ಕನ್ನಡದ ನಟಿ ಮೀನಾ (Meena) 2ನೇ ಮದುವೆ ವಿಚಾರ ಆಗಾಗ ಚರ್ಚೆಯ ವಿಷಯವಾಗಿರುತ್ತದೆ. ಈಗಲೂ ಆ ವಿಚಾರ ಮುನ್ನಲೆಗೆ ಬಂದಿದೆ. ಮೀನಾ 2ನೇ ಮದುವೆ (Second Wedding) ಆಗೋಕೆ ಒಪ್ಪಿಕೊಂಡಿದ್ದಾರಾ? ಇಲ್ಲವಾ ಜೀವನಪೂರ್ತಿ ಒಬ್ಬಂಟಿಯಾಗೇ ಕಳೆಯಲು ಇಷ್ಟ ಪಡುತ್ತಿದ್ದಾರಾ? ಆ ಎಲ್ಲಾ ವಿಚಾರಗಳ ಬಗ್ಗೆ ಆಕೆ ಗೆಳತಿ ಮಾತನಾಡಿದ್ದಾರೆ. ಹಾಗಾದ್ರೆ ಏನಿದೆ ಮೀನಾ ಮನದಾಳ? ಇಲ್ಲಿದೆ ಮಾಹಿತಿ. ಇದನ್ನೂ ಓದಿ:ಮೊದಲ ಚಿತ್ರದ ಶೂಟಿಂಗ್ ಎಲ್ಲಿಗೆ ಬಂತು? ಅಪ್‌ಡೇಟ್ ಕೊಟ್ರು ಸಾನ್ಯ ಅಯ್ಯರ್

ಬಹುಭಾಷಾ ನಟಿ ಮೀನಾ, ಪತಿ ವಿಧ್ಯಾ ಸಾಗರ್ (Vidya Sagar) ಅನಾರೋಗ್ಯದಿಂದ ನಿಧನರಾಗಿ ಎರಡು ವರ್ಷಗಳು ಉರುಳಿವೆ. ಹೀಗಾಗಿ ಮೀನಾ 2ನೇ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತೆ. ಮೀನಾ ಹೆಸರು ಹಲವು ನಟರ ಜೊತೆ ಕೇಳಿಬಂತು. ಹಲವು ಗಾಸಿಪ್‌ಗಳು ಶುರುವಾಯಿತು. ಆದರೂ ಮೀನಾ ಯಾವುದರ ಬಗ್ಗೆಯೂ ಪ್ರತಿಕ್ರಿಯಿಸದೆ ಸುಮ್ಮನೇ ಇದ್ದಾರೆ. ಆದರೆ ಇದೀಗ ಮೀನಾ ಗೆಳತಿ ಡ್ಯಾನ್ಸ್ ಕೋರಿಯೋಗ್ರಾಫರ್ ಕಲಾ, ಮೀನಾಳ ಅಂತರಾಳದಲ್ಲಿ ಏನಿದೆ ಅನ್ನೋ ವಿಚಾರ ಹೇಳಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ತಾಯಿಯಾದ ‘ಬಿಗ್ ಬಾಸ್’ ಮಾಜಿ ಸ್ಪರ್ಧಿ ಆಶಿತಾ ಚಂದ್ರಪ್ಪ

ಮೀನಾಳ ಕಷ್ಟ ಸುಖದಲ್ಲಿ ಜೊತೆಯಾಗಿದ್ದ ಗೆಳತಿ ಕಲಾ, ಇದೀಗ ಮೀನಾಗೆ ಎರಡನೇ ಮದುವೆ ಬಗ್ಗೆ ಯಾವ ಅಭಿಪ್ರಾಯವಿದೆ ಅನ್ನೋದರ ಬಗ್ಗೆ ಸಂದರ್ಶನವೊಂದರಲ್ಲಿ ಹೇಳ್ಕೊಂಡಿದ್ದಾರೆ. ಹಲವು ಬಾರಿ ಕಲಾ ಮೀನಾಗೆ ಎರಡನೇ ಮದುವೆ ಬಗ್ಗೆ ಒತ್ತಾಯಿಸಿದ್ದರಂತೆ. ಆದರೆ ಮೀನಾ ಮಾತ್ರ ಯಾವ ಸಂದರ್ಭದಲ್ಲೂ 2ನೇ ಮದುವೆ ಆಗದಿರೋದಕ್ಕೆ ಯೋಚಿಸಿದ್ದಾರೆ. ಮದುವೆ ಬಗ್ಗೆ ಒತ್ತಾಯಿಸುವ ಸ್ನೇಹಿತೆಗೆ, ನನ್ನ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕಬೇಡ ಎಂದು ಸೂಚಿಸಿದ್ದಾರೆ ಎನ್ನುತ್ತಾರೆ ಆಪ್ತೆ ಕಲಾ.
ಅಂದಹಾಗೆ, ಮೀನಾ ಮತ್ತೀಗ ಅಭಿನಯಕ್ಕೆ ಮರಳಿದ್ದಾರೆ. ಹೀಗೆ ಜೀವನಪೂರ್ತಿ ಮಗಳ ಜೊತೆ ಕಳೆದುಬಿಡಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಇಷ್ಟಾದ್ಮೇಲೂ ಎರಡನೇ ಮದುವೆ ಬಗ್ಗೆ ಗಾಸಿಪ್ ಆಗ್ತಿರೋದು ದುರಂತ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]












ಸಮಂತಾ (Samantha) ಜೊತೆಗಿನ ನಾಗಚೈತನ್ಯ (Nagachaitanya) ಡಿವೋರ್ಸ್ (Divorce) ಆಗಿ 2 ವರ್ಷಗಳು ಕಳೆದಿವೆ. ಇಬ್ಬರ ಡಿವೋರ್ಸ್ ಬಳಿಕ ನಟಿ ಶೋಭಿತಾ (Shobitha) ಜೊತೆ ನಾಗಚೈತನ್ಯ ಹೆಸರು ಕೇಳಿ ಬಂದಿತ್ತು. ಇಬ್ಬರು ಡೇಟ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಈಗ ನಾಗಚೈತನ್ಯ ಮದುವೆ ಸುದ್ದಿ ಹೊರ ಬೀಳುತ್ತಿದ್ದಂತೆ ವಧು ಶೋಭಿತಾ ಅಲ್ಲ ಎಂದು ತಿಳಿದು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.












