Tag: wedding

  • ಪುತ್ರನ ಆರತಕ್ಷತೆಗೆ ಬರುವಂತೆ ವಿಶೇಷಚೇತನ ಅಭಿಮಾನಿಗೆ ಖುದ್ದು ಆಹ್ವಾನಿಸಿದ ಸುಮಲತಾ

    ಪುತ್ರನ ಆರತಕ್ಷತೆಗೆ ಬರುವಂತೆ ವಿಶೇಷಚೇತನ ಅಭಿಮಾನಿಗೆ ಖುದ್ದು ಆಹ್ವಾನಿಸಿದ ಸುಮಲತಾ

    ಧಾರವಾಡದ ವಿಶೇಷಚೇತನ ಹೆಣ್ಣುಮಗಳು ತಾವು ಸುಮಲತಾ (Sumalatha)  ಅವರ ಅಭಿಮಾನಿ. ಅಂಬರೀಶ್ ಅವರ ಮತ್ತು ಸುಮಲತಾ ಅವರ ಫೋಟೋಗಳನ್ನು ಕತ್ತರಿಸಿ ಪುಸ್ತಕದಲ್ಲಿ ಅಂಟಿಸಿರುವುದಾಗಿ ಮತ್ತು ಸುಮಲತಾ ಅವರನ್ನು ಭೇಟಿ ಮಾಡಲು ಕಾಯುತ್ತಿರುವುದಾಗಿ ತಿಳಿಸಿದ್ದರು. ಚುನಾವಣೆ ಮತ್ತು ಇತರ ಬಿಡುವಿಲ್ಲದ ಕೆಲಸದಿಂದಾಗಿ ಈವರೆಗೂ ಅಭಿಮಾನಿಯನ್ನು ಸುಮಲತಾ ಖುದ್ದಾಗಿ ಭೇಟಿ ಮಾಡಲು ಆಗಿರಲಿಲ್ಲ. ಫೋನ್ ನಲ್ಲಿ ಮಾತನಾಡಿದ್ದರು. ಇದೀಗ ಖುದ್ದಾಗಿ ಪುತ್ರನ ಆರತಕ್ಷತೆಗೆ ಬರುವಂತೆ ಆಹ್ವಾನ ಪತ್ರಿಕೆಯನ್ನು ಅಭಿಮಾನಿಗೆ ನೀಡಿದ್ದಾರೆ ಸುಮಲತಾ.

    ತಮ್ಮ ಅಭಿಮಾನಿ ಧಾರವಾಡದ ಸೌಭಾಗ್ಯ ಯಮನೂರು (Saubhagya Yamanur) ಎನ್ನುವ ಹೆಣ್ಣು ಮಗುವಿಗೆ ಸುಮಲತಾ ಅಂಬರೀಶ್ ಖುದ್ದಾಗಿ ಆಹ್ವಾನ ಪತ್ರಿಕೆ ನೀಡಿ ಅಭಿಷೇಕ್ –ಅವಿವಾ (Aviva) ಆರತಕ್ಷತೆಗೆ ಬನ್ನಿ ಎಂದು ಕರೆದಿದ್ದಾರೆ. ಹಾಗಾಗಿ ಇಂದು ತಂದೆ ನಿಗೋಜಿ ಯಮನೂರು ಮತ್ತು ತಾಯಿಯೊಂದಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ ಸೌಭಾಗ್ಯ. ನಟಿ ಸುಮಲತಾ ಅವರನ್ನು ನೋಡಬೇಕು ಎನ್ನುವ ಹಲವು ವರ್ಷಗಳ ಕನಸನ್ನು ಇಂದು ಈಡೇರಿಸಿಕೊಳ್ಳುತ್ತಿದ್ದಾರೆ. ಸುಮಲತಾ ಅವರಿಗಾಗಿ ಧಾರವಾಡದ ವಿಶೇಷ ಸೀರೆ ಮತ್ತು ಪೇಡಾವನ್ನು ಉಡುಗೊರೆಯಾಗಿ ನೀಡಲಿದ್ದಾರಂತೆ ಸೌಭಾಗ್ಯ.

    ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಆರತಕ್ಷತೆ (Reception) ಇಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಅದ್ದೂರಿ ಆರತಕ್ಷತೆಗಾಗಿ ಅರಮನೆ ಮೈದಾನ ಸಿಂಗಾರಗೊಂಡಿದೆ. ಅಭಿಷೇಕ್ ಮತ್ತು ಅವಿವಾ ಜೋಡಿಗೆ ಹಾರೈಸುವುದಕ್ಕಾಗಿ ಇಂದು ಕೂಡ ದೇಶದ ವಿವಿಧ ಭಾಗಗಳಿಂದ ಗಣ್ಯರು ಬರುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ರಾಜಕೀಯ ಗಣ್ಯರ ದೊಡ್ಡ ಪಟ್ಟಿಯೇ ಹರಿದಾಡುತ್ತಿದೆ. ಇದನ್ನೂ ಓದಿ:ಬೀಚ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿದ ನಟಿ ಇಲಿಯಾನಾ

    ಎರಡು ದಿನಗಳ ಹಿಂದೆಯಷ್ಟೇ ನಡೆದ ಮದುವೆ (Wedding) ಸಮಾರಂಭದಲ್ಲಿ ನಟರಾದ ರಜನಿಕಾಂತ್, ಸುದೀಪ್, ಯಶ್,  ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿದ್ದರು.

    ಇಂದು ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬಾಲಿವುಡ್ ನ ಖ್ಯಾತ ನಟ ಅಮಿತಾಭ್, ತೆಲುಗಿನ ಖ್ಯಾತ ನಟ ಚಿರಂಜೀವಿ, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.

    ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಒಂದು ವಾರಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿದೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ.

  • ಇಂದು ಅಭಿ-ಅವಿವಾ ಆರತಕ್ಷತೆ : ಅಮಿತಾಭ್ ಸೇರಿ ಹಲವರು ಭಾಗಿ ಆಗುವ ನಿರೀಕ್ಷೆ

    ಇಂದು ಅಭಿ-ಅವಿವಾ ಆರತಕ್ಷತೆ : ಅಮಿತಾಭ್ ಸೇರಿ ಹಲವರು ಭಾಗಿ ಆಗುವ ನಿರೀಕ್ಷೆ

    ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಆರತಕ್ಷತೆ ಇಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಅದ್ದೂರಿ ಆರತಕ್ಷತೆಗಾಗಿ (Reception) ಅರಮನೆ ಮೈದಾನ ಸಿಂಗಾರಗೊಂಡಿದೆ. ಅಭಿಷೇಕ್ ಮತ್ತು ಅವಿವಾ (Aviva) ಜೋಡಿಗೆ ಹಾರೈಸುವುದಕ್ಕಾಗಿ ಇಂದು ಕೂಡ ದೇಶದ ವಿವಿಧ ಭಾಗಗಳಿಂದ ಗಣ್ಯರು ಬರುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ರಾಜಕೀಯ ಗಣ್ಯರ ದೊಡ್ಡ ಪಟ್ಟಿಯೇ ಹರಿದಾಡುತ್ತಿದೆ.

    ಎರಡು ದಿನಗಳ ಹಿಂದೆಯಷ್ಟೇ ನಡೆದ ಮದುವೆ (Wedding) ಸಮಾರಂಭದಲ್ಲಿ ನಟರಾದ ರಜನಿಕಾಂತ್, ಸುದೀಪ್, ಯಶ್,  ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿದ್ದರು. ಇದನ್ನೂ ಓದಿ:ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು

    ಇಂದು ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬಾಲಿವುಡ್ ನ ಖ್ಯಾತ ನಟ ಅಮಿತಾಭ್, ತೆಲುಗಿನ ಖ್ಯಾತ ನಟ ಚಿರಂಜೀವಿ, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.

    ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಒಂದು ವಾರಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿದೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ.

  • ಅಂಬಿ ಪುತ್ರನ ಮದುವೆ ಸಂಭ್ರಮದಲ್ಲಿ ಮಿಂಚಿದ ಯಶ್, ರಾಧಿಕಾ ಜೋಡಿ

    ಅಂಬಿ ಪುತ್ರನ ಮದುವೆ ಸಂಭ್ರಮದಲ್ಲಿ ಮಿಂಚಿದ ಯಶ್, ರಾಧಿಕಾ ಜೋಡಿ

    ಸ್ಯಾಂಡಲ್‍ವುಡ್ ನಟ ಅಂಬಿ ಪುತ್ರ ಅಭಿಷೇಕ್  (Abhishek Ambareesh) ಹಾಗೂ ಅವಿವ ಬಿಡಪ (Aviva Bidpapa) ಮದುವೆ ಅದ್ದೂರಿಯಾಗಿ ನಡೆದಿದೆ. ಅವಿವ ಮದುವೆ (Wedding) ಸಂಭ್ರಮದಲ್ಲಿ ಕೆಜಿಎಫ್ 2 ಹೀರೋ ಯಶ್ (Yash), ರಾಧಿಕಾ ಪಂಡಿತ್ (Radhika Pandit) ಜೋಡಿ ಭಾಗಿಯಾಗಿದ್ದಾರೆ. ಅಭಿಷೇಕ್ ಮದುವೆಯಲ್ಲಿ ಈ ಜೋಡಿ ಕಾಣಿಸಿಕೊಂಡಿದ್ದು ಹೀಗೆ.

    ಅಂಬರೀಶ್ ಕುಟುಂಬದ ಜೊತೆ ನಟ ಯಶ್ ದಂಪತಿಗೆ ಒಳ್ಳೆಯ ಒಡನಾಟವಿದೆ. ಅಭಿಷೇಕ್ ಹಾಗೂ ಯಶ್ ಸಹೋದರರಂತೆ ಇದ್ದಾರೆ. ಇದೀಗ ಅಭಿ ಮದುವೆಯಲ್ಲಿ ಯಶ್ – ರಾಧಿಕಾ ಜೋಡಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ಇಬ್ಬರು ಮಸ್ತ್ ಆಗಿ ಮಿಂಚಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್

    ಅಭಿಷೇಕ್ ಹಾಗೂ ಅವಿವ ಮದುವೆ ಫೋಟೋ ಕೂಡ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅದರಲ್ಲೂ ಪುತ್ರ ಅಭಿಗೆ ನಟಿ ಸುಮಲತಾ ಮುದ್ದು ಮಾಡ್ತಿರುವ ಫೋಟೋ ಹೈಲೆಟ್ ಆಗುತ್ತಿದೆ.

    ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನ ತ್ರಿಪುರ ವಾಸಿನಿಯಲ್ಲಿ ಅಭಿಷೇಕ್ ಹಾಗೂ ಅವಿವ ದಂಪತಿಯ ಆರತಕ್ಷತೆ ಅದ್ದೂರಿಯಾಗಿ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ ಹಾಗೂ ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಐವತ್ತು ದಿನ ಪೂರೈಸಿದ ಶಿವಾಜಿ ಸುರತ್ಕಲ್ 2

  • ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್

    ಅಂಬಿ ಪುತ್ರನ ಅದ್ದೂರಿ ಕಲ್ಯಾಣ- ಮದುವೆಯ ಕಲರ್‌ಫುಲ್ ಫೋಟೋಸ್

    ಸ್ಯಾಂಡಲ್‌ವುಡ್‌ನ (Sandalwood) ಜ್ಯೂನಿಯರ್ ರೆಬಲ್ ಕಪಲ್ ಅಭಿಷೇಕ್- ಅವಿವ ಜೂನ್ 5ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 5 ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ‘ಅಭಿ’ವಾ (Abhiva) ಅದ್ದೂರಿ ಮದುವೆಗೆ ಚಿತ್ರರಂಗ ಸಾಕ್ಷಿಯಾಗಿದೆ. ಮದುವೆ ಸಂಭ್ರಮ ಹೇಗಿತ್ತು.? ಯಾರೆಲ್ಲಾ ಅಂಬರೀಶ್ ಪುತ್ರನ ಮದುವೆಗೆ ಹಾಜರಿ ಹಾಕಿದ್ರು ಎಂಬುದಕ್ಕೆ ಇಲ್ಲಿದೆ ಡಿಟೈಲ್ಸ್.

    ಅಂಬರೀಶ್ ಅವರ ಆಸೆಯಂತೆಯೇ ಪುತ್ರ ಅಭಿಷೇಕ್ ಮದುವೆ ನಡೆದಿದೆ. ಅಂಬಿ ಪುತ್ರನ ಮದುವೆ ಗೌಡರ ಸಂಪ್ರದಾಯದಂತೆ ಅದ್ಧೂರಿಯಾಗಿ ಜರುಗಿದೆ. ಕೆಲ ವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಭೇಟಿಯಾದ ಅಭಿ-ಅವಿವ, ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಸತತ 5 ವರ್ಷಗಳ ಪ್ರೇಮ ಬರಹಕ್ಕೆ ಇಂದು ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಗುರುಹಿರಿಯರ ಒಪ್ಪಿಗೆ ಮೇರೆಗೆ ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಅದ್ದೂರಿಯಾಗಿ ಅಭಿ-ಅವಿವ ಮದುವೆಯಾಗಿದ್ದಾರೆ.‌ ಇದನ್ನೂ ಓದಿ:ಐವತ್ತು ದಿನ ಪೂರೈಸಿದ ಶಿವಾಜಿ ಸುರತ್ಕಲ್ 2

    ಅಂಬರೀಶ್ ಅವರು ಇದ್ದಾಗಲೇ ಮಗನ ಪ್ರೀತಿ ಬಗ್ಗೆ ತಿಳಿದಿತ್ತು. ಅವಿವರನ್ನ (Aviva) ಅಂದೇ ಸೊಸೆ ಎಂದು ಅಂಬಿ ತೀರ್ಮಾನಿಸಿದ್ದರು. ಮಗನ ಮದುವೆ ಗೇಗಿರಬೇಕು ಎಂದು ಅಂಬರೀಶ್ ಇಷ್ಟಪಟ್ಟಿದ್ದರೋ ಅದೇ ರೀತಿ ಇಂದು ಅಭಿ-ಅವಿವ ಮದುವೆ ಜರುಗಿದೆ. ಪತಿಯ ಸ್ಥಾನದಲ್ಲಿ ಮುಂದೆ ನಿಂತು ಸುಮಲತಾ ಮದುವೆಯನ್ನ ಮಗನ ಮನದರಸಿ ಜೊತೆ ನಡೆಸಿಕೊಟ್ಟರು.

    ಮದುವೆಯಲ್ಲಿ ಅಭಿಷೇಕ್ (Abhishek Ambareesh) ಗೋಲ್ಡನ್ ಬಣ್ಣದ ಶರ್ಟ್ ಮತ್ತು ಪಂಚೆಯಲ್ಲಿ ಕಾಣಿಸಿಕೊಂಡರೆ, ವಧು ಅವಿವ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಕೂಡ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ. ವಿಶೇಷ ಅಂದರೆ ತಮ್ಮ ಮದುವೆಗೆ, ಅವಿವ ಅವರೇ ಉಡುಗೆಯನ್ನ ಡಿಸೈನ್ ಮಾಡಿದ್ದಾರೆ.

    ಅಂಬಿ ಪುತ್ರನ ಮದುವೆ ಚಿತ್ರರಂಗದ ದಂಡೇ ಬಂದಿತ್ತು. ಅಭಿ ಕಲ್ಯಾಣದಲ್ಲಿ ರಜನಿಕಾಂತ್, ಮೀನಾ, ನ್ಯಾಷನಲ್ ಸ್ಟಾರ್ ಯಶ್-ರಾಧಿಕಾ ಪಂಡಿತ್, ಸುದೀಪ್, ಪವಿತ್ರಾ ಲೋಕೇಶ್, ತೆಲುಗು ನಟ ನರೇಶ್, ಸಿಂಗರ್ ವಿಜಯ್ ಪ್ರಕಾಶ್ ದಂಪತಿ, ಗುರುಕಿರಣ್, ತಮಿಳು ನಟ ಮೋಹನ್ ಬಾಬು, ಕ್ರಿಕೆಟಿಗ ಅನಿಲ್ ಕುಂಬ್ಳೆ, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗಿಯಾಗಿದ್ದರು. ಇದೀಗ ಅಂಬಿ ಪುತ್ರನ ದಾಂಪತ್ಯ ಜೀವನಕ್ಕೆ ಅಭಿಮಾನಿಗಳು ಕೂಡ ಶುಭಕೋರುತ್ತಿದ್ದಾರೆ.

    ಇನ್ನೂ ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್‌ ನಟ ಶರ್ವಾನಂದ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್‌ ನಟ ಶರ್ವಾನಂದ್

    ತೆಲುಗು ನಟ ಶರ್ವಾನಂದ್- ರಕ್ಷಿತಾ ರೆಡ್ಡಿ (Rakshitha Reddy) ಅವರು ಜೂನ್ 3ರಂದು ರಾತ್ರಿ 11 ಗಂಟೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬದಸ್ಥರ ಸಮ್ಮುಖದಲ್ಲಿ ಶರ್ವಾನಂದ್ (Actor sharwanand) ಅವರು ರಕ್ಷಿತಾ ಜೊತೆ ಸಪ್ತಪದಿ ತುಳಿದರು. ನಟನ ಮದುವೆ ಸಂಭ್ರಮದಲ್ಲಿ ನಟ ರಾಮ್‌ಚರಣ್ (Ramcharan), ಸಿದ್ಧಾರ್ಥ್, ನಿರ್ಮಾಪಕ ವಂಶಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಜನವರಿ 26ರಂದು ಶರ್ವಾನಂದ್- ರಕ್ಷಿತಾ ರೆಡ್ಡಿ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೊಂದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, ಇಂಜಿನಿಯರ್ ರಕ್ಷಿತಾ ಜೊತೆ ನಟ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಜೂನ್ 3ರ ರಾತ್ರಿ 11ಕ್ಕೆ ಸಂಪ್ರದಾಯ ಬದ್ಧವಾಗಿ ಶರ್ವಾನಂದ್ ಜೋಡಿ ಮದುವೆಯಾಗಿದ್ದಾರೆ. ಜೈಪುರದ (Jaipur) ಲೀಲಾ ಪ್ಯಾಲೇಸ್‌ನಲ್ಲಿ ಈ ಅದ್ದೂರಿ ಮದುವೆ ನಡೆದಿದೆ.

    ನಟ ಶರ್ವಾನಂದ್ ಲೈಟ್ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಸದ್ಯ ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಅಭಿಷೇಕ್ ಮದುವೆಗೆ ಬಂದು ಶುಭ ಹಾರೈಸಿದ ರಜನಿಕಾಂತ್

    ನಟ ಶರ್ವಾನಂದ್ ಮದುವೆಗೆ ರಾಮ್‌ಚರಣ್, ಸಿದ್ಧಾರ್ಥ್ ಸೇರಿದಂತೆ ಸಿನಿಮಾ ತಾರೆಯರು ಮತ್ತು ರಾಜಕೀಯ ರಂಗದ ಗಣ್ಯರು ಭಾಗವಹಿಸಿ, ಹಾರೈಸಿದ್ದಾರೆ. ನವಜೋಡಿಗೆ ಅಭಿಮಾನಿಗಳು ಕೂಡ ಶುಭಕೋರಿದ್ದಾರೆ.

  • ಜೂನ್ 5ಕ್ಕೆ ಅಂಬಿ ಪುತ್ರನ ಮದುವೆ- ಅವಿವ ಜೊತೆ ಅಭಿ ಕಲ್ಯಾಣ

    ಜೂನ್ 5ಕ್ಕೆ ಅಂಬಿ ಪುತ್ರನ ಮದುವೆ- ಅವಿವ ಜೊತೆ ಅಭಿ ಕಲ್ಯಾಣ

    ಸ್ಯಾಂಡಲ್‌ವುಡ್‌ನಲ್ಲಿ ಅಂಬಿ ಪುತ್ರನ ಮದುವೆ ಸಂಭ್ರಮ ಮನೆ ಮಾಡಿದೆ. ಬಹುಕಾಲದ ಗೆಳತಿ ಜೊತೆ ಮದುವೆಯೆಂಬ ಮುದ್ರೆ ಒತ್ತಲು ಅಭಿಷೇಕ್ ಅಂಬರೀಶ್ (Abhishek Ambareesh) ರೆಡಿಯಾಗಿದ್ದಾರೆ. ಅವಿವ ಬಿಡಪ (Aviva Bidapa) ಜೊತೆ ಜೂನ್ 5ಕ್ಕೆ ಹಸೆಮಣೆ (Wedding) ಏರಲಿದ್ದಾರೆ.

    ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ. ಈಗಾಗಲೇ ಹಳದಿ ಶಾಸ್ತ್ರ, ವರಪೂಜೆ, ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳನ್ನು ಅಂಬಿ ಮನೆಯಲ್ಲೇ ನೆರವೇರಿಸಲಾಗಿದೆ. ಭಾನುವಾರ (ಜೂನ್ 4) ಸಂಜೆ ಸಂಗೀತ ಕಾರ್ಯಕ್ರಮ ನಡೆಯಲಿದೆ.

    ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.

    ಈಗಾಗಲೇ ಹಳದಿ ಶಾಸ್ತ್ರ, ಮೆಹಂದಿ ಶಾಸ್ತ್ರದಲ್ಲಿ ಹೊಸ ಜೋಡಿ ಮಿಂಚಿರುವ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವಿವ ಡಿಸೈನ್ ಮಾಡಿರುವ ಧರಿಸಿನಲ್ಲಿ ಅಭಿ-ಅವಿವ ಹೇಗೆ ಕಾಣುತ್ತಾರೆ? ಮದುವೆ ಲುಕ್ ಹೇಗಿರಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಒಟ್ನಲ್ಲಿ ಅಂಬಿ ಪುತ್ರನಿಗೆ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.

  • ಅಭಿಷೇಕ್ ಅಂಗೈಯಲ್ಲಿ ಅರಳಿದ ಭಾವಿ ಪತ್ನಿ ಅವಿವಾ

    ಅಭಿಷೇಕ್ ಅಂಗೈಯಲ್ಲಿ ಅರಳಿದ ಭಾವಿ ಪತ್ನಿ ಅವಿವಾ

    ನಿನ್ನೆ  ಅರಿಶಿನ ಶಾಸ್ತ್ರ ಮುಗಿಸಿರುವ ಅಭಿಷೇಕ್ ಅಂಬರೀಶ್  (Abhishek Ambareesh)ಹಾಗೂ ಅವಿವಾ, ಇಂದು ಮೆಹಂದಿ (Mehndi) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಅಂಗೈಯಲ್ಲಿ ರೆಬಲ್, ಸುಮಾ, ಅವಿವಾ ಎಂದು ಮಹೆಂದಿಯಲ್ಲಿ ಅಭಿಷೇಕ್ ಬರೆಯಿಸಿಕೊಂಡಿದ್ದಾರೆ. ಅವಿವಾ ಅಂಗೈಯಲ್ಲಿ ಚಿತ್ತಾರ ಮೂಡಿದ್ದರೆ, ಅಭಿಷೇಕ್ ಕೈಯಲ್ಲಿ ಅಪ್ಪ ಅಮ್ಮ ಮತ್ತು ಭಾವಿ ಪತ್ನಿಯ ಹೆಸರು ಇದೆ.

    ಅಭಿಷೇಕ್ ಅಂಬರೀಶ್- ಅವಿವ ಬಿಡಪ (Aviva Bidapa) ಜೋಡಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸಿ, ಇದೀಗ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಜೂನ್ 5ರಂದು (ಸೋಮವಾರ) ಅದ್ದೂರಿಯಾಗಿ ಮದುವೆ (Wedding) ಕಾರ್ಯಕ್ರಮ ಜರುಗಲಿದೆ. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ. ಅಭಿಷೇಕ್- ಅವಿವ ವಿವಾಹದ ಆಮಂತ್ರಣ ಪತ್ರ ವೈರಲ್ ಆಗಿದೆ. ಸದ್ಯ ವೈಟ್ ಬಣ್ಣದ ಉಡುಗೆಯಲ್ಲಿ ಅಭಿಷೇಕ್ ಅರಿಶಿನ ಶಾಸ್ತ್ರದಲ್ಲಿ (Arishina Shastra) ಮಿಂಚಿದ್ದಾರೆ. ಮನೆ ಕೂಡ ಅದ್ದೂರಿಯಾಗಿ ಅಲಂಕರಿಸಲಾಗಿದೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ಇನ್ನೂ 2022ರ ಡಿಸೆಂಬರ್ 11ರಂದು ಅಭಿಷೇಕ್ ಹಾಗೂ ಅವಿವ ನಿಶ್ಚಿತಾರ್ಥ ನೆರವೇರಿತು. ಕುಟುಂಬದವರು, ಆಪ್ತರು, ಗಣ್ಯರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿತ್ತು. ಈಗ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಜೂನ್ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ.

     

    ಸಿನಿಮಾ- ರಾಜಕೀಯ (Politics) ಎರಡೂ ಕ್ಷೇತ್ರದ ಗಣ್ಯರು ಅಭಿಷೇಕ್- ಅವಿವ ಆರತಕ್ಷತೆಗೆ ಬರಲಿದ್ದಾರೆ. ಮದುವೆಗೆ ಆಪ್ತ ಬಳಗದವರಿಗಷ್ಟೇ ಆಹ್ವಾನ ನೀಡಲಾಗಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಹೊಸ ಬಾಳಿಗೆ ಕಾಲಿಡುತ್ತಿರುವ ಹೊಸ ಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • ಅಮಿತಾಭ್ ಮದುವೆಗೆ 50 ವರ್ಷ : ಶುಭ ಹಾರೈಸಿದ ಪುತ್ರಿ ಶ್ವೇತಾ ಬಚ್ಚನ್

    ಅಮಿತಾಭ್ ಮದುವೆಗೆ 50 ವರ್ಷ : ಶುಭ ಹಾರೈಸಿದ ಪುತ್ರಿ ಶ್ವೇತಾ ಬಚ್ಚನ್

    ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಮದುವೆಯಾಗಿ ಇಂದಿಗೆ 50 ವರ್ಷಗಳು ತುಂಬಿವೆ. ಈ ಸಂದರ್ಭವನ್ನು ಅವರು ವಿಶೇಷವಾಗಿ ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. ನಿನ್ನೆ ಮಧ್ಯರಾತ್ರಿಯೇ ಬ್ಲಾಗ್ ನಲ್ಲಿ ಬರೆದುಕೊಂಡಿರುವ ಅಮಿತಾಭ್, ಇನ್ನೂ ಕೆಲವೇ ಹೊತ್ತಿನಲ್ಲಿ ಜೂನ್ 3ನೇ ತಾರೀಖು ಬರುತ್ತದೆ. ನಾವಿಬ್ಬರೂ ಮದುವೆಯಾಗಿ (Wedding) ಐವತ್ತು ವರ್ಷ ತುಂಬುತ್ತದೆ ಎಂದು ಪತ್ನಿಗೆ ಅವರು ನೆನಪಿಸಿದ್ದಾರೆ.

    ಜಯಾ ಬಚ್ಚನ್ (Jaya Bachchan) ಅವರನ್ನು ಅಮಿತಾಭ್ ಮದುವೆಯಾಗಿ ಐವತ್ತು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಪುತ್ರಿ ಶ್ವೇತಾ ಬಚ್ಚನ್ (Shweta Bachchan) ಶುಭ ಹಾರೈಸಿದ್ದಾರೆ.  ಅಪ್ಪ ಅಮ್ಮನ ದಾಂಪತ್ಯಕ್ಕೆ ಸುವರ್ಣ ಮಹೋತ್ಸವ. ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುತ್ತೇನೆ. ನಿಮ್ಮ ಸುದೀರ್ಘ ದಾಂಪತ್ಯದ ಗುಟ್ಟೇನು ಎಂದು ಅಪ್ಪನನ್ನು ಕೇಳಿದ್ದೆ. ಅವರು ಅಮ್ಮನನ್ನು ನೆನಪಿಸಿಕೊಂಡಿದ್ದರು ಎಂದು ಅಪ್ಪನ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದಾರೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ದಾಂಪತ್ಯಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಮತ್ತಷ್ಟು ಹಾರೈಕೆ, ಪ್ರೀತಿಯನ್ನು ಬಯಸಿರುವ ಅಮಿತಾಭ್, ಮುಂದೆ ಬರಲಿರುವ, ಈಗ ಬಂದಿರುವ ಹಾರೈಕೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಬಚ್ಚನ್ ಕುಟುಂಬವು ಈ ದಿನವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದೆ.