ಬಾಲಿವುಡ್ (Bollywood) ಬ್ಯೂಟಿ ತಾಪ್ಸಿ ಪನ್ನು (Taapsee Pannu) ಇತ್ತೀಚೆಗೆ ಸೀಕ್ರೆಟ್ ಮದುವೆಯಾಗಿರೋದು (Wedding) ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮದುವೆಯ ಒಂದೇ ಒಂದು ಫೋಟೋ ಲೀಕ್ ಆಗದಂತೆ ನಟಿ ನೋಡಿಕೊಂಡಿದ್ದರು. ಹೀಗಿದ್ದರೂ ಕೂಡ ನಟಿ ತಾಪ್ಸಿಯ ಮದುವೆ ವಿಡಿಯೋ ಇದೀಗ ಹೊರಬಿದ್ದಿದೆ. ಸಂತಸದಿಂದ ಮದುವೆ ದಿನ ವೇದಿಕೆ ಏರುತ್ತಿರುವ ನಟಿಯ ವಿಡಿಯೋ ಲೀಕ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

10 ದಿನಗಳ ಹಿಂದೆ ತಾಪ್ಸಿ ಉದಯ್‌ಪುರದಲ್ಲಿ ಅದ್ಧೂರಿಯಾಗಿ ಮದುವೆಯಾಗಿರೋದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಆದರೆ ತಮ್ಮ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಮದುವೆ ಫೋಟೋ ಕೂಡ ಶೇರ್ ಮಾಡಿ ಪತಿ ಬಗ್ಗೆ ಮಾತನಾಡಿಲ್ಲ. ಇದೀಗ ಡ್ಯಾನ್ಸ್ ಮಾಡುತ್ತಾ ವೇದಿಕೆ ಏರಿ ಮಥಾಯಸ್ ಬೋ ಅವರಿಗೆ ಹಾರ ಹಾಕಿ ಖುಷಿಯಿಂದ ಮದುವೆ ಆಗುತ್ತಿರುವ ವಿಡಿಯೋ ಸದ್ದು ಮಾಡುತ್ತಿದೆ. ಇದನ್ನೂ ಓದಿ:‘R B 01’ ಚಿತ್ರದಲ್ಲಿ ಪಾತ್ರ ಹೇಗಿರಲಿದೆ? ಮಾಹಿತಿ ಬಿಚ್ಚಿಟ್ಟ ರಕ್ಷಕ್

ಮಾರ್ಚ್ 20ರಿಂದ ಮದುವೆ ಸಂಭ್ರಮ ಶುರುವಾಗಿದ್ದು, ಮಾರ್ಚ್ 23ಕ್ಕೆ ತಾಪ್ಸಿ ಪನ್ನು- ಮಥಾಯಸ್ ಬೋ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾಪ್ಸಿ ಸಿಖ್ ಧರ್ಮಕ್ಕೆ ಸೇರಿದವರು. ಮಥಾಯಸ್ ಕ್ರೈಸ್ತ ಧರ್ಮಕ್ಕೆ ಸೇರಿದ್ದಾರೆ. ಎರಡು ಧರ್ಮದ ಪದ್ಧತಿಯಂತೆ ಮದುವೆ ನೆರವೇರಿದೆ.
10 ವರ್ಷಗಳಿಂದ ಮಥಾಯಸ್ ಬೋ ಜೊತೆ ತಾಪ್ಸಿ ಡೇಟಿಂಗ್ ಮಾಡುತ್ತಿದ್ದರು. ಹೊಸ ಬಾಳಿಗೆ ಕಾಲಿಟ್ಟಿರುವ ನಟಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಆದಷ್ಟು ಬೇಗ ನಟಿಯ ಮದುವೆಯ ಫೋಟೋ ರಿವೀಲ್ ಮಾಡಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.












ಇದೀಗ ಚೆನ್ನೈನಲ್ಲಿ ‘ಫ್ಯಾಮಿಲಿ ಸ್ಟಾರ್’ (Family Star Film) ಚಿತ್ರದ ಪ್ರಚಾರ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಈ ವೇಳೆ, ವಿಜಯ್ ದೇವರಕೊಂಡ ಮದುವೆಯ ಬಗ್ಗೆ ಪ್ರಶ್ನೆ ಎದುರಾಗಿದೆ. ವಿಜಯ್ ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ನಟಿಸಿದ್ದೇನೋ ನಿಜ. ಹಾಗೇ ಇದೇ ವರ್ಷ ರಿಯಲ್ ಲೈಫ್‌ನಲ್ಲೂ ಫ್ಯಾಮಿಲಿ ಸ್ಟಾರ್ ಆಗುವ ಸಾಧ್ಯತೆ ಇದೆಯೇ ಎಂದು ಪ್ರಶ್ನೆ ಮಾಡಲಾಗಿದೆ. ಆ ಪ್ರಶ್ನೆಗೆ ವಿಜಯ್ ದೇವರಕೊಂಡ ಪ್ರತಿಕ್ರಿಯಿಸಿ, ನಾನು ಖಂಡಿತವಾಗಿಯೂ ಮದುವೆ ಆಗುತ್ತೇನೆ. ನನಗೂ ಮದುವೆ ಆಗಬೇಕೆಂಬ ಆಸೆ ಇದೆ. ನನಗೂ ಮಕ್ಕಳು ಬೇಕು. ಆದರೆ, ಈ ವರ್ಷ ಖಂಡಿತಾ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮತ್ತೆ ಲವ್ ಮ್ಯಾರೇಜ್ ಆಗುತ್ತೀರಾ? ಅರೇಂಜ್ಡ್ ಮ್ಯಾರೇಜ್ ಆಗುತ್ತೀರಾ? ಎಂದು ಮರು ಪ್ರಶ್ನೆ ಮಾಡಲಾಗಿದೆ. ಅದಕ್ಕೆ ವಿಜಯ್ ದೇವರಕೊಂಡ, ಖಂಡಿತಾ ಲವ್ ಮ್ಯಾರೇಜ್ ಎಂದು ಹೇಳಿದ್ದಾರೆ. ಆದರೂ, ಆ ಹುಡುಗಿಯನ್ನು ಅಪ್ಪ, ಅಮ್ಮ ಇಬ್ಬರೂ ಮೆಚ್ಚಬೇಕು. ಅವರಿಗೆ ಆ ಹುಡುಗಿ ಇಷ್ಟ ಆಗಬೇಕು ಎಂದು ಹೇಳಿಕೊಂಡಿದ್ದಾರೆ. ಇದರ ಮಧ್ಯೆ ಆ ಹುಡುಗಿ ಯಾರು? ಎಂದಾಗ, ವಿಜಯ್ ‘ಡಾರ್ಲಿಂಗ್ ಐ ಲವ್ ಯೂ’ ಎಂದು ನಗುತ್ತಲೇ ಉತ್ತರಿಸಿ ಸುಮ್ಮನಾಗಿದ್ದಾರೆ. ಅಲ್ಲಿಗೆ ಆ ಹುಡುಗಿ ಯಾರು ಎಂಬುದನ್ನು ಗುಟ್ಟು ಬಿಟ್ಟು ಕೊಟ್ಟಿಲ್ಲ.




ಜೈಪುರ್‌ನಲ್ಲಿ ಅದ್ಧೂರಿಯಾಗಿ ರಕ್ಷಿತ್ ಜೊತೆ ಮೀರಾ ಚೋಪ್ರಾ ಮದುವೆ ನಡೆಯಿತು. ಈ ಮದುವೆಗೆ ನಟಿ ಪ್ರಿಯಾಂಕಾ ಚೋಪ್ರಾ ಗೈರಾಗಿದ್ದರು. ಆದರೆ ಮನೆ ಮಗಳು ಮೀರಾ ಮದುವೆಗೆ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಹಾಜರಿ ಹಾಕಿ ಶುಭಹಾರೈಸಿದ್ದರು. ಕೆಲಸ ಕಮೀಟ್‌ಮೆಂಟ್‌ನಿಂದ ಪ್ರಿಯಾಂಕಾ ಗೈರಾಗಿದ್ದರು.
ಇದೀಗ ಸಹೋದರಿ ಮೀರಾಗೆ ಹೊಸ ಜರ್ನಿಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಅಭಿನಂದನೆಗಳು ಮೀರಾ ಚೋಪ್ರಾ ಮತ್ತು ರಕ್ಷಿತ್ ಎಂದು ಮನಸಾರೆ ನಟಿ ಹಾರೈಸಿದ್ದಾರೆ. ಪ್ರಿಯಾಂಕಾ ಹಾರೈಕೆಗೆ ಮೀರಾ ಪ್ರೀತಿಯಿಂದ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:
ನಿಮ್ಮ ಹಾರೈಕೆಗೆ ಧನ್ಯವಾದಗಳು. ಹೊಸ ಜೀವನ ಶುರು ಮಾಡಲು ಕಾತರದಿಂದ ಕಾಯುತ್ತೇನೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ತುಂಬು ಹೃದಯದಿಂದ ಪ್ರೀತಿ ಹಿಂದಿರುಗಿಸುತ್ತಿದ್ದೇನೆ ಎಂದು ಮೀರಾ ರಿಯಾಕ್ಟ್ ಮಾಡಿದ್ದಾರೆ. ಸದ್ಯ ಇಬ್ಬರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದೇನೆ.
ಎಂದೆಂದಿಗೂ ಸಂತೋಷ, ಜಗಳ, ನಗು, ಕಣ್ಣೀರು, ಮತ್ತು ನೆನಪುಗಳು ಈ ಜೀವಮಾನದಲ್ಲಿ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಿಮ್ಮೊಂದಿಗೆ ಪ್ರತಿ ಜನ್ಮ ಬದುಕುತ್ತೇನೆ ಎಂದು ಮೀರಾ ಮದುವೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.
ಜೈಪುರ ಮತ್ತು ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಮೀರಾ ಮದುವೆ ನಡೆದಿತ್ತು.ಮೀರಾ ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟ-ನಟಿಯರು ಭಾಗಿಯಾಗಿದ್ದರು. ಮೀರಾ ಚೋಪ್ರಾ ಮೂಲತಃ ಮುಂಬೈ ಹುಡುಗಿ ಆಗಿದ್ರೂ ಅವರಿಗೆ ಕನ್ನಡಕ್ಕೆ ನಂಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ (Darshan) ನಾಯಕಿ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡಿಗರಿಗೆ ಅರ್ಜುನ್ (Arjun) ಚಿತ್ರದ ನಟಿ ಅಂದರೆ ಅವರು ಎಂಬುದು ನೆನಪಾಗುತ್ತಾರೆ.
ಸಹೋದರಿ ಸಂಬಂಧಿ ಪ್ರಿಯಾಂಕಾರಂತೆ ಅವರಿಗೆ ಮೀರಾ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಸಿಗಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇದ್ದರೂ ಕೂಡ ಸಿನಿಮಾರಂಗ ಅವರ ಕೈಹಿಡಿಯಲಿಲ್ಲ.