Tag: wedding

  • ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್‌ನಲ್ಲಿ ಬಾಲಿವುಡ್ ಸ್ಟಾರ್ಸ್

    ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್‌ನಲ್ಲಿ ಬಾಲಿವುಡ್ ಸ್ಟಾರ್ಸ್

    ವಿಶ್ವದ ಟಾಪ್ 10ರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ (Mukesh Ambani), ನೀತಾ ಅಂಬಾನಿ ಕೂಡ ಒಬ್ಬರಾಗಿದ್ದು, ಅವರ ಮನೆಯಲ್ಲಿ ಇದೀಗ ಮದುವೆ ಸಂಭ್ರಮ ಮನೆ ಮಾಡಿದೆ. ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್‌ಗೆ ಅದ್ಧೂರಿಯಾಗಿ ತಯಾರಿ ನಡೆಯುತ್ತಿದೆ. ಅಂಬಾನಿ ಕುಟುಂಬ ಮದುವೆಗೆ ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕಲಿದೆ.

    ಅನಂತ್ ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ವಿವಾಹ ಪೂರ್ವ ಕಾರ್ಯಕ್ರಮ ನಡೆಯಲಿದೆ. ಗುಜರಾತ್‌ನ ಜಾಮ್ ನಗರ ಸಾಕ್ಷಿಯಾಗಲಿದೆ. ಅನಂತ್ ಪ್ರೀ ವೆಡ್ಡಿಂಗ್ ಮದುವೆ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳು ಇರಲಿದೆ. ಖ್ಯಾತ ಗಾಯಕ ಬಿ ಪ್ರಾಕ್‌ ಅವರ ಗಾಯನ ಇರಲಿದೆ. ಇದನ್ನೂ ಓದಿ:ಶೂಟಿಂಗ್ ಸ್ಪಾಟ್ ನಲ್ಲೇ ಮದುವೆ ವಾರ್ಷಿಕೋತ್ಸವ ಆಚರಿಸಿದ ಚಂದನ್

    ಅನಂತ್ ಅಂಬಾನಿ ಮದುವೆಯಾಗಿ ಅದ್ಧೂರಿ ದೇಗುಲ ನಿರ್ಮಿಸಲಾಗುತ್ತಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ಥಂಭಗಳು, ಕಲಾಕೃತಿಗಳು ಇಲ್ಲಿ ಕಾಣಬಹುದು. ಇದನ್ನೂ ಓದಿ:ರಶ್ಮಿಕಾಗೆ ಠಕ್ಕರ್, ಗೋಲ್ಡನ್ ಚಾನ್ಸ್ ಬಾಚಿಕೊಂಡ ತೃಪ್ತಿ ದಿಮ್ರಿ

    ಅನಂತ್ ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ ಸ್ಟಾರ್ ಸೆಲೆಬ್ರಿಟಿಗಳ ದಂಡೇ ಇರಲಿದೆ. ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ರಜನಿಕಾಂತ್, ರಣ್‌ಬೀರ್ ಕಪೂರ್, ಆಲಿಯಾ ಭಟ್ (Aliaa Bhat), ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ (Deepika Padukone) ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.

    ವಿಶೇಷ ಆಹ್ವಾನಿತರಷ್ಟೇ ಈ ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದು, ಸುಮಾರು 1000 ಗಣ್ಯರು ಭಾಗಿಯಾಲಿದ್ದಾರೆ. ಮೈಕ್ರೋಸಾಪ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಮೆಲಿಂಡಾ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹಲವರು ಹಾಜರಿ ಹಾಕಲಿದ್ದಾರೆ.

  • ಮದುವೆ ಬಳಿಕ ಅಯೋಧ್ಯೆಯಿಂದ ಪ್ರಸಾದ ಸ್ವೀಕರಿಸಿದ ರಕುಲ್

    ಮದುವೆ ಬಳಿಕ ಅಯೋಧ್ಯೆಯಿಂದ ಪ್ರಸಾದ ಸ್ವೀಕರಿಸಿದ ರಕುಲ್

    ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಮತ್ತು ಜಾಕಿ ಭಗ್ನಾನಿ ಫೆ.21ರಂದು ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಈ ಬೆನ್ನಲ್ಲೇ ರಕುಲ್ ದಂಪತಿಗೆ ಅಯೋಧ್ಯೆಯಿಂದ ಪ್ರಸಾದ ಸಿಕ್ಕಿದೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಮದುವೆ ಸಂಭ್ರಮ ಮುಗಿಸಿ ಇದೀಗ ರಕುಲ್ ದಂಪತಿ, ಮುಂಬೈ ನಿವಾಸಕ್ಕೆ ಮರಳಿದ್ದಾರೆ. ಮನೆಗೆ ಬರುತ್ತಿದ್ದಂತೆ ಅಯೋಧ್ಯೆಯಿಂದ ರಕುಲ್‌ಗೆ ಪ್ರಸಾದ ಸಿಕ್ಕಿದೆ. ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ನಮ್ಮ ಮದುವೆಯ ನಂತರ ಅಯೋಧ್ಯೆಯಿಂದ ಪ್ರಸಾದ ಸ್ವೀಕರಿಸುತ್ತಿರೋದು ನಮಗೆ ಸಿಕ್ಕ ಆಶೀರ್ವಾದ. ನಮ್ಮ ಮುಂದಿನ ಹೆಜ್ಜೆಗೆ ದೈವಿಕ ಆರಂಭ ಎಂದು ರಕುಲ್ ಬರೆದುಕೊಂಡಿದ್ದಾರೆ.

    ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿ ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ರಕುಲ್ ಶೇರ್ ಮಾಡಿದ್ದರು. ಕ್ರೀಮ್- ಗೋಲ್ಡನ್ ಉಡುಗೆಯಲ್ಲಿ ರಕುಲ್ ದಂಪತಿ ಮಿಂಚಿದ್ದರು. ಫೆ.21ರಂದು ಎರಡು ಸಂಪ್ರದಾಯದಂತೆ ವಿವಾಹ ಜರುಗಿತ್ತು. ಸಿಖ್ ಮತ್ತು ಸಿಂಧಿ ಶೈಲಿಯಲ್ಲಿ ರಕುಲ್- ಜಾಕಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ರಸ್ತೆಬದಿಯಲ್ಲಿ ತಿಂಡಿ ಸವಿದ ಕಾರ್ತಿಕ್ ಆರ್ಯನ್

    ರಕುಲ್ ಮದುವೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದರು.

    ಇತ್ತೀಚೆಗಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು.

    ಈ ಸಮಯದಲ್ಲಿ ರಕುಲ್ ಅವರ ಬಾಯ್‌ಫ್ರೆಂಡ್ ನಟ- ನಿರ್ಮಾಪಕ ಜಾಕಿ ಭಗ್ನಾನಿ ಫೋಟೋ ಶೇರ್ ಮಾಡಿ, ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್ಡೇ ಮೈ ಲವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ರಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್‌ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಸ್ಯಾಂಡಲ್‌ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಕುಲ್ ನಟಿಸಿದ್ದಾರೆ. ಕನ್ನಡದ ‘ಗಿಲ್ಲಿ’ (Gilli Kannada Film) ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಕುಲ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

  • ಸ್ಟಾರ್ ಕುಟುಂಬಕ್ಕೆ ಸೊಸೆಯಾಗ್ತಾರಂತೆ ಶ್ರೀಲೀಲಾ- ಭವಿಷ್ಯ ನುಡಿದ ಜ್ಯೋತಿಷಿ

    ಸ್ಟಾರ್ ಕುಟುಂಬಕ್ಕೆ ಸೊಸೆಯಾಗ್ತಾರಂತೆ ಶ್ರೀಲೀಲಾ- ಭವಿಷ್ಯ ನುಡಿದ ಜ್ಯೋತಿಷಿ

    ನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಮಾಡಿರುವ ಸಿನಿಮಾವೆಲ್ಲಾ ಸಕ್ಸಸ್ ಕಾಣದೇ ಇದ್ದರೂ ಶ್ರೀಲೀಲಾಗೆ ಭಾರೀ ಬೇಡಿಕೆ ಇದೆ. ಸದ್ಯ ಶ್ರೀಲೀಲಾ ಮದುವೆ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಚಿತ್ರರಂಗದ ದೊಡ್ಡ ಮನೆಗೆ ಸೊಸೆಯಾಗಿ ಹೋಗ್ತಾರಂತೆ ಶ್ರೀಲೀಲಾ. ಹೀಗಂತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

    ಇತ್ತೀಚೆಗಷ್ಟೇ ಶ್ರೀಲೀಲಾ ತಾಯಿ ಖ್ಯಾತ ಜ್ಯೋತಿಷಿಯೊಬ್ಬರಿಗೆ ಜಾತಕ ತೋರಿಸಿದ್ದು, ನಿಮ್ಮ ಮಗಳು ಚಿತ್ರರಂಗದ ದೊಡ್ಡ ಮನೆತನದ ಸೊಸೆಯಾಗಲಿದ್ದಾರೆ ಎಂದು ಜ್ಯೋತಿಷಿ ಭವಿಷ್ಯ ಹೇಳಿದ್ದಾರೆ. ಸದ್ಯ ಈ ರೀತಿಯ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ:ವಯಸ್ಸಾಯ್ತು ಮದುವೆಯಾಗು ಎಂದವನಿಗೆ ಶಮಿತಾ ಶೆಟ್ಟಿ ಕ್ಲಾಸ್‌

    ಕನ್ನಡದ ಕಿಸ್, ಭರಾಟೆ, ಬೈಟು ಲವ್ ಚಿತ್ರ ನಂತರ ಪೆಳ್ಳಿ ಸಂದಡಿ, ‘ಧಮಾಕಾ’ (Dhamaka) ಚಿತ್ರದ ಮೂಲಕ ಟಾಲಿವುಡ್‌ಗೆ ನಟಿ ಪರಿಚಿತರಾದರು. ಬಳಿಕ ತೆಲುಗಿನ ಸ್ಟಾರ್ ನಟರಿಗೆ ಶ್ರೀಲೀಲಾ ನಾಯಕಿಯಾದರು. ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಶೆಟ್ಟಿಗೆ ಠಕ್ಕರ್ ಕೊಟ್ಟು ಬಿಗ್ ಚಾನ್ಸ್ ಬಾಚಿಕೊಂಡರು.

    ಇತ್ತೀಚೆಗೆ ಮಹೇಶ್ ಬಾಬು (Mahesh Babu) ಜೊತೆ ‘ಗುಂಟೂರು ಖಾರಂ’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಲ್ಲದೇ ಕೆಲವು ದಿನಗಳ ಹಿಂದೆ ಬಾಲಕೃಷ್ಣ ಅಭಿನಯದ ‘ಭಗವಂತ ಕೇಸರಿ’ ಚಿತ್ರದಲ್ಲಿ ಶ್ರೀಲೀಲಾ ನಟಿಸಿದ್ದರು.

  • ಮದುವೆ ನಂತರ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ರಕುಲ್ ದಂಪತಿ

    ಮದುವೆ ನಂತರ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡ ರಕುಲ್ ದಂಪತಿ

    ನ್ನಡದ ‘ಗಿಲ್ಲಿ’ ನಟಿ ರಕುಲ್ ಪ್ರೀತ್‌ ಸಿಂಗ್ (Rakul Preet Singh) ಮತ್ತು ಜಾಕಿ ಭಗ್ನಾನಿ (Jackky Bhagnani) ಜೋಡಿ ಇದೇ ಫೆ.21ರಂದು ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾದರು. 5 ವರ್ಷಗಳ ಡೇಟಿಂಗ್‌ ನಂತರ ಮದುವೆಯ ಮುದ್ರೆ ಒತ್ತಿದ್ದರು. ಇದೀಗ ಮದುವೆ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ಕಣ್ಣಿಗೆ ರಕುಲ್ ದಂಪತಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಬರಲಿದೆ ‘ಜೈಲರ್ ಪಾರ್ಟ್ 2’- ತಲೈವಾ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    ಜಾಕಿ ಭಗ್ನಾನಿ ಸಹೋದರ ನಿಕ್ಕಿ ಜೊತೆ ನವಜೋಡಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವಧು ರಕುಲ್ ಮಾಡ್ರನ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆ ನಂತರ ಮೊದಲ ಬಾರಿಗೆ ಕ್ಯಾಮೆರಾ ಎದುರಿಗೆ ರಕುಲ್ ಜೋಡಿ ಬಂದಿದ್ದಾರೆ.

    ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿದ್ದು, ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ರಕುಲ್ ಶೇರ್ ಮಾಡಿದ್ದರು. ಕ್ರೀಮ್- ಗೋಲ್ಡನ್ ಉಡುಗೆಯಲ್ಲಿ ರಕುಲ್ ದಂಪತಿ ಮಿಂಚಿದ್ದಾರೆ. ನವಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

    ಎರಡು ಸಂಪ್ರದಾಯದಂತೆ ವಿವಾಹ ನಡೆದಿದೆ. ಸಿಖ್ ಮತ್ತು ಸಿಂಧಿ ಶೈಲಿಯಲ್ಲಿ ರಕುಲ್- ಜಾಕಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯ ಶಾಸ್ತ್ರವೆಲ್ಲ ಫೆ.19ರಿಂದಲೇ ಆರಂಭವಾಗಿತ್ತು. ಫೆ.21ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ರಕುಲ್- ಜಾಕಿ ಜೋಡಿ ಮದುವೆಯಾಗಿದ್ದಾರೆ.

    ರಕುಲ್ ಮದುವೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:ಸಮಂತಾ ನಿಜವಾದ ವಯಸ್ಸು ಎಷ್ಟು? ಮೆಟಾಬಾಲಿಕ್ ಏಜ್‌ ಅಂದ್ರೆ ಏನು? – ಖಾಸಗಿ ವಿಚಾರ ಬಾಯ್ಬಿಟ್ಟ ನಟಿ

    ಇತ್ತೀಚೆಗಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು.

    ಈ ಸಮಯದಲ್ಲಿ ರಕುಲ್ ಪ್ರೀತಿ ಸಿಂಗ್ ಅವರ ಬಾಯ್‌ಫ್ರೆಂಡ್ ನಟ- ನಿರ್ಮಾಪಕ ಜಾಕಿ ಭಗ್ನಾನಿ ಫೋಟೋ ಶೇರ್ ಮಾಡಿ, ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್‌ಡೇ ಮೈ ಲವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ರಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್‌ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಸ್ಯಾಂಡಲ್‌ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಕುಲ್ ಪ್ರೀತಿ ಸಿಂಗ್ ನಟಿಸಿದ್ದಾರೆ. ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಕುಲ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ, ಸ್ಪೇಡರ್ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

  • ನಿರ್ಮಾಪಕ ಜಾಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕುಲ್

    ನಿರ್ಮಾಪಕ ಜಾಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕುಲ್

    ನ್ನಡದ ‘ಗಿಲ್ಲಿ’ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರು ಬಹುಕಾಲದ ಗೆಳೆಯ ಜಾಕಿ ಭಗ್ನಾನಿ (Jackky Bhagnani) ಜೊತೆ ಹೊಸ ಬಾಳಿಗೆ (Wedding) ಕಾಲಿಟ್ಟಿದ್ದಾರೆ. ಗೋವಾದಲ್ಲಿ ರಾಕುಲ್ ದಂಪತಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

    ‘ನನ್ನದು ಮತ್ತು ಎಂದೆಂದಿಗೂ’ ಎಂದು ಅಡಿಬರಹ ನೀಡಿದ್ದು, ಪತಿ ಜೊತೆಗಿನ ಮದುವೆಯ ಸುಂದರ ಫೋಟೋಗಳನ್ನು ರಾಕುಲ್‌ ಶೇರ್‌ ಮಾಡಿದ್ದಾರೆ. ಕ್ರೀಮ್‌- ಗೋಲ್ಡನ್‌ ಉಡುಗೆಯಲ್ಲಿ ರಾಕುಲ್‌ ದಂಪತಿ ಮಿಂಚಿದ್ದಾರೆ. ನವಜೋಡಿಗೆ ಫ್ಯಾನ್ಸ್‌ ಶುಭಹಾರೈಸುತ್ತಿದ್ದಾರೆ.

    ಎರಡು ಸಂಪ್ರದಾಯದಂತೆ ವಿವಾಹ ನಡೆದಿದೆ. ಸಿಖ್ ಮತ್ತು ಸಿಂಧಿ ಶೈಲಿಯಲ್ಲಿ ರಾಕುಲ್‌- ಜಾಕಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯ ಶಾಸ್ತ್ರವೆಲ್ಲ ಫೆ.19ರಿಂದಲೇ ಆರಂಭವಾಗಿತ್ತು. ಫೆ.21ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ರಾಕುಲ್- ಜಾಕಿ ಜೋಡಿ ಮದುವೆಯಾಗಿದ್ದಾರೆ.

     

    View this post on Instagram

     

    A post shared by Rakul Singh (@rakulpreet)

    ರಾಕುಲ್ ಮದುವೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:ಧನುಷ್ ನಿರ್ದೇಶಿಸಿ, ನಟಿಸುತ್ತಿರುವ ಚಿತ್ರದ ಟೈಟಲ್ ಫಿಕ್ಸ್

    ಇತ್ತೀಚೆಗಷ್ಟೇ 31ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಕೆಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಜನ್ಮದಿನವನ್ನು ಭರ್ಜರಿಯಾಗಿ ನಟಿ ರಾಕುಲ್ ಪ್ರೀತ್ ಸಿಂಗ್ ಸೆಲೆಬ್ರೇಟ್ ಮಾಡಿದ್ದರು.

    ಈ ಸಮಯದಲ್ಲಿ ರಾಕುಲ್ ಪ್ರೀತಿ ಸಿಂಗ್ ಅವರ ಬಾಯ್‌ಫ್ರೆಂಡ್ ನಟ- ನಿರ್ಮಾಪಕ ಜಾಕಿ ಭಗ್ನಾನಿ ಫೋಟೋ ಶೇರ್ ಮಾಡಿ, ನೀನಿಲ್ಲದೆ ದಿನಗಳು ಎಂದಿನಂತೆ ದಿನಗಳಾಗಿರುವುದಿಲ್ಲ. ನೀನಿಲ್ಲದೆ ಎಂಥಾ ರುಚಿಕರ ತಿನಿಸನ್ನೂ ಆಸ್ವಾದಿಸಲಾಗುವುದಿಲ್ಲ. ನನ್ನ ಪಾಲಿಗೆ ಜಗತ್ತೇ ಆಗಿರುವ ಪ್ರೀತಿಯ ಪ್ರಿಯತಮೆಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಈ ದಿನ ನಿಮ್ಮಂತೆಯೇ ಸುಂದರವಾಗಿರಲಿ, ನಿಮ್ಮ ನಗುವಿನಂತೆಯೇ ಪ್ರಜ್ವಲಿಸಲಿ. ಹ್ಯಾಪಿ ಬರ್ತ್ಡೇ ಮೈ ಲವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆಗಲೇ ಮದುವೆ ವಿಚಾರವನ್ನೂ ಅವರು ಪ್ರಸ್ತಾಪಿಸಿದ್ದರು. ಥ್ಯಾಂಕ್ಯು ಮೈ ಲವ್. ಈ ವರ್ಷ ನನಗೆ ಸಿಕ್ಕ ಅತ್ಯುತ್ತಮ ಉಡುಗೊರೆ ನೀವೇ. ನನ್ನ ಬದುಕಿಗೆ ಬಣ್ಣಗಳನ್ನು ತುಂಬಿದ ನಿಮಗೆ ಧನ್ಯವಾದಗಳು. ನನ್ನನ್ನ ಸದಾ ನಗುವಂತೆ ಮಾಡುವ ನಿಮಗೆ ಧನ್ಯವಾದಗಳು ಎಂದು ಜಾಕಿ ಭಗ್ನಾನಿ ಅವರನ್ನು ಉಲ್ಲೇಖಿಸಿ ಸೋಷಿಯಲ್ ಮೀಡಿಯಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಬರೆದುಕೊಳ್ಳುವ ಮೂಲಕವಾಗಿ ತಮ್ಮ ಬಾಯ್‌ಫ್ರೆಂಡ್ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

    ಸ್ಯಾಂಡಲ್‌ವುಡ್, ಬಾಲಿವುಡ್ ಸಿನಿಮಾಗಳಲ್ಲಿ ರಾಕುಲ್ ಪ್ರೀತಿ ಸಿಂಗ್ ನಟಿಸಿದ್ದಾರೆ. ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಕುಲ್ ಕಿಕ್ 2, ಸರೈನೋಡು, ನಾನಕು ಪ್ರೇಮತೋ, ಸ್ಪೇಡರ್ ಮುಂತಾದ ಹಿಟ್ ಚಿತ್ರಗಳಲ್ಲಿ ಅಭಿನಯಿಸುವ ಮೂಲಕವಾಗಿ ಅಪಾರ ಅಭಿಮಾನಿಗಳ ಪ್ರೀತಿಯನ್ನು ಸಂಪಾದಿಸಿದ್ದಾರೆ.

  • 21 ವರ್ಷದ ಹುಡುಗಿ ಜೊತೆ 50ರ ವಯಸ್ಸಿನ ನಟನ ಮದುವೆ

    21 ವರ್ಷದ ಹುಡುಗಿ ಜೊತೆ 50ರ ವಯಸ್ಸಿನ ನಟನ ಮದುವೆ

    ಟ ಕಮ್ ಫಿಟ್‌ನೆಸ್ ಟ್ರೈನರ್ ಸಾಹಿಲ್ ಖಾನ್ (Sahil Khan) ಅವರು 21ನೇ ವಯಸ್ಸಿನ ಯುವತಿ ಜೊತೆ 2ನೇ ಮದುವೆಯಾಗುವ (Wedding) ಮೂಲಕ ಅಚ್ಚರಿ ಮೂಡಿಸಿದ್ದಾರೆ. 50ರ ಅಂಚಿನಲ್ಲಿರುವ ಸಾಹಿಲ್ ಇದೀಗ ಸಾಮಾಜಿಕ ಜಾಲತಾಣದಲ್ಲಿ 2ನೇ ಪತ್ನಿಯ ಪರಿಚಯ ಮಾಡಿಸಿದ್ದಾರೆ. ಇದನ್ನೂ ಓದಿ:ರಾಕುಲ್ ಮದುವೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಶಿಲ್ಪಾ ಶೆಟ್ಟಿ ದಂಪತಿ

    ಮದುವೆ ವಯಸ್ಸಿಗೆ ಬಂದಿರುವ ಹುಡುಗರು ತಮಗೆ ಹುಡುಗಿ ಸಿಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ. ಇದರ ನಡುವೆ 50 ವರ್ಷ ಸಮೀಪದಲ್ಲಿರುವ  ನಟ ಸಾಹಿಲ್ ಖಾನ್, 21ರ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

     

    View this post on Instagram

     

    A post shared by Sahil Khan (@sahilkhan)

    ʻಸುಂದರ ಯುವತಿಯ ಜೊತೆ ಫೋಟೋ ಶೇರ್ ಮಾಡಿಕೊಂಡಿರುವ ನಟ, ಈಕೆ ನನ್ನ ಗೊಂಬೆʼ ಸಾಹಿಲ್‌ ಖಾನ್ ಎಂದಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಇಬ್ಬರೂ ಜೊತೆಯಾಗಿ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ 2ನೇ ಮದುವೆ ಬಗ್ಗೆ ನಟ ಮಾಹಿತಿ ನೀಡಿದ್ದಾರೆ. ಆದರೆ ಪತ್ನಿಯ ಹೆಸರಾಗಲಿ ಆಕೆಯ ಬಗ್ಗೆ ಯಾವುದೇ ಮಾಹಿತಿ ನಟ ಹಂಚಿಕೊಂಡಿಲ್ಲ. ಸಾಹಿಲ್ ಪತ್ನಿ ನೋಡಲು ಗೊಂಬೆಯಂತೆಯೇ ಇದ್ದಾರೆ. ಸದ್ಯ ನಟನ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    2003ರಲ್ಲಿ ನಿಗರ್ ಖಾನ್ ಎಂಬುವವರನ್ನು ಸಾಹಿಲ್ ಖಾನ್ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2005ರಲ್ಲಿ ಮೊದಲ ಪತ್ನಿಗೆ ನಟ ಡಿವೋರ್ಸ್ ನೀಡಿದರು. ಅಂದಹಾಗೆ, ಸಾಹಿಲ್ ಅವರು, ಬಾಲಿವುಡ್‌ನ ಸ್ಟೈಲ್‌, ಎಕ್ಸ್‌ಕ್ಯೂಸ್‌ ಮಿ ಚಿತ್ರಗಳಲ್ಲಿ ನಟಿಸಿದ್ದಾರೆ.

  • ಪರ್ಸನಲ್ ವಿಚಾರವನ್ನು ಪಬ್ಲಿಕ್‌ನಲ್ಲಿ ಹೇಳುವ ಮುಠ್ಠಾಳ ನಾನಲ್ಲ- ವರ್ತೂರು ಕಿಡಿ

    ಪರ್ಸನಲ್ ವಿಚಾರವನ್ನು ಪಬ್ಲಿಕ್‌ನಲ್ಲಿ ಹೇಳುವ ಮುಠ್ಠಾಳ ನಾನಲ್ಲ- ವರ್ತೂರು ಕಿಡಿ

    ‘ಬಿಗ್ ಬಾಸ್ ಕನ್ನಡ 10’ರ ಸ್ಪರ್ಧಿ (Bigg Boss Kannada 10) ವರ್ತೂರು ಸಂತೋಷ್ (Varthur Santhosh) ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗ ಪತ್ನಿ ಜೊತೆಗಿನ ಮನಸ್ತಾಪಗಳ ಬಗ್ಗೆ ಬಾಯ್ಬಿಟ್ಟಿದ್ದರು. ಪತ್ನಿಯ ಕುಟುಂಬಸ್ಥರು ಕೂಡ ವರ್ತೂರು ಸಂತೋಷ್ ಬಗ್ಗೆ ಕಿಡಿಕಾರಿದ್ದರು. ಆದರೆ ದೊಡ್ಮನೆಯಿಂದ ಹೊರ ಬಂದ್ಮೇಲೆ ಅಸಲಿಗೆ ವೈಯಕ್ತಿಕ ಬದುಕಿನಲ್ಲಿ ಏನಾಗಿತ್ತು? ಎಂಬುದರ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ ನೀಡಲೇ ಇಲ್ಲ. ಇದೀಗ ಸುದ್ದಿಗೋಷ್ಠಿಯೊಂದರಲ್ಲಿ ಪತ್ನಿ ಬಗ್ಗೆ ಕೇಳಿದ್ದಕ್ಕೆ ವರ್ತೂರು ಗರಂ ಆಗಿದ್ದಾರೆ. ಇದನ್ನೂ ಓದಿ:ಡಾರ್ಲಿಂಗ್‌ ಪ್ರಭಾಸ್‌ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

    ಹಳ್ಳಿಕಾರ್ ರೇಸ್ ಕುರಿತು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ, ಪತ್ನಿ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಸಂತೋಷ್ ಸಿಡಿದೆದ್ದಿದ್ದಾರೆ. ಈ ಬಗ್ಗೆ ವರ್ತೂರು ಸಂತೋಷ್ ಮಾತನಾಡಿ, ಇದು ಪರ್ಸನಲ್ ವಿಚಾರ. ಇದನ್ನು ಪಬ್ಲಿಕ್‌ನಲ್ಲಿ ಹೇಳುವ ಮುಠ್ಠಾಳ ನಾನಲ್ಲ. ಯಾರೋ ಮುಠ್ಠಾಳರು ಅಂಥ ಕೆಲಸ ಮಾಡಿದ್ದಾರೆ ಎಂದರೆ ಅವರ ಮಟ್ಟಕ್ಕೆ ಇಳಿಯಲು ನಾವು ರೆಡಿ ಇಲ್ಲ. ಎಲ್ಲರ ಮನೆಯ ದೋಸೆ ಕೂಡ ತೂತು. ಕೆಲವರ ಮನೆ ಹಂಚೇ ತೂತಾಗಿರುತ್ತದೆ. ನಿಮಗೆ ಅರ್ಥ ಆಗಿದೆ ಎಂದು ಭಾವಿಸುತ್ತೇನೆ ಎಂದು ಪತ್ನಿ ಬಗ್ಗೆ ಕೇಳಿದ್ದಕ್ಕೆ ವರ್ತೂರು ಕೆಂಡಕಾರಿದ್ದಾರೆ.

    ಕೆಲವೊಂದು ಸಂಬಂಧಗಳು ಕೆಲವೊಂದು ವೇದಿಕೆಗೆ ಹೋದ್ಮೇಲೆ ಗೊತ್ತಾಗುತ್ತದೆ. ಅವರು ಸೊಳ್ಳೆಗೂ ಕಂಪೇರ್ ಮಾಡಲು ಆಗದೇ ಇರುವವರು ಎಂದು ಪತ್ನಿ ಕುಟುಂಬಕ್ಕೆ ಪರೋಕ್ಷವಾಗಿ ವರ್ತೂರು ಕುಟುಕಿದ್ದಾರೆ. ನಾವು ಯಾರ ಬಗ್ಗೆ ಆದರೂ ಮಾತನಾಡಬೇಕು ಅಂದರೆ ಸರಿಸಮಾನವಾಗಿರಬೇಕು. ಅವರು ಏನು ಅಲ್ಲ ಬಿಡಿ ಎಂದು ಮಾತನಾಡಿದ್ದಾರೆ. ಮದುವೆ ವಿಚಾರಕ್ಕೆ ವರ್ತೂರು ಖಡಕ್ ಆಗಿ ಉತ್ತರ ನೀಡಿದ್ದಾರೆ.

    ಇನ್ನೂ ಹಳ್ಳಿಕಾರ್ ರೇಸ್ ಮಾರ್ಚ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಸಕಲ ಸಿದ್ಧತೆ ನಡೆಯಲಿದೆ. ಹಳ್ಳಿಕಾರ್ ಹಬ್ಬದಲ್ಲಿ ಸುದೀಪ್ (Sudeep), ಧ್ರುವ ಸರ್ಜಾ ಭಾಗಿಯಾಗುವ ಸಾಧ್ಯತೆ ಇದೆ. ಬಿಗ್ ಬಾಸ್ ಕನ್ನಡ 10ರ ಸ್ಪರ್ಧಿಗಳು ಕೂಡ ವರ್ತೂರುಗೆ ಸಾಥ್ ನೀಡಲಿದ್ದಾರೆ.

  • 12 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ‘ಧೂಮ್’ ಚಿತ್ರ ನಟಿ ಇಶಾ

    12 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ‘ಧೂಮ್’ ಚಿತ್ರ ನಟಿ ಇಶಾ

    ಬಾಲಿವುಡ್ ಸ್ಟಾರ್ ನಟ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ (Hema Malini) ಪುತ್ರಿ ಇಶಾ ಡಿಯೋಲ್ (Esha Deol) ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಉದ್ಯಮಿ ಭರತ್ ತಖ್ತಾನಿ (Bharat Takhtani) ಜೊತೆಗಿನ 12 ವರ್ಷಗಳ ವೈವಾಹಿಕ ಜೀವನಕ್ಕೆ ‘ಧೂಮ್’ ನಟಿ ಇಶಾ ಅಂತ್ಯ ಹಾಡಿದ್ದಾರೆ. ಇದನ್ನೂ ಓದಿ:ಸಂಭಾವನೆ ಬಗ್ಗೆ ಮಾತನಾಡಿದವರಿಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

    ವಿಚ್ಛೇದನದ ಬಗ್ಗೆ ಇಶಾ ಡಿಯೋಲ್- ಭರತ್ ತಖ್ತಾನಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ನಾವು ಪರಸ್ಪರ ಒಪ್ಪಿಗೆಯ ಮೇರೆಗೆ ಸೌಹಾರ್ದಯುತವಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಜೀವನ ಬದಲಾಗುತ್ತಿರುವ ಈ ಸಮಯದಲ್ಲಿ ನಮ್ಮ ಇಬ್ಬರು ಮಕ್ಕಳ ಉತ್ತಮ ಹಿತಾಸಕ್ತಿ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಗೌಪ್ಯತೆಯನ್ನ ಗೌರವಿಸುವುದನ್ನು ನಾವು ಪ್ರಶಂಸಿಸುತ್ತೇವೆ ಎಂದು ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಜಂಟಿ ಹೇಳಿಕೆ ನೀಡಿದ್ದಾರೆ. ಎಂದು ವರದಿಯಾಗಿದೆ. ಕೆಲ ದಿನಗಳಿಂದ ಇಬ್ಬರ ಡಿವೋರ್ಸ್ (Divorce) ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈಗ ಅಧಿಕೃತ ಮಾಹಿತಿ ಹೊರಬಿದ್ದಿದೆ.

    2012ರಲ್ಲಿ ಇಶಾ ಡಿಯೋಲ್- ಭರತ್ ತಖ್ತಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2017ರಲ್ಲಿ ಮಗಳು ರಾಧ್ಯಗೆ ಇಶಾ ಡಿಯೋಲ್ ಜನ್ಮ ನೀಡಿದರು. 2019ರಲ್ಲಿ ಎರಡನೇ ಮಗುವನ್ನ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಬರಮಾಡಿಕೊಂಡಿದ್ದರು. ಇದೀಗ 12 ವರ್ಷಗಳ ದಾಂಪತ್ಯ ಜೀವನಕ್ಕೆ ಇಶಾ ಡಿಯೋಲ್- ಭರತ್ ಬ್ರೇಕ್ ಹಾಕಿದ್ದಾರೆ. ಸದ್ಯ ಇಬ್ಬರೂ ಬೇರೆ ಆಗಿರುವ ವಿಚಾರ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

    ಧೂಮ್, ಜಸ್ಟ್ ಮ್ಯಾರೀಡ್, ನೋ ಎಂಟ್ರಿ, ಡಾರ್ಲಿಂಗ್, ಶಾದಿ ನಂ.1 ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಇಶಾ ನಟಿಸಿದ್ದಾರೆ.

  • 2 ಮಕ್ಕಳ ತಂದೆಯನ್ನು ಮದುವೆಯಾಗಿ ನಂತರ ದೂರವಾಗಿದ್ದೇಕೆ ಪೂನಂ?

    2 ಮಕ್ಕಳ ತಂದೆಯನ್ನು ಮದುವೆಯಾಗಿ ನಂತರ ದೂರವಾಗಿದ್ದೇಕೆ ಪೂನಂ?

    ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ (Poonam Pandey) ನಿಧನದ ಸುದ್ದಿ ಸದ್ಯ ಬಾಲಿವುಡ್‌ಗೆ (Bollywood) ಶಾಕ್ ಕೊಟ್ಟಿದೆ. ಕೇವಲ 32ನೇ ವಯಸ್ಸಿಗೆ ನಟಿ (ಇಂದು) ಫೆ.2 ವಿಧಿವಶರಾಗಿದ್ದಾರೆ. ಸಿನಿಮಾ, ಮಾಡೆಲಿಂಗ್ ಎಂದು ಸುದ್ದಿಯಾಗಿದ್ದ ಪೂನಂ ವೈಯಕ್ತಿಕ ಬದುಕಿನಲ್ಲೂ ಕೂಡ ಅವರಿಗೆ ಖುಷಿ ಇರಲಿಲ್ಲ. ಅಂದು ಇಬ್ಬರು ಮಕ್ಕಳ ತಂದೆಯನ್ನು ಪೂನಂ ಮದುವೆಯಾಗಿ ಆಮೇಲೆ ದೂರವಾಗಿದ್ದೇಕೆ? ಇಲ್ಲಿದೆ ಮಾಹಿತಿ.

    ಕಾಂಟ್ರವರ್ಸಿ ಮೂಲಕನೇ ಬಾಲಿವುಡ್ ರಂಗ ತನ್ನ ಕಡೆ ತಿರುಗುವಂತೆ ಮಾಡಿದ್ದ ಪೂನಂ ಪಾಂಡೆ ವೃತ್ತಿರಂಗದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದರು. ಹಾಗಂತ ವೈಯಕ್ತಿಕ ಜೀವನದಲ್ಲೂ ಕೂಡ ನಟಿ ಸುಖವಾಗಿ ಇರಲಿಲ್ಲ. ಇದನ್ನೂ ಓದಿ: ಕನ್ನಡ ಸಿನಿಮಾದಲ್ಲೂ ಸೊಂಟ ಬಳುಕಿಸಿದ್ದ ಯುವಕರ ಫೇವರೇಟ್ ನಟಿ ಪೂನಂ

    ನಿರ್ಮಾಪಕ ಸ್ಯಾಮ್ ಬಾಂಬೆ (Sam Bombay) ಎಂಬವರ ಜೊತೆ 2020ರಲ್ಲಿ ಪೂನಂ ಮದುವೆಯಾಗಿದ್ದರು. ಇಬ್ಬರ ಮಕ್ಕಳು ಇರುವ ವಿಚಾರ ತಿಳಿದಿದ್ದರೂ ಕೂಡ ಪ್ರೀತಿಸಿ ಉದ್ಯಮಿ ಸ್ಯಾಮ್ ಬಾಂಬೆ ಅವರನ್ನು ಪೂನಂ ವರಿಸಿದ್ದರು. ಆದರೆ ಇವರ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ.

    2020ರಲಲಿ ಮದುವೆಯಾದ ಕೆಲವೇ ತಿಂಗಳಿಗೆ ಇಬ್ಬರ ಜಗಳ ಬೀದಿಗೆ ಬಂದಿತ್ತು. ಸ್ಯಾಮ್ ಬಾಂಬೆ ದೈಹಿಕ ಹಲ್ಲೆ ಮಾಡಿರೋದಾಗಿ ಪೂನಂ ದೂರು ದಾಖಲಿಸಿದ್ದರು. ನಂತರ ಮುಂಬೈ ಪೊಲೀಸರು ಅವರನ್ನು ಬಂಧಿಸಿದ್ದರು. ಪೂನಂ ಅವರ ತಲೆ, ಕಣ್ಣು ಮತ್ತು ಮುಖಕ್ಕೆ ಗಾಯಗಳಾಗಿತ್ತು ಎಂಬ ಸುದ್ದಿ ವೈರಲ್ ಆಗಿತ್ತು. ವೈಯಕ್ತಿಕ ಮನಸ್ತಾಪಗಳಿಂದ ಸ್ಯಾಮ್ ಜೊತೆಗಿನ ದಾಂಪತ್ಯಕ್ಕೆ ಪೂನಂ ಬ್ರೇಕ್ ಹಾಕಿದ್ದರು.

  • ಮದುವೆ ವಿವಾದದ ಬಗ್ಗೆ ಮೌನ ಮುರಿದ ವರ್ತೂರು ಸಂತೋಷ್

    ಮದುವೆ ವಿವಾದದ ಬಗ್ಗೆ ಮೌನ ಮುರಿದ ವರ್ತೂರು ಸಂತೋಷ್

    ರ್ತೂರು ಸಂತೋಷ್ (Varthur Santhosh) ಬಿಗ್ ಬಾಸ್‌ನಲ್ಲಿ ಕೊನೆವರೆಗೂ ಇದ್ದು ಬಂದಿದ್ದಾರೆ. ಆದರೆ ಸುಮ್ಮನೆ ಬಂದಿಲ್ಲ. ಕರುನಾಡಿನ ಮನಸನ್ನು ಗೆದ್ದಿದ್ದಾರೆ. ಅನೇಕ ವಿವಾದಗಳಿಂದ ಸೋತು ಹೋಗಿದ್ದವರನ್ನು ಜನರೇ ಎದ್ದು ನಿಲ್ಲಿಸಿ ಬಹುಪರಾಕ್ ಹಾಕಿದ್ದಾರೆ. ಹೀಗಾಗಿಯೇ ಇಂದು ಸಂತೋಷ್ ಬೆಂಕಿಯಲ್ಲಿ ಅರಳಿದ ಹೂವಾಗಿ ನಿಂತಿದ್ದಾರೆ. ಇದೀಗ ಮದುವೆ ವಿವಾದದ ಬಗ್ಗೆ ವರ್ತೂರು ಸಂತೋಷ್ ಮಾತನಾಡಿದ್ದಾರೆ. ಇದನ್ನೂ ಓದಿ:‘ಸಲಾರ್’ ಸಕ್ಸಸ್ ಬಳಿಕ ಏಕಾಎಕಿ ಯುರೋಪ್‌ಗೆ ಹೊರಟಿದ್ದೇಕೆ ಪ್ರಭಾಸ್?

    ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ (Bigg Boss Kannada 10) ಹೋಗೋವರೆಗೆ ಇವರು ಯಾರೆಂದು ಕರುನಾಡಿಗೆ ಅರಿವು ಇರಲಿಲ್ಲ. ಕಾರಣ ಸೋಷಿಯಲ್ ಮೀಡಿಯಾದಲ್ಲಿ ಇವರು ಹೆಸರು ಮಾಡಿದ್ದರು. ಹಳ್ಳಿಕಾರ್ ಹಸು ತಳಿಯನ್ನು ಪ್ರಚಾರ ಮಾಡಿದ್ದರು. ಅದಕ್ಕಾಗಿ ಎಲ್ಲೆಲ್ಲೋ ಸುತ್ತಾಡಿದ್ದರು. ಆದರೆ ಜನ ಸಾಮಾನ್ಯರಿಗೆ ಇದರ ಬಗ್ಗೆ ಅರಿವು ಇರಲಿಲ್ಲ. ಆದರೆ ಯಾವಾಗ ಒಂದೊಂದಾಗಿ ಇವರ ಬಗ್ಗೆ ವಿಚಾರ ಗೊತ್ತಾಗುತ್ತಾ ಹೋಯಿತೋ ಏಕಾಏಕಿ ಸ್ಟಾರ್ ಆದರು. ವರ್ತೂರು ಸಂತೋಷ್ ಕನ್ನಡ ನಾಡಿನ ಮನೆ ಮಗನಾದರು.

    ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಸಂತೋಷ್ ಹುಟ್ಟು ಹಾಕಿದ್ದ ಅಥವಾ ಬೇರೆಯವರು ಹುಟ್ಟುಹಾಕಿದ್ದಕ್ಕೆ ಕುಗ್ಗಿ ಹೋದ ಏಕೈಕ ಸ್ಪರ್ಧಿ ಅಂದರೆ ಅದು ವರ್ತೂರು ಸಂತೋಷ್. ಪಕ್ಕಾ ಹಳ್ಳಿಗಾಡಿನ ಪ್ರತಿಭೆ. ಹಿಂದೊಂದು ಮುಂದೊಂದು ಗೊತ್ತಿರದ ಜೀವ. ಅದೇ ಕಾರಣಕ್ಕೆ ಜೈಲು ಸೇರಿ ಬಂದರು. ಬಿಗ್‌ಬಾಸ್ ಮನೆಯಿಂದ ನೇರವಾಗಿ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿ ಆಯಿತು. ಸಂತೋಷ್ ಕಣ್ಣೀರಿಟ್ಟರು. ಅದಕ್ಕೆಲ್ಲಾ ಕಾರಣ ಹುಲಿ ಉಗುರಿನ ಪೆಂಡೆಂಟ್ ಇರುವ ಸರ ಧರಿಸಿದ್ದು.

    ಅಲ್ಲಿಗೇ ಸಂತೋಷ್‌ಗೆ ನೆಮ್ಮದಿ ಸಿಕ್ಕಿತಾ? ಇವರ ವೈಯಕ್ತಿಕ ಬದುಕು ಹೊರಗೆ ಬಂತು. ಸಂತೋಷ್ ಮದುವೆಯಾಗಿದ್ದು, ಪತ್ನಿಯಿಂದ ದೂರವಾಗಿದ್ದು. ಪತ್ನಿ ಕುಟುಂಬಕ್ಕೆ ಕಿರುಕುಳ ನೀಡಿದ್ದು, ಹೀಗೆ ಏನೇನೊ ಅಪವಾದವನ್ನು ಖುದ್ದು ಸಂತೋಷ್ ಮಾವ ಪತ್ರಿಕಾ ಗೋಷ್ಠಿ ಮಾಡಿ ಹಂಚಿಕೊಂಡರು. ಅಲ್ಲಿವರೆಗೆ ಸಂತೋಷ್ ತಾವೆಲ್ಲೂ ಮದುವೆ ಆಗಿಲ್ಲ ಎಂದು ಹೇಳಿರಲಿಲ್ಲ. ಆದರೂ ಹೆಣ್ಣು ಕೊಟ್ಟ ಮಾವ ಜನರೆದುದು ಅನಿಸಿದ್ದನ್ನು ಹೇಳಿದರು. ಬಿಗ್ ಬಾಸ್ ಮುಗಿದ ಮೇಲೆ ಮತ್ತೆ ಮದುವೆ ಬಗ್ಗೆ ಕೇಳಿದ್ದಕ್ಕೆ ಸಂತೋಷ್, ಕಾಲಾಯ ತಸ್ಮೈ ನಮಃ ಎಂದಿದ್ದಾರೆ. ಇದನ್ನೂ ಓದಿ:ಲವ್ ಸೆಲೆಬ್ರೇಷನ್‌ಗೆ ಗೊಂಬೆಯಂತೆ ರೆಡಿಯಾದ ರಾಧಿಕಾ ಪಂಡಿತ್

    ಮದುವೆ (Wedding) ಎನ್ನುವುದು ವೈಯಕ್ತಿಕ ವಿಷಯ. ಆದರೂ ಮನೆಯಲ್ಲಿದ್ದಾಗ ಇವರು ಅದಕ್ಕೂ ಸಮಜಾಯಿಷಿ ಕೊಟ್ಟಿದ್ದರು. ಈಗಲೂ ನನ್ನ ಮಾತು ಒಪ್ಪಿ ಬಂದರೆ ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೇನೆ ಎಂದಿದ್ದರು. ಅದಕ್ಕೆ ಇದೀಗ ಉತ್ತರಿಸಿದ್ದಾರೆ. ಆದರೆ ಎಲ್ಲೂ ಯಾರ ಮೇಲೂ ಆರೋಪ ಹೊರಿಸಿಲ್ಲ. ಮುಂದಿನ ದಿನಗಳಲ್ಲಿ ಇದನ್ನೆಲ್ಲ ಮರೆತು ಹಳ್ಳಿಕಾರ್ ರೇಸ್ ನಡೆಸಲು ತೀರ್ಮಾನಿಸಿದ್ದಾರೆ. ಯಾರ‍್ಯಾರು ಹಳ್ಳಿಕಾರ್ ಸಂತೋಷ್‌ಗೆ ಅವಮಾನ ಮಾಡಿದ್ದರೋ ಅವರಿಗೆ ಈ ಮೂಲಕ ಉತ್ತರಿಸಿಲು ಸಜ್ಜಾಗಿದ್ದಾರೆ. ಈ ಸಮಾರಂಭಕ್ಕೆ ಸುದೀಪ್‌ ಕೂಡ ಹಾಜರಿ ಹಾಕುವುದ್ದಕ್ಕೆ ಮಾತುಕತೆ ಆಗಿದೆ.

    ಇದೀಗ ಎಲ್ಲವೂ ಮುಗಿದಿದೆ. ಹಳೆಯದನ್ನು ಮರೆತು ಹೊಸ ಬದುಕು ನಡೆಸಲು ನಿರ್ಧರಿಸಿದ್ದಾರೆ. ಹೀಗಾಗಿಯೇ ಅವಕಾಶ ಸಿಕ್ಕರೆ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಲು ನಿಶ್ಚಯ ಮಾಡಿದ್ದಾರೆ. ಹಾಗಂತ ಹೀರೋ ಆಗುವ ಆಸಕ್ತಿ ಇಲ್ಲ. ಆಗಾಗ ಜನರಿಗೆ ಮುಖ ತೋರಿಸುತ್ತೇನೆ ಎನ್ನುತ್ತಾರೆ. ಅದಕ್ಕಾಗಿ ಯಾರ ಹಿಂದೆಯೂ ಅವಕಾಶ ಬೇಡಿಕೊಂಡು ಹೋಗಲ್ಲ. ಅದಾಗಿಯೇ ಬಂದರೆ ಬಿಡುವುದಿಲ್ಲ.