Tag: wedding

  • ಮಾನ್ವಿತಾ ಮದುವೆ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

    ಮಾನ್ವಿತಾ ಮದುವೆ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

    ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಮೇ 1ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ನವಜೋಡಿಯ ಅರಿಶಿನ ಶಾಸ್ತ್ರ, ಮೆಹಂದಿ ಮತ್ತು ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ.

    ಮೈಸೂರಿನ ವರ ಅರುಣ್ ಕುಮಾರ್ (Arun Kumar) ಜೊತೆ ಮಾನ್ವಿತಾ ಮದುವೆಯಾಗುತ್ತಿದ್ದು, ಚಿಕ್ಕಮಗಳೂರಿನ ಕಳಸದಲ್ಲಿ ಮದುವೆಯ ಶಾಸ್ತ್ರಗಳು ನಡೆಯುತ್ತಿವೆ. ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ನವಜೋಡಿ ನೇರಳೆ ಬಣ್ಣದ ಧಿರಿಸಿನಲ್ಲಿ ಮಿಂಚಿದ್ದಾರೆ.

    ಮಾನ್ವಿತಾ ಮದುವೆ ಸಂಭ್ರಮದಲ್ಲಿ ನಿಧಿ ಸುಬ್ಬಯ್ಯ(Nidhi Subbaiah), ಶ್ರುತಿ ಹರಿಹರನ್ (Shruti Hariharan), ರಿಲಾಕ್ಸ್ ಸತ್ಯ ನಟ ಪ್ರಭು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ನಾಳೆ ನಡೆಯಲಿರುವ ಮದುವೆಯಲ್ಲಿ ಸ್ಟಾರ್‌ ನಟ-ನಟಿಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಅವಕಾಶವಿಲ್ಲದ ದಿನಗಳನ್ನು ಸ್ಮರಿಸಿದ ಸನ್ನಿ- ಕಣ್ಣೀರಿಟ್ಟ ಬಾಬಿ ಡಿಯೋಲ್

    ಅಂದಹಾಗೆ, ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು.

    ಆಗ ಅರುಣ್ ತಾಯಿಗೆ ನಮ್ಮ ತಾಯಿ ನಿಧನದ ಬಗ್ಗೆ ತಿಳಿದಿರಲಿಲ್ಲ. ಅವರು ನಮ್ಮನ್ನು ತಲುಪಲು ತುಂಬ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ನನ್ನ ನಂಬರ್ ಪಡೆದುಕೊಂಡು ಕರೆ ಮಾಡಿದ್ದಾರೆ. ಈಗ ಇದೆಲ್ಲವೂ ಸಾಧ್ಯವಾಗಿದೆ ಎಂದು ಖುಷಿಯಿಂದ ಹೇಳಿದ್ದರು ಮಾನ್ವಿತಾ. ಮದುವೆ ಸುದ್ದಿ ಸಂಭ್ರಮದ ನಡುವೆ ಮತ್ತೊಂದು ವಿಶೇಷ ಅಂದರೆ, ಮಾನ್ವಿತಾ ತಾಯಿ ಸುಜಾತಾ ಅವರ ಹುಟ್ಟುಹಬ್ಬ ಅಕ್ಟೋಬರ್ 14 ಅದೇ ದಿನ ಅರುಣ್ ಹುಟ್ಟುಹಬ್ಬವಂತೆ. ಇಲ್ಲಿಂದ ಪಾಸಿಟಿವ್ ಸೂಚನೆ ಸಿಕ್ಕಿದೆ. ಅಂದಹಾಗೆ, ನಿಧನಕ್ಕೂ ಮುನ್ನವೇ ಮಾನ್ವಿತಾ ಅವರ ತಾಯಿ ಸುಜಾತಾ ಅವರು ಅರುಣ್ ತಾಯಿಯೊಂದಿಗೆ ಮಾತನಾಡಿದ್ದರು.

  • ಮದುವೆ ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟ ಸೋನಾಕ್ಷಿ ಸಿನ್ಹಾ

    ಮದುವೆ ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟ ಸೋನಾಕ್ಷಿ ಸಿನ್ಹಾ

    ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಸದ್ಯ ‘ಹೀರಾಮಂಡಿ’ (Heeramandi) ವೆಬ್ ಸಿರೀಸ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನದ ವೇಳೆ, ಸೋನಾಕ್ಷಿ ಮದುವೆ ಪ್ಲ್ಯಾನ್‌ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ಇಡಿ ಶಾಕ್ ಬೆನ್ನಲ್ಲೇ ದೈವ ಕೋಲದಲ್ಲಿ ಶಿಲ್ಪಾ ಶೆಟ್ಟಿ ಭಾಗಿ

    ‘ಹೀರಾಮಂಡಿ’ ವಿಶೇಷ ಸಂದರ್ಶನದಲ್ಲಿ ರಿಚಾ ಚಡ್ಡಾ, ಅದಿತಿ ರಾವ್ ಹೈದರಿ, ಶರ್ಮಿನ್, ಮನಿಶಾ, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ವೇಳೆ, ಈ ಚಿತ್ರದ ಶೂಟಿಂಗ್ ವೇಳೆ 10 ದಿನಗಳ ಮೊದಲು ನನ್ನ ಮದುವೆ ಆಯಿತು ಎಂದು ರಿಚಾ ಮಾತನಾಡಿದ್ದಾರೆ.

    ಆ ನಂತರ ಅದಿತಿ ರಾವ್ ಹೈದರಿ ನಿಶ್ಚಿತಾರ್ಥ ಮಾಡಿಕೊಂಡರು. ನಟಿ ಶರ್ಮಿನ್ ಇತ್ತೀಚೆಗೆ ಮದುವೆಯಾದರು ಎಂದು ರಿಚಾ ಚಡ್ಡಾ ಮಾತನಾಡುತ್ತಾ ನಮ್ಮ ಸಿನಿಮಾ ಒಂಥರಾ ಮ್ಯಾರೇಜ್ ಬ್ಯೂರೋ ಇದ್ದಂತೆ ತಮಾಷೆಯಾಗಿ ಮಾತನಾಡಿದ್ದಾರೆ. ಈ ವೇಳೆ, ಮುಂದಿನ ಸಾಲಿನಲ್ಲಿ ನೀವಿದ್ದೀರಾ ಎಂದು ಸೋನಾಕ್ಷಿಗೆ ಕಾಲೆಳೆದಿದ್ದಾರೆ.

    ನಾನು ಮೊದಲು ಹುಡುಗನನ್ನು ಆಯ್ಕೆ ಮಾಡುತ್ತೇನೆ. ನಂತರ ನಿಮಗೆ ತಿಳಿಸುತ್ತೇನೆ ಎಂದು ತಮಾಷೆಯಾಗಿ ಮಾತನಾಡಿದ್ದಾರೆ. ಮೊದಲು ಹುಡುಗನನ್ನು ಹುಡುಕಬೇಕು ಎಂಬರ್ಥದಲ್ಲಿ ನಟಿ ಹೇಳಿದ್ದಾರೆ.

    ಸದ್ಯ ಬಾಲಿವುಡ್ ನಟ ಸಲ್ಮಾನ್ ಖಾನ್ ಆಪ್ತ ಜಹೀರ್ ಇಕ್ಬಾಲ್ (Zaheer Iqbal ) ಜೊತೆ ನಟಿ ಡೇಟಿಂಗ್ ಸುದ್ದಿ ಹಬ್ಬಿದೆ. ಆದರೆ ನಟಿ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಗುಡ್ ನ್ಯೂಸ್ ಸಿಗುತ್ತಾ ಎಂದು ಕಾದುನೋಡಬೇಕಿದೆ.

  • ದುಬಾರಿ ಕಾರು ಖರೀದಿಸಿದ ಹರಿಪ್ರಿಯಾ, ವಸಿಷ್ಠ ಸಿಂಹ ದಂಪತಿ

    ದುಬಾರಿ ಕಾರು ಖರೀದಿಸಿದ ಹರಿಪ್ರಿಯಾ, ವಸಿಷ್ಠ ಸಿಂಹ ದಂಪತಿ

    ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ (Vasista Simha) ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹರಿಪ್ರಿಯಾ ಜೋಡಿ ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

    ಇದೀಗ ಮರ್ಸಿಡೀಸ್ ಬೆಂಜ್ ಜಿಎಲ್‌ಇ 450 ಡಿ ಕಾರನ್ನು ಹರಿಪ್ರಿಯಾ ದಂಪತಿ ಖರೀದಿಸಿ ಮಾಡಿದ್ದಾರೆ. ಈ ಕಾರು ಸಖತ್ ಐಷಾರಾಮಿ ಆಗಿದೆ. 1 ಕೋಟಿ 40 ಲಕ್ಷ ರೂ. ಮೌಲ್ಯದ ಕಾರು ಇದಾಗಿದೆ. ಹೊಸ ಕಾರಿನ ಆಗಮನದ ಸಂತಸದಲ್ಲಿರುವ ಈ ಜೋಡಿ ಅಭಿಮಾನಿಗಳು ಶುಭಕೋರಿದ್ದಾರೆ.

    ವಸಿಷ್ಠ ಸಿಂಹ ಕನ್ನಡದ ಜೊತೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಮನ್ನಾ ಭಾಟಿಯಾ ನಟನೆಯ ಹೊಸ ಸಿನಿಮಾದಲ್ಲಿ ವಸಿಷ್ಠ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನೂ ಓದಿ:ನಟ ವಿಷ್ಣುವರ್ಧನ್ ನೆನಪಲ್ಲಿ ‘ಯಜಮಾನ’ ಪ್ರೀಮಿಯರ್ ಲೀಗ್

    ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಕಳೆದ ವರ್ಷ ಮೈಸೂರಿನಲ್ಲಿ ಮದುವೆಯಾದರು. ಮದುವೆಯ (Wedding) ಬಳಿಕ ನಟಿ ಕೆರಿಯರ್‌ನಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾಗೆ ಕಮ್ ಬ್ಯಾಕ್ ಮಾಡುತ್ತಾರೆ.

  • ಮದುವೆ ಸಂಭ್ರಮದ ನಡುವೆಯೂ ಮತ ಚಲಾಯಿಸಿದ ನಟ ಧನುಷ್

    ಮದುವೆ ಸಂಭ್ರಮದ ನಡುವೆಯೂ ಮತ ಚಲಾಯಿಸಿದ ನಟ ಧನುಷ್

    ‘ಗೀತಾ’ ಸೀರಿಯಲ್ (Geetha Serial) ಮೂಲಕ ಮನೆ ಮಾತಾದ ನಟ ಧನುಷ್ ಗೌಡ (Dhanush Gowda) ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಮದುವೆ (Wedding) ಸಂಭ್ರಮದ ನಡುವೆಯೂ ವೋಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಧನುಷ್ ಈ ನಡೆಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ. ಹೊಸ ಜೋಡಿಯ ದಾಂಪತ್ಯಕ್ಕೆ ಶುಭಕೋರಿದ್ದಾರೆ.

    ಅತ್ತೆಯ ಮಗಳ ಜೊತೆ ಇಂದು (ಏ.26) ಧನುಷ್ ಮದುವೆಯಾಗಿದ್ದಾರೆ. ಧನುಷ್ ಮದುವೆ ಸಂಭ್ರಮದಲ್ಲಿ ಕಿರುತೆರೆಯ ನಟ-ನಟಿಯರು ಭಾಗವಹಿಸಿ ಶುಭಹಾರೈಸಿದ್ದಾರೆ. ಮದುವೆಯ ಶಾಸ್ತ್ರದ ನಡುವೆ ಮರಿಯದೇ ಧನುಷ್ ವೋಟ್ ಮಾಡಿರೋದು ಅಭಿಮಾನಿಗಳ ಗಮನ ಸೆಳೆದಿದೆ.

    ಇನ್ನೂ ಮಾಂಗಲ್ಯಧಾರಣೆ ವೇಳೆ ವಧು ಸಂಜನಾ ಕಣ್ಣೀರಿಟ್ಟರು. ಈ ವೇಳೆ, ಸಂಗಾತಿಗೆ ಧನುಷ್ ಸಿಹಿಮುತ್ತು ಕೊಟ್ಟಿದ್ದಾರೆ. ವಧು ಭಾವುಕರಾಗಿದ್ದಾರೆ. ಇದನ್ನೂ ಓದಿ:ಹಕ್ಕು ಚಲಾಯಿಸಿದ್ದೇನೆ, ನೀವು ವೋಟು ಮಾಡಿ: ನಟ ರವಿಚಂದ್ರನ್

    ಧನುಷ್ ಮತ್ತು ಸಂಜನಾ ಅವರದ್ದು ಅರೇಂಜ್ ಮ್ಯಾರೇಜ್. ಧನುಷ್ ತಮ್ಮ ಅತ್ತೆಯ ಮಗಳನ್ನೇ ಮದುವೆಯಾಗಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದೆ.
  • ಮದುವೆ ಗೌನ್‍ ಕತ್ತರಿಸಿದ ನಟಿ ಸಮಂತಾ

    ಮದುವೆ ಗೌನ್‍ ಕತ್ತರಿಸಿದ ನಟಿ ಸಮಂತಾ

    ಟಿ ಸಮಂತ್ ರುತ್ ಪ್ರಭು (Samantha) ತಾವು ಮದುವೆಯಲ್ಲಿ ಧರಿಸಿದ್ದ ಗೌನ್ (Gown) ಅನ್ನು ಕತ್ತರಿಸಿ, ಹೊಸ ವಿನ್ಯಾಸದಲ್ಲಿ ಕಾಸ್ಟ್ಯೂಮ್ ತಯಾರಿಸಿಕೊಂಡಿದ್ದಾರೆ. ಆ ಕಾಸ್ಟ್ಯೂಮ್ ಅನ್ನೇ ಧರಿಸಿಕೊಂಡು ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಆ ಹೊಸ ಕಾಸ್ಟ್ಯೂಮ್ ಧರಿಸಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸಮಂತಾ ಅವರು ಮದುವೆ (Wedding) ಕಾಸ್ಟ್ಯೂಮ್ ಅನ್ನು ತಯಾರಿಸಿದವರು ಡಿಸೈನರ್ ಕ್ರೇಶಾ ಬಜಾಜ್ 9Kresha Bajaj), ಅವರೇ ಈಗ ಆ ಗೌನ್ ಅನ್ನು ಕತ್ತರಿಸಿ ಸ್ಟ್ರಾಪ್ ಲೆಸ್ ಡ್ರೆಸ್ ಆಗಿ ಪರಿವರ್ತನೆ ಮಾಡಿದ್ದಾರೆ. ಮಾಜಿ ಪತಿ, ನಟ ನಾಗ ಚೈತನ್ಯ ಅವರು ಬೇರೊಬ್ಬ ಹುಡುಗಿಯ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಈ ಕಾರ್ಯ ನಡೆದಿದ್ದು, ಬೇರೆ ಬೇರೆ ಅರ್ಥವನ್ನು ಕಲ್ಪಿಸುವಂತೆ ಮಾಡಿದೆ.

     

    ಸಮಂತಾ ಹೊಸದಾಗಿ ವಿನ್ಯಾಸಗೊಂಡಿರುವ ಗೌನ್ ಅನ್ನು ಧರಿಸಿಕೊಂಡು, ‘ಇದು ನನ್ನ ಪ್ರೀತಿ ಗೌನ್’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ನನ್ನ ಹಳೆ ಬಟ್ಟೆಗಳನ್ನು ಮರುಬಳಕೆ ಮಾಡೋದು ಮೊದಲಿನಿಂದಲೂ ನನಗಿರೋ ಅಭ್ಯಾಸ’ ಎಂದು ಬರೆದು ಸಮಾಧಾನ ಪಟ್ಟುಕೊಂಡಿದ್ದಾರೆ.

  • ಲಿಪ್‌ಲಾಕ್ ಫೋಟೋ ಹಂಚಿಕೊಂಡ ಕೌಸ್ತುಭ ಮಣಿ

    ಲಿಪ್‌ಲಾಕ್ ಫೋಟೋ ಹಂಚಿಕೊಂಡ ಕೌಸ್ತುಭ ಮಣಿ

    ಕಿರುತೆರೆ ನಟಿ ಕೌಸ್ತುಭ ಮಣಿ (Kaustubha Mani) ಮನೆಯಲ್ಲಿ ಮದುವೆ (Wedding) ಸಂಭ್ರಮ ಮನೆ ಮಾಡಿದೆ. ಭಾವಿ ಪತಿ ಜೊತೆ ಲಿಪ್‌ಲಾಕ್ ಮಾಡುತ್ತಾ ರೊಮ್ಯಾಂಟಿಕ್ ಮೂಡ್‌ಗೆ ನಟಿ ಜಾರಿದ್ದಾರೆ. ಪ್ರಿ ವೆಡ್ಡಿಂಗ್ ಫೋಟೋಶೂಟ್ ಅನ್ನು ರೊಮ್ಯಾಂಟಿಕ್ ಆಗಿ ಮಾಡಿಸಿದ್ದಾರೆ. ಇಬ್ಬರ ಸುಂದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಕೌಸ್ತುಭ ಮಣಿ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಈಗಾಗಲೇ ಮೆಹೆಂದಿ ಶಾಸ್ತ್ರ ಕೂಡ ಜರುಗಿದೆ. ಸದ್ಯ ಪ್ರಿ ವೆಡ್ಡಿಂಗ್ ಶೂಟ್ ಅನ್ನು ಪುಟ್ಟ ವಿಮಾನದಲ್ಲಿ ಮಾಡಿಸಿದ್ದಾರೆ. ಲೈಟ್ ಬಣ್ಣದ ಧಿರಿಸಿನಲ್ಲಿ ಇಬ್ಬರೂ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.

    ವಿಮಾನದ ಬಳಿ ಭಾವಿ ಪತಿ ಜೊತೆ ಲಿಪ್‌ಲಾಕ್ ಮಾಡಿರುವ ಫೋಟೋವನ್ನು ನಟಿ ಶೇರ್ ಮಾಡಿದ್ದಾರೆ. ಇಬ್ಬರ ಫೋಟೋಗೆ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ಗಳನ್ನು ಶೇರ್ ಮಾಡಿದ್ದಾರೆ.‌ ಇದನ್ನೂ ಓದಿ:ಎರಡೂ ಕೈ ಮುರಿದುಕೊಂಡಿದ್ದ ನಟಿ ಮನೆಗೆ ವಾಪಸ್ಸು

    ಅಂದಹಾಗೆ, ಕೌಸ್ತುಭ ಮಣಿ ಅವರದ್ದು ಅರೇಂಜ್ ಮ್ಯಾರೇಜ್. ಸಿದ್ಧಾಂತ್ ಸತೀಶ್ ಅವರು ಸಾಪ್ಟ್‌ವೇರ್ ಡೆವಲಪರ್ ಆಗಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿದ್ಧಾಂತ್ ಅವರು ಕೆನಡಾದ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದ್ದರು. ಇತ್ತೀಚೆಗೆ ನಟಿಯ ಎಂಗೇಜ್‌ಮೆಂಟ್‌ ಅದ್ಧೂರಿಯಾಗಿ ನಡೆದಿತ್ತು.

    ನನ್ನರಸಿ ರಾಧೆ (Nanrasi Radhe), ಗೌರಿ ಶಂಕರ ಸೀರಿಯಲ್‌ನಲ್ಲಿ ಕೌಸ್ತುಭ ನಟಿಸಿದ್ದಾರೆ. ಅರ್ಜುನ್ ಜನ್ಯ ನಿರ್ದೇಶನದ ’45’ ಸಿನಿಮಾದಲ್ಲಿ ಶಿವಣ್ಣ ಮತ್ತು ರಾಜ್ ಬಿ ಶೆಟ್ಟಿ ಜೊತೆ ನಟಿ ತೆರೆಹಂಚಿಕೊಂಡಿದ್ದಾರೆ.

  • ಎಗ್ ಫ್ರೀಜ್ ಮಾಡಿ ಮಗು ಪಡೆಯುವ ಪ್ಲ್ಯಾನ್‌ನಲ್ಲಿದ್ದಾರೆ ‘ಸೀತಾರಾಮಂ’ ನಟಿ

    ಎಗ್ ಫ್ರೀಜ್ ಮಾಡಿ ಮಗು ಪಡೆಯುವ ಪ್ಲ್ಯಾನ್‌ನಲ್ಲಿದ್ದಾರೆ ‘ಸೀತಾರಾಮಂ’ ನಟಿ

    ಬಾಲಿವುಡ್ (Bollywood) ಬೆಡಗಿ ಮೃಣಾಲ್ ಠಾಕೂರ್ (Mrunal Thakur) ತೆಲುಗಿನ ಬ್ಯಾಕ್ ಟು ಬ್ಯಾಕ್ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಸದ್ಯ ಸಂದರ್ಶನವೊಂದರಲ್ಲಿ ಎಗ್ ಫ್ರೀಜ್ (Egg Freezing) ಮಾಡಿ ಮಗು ಮಾಡಿಕೊಳ್ಳುವ ಪ್ಲ್ಯಾನ್‌ನಲ್ಲಿ ಇರೋದಾಗಿ ನಟಿ ಮಾತನಾಡಿದ್ದಾರೆ. ನಟಿಯ ಈ ಹೇಳಿಕೆ ಈಗ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

    ವೃತ್ತಿ ಜೀವನದಲ್ಲಿ ಬ್ಯುಸಿ ಇರುವುದರಿಂದ ಅನೇಕ ಸೆಲೆಬ್ರಿಟಿಗಳು ಮಗುವನ್ನು ಪಡೆಯಲು ತಡ ಮಾಡುತ್ತಾರೆ. ಆ ಸಂದರ್ಭದಲ್ಲಿ ಎಗ್ ಫ್ರೀಜಿಂಗ್ ತಂತ್ರಜ್ಞಾನದ ಮೊರೆ ಹೋಗುತ್ತಾರೆ. ‘ಸೀತಾರಾಮಂ’ ನಟಿ ಮೃಣಾಲ್‌ (Mrunal) ಕೂಡ ಇದೇ ರೀತಿಯ ಪ್ಲ್ಯಾನ್ ಮಾಡಿದ್ದಾರೆ. ಸಂದರ್ಶನದಲ್ಲಿ ತಮ್ಮ ಮದುವೆ ನಂತರದ ಯೋಚನೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ.

    ಸಂಬಂಧಗಳು ಕಷ್ಟ. ನನ್ನ ಕೆಲಸದ ಸ್ವರೂಪ ಅವರಿಗೆ ಅರ್ಥ ಆಗಬೇಕು. ನಾನು ಕೂಡ ನನ್ನ ಎಗ್‌ಗಳನ್ನು ಫ್ರೀಜ್ ಮಾಡುವ ವಿಚಾರದ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಒಂದೊಮ್ಮೆ ಶೀಘ್ರವೇ ಮದುವೆ ಆದರೂ ಸದ್ಯಕ್ಕಂತೂ ಮಗು ಪಡೆಯೋ ಆಲೋಚನೆ ತಮಗಿಲ್ಲ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಇದನ್ನೂ ಓದಿ:ಕೊನೆಗೂ ಮದುವೆಯಾಗುವ ಹುಡುಗನ ಫೋಟೋ ರಿವೀಲ್ ಮಾಡಿದ ಮಾನ್ವಿತಾ

    ಈ ವೇಳೆ, ಟ್ರೋಲ್‌ಗಳ (Troll) ಬಗ್ಗೆ, ಕುಟುಂಬ ನೀಡಿದ ಬೆಂಬಲದ ಬಗ್ಗೆಯೂ ಮೃಣಾಲ್ ಮಾತನಾಡಿದ್ದಾರೆ. ನಮ್ಮ ಕುಟುಂಬದವರನ್ನು ಬಿಟ್ಟು ಬೇರಾರೂ ಆ ಬಗ್ಗೆ ಕೇರ್ ಮಾಡುವುದಿಲ್ಲ ಎಂದಿದ್ದಾರೆ.

    ಸೀತಾರಾಮಂ, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಸಿನಿಮಾದ ನಂತರ ಬಾಲಿವುಡ್ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾದಲ್ಲಿ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಹೊಸ ಪ್ರಾಜೆಕ್ಟ್‌ಗಾಗಿ ವರ್ಕ್ ಶಾಪ್‌ನಲ್ಲಿ ನಟಿ ಬ್ಯುಸಿಯಾಗಿದ್ದಾರೆ.

  • ‘ಮಂಜುಮ್ಮೆಲ್ ಬಾಯ್ಸ್’ ನಟನ ಜೊತೆ ಅಪರ್ಣಾ ದಾಸ್ ಮದುವೆ

    ‘ಮಂಜುಮ್ಮೆಲ್ ಬಾಯ್ಸ್’ ನಟನ ಜೊತೆ ಅಪರ್ಣಾ ದಾಸ್ ಮದುವೆ

    ‘ಮಂಜುಮ್ಮೆಲ್ ಬಾಯ್ಸ್’ ಖ್ಯಾತಿಯ ದೀಪಕ್ ಪರಂಬೆಲ್ (Deepak Parambol) ಜೊತೆ ‘ಬೀಸ್ಟ್’ (Beast Film) ನಟಿ ಅಪರ್ಣಾ ದಾಸ್ (Aparna Das) ದಾಂಪತ್ಯ ಜೀವನಕ್ಕೆ (Wedding)  ಕಾಲಿಟ್ಟಿದ್ದಾರೆ. ಕೇರಳದ ದೇವಸ್ಥಾನವೊಂದರಲ್ಲಿ ಈ ಜೋಡಿ ಸರಳವಾಗಿ ಹಸೆಮಣೆ ಏರಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ನಟಿ ಶೇರ್ ಮಾಡಿದ್ದು, ನವಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

    ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಈ ಮದುವೆ ಜರುಗಿದ್ದು, ದೀಪಕ್- ಅಪರ್ಣಾ ಬಾದಮಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಇಬ್ಬರೂ ಕುಟುಂಬದ ಸದಸ್ಯರು, ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ:ತೆಲುಗಿನ ಸಂಗೀತ ನಿರ್ದೇಶಕ ತಮನ್‌ರನ್ನು ಭೇಟಿಯಾದ ಸುದೀಪ್ ಪುತ್ರಿ

    ಕೆಲದಿನಗಳ ಹಿಂದೆ ಇಬ್ಬರ ಮದುವೆ ಬಗ್ಗೆ ಭಾರೀ ಸುದ್ದಿಯಾಗಿತ್ತು. ಮದುವೆ ಸಜ್ಜಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇಬ್ಬರೂ ಮದುವೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಮದುವೆ ಫೋಟೋ ಶೇರ್ ಮಾಡಿ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ.

    ಮಲಯಾಳಂನಲ್ಲಿ ಹಲವು ಸಿನಿಮಾಗಳಲ್ಲಿ ಅಪರ್ಣಾ ದಾಸ್ 2022ರಲ್ಲಿ ತೆರೆಕಂಡ ಬೀಸ್ಟ್ ಸಿನಿಮಾದಲ್ಲಿ ವಿಜಯ್ ಜೊತೆ ನಟಿಸಿದ್ದರು.

  • ಲಂಡನ್ ಅಲ್ಲ, ಭಾರತದಲ್ಲೇ ಅಂಬಾನಿ ಪುತ್ರನ ವಿವಾಹ

    ಲಂಡನ್ ಅಲ್ಲ, ಭಾರತದಲ್ಲೇ ಅಂಬಾನಿ ಪುತ್ರನ ವಿವಾಹ

    ಹೆಸರಾಂತ ಉದ್ಯಮಿ, ಶ್ರೀಮಂತ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ವಿವಾಹ ಲಂಡನ್ ನಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಲಂಡನ್ ನ ಪ್ರತಿಷ್ಠಿತ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು ಮದುವೆಗಾಗಿ (Wedding) ಆಯ್ಕೆ ಮಾಡಲಾಗಿದೆ ಎನ್ನುವ ಸುದ್ದಿಯೂ ಜೋರಾಗಿ ಕೇಳಿ ಬಂದಿತ್ತು. ಆದರೆ, ಲಂಡನ್ ಬದಲಾಗಿ ಭಾರತದಲ್ಲೇ ಮಗನ ಮದುವೆ ಮಾಡಲು ಮುಖೇಶ್ ಅಂಬಾನಿ ನಿರ್ಧಾರ ಮಾಡಿದ್ದಾರೆ.

    ಸ್ಟೋಕ್ ಪಾರ್ಕ್ ಅನ್ನು ಬ್ರಿಟನ್ ನ ಐಕಾನಿಕ್ ಕಂಟ್ರಿ ಕ್ಲಬ್ ಮತ್ತು ಐಷಾರಾಮಿ ಗಾಲ್ಫ್ ರೆಸಾರ್ಟ್ ಪಾರ್ಕನ್ನು ಮಖೇಶ್ ಒಡೆತನದ ರಿಲಯನ್ಸ್ ಇಂಡಸ್ಟ್ರಿಯು 592 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿ ಮಾಡಿದೆ. ಅದೇ ಪಾರ್ಕ್ ನಲ್ಲೇ ಮಗನ ಮದುವೆ ಮಾಡಲಿದ್ದಾರೆ ಎಂದು ವರದಿಯಾಗಿತ್ತು.

    ಈ ಸ್ಟೋಕ್ ಪಾರ್ಕ್ 49 ಐಷಾರಾಮಿ ಬೆಡ್ ರೂಮ್ ಹೊಂದಿರುವ ಹೋಟೆಲ್ ಕೂಡ ಆಗಿದ್ದು, 14 ಎಕರೆ ಜಾಗವನ್ನು ಹೊಂದಿದೆ. ರಾಣಿ ಎಲಿಜಬೆತ್ 1 ಇದೇ ಜಾಗದಲ್ಲಿ ವಾಸವಿದ್ದರೂ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಜಾಗಕ್ಕೆ ಅಷ್ಟೊಂದು ಮಹತ್ವ ಬಂದಿದೆ. ಈ ಜಾಗದಲ್ಲೇ ಅಂಬಾನಿ ಪುತ್ರನ ವಿವಾಹವನ್ನು ಅದ್ಧೂರಿಯಾಗಿ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

    ಇತ್ತೀಚೆಗಷ್ಟೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಜೋಡಿಯ ಮದುವೆ ಪೂರ್ವ ಕಾರ್ಯಗಳು ಅದ್ಧೂರಿಯಾಗಿ ನಡೆದಿವೆ. ಗುಜರಾತ್ ನ ಜಾಮ್ ನಗರದಲ್ಲಿ ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮಕ್ಕೆ ಅಂದಾಜು 1200 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಜಗತ್ತಿನ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆಗೂ ಕೂಡ ಅನೇಕರು ಭಾಗಿ ಆಗುವ ಸಾಧ್ಯತೆ ಇದೆ.  ಈ ಮದುವೆ ಮುಂಬೈನಲ್ಲಿ (Mumbai) ನಡೆಯಲಿದೆ.

  • ಮದುವೆ ತಯಾರಿಯಲ್ಲಿ ಮಾನ್ವಿತಾ ಬ್ಯುಸಿ- ಆಮಂತ್ರಣ ಪತ್ರಿಕೆ ರಿವೀಲ್ ಮಾಡಿದ ನಟಿ

    ಮದುವೆ ತಯಾರಿಯಲ್ಲಿ ಮಾನ್ವಿತಾ ಬ್ಯುಸಿ- ಆಮಂತ್ರಣ ಪತ್ರಿಕೆ ರಿವೀಲ್ ಮಾಡಿದ ನಟಿ

    ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ (Manvita Kamath) ಇದೇ ಮೇ 1ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೈಸೂರು ಮೂಲದ ಸಂಗೀತ ನಿರ್ದೇಶಕ ಅರುಣ್ ಕುಮಾರ್ (Arun Kumar) ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇದೀಗ ಮದುವೆ ತಯಾರಿ ಬಗ್ಗೆ ಮತ್ತು ಆಮಂತ್ರಣ ಪತ್ರಿಕೆಯನ್ನು ನಟಿ ಸೋಶಿಯಲ್‌ ಮೀಡಿಯಾದಲ್ಲಿ ರಿವೀಲ್‌  ಮಾಡಿದ್ದಾರೆ.

    ಮದುವೆಗೆ ಕೆಲವೇ ಕೆಲವು ದಿನಗಳು ಬಾಕಿಯಿದೆ. ಚಿಕ್ಕಮಗಳೂರಿನ ಕಳಸ ಮನೆಯಲ್ಲಿ ಇಂದು (ಏ.22) ನಾಂದಿ ಪೂಜೆ ಮಾಡುವ ಮೂಲಕ ಮದುವೆಯ ತಯಾರಿ ಶುರುವಾಗಿದೆ. ತಯಾರಿ ವೇಳೆ, ನಟಿಯ ಲುಕ್ ಮತ್ತು ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ ಎಂಬುದನ್ನು ಇನ್ಸ್ಟಾಗ್ರಾಂನಲ್ಲಿ ನಟಿ ರಿವೀಲ್ ಮಾಡಿದ್ದಾರೆ. ಮದುವೆಯ ದಿನ ಮುಹೂರ್ತದ ವೇಳೆ ಕೆಂಪು ಸೀರೆಯನ್ನು ಉಡಲಿದ್ದಾರೆ. ಅದನ್ನು ನಟಿ ತಿಳಿಸಿದ್ದಾರೆ. ಸದ್ಯ ಪತ್ರಿಕೆಯ ಲುಕ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆಪ್ತರಿಗೆ ಮದುವೆ ಆಹ್ವಾನ ನೀಡುವುದರಲ್ಲಿ ನಟಿ ಬ್ಯುಸಿಯಾಗಿದ್ದಾರೆ.

    ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ. ನನ್ನ ಮದುವೆ ನೋಡೋದು ಅಮ್ಮನ ಕನಸಾಗಿತ್ತು. ಅದರಂತೆಯೇ ಮದುವೆ ನೆರವೇರುತ್ತಿದೆ ಎನ್ನುತ್ತಾರೆ ಮಾನ್ವಿತಾ. ನನ್ನ ಅಮ್ಮ ನನ್ನ ಮದುವೆ ಪ್ರೊಫೈಲ್ ಅನ್ನು ನಮ್ಮ ಸಮುದಾಯದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳುತ್ತಿದ್ದರು.

    ಆಗ ಅರುಣ್ ತಾಯಿಗೆ ನಮ್ಮ ತಾಯಿ ನಿಧನದ ಬಗ್ಗೆ ತಿಳಿದಿರಲಿಲ್ಲ. ಅವರು ನಮ್ಮನ್ನು ತಲುಪಲು ತುಂಬ ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಕೊನೆಗೆ ಅವರು ನನ್ನ ನಂಬರ್ ಪಡೆದುಕೊಂಡು ಕಾಂಟಾಕ್ಟ್ ಮಾಡಿದ್ದಾರೆ. ಈಗ ಇದೆಲ್ಲವೂ ಸಾಧ್ಯವಾಗಿದೆ ಎಂದು ಖುಷಿಯಿಂದ ಹೇಳಿದ್ದಾರೆ ಮಾನ್ವಿತಾ. ಇದನ್ನೂ ಓದಿ:ಖ್ಯಾತ ಕಿರುತೆರೆ ನಟಿ ದಿವ್ಯಾಂಕಾಗೆ ಅಪಘಾತ: ಕಾಲಿಗೆ ಶಸ್ತ್ರ ಚಿಕಿತ್ಸೆ

    ಮದುವೆ ಸುದ್ದಿ ಸಂಭ್ರಮದ ನಡುವೆ ಮತ್ತೊಂದು ವಿಶೇಷ ಅಂದರೆ, ಮಾನ್ವಿತಾ ತಾಯಿ ಸುಜಾತಾ ಅವರ ಹುಟ್ಟುಹಬ್ಬ ಅಕ್ಟೋಬರ್ 14 ಅದೇ ದಿನ ಅರುಣ್ ಹುಟ್ಟುಹಬ್ಬವಂತೆ. ಇಲ್ಲಿಂದ ಪಾಸಿಟಿವ್ ಸೂಚನೆ ಸಿಕ್ಕಿದೆ. ಅಂದಹಾಗೆ, ನಿಧನಕ್ಕೂ ಮುನ್ನವೇ ಮಾನ್ವಿತಾ ಅವರ ತಾಯಿ ಸುಜಾತಾ ಅವರು ಅರುಣ್ ತಾಯಿಯೊಂದಿಗೆ ಮಾತನಾಡಿದ್ದರು.

    ಮಾನ್ವಿತಾ ಮತ್ತು ಅವರ ಚಿಕ್ಕಮ್ಮ ಮೈಸೂರಿನಲ್ಲಿರುವ ಅರುಣ್ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿಂದ ಮದುವೆ ಮಾತುಕತೆಯಾಗಿ ಈಗ ಮದುವೆಗೆ ವೇದಿಕೆ ಸಜ್ಜಾಗಿದೆ. ಅರುಣ್ ಕುಟುಂಬದವರು ತುಂಬ ಒಳ್ಳೆಯವರು. ಅರುಣ್ ಕೂಡ ಅದ್ಭುತ ವ್ಯಕ್ತಿ. ನನ್ನ ತಾಯಿ ಹುಡುಕಿದ ಸಂಬಂಧ ಕೂಡಿ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಮಾನ್ವಿತಾ ತಿಳಿಸಿದ್ದಾರೆ. ಅಲ್ಲದೆ, ಸಂಗೀತ ಪ್ರೇಮಿಯಾಗಿರುವ ಮಾನ್ವಿತಾಗೆ ಮೈಸೂರು ಮೂಲದ ಮ್ಯೂಸಿಕ್ ಡೈರೆಕ್ಟರ್ ಆಗಿರುವ ಅರುಣ್ ಕುಮಾರ್ ಪತಿಯಾಗಿ ಸಿಗುತ್ತಿರುವುದು ಖುಷಿಯಿದೆ ಎಂದು ಮಾನ್ವಿತಾ ಮಾತನಾಡಿದ್ದಾರೆ.

    ಮ್ಯೂಸಿಕ್ ಪ್ರೋಡ್ಯೂಸರ್ ಅರುಣ್ ಕುಮಾರ್ ಜೊತೆ ಮಾನ್ವಿತಾ ಮದುವೆ ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ನಡೆಯಲಿದೆ. ಹಳದಿ ಶಾಸ್ತ್ರವು ಏಪ್ರಿಲ್ 29ರಂದು ನಡೆಯಲಿದೆ ಮತ್ತು ಸಂಗೀತ್ ಶಾಸ್ತ್ರ ಮತ್ತು ಎಂಗೇಜ್‌ಮೆಂಟ್ ಏಪ್ರಿಲ್ 30ರಂದು ನಡೆಯಲಿದೆ. ಮದುವೆಗೆ ಸ್ಯಾಂಡಲ್ವುಡ್ ನಟ, ನಟಿಯರು ಭಾಗಿಯಾಗಲಿದ್ದಾರೆ.