Tag: wedding

  • ವಿವಾಹ ಸಂಭ್ರಮದಲ್ಲಿ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಖ್ಯಾತಿಯ ರಘು ರಾಮಪ್ಪ

    ವಿವಾಹ ಸಂಭ್ರಮದಲ್ಲಿ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಖ್ಯಾತಿಯ ರಘು ರಾಮಪ್ಪ

    ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ (Pyate Mandhi Kadig Bandru) ರಿಯಾಲಿಟಿ ಶೋ ಮೂಲಕ ಪರಿಚಿತರಾದ ರಘು ರಾಮಪ್ಪ (Raghu Ramappa) ಅವರು ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.

    ಕಿರುತೆರೆಯ ಪ್ಯಾಟೆ ಮಂದಿ ಕಾಡಿಗ್ ಬಂದ್ರು, ಲೈಫು ಸೂಪರ್ ಗುರು ರಿಯಾಲಿಟಿ ಶೋನಿಂದ ಕರ್ನಾಟಕ ಜನತೆಗೆ ಪರಿಚಿತರಾದ ರಘು ರಾಮಪ್ಪ ಅವರು ಫಿಟ್‌ನೆಸ್ ಪ್ರಿಯರಾಗಿದ್ದಾರೆ. ಕೆಲವು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ:ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್‌ ವಿರುದ್ಧ ಪ್ರಕರಣ ದಾಖಲು

     

    View this post on Instagram

     

    A post shared by Raghu Ramappa (@raghu_ramappa)

    ಬಹುಕಾಲದ ಗೆಳತಿ ಅಶ್ವಿನಿ (Ashwini) ಜೊತೆ ಮೇ 12ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಆಪ್ತರು ಸಮ್ಮುಖದಲ್ಲಿ ರಘು ರಾಮಪ್ಪ (Raghu Ramappa) ಮದುವೆಯಾಗಿದ್ದಾರೆ. ರಘು ಮದುವೆ ಸಂಭ್ರಮದಲ್ಲಿ ‘ಗಾಳಿಪಟ’ (Galipata) ನಟಿ ನೀತು, ನಟ ಜಗ್ಗೇಶ್ (Jaggesh) ದಂಪತಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

  • ‘ಗುಳ್ಟು’ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಮದುವೆ ಡೇಟ್ ಫಿಕ್ಸ್

    ‘ಗುಳ್ಟು’ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಮದುವೆ ಡೇಟ್ ಫಿಕ್ಸ್

    ಸ್ಯಾಂಡಲ್‌ವುಡ್‌ನಲ್ಲಿ ‘ಗುಳ್ಟು’ (Gultoo) ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಜನಾರ್ದನ್ ಚಿಕ್ಕಣ್ಣ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಬಹುಕಾಲದ ಗೆಳತಿ ಸ್ನೇಹಾ(Sneha) ಜೊತೆ ನಿರ್ದೇಶಕ ಜನಾರ್ದನ್  ಚಿಕ್ಕಣ್ಣ (Janrdhan Chikkanna) ಅವರು ಹಸೆಮಣೆ(Wedding) ಏರಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್ ವಿರುದ್ಧ ಗರಂ ಆದ ನಟಿ ಪೂನಂ ಕೌರ್

    ಜನಾರ್ದನ್  ಚಿಕ್ಕಣ್ಣ ಅವರ ಪರಿಕಲ್ಪನೆಯಲ್ಲಿ ‘ಗುಳ್ಟು’ ಸಿನಿಮಾ ಮೂಡಿ ಬಂದಿತ್ತು. ನವೀನ್ ಶಂಕರ್ (Naveen Shankar), ಸೋನು ಗೌಡ (Sonu Gowda) ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರವನ್ನ ನಿರ್ಮಾಣ ಮಾಡಿದ್ದರು. ರಿಷಿ ಮತ್ತು ಧನ್ಯಾ ನಟನೆ ಪ್ರೇಕ್ಷಕರ ಗಮನ ಸೆಳೆದಿತ್ತು.

    ನಿರ್ಮಾಪಕ, ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಜನಾರ್ದನ್ ಚಿಕ್ಕಣ್ಣ ಅವರು ಬಹುಕಾಲದ ಗೆಳತಿ ಸ್ನೇಹಾ ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಇದೀಗ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಜೂನ್ 1ರಂದು ಮೈಸೂರಿನಲ್ಲಿ(Mysuru) ಸರಳವಾಗಿ ಮದುವೆಯಾಗುತ್ತಿದ್ದಾರೆ. ಕುಟುಂಬಸ್ಥರು, ಸಿನಿಮಾ ರಂಗದ ಆಪ್ತರಿಗಷ್ಟೇ ಆಹ್ವಾನ ನೀಡಿದ್ದಾರೆ.

    ಜನಾರ್ದನ್  ಚಿಕ್ಕಣ್ಣ ಅವರ ಮದುವೆ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಗುಳ್ಟು’ ನಿರ್ದೇಶಕನ ಹೊಸ ಪಯಣಕ್ಕೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು

    ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು

    ರಾಯ್ಪುರ: ಮದುವೆಯೊಂದರಲ್ಲಿ (Wedding) ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ಛತ್ತೀಸ್‍ಗಢದ (Chhattisgarh) ರಾಜ್‍ನಂದಗಾಂವ್ ಜಿಲ್ಲೆಯ ಡೊಂಗರ್‌ಗಢದಲ್ಲಿ ನಡೆದಿದೆ.

    ಛತ್ತೀಸ್‍ಗಢದ ಬಲೋದ್ ಜಿಲ್ಲೆಯ ನಿವಾಸಿ ದಿಲೀಪ್ ರೌಜ್ಕರ್ ಮೃತ ವ್ಯಕ್ತಿ. ಈತ ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಯಾಗಿದ್ದ. ದಿಲೀಪ್ ತನ್ನ ಸಂಬಂಧಿಯ ಮದುವೆಯಲ್ಲಿ ನೃತ್ಯ ಮಾಡುತ್ತಿದ್ದ. ಈ ವೇಳೆ ಆತನಿಗೆ ಹೃದಯಾಘಾತವಾಗಿದೆ. ಘಟನೆಯ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ಲಿ ಪರಿಚಯ – ಮಹಿಳೆಯ ಚಿನ್ನಾಭರಣದೊಂದಿಗೆ ಯುವಕ ಪರಾರಿ

    ವೀಡಿಯೋದಲ್ಲಿ ಏನಿದೆ?:
    ದಿಲೀಪ್ ಮೊದಲು ವೇದಿಕೆಯೊಂದರಲ್ಲಿ ಇತರರೊಂದಿಗೆ ಉತ್ಸಾಹಭರಿತವಾಗಿ ನರ್ತಿಸುತ್ತಿರುತ್ತಾನೆ. ಆದರೆ ಇದ್ದಕ್ಕಿದ್ದಂತೆ ದಿಲೀಪ್ ನೃತ್ಯ (Dance) ನಿಲ್ಲಿಸಿ ವೇದಿಕೆಯ ಮೇಲೆ ಕುಳಿತುಕೊಳ್ಳುತ್ತಾನೆ. ಅದಾದ ಕೆಲವೇ ಕ್ಷಣಗಳಲ್ಲಿ ಆತ ಕುಸಿದು ಬಿಳುತ್ತಾನೆ.

    ದಿಲೀಪ್‍ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿತ್ತಾರೆ. ಆದರೆ ಆತನನ್ನು ಆಸ್ಪತ್ರೆಗೆ ಕರೆತರುವ ಮೊದಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಇದನ್ನೂ ಓದಿ: ಸಿಂಗಾಪುರ್‌ಗೆ ತೆರಳಿದ ಮಾಜಿ ಸಿಎಂ ಕುಮಾರಸ್ವಾಮಿ

  • ತಾಳಿ ಕಟ್ಟಿ ನೇರವಾಗಿ ಮದುವೆ ಡ್ರೆಸ್‌ನಲ್ಲೇ ಮತಗಟ್ಟೆಗೆ ಬಂದು ಮತದಾನ ಮಾಡಿದ ವರ

    ತಾಳಿ ಕಟ್ಟಿ ನೇರವಾಗಿ ಮದುವೆ ಡ್ರೆಸ್‌ನಲ್ಲೇ ಮತಗಟ್ಟೆಗೆ ಬಂದು ಮತದಾನ ಮಾಡಿದ ವರ

    ಬೀದರ್ : ಮತದಾನ ಮಾಡಲು ಜನರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಆರೋಪದ ಮಧ್ಯೆ ತಾಳಿ ಕಟ್ಟಿ ನೇರವಾಗಿ ಮದುವೆ ಡ್ರೆಸ್‌ನಲ್ಲೇ ವರ ಮತದಾನ ಕೇಂದ್ರಕ್ಕೆ ಬಂದು ತನ್ನ ಮತದಾನದ (Vote) ಹಕ್ಕು ಚಲಾಯಿಸಿದ್ದಾರೆ.

    ವರ ಕಾರ್ತಿಕ್‌ ಪಾಟೇಲ್‌ ಮತದಾನ ಮಾಡಿದ ವ್ಯಕ್ತಿ. ಬೀದರ್‌ನ (Bidar) ಓಲ್ಡ್ ನಾವದಗಿಯಲ್ಲಿರುವ ತಮ್ಮ ಮನೆಯಲ್ಲೇ ಮದುವೆಯಿತ್ತು. ಈ ವೇಳೆ ಕಾರ್ತಿಕ್‌ ವಧುವಿಗೆ ತಾಳಿ ಕಟ್ಟಿ ಬಳಿಕ ಕುಟುಂಬ ಸಮೇತರಾಗಿ ನೇರವಾಗಿ ಮತಗಟ್ಟೆಗೆ ಬಂದಿದ್ದಾರೆ. ನಂತರ ಮತದಾನ ಮಾಡಿದರು. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

    ಈ ವೇಳೆ ಮಾತನಾಡಿದ ಕಾರ್ತಿಕ್‌ ಪಾಟೀಲ್‌ ಅವರು, ಇದು ಪ್ರಜಾಪ್ರಭುತ್ವದ ಹಬ್ಬ. ಹೀಗಾಗಿ ಎಲ್ಲರೂ ತಪ್ಪದೆ ಮತದಾನ ಮಾಡಬೇಕು. ನಾನು ಕೂಡಾ ತಾಳಿ ಕಟ್ಟಿ ನೇರವಾಗಿ ಮತಗಟ್ಟೆ ಬಂದು ಮತದಾನ ಮಾಡಿದ್ದು ನಾವು ಅಭಿವೃದ್ಧಿಗಾಗಿ ಮತದಾನ ಮಾಡೋಣ ಎಂದು ವರ ಸಮಾಜಕ್ಕೆ ಮತದಾನ ಮಹತ್ವದ‌ ಸಂದೇಶ ನೀಡಿದರು. ಇದನ್ನೂ ಓದಿ: ಚುನಾವಣಾ ಕರ್ತವ್ಯದಿಂದ ಎಸ್ಕೇಪ್ ಆಗಲು ನಕಲಿ ಕೋವಿಡ್ ರಿಪೋರ್ಟ್ – ಶಿಕ್ಷಕಿ ವಿರುದ್ಧ ಎಫ್‌ಐಆರ್

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ನಟಿ ಸಹನಾ ಶೆಟ್ಟಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನನ್ನರಸಿ ರಾಧೆ’ ನಟಿ ಸಹನಾ ಶೆಟ್ಟಿ

    ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನನ್ನರಸಿ ರಾಧೆ’ (Nanarasi Radhe) ಖ್ಯಾತಿಯ ಸಹನಾ ಶೆಟ್ಟಿ (Sahana Shetty)  ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಸಹನಾ ಮದುವೆಗೆ ಟಿವಿ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ:ಮಕ್ಕಳು ಜನಿಸಿದಾಗ ಪ್ರೇಮ್ ಪರಿಸ್ಥಿತಿ ಹೇಗಿತ್ತು? ಕಷ್ಟದ ದಿನಗಳ ಬಗ್ಗೆ ನಟನ ಮಾತು

    ‘ನನ್ನರಸಿ ರಾಧೆ’ (Nanarasi Radhe) ಸೀರಿಯಲ್ ಮೂಲಕ ಅಭಿಮಾನಿಗಳಿಗೆ ಪರಿಚಿತರಾದ ನಟಿ ಸಹನಾ, ಹೀರೋ ಅಗಸ್ತ್ಯ ರಾಥೋಡ್ ಸಹೋದರಿಯಾಗಿ ನಟಿಸಿದ್ದರು. ಊರ್ವಿ ಪಾತ್ರದಲ್ಲಿ ನಟಿ ಬಣ್ಣ ಹಚ್ಚಿದ್ದರು.

    ಗುರುಹಿರಿಯರು ನಿಶ್ಚಿಯಿಸಿದ ವರ ಪ್ರತಾಪ್ ಶೆಟ್ಟಿ ಜೊತೆ ಹೊಸ ಬಾಳಿಗೆ ಸಹನಾ ಶೆಟ್ಟಿ ಕಾಲಿಟ್ಟಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಸಹನಾ- ಪ್ರತಾಪ್ ಸೋಮವಾರ (ಮೇ.8)ರಂದು ಮದುವೆಯಾಗಿದ್ದಾರೆ.

    ಸಹನಾ ಶೆಟ್ಟಿ ಮದುವೆಗೆ, ‘ಗೀತಾ’ ಸೀರಿಯಲ್ ಜೋಡಿ ಭವ್ಯಾ ಗೌಡ- ಧನುಷ್ ಗೌಡ, ನಟಿ ಅಮೂಲ್ಯ, ಬಿಗ್ ಬಾಸ್ ಜಯಶ್ರೀ ಆರಾಧ್ಯ ಸೇರಿದಂತೆ ಹಲವರು ಭಾಗವಹಿಸಿ ನವಜೋಡಿಗೆ ಶುಭಕೋರಿದ್ದಾರೆ.

  • 2ನೇ ಪತ್ನಿ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ನಟ ಪ್ರಭುದೇವ

    2ನೇ ಪತ್ನಿ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ನಟ ಪ್ರಭುದೇವ

    ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ (Prabhudeva) ಅವರು ಇದೀಗ ವೈಯಕ್ತಿಕ ಬದುಕಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮೊದಲ ಬಾರಿಗೆ 2ನೇ ಪತ್ನಿ ಜೊತೆ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಕ್ಯಾರಾವ್ಯಾನ್ ಡ್ರೈವರ್ ಇದೀಗ ಹೀರೋ : ‘ಲಕ್’ ಮೇಲೆ ಲಕ್

    ಕನ್ನಡದ ಪ್ರತಿಭೆ ಸ್ಟಾರ್ ನಟ ಪ್ರಭುದೇವ ಅವರು ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ರಂಗದಲ್ಲಿ ಅದೆಷ್ಟೇ ನೇಮು ಫೇಮು ಇದ್ದರೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲೂ ಕೂಡ ರಿವೀಲ್ ಮಾಡಿರಲಿಲ್ಲ. ಇತ್ತೀಚಿಗೆ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಪ್ರಭುದೇವ ಅವರ 2ನೇ ಮದುವೆ ಬಗ್ಗೆ ರಿವೀಲ್ ಆಗಿತ್ತು.

     

    View this post on Instagram

     

    A post shared by Prabhu Deva Fans (@prabhu_deva_fans)

    ಹಿಮಾನಿ ಸಿಂಗ್ (Himani Singh) ಎನ್ನುವ ವೈದ್ಯೆಯನ್ನು ಸೀಕ್ರೆಟ್ ಆಗಿ ಮದುವೆಯಾಗಿದ್ದರು. 2020ರಲ್ಲಿ ಇವರಿಬ್ಬರ ವಿವಾಹ ರಹಸ್ಯವಾಗಿ ನಡೆದಿತ್ತು. ಲಾಕ್‌ಡೌನ್‌ನಲ್ಲಿ ಈ ಮದುವೆ ನಡೆದ ಕಾರಣ ಈ ಮದುವೆ ರಹಸ್ಯವಾಗಿಯೇ ಉಳಿಯಿತು. ನಟ ಪ್ರಭುದೇವ ಅವರು ಪತ್ನಿ ಸಮೇತರಾಗಿ ಮೊದಲ ಬಾರಿಗೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ (Balaji Temple) ಭೇಟಿ ಕೊಟ್ಟರು. ಪ್ರಭುದೇವ ಅವರ ತಮ್ಮ ಪತ್ನಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಜನಸಂದಣಿಗೆ ಇದ್ದಂತಹ ದೇವಸ್ಥಾನದಲ್ಲಿ ಪತ್ನಿಯ ಸುರಕ್ಷತೆಗಾಗಿ ಪತ್ನಿಯ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದರು. ಈ ಜೋಡಿಯ ಫೋಟೋ ವೈರಲ್ ಆಗಿದ್ದು, ಅವರಿಬ್ಬರನ್ನೂ ಜೊತೆಯಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    ಅಂದಹಾಗೆ, ಪ್ರಭುದೇವ ಅವರು ರಮಾಲತಾ ಎಂಬುವವರನ್ನ ಮದುವೆಯಾಗಿದ್ದರು. ಈ ದಂಪತಿಗೆ 3ವರು ಮಕ್ಕಳಿದ್ದರು. ಮೊದಲ ಮಗ ವಿಶಾಲ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2010ರಲ್ಲಿ 16 ವರ್ಷಗಳ ದಾಂಪತ್ಯ ಜೀವನಕ್ಕೆ ಡಿವೋರ್ಸ್ (Divorce) ಮೂಲಕ ಅಂತ್ಯ ಹಾಡಿದ್ದರು.

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ನನ್ನರಸಿ ರಾಧೆ’ ನಟಿ

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ನನ್ನರಸಿ ರಾಧೆ’ ನಟಿ

    ‘ನನ್ನರಸಿ ರಾಧೆ’ (Nanarasi Radhe) ಖ್ಯಾತಿಯ ಸಹನಾ ಶೆಟ್ಟಿ (Sahana Shetty) ಅವರು ತಮ್ಮ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ನೀಡಿದ್ದಾರೆ. ನಟಿ ಸಹನಾ ಅವರು ಸದ್ಯ ಎಂಗೇಜ್ ಆಗಿದ್ದು, ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ.

    ಕಿರುತೆರೆಯ ಜನಪ್ರಿಯ ಧಾರಾವಾಹಿ ‘ನನ್ನರಸಿ ರಾಧೆ’ (Nanarasi Radhe) ಸೀರಿಯಲ್‌ನಲ್ಲಿ ಹೀರೋ ಅಗಸ್ತ್ಯನ (Agastya) ತಂಗಿ ಊರ್ವಿ (Urvi) ರೋಲ್‌ನಲ್ಲಿ ಸಹನಾ ಶೆಟ್ಟಿ ಕಾಣಿಸಿಕೊಂಡಿದ್ದರು. ಅಗಸ್ತ್ಯ- ಊರ್ವಿ ಕಾಂಬೋ ಎಲ್ಲರನ್ನೂ ಮೋಡಿ ಮಾಡಿತ್ತು. ಮೊದಲ ಸೀರಿಯಲ್‌ನಲ್ಲೇ ಸಹನಾ ಗಮನ ಸೆಳೆದಿದ್ದರು.

    ನಟಿ ಸಹನಾ ಶೆಟ್ಟಿ ಅವರು ಸದ್ಯದಲ್ಲೇ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಈ ವರ್ಷ ಫೆ.14 ಪ್ರೇಮಿಗಳ ದಿನದಂದು ತಾವು ಎಂಗೇಜ್ ಆಗಿರೋದಾಗಿ ನಟಿ ತಿಳಿಸಿದ್ದರು. ಎಂಗೇಜ್‌ಮೆಂಟ್ (Engagement) ವೀಡಿಯೋ ಕೂಡ ಹಂಚಿಕೊಂಡಿದ್ದರು. ಇದೀಗ ಪ್ರಿ-ವೆಡ್ಡಿಂಗ್ ಫೋಟೋಶೂಟ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    ಸಹನಾ ಮದುವೆಯಾಗುತ್ತಿರುವ ಹುಡುಗನ ಹೆಸರು ಪ್ರತಾಪ್ ಶೆಟ್ಟಿ, ಸದ್ಯದಲ್ಲೇ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಫೋಟೋಶೂಟ್ ಕಪ್ಪು ಬಣ್ಣದ ಉಡುಗೆಯಲ್ಲಿ ಸಹನಾ-ಪ್ರತಾಪ್ ಮಿಂಚಿದ್ದಾರೆ.

  • ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

    ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

    ಬಾಲಿವುಡ್‌ನಲ್ಲಿ (Bollywood) ಸದ್ಯ ಸದ್ದು ಮಾಡ್ತಿರುವ ಜೋಡಿ ಅಂದರೆ ವಿಜಯ್ ವರ್ಮಾ- ತಮನ್ನಾ ಭಾಟಿಯಾ. ಇಬ್ಬರ ಬಗ್ಗೆ ಸಾಕಷ್ಟು ಸಮಯದಿಂದ ಲವ್ವಿ ಡವ್ವಿ ಕಥೆ ಕೇಳಿ ಬರುತ್ತಿದೆ. ವಿಜಯ್- ತಮನ್ನಾ ಇಬ್ಬರೂ ಇದರ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದೀಗ ಮತ್ತೆ ಈ ಜೋಡಿ ಸುದ್ದಿಯಲ್ಲಿದ್ದಾರೆ.

    ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಸಿದ್-ಕಿಯಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ವಿಜಯ್ ವರ್ಮಾ- ತಮನ್ನಾ ಭಾಟಿಯಾ (Tamanna Bhatia) ಮದುವೆ (Wedding) ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂಬ ಗುಸು ಗುಸು ಬಿಟೌನ್‌ನಲ್ಲಿ ಶುರುವಾಗಿದೆ. ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಿದ್ದ ಈ ಜೋಡಿಯ ಡೇಟಿಂಗ್ ಜೋರಾಗಿದೆ.

     

    View this post on Instagram

     

    A post shared by Manav Manglani (@manav.manglani)

    ಇದೀಗ ವಿಜಯ್- ತಮನ್ನಾ ಡಿನ್ನರ್‌ಗೆ ಹಾಜರಾಗುವ ಮೂಲಕ ತಮ್ಮ ಡೇಟಿಂಗ್ ವದಂತಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದ್ದಾರೆ. ಇಬ್ಬರೂ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕಾರಿನಲ್ಲಿ ಬಂದ ತಮನ್ನಾ ಮತ್ತು ವಿಜಯ್ ವರ್ಮಾ (Vijay Varma)  ಇಬ್ಬರೂ ಪಾಪರಾಜಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಬಳಿಕ ಇಬ್ಬರೂ ನಗು ಬೀರುತ್ತಾ ಒಟ್ಟಿಗೆ ಕಾರಿನಲ್ಲಿ ಹೊರಟರು. ವಿಜಯ್ ವರ್ಮಾ ಕಾರು ಚಲಾಯಿಸುತ್ತಿದ್ದರೆ ತಮನ್ನಾ ಪಕ್ಕದಲ್ಲಿ ಕುಳಿತಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡ್ತಿದೆ.

  • ಹನಿಮೂನ್‌ಗೆ ವಿದೇಶಕ್ಕೆ ಹಾರಿದ ಸಿಂಹಪ್ರಿಯಾ ಜೋಡಿ

    ಹನಿಮೂನ್‌ಗೆ ವಿದೇಶಕ್ಕೆ ಹಾರಿದ ಸಿಂಹಪ್ರಿಯಾ ಜೋಡಿ

    ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ವಸಿಷ್ಠ ಸಿಂಹ- ಹರಿಪ್ರಿಯಾ (Haripriya) ಅವರು ಶೂಟಿಂಗ್‌ಗೆ ಬ್ರೇಕ್ ಹಾಕಿ ಹನಿಮೂನ್‌ಗಾಗಿ ವಿದೇಶಕ್ಕೆ ಹಾರಿದ್ದಾರೆ. ಮಾರಿಷಸ್‌ಗೆ ವಸಿಷ್ಠ, ಹರಿಪ್ರಿಯಾ ತೆರಳಿದ್ದಾರೆ.

    ಈ ವರ್ಷ ಜನವರಿ 26ಕ್ಕೆ ವಸಿಷ್ಠ ಸಿಂಹ(Vasita Simha) -ಹರಿಪ್ರಿಯಾ ಜೋಡಿ ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ ನಟಿ ವಿದಿಶಾ ಶ್ರೀವಾಸ್ತವ

     

    View this post on Instagram

     

    A post shared by Vasishta N Simha (@imsimhaa)

    ಮದುವೆಯ ಬಳಿಕ ಮಡಿಕೇರಿಗೆ ಹೋಗಿದ್ದ ಜೋಡಿ ನಂತರದ ದಿನಗಳಲ್ಲಿ ಇಬ್ಬರು ಸಿನಿಮಾಗಳಲ್ಲಿ ಬ್ಯುಸಿಯಾದರು. ಸಿನಿಮಾದ ಕೆಲಸದ ನಡುವೆಯೂ ಒಬ್ಬರಿಗೊಬ್ಬರು ಸಮಯ ನೀಡುತ್ತಿದ್ದರು. ಇದೀಗ ಮತ್ತೆ ಹನಿಮೂನ್‌ಗೆ ಸಿಂಹಪ್ರಿಯಾ ಜೋಡಿ ಈಸ್ಟ್ ಆಫ್ರಿಕಾದ ಮಾರಿಷಸ್‌ಗೆ ಹಾರಿದ್ದಾರೆ.

     

    View this post on Instagram

     

    A post shared by Hariprriya (@iamhariprriya)

    ಮಾರಿಷಸ್‌ನ ಸುಂದರ ಸ್ಥಳಗಳಿಗೆ ಭೇಟಿ ನೀಡುತ್ತಾ, ವಸಿಷ್ಠ- ಹರಿಪ್ರಿಯಾ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಈ ಕುರಿತ ಫೋಟೋ, ವೀಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  • ಅಕ್ಟೋಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ

    ಅಕ್ಟೋಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ

    ಸಿದ್ಧಾರ್ಥ್- ಕಿಯಾರಾ ಅಡ್ವಾಣಿ ಮದುವೆಯ ಬಳಿಕ ಮತ್ತೊಂದು ಜೋಡಿ ಸದ್ದಿಲ್ಲದೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಗುಟ್ಟಾಗಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav chadha) ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಮದುವೆ ಡೇಟ್‌ ಕೂಡ ಫಿಕ್ಸ್‌ ಆಗಿದೆ.

    ನಟಿ ಪರಿಣಿತಿ ಚೋಪ್ರಾ (Parineeti Chopra)ಸಿನಿಮಾಗಿಂತ ಇತ್ತೀಚಿಗೆ ರಾಜಕಾರಣಿ ರಾಘವ್ ಚಡ್ಡಾ ಜೊತೆಗಿನ ಲವ್ ರಿಲೇಷನ್‌ಶಿಪ್ ವಿಚಾರವಾಗಿಯೇ ಹೆಚ್ಚೆಚ್ಚು ಸುದ್ದಿಯಾಗ್ತಿದ್ದಾರೆ. ಇತ್ತೀಚಿಗೆ ನಟಿಯ ಎಂಗೇಜ್‌ಮೆಂಟ್ ಸುದ್ದಿ ಹಬ್ಬಿತ್ತು. ಇದೀಗ ಪರಿಣಿತಿ-ರಾಘವ್ ಇಬ್ಬರು ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ಇತ್ತೀಚಿಗೆ ಪ್ರಿಯಾಂಕಾ ಚೋಪ್ರಾ -ನಿಕ್ ಜೋನಸ್ ಭಾರತಕ್ಕೆ ಬಂದಿದ್ದರು. ಈ ವೇಳೆ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ವರ್ಷ ಅಕ್ಟೋಬರ್‌ನಲ್ಲಿ ಮದುವೆ (Wedding) ಡೇಟ್ ಕೂಡ ಫಿಕ್ಸ್ ಆಗಿದ್ದು, ಮದುವೆ ತಯಾರಿ ನಡೆಯುತ್ತಿದೆ.

    ಪಾಪರಾಜಿಗಳ ಕಣ್ಣಿಗೆ ಪರಿಣಿತಿ ಚೋಪ್ರಾ ಕಾಣಿಸಿಕೊಂಡಾಗ, ರಾಘವ್ ಚಡ್ಡಾ ಜೊತೆಗಿನ ಮದುವೆ ಬಗ್ಗೆ ಕೇಳಲಾಗುತ್ತಿದೆ. ಎಲ್ಲರ ಪ್ರಶ್ನೆಗೂ ನಗುವಿನ ಮೂಲಕ ಉತ್ತರ ನೀಡಿ ಹೋಗ್ತಿದ್ದಾರೆ. ಈಗ ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಮನೆಗೆ ಪರಿಣಿತಿ ಭೇಟಿ ನೀಡಿದ್ದಾರೆ. ಮದುವೆಗೆ ಡ್ರೆಸ್ ಆರ್ಡರ್ ನೀಡಿ ಬಂದಿದ್ದಾರೆ. ಈ ವೇಳೆ ಮತ್ತೆ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಾಗ, ರಾಘವ್ ಚಡ್ಡಾ ಬಗ್ಗೆ ಕೇಳಲಾಗಿದೆ. ಯಾವುದೇ ಪ್ರಶ್ನೆಗೂ ಉತ್ತರಿಸದೇ ನಕ್ಕು ಸುಮ್ಮನಾಗಿದ್ದಾರೆ.

    ಪರಿಣಿತಿ ಚೋಪ್ರಾ ಈ ನಡೆ ಮದುವೆ ಅಂತೆ- ಕಂತೆಗೆ ಮತ್ತಷ್ಟು ಪುಷ್ಟಿ ನೀಡಿದೆ. ಅಕ್ಟೋಬರ್‌ನಲ್ಲಿ ಪರಿಣಿತಿ-ರಾಘವ್ ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಎಂಬುದನ್ನ ಕಾದುನೋಡಬೇಕಿದೆ.