Tag: wedding

  • ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸೋನು ಪಾಟೀಲ್

    ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸೋನು ಪಾಟೀಲ್

    ‘ಬಿಗ್ ಬಾಸ್’ ಕನ್ನಡ 6ರ ಸ್ಪರ್ಧಿ ಸೋನು ಪಾಟೀಲ್ (Sonu Patil) ಅವರು ತಮ್ಮ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ನಟಿ ಸೋನು ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    ‘ಬಿಗ್ ಬಾಸ್’ ಕನ್ನಡ ಶೋ ಮೂಲಕ ಕನ್ನಡಿಗರಿಗೆ ಪರಿಚಿತರಾದ ಸೋನು ಪಾಟೀಲ್ ಇದೀಗ ಸಂಕೇತ್ (Sanketh) ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಈ ಮದುವೆ ಜರುಗಿದೆ. ಇದನ್ನೂ ಓದಿ:ಶಿವರಾತ್ರಿಗೆ ರಿಲೀಸ್ ಆಗಲಿದೆ ‘ಕರಟಕ ದಮನಕ’ ಸಿನಿಮಾ

    ಸೋನು ಅವರ ಹುಡುಗ ಯಾರು? ಏನು ಮಾಡ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಅರೇಂಜ್ ಮ್ಯಾರೇಜ್ ಅಥವಾ ಲವ್ ಮ್ಯಾರೇಜ್ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇದ್ದಕ್ಕಿದಂತೆ ಮದುವೆಯ ಫೋಟೋ ಶೇರ್‌ ಮಾಡಿರೋದು ಅನೇಕರಿಗೆ ಅಚ್ಚರಿ ಮೂಡಿಸಿದೆ.

    ಸೋನು ಗೌಡ ಅವರು ಮೊಗ್ಗಿನ ಮನಸ್ಸು, ಗಾಂಧಾರಿ, ಅಮೃತವರ್ಷಿಣಿ, ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಧರ್ಮಸ್ಯ, ಕೆಲವು ದಿನಗಳ ನಂತರ, ಗೋಸಿ ಗ್ಯಾಂಗ್ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಚಿತ್ರರಂಗದಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.

  • ವರ್ತೂರು ಮದುವೆ ಬಗ್ಗೆ ಮಾತನಾಡುತ್ತಿದ್ದಂತೆ ನಾಚಿ ನೀರಾದ ಬೆಂಕಿ

    ವರ್ತೂರು ಮದುವೆ ಬಗ್ಗೆ ಮಾತನಾಡುತ್ತಿದ್ದಂತೆ ನಾಚಿ ನೀರಾದ ಬೆಂಕಿ

    ದೊಡ್ಮನೆಯ 112 ದಿನಗಳ ಆಟಕ್ಕೆ ತೆರೆ ಬೀಳುವ ಸಮಯ ಬಂದಿದೆ. ಗ್ರ್ಯಾಂಡ್ ಫಿನಾಲೆಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಇನ್ನೂ ಈ ವೇದಿಕೆಯಲ್ಲಿ ವರ್ತೂರು ಸಂತೋಷ್ (Varthur Santhosh) ಮದುವೆ ಬಗ್ಗೆ ಕೂಡ ಚರ್ಚೆಯಾಗಿದೆ. ಈಗ ಇರೋ ಜನಪ್ರಿಯತೆಗೆ 3 ಮದುವೆ ಆಗುತ್ತದೆ ಎಂದು ವರ್ತೂರು ಸಂತೋಷ್ ಅವರ ಕಾಲೆಳೆದಿದ್ದಾರೆ ಸುದೀಪ್. ಈ ಮಾತು ಕೇಳ್ತಿದ್ದಂತೆ ಬೆಂಕಿ ತನಿಷಾ ಕುಪ್ಪಂಡ (Tanisha Kuppanda) ನಾಚಿ ನೀರಾಗಿದ್ದಾರೆ. ಇದನ್ನೂ ಓದಿ:ನೀವು ಹೇಗಿದ್ದೀರೋ ಹಾಗೇ ತೋರಿಸಿದ್ದೀವಿ- ಕಿಚ್ಚನ ಮಾತಿಗೆ ಸ್ಪರ್ಧಿಗಳು ಗಪ್‌ಚುಪ್

    ‘ಬಿಗ್ ಬಾಸ್ ಸೀಸನ್ 10’ ಈ ಹಿಂದಿನ ಎಲ್ಲಾ ಸೀಸನ್‌ಗಳ ರೆಕಾರ್ಡ್ ಬ್ರೇಕ್ ಮಾಡಿ ಸದ್ದು ಮಾಡಿರುವಂತಹ ಸೀಸನ್. ಕಾಂಟ್ರವರ್ಸಿ, ಟ್ರೋಲ್, ಟೀಕೆ ಹೀಗೆ ಹಲವು ವಿಚಾರಗಳಿಂದ ಈ ಬಾರಿಯ ಕನ್ನಡದ ಬಿಗ್ ಬಾಸ್ ಸದ್ದು ಮಾಡುತ್ತಿದೆ. ಇದೀಗ ಸುದೀಪ್, ವರ್ತೂರು ಸಂತೋಷ್ ಜೈಲಿಗೆ ಹೋದ ವಿಚಾರವನ್ನು ಮನೆಯೊಳಗಡೆ ಇರುವ ಸ್ಪರ್ಧಿಗಳಿಗೆ ರಿವೀಲ್ ಮಾಡಿದ್ದಾರೆ. ಜೊತೆಗೆ ಅವರಿಗೆ 3 ಮದುವೆಯಾದರು ಅಚ್ಚರಿಪಡಬೇಕಿಲ್ಲ ಎಂದು ಸುದೀಪ್ ತಮಾಷೆ ಮಾಡಿದ್ದಾರೆ.

    ಇಡೀ ಮನೆಯಲ್ಲಿ ಒಂದು ಗುಟ್ಟು ಇದೆ. ಹೊರ ಜಗತ್ತಿಗೆ ಆ ಗುಟ್ಟು ಗೊತ್ತಿದೆ. ಮನೆಯ ಒಂದು ಸ್ಪರ್ಧಿಗೆ ಮಾತ್ರ ಅದು ಗೊತ್ತಿದೆ. ಉಳಿದ ಯಾರಿಗೂ ಆ ಗುಟ್ಟು ತಿಳಿದಿಲ್ಲ, ಏನದು ಎಂದು ಸುದೀಪ್ ಸ್ಪರ್ಧಿಗಳಿಗೆ ಕೇಳಿದ್ದರು. ಮನೆಯವರಿಗೆ ಇದನ್ನು ಕೇಳಿ ಗೊಂದಲ ಆಯಿತು. ಸುದೀಪ್ ಅವರು ವರ್ತೂರು ಅವರೇ ಎಂದು ಹೇಳಿದರು. ಆಗ ವರ್ತೂರು ಸಂತೋಷ್ ಅವರಿಗೆ ಇದು ತಮ್ಮದೇ ವಿಚಾರ ಎಂಬುದು ಗೊತ್ತಾಯಿತು.

    ವರ್ತೂರು ಸಂತೋಷ್ ಅವರು ಒಂದು ವಾರ ಹೊರಗೆ ಹೋಗಿ ಬಂದರು. ಮನೆಯಲ್ಲಿರುವ ಯಾರಿಗೂ ಇದಕ್ಕೆ ಕಾರಣ ಗೊತ್ತಿಲ್ಲ. ಹೊರ ಬಂದು ಎಲ್ಲವನ್ನೂ ತಿಳಿದುಕೊಂಡು ಹೋದರು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದಲ್ಲ. ಏನಾಗಿತ್ತು ಹೇಳಿ ಎಂದು ಸುದೀಪ್ ಕೇಳಿದ್ದರು. ಈ ಮಾತು ಕೇಳುತ್ತಿದ್ದಂತೆ ವರ್ತೂರು ಸಂತೋಷ್ ಅವರು ಕಣ್ಣೀರು ಹಾಕಿದರು. ಇದನ್ನೂ ಓದಿ:ಪೂಜಾ ಜೊತೆ ಹೊಸ ಜೀವನಕ್ಕೆ ಕಾಲಿಟ್ಟ ನಟ ನಾಗಭೂಷಣ್

    ವರ್ತೂರು ಅವರ ಕತ್ತಿನಲ್ಲಿ ಒಂದು ಪೆಂಡೆಂಟ್ ಇತ್ತು. ಅದು ಧರಿಸುವಂತಿರಲಿಲ್ಲ. ಈ ಕಾರಣಕ್ಕೆ ಅವರನ್ನು ಹೊರಗೆ ಕರೆತರಲಾಯಿತು. ಅವರು ಜೈಲು ಸೇರಿದರು. ಬಿಗ್ ಬಾಸ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಅವರು ಒಂದು ವಾರ ಜೈಲಿನಲ್ಲಿ ಇದ್ದರು. ಸಾಕಷ್ಟು ಅನುಭವಿಸಿಕೊಂಡು ಬಂದರು. ಅವರು ನಿಜಕ್ಕೂ ಸ್ಟ್ರಾಂಗ್ ಎಂದರು ಸುದೀಪ್. ಸುದೀಪ್ ಹೇಳಿದ ವಿಚಾರ ಕೇಳಿ ಅನೇಕರಿಗೆ ಶಾಕ್ ಆಗಿದೆ.

    ವರ್ತೂರು ಸಂತೋಷ್ ಅವರ ಸಂಸಾರ ಈಗಾಗಲೇ ಮುರಿದು ಬಿದ್ದಿದೆ. ಆ ವಿಚಾರ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸುದೀಪ್ ಅವರು ವರ್ತೂರು ಸಂತೋಷ್ ಮದುವೆ ಬಗ್ಗೆ ಫಿನಾಲೆಯಲ್ಲಿ ಮಾತನಾಡಿದ್ದಾರೆ. ಈಗೀರೋ ಜನಪ್ರಿಯತೆಗೆ ವರ್ತೂರಿಗೆ ಮೂರು ಮದುವೆ ಆಗುತ್ತದೆ ಎಂದರು ಸುದೀಪ್. ಇದಕ್ಕೆ ಉತ್ತರಿಸಿದರು ವರ್ತೂರು ಸಂತೋಷ್ ತಾಯಿ, ಆದರೆ ಆಗಲಿ ಸರ್. ಸಾಮರ್ಥ್ಯ ಇದ್ದರೆ ಆಗಲಿ ಬಿಡಿ ಎಂದರು. ಆಗ ಎಲ್ಲರೂ ತನಿಷಾ ಅತ್ತ ನೋಡಿದರು. ತನಿಷಾ ಅವರು ನಾಚಿ ನೀರಾದರು. ಈ ಮೂಲಕ ಪರೋಕ್ಷವಾಗಿ ವರ್ತೂರು ಸಂತೋಷ್ ಮತ್ತು ತನಿಷಾ (Tanisha Kuppanda) ಮದುವೆ (Wedding) ಬಗ್ಗೆ ಮಾತನಾಡಿದ್ರಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ.

  • Bigg Boss: ಮದುವೆ ಪ್ಲ್ಯಾನಿಂಗ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಮ್ರತಾ

    Bigg Boss: ಮದುವೆ ಪ್ಲ್ಯಾನಿಂಗ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಮ್ರತಾ

    ಕಾಶದೀಪ, ಪುಟ್ಟಗೌರಿ ಮದುವೆ, ನಾಗಿಣಿ 2 (Nagini 2) ಸೀರಿಯಲ್ ಮೂಲಕ ಮೋಡಿ ಮಾಡಿದ ನಟಿ ನಮ್ರತಾ ಗೌಡ (Namratha Gowda) ಅವರು ಇದೀಗ ತಮ್ಮ ಮದುವೆ (Wedding) ಪ್ಲ್ಯಾನಿಂಗ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಗೌರಿಶಂಕರ’ ಸೀರಿಯಲ್‌ಗೆ ಗುಡ್‌ ಬೈ ಹೇಳಿದ ಕೌಸ್ತುಭ ಮಣಿ

    ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಚೆಲುವೆ ನಮ್ರತಾ ಅವರು ಬಿಗ್ ಬಾಸ್‌ಗೆ (Bigg Boss Kannada 10) ಈ ಬಾರಿ ಕಾಲಿಟ್ಟಿದ್ದರು. ಇನ್ನೇನು ಫಿನಾಲೆಗೆ ಕಾಲಿಡಬೇಕು ನಟಿ ಮುಗ್ಗರಿಸಿದ್ದರು. 15ನೇ ವಾರ ನಮ್ರತಾ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇದೀಗ ಹಲವು ಸಂದರ್ಶನ ಕೊಡುವಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಮ್ಮ ಕನಸಿನ ಮನೆ ಮತ್ತು ಮದುವೆ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ:ಬಹುಕಾಲದ ಗೆಳೆಯನ ಜೊತೆ ಶೋಭಾ ಶೆಟ್ಟಿ ನಿಶ್ಚಿತಾರ್ಥ- ಮದುವೆ ಡೇಟ್‌ ಫಿಕ್ಸ್

    ಮನೆ ಗೃಹಪ್ರವೇಶ ಮಾಡಿದಾಗ ಕುಟುಂಬಸ್ಥರು ಎನೆಲ್ಲಾ ಮಾತನಾಡಿದ್ದರು ಎಂದು ನಮ್ರತಾ ಸಂದರ್ಶನವೊಂದರಲ್ಲಿ ಬೇಸರ ಹೊರಹಾಕಿದ್ದಾರೆ. ನಾನು ಮನೆ ತಗೊಂಡಾಗ ನನ್ನ ಸಂಬಂಧಿಕರು ಹೇಳಿದ್ದಾರೆ. ಎಲ್ಲಿಂದ ಹಣ ಬರುತ್ತೆ ಅಂತ ಮಾತಾಡಿದ್ರು. ನಾನು ಮನೆಗೆ ಬರದೆ ಶೂಟಿಂಗ್ ಸೆಟ್‌ನಲ್ಲಿಯೇ ಇದ್ದು, ಅಲ್ಲಿಯೇ ಸ್ನಾನ ಮಾಡಿಕೊಂಡು ಮತ್ತೆ ಶೂಟಿಂಗ್‌ನಲ್ಲಿ ಭಾಗವಹಿಸಿದ್ದೂ ಇದೆ. ನಾನು ಬಸ್‌ನಲ್ಲಿ ಓಡಾಡುತ್ತಿದ್ದೆ. ನನ್ನ ಕೆಲಸ ನನ್ನ ತಂದೆ-ತಾಯಿಗೆ ಮಾತ್ರ ಗೊತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಅಂಥವರ ಜೊತೆ ಇದ್ದ ಮೇಲೆ ಈಗ ಯಾರು ಏನೂ ಹೇಳಿದ್ರೂ ಅದನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ನಟಿ ಮಾತನಾಡಿದ್ದಾರೆ.

    ಇನ್ನೂ ಮದುವೆ (Wedding) ಬಗ್ಗೆ ಮೊದಲು ತುಂಬಾ ಆಸೆ ಇತ್ತು. ಸಿಕ್ಕಾಪಟ್ಟೆ ಮದುವೆ ಬಗ್ಗೆ ಆಸೆ ಇಟ್ಟುಕೊಂಡಿದ್ದ ನಾನು ಈಗ ಇದರಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ. ಸಾಧನೆ ಮಾಡಬೇಕು, ದೇಶ ಸುತ್ತಬೇಕು, ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮದುವೆ ಬಗ್ಗೆ ನಂಬಿಕೆ ತರಿಸುವವರು ಸಿಕ್ಕರೆ ಯೋಚನೆ ಮಾಡ್ತೀನಿ ಎಂದು ನಮ್ರತಾ ತಮ್ಮ ಮನದಾಳದ ಮಾತನ್ನು ತಿಳಿಸಿದ್ದಾರೆ.

  • ಅಕ್ಕನ ಮದುವೆಯಲ್ಲಿ ಮಿಂಚಿದ ಚುಟು ಚುಟು ಸುಂದರಿ ಆಶಿಕಾ

    ಅಕ್ಕನ ಮದುವೆಯಲ್ಲಿ ಮಿಂಚಿದ ಚುಟು ಚುಟು ಸುಂದರಿ ಆಶಿಕಾ

    ಸ್ಯಾಂಡಲ್‌ವುಡ್ ನಟಿ ಆಶಿಕಾ ರಂಗನಾಥ್ (Ashika Ranganath) ಅವರು ಅಕ್ಕನ ಮದುವೆಯಲ್ಲಿ ಮಿಂಚಿದ್ದಾರೆ. ಜನವರಿ 22ರಂದು ಆಶಿಕಾ ಸಹೋದರಿ ಅನುಷಾ ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಮದುವೆಯ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    ಚುಟು ಚುಟು ನಟಿ ಆಶಿಕಾ ಅವರು ಅಕ್ಕನ ಮದುವೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಮದುವೆ ಹುಡುಗಿ ಅನುಷಾ, ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ಲೈಟ್ ಬಣ್ಣದ ಹಾಫ್ ಸೀರೆಯಲ್ಲಿ ಆಶಿಕಾ ಕಂಗೊಳಿಸಿದ್ದಾರೆ. ಅನುಷಾ- ಶ್ರವಣ್ ಮದುವೆ ಜ.22ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ನಡೆದಿದೆ.

    ಇನ್ನೂ ಅನುಷಾರ ಮದುವೆಯಲ್ಲಿ ನಟಿ ಸುಶ್ಮಿತಾ, ತಪಸ್ವಿನಿ ಪೂಣಚ್ಚ, ಸಿರಿ, ಕಿರುತೆರೆ ನಟಿ ಲಕ್ಷ್ಮಿ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿ ನವಜೋಡಿಗೆ ಶುಭಕೋರಿದ್ದರು. ಇದನ್ನೂ ಓದಿ:‘ಗೌರಿಶಂಕರ’ ಸೀರಿಯಲ್‌ಗೆ ಗುಡ್‌ ಬೈ ಹೇಳಿದ ಕೌಸ್ತುಭ ಮಣಿ

    ಆಶಿಕಾ ರಂಗನಾಥ್‌ಗೆ ಕನ್ನಡ, ತೆಲುಗಿನಲ್ಲಿ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆಶಿಕಾ ಅಕ್ಕ ಅನುಷಾ ಅವರು ‘ಗೋಕುಲದಲ್ಲಿ ಸೀತೆ’ (Gokuladali Seethe) ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು.

    ಅನುಷಾ (Anusha) ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ತಂಗಿ ಆಶಿಕಾರಂತೆ ಅವರಿಗೆ ಹೇಳಿಕೊಳ್ಳುವಂತಹ ಅವಕಾಶ ಸಿಕ್ಕಿಲ್ಲ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಶಿಕಾ ರಂಗನಾಥ್ ಅಕ್ಕ ಅನುಷಾ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಶಿಕಾ ರಂಗನಾಥ್ ಅಕ್ಕ ಅನುಷಾ

    ಸ್ಯಾಂಡಲ್‌ವುಡ್ ಸ್ಟಾರ್ ನಟಿ ಆಶಿಕಾ ರಂಗನಾಥ್ (Ashika Ranganath) ಸಹೋದರಿ ಅನುಷಾ (Anusha) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶ್ರವಣ್ (Shravan) ಜೊತೆ ಅನುಷಾ ರಂಗನಾಥ್ ಇಂದು ಮದುವೆಯಾಗಿದ್ದಾರೆ. ಇದನ್ನೂ ಓದಿ:ರಾವಣನ ಪಾತ್ರ ಮಾಡಿದ್ದ ಸೈಫ್ ಅಲಿಖಾನ್ ಗೆ ಅಪಘಾತ: ಆಸ್ಪತ್ರೆಗೆ ದಾಖಲು

    ‘ಗೋಕುಲದಲ್ಲಿ ಸೀತೆ’ ಸೀರಿಯಲ್ ಖ್ಯಾತಿಯ ಅನುಷಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಖಾಸಗಿ ರೆಸಾರ್ಟ್‌ವೊಂದರಲ್ಲಿ ಇಂದು (ಜ.22) ಅನುಷಾ- ಶ್ರವಣ್ ಮದುವೆ ಅದ್ಧೂರಿಯಾಗಿ ನಡೆದಿದೆ. ವರ ಶ್ರವಣ್ ಹಿನ್ನೆಲೆ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ.

    ಆಶಿಕಾ ಸಹೋದರಿ ಅನುಷಾ ಮದುವೆಯಲ್ಲಿ ‘ದಿಯಾ’ ಖ್ಯಾತಿಯ ಖುಷಿ ರವಿ (Kushee Ravi), ಸಿರಿ, ತಪಸ್ವಿನಿ ಪೂಣಚ್ಚ,’ಲವ್‌ ಮಾಕ್ಟೈಲ್‌ 2′ ನಟಿ ಸುಶ್ಮಿತಾ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕಳೆದ ವಾರ ಅನುಷಾ ಅವರ ಬ್ರೈಡಲ್ ಪಾರ್ಟಿ ಗ್ರ್ಯಾಂಡ್ ಆಗಿ ನೆರವೇರಿತ್ತು.

    ‘ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ’, ’10’, ‘ಕೌರವ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಷಾ ನಟಿಸಿದ್ದಾರೆ. ಆದರೆ ಚುಟು ಚುಟು ಬೆಡಗಿ ಆಶಿಕಾರಂತೆ ಅನುಷಾಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗಲಿಲ್ಲ. ಸದ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ಅನುಷಾಗೆ ಫ್ಯಾನ್ಸ್‌ ಶುಭಕೋರುತ್ತಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ರಕ್ಷಾ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ರಕ್ಷಾ

    ‘ಬಿಗ್ ಬಾಸ್’ ಸೀಸನ್ 7ರ (Bigg Boss Kannada 7) ಸ್ಪರ್ಧಿ ರಕ್ಷಾ ಸೋಮಶೇಖರ್ (Raksha Somashekar) ಅವರು ಗೆಳೆಯ ನತನ್ ಜಾನಿ ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಕಳೆದ ವರ್ಷ ಮೇನಲ್ಲಿ ನತನ್ ಜಾನಿ ಜೊತೆ ರಕ್ಷಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೀಗ ಅದ್ದೂರಿಯಾಗಿ ನಟಿ ಮದುವೆಯಾಗಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ನಟಿ ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ್ದಾರೆ. ರಕ್ಷಾ- ನತನ್ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ಇದನ್ನೂ ಓದಿ:‘ಟಗರು’ ಸಿನಿಮಾವನ್ನು ಧನುಷ್ ರಿಮೇಕ್ ಮಾಡಿದರೆ ಒಪ್ಪುತ್ತೆ: ಶಿವಣ್ಣ

     

    View this post on Instagram

     

    A post shared by Yamuna Srinidhi (@yamuna_srinidhi_)

    ರಕ್ಷಾ ಮದುವೆಗೆ ‘ಅಶ್ವಿನಿ ನಕ್ಷತ್ರ’ ಖ್ಯಾತಿಯ ಯಮುನಾ ಶ್ರೀನಿಧಿ ಭಾಗಿಯಾಗಿದ್ದು, ಮದುವೆಯ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಮೇ 1, ಗೋದ್ರಾ, ಮಸ್ತ್ ನನ್ನ ಪ್ರೇಮ್ ಕಹಾನಿ, ಮಿಸ್ಟರ್ ಜೈ ಎಂಬ ಸಿನಿಮಾಗಳಲ್ಲಿ ರಕ್ಷಾ ನಟಿಸಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಮೀರ್ ಖಾನ್ ಮಗಳು ಇರಾ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಮೀರ್ ಖಾನ್ ಮಗಳು ಇರಾ

    ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ (Aamir Khan) ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಆಮೀರ್ ಅವರ ಮುದ್ದಿನ ಮಗಳು ಇರಾ ಖಾನ್ (Ira Khan) ದಾಂಪತ್ಯ ಜೀವನಕ್ಕೆ ಇಂದು (ಜ.3) ಕಾಲಿಟ್ಟಿದ್ದಾರೆ. ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಮದುವೆ (Wedding) ಅದ್ದೂರಿಯಾಗಿ ನೆರವೇರಿದೆ.

    ಜ.3ರಂದು ಸಂಜೆ ಇರಾ- ನೂಪುರ್ ಶಿಖಾರೆ ಜೋಡಿ ಮರಾಠಿ ಪದ್ಧತಿಯಂತೆ ಮದುವೆಯಾಗಿದ್ದಾರೆ. ಗುರುಹಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ ಇರಾ-ನೂಪುರ್ ಜೋಡಿ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ನನ್ನ ಪತ್ನಿ ನಿಮ್ಮಂತೆಯೇ ಇರಬೇಕು ಎಂದ ಅಭಿಮಾನಿಗೆ ರಶ್ಮಿಕಾ ಏನಂದ್ರು ಗೊತ್ತಾ?

     

    View this post on Instagram

     

    A post shared by Viral Bhayani (@viralbhayani)

    ಆಮೀರ್ ಖಾನ್- ಮಾಜಿ ಮೊದಲ ಪತ್ನಿ ರೀನಾ ದತ್ತ ಅವರ ಪುತ್ರಿ ಇರಾ, ಕೋರ್ಟ್ ಮ್ಯಾರೇಜ್ ಜೊತೆಗೆ ಮಹಾರಾಷ್ಟ್ರದ ಸಂಪ್ರದಾಯಿಕ ಶೈಲಿಯಲ್ಲಿ ಇರಾ ಖಾನ್- ನೂಪುರ್ ಮದುವೆ ನಡೆದಿದೆ. ಮದುವೆಯ ಬಳಿಕ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಲಾಗಿದೆ.

    ಆಮೀರ್ ಪುತ್ರಿ ಇರಾ ಖಾನ್ ಅವರು ನೂಪುರ್ ಜೊತೆ ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.

  • ಅದ್ದೂರಿಯಾಗಿ ನಡೆಯಲಿದೆ ಆಮೀರ್ ಖಾನ್ ಮಗಳು ಇರಾ ಮದುವೆ

    ಅದ್ದೂರಿಯಾಗಿ ನಡೆಯಲಿದೆ ಆಮೀರ್ ಖಾನ್ ಮಗಳು ಇರಾ ಮದುವೆ

    ಬಾಲಿವುಡ್ (Bollywood) ಖ್ಯಾತ ನಟ ಆಮೀರ್ ಖಾನ್ (Aamir Khan) ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಆಮೀರ್ ಅವರ ಮುದ್ದಿನ ಮಗಳು ಇರಾ ಖಾನ್ (Ira Khan) ದಾಂಪತ್ಯ (Wedding) ಜೀವನಕ್ಕೆ ಇಂದು (ಜ.3) ಕಾಲಿಡುತ್ತಿದ್ದಾರೆ. ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ಮದುವೆಗೆ ಸಕಲ ಸಿದ್ಧತೆ ನಡೆಯುತ್ತಿದೆ.

    ಜ.3ರಂದು ಸಂಜೆ 7 ಗಂಟೆಗೆ ಇರಾ- ನೂಪುರ್ ಶಿಖಾರೆ ಮದುವೆಯಾಗುತ್ತಿದ್ದಾರೆ. ಒಂದು ವಾರದ ಮುಂಚೆಯೇ ವಿವಾಹ ಪೂರ್ವ ಸಿದ್ಧತೆಗಳು ಅದ್ದೂರಿಯಾಗಿ ಜರುಗುತ್ತಿದೆ. ಮದುವೆ ಸಂಭ್ರಮದಲ್ಲಿ ಕುಟುಂಬದವರು ಮತ್ತು ಆಪ್ತರು ಅಷ್ಟೇ ಭಾಗಿಯಾಗಿದ್ದರು. ಮಗಳು ಮದುವೆಗೆಂದೇ ಆಮೀರ್ ಖಾನ್ ಅವರು ಸಿನಿಮಾದಿಂದ ಕೂಡ ಬ್ರೇಕ್ ತೆಗೆದುಕೊಂಡರು. ಇದನ್ನೂ ಓದಿ:ಹೊಸ ವರ್ಷದ ಆರಂಭದಲ್ಲೇ ಶ್ರೀಲೀಲಾ ಹೊಸ ಶಪಥ

    ಆಮೀರ್ ಖಾನ್- ಮಾಜಿ ಮೊದಲ ಪತ್ನಿ ರೀನಾ ದತ್ತ ಅವರ ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕೋರ್ಟ್ ಮ್ಯಾರೇಜ್ ಜೊತೆಗೆ ಮಹಾರಾಷ್ಟ್ರದ ಸಂಪ್ರದಾಯಿಕ ಶೈಲಿಯಲ್ಲಿ ಇರಾ ಖಾನ್- ನೂಪುರ್ ಮದುವೆ ನಡೆಯುತ್ತಿದೆ. ಆಮಿರ್ ಖಾನ್ ಅವರ 2ನೇ ಮಾಜಿ ಪತ್ನಿ ಕಿರಣ್ ರಾವ್ ಕೂಡ ವಿವಾಹಪೂರ್ವ ಕಾರ್ಯಗಳಲ್ಲಿ ಹಾಜರಿ ಹಾಕಿದ್ದಾರೆ. ಮದುವೆಯ ಬಳಿಕ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಲಾಗಿದೆ.

    ಆಮೀರ್ ಪುತ್ರಿ ಇರಾ ಖಾನ್ ಅವರು ನೂಪುರ್ ಜೊತೆ ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ.

  • ಮದುವೆಗೆ ಸಜ್ಜಾದ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ

    ಮದುವೆಗೆ ಸಜ್ಜಾದ ಪ್ರಿಯಾಂಕಾ ಚೋಪ್ರಾ ಸಹೋದರಿ ಮೀರಾ

    ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineti Chopra) ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಅವರ ಸಹೋದರ ಸಂಬಂಧಿ ಮೀರಾ ಚೋಪ್ರಾ (Meera Chopra) ಮದುವೆ ಬಗ್ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ನಟಿಯ ಡೇಟ್ ಫಿಕ್ಸ್ ಆಗಿದೆ.

    ಪ್ರಿಯಾಂಕಾ ಚೋಪ್ರಾ(Priyanka Chopra), ಪರಿಣಿತಿ ಚೋಪ್ರಾ ಸಹೋದರ ಸಂಬಂಧಿ ಮೀರಾ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆ (Wedding) ಪ್ಲ್ಯಾನ್ ಬಗ್ಗೆ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಾಟೇರ ರಿಲೀಸ್ ದಿನವೇ ರಮ್ಯಾ ನಿರ್ಮಾಣದ ಸಿನಿಮಾ ಒಟಿಟಿಗೆ

    ಹೌದು.. ನಾನು ಮದುವೆ (Wedding) ಆಗುತ್ತಿದ್ದೇನೆ. 2024ರ ಫೆಬ್ರವರಿಯಲ್ಲಿ ಮದುವೆ ನಡೆಯಲಿದೆ. ಈಗಾಗಲೇ ನಮ್ಮ ಕುಟುಂಬದ ಸದಸ್ಯರು ಮದುವೆಗೆ ತಯಾರಿ ಮಾಡುತ್ತಿದ್ದಾರೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆ ನಡೆಯಲಿದೆ. ಮದುವೆಗೆ 150 ಜನರಿಗೆ ಕರೆಯಲು ಚಿಂತನೆ ಮಾಡಿದ್ದೇವೆ ಎಂದು ಮೀರಾ ತಿಳಿಸಿದ್ದಾರೆ.‌ ಆದರೆ ಹುಡುಗ ಯಾರು ಎಂಬುದನ್ನ ನಟಿ ರಿವೀಲ್‌ ಮಾಡಿಲ್ಲ.

    ರಾಜಸ್ಥಾನದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಬಳಿಕ ಮುಂಬೈನಲ್ಲಿ ಸ್ನೇಹಿತರಿಗೆ ಆಪ್ತರಿಗಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ನಟಿ ಹೇಳಿದ್ದಾರೆ. ಇದನ್ನೂ ಓದಿ:ಕಾಟೇರ ರಿಲೀಸ್ ದಿನವೇ ರಮ್ಯಾ ನಿರ್ಮಾಣದ ಸಿನಿಮಾ ಒಟಿಟಿಗೆ

    ಇನ್ನೂ ಕನ್ನಡದ ಸ್ಟಾರ್ ನಟ ದರ್ಶನ್ (Darshan) ನಟಿಸಿರುವ ‘ಅರ್ಜುನ್’ (Arjun) ಸಿನಿಮಾದಲ್ಲಿ ಮೀರಾ ಚೋಪ್ರಾ ನಾಯಕಿಯಾಗಿ ನಟಿಸಿದ್ದರು. ಇದೀಗ ಸೌತ್- ಬಾಲಿವುಡ್ ಚಿತ್ರಗಳಲ್ಲಿ ಮೀರಾ ಆ್ಯಕ್ಟೀವ್ ಆಗಿದ್ದಾರೆ.

  • ತಂದೆಯ ಮದುವೆಗೆ ಬಂದ ಅರ್ಬಾಜ್ ಪುತ್ರ, ಮಲೈಕಾ ಕೇಕ್ ಉಡುಗೊರೆ

    ತಂದೆಯ ಮದುವೆಗೆ ಬಂದ ಅರ್ಬಾಜ್ ಪುತ್ರ, ಮಲೈಕಾ ಕೇಕ್ ಉಡುಗೊರೆ

    ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಮತ್ತು ನಟ ಅರ್ಬಾಜ್ ಖಾನ್ ದಂಪತಿ ಪುತ್ರ ಅರ್ಹಾನ್ ಖಾನ್ (Arhaan Khan) ಭಾರತಕ್ಕೆ ಬಂದಿಳಿದಿದ್ದಾರೆ. ತಂದೆ ಅರ್ಬಾಜ್ ಅವರ ಎರಡನೇ ಮದುವೆಯಲ್ಲಿ ಅವರು ಪಾಲ್ಗೊಂಡಿದ್ದಾರೆ. ನೇರವಾಗಿ ತಂದೆಯ ಮದುವೆಯಲ್ಲಿ ಪುತ್ರ ಪಾಲ್ಗೊಂಡಿದ್ದರೆ, ಮಾಜಿ ಪತಿಗೆ ಕೇಕ್ ನೀಡುವ ಮೂಲಕ ಮಲೈಕಾ ಶುಭಾಶಯ ಕೋರಿದ್ದಾರೆ.

    ನಟ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಖಾನ್ (Arbaaz Khan) ನಿನ್ನೆ (ಡಿ.24) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇಕಪ್ ಆರ್ಟಿಸ್ಟ್ ಶುರಾ ಖಾನ್ (Shura Khan) ಜೊತೆ ಅರ್ಬಾಜ್ ಮದುವೆ (Marriage) ನಡೆಸಿದ್ದು, ಮುಂಬೈನಲ್ಲಿರುವ ಕುಟುಂಬದ ಸದಸ್ಯರು ಮತ್ತು ಆತ್ಮೀಯರಿಗೆ ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ.

    ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ಭಾನುವಾರ ನಡೆದ ನಿಕಾಹ್ ಗಾಗಿ ವಧು ಶುರಾ ಕಾಣ್ ಲೈಟ್ ವೈಟ್ ಪೀಚ್ ಲೆಹೆಂಗಾ ಧರಿಸಿದ್ದರು. ಅರ್ಬಾಜ್ ಕೂಡ ಅಷ್ಟೇ ಗ್ರ್ಯಾಂಡ್ ಆಗಿರುವ ಕಾಸ್ಟ್ಯೂಮ್ ಹಾಕಿಕೊಂಡಿದ್ದರು. ತಮ್ಮ ಇನ್ಸ್ಟಾ ಪೇಜ್ ನಲ್ಲಿ ಮದುವೆ ಕುರಿತು ಅರ್ಬಾಜ್ ಬರೆದುಕೊಂಡಿದ್ದಾರೆ.

    ಮಲೈಕಾ ಅರೋರಾ ಜೊತೆ ಅರ್ಬಾಜ್ 1998ರಲ್ಲಿ ಮದುವೆ ಆಗಿದ್ದರು. ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡು ದೂರವಾದರು. 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಮಲೈಕಾ ಮತ್ತು ಅರ್ಬಾಜ್ ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ನಂತರ ಅರ್ಬಾಜ್ ರೂಪದರ್ಶಿ ಜಾರ್ಜಿಯಾ ಜೊತೆ ಡೇಟ್ ಮಾಡುತ್ತಿದ್ದರು. ಆ ಸಂಬಂಧವೂ ಮುರಿದು ಬಿದ್ದಿತ್ತು.

     

    ಒಂಟಿಯಾಗಿ ಜೀವನ ನಡೆಸುತ್ತಿದ್ದ ಅರ್ಬಾಜ್ ಖಾನ್ ಇದೀಗ ಮೇಕಪ್ ಕಲಾವಿದೆ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರ್ಬಾಜ್ ಖಾನ್ ಅವರಿಗೂ ಮತ್ತು ಶುರಾ ಖಾನ್ ಅವರ ವಯಸ್ಸಿನ ಅಂತ ಬರೋಬ್ಬರಿ 22 ವರ್ಷ ಎಂದು ಹೇಳಲಾಗುತ್ತಿದೆ.