Tag: wedding

  • 60ನೇ ವಯಸ್ಸಿಗೆ 2ನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ

    60ನೇ ವಯಸ್ಸಿಗೆ 2ನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ

    ನ್ನಡ ಮಾತ್ರವಲ್ಲದೇ ಬಹುಭಾಷೆಯಲ್ಲಿ ನಟಿಸಿರುವ ಆಶಿಶ್ ವಿದ್ಯಾರ್ಥಿ (Ashish Vidyarthi) ಅವರು ತಮ್ಮ 60ನೇ ವಯಸ್ಸಿಗೆ 2ನೇ ಮದುವೆಯಾಗಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ (Roopali) ಜೊತೆ ದಾಂಪತ್ಯ (Wedding) ಜೀವನಕ್ಕೆ ನಟ ಕಾಲಿಟ್ಟಿದ್ದಾರೆ.

    ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಈ ಹಿಂದೆ ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಈಗ ಆ ದಾಂಪತ್ಯಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ಬ್ರೇಕ್ ಬಿದ್ದಿದೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

    ಉದ್ಯಮಿ ರೂಪಾಲಿ ಅವರನ್ನ ಇದೀಗ ನಟ ಆಶಿಶ್ 2ನೇ ಮದುವೆಯಾಗಿದ್ದಾರೆ. ಕೊಲ್ಕತ್ತಾದ ಕ್ಲಬ್‌ನಲ್ಲಿ ಮೇ25ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ನಟ ಆಶಿಶ್ ಮದುವೆಯಾಗಿದ್ದಾರೆ. ನಮ್ಮ ಮದುವೆ ಸಿಂಪಲ್ ಆಗಿ ನಡೆಯಬೇಕೆಂದು ಆಸೆ ಇತ್ತು ಅದೇ ರೀತಿ ಆಯಿತು. ಖುಷಿಯಿದೆ. ಸದ್ಯದಲ್ಲೇ ನಮ್ಮಿಬ್ಬರ ಭೇಟಿ ಬಗ್ಗೆ ಎಲ್ಲವನ್ನೂ ಹೇಳುವೆ ಎಂದು ಆಶಿಶ್ ಮಾತನಾಡಿದ್ದಾರೆ.

  • ಅಂಬಿ ಪುತ್ರನ ಕಲ್ಯಾಣಕ್ಕೆ ಡೇಟ್ ಫಿಕ್ಸ್

    ಅಂಬಿ ಪುತ್ರನ ಕಲ್ಯಾಣಕ್ಕೆ ಡೇಟ್ ಫಿಕ್ಸ್

    ಜ್ಯೂ.ನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ (Abhishek)- ಅವಿವಾ ಬಿದ್ದಪ್ಪ (Aviva Bidapa) ಮದುವೆ (Wedding) ದಿನಾಂಕ ಫಿಕ್ಸ್ ಆಗಿದೆ. ಈ ಮೂಲಕ ಸುಮಲತಾ ಅಂಬರೀಶ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಹಲವು ವರ್ಷಗಳ ಅಭಿಷೇಕ್- ಅವಿವಾ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.

    ಫ್ಯಾಷನ್ ಈವೆಂಟ್‌ವೊಂದರಲ್ಲಿ ಅಭಿಷೇಕ್-ಅವಿವಾ ಭೇಟಿ, 3-4 ವರ್ಷಗಳ ಡೇಟಿಂಗ್ ನಂತರ ಇತ್ತೀಚಿಗೆ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ (Prasad Bidapa) ಅವರ ಮಗಳು ಅವಿವಾ ಜೊತೆ ಹಸೆಮಣೆ ಏರಲು ಅಂಬಿ (Abhisehk) ಪುತ್ರ ಸಜ್ಜಾಗಿದ್ದಾರೆ. ಇದನ್ನೂ ಓದಿ:ಮಳೆ ಆರ್ಭಟಕ್ಕೆ ಮನೆಗೆ ನೀರು ನುಗ್ಗಿ ಜಗ್ಗೇಶ್ ಕಾರು ಮುಳುಗಡೆ

    ವಿಧಾನಸಭಾ ಚುನಾವಣೆ ಮುಗಿದಿದೆ. ಸ್ಯಾಂಡಲ್‌ವುಡ್ ಸ್ಟಾರ್ ವೆಡ್ಡಿಂಗ್‌ಗೆ ವೇದಿಕೆ ರೆಡಿಯಾಗುತ್ತಿದೆ. ನಟ ಅಭಿಷೇಕ್- ಅವಿವಾ ವಿವಾಹ ಇದೇ ಜೂನ್ 5ರಂದು ಮಾಂಗಲ್ಯಧಾರಣೆ, ಜೂನ್‌ 7ರಂದು ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಸುಮಾರು 10 ಸಾವಿರ ಅತಿಥಿಗಳು ಭಾಗಿಯಾಗುವ ಸಾಧ್ಯತೆ ಇದೆ.

    ಏಪ್ರಿಲ್ 5ರಂದು ಅಭಿಷೇಕ್ ಮತ್ತು ಸುಮಲತಾ ಅಂಬರೀಷ್ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ಪತ್ರ ನೀಡಿದ್ದರು. ಈ ವಿಷಯವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಫೋಟೋ ಸಹಿತ ಹಂಚಿಕೊಂಡಿದ್ದರು. ಈ ಮೂಲಕ ಗಣ್ಯರನ್ನು ಆಹ್ವಾನಿಸಲು ಆರಂಭಿಸಿದ್ದರು.

    ಸುಮಲತಾ ಅಂಬರೀಶ್ (Sumalatha Ambareesh) ಪುತ್ರ ಅಭಿಷೇಕ್ ಮದುವೆಗೆ ಕೇಂದ್ರದ ಪ್ರಮುಖ ರಾಜಕಾರಣಿಗಳ ಜೊತೆಗೆ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬೊಮ್ಮಾಯಿ ಇನ್ನೂ ಹಲವು ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ದಕ್ಷಿಣದ ಸ್ಟಾರ್ ಕಲಾವಿದರು ಕೂಡ ಭಾಗಿಯಾಗಲಿದ್ದಾರೆ. ಮದುವೆಗೆ ಆಭರಣ, ವಸ್ತ್ರಗಳ ಖರೀದಿ ಜೋರಾಗಿ ನಡೆದಿದ್ದು, ಸ್ವತಃ ವಸ್ತ್ರ ವಿನ್ಯಾಸಕಿ ಆಗಿರುವ ಅವಿವಾ ಬಿದ್ದಪ್ಪ (Aviva Bidapa) ಅವರೇ ತಮ್ಮ ಹಾಗೂ ಅಭಿಷೇಕ್ ತೊಡಲಿರುವ ಉಡುಗೆಯನ್ನು ಡಿಸೈನ್ ಮಾಡುತ್ತಿರುವುದು ವಿಶೇಷ.

  • ಮತ್ತೆ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ- ಹುಡುಗ ಯಾರು?

    ಮತ್ತೆ ಮದುವೆಗೆ ರೆಡಿಯಾದ್ರಾ ನಟಿ ಸಮಂತಾ- ಹುಡುಗ ಯಾರು?

    ಸೌತ್ ಬ್ಯೂಟಿ ಸಮಂತಾ (Samantha) ಅವರು ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ (Bollywood Films) ಬ್ಯುಸಿಯಾಗಿದ್ದಾರೆ. ಡಿವೋರ್ಸ್ (Divorce) ಬಳಿಕ ಭಾರೀ ಸುದ್ದಿಯಲ್ಲಿರುವ ನಟಿ ಸಮಂತಾ ಮತ್ತೆ ಮದುವೆಯಾಗುತ್ತಿದ್ದಾರೆ (Wedding) ಎಂಬ ಹರಿದಾಡುತ್ತಿದೆ. ಎರಡನೇ ಮದುವೆಗೆ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಮಂತಾ- ನಾಗಚೈತನ್ಯ (Nagachaitanya) ಜೋಡಿ ಟಾಲಿವುಡ್ ಅಂಗಳದ ಬೆಸ್ಟ್ ಕಪಲ್ ಆಗಿದ್ದರು. ಅದ್ಯಾರ ದೃಷ್ಟಿ ಬಿತ್ತೋ ಏನೋ ಹಲವು ವರ್ಷಗಳ ಪ್ರೀತಿಯ ದಾಂಪತ್ಯಕ್ಕೆ ಅಂತ್ಯ ಹಾಡಿ ದೂರ ದೂರ ಆಗಿದ್ದಾರೆ. ಡಿವೋರ್ಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ. ಒಂದ್ ಕಡೆ ನಾಗಚೈತನ್ಯ ಹೆಸರು ಶೋಭಿತಾ ಜೊತೆ ತಳಕು ಹಾಕಿಕೊಂಡರೆ, ಇನ್ನೊಂದ್ ಕಡೆ ಸಮಂತಾ ಮದುವೆ ಸುದ್ದಿ ಸೌಂಡ್ ಮಾಡುತ್ತಿದೆ. ಇದನ್ನೂ ಓದಿ:ಪ್ರೀತಿಯ ಬಂಟಿ ಕಳೆದುಕೊಂಡ ‘ಅಗ್ನಿಸಾಕ್ಷಿ’ ನಟಿ ವೈಷ್ಣವಿ

    ಹೀಗೆ ಸಮಂತಾ ಮದುವೆ ಸುದ್ದಿ ಚರ್ಚೆ ಆಗಲು ಕಾರಣ ಇತ್ತೀಚಿಗೆ ನಟಿ ಹಂಚಿಕೊಂಡಿದ್ದ ಹುಡುಗನ ಪೋಸ್ಟ್. ಸಮಂತಾ ತನ್ನ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಒಬ್ಬ ವ್ಯಕ್ತಿಯ ವಿವರಗಳನ್ನು ಹಾಕಿದ್ದು, ನಾನು ಸೂಕ್ತವಾದ ಹೊಂದಾಣಿಕೆಯನ್ನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆ ವ್ಯಕ್ತಿಯೇ ಬಾಲಿವುಡ್ ಸೆಲೆಬ್ರಿಟಿ ಡಾ.ಜ್ಯುವೆಲ್ ಗಮಾಡಿಯಾ. ತನಗೆ ಸರಿಯಾದ ಜೋಡಿ ಬೇಕು ಎಂದಿದ್ದಾರೆ.

    ಬಾಲಿವುಡ್ ನಾಯಕಿಯರಾದ ಅನುಷ್ಕಾ ಶರ್ಮಾ, ಕತ್ರಿನಾ ಕೈಫ್, ಅಜಯ್ ದೇವಗನ್ ಸೇರಿದಂತೆ ಅನೇಕ ಬಿಟೌನ್ ಸೆಲೆಬ್ರಿಟಿಗಳಿಗೆ ಡಾ. ಜ್ಯುವೆಲ್ ಗಮಾಡಿಯಾ ಫ್ಯಾಮಿಲಿ ಡಾಕ್ಟರ್ ಆಗಿದ್ದಾರೆ. ಡಾ.ಜ್ಯುವೆಲ್ ಜೊತೆ ಸಮಂತಾ ಮದುವೆಯಾಗೋದು ನಿಜಾನಾ.? ಇದಕ್ಕೆ ನಟಿಯೇ ಉತ್ತರಿಸಬೇಕಿದೆ.

  • ಗುಟ್ಟಾಗಿ ಹಸೆಮಣೆ ಏರಿದ ‘ಗಿಚ್ಚಿ ಗಿಲಿಗಿಲಿ’ ನಟ ಚಂದ್ರಪ್ರಭಾ

    ಗುಟ್ಟಾಗಿ ಹಸೆಮಣೆ ಏರಿದ ‘ಗಿಚ್ಚಿ ಗಿಲಿಗಿಲಿ’ ನಟ ಚಂದ್ರಪ್ರಭಾ

    ಕಿರುತೆರೆ ಜನಪ್ರಿಯ ಮಜಾಭಾರತ(Majabharatha), ಗಿಚ್ಚಿ ಗಿಲಿಗಿಲಿ, ಗಿಚ್ಚಿ ಗಿಲಿಗಿಲಿ 2, ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿದ್ದ ಚಂದ್ರಪ್ರಭಾ (Chandraprabha) ಅವರು ಇದೀಗ ಗುಟ್ಟಾಗಿ ಮದುವೆ (Wedding) ಆಗಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಪ್ರಸ್ತುತ ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಚಂದ್ರಪ್ರಭಾ ಆಕ್ಟೀವ್ ಆಗಿದ್ದಾರೆ. ವೀಕೆಂಡ್ ಮೂಡ್‌ನಲ್ಲಿರುವ ಪ್ರೇಕ್ಷಕರಿಗೆ ತಮ್ಮ ಹಾಸ್ಯದ ಮೂಲಕ ಮನರಂಜನೆ ನೀಡುತ್ತಾರೆ. ಶೋನಲ್ಲಿ ಮದುವೆಯಾಗಿಲ್ಲ ಹೆಣ್ಣು ಕೊಡಿ, ಹುಡುಗಿ ಬೇಕು ಎಂದು ಆಗಾಗ ಹೇಳುತ್ತಿದ್ದರು. ಇದನ್ನೇ ಟಾಪಿಕ್ ಆಗಿ ಮಾತನಾಡಿದ್ದರು. ಈಗ ಅವರು ಸೈಲೆಂಟ್ ಹಸೆಮಣೆ ಏರಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ಕಂಗನಾ ಸಿನಿಮಾ ನೋಡಿ ಕಣ್ಣೀರಿಟ್ಟ ರಾಜಮೌಳಿ ತಂದೆ

    ಕೆಲ ದಿನಗಳ ಹಿಂದೆ ಚಂದ್ರಪ್ರಭಾ ಅವರು ಭಾರತಿ ಪ್ರಿಯಾ ಎಂಬುವವರನ್ನು ಮದುವೆಯಾಗಿದ್ದಾರೆ. ಆದರೆ ಈ ಬಗ್ಗೆ ನಟ ಯಾವುದೇ ಅಪ್‌ಡೇಟ್ ನೀಡಿಲ್ಲ. ಮದುವೆಯಾಗಿರೋದನ್ನ (Wedding) ಯಾಕೆ ಮುಚ್ಚಿಟ್ರಿ? ಹೆಂಡತಿ ಸುಂದರವಾಗಿದ್ರೂ ಯಾಕೆ ಹೆಣ್ಣು ಬೇಕು ಅಂತೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಿಡಿಕಾರಿದ್ದಾರೆ.

    ಗುರುಹಿರಿಯರು-ಆಪ್ತರ ಸಮ್ಮುಖದಲ್ಲಿ ನಟ ಚಂದ್ರಪ್ರಭಾ ಮತ್ತು ಭಾರತಿ ಪ್ರಿಯಾ ಮದುವೆಯಾಗಿದ್ದಾರೆ. ಮದುವೆಯಾಗಿ ಒಂದು ವಾರ ಕಳೆದಿದೆ ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಚಂದ್ರಪ್ರಭಾ ಉತ್ತರ ನೀಡುವವರೆಗೂ ಕಾದುನೋಡಬೇಕಿದೆ.

  • ಸಹೋದರ ವರುಣ್ ತೇಜ್- ಲಾವಣ್ಯ ಮದುವೆ ಬಗ್ಗೆ ನಿಹಾರಿಕಾ ಪ್ರತಿಕ್ರಿಯೆ

    ಸಹೋದರ ವರುಣ್ ತೇಜ್- ಲಾವಣ್ಯ ಮದುವೆ ಬಗ್ಗೆ ನಿಹಾರಿಕಾ ಪ್ರತಿಕ್ರಿಯೆ

    ಮೆಗಾಸ್ಟಾರ್ ಚಿರಂಜೀವಿ ಮನೆಮಗಳು ನಿಹಾರಿಕಾ ಕೊನಿಡೆಲಾ (Niharika Konidela)  ಅವರು ತಮ್ಮ ಅಭಿಮಾನಿಗಳಿಗೆ ಮತ್ತೆ ನಟನೆಗೆ ಕಮ್‌ಬ್ಯಾಕ್ ಆಗುವ ಮೂಲಕ ಸಿಹಿಸುದ್ದಿ ನೀಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ವರುಣ್ ತೇಜ್ (Varun Tej) ಮತ್ತು ಲಾವಣ್ಯ ತ್ರಿಪಾಠಿ ಮದುವೆ ಬಗ್ಗೆ ಕೇಳಲಾಗಿದ್ದು, ಈ ಬಗ್ಗೆ ಅವರು ರಿಯಾಕ್ಟ್ ಮಾಡಿದ್ದಾರೆ.

    ನಿಹಾರಿಕಾ ಕೊನಿಡೆಲಾ ಅವರು ನಿರ್ಮಾಪಕಿ, ನಟಿಯಾಗಿ ಮತ್ತೆ ತೆಲುಗು ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ‘ಡೆಡ್ ಪಿಕ್ಸೆಲ್’ ವೆಬ್ ಸೀರಿಸ್‌ಗೆ ಬಣ್ಣ ಹಚ್ಚುವ ಮೂಲಕ ನಿಹಾರಿಕಾ ಸುದ್ದಿಯಲ್ಲಿದ್ದಾರೆ. ವೆಬ್ ಸೀರಿಸ್ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಅತೀ ಶೀಘ್ರದಲ್ಲೇ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ದಿ ಕೇರಳ ಸ್ಟೋರಿ

    ಇತ್ತೀಚಿನ ಸಂದರ್ಶನವೊಂದರಲ್ಲಿ ನಿಹಾರಿಕಾಗೆ, ಸಹೋದರ ವರುಣ್- ಲಾವಣ್ಯ (Lavanya) ಮದುವೆ ಸುದ್ದಿ ಬಗ್ಗೆ ಪ್ರಶ್ನೆ ಎದುರಾಗಿದೆ. ಆಗ ಈ ಪ್ರಶ್ನೆಯನ್ನ ನಟಿ ನಿರಾಕರಿಸಿ, ‘ಡೆಡ್ ಪಿಕ್ಸೆಲ್’ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಈ ಮೂಲಕ ನೋ ಕಾಮೆಂಟ್ಸ್ ಎಂದಿದ್ದಾರೆ.

    ಮೂಲಗಳ ಪ್ರಕಾರ, ವರುಣ್- ಲಾವಣ್ಯ ಇದೇ ಜೂನ್‌ಗೆ ಎಂಗೇಜ್‌ಮೆಂಟ್ ಮಾಡಿಕೊಳ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಮದುವೆ ಎಂಬ ಸುದ್ದಿ ಇದೆ. ಮೆಗಾ ಫ್ಯಾಮಿಲಿಗೆ ಲಾವಣ್ಯ ಆತ್ಮೀಯರಾಗಿದ್ದಾರೆ.  2 ವರ್ಷಗಳ ಹಿಂದೆ ಲಾವಣ್ಯ ನಿಹಾರಿಕಾ- ಚೈತನ್ಯ ಮದುವೆಗೆ ಬಂದಿದ್ದರು. ವರುಣ್ ತೇಜ್ ಕುಟುಂಬದಲ್ಲಿ ತಾವು ಒಬ್ಬರಾಗಿ ಭಾಗಿಯಾಗಿದ್ದರು. ಹಾಗಾಗಿ ವರುಣ್‌ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇದೀಗ ನಿಹಾರಿಕಾ ದಾಂಪತ್ಯಕ್ಕೆ ಡಿವೋರ್ಸ್ ಮೂಲಕ ಬ್ರೇಕ್ ಬಿದ್ದಿದೆ ಎಂದು ಹೇಳಲಾಗುತ್ತಿದೆ.

  • ವಿವಾಹ ಸಮಾರಂಭದಲ್ಲಿ ವಧು-ವರರ ನಡುವೆ ವಿವಾದ- ವಿಷ ಕುಡಿದು ವರ ಸಾವು, ವಧು ಗಂಭೀರ

    ವಿವಾಹ ಸಮಾರಂಭದಲ್ಲಿ ವಧು-ವರರ ನಡುವೆ ವಿವಾದ- ವಿಷ ಕುಡಿದು ವರ ಸಾವು, ವಧು ಗಂಭೀರ

    ಭೋಪಾಲ್: ವಿವಾಹ (Wedding) ಸಮಾರಂಭದಲ್ಲಿ ವಧು (Bride) ಮತ್ತು ವರನ (Groom) ನಡುವೆ ವಿವಾದ ಏರ್ಪಟ್ಟು ಇಬ್ಬರೂ ವಿಷ (Poison) ಕುಡಿದಿದ್ದು, ವರ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್ (Indore) ನಗರದಲ್ಲಿ ನಡೆದಿದೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಎಸ್‌ಐ (SI) ರಂಜಾನ್ ಖಾನ್, ಕನಾಡಿ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆ ಸಮಾರಂಭದ ವೇಳೆ ವಧು-ವರನ ನಡುವೆ ಜಗಳ ನಡೆದಿದ್ದು, ವರ ವಿಷ ಕುಡಿದು ಈ ವಿಷಯವನ್ನು ವಧುವಿಗೆ ತಿಳಿಸಿದ್ದಾನೆ. ವಿಷಯ ತಿಳಿದ ಕೂಡಲೇ ವಧು ಸಹ ವಿಷ ಕುಡಿದಿದ್ದಾಳೆ ಎಂದರು. ಇದನ್ನೂ ಓದಿ: ಪ್ರೇಯಸಿ ಮೇಲೆ ಅತ್ಯಾಚಾರ, ಖಾಸಗಿ ಅಂಗಕ್ಕೆ ಕಾರದಪುಡಿ ಹಾಕಿ ವಿಕೃತಿ – ಆರೋಪಿ ಅರೆಸ್ಟ್

    ವಿಷ ಕುಡಿದ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಯಿತಾದರೂ, ವರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ. ವಧು ಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಎಸ್‌ಎಸ್ ಮುಖಂಡನ ಹತ್ಯೆ ಪ್ರಕರಣ – ಪಿಎಫ್‍ಐ ಸದಸ್ಯ ಅರೆಸ್ಟ್

    ವರನ ಕುಟುಂಬಸ್ಥರು ಹೇಳಿದ ಪ್ರಕಾರ, ವಧು ವರನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ತನ್ನ ಜೀವನ ವೃತ್ತಿಯಿಂದಾಗಿ ವರ ಎರಡು ವರ್ಷಗಳ ಕಾಲಾವಕಾಶವನ್ನು ಕೇಳಿದ್ದ. ಆದರೆ ವಧು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದಿದ್ದಾರೆ. ಇದನ್ನೂ ಓದಿ: ಮಾಡೆಲ್ ಹೇರ್‌ಸ್ಟೈಲ್‌ ಹಾಳು ಮಾಡಿದ್ದಕ್ಕೆ 2 ಕೋಟಿ ಪರಿಹಾರ – ಆದೇಶಕ್ಕೆ ಸುಪ್ರೀಂ ತಡೆ

    ಈ ಘಟನೆಯ ಕುರಿತು ತನಿಖೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕ – ಬೆಂಗ್ಳೂರಲ್ಲಿ ಇಳಿಯುತ್ತಿದ್ದಂತೆ ಪೊಲೀಸರಿಗೆ ಲಾಕ್‌

  • ಬಾಯ್‌ಫ್ರೆಂಡ್ ಪರಿಚಯಿಸಿದ ಕೀರ್ತಿ ಸುರೇಶ್- ಹುಡುಗ ಯಾರು?

    ಬಾಯ್‌ಫ್ರೆಂಡ್ ಪರಿಚಯಿಸಿದ ಕೀರ್ತಿ ಸುರೇಶ್- ಹುಡುಗ ಯಾರು?

    ನಟಿ ಕೀರ್ತಿ ಸುರೇಶ್ (Keerthy Suresh) ಮಹಾನಟಿಯಾಗಿ ಸಕ್ಸಸ್ ಕಂಡಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ಗಟ್ಟಿ ನಾಯಕಿಯಾಗಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರು ಆಗಾಗ ಮದುವೆ (Wedding) ವಿಷ್ಯವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ಮದುವೆ ವಿಚಾರದಲ್ಲಿ ಚಾಲ್ತಿಯಲ್ಲಿದೆ.

    ದಳಪತಿ ವಿಜಯ್ (Thalapathy Vijay) ಜೊತೆ ಕೀರ್ತಿ ಸುರೇಶ್ ಮದುವೆ ಎಂದು ಹೇಳಲಾಗಿತ್ತು. ಈ ಎಲ್ಲಾ ಊಹಾಪೋಹಗಳಿಗೂ ಕೀರ್ತಿ ತಾಯಿ ಬ್ರೇಕ್ ಹಾಕಿದ್ದರು. ಈಗ ಉದ್ಯಮಿಯೊಬ್ಬರ ಜೊತೆ ಕೀರ್ತಿ ಸುರೇಶ್ ಇರುವ ಫೋಟೋ ಎಲ್ಲೆಡೆ ಸದ್ದು ಮಾಡ್ತಿದೆ. ಬಾಯ್‌ಫ್ರೆಂಡ್‌ನ ಪರಿಚಯಿಸಿದ್ರಾ? ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ.

    ಕೀರ್ತಿ ಸುರೇಶ್ ಪ್ರೀತಿಲಿ ಬಿದ್ದಿದ್ದಾರೆ ಅನ್ನುವ ಸುದ್ದಿ ಇದೀಗ ವೈರಲ್ ಆಗ್ತಿದೆ. ಇತ್ತೀಚೆಗೆ ಆಕೆ ಹಂಚಿಕೊಂಡಿದ್ದ ಫೋಟೊವೊಂದು ಇಂತಹದ್ದೊಂದು ಚರ್ಚೆ ಹುಟ್ಟಾಕಿದೆ. ಒಬ್ಬರ ಜೊತೆ ಕೀರ್ತಿ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಆತನ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಆತನೊಟ್ಟಿಗೆ ಇರುವ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಟಿ ಶುಭಾಶಯ ಕೋರಿದ್ದಾರೆ. ಫೋಟೊ ವೈರಲ್ ಆಗ್ತಿದ್ದಂತೆ ಕೀರ್ತಿ ಜೊತೆಗಿರುವ ಆ ವ್ಯಕ್ತಿ ಯಾರು ಎಂದು ಕೆಲವರು ಹುಡುಕಾಟ ಶುರು ಮಾಡಿದ್ದಾರೆ. ಇದನ್ನೂ ಓದಿ:ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ದುಬಾರಿ ಮನೆ ಖರೀದಿಸಿದ ಹೃತಿಕ್ ರೋಷನ್

    ಆತನ ಹೆಸರು ಫರ್ಹಾನ್ ಬಿನ್ ಲೈತ್. ರಿಯಲ್ ಎಸ್ಟೇಟ್ ಉದ್ಯಮಿ. ರೆಸ್ಟೋರೆಂಟ್ ಒಡೆಯ. ಆಸ್ತಿ ಅಂತಸ್ತಿನಲ್ಲಿ ಕೀರ್ತಿಗೆ ಹೇಳಿ ಮಾಡಿಸಿದ ಜೋಡಿ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಶೀಘ್ರದಲ್ಲೇ ಮದುವೆ ಎಂದು ಹೇಳಲಾಗುತ್ತಿದೆ.

  • ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ದುಬಾರಿ ಮನೆ ಖರೀದಿಸಿದ ಹೃತಿಕ್ ರೋಷನ್

    ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ದುಬಾರಿ ಮನೆ ಖರೀದಿಸಿದ ಹೃತಿಕ್ ರೋಷನ್

    ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಸದ್ಯ ‘ಫೈಟರ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಿಂತ ತಮ್ಮ ಗರ್ಲ್‌ಫ್ರೆಂಡ್ ಸಬಾ ವಿಷ್ಯವಾಗಿಯೇ ಹೆಚ್ಚೆಚ್ಚು ಸುದ್ದಿಯಾಗುತ್ತಿದ್ದಾರೆ. ಗೆಳತಿ ಸಬಾ (Saba) ಜೊತೆ ವಾಸಿಸಲು ಮದುವೆಗೂ ಮುನ್ನವೇ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದನ್ನ ಖರೀದಿಸಿದ್ದಾರೆ.

    ಹೃತಿಕ್ ರೋಷನ್ ಅವರು ಸುಸೇನ್ ಖಾನ್‌ಗೆ 2014ರಲ್ಲಿ ಡಿವೋರ್ಸ್ ನೀಡಿದ್ದರು. ನಂತರ ಸಬಾ ಆಜಾದ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಈಗಾಗಲೇ ಇಬ್ಬರು ಲಿವಿನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಪ್ರೇಯಸಿ ಸಬಾಗೆ ಹೃತಿಕ್ ದುಬಾರಿ ಮನೆ ಉಡುಗೊರೆಯಾಗಿ ನೀಡಿದ್ದಾರೆ.

    ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಇಬ್ಬರೂ ಒಟ್ಟಿಗೆ ಇರಲು ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರಂತೆ. ಇಬ್ಬರೂ ಇದೀಗ ಹೊಸ ಮನೆಗೆ ಸದ್ಯದಲ್ಲೇ ಶಿಫ್ಟ್ ಆಗುತ್ತಿದ್ದಾರೆ ಎನ್ನಲಾಗಿದೆ. ಮುಂಬೈನ ಜುಹು – ವರ್ಸೋವ ರಸ್ತೆಯಲ್ಲಿ ಹೃತಿಕ್ ಮತ್ತು ಸಬಾ ಹೊಸ ಮನೆ ಇದ್ದು 3 ಫ್ಲೋರ್ ಇರುವ ಅಪಾರ್ಟ್‌ಮೆಂಟ್ ಇದಾಗಿದೆ. ಬರೋಬ್ಬರಿ 100 ಕೋಟಿ ರೂಪಾಯಿಗೆ ಈ ಹೊಸ ಮನೆ ಖರೀದಿ ಮಾಡಿದ್ದಾರೆ. ಹೊಸ ಮನೆ ಸಮುದ್ರದ ಅದ್ಭುತ ನೋಟವನ್ನು ಹೊಂದಿದ್ದು 15 ಮತ್ತು 16ನೇ ಫ್ಲೋರ್ ಡ್ಯುಪ್ಲೆಕ್ಸ್ ಹಾಗೂ ಮತ್ತೊಂದು ಫ್ಲೋರ್ ಇದೆಯಂತೆ. ಇಬ್ಬರೂ ಒಟ್ಟಿಗೆ ವಾಸಿಸಲು ನಿರ್ಧರಿಸಿರುವುದು ನೋಡಿದ್ರೆ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ:ಜನಾರ್ದನ್ ರೆಡ್ಡಿಗೂ ‘ಆದಿಕೇಶವ’ ಸಿನಿಮಾ ಕಥೆಗೂ ಸಂಬಂಧ ಇದೆಯಾ?

    ಹೃತಿಕ್ ರೋಷನ್ ಕುಟುಂಬದ ಜೊತೆ ಸಬಾಗೆ ಒಳ್ಳೆಯ ಒಡನಾಟವಿದೆ. ಇಬ್ಬರ ಪ್ರೀತಿಗೆ ಕುಟುಂಬದ ಕಡೆಯಿಂದ ಕೂಡ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ವರ್ಷದ ಕೊನೆಯಲ್ಲಿ ಮದುವೆಯಾದರು ಅಚ್ಚರಿಪಡಬೇಕಿಲ್ಲ.

  • ಮುರಿದು ಬಿತ್ತಾ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ?

    ಮುರಿದು ಬಿತ್ತಾ ತೆಲುಗು ನಟ ಶರ್ವಾನಂದ್ ನಿಶ್ಚಿತಾರ್ಥ?

    ಟಾಲಿವುಡ್ (Tollywood) ಅಂಗಳದಲ್ಲಿ ಬಿಸಿ ಬಿಸಿ ಸಮಾಚಾರವೊಂದು ಸದ್ದು ಮಾಡ್ತಿದೆ. ಸ್ಟಾರ್ ನಟ ಶರ್ವಾನಂದ್(Sharwanand), ಖಾಸಗಿ ಸಮಾಚಾರವೊಂದು ಭಾರಿ ಸೌಂಡ್ ಮಾಡ್ತಿದೆ. ಇತ್ತೀಚಿಗಷ್ಟೇ ಅದ್ದೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ ಶರ್ವಾನಂದ್ ನಿಶ್ಚಿತಾರ್ಥ (Engagement) ಮುರಿದು ಬಿದ್ದಿದೆ ಎಂದು ಹೇಳಲಾಗುತ್ತಿದೆ.

    ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟ ಶರ್ವಾನಂದ್, ಭಿನ್ನ ಪಾತ್ರಗಳ ಮೂಲಕ ರೆಲುಗು ಪ್ರೇಕ್ಷಕರ ಮನಗೆದ್ದಿದ್ದರು. ಇತ್ತೀಚಿಗಷ್ಟೇ ರಕ್ಷಿತಾ (Rakshitha Reddy) ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸಿಹಿಸುದ್ದಿ ನೀಡಿದ್ದರು.

    ಈ ವರ್ಷದ ಆರಂಭ ಜನವರಿಯಲ್ಲಿ ಗುರುಹಿರಿಯರು ಸಮ್ಮತಿಸಿದ ಹುಡುಗಿ ರಕ್ಷಿತಾ ಶರ್ವಾನಂದ್ ಎಂಗೇಜ್ ಆಗಿದ್ದರು. ಆದರೆ ಈಗ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆ ಈ ನಿಶ್ಚಿತಾರ್ಥ ಮುರಿದು ಬಿದ್ದಿದೆ (Break Up) ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಅಜಯ್ ರಾವ್ ಚಿತ್ರಕ್ಕೆ ಕೆಜಿಎಫ್ ನಟಿ ಅರ್ಚನಾ ಜೋಯಿಸ್ ನಾಯಕಿ

    ಈ ಸುದ್ದಿಯನ್ನ ಶರ್ವಾನಂದ್ ಟೀಂ ನಿರಾಕರಿಸಿದೆ. ಶರ್ವಾನಂದ್- ರಕ್ಷಿತಾ ನಡುವೆ ಸಂಬಂಧ ಚೆನ್ನಾಗಿದೆ. ಸದ್ಯ ನಟ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಷ್ಟೇ, ಲಂಡನ್‌ನಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳನ್ನ ಮುಗಿಸಿ, ಮದುವೆ ಆಗ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನಿಶ್ಚಿತಾರ್ಥ ಮುರಿದಿರುವ ಸುದ್ದಿ ಬಗ್ಗೆ ನೇರವಾಗಿ ಶರ್ವಾನಂದ್- ರಕ್ಷಿತಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಡಿಜೆ, ರೋಡ್‍ಲೈಟ್ ಇಲ್ಲದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವರ

    ಡಿಜೆ, ರೋಡ್‍ಲೈಟ್ ಇಲ್ಲದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವರ

    ಲಕ್ನೋ: ಡಿಜೆ ಹಾಗೂ ರಸ್ತೆ ಲೈಟ್ ವಿಚಾರದಲ್ಲಿ ವಧುವಿನ ಕುಟುಂಬದವರೊಂದಿಗೆ ವಾದ, ವಿವಾದ ನಡೆದ ಹಿನ್ನೆಲೆಯಲ್ಲಿ ವರನೊಬ್ಬ (Groom) ಮದುವೆಯನ್ನು (Wedding) ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಅಲಹಾಬಾದ್‍ನ ಬರಹುಲಾ ಗ್ರಾಮದಲ್ಲಿ ವರದಿಯಾಗಿದೆ.

    ಮಿಜಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಲಿಯಾ ಮೂಲದ ವರನಿಗೆ ಬರಹುಲಾದ ವಧುವನ್ನು ಮದುವೆಯಾಗಲು ನಿಶ್ಚಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವರನ ಕಡೆಯವರು ಬರಹುಲಾದ ವಧುವಿನ ಮನೆಗೆ ಮೆರವಣಿಗೆಯ ಮೂಲಕ ಬರುತ್ತಿದ್ದರು. ಆದರೆ ಈ ವೇಳೆ ಆರ್ಕೆಸ್ಟ್ರಾ ಕಲಾವಿದರು ತಡವಾಗಿ ಬಂದಿದ್ದಾರೆ. ಜೊತೆಗೆ ರಸ್ತೆ ದೀಪವು (Road Light) ಇರಲಿಲ್ಲ. ಇದರಿಂದಾಗಿ ವರ ಹಾಗೂ ವಧುವಿನ ಕಡೆಯವರ ನಡುವೆ ವಾಗ್ವಾದ ನಡೆದಿದೆ.

    ಈ ವೇಳೆ ವರ ಮದುವೆಯನ್ನು ರದ್ದು ಪಡಿಸಿದ್ದಾನೆ. ಆದರೆ ಅಲ್ಲಿದ್ದ ಗ್ರಾಮಸ್ಥರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅಷ್ಟರಾಗಲೇ ವರ ಹೊರಟು ಹೋಗಿದ್ದ. ಇದರಿಂದಾಗಿ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ನನ್ನ ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕಿದ್ರು: ಪರಾಜಿತ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಸ್ವ ಪಕ್ಷದ ವಿರುದ್ಧ ಕಿಡಿ

    ಅಷ್ಟೇ ಅಲ್ಲದೇ ವರನಿಗೆ ವರದಕ್ಷಿಣೆ ಹಾಗೂ ಬೈಕ್ ನೀಡಲು ಜಮೀನನ್ನು ಅಡವಿಟ್ಟಿರುವುದಾಗಿ ವಧುವಿನ ಸಹೋದರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವರನ ತಂದೆಯನ್ನು ಕರೆಸಿದ್ದಾರೆ. ಈ ವೇಳೆ ವರನ ತಂದೆ ಕೂಡ ಪೊಲೀಸ್ ಠಾಣೆಗೆ ಬಂದು ತನ್ನ ಮಗ ವಧುವನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