ಬಾಲಿವುಡ್ (Bollywood) ನಟಿ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ (Raghav Chadha) ಮದುವೆ (Wedding) ಡೇಟ್ ಫಿಕ್ಸ್ ಆಗಿದೆ. ಇದೇ ಸೆಪ್ಟೆಂಬರ್ 24ರಂದು ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ರಾಜಕಾರಣಿ ಜೊತೆ ಸ್ಟಾರ್ ನಟಿಯ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್- ಮತ್ತೆ ಬಿಕಿನಿ ಫೋಟೋ ಹಂಚಿಕೊಂಡ ಸೋನು
ಇದೇ ಸೆ.23 ಮತ್ತು 24ರಂದು ರಾಜಸ್ಥಾನದ ಲೀಲಾ ಪ್ಯಾಲೇಸ್ ಮತ್ತು ದಿ ಒಬೆರಾಯ್ ಉದಯವಿಲಾಸದಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ಜರುಗಲಿದೆ. ಈ ಮದುವೆಗೆ 200ಕ್ಕೂ ಹೆಚ್ಚು ಅತಿಥಿಗಳು ಮತ್ತು 50ಕ್ಕೂ ಹೆಚ್ಚು ವಿವಿಐಪಿಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಹಳದಿ ಶಾಸ್ತ್ರ ಮೆಹೆಂದಿ ಸಂಗೀತ ಕಾರ್ಯಕ್ರಮವು ಸೆ.23ರಂದು ನಡೆಯಲಿದ್ದು, ಸೆ.24ರಂದು ಅದ್ಧೂರಿಯಾಗಿ ವಿವಾಹ ನಡೆಯಲಿದೆ. ಮದುವೆಯ ಬಳಿಕ ಹರಿಯಾಣದಲ್ಲಿ ಈ ಜೋಡಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಮದುವೆಗೆ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಮತ್ತು ನಿಕ್ ಜೋನಸ್ ಸೇರಿದಂತೆ ರಾಜಕೀಯ ರಂಗದ ಪ್ರಮುಖ ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರಾ ಬಳಿ ಪರಿಣಿತಿ ಜೋಡಿ ಮದುವೆ ಧಿರಿಸಿಗೆ ಆರ್ಡರ್ ನೀಡಿದ್ದಾರೆ. ಮದುವೆಯ ಕಾರ್ಯಗಳು ತೆರೆಮರೆಯಲ್ಲಿ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ.
ಹಲವು ವರ್ಷಗಳ ಪ್ರೀತಿಗೆ ಪರಿಣಿತಿ- ರಾಘವ್ ಮೇ 13ರಂದು ಉಂಗುರದ ಮುದ್ರೆ ಒತ್ತಿದ್ದರು. ಕುಟುಂಬಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಪರಿಣಿತಿ ಚೋಪ್ರಾ ಎಂಗೇಜ್ ಆಗಿದ್ದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]



ಸೋಶಿಯಲ್ ಮೀಡಿಯಾದಲ್ಲಿ ನಾನು ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಪ್ರಮೋಷನ್‌ಗೆ ಸಾಮಾಜಿಕ ಜಾಲತಾಣದ ಬಳಕೆ ಮಾಡುತ್ತೇನೆ. ಎಲ್ಲರಿಗೂ ಅವರದ್ದೇ ಆದ ಸಮಸ್ಯೆ ಇರುತ್ತದೆ. ಮೊದಲು ನಾವು ಮನುಷ್ಯರಾಗಬೇಕು ಎಂದಿದ್ದಾರೆ ಅನುಷ್ಕಾ ಶೆಟ್ಟಿ. ಇದನ್ನೂ ಓದಿ:
















12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ ಹರ್ಷಿಕಾ ಪೂಣಚ್ಚ(Harshika Poonacha)- ಭುವನ್ ಪೊನ್ನಣ್ಣ ಜೋಡಿ.



ಫಸ್ಟ್ ಇಂಪ್ರೆಶನ್‌ನಲ್ಲೇ ಭುವನ್ ಇಷ್ಟವಾದ ಕಾರಣ ಒಂದೇ ದಿನದಲ್ಲಿ ಭುವನ್ ಪ್ರಪೋಸಲ್‌ಗೆ ಹರ್ಷಿಕಾ ಸಮ್ಮತಿ ನೀಡಿದ್ರಂತೆ. ಕುಟುಂಬದವರಿಗೂ ಕೂಡ ಭುವನ್ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದ ಕಾರಣ ಪ್ರೀತಿಗೆ ಗ್ರೀನ್ ಸಿಗ್ನಲ್ ನೀಡಿದ್ರಂತೆ ಎಂದು ಹರ್ಷಿಕಾ ಹೇಳಿದ್ದಾರೆ.
ಪ್ರೀತಿ ಮತ್ತು ಗೆಳೆತನ ಅನ್ನೋದಕ್ಕಿಂತ ಹೆಣ್ಣು ಮತ್ತು ಗಂಡಿನ ನಡುವೆ ಎಷ್ಟರ ಮಟ್ಟಿಗೆ ಹೊಂದಾಣಿಕೆ ಇದೆ ಅನ್ನೋದು ಮುಖ್ಯವಾಗುತ್ತೆ ಎಂದು ಭುವನ್ ಮಾತನಾಡಿದ್ದರು.
ಹರ್ಷಿಕಾ-ಭುವನ್ ಮದುವೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh), ಪೂಜಾ ಗಾಂಧಿ(Pooja Gandhi), ಬಿಎಸ್‌ವೈ, ಮುರುಗೇಶ್ ನಿರಾಣಿ, ದೊಡ್ಡಣ್ಣ, ಸುಧಾಕರ್, ಅನುಪ್ರಭಾಕರ್ ದಂಪತಿ, ತಬಲಾ ನಾಣಿ ಸೇರಿದಂತೆ ಹಲವರು ಭಾಗಿಯಾಗಿ ಶುಭಹಾರೈಸಿದ್ದರು.


ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮದುವೆಯ ಸುಂದರ ಫೋಟೋಗಳು ದೀಪಕ್ ವಿಜಯ್ (Deepak Vijay Photography) ಕ್ಯಾಮೆರಾ ಕಣ್ಣಲ್ಲಿ ಮೂಡಿ ಬಂದಿದೆ.


