Tag: wedding

  • ಮದುವೆ ಬಗ್ಗೆ ಕೊನೆಗೂ ಗುಟ್ಟು ಬಿಟ್ಟು ಕೊಟ್ಟ ರೂಪೇಶ್ ಶೆಟ್ಟಿ

    ಮದುವೆ ಬಗ್ಗೆ ಕೊನೆಗೂ ಗುಟ್ಟು ಬಿಟ್ಟು ಕೊಟ್ಟ ರೂಪೇಶ್ ಶೆಟ್ಟಿ

    ತುಳುನಾಡಿನ ಕುವರ ರೂಪೇಶ್ ಶೆಟ್ಟಿ (Roopesh Shetty) ಅವರು ‘ಸರ್ಕಸ್’ (Circus) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ‘ಸರ್ಕಸ್’ ಚಿತ್ರ ಸೂಪರ್ ಹಿಟ್ ಆದ ಬೆನ್ನಲ್ಲೇ ಮದುವೆ ಬಗ್ಗೆ ಸಿಹಿಸುದ್ದಿ ನೀಡಿದ್ದಾರೆ. ಮದುವೆ (Wedding) ಯಾವಾಗ ಎಂಬ ಪ್ರಶ್ನೆಗೆ ನಟ ರೂಪೇಶ್‌ ಶೆಟ್ಟಿ ಉತ್ತರಿಸಿದ್ದಾರೆ.

    ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಟಿವಿ ಪರದೆಗೆ ಲಗ್ಗೆಯಿಟ್ಟ ರೂಪೇಶ್ ಶೆಟ್ಟಿ ಅವರಿಗೆ ಇದೀಗ ಅಪಾರ ಅಭಿಮಾನಿಗಳಿದ್ದಾರೆ. ಬಿಗ್ ಬಾಸ್ ವಿನ್ನರ್ ಆಗಿ ಗುರುತಿಸಿಕೊಂಡ ಮೇಲೆ ರೂಪೇಶ್‌ಗೆ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿದೆ. ತುಳು ಸಿನಿಮಾಗಳು ಜೊತೆ ಕನ್ನಡ ಚಿತ್ರರಂಗದಿಂದ ಕೂಡ ಒಳ್ಳೆಯ ಆಫರ್ಸ್‌ ಅರಸಿ ಬರುತ್ತಿದೆ.ಇದನ್ನೂ ಓದಿ:ಟೋಬಿ ನನ್ನ ಬಿಗ್ ಬಜೆಟ್ ಸಿನಿಮಾ : ರಾಜ್ ಬಿ ಶೆಟ್ಟಿ

    ತಾವೇ ನಟಿಸಿ, ನಿರ್ದೇಶಿಸಿರುವ ‘ಸರ್ಕಸ್’ ಸಿನಿಮಾಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಬಿಗ್ ಬಾಸ್ ಬಳಿಕ ‘ಸರ್ಕಸ್’ ಚಿತ್ರವು ಕರಾವಳಿ ಭಾಗದಲ್ಲಿ ಸಖತ್ ಕಲೆಕ್ಷನ್ ಮಾಡುತ್ತಿದೆ. ರೂಪೇಶ್ ಶೆಟ್ಟಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಮೊನ್ನೆಯಷ್ಟೇ ಸೆಲೆಬ್ರಿಟಿ ಪ್ರಿಮಿಯರ್ ಕೂಡ ಆಯೋಜಿಸಿದ್ದರು. ಬಿಗ್ ಬಾಸ್ ಮನೆ ಮಂದಿ ಜೊತೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿ, ಸರ್ಕಸ್ ಚಿತ್ರದ ಬಗ್ಗೆ ಭಾರಿ ಮೆಚ್ಚುಗೆಯನ್ನ ಸೂಚಿಸಿದ್ದರು. ಈ ವೇಳೆ ರೂಪೇಶ್ ಶೆಟ್ಟಿ ಅವರು, ತಮ್ಮ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಸಿಂಗಲ್ ಆಗಿದ್ದೀರಾ, ಯಾವಾಗ ಮಿಂಗಲ್ ಆಗ್ತೀರಾ.? ಎಂದು ರೂಪೇಶ್ ಶೆಟ್ಟಿಗೆ ಪ್ರಶ್ನೆಯೊಂದು ಎದುರಾಗಿದೆ. ಬಿಗ್ ಬಾಸ್ ಮುಗಿದ ಮೇಲೆ ಕರ್ನಾಟಕದ ಜನತೆ ಕೂಡ ನನ್ನನ್ನು ಗುರುತಿಸಿ ಮಾತನಾಡಿಸುತ್ತಿದ್ದಾರೆ. ಕನ್ನಡ ಸಿನಿಮಾ ಮಾಡಬೇಕು ಅಂತಾ ಆಸೆ ಇದೆ. ಬಿಗ್ ಬಾಸ್‌ಗೆ ಬಂದರೆ ನನಗೆ ಹೆಲ್ಪ್ ಆಗುತ್ತೆ ಅಂತಲೇ ನಾನು ಬಂದಿದ್ದು. ಬಿಗ್ ಬಾಸ್ ವಿನ್ ಆದಮೇಲೆ ಮದುವೆಗೆ ಟೈಮ್ ಕೊಟ್ರೆ, ನನ್ನ ನಿಜವಾದ ಸಿನಿಮಾ ಉದ್ದೇಶ ಏನಿತ್ತು ಅದು ಕಂಪ್ಲಿಟ್ ಆಗಲ್ಲ.

