Tag: wedding
-

‘ಗಿಚ್ಚಿ ಗಿಲಿಗಿಲಿ’ ವೇದಿಕೆಯಲ್ಲಿ ಚಂದ್ರಪ್ರಭಾ ಮತ್ತೆ ಮದುವೆ- ಕಣ್ಣೀರಿಟ್ಟ ನಟ
ಮಜಾಭಾರತ, ಗಿಚ್ಚಿ ಗಿಲಿಗಿಲಿ ಶೋ ಮೂಲಕ ಮನೆ ಮಾತಾದ ನಟ ಚಂದ್ರಪ್ರಭಾ (Chandraprabha) ಅವರು ಇತ್ತೀಚಿಗೆ ಸೈಲೆಂಟ್ ಆಗಿ ಹಸೆಮಣೆ ಏರಿದ್ದರು. ತಮ್ಮ ಮದುವೆ (Wedding) ಬಗ್ಗೆ ಎಲ್ಲೂ ಹೇಳದೇ ಮುಚ್ಚಿಟ್ಟಿದ್ದಾರೆ ಎಂದು ನೆಟ್ಟಿಗರ ಕೆಂಗಣ್ಣಿಗೆ ನಟ ಗುರಿಯಾಗಿದ್ದರು. ಈಗ ತಮ್ಮ ಮದುವೆ ಬಗ್ಗೆ ಚಂದ್ರಪ್ರಭಾ ಅವರು ಮಾತನಾಡಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ 2 (Gicchi Giligili 2) ವೇದಿಕೆಯಲ್ಲಿ ನಟ ಮತ್ತೆ ಮದುವೆಯಾಗಿದ್ದಾರೆ.
ಕಾಮಿಡಿ ಶೋ ಕಾರ್ಯಕ್ರಮದ ಮೂಲಕ ಸ್ಪರ್ಧಿಯಾಗಿ ಅಭಿಮಾನಿಗಳನ್ನ ನಗೆಗಡಲಲ್ಲಿ ತೇಲಿಸಿದ ನಟ ಚಂದ್ರಪ್ರಭಾ ಅವರು ಕೆಲ ದಿನಗಳ ಹಿಂದೆ ಭಾರತಿ ಎಂಬುವವರನ್ನ ಮದುವೆಯಾಗಿದ್ದರು. ಸರಳವಾಗಿ ಆಪ್ತರ ಸಮ್ಮುಖದಲ್ಲಿ ಚಂದ್ರಪ್ರಭಾ ಮದುವೆ ನೆರವೇರಿತ್ತು. ಆದರೆ ತಮ್ಮ ಮದುವೆ ಬಗ್ಗೆ ಎಲ್ಲೂ ಕೂಡ ನಟ ಪೋಸ್ಟ್ ಹಾಕಿರಲಿಲ್ಲ. ಮದುವೆ ಆಗಿರುವ ಬಗ್ಗೆ ಎಲ್ಲೂ ಸುಳಿವು ನೀಡಿರಲಿಲ್ಲ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಚಂದ್ರಪ್ರಭಾ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.
View this post on Instagramಇದೀಗ ‘ಗಿಚ್ಚಿ ಗಿಲಿಗಿಲಿ 2’ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಚಂದ್ರಪ್ರಭಾ ಅವರು ಮತ್ತೆ ಮಡದಿ ಭಾರತಿ ಪ್ರಿಯಾ (Bharathi Priya) ಜೊತೆ ಮದುವೆಯಾಗಿದ್ದಾರೆ. ನಾನು ಇಷ್ಟಪಟ್ಟ ಹುಡುಗಿ ಎಂದು ಹೇಳುವುದ್ದಕ್ಕಿಂತ, ನನ್ನನ್ನು ಹೆಚ್ಚಿಗೆ ಇಷ್ಟಪಡುತ್ತಿರುವ ವ್ಯಕ್ತಿ ಎಂದು ಹೇಳಲು ಖುಷಿಯಾಗುತ್ತದೆ. ಆಕೆಯನ್ನು ಕಣ್ಣೀರು ಹಾಕಿಸದಂತೆ ನೋಡಿಕೊಳ್ಳಬೇಕು ಅನ್ನೋದು ನನ್ನ ಆಸೆ ಎಂದು ಚಂದ್ರಪ್ರಭಾ ಮಾತನಾಡಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ
ನಮ್ಮ ತಂದೆ ಇರಬೇಕಿತ್ತು ನನ್ನ ಮದುವೆ ನೋಡಬೇಕಿತ್ತು. ನನ್ನ ಮದುವೆ ನೋಡಿ ಸಾಯಬೇಕು ಎಂಬುದು ನನ್ನ ತಂದೆಯ ಆಸೆಯಾಗಿತ್ತು ಎಂದು ಚಂದ್ರಪ್ರಭಾ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದಾರೆ. ಈ ವಾಹಿನಿಯ ‘ಗಿಚ್ಚಿ ಗಿಲಿಗಿಲಿ 2’ ವಾರಾಂತ್ಯದ ಚಂದ್ರಪ್ರಭಾ ಪ್ರೋಮೋ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹೊಸ ಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.
-

ವರುಣ್ ತೇಜ್- ನಟಿ ಲಾವಣ್ಯ ಎಂಗೇಜ್‌ಮೆಂಟ್ ಡೇಟ್ ಫಿಕ್ಸ್
ಟಾಲಿವುಡ್‌ನ ಯಂಗ್ ಹೀರೋ, ಮೆಗಾಸ್ಟಾರ್ ಕುಟುಂಬದ (Megastar Family) ಮನೆ ಮಗ ವರುಣ್ ತೇಜ್ (Varun Tej) ಮದುವೆಗೆ (Wedding) ಸಕಲ ಸಿದ್ಧತೆ ನಡೆಯುತ್ತಿದೆ. ನಟಿ ಲಾವಣ್ಯ (Lavanya) ಜೊತೆಗೆ ವರುಣ್ ಮದುವೆ ಎಂಬ ಎಲ್ಲಾ ಊಹಾಪೋಹಗಳಿಗೂ ಸ್ಪಷ್ಟನೆ ಸಿಕ್ಕಿದೆ. ಬಹುಕಾಲದ ಗೆಳತಿ ನಟಿ ಲಾವಣ್ಯ ಜೊತೆ ಎಂಗೇಜ್ ಆಗಲು ವರುಣ್ ರೆಡಿಯಾಗಿದ್ದಾರೆ.
ಚಿತ್ರರಂಗದಲ್ಲಿ ಮದುವೆಯ ಮಂಗಳ ವಾದ್ಯ ಸೌಂಡ್ ಮಾಡುತ್ತಿದೆ. ಅಥಿಯಾ ಶೆಟ್ಟಿ ಜೋಡಿ, ಸಿದ್- ಕಿಯಾರಾ, ಹೀಗೆ ಸ್ಟಾರ್ ಜೋಡಿಗಳು ಹಸೆಮಣೆ ಏರುತ್ತಿದ್ದಾರೆ. ಇದೀಗ ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ ನಿಶ್ಚಿತಾರ್ಥಕ್ಕೆ (Engagement) ಕೌಂಟ್‌ಡೌನ್ ಶುರುವಾಗಿದೆ. ಇದನ್ನೂ ಓದಿ:ನಿರಾಶ್ರಿತರ ಜೊತೆ ನಿಂತುಕೊಂಡು ನಟ ಕಿರಣ್ ರಾಜ್
ನಟಿ ಲಾವಣ್ಯ ತ್ರಿಪಾಠಿ ಜೊತೆ ವರುಣ್ ತೇಜ್ ಕಳೆದ ಐದಾರು ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಗುರುಹಿರಿಯರು ಕೂಡ ಇಬ್ಬರ ಪ್ರೀತಿಗೆ ಸಮ್ಮತಿ ಸೂಚಿಸಿದ್ದಾರೆ. ಜೂನ್ 9ಕ್ಕೆ (June 9) ವರುಣ್- ಲಾವಣ್ಯ ಎಂಗೇಜ್‌ಮೆಂಟ್ ಡೇಟ್ ಫಿಕ್ಸ್ ಆಗಿದೆ. ಹೈದರಾಬಾದ್‌ನಲ್ಲಿ ಸರಳವಾಗಿ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಜರುಗಲಿದೆ.
ಶ್ರೀಜಾ, ನಿಹಾರಿಕಾ ಕೊನಿಡೆಲಾ, ಡಿವೋರ್ಸ್ ಸಂಗತಿಯ ನಡುವೆ ವರುಣ್ ತೇಜ್ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಸದ್ಯದಲ್ಲೇ ವರುಣ್- ಲಾವಣ್ಯ ಮದುವೆ ಕೂಡ ರಿವೀಲ್ ಆಗಲಿದೆ.
-

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕಮಲಿ’ ನಟಿ ಯಶಸ್ವಿನಿ
‘ಕಮಲಿ’ (Kamali) ಧಾರಾವಾಹಿ ಮೂಲಕ ಮನೆ ಮಾತಾದ ನಟಿ ಯಶಸ್ವಿನಿ ರವೀಂದ್ರ (Yashaswini Ravindra) ಅವರು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಟಿವಿ ಪ್ರೇಕ್ಷಕರಿಗೆ ರಚನಾ ಆಗಿ ಗಮನ ಸೆಳೆದವರು ನಟಿ ಯಶಸ್ವಿನಿ ರವೀಂದ್ರ, ಜನಪ್ರಿಯ ‘ಕಮಲಿ’ ಧಾರಾವಾಹಿಯಲ್ಲಿ ಹೀರೋ ರಿಷಿ (Rishi) ಸಹೋದರಿ ಪಾತ್ರದಲ್ಲಿ ನಟಿಸಿದ್ದರು. ರಚನಾ ಎಂಬ ಪಾತ್ರಕ್ಕೆ ಯಶಸ್ವಿನಿ ಜೀವ ತುಂಬಿದ್ದರು.
View this post on Instagramಇದೀಗ ಬಹುಕಾಲದ ಗೆಳೆಯ ಚೇತನ್ ರಾಜ್ (Chethan Raj) ಜೊತೆ ನಟಿ ಯಶಸ್ವಿನಿ ರವೀಂದ್ರ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ನಟಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ
View this post on Instagramನಟಿ ಯಶಸ್ವಿನಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾಗಿದ್ದಾರೆ. ಆಪ್ತರ ಸಮ್ಮುಖದಲ್ಲಿ ಯಶಸ್ವಿನಿ- ಚೇತನ್ ರಾಜ್ ಸಿಂಪಲ್ ಆಗಿ ಮದುವೆಯಾಗಿದ್ದಾರೆ. ನವ ಜೋಡಿಗೆ ಹೊಸ ಬಾಳಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.
-

ರಾಜಸ್ಥಾನದಲ್ಲಿ ನಡೆಯಲಿದೆ ಪರಿಣಿತಿ- ರಾಘವ್ ಮದುವೆ
ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadda) ಇತ್ತೀಚಿಗಷ್ಟೇ ಉಂಗುರ ಬದಲಿಸುವ ಮೂಲಕ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ರಾಜಸ್ಥಾನದಲ್ಲಿ ಪರಿಣಿತಿ- ರಾಘವ್ ಮದುವೆ ನಡೆಯಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. ಇದನ್ನೂ ಓದಿ:ಜೂನ್‌ನಲ್ಲಿ ಅಂಬಿ ಪುತ್ರನ ಅದ್ದೂರಿ ಮದುವೆ- ಆಮಂತ್ರಣ ಪತ್ರಿಕೆ ಇಲ್ಲಿದೆ
ಬಿಟೌನ್ ‘ಲವ್ ಬರ್ಡ್ಸ್’ ರಾಘವ್ – ಪರಿಣಿತಿ ಚೋಪ್ರಾ (Parineeti Chopra) ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ದೆಹಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಮೇ 13ರಂದು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ಈ ಜೋಡಿಯ ಮದುವೆ ಯಾವಾಗ? ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಉದಯ್‌ಪುರ, ಜೈಪುರ ಸೇರಿದಂತೆ ಹಲವು ಕಡೆ ಪರಿಣಿತಿ ಜೋಡಿ ಮದುವೆ ಸ್ಥಳ ನೋಡಿದ್ದಾರೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ರಾಜಸ್ಥಾನದಲ್ಲಿ (Rajasthan) ಮದುವೆ ಸ್ಥಳ ನಿಗದಿಯಾಗಿದೆ ಎಂದು ಹೇಳಲಾಗುತ್ತಿದೆ. ಇದೇ ಸೆಪ್ಟೆಂಬರ್‌ನಿಂದ ನವೆಂಬರ್ ನಡುವೆ ಅದ್ದೂರಿ ಮದುವೆಯಾಗಲು ಈ ಜೋಡಿ ನಿರ್ಧಾರ ಮಾಡಿದ್ದಾರೆ.
ಪರಿಣಿತಿ- ರಾಘವ್ ಮದುವೆಯಲ್ಲಿ ರಾಜಕೀಯ- ಬಾಲಿವುಡ್ ಗಣ್ಯರ ದಂಡೇ ಇರಲಿದೆ. ಮದುವೆಗೆ ಈಗಿಂದಲೇ ಸಿದ್ಧತೆ ಭರದಿಂದ ಸಾಗುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಅಪ್‌ಡೇಟ್ ಸಿಗಲಿದೆ.
-

ಕೆಲವೇ ಗಂಟೆಗಳಲ್ಲಿ ವಿವಾಹವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಸಾವು
ವಾಷಿಂಗ್ಟನ್: ವಿವಾಹವಾಗಲು (Wedding) ಕೆಲವೇ ಗಂಟೆಗಳು ಬಾಕಿ ಇರುವಾಗ ಅಗ್ನಿ ಅವಘಡದಲ್ಲಿ (Fire Incident) ವಧು (Bride) ದುರಂತ ಅಂತ್ಯ ಕಂಡ ಘಟನೆ ಅಮೆರಿಕಾದ (America) ವಿಸ್ಕಾನ್ಸಿನ್‌ನಲ್ಲಿ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಪೈಜ್ ರಡ್ಡಿ (19) ಮೃತಪಟ್ಟ ವಧು. ಮೇ 23ರಂದು ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ರೀಡ್ಸ್‌ಬರ್ಗ್ ಮನೆಯ ಎರಡನೇ ಮಹಡಿಯಲ್ಲಿ ಪೈಜ್ ರಡ್ಡಿ ನಿದ್ರಿಸುತ್ತಿದ್ದಳು. ಈ ವೇಳೆ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಬೆಂಕಿಯ ಹೊಗೆಯನ್ನು ಉಸಿರಾಡಿದ ವಧುವಿಗೆ ಮೆದುಳಿನ ರಕ್ತಸ್ರಾವವಾಗಿ (Brain Haemorrhage) ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಬೈಬಲ್ ಹೊಂದಿದ್ದಕ್ಕೆ 2 ವರ್ಷದ ಮಗುವಿಗೆ ಜೀವಾವಧಿ ಶಿಕ್ಷೆ!
ವಧು ತಮ್ಮ ಭಾವೀ ಪತಿಯಾದ ಲೋಗನ್ ಮಿಚೆಲ್ – ಕಾರ್ಟರ್ ಅವರೊಂದಿಗೆ ಸೋಮವಾರ ಪ್ರತಿಜ್ಞಾ ವಿಧಿಗಳನ್ನು ವಿನಿಮಯ ಮಾಡಿಕೊಂಡಿದ್ದಳು. ಅಲ್ಲದೇ ಸೌಕ್ ಕೌಂಟಿ ಕೋರ್ಟ್‌ಹೌಸ್‌ನಲ್ಲಿ ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಣ್ಣ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ವಧು ಮತ್ತು ವರ ನೆಲೆಸಿದ್ದ ಮನೆ ವರನ ಅಜ್ಜಿಗೆ ಸೇರಿದ್ದು, ಘಟನೆ ನಡೆದ ಸಂದರ್ಭ ಹೊಗೆ ತುಂಬಿದ್ದರಿಂದ ವಧುವಿಗೆ ಹೊಗೆಯಿಂದ ಆಚೆಬರಲಾಗಲಿಲ್ಲ ಎಂದು ಅಗ್ನಿಶಾಮಕ (Fire Extinguisher) ವಿಭಾಗದ ಮುಖ್ಯಸ್ಥ ಕ್ರೇಗ್ ಡೌಗ್ಲಾಸ್ ತಿಳಿಸಿದ್ದಾರೆ. ಇದನ್ನೂ ಓದಿ: 72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!
ಪ್ರಾಥಮಿಕ ತನಿಖೆಯು ಆಕೆ ಹೊಗೆ ಸೇವನೆ ಮಾಡಿದ್ದರಿಂದ ಸಾವನ್ನಪ್ಪಿದ್ದಾಳೆ ಎಂದು ತೋರಿಸುತ್ತದೆ. ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದ್ದು, ಯಾವುದೇ ಅನುಮಾನಾಸ್ಪದ ಘಟನೆಗಳು ನಡೆದಿಲ್ಲ ಎಂದು ಸೌಕ್ ಕೌಂಟಿಯ ಕರೋನರ್ ಕಚೇರಿಯು ಮಾಹಿತಿ ನೀಡಿದೆ. ಅಲ್ಲದೇ ಘಟನೆ ನಡೆದ ಸಂದರ್ಭ ಇನ್ನೂ ಮೂವರು ಮನೆಯಲ್ಲಿದ್ದು, ಅಗ್ನಿಶಾಮಕ ದಳ ಬರುವಷ್ಟರಲ್ಲಿ ಅವರು ಬೆಂಕಿಯಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಂಡ ಕಂಡಲ್ಲಿ ಉಗೀಬೇಡಿ – ಎಂಜಲು ರಸ ಮಾರಿಯೇ ತಿಂಗಳಿಗೆ 40 ಲಕ್ಷ ಸಂಪಾದಿಸ್ತಾಳೆ ಈ ಮಹಿಳೆ
ಪೈಜ್ ರಡ್ಡಿ ರೀಡ್ಸ್‌ಬರ್ಗ್ ಏರಿಯಾ ಹೈಸ್ಕೂಲ್‌ನಿಂದ ಜೂನ್ 2022ರಲ್ಲಿ ಪದವಿ ಪಡೆದಿದ್ದಳು. ಅಲ್ಲದೇ ಮ್ಯಾಡಿಸನ್ ಏರಿಯಾದ ಟೆಕ್ನಿಕಲ್ ಕಾಲೇಜಿನಲ್ಲಿ ವೆಟ್ ಟೆಕ್ ಕಾರ್ಯಕ್ರಮಕ್ಕೆ ಸೇರಲು ಯೋಚಿಸಿದ್ದಳು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ. ಮುಂದಿನ ವಾರ ಆಕೆಯ ಅಂತ್ಯಕ್ರಿಯೆ ನಡೆಯಲಿದ್ದು, ಅಂತ್ಯಕ್ರಿಯೆ ಮತ್ತು ಆಕೆಯ ವೈದ್ಯಕೀಯ ಚಿಕಿತ್ಸೆಗಳ ವೆಚ್ಚವನ್ನು ಭರಿಸಲು ಆಕೆಯ ಕುಟುಂಬಸ್ಥರು ಗೋಫಂಡ್‌ಮೀ (GoFundMe) ಅನ್ನು ಸ್ಥಾಪಿಸಿದ್ದಾರೆ. ಇದನ್ನೂ ಓದಿ: ವಿಜಯ್ ಮಲ್ಯಗೆ ಮುಳುವಾಗಿದ್ದ ಟಿಪ್ಪು ಖಡ್ಗ 145 ಕೋಟಿಗೆ ಹರಾಜು




















