗಿ ಮದುವೆ ಆಗೋಣ ಎಂದುಕೊಂಡಿದ್ದೆ. ಆದರೆ ಆಮೇಲೆ ಸಾಕಷ್ಟು ಪ್ರಶ್ನೆಗಳು ಬರುತ್ತವೆ. ಮದುವೆ ಅಂದರೆ ಸಂಭ್ರಮ. ಹಾಗಾಗಿ ಸಂಭ್ರಮವಾಗಿರಲಿ ಎಂದು ನಿರ್ಧರಿಸಿದೆ. ಎಲ್ಲರೂ ಈಗಲೇ ಮದುವೆಗೆ ಹಾರೈಸುತ್ತಿರುವುದು ಬಹಳ ಖುಷಿಯಿದೆ ಎಂದು ಡಾಲಿ ಹೇಳಿದ್ದಾರೆ.

    ಇನ್ನೂ ಫೆ.15 ಮತ್ತು 16ರಂದು ಮೈಸೂರಿನಲ್ಲಿ ಡಾಲಿ ಹಾಗೂ ಧನ್ಯತಾ ಮದುವೆ ಜರುಗಲಿದೆ. ಯಶ್, ಶಿವಣ್ಣ, ಸುದೀಪ್, ಉಪೇಂದ್ರ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಅನೇಕರಿಗೆ ಡಾಲಿ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಫೆ.16ರಂದು ನಡೆಯಲಿರುವ ಮದುವೆಯಲ್ಲಿ ರಾಜಕೀಯ ಗಣ್ಯರು ಹಾಗೂ ಸಿನಿಮಾ ರಂಗದವರು ಭಾಗಿಯಾಗಲಿದ್ದಾರೆ.

  • ‘ಟಾಕ್ಸಿಕ್’ ಸೆಟ್‌ಗೆ ತೆರಳಿ ಯಶ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ‘ಟಾಕ್ಸಿಕ್’ ಸೆಟ್‌ಗೆ ತೆರಳಿ ಯಶ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸೆಟ್‌ಗೆ ತೆರಳಿ ಯಶ್‌ಗೆ (Yash) ಡಾಲಿ ಮದುವೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ರಾಕಿ ಭಾಯ್‌ಗೆ ಭೇಟಿಯಾಗಿ ಮದುವೆ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ‘ಮಹಾನಟಿ’ ವಿನ್ನರ್ ಎಂಟ್ರಿ- ‘ಕಾಟೇರ’ ಡೈರೆಕ್ಟರ್‌ ತರುಣ್‌ ಸಿನಿಮಾದಲ್ಲಿ ಪ್ರಿಯಾಂಕಾ

    ನ್ಯಾಷನಲ್ ಸ್ಟಾರ್ ಯಶ್ ಅವರು ಈಗ ಬೆಂಗಳೂರಿನ HMT ಫ್ಯಾಕ್ಟರಿ ಆವರಣದಲ್ಲಿ ‘ಟಾಕ್ಸಿಕ್’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಆ ಸಿನಿಮಾದ ಚಿತ್ರೀಕರಣದ ಸೆಟ್‌ಗೆ ನಟ ಡಾಲಿ ಧನಂಜಯ ಅವರು ಭೇಟಿ ನೀಡಿದ್ದಾರೆ. ತಮ್ಮ ವಿವಾಹದ ಆಹ್ವಾನ ಪತ್ರಿಕೆಯನ್ನು ಯಶ್‌ಗೆ ನೀಡಿದ್ದಾರೆ. ಆ ಸಂದರ್ಭದ ಫೋಟೋಸ್ ಇಲ್ಲಿವೆ. ಮದುವೆ ಸಲುವಾಗಿ ಧನಂಜಯ್ (Daali Dhananjay) ಅವರು ಸಿನಿಮಾ ಕೆಲಸಗಳಿಂದ ಸದ್ಯಕ್ಕೆ ಬ್ರೇಕ್ ಪಡೆದಿದ್ದಾರೆ.

    ಮೈಸೂರಿನಲ್ಲಿ ಫೆಬ್ರವರಿ 15 ಮತ್ತು 16ರಂದು ಡಾಲಿ ಮದುವೆ ನೆರವೇರಲಿದೆ. ಡಾಲಿ ಮದುವೆ ಸಂಭ್ರಮದಲ್ಲಿ ರಾಜಕೀಯ ಗಣ್ಯರು ಸಿನಿಮಾ ಸ್ಟಾರ್ಸ್ ಭಾಗಿಯಾಗಲಿದ್ದಾರೆ.

    ಇನ್ನೂ ಡಾಲಿ ಅವರು ಡಾಕ್ಟರ್ ಧನ್ಯತಾ ಅವರನ್ನು ಮದುವೆಯಾಗುತ್ತಿದ್ದಾರೆ. ಇಬ್ಬರ ಮದುವೆಗೆ ಗುರುಹಿರಿಯರ ಸಮ್ಮತಿಯಿದೆ.

  • ಫೆ.7ರಂದು ಅದ್ಧೂರಿಯಾಗಿ ನಡೆಯಲಿದೆ ಕ್ರೇಜಿ ಕ್ವೀನ್ ರಕ್ಷಿತಾ ಸಹೋದರನ ಮದುವೆ

    ಫೆ.7ರಂದು ಅದ್ಧೂರಿಯಾಗಿ ನಡೆಯಲಿದೆ ಕ್ರೇಜಿ ಕ್ವೀನ್ ರಕ್ಷಿತಾ ಸಹೋದರನ ಮದುವೆ

    ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ (Rakshitha Prem) ಸಹೋದರ ರಾಣಾ (Raannna) ಅವರು ದಾಂಪತ್ಯ ಜೀವನದಲ್ಲಿ ಕಾಲಿಡಲು ಸಜ್ಜಾಗಿದ್ದಾರೆ. ಫೆ.7ರಂದು ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಭಾಗಿಯಾದ ‘ಕೆಜಿಎಫ್ 2’ ಕ್ವೀನ್‌

    ಇದೇ ಫೆ.7 ಮತ್ತು 8ರಂದು ಬೆಂಗಳೂರಿನ ‘ಮುಕ್ತ ಚಾಮರ ವಜ್ರ’ ಪ್ಯಾಲೇಸ್ ಗ್ರೌಂಡ್‌ನಲ್ಲಿ ರಾಣಾ ಮದುವೆ ಜರುಗಲಿದೆ. ವಿಶೇಷ ಅಂದರೆ, ರಾಣಾ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಕೂಡ ರಕ್ಷಿತಾ. ರಾಣಾ ಹಾಗೂ ರಕ್ಷಿತಾ (Rakshitha) ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್.

    ಕಾಮನ್ ಫ್ರೆಂಡ್ ಮೂಲಕ ರಕ್ಷಿತಾ ಅವರು ರಾಣಾಗೆ ಪರಿಚಯ ಆದರು. ಒಂದೊಳ್ಳೆಯ ಫ್ರೆಂಡ್‌ಶಿಪ್ ಇಬ್ಬರ ನಡುವೆ ಇತ್ತು. ರಕ್ಷಿತಾರನ್ನು ಮೆಚ್ಚಿ ರಾಣಾ ಅವರೇ ಪ್ರೇಮ ನಿವೇದನೆ ಮಾಡಿದ್ದರು. ಇಬ್ಬರ ಪ್ರೀತಿಗೆ ಕುಟುಂಬಸ್ಥರ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಇದೀಗ 7 ವರ್ಷಗಳ ಬಂಧಕ್ಕೆ ಮದುವೆಯ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದ್ದಾರೆ.

    ಅಕ್ಕ ರಕ್ಷಿತಾರಂತೆ ತಾವು ಕೂಡ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಬೇಕು ಎಂದು ರಾಣಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ‘ಏಕ್ ಲವ್ ಯಾ’ ಚಿತ್ರ ಮಾಡಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. 2022ರಲ್ಲಿ ತೆರೆಕಂಡ ಈ ಸಿನಿಮಾಗೆ ಭಾವ ಪ್ರೇಮ್ ಅವರೇ ನಿರ್ದೇಶನ ಮಾಡಿದ್ದರು.

  • ಬೆಂಗಳೂರಿನ ಬೆಡಗಿ ಜೊತೆ ಆಮೀರ್ ಖಾನ್ 3ನೇ ಮದುವೆ?

    ಬೆಂಗಳೂರಿನ ಬೆಡಗಿ ಜೊತೆ ಆಮೀರ್ ಖಾನ್ 3ನೇ ಮದುವೆ?

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರು ಸಿನಿಮಾಗಿಂತ ವೈಯಕ್ತಿಕ ವಿಚಾರವಾಗಿಯೇ ಭಾರೀ ಸುದ್ದಿಯಾಗ್ತಿದ್ದಾರೆ. ಎರಡು ಬಾರಿ ಮದುವೆಯಾಗಿ ಡಿವೋರ್ಸ್ ಪಡೆದಿರುವ ಆಮೀರ್ ಈಗ 3ನೇ ಮದುವೆಗೆ ಸಿದ್ಧರಾಗಿದ್ದಾರೆ. ಬೆಂಗಳೂರಿನ (Bengaluru) ಬ್ಯೂಟಿ ಜೊತೆ ಆಮೀರ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಆಮೀರ್ ಖಾನ್ ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರವೊಂದು ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಆ ಯುವತಿಯನ್ನು ನಟ ತಮ್ಮ ಕುಟುಂಬಸ್ಥರಿಗೆ ಪರಿಚಯಿಸಿದ್ದಾರಂತೆ. ಇಬ್ಬರೂ ಸೀರಿಯಸ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದನ್ನೂ ಓದಿ:ಫೆ.16ರಂದು ಹಸೆಮಣೆ ಏರಲು ಸಜ್ಜಾದ ‘ಪಾರು’ ನಟಿ ಮಾನಸಿ ಜೋಶಿ

    59ನೇ ವಯಸ್ಸಿಗೆ ಆಮೀರ್ ಮದುವೆಗೆ ಸಿದ್ಧರಾಗಿದ್ದಾರೆ ಎನ್ನಲಾದ ಸುದ್ದಿ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದೆ. ಈ ವಿಚಾರ ನಿಜನಾ? ನಟನ ಕಡೆಯಿಂದ ಅಧಿಕೃತ ಅಪ್‌ಡೇಟ್ ಹೊರಬೀಳುತ್ತಾ? ಎಂದು ಕಾಯಬೇಕಿದೆ.

    ಈ ಹಿಂದೆ ರೀನಾ ದತ್‌ ಹಾಗೂ ಕಿರಣ್‌ ರಾವ್‌ ಎಂಬುವವರನ್ನು ಮದುವೆಯಾಗಿದ್ದರು. ಇಬ್ಬರೂ ನಟ ಡಿವೋರ್ಸ್‌ ನೀಡಿದ್ದಾರೆ. ಆದರೆ ಮಾಜಿ ಪತ್ನಿಯರ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ ಆಮೀರ್‌ ಖಾನ್‌.