    ಇನ್ನೂ ಎರಡು ವರ್ಷ, ಕೊರಗಜ್ಜನ ದಯೆಯಿಂದ ಬಿಗ್ ಬಾಸ್‌ನಿಂದ ಒಳ್ಳೆಯ ಬ್ರೇಕ್ ಸಿಕ್ಕಿದೆ. ಹಾಗಾಗಿ ಒಳ್ಳೆಯ ಕನ್ನಡ ಮತ್ತು ತುಳು ಸಿನಿಮಾಗಳನ್ನ ಮಾಡಬೇಕು ಅದೇ ನನ್ನ ಗೋಲ್. ಇನ್ನೂ 2 ವರ್ಷ ಕೆಲಸ ಅಷ್ಟೇ ನನ್ನ ಪ್ರಾಮುಖ್ಯತೆ. ಕೆಲಸ ಅಷ್ಟೇ ನನ್ನ ಗರ್ಲ್‌ಫ್ರೆಂಡ್ ಎಂದು ರೂಪೇಶ್ ಶೆಟ್ಟಿ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ ಮದುವೆ ಅಂತೆ ಕಂತೆಗೆ ನಟ ಬ್ರೇಕ್ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಾನ್ಯ ಅಯ್ಯರ್ (Saanya Iyer) ಜೊತೆ ಸ್ನೇಹ ಸಲಿಗೆ ತುಸು ಜಾಸ್ತಿಯೇ ಇತ್ತು. ಹಾಗಾಗಿ ಸಾನ್ಯ ಜೊತೆ ಡೇಟ್ ಮಾಡ್ತಿದ್ದಾರಾ.? ಮುಂದೆ ಅವರನ್ನೇ ಮದುವೆ (Wedding) ಆಗುತ್ತಾರಾ ಎಂದು ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ

    ಸ್ಯಾಂಡಲ್‌ವುಡ್‌ನ ‘ಜೋಶ್’ (Josh) ಹೀರೋ ರಾಕೇಶ್ ಅಡಿಗ (Rakesh Adiga) ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೇಲೆ ಅವರ ಲಕ್ಕೂ ಲುಕ್ಕೂ ಎರಡು ಬದಲಾಗಿದೆ. ದೊಡ್ಮನೆಯಿಂದ ಹೊರ ಬಂದ ಮೇಲೆ ರಾಕಿ ಏನ್ಮಾಡ್ತಿದ್ದಾರೆ. ಅಮೂಲ್ಯ ಗೌಡ (Amulya Gowda) ಜೊತೆಗಿನ ಮದುವೆ (Wedding) ರಾಕಿ ಹೇಳೋದೇನು.? ಸ್ವತಃ ರಾಕೇಶ್ ಅಡಿಗ ಅವರೇ ಉತ್ತರಿಸಿದ್ದಾರೆ.

    ದೊಡ್ಮನೆಯಿಂದ ಹೊರ ಬಂದ ಮೇಲೆ ರಾಕೇಶ್ ಅವರು ಸಿನಿಮಾ ಜೊತೆಗೆ ತಮ್ಮ ಯೂಟ್ಯೂಬ್‌ಗೆ ಮೆಡಿಟೇಶನ್ ಸೇರಿದಂತೆ ಹೊಸ ಬಗ್ಗೆ ವಿಚಾರಗಳನ್ನ ಹೇಳಲು ತೆರೆಮರೆಯಲ್ಲಿ ಕೆಲಸ ಮಾಡ್ತಿದ್ದಾರೆ. ತಮ್ಮ ನಿರ್ದೇಶನದ ಜೊತೆ ಹೊಸ ಪ್ರಾಜೆಕ್ಟ್ಗಳನ್ನ ರಾಕೇಶ್ ಒಪ್ಪಿಕೊಂಡಿದ್ದಾರೆ. ಜುಲೈನಲ್ಲಿ `ಜೋಶ್’ ನಟನ ಚಿತ್ರದ ಬಗ್ಗೆ ಗುಡ್ ನ್ಯೂಸ್ ಸಿಗಲಿದೆ.

    ಕಳೆದ ಬಿಗ್ ಬಾಸ್ ಮನೆಯಲ್ಲಿ (Bigg Boss Kannada) ರಾಕಿ- ಅಮ್ಮು ಜೋಡಿ ನೋಡುಗರಿಗೆ ಮೋಡಿ ಮಾಡಿತ್ತು. ಇವರಿಬ್ಬರ ನಡುವೆ ಏನೋ ಇದೆ ಅನ್ನೋರಿಗೆ ರಾಕಿ ಉತ್ತರ ನೀಡಿದ್ದಾರೆ. ಹೌದಾ..? ಮುಂದೆ ರಾಕೇಶ್, ಅಮೂಲ್ಯನ ಮದುವೆಯಾಗುತ್ತಾರಾ (Wedding) ಎಂಬ ಪ್ರಶ್ನೆಗೆ ರಾಕಿ ನೇರ ಉತ್ತರ ನೀಡಿದ್ದಾರೆ. ಇಲ್ಲಾ ನಮ್ಮ ನಡುವೆ ಅಂತಹದ್ದೂ ಏನಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಗುಂಟೂರು ಖಾರ ಸವಿಯಲು ಬರುತ್ತಿದ್ದಾರೆ ರಮ್ಯಾ ಕೃಷ್ಣ

    ನಾವಿಬ್ಬರು ಒಳ್ಳೆಯ ಫ್ರೆಂಡ್ಸ್, ಬಿಗ್ ಬಾಸ್ ಮನೆಯಲ್ಲಿದ್ದಾಗ ನಮ್ಮಿಬ್ಬರ ಪ್ಯಾನ್ ಪೇಜ್ ಕೂಡ ಆಗುತ್ತೆ. ಜೋಡಿ ಅಂತಾನೂ ಟ್ರೋಲ್ ಮಾಡ್ತಾರೆ ಅಂತಾ ಒಂದು % ಐಡಿಯಾ ಇರಲ್ಲಿಲ್ಲ. ನಮ್ಮನ್ನ ನೋಡಿಯಾ ಇವರು ಮದುವೆಯಾದ್ರೆ ಚೆನ್ನಾಗಿರುತ್ತೆ ಅಂತಾ ಸಹಜವಾಗಿ ಅಭಿಮಾನಿಗಳಿಗೆ ಅನಿಸುತ್ತೆ ಆದರೆ ನಮಗೆ ಆ ಭಾವನೆ ಇಲ್ಲಾ. ನಮ್ಮ ಟ್ರೋಲ್‌ಗಳನ್ನ ನೋಡಿ ನಕ್ಕಿದ್ದೇವೆ. ಆದರೆ ಅಂತಹದ್ದೇನು ಇಲ್ಲಾ ಎಂದು ಅಮ್ಮು ಜೊತೆಗಿನ ಮದುವೆ ಬಗ್ಗೆ ಮಾತನಾಡಿದ್ದಾರೆ.

    ಸದ್ಯ ‘ಜೋಶ್ 2’ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳ ಮಾತುಕತೆ ನಡೆಯುತ್ತಿದೆ. ಹಾಗಾಗಿ ನನ್ನ ಸಂಪೂರ್ಣ ಗಮನ ಕೆಲಸದ ಮೇಲಿದೆ ಎಂದು ರಾಕೇಶ್ ಅಡಿಗ ಮಾತನಾಡಿದ್ದಾರೆ.

  • ಮದುವೆ ತಯಾರಿ ಹೇಗಿದೆ, ಯಾರೆಲ್ಲಾ ಸೆಲೆಬ್ರಿಟಿ ಭಾಗಿಯಾಗುತ್ತಾರೆ? ಪ್ರಥಮ್ ಹೇಳೋದೇನು

    ಮದುವೆ ತಯಾರಿ ಹೇಗಿದೆ, ಯಾರೆಲ್ಲಾ ಸೆಲೆಬ್ರಿಟಿ ಭಾಗಿಯಾಗುತ್ತಾರೆ? ಪ್ರಥಮ್ ಹೇಳೋದೇನು

    ಸ್ಯಾಂಡಲ್‌ವುಡ್ (Sandalwood) ನಟ ಒಳ್ಳೆ ಹುಡ್ಗ ಪ್ರಥಮ್ (Olle Huduga Pratham) ಅವರು ಸದ್ದಿಲ್ಲದೇ ಎಂಗೇಜ್ (Engage) ಆಗಿದ್ದಾರೆ. ಸದ್ಯದಲ್ಲೇ ಹಸೆಮಣೆ ಏರೋದಕ್ಕೆ ರೆಡಿಯಾಗಿದ್ದಾರೆ. ಯಾವುದೇ ಆಡಂಬರ ಇಲ್ಲದೇ ಮದುವೆ ಆಗುವುದಾಗಿ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಮದುವೆಯ ಮೆನು ಹೇಗಿರತ್ತೆ ಅಂತಾ ಪ್ರಥಮ್ ಬಾಯ್ಬಿಟ್ಟಿದ್ದಾರೆ. ಹಾಗೆಯೇ ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿ ಭಾಗಿಯಾಗುತ್ತಾರೆ ಎಮಬುದಕ್ಕೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ:ಕನಕದಾಸನಾಗಿ ಕಂಗೊಳಿಸಲಿದ್ದಾರೆ ರಿಯಲ್‌ ಸ್ಟಾರ್‌ ಉಪೇಂದ್ರ

    ಯಾವುದೇ ಆಡಂಬರ, ವೈಭವ ಇರುವುದಿಲ್ಲ. ನೀವೆಲ್ಲರೂ ಹೇಗೆ ಬದುಕುತ್ತಿದ್ದೀರೋ ನಾವು ಕೂಡ ಹಾಗೇ. ನನ್ನ ಕೈಹಿಡಿಯುವವರು ಮಾಧ್ಯಮ, ಸೋಷಿಯಲ್ ಮೀಡಿಯಾ, ಪಬ್ಲಿಸಿಟಿಯಿಂದ ತುಂಬಾ ದೂರ. ಸಿದ್ಧರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ಥರ ಅಂದುಕೊಳ್ಳಿ. ಮದುವೆ ಅವ್ರು ಹೇಗೇ ಮಾಡುತ್ತಾರೋ ಅವರಿಷ್ಟ. ನನಗೆ ದೇವಸ್ಥಾನದಲ್ಲಿ ಆಗುವ ಆಸೆ, ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ. ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್ ಬೀಗರ ಊಟ. ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್ ವೆಜ್ ಊಟ ಇದಾಗಿರಬಹುದು. ಇದಿಷ್ಟೇ ನನ್ನ ಮದುವೆಯ ಮೆನು ನೀವು ಹರಸಿ ಎಂದು ಪ್ರಥಮ್ ಮನವಿ ಮಾಡಿದ್ದಾರೆ.

    ಪ್ರಥಮ್, ಮಂಡ್ಯ ಮೂಲದ ಭಾನುಶ್ರೀ (Bhanushree) ವರಿಸಲಿದ್ದು, ಟ್ರೆಡಿಷನಲ್ ಫ್ಯಾಮಿಲಿಯ ಸಿಂಪಲ್ ಹುಡುಗಿಯನ್ನ ಪ್ರಥಮ್ ಮದುವೆಯಾಗುತ್ತಿದ್ದಾರೆ. ಕರ್ನಾಟಕದ ಆಳಿಯ ಇನ್ಮುಂದೆ ಮಂಡ್ಯದ ಆಳಿಯ. ಮಂಡ್ಯ ಮೂಲದ ಭಾನುಶ್ರೀ ಜೊತೆ ಪ್ರಥಮ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆ ಮಂಡ್ಯ ಪಕ್ಕದ ಹಳ್ಳಿಯಲ್ಲಿ ಎರಡೂ ಫ್ಯಾಮಿಲಿಯ ಹಿರಿಯರ ಸಮ್ಮುಖದಲ್ಲಿ ಸಿಂಪಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾನುಶ್ರೀ ಡಿಗ್ರಿ ಮುಗಿಸಿ ಡಬಲ್ ಡಿಗ್ರಿ ಮಾಡೋಕೆ ತಯಾರಿ ನಡೆಸುತ್ತಿದ್ದಾರೆ. ಪ್ರಥಮ್ ಹಳ್ಳಿ ಹುಡುಗಿಯನ್ನು ಮದುವೆ ಆಗ್ತೀನಿ ಅಂತ ಹೇಳುತ್ತಿದ್ದರು. ಆದರಂತೆಯೇ ಬಡ ಕುಟುಂಬದ ಹುಡುಗಿಯನ್ನು ಒಳ್ಳೆಯ ಹುಡುಗ ಪ್ರಥಮ್ ಮದುವೆ ಆಗುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ ಹಂಚಿಕೊಂಡಿದ್ದಾರೆ.

    ಸಿನಿಮಾ ಮಂದಿಯಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರಿಗೆ ಹೇಳಿದ್ದೇನೆ. ನನ್ನಾಕೆಗೆ ಧ್ರುವ ಸರ್ಜಾ ಅಂದ್ರೆ ಬಲು ಇಷ್ಟ. ಶಿವಣ್ಣ (Shivarajkumar) ಅಂದ್ರೂ ತುಂಬಾ ಗೌರವ ಇದೆ. ಅವರು ನಮ್ಮ ಮದುವೆಗೆ ಬರಬೇಕು ಅನ್ನೋದು ನನ್ನಾಕೆಯ ಆಸೆ ಆಗಿದೆ. ಅವರನ್ನ ಇನ್ವೈಟ್ ಮಾಡೋ ಪ್ಲಾನ್ ಇದೆ. ನಟ ಯಶ್(Yash), ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಮದುವೆಗೆ ಆಮಂತ್ರಣ ನೀಡುತ್ತೇನೆ ಎಂದು ಮಾತನಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗುತ್ತಿದೆ. ಡೇಟ್ ಇನ್ನೂ ಫಿಕ್ಸ್ ಆಗಿಲ್ಲ. ಆದ್ಮೇಲೆ ಸರಳವಾಗಿಯೇ ನಮ್ಮ ವಿವಾಹ ನೆರವೇರುತ್ತದೆ ಎಂದು ಪ್ರಥಮ್ ತಿಳಿಸಿದ್ದಾರೆ.

  • ವರುಣ್, ಲಾವಣ್ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿ ಗೈರು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ವರುಣ್, ಲಾವಣ್ಯ ನಿಶ್ಚಿತಾರ್ಥದಲ್ಲಿ ನಿಹಾರಿಕಾ ಪತಿ ಗೈರು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

    ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಜೂನ್ 9ಕ್ಕೆ ವರುಣ್ ತೇಜ್- ಲಾವಣ್ಯ(Lavanya) ಎಂಗೇಜ್‌ಮೆಂಟ್ ಅದ್ದೂರಿಯಾಗಿ ನಡೆಯಿತು. ಕುಟುಂಬಸ್ಥರು, ಆಪ್ತರಿಗಷ್ಟೇ ಇದ್ದ ಆಹ್ವಾನದಲ್ಲಿ ನಟ ಚಿರಂಜೀವಿ ಅವರ ಅಳಿಯ ಚೈತನ್ಯ ಜಿವಿ ಗೈರಾಗಿದ್ದು, ನಿಹಾರಿಕಾ(Niharika) ಡಿವೋರ್ಸ್ (Divorce) ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

    ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2016ರಲ್ಲಿ ಬಳಿಕ 2017ರಲ್ಲಿ ಇಬ್ಬರು ಮಿಸ್ಟರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇದನ್ನೂ ಓದಿ:ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

    ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದಾರೆ. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ಅಂತರಿಕ್ಷಂ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಎಂಗೇಜ್‌ಮೆಂಟ್ ಆಗುವವರೆಗೂ ಪ್ರೀತಿಯ ಬಗ್ಗೆ ಎಲ್ಲೂ ಈ ಜೋಡಿ ರಿಯಾಕ್ಟ್ ಮಾಡಿರಲಿಲ್ಲ. ಇದೀಗ ವರುಣ್-ಲಾವಣ್ಯ ಅವರ ಎಂಗೇಜ್‌ಮೆಂಟ್‌ನಲ್ಲಿ ನಿಹಾರಿಕಾ ಪತಿ ಚೈತನ್ಯ ಗೈರಾಗಿರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ಈ ದಿನಕ್ಕಾಗಿ ಕಾಯುತ್ತಿದ್ದೆ, ನನ್ನ ಕುಟುಂಬಕ್ಕೆ ಸ್ವಾಗತ ಅಂತಾ ಸಹೋದರ ವರುಣ್ (Varun Tej) ಮತ್ತು ಭಾವಿ ಅತ್ತಿಗೆ ಜೊತೆ ಖುಷಿಯಿಂದ ಪೋಸ್ ಕೊಟ್ಟಿರುವ ಫೋಟೋವನ್ನ ನಟಿ ನಿಹಾರಿಕಾ ಪೋಸ್ಟ್‌ ಮಾಡಿದ್ದಾರೆ. ಈ ಫೋಟೋ ಅಪ್‌ಲೋಡ್ ಮಾಡ್ತಿದ್ದಂತೆ ಚೈತನ್ಯ ಎಲ್ಲಿ ಎಂದು ನಟಿ ಕಾಮೆಂಟ್ಸ್‌ಗಳ ಮೂಲಕ ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ.

    ವರುಣ್ ನಿಶ್ಚಿತಾರ್ಥದ ಸಂಭ್ರಮದಲ್ಲಿ ಚೈತನ್ಯ ಮಿಸ್ಸಿಂಗ್ ಆಗಿರೋದು ನಿಹಾರಿಕಾ ಜೊತೆಗಿನ ಡಿವೋರ್ಸ್ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಮೂಲಗಳ ಪ್ರಕಾರ, ನಿಹಾರಿಕಾ- ಚೈತನ್ಯ (Chaitanya) ಡಿವೋರ್ಸ್ ಪಡೆದಿರುವುದು ನಿಜ. ಹಾಗಾಗಿ ಇದೀಗ ನಿಹಾರಿಕಾ, ಆಕ್ಟಿಂಗ್-ನಿರ್ಮಾಣ ಅಂತಾ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಕುಟುಂಬದಲ್ಲಿ ಮಕ್ಕಳಾದ ಶ್ರೀಜಾ, ನಿಹಾರಿಕಾ ಡಿವೋರ್ಸ್ ವಿಚಾರ ಸದ್ಯ ಟಾಲಿವುಡ್ ಹಾಟ್ ಟಾಪಿಕ್ ಆಗಿದೆ.

  • ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

    ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು

    ಳೆದ ವರ್ಷ ದೇಶಾದ್ಯಂತ ಚರ್ಚೆ ಹುಟ್ಟುಹಾಕಿದ್ದ ಕ್ಷಮಾ ಬಿಂದು(Kshama Bindu) ಅವರು ಮೊದಲ ವಿವಾಹ ವಾರ್ಷಿಕೋತ್ಸವದ (Anniversary) ಸಂಭ್ರಮದಲ್ಲಿದ್ದಾರೆ. ತನ್ನನ್ನು ತಾನೇ ಮದುವೆಯಾಗುವ ಮೂಲಕ ಸಂಚಲನ ಸೃಷ್ಟಿಸಿದ್ದ ಕ್ಷಮಾ, ಈಗ ಮೊದಲ ವರ್ಷ ವೈವಾಹಿಕ (Wedding) ಜೀವನ ಪೂರ್ಣಗೊಳಿಸಿದ ಸಂಭ್ರಮದಲ್ಲಿದ್ದಾರೆ. ಈ ಕುರಿತ ಪೋಸ್ಟ್ ಎಲ್ಲೆಡೆ ಸದ್ದು ಮಾಡುತ್ತಿದೆ.

    ಸಾಂಪ್ರದಾಯಿಕವಾಗಿ ನಡೆದ ಸಮಾರಂಭದಲ್ಲಿ ತನ್ನನ್ನು ತಾನೇ ಸ್ವಯಂ ವಿವಾಹವಾಗುವ(Sologamy) ಮೂಲಕ ಸುದ್ದಿಯಲ್ಲಿದ್ದ ಗುಜರಾತ್‌ನ ವಡೋದರಾದ 24 ವರ್ಷದ ಮಹಿಳೆ ಕ್ಷಮಾ ಬಿಂದು ಕಳೆದ ವರ್ಷ ಜೂನ್ 8ರಂದು ‘ಸ್ವಯಂ’ ವಿವಾಹವಾಗಿದ್ರು. ಇದರಿಂದ ಸಾಕಷ್ಟು ಟೀಕೆಗೆ ಈಕೆ ಗುರಿಯಾಗಿದ್ರು. ಅನಗತ್ಯ ಪ್ರಚಾರಕ್ಕೆ ಹೀಗೆ ಮಾಡ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಆದರೆ ಕೆಲವರು, ಇದು ಆಕೆಯ ಜೀವನ ಅವರ ಖುಷಿ ಮುಖ್ಯ ಎಂದು ಬೆಂಬಲಿಸಿದ್ದರು.

    ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವ ಕ್ಷಮಾ ಸೊಲೊಗಮಿ ಪದ್ದತಿಯ ನಿರ್ಧಾರವು ಅನೇಕರ ಹುಬ್ಬೇರಿಸುವಂತೆ ಮಾಡಿತ್ತು. ಅಂದು ಆಕೆಯ ಮದುವೆಯಲ್ಲಿ ಸ್ನೇಹಿತರು, ಆಪ್ತರು ಭಾಗಿಯಾಗಿದ್ದರು. ಈ ಮೂಲಕ ಕ್ಷಮಾ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದರು. ಸದ್ಯ ಒಂದು ವರ್ಷ ಸ್ವಯಂ ವಿವಾಹ ಪೂರೈಸಿರುವ ಬಗ್ಗೆ ಕ್ಷಮಾ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಹಾಟ್ ಬ್ಯೂಟಿ ಲಕ್ಷ್ಮಿ ರೈ: ಬೆಳಗಾವಿ ಸುಂದರಿಯ ಫೋಟೋ ವೈರಲ್

    ಕ್ಷಮಾ ಬಿಂದು ಮೊದಲ ವಿವಾಹ ವರ್ಷದ ವಾರ್ಷಿಕೋತ್ಸವದ ಪೋಸ್ಟ್ ನೋಡಿ, ನೆಟ್ಟಿಗರು ಶುಭಕೋರುತ್ತಿದ್ದಾರೆ. ಇನ್ನೂ ಈಕೆಯ ಡ್ರಾಮಾ ನಿಲ್ಲೋದಿಲ್ಲ ಎಂದು ಹಿಡಿಶಾಪ ಹಾಕ್ತಿದ್ದಾರೆ.

  • ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ತೆಲುಗು ಆಕ್ಟರ್ ಶರ್ವಾನಂದ್ (Sharwanand) ಅವರು ಜೂನ್ 3ರಂದು ರಕ್ಷಿತಾ ರೆಡ್ಡಿ (Rakshitha Reddy) ಜೊತೆ ಹೊಸ ಬಾಳಿಗೆ ಕಾಲಿಟ್ಟರು. ಜೈಪುರದ ಲೀಲಾ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಶರ್ವಾನಂದ್ ಮದುವೆಯಾದರು. ಇದೀಗ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಟನ ಆರತಕ್ಷತೆ ಜರುಗಿದೆ. ಈ ಸಂಭ್ರಮದಲ್ಲಿ ಸಿನಿ ತಾರೆಯರು ಭಾಗಿಯಾಗಿದ್ದಾರೆ.

    ಟಾಲಿವುಡ್ (Tollywood) ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ನಟ ಶರ್ವಾನಂದ್ ಸಂಚಲನ ಮೂಡಿಸಿದ್ದಾರೆ. ಜಾನೂ, ಮಹಾಸಮುದ್ರಂ, ಓಕೆ ಓಕಾ ಜೀವಿತಂ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಭಿನ್ನ ಕಥೆ, ವಿಭಿನ್ನ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

    ಜನವರಿ 26ರಂದು ಶರ್ವಾನಂದ್- ರಕ್ಷಿತಾ ರೆಡ್ಡಿ (Rakshitha Reddy) ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೊಂದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದ್ದು, ಇಂಜಿನಿಯರ್ ರಕ್ಷಿತಾ ಜೊತೆ ನಟ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಜೂನ್ 3ರ ರಾತ್ರಿ 11ಕ್ಕೆ ಸಂಪ್ರದಾಯ ಬದ್ಧವಾಗಿ ಶರ್ವಾನಂದ್ ಜೋಡಿ ಮದುವೆಯಾದರು. ನಟ ಶರ್ವಾನಂದ್ ಲೈಟ್ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದರು. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ

    ಜೈಪುರ ಲೀಲಾ ಪ್ಯಾಲೇಸ್‌ನಲ್ಲಿ ಮದುವೆಯಾಗಿದ್ದ ಶರ್ವಾನಂದ್ ಇದೀಗ ಹೈದರಾಬಾದ್‌ನಲ್ಲಿ ಚಿತ್ರರಂಗದ ಸ್ನೇಹಿತರಿಗೆ ಆಪ್ತರಿಗೆ ರಿಸೆಪ್ಷನ್‌ಗೆ ಆಹ್ವಾನ ನೀಡಿದ್ದರು. ಸೆಲೆಬ್ರಿಟಿಗಳ ದಂಡೇ ನಟನ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಳಿ ಬಣ್ಣದ ಸೂಟ್‌ನಲ್ಲಿ ಶರ್ವಾನಂದ್ ಕಾಣಿಸಿಕೊಂಡಿದ್ದರೆ, ಪತ್ನಿ ರಕ್ಷಿತಾ ಲೈಟ್ ಬಣ್ಣದ ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ಶರ್ವಾನಂದ್ ರೆಸೆಪ್ಷನ್ ಸಂಭ್ರಮದಲ್ಲಿ ರಾಮ್ ಚರಣ್ (Ram Charan) ದಂಪತಿ, ಬಾಲಯ್ಯ, ನಟ ವೆಂಕಟೇಶ್, ರಾಣಾ ದಗ್ಗುಭಾಟಿ, ಲಕ್ಷ್ಮಿ ಮಂಚು, ನಿಖಿಲ್ ಸಿದ್ಧಾರ್ಥ್, ನಟಿ ರೀತು ವರ್ಮಾ ಸೇರಿದಂತೆ ಹಲವು ಭಾಗಿಯಾಗಿ, ಶುಭಕೋರಿದರು.

  • ‘ಅಭಿವಾ’ ಜೋಡಿಗೆ ಶುಭಹಾರೈಸಿದ ನಟಿ ರಮ್ಯಾ

    ‘ಅಭಿವಾ’ ಜೋಡಿಗೆ ಶುಭಹಾರೈಸಿದ ನಟಿ ರಮ್ಯಾ

    ಅಂಬಿ ಪುತ್ರನ ಅಭಿಷೇಕ್- ಅವಿವಾ (Aviva) ಆರತಕ್ಷತೆ ಅದ್ದೂರಿಯಾಗಿ ನಡೆಯುತ್ತಿದೆ. ಸ್ಯಾಂಡಲ್‌ವುಡ್ ನಟ- ನಟಿಯರು ಪರಭಾಷೆಯ ಸ್ಟಾರ್ಸ್ ಸಾಕ್ಷಿಯಾಗುವ ಮೂಲಕ ನವಜೋಡಿಗೆ ಶುಭಕೋರುತ್ತಿದ್ದಾರೆ. ಸ್ಯಾಂಡಲ್‌ವುಡ್ ಪದ್ಮಾವತಿ ರಮ್ಯಾ(Ramya), ಅಭಿವಾ ಆರತಕ್ಷತೆಗೆ ಆಗಮಿಸಿ ವಿಶ್ ಮಾಡಿದ್ದಾರೆ.

    ಐದಾರು ವರ್ಷಗಳ ಪ್ರೀತಿಗೆ ಅಭಿವಾ ಜೂನ್ 5ಕ್ಕೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಜೂನ್‌ 7ರಂದು ಸಂಜೆ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಕಾರ್ಯಕ್ರಮ ನಡೆಯುತ್ತಿದೆ. ಅಭಿವಾ ಜೋಡಿ ಗೋಲ್ಡನ್ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ.

    ನವಜೋಡಿ ಅಭಿ-ಅವಿವಾಗೆ ರಿಸೆಪ್ಷನ್‌ಗೆ ನಟಿ ರಮ್ಯಾ ಆಗಮಿಸಿ ಶುಭಕೋರಿದ್ದರು. ಈ ವೇಳೆ ಮಾಧ್ಯಮಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಅಂಬರೀಶ್‌ (Ambareesh) ಅಂಕಲ್‌ನ ಮಿಸ್‌ ಮಾಡಿಕೊಳ್ತೀದ್ದೀನಿ, ಅಭಿ ಬಾಲ್ಯದಿಂದಲೂ ನೋಡ್ತಾ ಬಂದಿದ್ದೀನಿ. ಈಗ ಮದುವೆ ಆಗ್ತಿದ್ದಾರೆ. ಅವರ ಜೀವನ ಚೆನ್ನಾಗಿರಲಿ ಅಂತ ಹಾರೈಸ್ತಿನಿ ಎಂದು ಮನಸಾರೆ ನಟಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಅಭಿ-ಅವಿವಾ ಆರತಕ್ಷತೆ : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಗಮನ

    ಮಂಡ್ಯದಲ್ಲಿ ಜೂನ್ 16ರಂದು ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಅಂದು ಮಂಡ್ಯದಲ್ಲಿ 1 ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆಯಿದೆ.

  • ಅಭಿವಾ ರಿಸೆಪ್ಷನ್‌ಗೆ ಸಾಕ್ಷಿಯಾದ ಚಿತ್ರರಂಗ- ಯಾರೆಲ್ಲಾ ಸ್ಟಾರ್ಸ್ ಬಂದಿದ್ರು?

    ಅಭಿವಾ ರಿಸೆಪ್ಷನ್‌ಗೆ ಸಾಕ್ಷಿಯಾದ ಚಿತ್ರರಂಗ- ಯಾರೆಲ್ಲಾ ಸ್ಟಾರ್ಸ್ ಬಂದಿದ್ರು?

    ಅಂಬಿ ಪುತ್ರನ ಅಭಿಷೇಕ್- ಅವಿವಾ (Aviva Bidapa) ಆರತಕ್ಷತೆ (Reception) ಅದ್ದೂರಿಯಾಗಿ ನಡೆಯುತ್ತಿದೆ. ಸ್ಯಾಂಡಲ್‌ವುಡ್ (Sandalwood) ನಟ- ನಟಿಯರು ಪರಭಾಷಾ ಸ್ಟಾರ್ಸ್ ಸಾಕ್ಷಿಯಾಗುವ ಮೂಲಕ ನವಜೋಡಿಗೆ ಶುಭಕೋರುತ್ತಿದ್ದಾರೆ.‌ ಇದನ್ನೂ ಓದಿ:ಅಭಿ-ಅವಿವಾ ಆರತಕ್ಷತೆ : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಗಮನ

    ಐದಾರು ವರ್ಷಗಳ ಪ್ರೀತಿಗೆ ಅಭಿವಾ ಜೂನ್ 5ಕ್ಕೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಇದೀಗ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅದ್ದೂರಿಯಾಗಿ ರಿಸೆಪ್ಷನ್ ಕಾರ್ಯಕ್ರಮ ನಡೆಯುತ್ತಿದೆ. ಅಭಿವಾ ಜೋಡಿ ಗೋಲ್ಡನ್ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ:ಅಭಿ-ಅವಿವಾ ಆರತಕ್ಷತೆ : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಗಮನ

    ಅಭಿಷೇಕ್ ಅವಿವಾ ರಿಸೆಪ್ಷನ್‌ಗೆ ಕನ್ನಡದ ಹಿರಿಯ ನಟ ದೊಡ್ಡಣ್ಣ, ಮೈನಾ ನಿರ್ದೇಶಕ ನಾಗಶೇಖರ್, ರಾಘವೇಂದ್ರ ರಾಜಕುಮಾರ್, ಸೌತ್ ನಟ ಪ್ರಭು, ಬಿಗ್ ಬಾಸ್ ಖ್ಯಾತಿಯ ಸಾನ್ಯ ಅಯ್ಯರ್, ನಿರ್ದೇಶಕಿ ರೂಪಾ ಅಯ್ಯರ್, ಎಸ್.ಎಂ ಕೃಷ್ಣ, ಯದುವೀರ ಒಡೆಯರ್, ಸಚಿವ ಕೆ.ಜೆ ಜಾರ್ಜ್, ಮೆಗಾಸ್ಟಾರ್ ಚಿರಂಜೀವಿ ಕುಟುಂಬ, ನಟಿ ಆಶಿಕಾ ರಂಗನಾಥ್, ಬಾಲಿವುಡ್ ಶತ್ರುಘ್ನ ಸಿನ್ಹಾ, ಕ್ರೇಜಿಸ್ಟಾರ್ ರವಿಚಂದ್ರನ್, ಖುಷ್ಬೂ, ನೆನಪಿರಲಿ ಪ್ರೇಮ್‌, ಧನ್ವೀರ್‌ ಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

    ಮಂಡ್ಯದಲ್ಲಿ ಜೂನ್ 16ರಂದು ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಅಂದು ಮಂಡ್ಯದಲ್ಲಿ 1 ಲಕ್ಷಕ್ಕೂ ಅಧಿಕ ಜನ ಸೇರುವ ಸಾಧ್ಯತೆಯಿದೆ.

  • ಉದ್ಯಮಿ ಆಶಿಷ್ ಜೊತೆ ದಾಂಪತ್ಯ ಜೀವನಕ್ಕೆ ಸೋನಾಲಿ ಸೆಹಗಲ್

    ಉದ್ಯಮಿ ಆಶಿಷ್ ಜೊತೆ ದಾಂಪತ್ಯ ಜೀವನಕ್ಕೆ ಸೋನಾಲಿ ಸೆಹಗಲ್

    ‘ಪ್ಯಾರ್ ಕಾ ಪಂಚನಾಮ’ ನಾಯಕಿ ಸೋನಾಲಿ ಸೆಹಗಲ್ (Sonali Seygall) ಅವರು ಬಹುಕಾಲದ ಗೆಳೆಯ ಆಶಿಷ್ (Ashesh) ಜೊತೆ ಸೈಲೆಂಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಹೈಜಾಕ್, ಪ್ಯಾರ್ ಕಾ ಪಂಚನಾಮ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಸೋನಾಲಿ ಸೆಹಗಲ್ ನಟಿಸಿದ್ದಾರೆ. ಇದೀಗ ಬಹುಕಾಲದ ಗೆಳೆಯನ ಜೊತೆ ಜೂನ್ 7ಕ್ಕೆ ನಟಿ ಹಸೆಮಣೆ ಏರಿದ್ದಾರೆ. ಸಿಂಪಲ್ ಆಗಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿಯ ಮದುವೆಗೆ ಬಾಲಿವುಡ್‌ ನಟ ಕಾರ್ತಿಕ್‌ ಆರ್ಯನ್‌, ಲಕ್ಷ್ಮಿ ರೈ ಸೇರಿದಂತೆ ಹಲವರು ಭಾಗಿಯಾಗಿ ಶುಭಕೋರಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಉದ್ಯಮಿ ಆಶಿಷ್ ಎಲ್ ಸಜ್ನಾನಿ ಜೊತೆ ಸಾಕಷ್ಟು ವರ್ಷಗಳಿಂದ ಸೋನಾಲಿ ಡೇಟಿಂಗ್‌ನಲ್ಲಿದ್ರು. ಆದರೆ ಎಲ್ಲೂ ಈ ಬಗ್ಗೆ ಬಹಿರಂಗಪಡಿಸಿರಲಿಲ್ಲ. ಜೂನ್ 8ಕ್ಕೆ ಮುಂಬೈನಲ್ಲಿ ಅದ್ದೂರಿ ರಿಸೆಪ್ಷನ್ ಇದ್ದು, ಬಾಲಿವುಡ್‌ನ ಸ್ಟಾರ್ ನಟ-ನಟಿಯರು ಭಾಗಿಯಾಗಲಿದ್ದಾರೆ. ಮದುವೆಯಲ್ಲಿ ಸೋನಾಲಿ ಪಿಂಕ್‌ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ರೆ, ಆಶಿಷ್‌ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಈ ಹಿಂದೆ ನಟಿ ಕಾಜಲ್ ಅಗರ್‌ವಾಲ್ ಜೊತೆ ಆಶಿಷ್ ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಹೀಗೆ ಸಾಕಷ್ಟು ನಟಿಯರ ಜೊತೆ ಉದ್ಯಮಿ ಆಶಿಷ್ ಹೆಸರು ತಳುಕು ಹಾಕಿತ್ತು. ಈಗ ಸೋನಾಲಿ ಜೊತೆ ಹೊಸ ಬಾಳಿಗೆ ಆಶಿಷ್ ಕಾಲಿಟ್ಟಿದ್ದಾರೆ. ನವಜೋಡಿಗೆ ಸೋನಾಲಿ -ಆಶಿಷ್‌ಗೆ ಫ್ಯಾನ್ಸ್ ಶುಭಕೋರಿದ್ದಾರೆ.

  • ಅಭಿ-ಅವಿವಾ ಆರತಕ್ಷತೆ : ಅರಮನೆ ಮೈದಾನಕ್ಕೆ ಬಂದಿಳಿದ ನವ ಜೋಡಿ

    ಅಭಿ-ಅವಿವಾ ಆರತಕ್ಷತೆ : ಅರಮನೆ ಮೈದಾನಕ್ಕೆ ಬಂದಿಳಿದ ನವ ಜೋಡಿ

    ಭಿಷೇಕ್ ಅಂಬರೀಶ್-ಅವಿವಾ (Aviva) ಜೋಡಿಯ ಆರತಕ್ಷತೆಗೆ (Reception) ಕ್ಷಣಗಣನೆ ಶುರುವಾಗಿದೆ. ದುಬಾರಿ ಕಾರಿನಲ್ಲಿ ಅರಮನೆ ಮೈದಾನಕ್ಕೆ ಬಂದಿಳಿದ ಅಭಿ (Abhishek Ambarish) ಹಾಗೂ ಅವಿವಾ ಆರತಕ್ಷತೆ ಕಾರ್ಯಕ್ರಮಕ್ಕೆ ತಯಾರಾದ ವೇದಿಕೆಯತ್ತ ಹೆಜ್ಜೆ ಹಾಕಿದ್ದಾರೆ. ಅಭಿ ಗೋಲ್ಡನ್ ಶೇರ್ವಾನಿ ಧರಿಸಿದ್ದರೆ, ಅವಿವಾ ಗೋಲ್ಡನ್ ಕಲರ್ ಸೀರೆಯಲ್ಲಿ ಮಿಂಚುತ್ತಿದ್ದಾರೆ.  ಅದ್ದೂರಿ ಆರತಕ್ಷತೆಗಾಗಿ ಅರಮನೆ ಮೈದಾನ ಸಿಂಗಾರಗೊಂಡಿದೆ. ಅಭಿಷೇಕ್ ಮತ್ತು ಅವಿವಾ ಜೋಡಿಗೆ ಹಾರೈಸುವುದಕ್ಕಾಗಿ ಇಂದು ಕೂಡ ದೇಶದ ವಿವಿಧ ಭಾಗಗಳಿಂದ ಗಣ್ಯರು ಬರುವ ನಿರೀಕ್ಷೆಯಿದೆ. ಸಿನಿಮಾ ಹಾಗೂ ರಾಜಕೀಯ ಗಣ್ಯರ ದೊಡ್ಡ ಪಟ್ಟಿಯೇ ಹರಿದಾಡುತ್ತಿದೆ.

    ಎರಡು ದಿನಗಳ ಹಿಂದೆಯಷ್ಟೇ ನಡೆದ ಮದುವೆ ಸಮಾರಂಭದಲ್ಲಿ ನಟರಾದ ರಜನಿಕಾಂತ್, ಸುದೀಪ್, ಯಶ್,  ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿದ್ದರು. ಇದನ್ನೂ ಓದಿ:ಮದುವೆಯಾಗಿ ಮೂರುವರೆ ತಿಂಗಳಿಗೆ ಗರ್ಭಿಣಿ: ಸ್ವರಾ ಭಾಸ್ಕರ್ ಸಿಕ್ಕಾಪಟ್ಟೆ ಟ್ರೋಲ್

    ಇಂದು ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬಾಲಿವುಡ್ ನ ಖ್ಯಾತ ನಟ ಅಮಿತಾಭ್, ತೆಲುಗಿನ ಖ್ಯಾತ ನಟ ಚಿರಂಜೀವಿ, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಸೇರಿದಂತೆ ಹಲವು ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.

    ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಒಂದು ವಾರಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿದೆ. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ.