Tag: wedding

  • ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸಿರಿ

    ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸಿರಿ

    ‘ಬಿಗ್ ಬಾಸ್ ಕನ್ನಡ 10′ ಸ್ಪರ್ಧಿ ಸಿರಿ (Actress Siri) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 13ರಂದು ಉದ್ಯಮಿ ಪ್ರಭಾಕರ್ ಭೋರೆಗೌಡ (Prabhar Boregowda) ಜೊತೆ ಸಿರಿ ಹಸೆಮಣೆ (Wedding) ಏರಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿನ ಭೋಗ ನಂದೀಶ್ವರ ದೇವಾಲಯದಲ್ಲಿ ಸಿರಿ ಮತ್ತು ಉದ್ಯಮಿ ಪ್ರಭಾಕರ್ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ಜರುಗಿದೆ. ಪ್ರಭಾಕರ್ ಅವರು ಮೂಲತಃ ಮಂಡ್ಯದವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇದನ್ನೂ ಓದಿ:ಇಂದಿನಿಂದ ಡಾಲಿ ನಟನೆಯ ‘ಕೋಟಿ’ ಸಿನಿಮಾ ಅಬ್ಬರ

    ಗುರುಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ಜೂನ್ 13ರಂದು ಸರಳವಾಗಿ ಮದುವೆ ನಡೆದಿದೆ. ಸದ್ಯ ನಟಿಯ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

    ಅಂದಹಾಗೆ, ಮನೆಯೊಂದು ಮೂರು ಬಾಗಿಲು, ರಂಗೋಲಿ, ಬದುಕು ಸೀರಿಯಲ್‌ಗಳು ಮೂಲಕ ಟಿವಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಸೀಸನ್ 10ರ ಬಿಗ್ ಬಾಸ್ ಕನ್ನಡ ಶೋನಿಂದ (Bigg Boss Kannada 10) ನಟಿ ಸಿರಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ.

  • ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ಆಲ್ಬಂ

    ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ಆಲ್ಬಂ

    ಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ (Aishwarya Sarja) ಮತ್ತು ತಮಿಳು ನಟ ಉಮಾಪತಿ ರಾಮಯ್ಯ ಮದುವೆಯ ಸುಂದರ ಫೋಟೋಗಳು.

    ಚೆನ್ನೈನ ಅಂಜನಸುತ ಶ್ರೀ ಯೋಗಾಂಜನೇಯ ದೇವಸ್ಥಾನದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಐಶ್ವರ್ಯಾ ಸರ್ಜಾ ಮದುವೆ ನಡೆಯಿತು. ಇದನ್ನೂ ಓದಿ:ತಮಿಳಿನಲ್ಲಿ ಬಿಗ್‌ ಚಾನ್ಸ್‌ ಗಿಟ್ಟಿಸಿಕೊಂಡ ಕನ್ನಡದ ಆಲಿಯಾ ಭಟ್

    ಜೂನ್ 7ರಿಂದ ಅರಿಶಿನ ಶಾಸ್ತ್ರದೊಂದಿಗೆ ನಟಿಯ ಮದುವೆ ಕಾರ್ಯಕ್ರಮಗಳು ಆರಂಭವಾದವು. ಆ ನಂತರ ಸಂಗೀತ್ ಹಾಗೂ ವರಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

    ಐಶ್ವರ್ಯಾ ಮದುವೆಗೆ ಸಂಗೀತ್ ಸಮಾರಂಭಕ್ಕೆ ಹೆಸರಾಂತ ಕಲಾ ನಿರ್ದೇಶಕ ಮೋಹನ್ ಅವರು ಅದ್ಧೂರಿ ಸೆಟ್ ಹಾಕಿದ್ದರು. ಎರಡು ಕುಟುಂಬದ ಬಂಧು ಮಿತ್ರರು ಈ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.

    ಚಿತ್ರರಂಗದ ನಟ-ನಟಿಯರಿಗೆ ಜೂನ್ 14ರಂದು ಚೆನ್ನೈನ ಖಾಸಗಿ ಹೋಟೆಲ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

    ಐಶ್ವರ್ಯಾ ಮತ್ತು ಉಮಾಪತಿ (Umapathy Ramaiah) ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕುಟುಂಬಸ್ಥರ ಒಪ್ಪಿಗೆ ಪಡೆದು ಈಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

  • ಚಿತ್ರರಂಗದ ದಿಗ್ಗಜರಿಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ

    ಚಿತ್ರರಂಗದ ದಿಗ್ಗಜರಿಗೆ ಮದುವೆ ಆಮಂತ್ರಣ ನೀಡಿದ ಕನ್ನಡದ ‘ಮಾಣಿಕ್ಯ’ ನಟಿ

    ಕಾಲಿವುಡ್ ನಟ ಶರತ್ ಕುಮಾರ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಪುತ್ರಿ ವರಲಕ್ಷ್ಮಿ (Varalaxmi Sarathkumar) ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಜೊತೆಗೆ ಸೌತ್‌ನ ನಟ- ನಟಿಯರಿಗೆ ಶರತ್‌ಕುಮಾರ್ ಕುಟುಂಬ ಮದುವೆ ಆಮಂತ್ರಣ ನೀಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ನಟಿ ನಯನತಾರಾ, ಮಾಸ್ ಮಹಾರಾಜ ರವಿತೇಜ ಸೇರಿದಂತೆ ಅನೇಕರಿಗೆ ವರಲಕ್ಷ್ಮಿ ಮದುವೆ (Wedding) ಪತ್ರಿಕೆ ನೀಡಿದ್ದಾರೆ.

    ವರಲಕ್ಷ್ಮಿ ಮತ್ತು ಉದ್ಯಮಿ ನಿಕೋಲಾಯ್ ಮದುವೆ ಜುಲೈ 2ರಂದು ಥೈಲ್ಯಾಂಡ್‌ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈ ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಟಾರ್ ನಟಿ ನಯನತಾರಾ (Nayanathara) ದಂಪತಿ, ರವಿತೇಜ (Ravi Teja), ತಮಿಳು ನಟ ಸಿದ್ಧಾರ್ಥ್ (Siddarth), ಎ.ಆರ್ ಮುರುಗದಾಸ್, ಮುರಳಿ ಶರ್ಮಾ, ಗೋಪಿ ಚಂದ ಸೇರಿದಂತೆ ಅನೇಕರಿಗೆ ನಟಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ:ಕಲ್ಕಿ ಪ್ರಭಾಸ್‌ಗೆ ಜೊತೆಯಾದ ವಿಜಯ್ ದೇವರಕೊಂಡ

    ಅಂದಹಾಗೆ, ಮಾಣಿಕ್ಯ ನಟಿ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ನಿಶ್ಚಿತಾರ್ಥ ಅದ್ಧೂರಿಯಾಗಿ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.

    ಇನ್ನೂ ‘ಮಾಣಿಕ್ಯ’ ಸಿನಿಮಾದ ನಂತರ ಮತ್ತೆ ಸುದೀಪ್ ಜೊತೆ ನಟಿ ಕೈಜೋಡಿಸಿದ್ದಾರೆ. ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.

  • ಉಮಾಪತಿ ಜೊತೆ ಐಶ್ವರ್ಯಾ ಸರ್ಜಾ ಅದ್ಧೂರಿ ಮದುವೆ

    ಉಮಾಪತಿ ಜೊತೆ ಐಶ್ವರ್ಯಾ ಸರ್ಜಾ ಅದ್ಧೂರಿ ಮದುವೆ

    ಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ (Aishwarya Sarja) ಜೂನ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈ ಹನುಮಾನ್ ದೇವಸ್ಥಾನದಲ್ಲಿ ಉಮಾಪತಿ (Actor Umapathy Ramaiah) ಜೊತೆ ಐಶ್ವರ್ಯಾ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯೆಂಬ ಹೊಸ ಬಂಧಕ್ಕೆ ಈ ಜೋಡಿ ಕಾಲಿಟ್ಟಿದೆ. ಸದ್ಯ ಮದುವೆಯ (Wedding) ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    ಐಶ್ವರ್ಯಾ ಸರ್ಜಾ ಕೆಂಪು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ರೆ, ಲೈಟ್ ಬಣ್ಣದ ಶರ್ಟ್ ಮತ್ತು ಪಂಚೆ ಧರಿಸಿ ವರ ಉಮಾಪತಿ ಮಿಂಚಿದ್ದಾರೆ. 10-06-2024 ಎಂದಷ್ಟೇ ನಟಿ ಸೋಷಿಯಲ್ ಮೀಡಿಯಾದಲ್ಲಿ ಅಡಿಬರಹ ನೀಡಿದ್ದಾರೆ.

    ಕಾಲಿವುಡ್ ನಟ ತಂಬಿ ರಾಮಯ್ಯ ಪುತ್ರನ ಜೊತೆ ಮದುವೆಯಾಗಿರುವ ‘ಪ್ರೇಮ ಬರಹ’ ನಟಿಗೆ ತಮಿಳು ಮತ್ತು ಕನ್ನಡದ ಸೆಲೆಬ್ರಿಟಿಗಳು ಶುಭಕೋರಿದ್ದಾರೆ. ಅಭಿಮಾನಿಗಳು ಕೂಡ ಹೊಸ ಜೋಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ರವಿತೇಜಗೆ ಶ್ರೀಲೀಲಾ ಹೀರೋಯಿನ್- ಹೊಸ ಚಿತ್ರಕ್ಕೆ ಅದ್ಧೂರಿ ಚಾಲನೆ

    ಐಶ್ವರ್ಯಾ ಮತ್ತು ತಮಿಳು ನಟ ಉಮಾಪತಿ ರಾಮಯ್ಯ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಎರಡು ಕುಟುಂಬದ ಸಮ್ಮತಿಯ ಮೇರೆಗೆ ಇತ್ತೀಚೆಗೆ ಅದ್ಧೂರಿಯಾಗಿ ಎಂಗೇಂಜ್‌ಮೆಂಟ್ ನಡೆದಿತ್ತು.

    ಅಂದಹಾಗೆ, ಐಶ್ವರ್ಯಾ ಅವರು 2018ರಲ್ಲಿ ‘ಪ್ರೇಮ ಬರಹ’ (Prema Baraha) ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್‌ಗೆ ನಾಯಕಿಯಾಗಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು.

  • ‘ಎ ಮಾಸ್ಟರ್ ಪೀಸ್’ ನಿರ್ದೇಶಕನ ಜೊತೆ ಮದುವೆ ಆಗಿದೆ ಎಂದ ಜ್ಯೋತಿ ರೈ

    ‘ಎ ಮಾಸ್ಟರ್ ಪೀಸ್’ ನಿರ್ದೇಶಕನ ಜೊತೆ ಮದುವೆ ಆಗಿದೆ ಎಂದ ಜ್ಯೋತಿ ರೈ

    ನ್ನಡದ ನಟಿ ಜ್ಯೋತಿ ರೈ (Jyothi Rai) ಇದೀಗ ಟಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ರಿಲೀಸ್ ಆಗಿರುವ ‘ಎ ಮಾಸ್ಟರ್ ಪೀಸ್’ ಚಿತ್ರದ ಟೀಸರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದ ಟೀಸರ್ ಕಾರ್ಯಕ್ರಮದಲ್ಲಿ ನಿರ್ದೇಶಕ ಸುಕು ಪೂರ್ವಜ್ (Suku Purvaj) ಜೊತೆ ಮದುವೆಯಾಗಿದೆ (Wedding) ಎಂದು ಜ್ಯೋತಿ ರೈ ಅಧಿಕೃತವಾಗಿ ಹೇಳಿದ್ದಾರೆ.

    20ರ ವಯಸ್ಸಿನಲ್ಲೇ ಪದ್ಮನಾಭ್ ರೈ ಜೊತೆ ಜ್ಯೋತಿ ರೈ ಮದುವೆಯಾಗಿತ್ತು. ಅವರ ಸಂಬಂಧಕ್ಕೆ ಮಗ ಕೂಡ ಸಾಕ್ಷಿಯಾಗಿದ್ದಾನೆ. ಆದರೆ ಈ ಮದುವೆ ಕೆಲವೇ ವರ್ಷಗಳಲ್ಲಿ ಮುರಿದು ಬಿದ್ದಿತ್ತು. ನಂತರ ತಮ್ಮ 2ನೇ ಮದುವೆ ಬಗ್ಗೆ ನಟಿ ಎಲ್ಲೂ ಮಾತನಾಡಿರಲಿಲ್ಲ. ಈಗ ಮೊದಲ ಬಾರಿಗೆ 2ನೇ ಮದುವೆ ಬಗ್ಗೆ ಜ್ಯೋತಿ ರೈ ಮಾತನಾಡಿದ್ದಾರೆ. ಇದನ್ನೂ ಓದಿ:Exclusive: ‘ಕಾಟೇರ’ ಡೈರೆಕ್ಟರ್‌ಗೆ ದರ್ಶನ್ ಸಾಥ್- ‘ವೀರ ಸಿಂಧೂರ ಲಕ್ಷ್ಮಣ’ ಬರೋದು ಕನ್ಫರ್ಮ್

    ‘ಎ ಮಾಸ್ಟರ್ ಪೀಸ್’ ಸಿನಿಮಾದ ಕಾರ್ಯಕ್ರಮದಲ್ಲಿ ನಟಿ ಮಾತನಾಡುತ್ತಾ, ಈ ಚಿತ್ರದ ಮೂಲಕ ನನ್ನ ಬದುಕಿನ ದಿಕ್ಕು ಬದಲಾಯಿತು ಎಂದಿದ್ದಾರೆ. ಸುಕು ಪೂರ್ವಜ್‌ರನ್ನು ನನ್ನ ಪತಿಯಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೇ ಎಂದು ಜ್ಯೋತಿ ರೈ ಓಪನ್ ಆಗಿ ಮಾತನಾಡಿದ್ದಾರೆ.

    ಈ ವೇಳೆ, ಹೆಚ್ಚೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸೋದಾಗಿ ಜ್ಯೋತಿ ರೈ ಹೇಳಿದ್ದಾರೆ. ಇದು ನಾನು ನಾಯಕಿಯಾಗಿ ನಟಿಸುತ್ತಿರುವ ಮೊದಲು ಸಿನಿಮಾ. ಆಂಧ್ರದ ಜನರ ಹಾರೈಕೆ ನನ್ನ ಮೇಲಿರಲಿ ಎಂದು ನಟಿ ಮನವಿ ಮಾಡಿದ್ದಾರೆ.

  • ಅರ್ಜುನ್ ಸರ್ಜಾ ಪುತ್ರಿ ಮದುವೆ- ಅದ್ಧೂರಿಯಾಗಿ ನಡೆಯಲಿದೆ ಆರತಕ್ಷತೆ ಕಾರ್ಯಕ್ರಮ

    ಅರ್ಜುನ್ ಸರ್ಜಾ ಪುತ್ರಿ ಮದುವೆ- ಅದ್ಧೂರಿಯಾಗಿ ನಡೆಯಲಿದೆ ಆರತಕ್ಷತೆ ಕಾರ್ಯಕ್ರಮ

    ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ ಸರ್ಜಾ (Aishwarya Sarja) ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಇದೇ ಜೂನ್ 10ರಂದು ಚೆನ್ನೈ ಹನುಮಾನ್ ದೇವಸ್ಥಾನದಲ್ಲಿ ಐಶ್ವರ್ಯಾ ಮತ್ತು ಉಮಾಪತಿ ಮದುವೆ ಅದ್ಧೂರಿಯಾಗಿ ಜರುಗಲಿದೆ. ಜೂನ್ 14ರಂದು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇದನ್ನೂ ಓದಿ:ಚುನಾವಣೆಯಲ್ಲಿ ಗೆದ್ದ ಬಾಲಯ್ಯಗೆ ಕಾಜಲ್ ವಿಶ್

    ಐಶ್ವರ್ಯಾ ಮತ್ತು ತಮಿಳು ನಟ ಉಮಾಪತಿ ರಾಮಯ್ಯ (Umapathy Ramaiah) ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಎರಡು ಕುಟುಂಬದ ಸಮ್ಮತಿಯ ಮೇರೆಗೆ ಇತ್ತೀಚೆಗೆ ಅದ್ಧೂರಿಯಾಗಿ ಎಂಗೇಂಜ್‌ಮೆಂಟ್ ನಡೆದಿತ್ತು. ಈಗ ಜೂನ್ 10ಕ್ಕೆ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ನಟಿ ರೆಡಿಯಾಗಿದ್ದಾರೆ. ಇದನ್ನೂ ಓದಿ:ಮಾಧವನ್ ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ- ತಮಿಳು ಚಿತ್ರ ಮಾಡ್ತಿದ್ದಾರಾ ನಟಿ?

    ಮಗಳ ಮದುವೆಗೆ ಕನ್ನಡದ ಹೆಸರಾಂತ ನಟ ಜಗ್ಗೇಶ್ ಸೇರಿದಂತೆ ಅನೇಕರಿಗೆ ಆಮಂತ್ರಣ ನೀಡಿದ್ದಾರೆ ಅರ್ಜುನ್ ಸರ್ಜಾ ದಂಪತಿ. ಸ್ಯಾಂಡಲ್‌ವುಡ್ ಮತ್ತು ಸೌತ್‌ನ ಅನೇಕ ನಟ, ನಟಿಯರಿಗೆ ಮತ್ತು ರಾಜಕೀಯ ಕ್ಷೇತ್ರದಲ್ಲಿರುವ ಗಣ್ಯರಿಗೆ ಮದುವೆ ಆಹ್ವಾನ ನೀಡಿದ್ದಾರೆ.

    ಅಂದಹಾಗೆ, ಐಶ್ವರ್ಯಾ ಅವರು 2018ರಲ್ಲಿ ‘ಪ್ರೇಮ ಬರಹ’ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್‌ಗೆ ನಾಯಕಿಯಾಗಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು.

  • ಅಮಿತಾಬ್ ದಾಂಪತ್ಯಕ್ಕೆ 51ರ ಸಂಭ್ರಮ: ಜಯಾ ಜೊತೆಗಿನ ಜೀವನ ಹೇಗಿತ್ತು?

    ಅಮಿತಾಬ್ ದಾಂಪತ್ಯಕ್ಕೆ 51ರ ಸಂಭ್ರಮ: ಜಯಾ ಜೊತೆಗಿನ ಜೀವನ ಹೇಗಿತ್ತು?

    ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ (Amitabh Bachchan) ಹಾಗೂ ಜಯಾ ಭಾದೂರಿ (Jaya Bachchan) ಜೋಡಿ ಇಂದು (ಜೂನ್ 3) ತಮ್ಮ 51ನೇ ವಿವಾಹ (Wedding) ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಭರ್ತಿ 51 ವರ್ಷಗಳ ಯಶಸ್ವಿ ದಾಂಪತ್ಯ ಜೀವನ ನಡೆಸಿ ಯುವ ಜನತೆಗೆ ಮಾದರಿಯಾಗಿದ್ದಾರೆ ಬಾಲಿವುಡ್‌ನ ಹಿರಿಯ ನಟ-ನಟಿ.

    ತೆರೆಯ ಮೇಲಿನ ಹಿಟ್ ಜೋಡಿ ತೆರೆಯ ಹಿಂದೆಯೂ ಹಿಟ್ ಆಗುವುದು ಅಪರೂಪ. ಆದರೆ ಅದನ್ನು ಸುಳ್ಳಾಗಿಸಿದ್ದು ಅಮಿತಾಬ್ ಹಾಗೂ ಜಯ ಜೋಡಿ. ಇಬ್ಬರ ನಡುವೆ ಸಿನಿಮಾ ಸೆಟ್ಟಲ್ಲಿ ಹುಟ್ಟಿದ್ದ ಪ್ರೀತಿ ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಮಾಡ್ತು. ಅಮಿತಾಬ್ ಹೆಸರು ಇನ್ನೋರ್ವ ನಟಿ ರೇಖಾ ಜೊತೆ ಕೇಳಿಬಂದಿದ್ದರೂ ಅಮಿತಾಬ್ ಕೈಹಿಡಿದಿದ್ದು ಸರಳ-ಸಹಜ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದ ಜಯಾ ಭಾದೂರಿಯನ್ನ, ಜಯಾರನ್ನ ಅಮಿತಾಬ್ ಮದುವೆಯಾದ ಬಳಿಕ ಬಂದಿದ್ದ ಹಿಂದಿಯ `ಸಿಲ್‌ಸಿಲಾ’ ಚಿತ್ರವಂತೂ ಮೂವರ ನೈಜ ಘಟನೆಯನ್ನೇ ಕೇಂದ್ರವಾಗಿಟ್ಟುಕೊಂಡು ಮಾಡಿರುವ ಚಿತ್ರ ಎಂದು ಆಗಿನ ಕಾಲಕ್ಕೆ ಸುದ್ದಿಯಾಗಿತ್ತು. ಬಳಿಕ ರೇಖಾ ಜೊತೆ ಅಮಿತಾಬ್ ಮುಂದೆ ಯಾವತ್ತೂ ತೆರೆ ಹಂಚಿಕೊಳ್ಳಲೇ ಇಲ್ಲ. ಕಾರಣ ಪತಿ ಅಮಿತಾಬ್‌ಗೆ ಜಯಾ ಹಾಕಿದ್ದ ಲಕ್ಷ್ಮಣ ರೇಖೆ ಎಂಬ ಮಾತಿದೆ.

    ಸಿನಿಮಾ ಸೆಲೆಬ್ರಿಟಿ ದಂಪತಿ ನಡುವೆ ವಿಚ್ಚೇದನ ಸಹಜವಾಗ್ತಿರುವ ಬೆನ್ನಲ್ಲೇ ಅಮಿತಾಬ್-ಜಯಾ ಜೋಡಿಯ ಐದು ದಶಕದ ಸುಖೀ ದಾಂಪತ್ಯದ ಸುದ್ದಿ ಯುವ ಜನತೆಗೆ ಮಾದರಿ ವಿಷಯ. ಜಯಾ ಬಚ್ಚನ್ ಇನ್ಸ್ಟಾದಲ್ಲಿ ಈ ವಿಚಾರ ಹಂಚಿಕೊಳ್ಳುತ್ತಿದ್ದಂತೆ ಜೋಡಿಗೆ ಶುಭಾಶಯದ ಕಾಮೆಂಟ್ಸ್ ಬರುತ್ತಿದೆ. ಸುಖೀ ದಾಂಪತ್ಯದ ಸಲಹೆ ಕೇಳುತ್ತಿದ್ದಾರೆ ಇನ್ನೂ ಹಲವರು. ಆದರೆ ವೈಯಕ್ತಿಕ ರಾಗದ್ವೇಷಗಳಿಗಿಂತ ಹೆಚ್ಚಾಗಿ ಕೌಟುಂಬಿಕ ಮೌಲ್ಯವನ್ನ ಮಾತ್ರ ನಂಬಿರುವುದೇ 50 ವರ್ಷದ ಸುದೀರ್ಘ ದಾಂಪತ್ಯ ಅಡಿಪಾಯ ಅನ್ನೋದನ್ನ ನಂಬಬೇಕು. ಯಾಕಂದ್ರೆ ಚಿಕ್ಕ-ಪುಟ್ಟ ಮನಸ್ತಾಪಗಳು ಎದುರಾದರೂ ದೂರಾಗುವ ಮನಸ್ಥಿತಿಗಳ ನಡುವೆ ಅಸಹಜ ಎನ್ನಿಸಿದ್ದ ಜೋಡಿ ಅಮಿತಾಬ್ ಜಯಾರದ್ದು. ಮದುವೆ ಸಂದರ್ಭದಲ್ಲಂತೂ ಈಗಿನ ಕಾಲದಂತೆ ಟ್ರೋಲ್ ಪೇಜ್‌ಗಳಿದ್ದರೆ ಅದೆಷ್ಟು ಟ್ರೋಲ್ ಆಗುತ್ತಿದ್ದರೋ. ಯಾಕಂದ್ರೆ ಈ ಜೋಡಿ ನೋಡ್ದವರೆಲ್ಲಾ ಬಚ್ಚನ್ ಆರಡಿ ಜಯಾ ಮೂರಡಿ ಎಂದು ಕಾಲೆಳೆದವರೇ ಹೆಚ್ಚು. ಯಾಕಂದ್ರೆ ಜೋಡಿಗೆ ಎತ್ತರದಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಆದರೂ ಟೀಕೆ ಟಿಪ್ಪಣಿ ನಡುವೆಯೂ ಯಶಸ್ವಿ ಗ್ರಹಸ್ಥಾಶ್ರಮ ನಡೆಸುತ್ತಿದ್ದಾರೆ ಈ ದಂಪತಿ.

    ಅಮಿತಾಬ್ ಜಯಾ ಜೋಡಿ 1973 ಜೂನ್ 3ರಂದು ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ. ಬಳಿಕ ಅಭಿಷೇಕ್ ಹಾಗೂ ಶ್ವೇತಾ ಇಬ್ಬರು ಮಕ್ಕಳು ಹುಟ್ಟುತ್ತಾರೆ. ಬಳಿಕವೂ ಇಬ್ಬರೂ ಚಿತ್ರದಲ್ಲಿ ನಟಿಸುತ್ತಲೇ ಇರ್ತಾರೆ. ಇದೀಗ ರಾಜಕೀಯದಲ್ಲೂ ಹೆಸರುಮಾಡಿರುವ ಜಯಾ ಬಚ್ಚನ್‌ರನ್ನ ಬ್ರೇವ್ ಲೇಡಿ ಎಂದೇ ಕರೆಯಲಾಗುತ್ತೆ. ಅಮಿತಾಬ್ ಬಚ್ಚನ್ ಯಶಸ್ಸಿನ ಹಿಂದೆ ಜಯಾ ಬಚ್ಚನ್ ಇದ್ದಾರೆ ಅನ್ನೋದನ್ನ ಅಮಿತಾಬ್ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ ಭಾರತೀಯ ಚಿತ್ರರಂಗದ ಮೊದಲ ಹೆಸರಾಂತ ತಾರಾಜೋಡಿಗೆ ಭರ್‌ಪೂರ್ ಶುಭಾಶಯ ಬರುತ್ತಿದೆ.

  • ಸೈಲೆಂಟ್ ಆಗಿ ಮದುವೆಯಾದ್ರಾ ‘ಮಿಲನಾ’ ನಟಿ ಪಾರ್ವತಿ?

    ಸೈಲೆಂಟ್ ಆಗಿ ಮದುವೆಯಾದ್ರಾ ‘ಮಿಲನಾ’ ನಟಿ ಪಾರ್ವತಿ?

    ‘ಮಿಲನಾ’ (Milana) ನಟಿ ಪಾರ್ವತಿ ಮೆನನ್  (Parvathy Menon) ದಕ್ಷಿಣ ಸ್ಟಾರ್ ನಟಿಯರಲ್ಲಿ ಒಬ್ಬರು. ತಮ್ಮ ಸಹಜ ನಟನೆಯ ಮೂಲಕ ಪಾರ್ವತಿ ಗಮನ ಸೆಳೆದಿದ್ದಾರೆ. ಸದ್ಯ ಖಾಸಗಿ ಬದುಕಿನ ವಿಚಾರವಾಗಿ ನಟಿ ಸುದ್ದಿಯಲ್ಲಿದ್ದಾರೆ. ಗುಟ್ಟು ಗುಟ್ಟಾಗಿ ನಟಿ ಮದುವೆಯಾದ್ರಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿವೆ. ಪಾರ್ವತಿ ಮದುವೆಯಾಗಿರುವ (Wedding) ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಅಂಬಾನಿ ಮನೆ ಮಗನ ಪ್ರಿ ವೆಡ್ಡಿಂಗ್‌ನಲ್ಲಿ ಸೆಲೆಬ್ರಿಟಿಗಳ ದಂಡು

    ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಪಾರ್ವತಿಗೆ ಈಗ 36 ವರ್ಷ. ಸಾಮಾನ್ಯವಾಗಿ ಏಲ್ಲೇ ಹೋದರೂ ಮೊದಲು ಎದುರಾಗುವ ಪ್ರಶ್ನೆಯೇ ಮದುವೆ ಯಾವಾಗ? ಎಂದೇ ಕೇಳುತ್ತಾರೆ. ಸಿನಿಮಾಗಳಲ್ಲಿ ಬ್ಯುಸಿಯಿರುವ ನಟಿ ದಿಢೀರ್ ಎಂದು ಮದುವೆ ಫೋಟೋ ಹರಿಬಿಟ್ಟಿದಕ್ಕೆ ಫ್ಯಾನ್ಸ್ ದಂಗಾಗಿದ್ದಾರೆ. ಅಸಲಿಗೆ ಇದು ರಿಯಲ್ ಮದುವೆನಾ? ಅಲ್ಲವೇ ಅಲ್ಲ. ರೀಲ್ ಮದುವೆ ಅಂದರೆ ನೀವು ನಂಬಲೇಬೇಕು.‌

    ‘ಉಲ್ಲೋಜುಕ್ಕು’ (Ullozhukku) ಎಂಬ ಸಿನಿಮಾದಲ್ಲಿ ಪಾರ್ವತಿ ನಟಿಸಿದ್ದಾರೆ. ಪ್ರಶಾಂತ್ ಮುರಳಿ ಈ ಚಿತ್ರದ ನಾಯಕ. ಸದ್ಯ ಈ ಚಿತ್ರದ 45 ಸೆಕೆಂಡಿನ ಪ್ರೋಮೋವೊಂದು ರಿಲೀಸ್‌ ಮಾಡಿದ್ದಾರೆ. ಪಾರ್ವತಿ ಮತ್ತು ಪ್ರಶಾಂತ್ ಮುರಳಿ ದಂಪತಿಗಳ ಪಾತ್ರ ನಿರ್ವಹಿಸುತ್ತಿದ್ದಾರೆ. ರೀಲ್‌ನಲ್ಲಿ ಆಗಷ್ಟೇ ಮದುವೆಯಾಗಿರುವ ನವಜೋಡಿ ದೋಣಿಯಲ್ಲಿ ಕುಳಿತು ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಸದ್ಯ ಪ್ರೋಮೋ ಎಲ್ಲರ ಗಮನ ಸೆಳೆದಿದೆ. ಅಂದಹಾಗೆ, ಇದೇ ಜೂನ್‌ 21ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ.

    ಇನ್ನೂ ಮಾಲಿವುಡ್ (Mollywood) ನಟಿ ಪಾರ್ವತಿ ಅವರು ಕನ್ನಡದ ಮಿಲನಾ, ಪೃಥ್ವಿ, ಮಳೆ ಬರಲಿ ಮಂಜು ಇರಲಿ, ಅಂದರ್ ಬಾಹರ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

    ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಮದುವೆ?

    ಟಿ ಅನುಷ್ಕಾ ಶೆಟ್ಟಿ (Anushka Shetty) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕನ್ನಡ ನಿರ್ಮಾಪಕನ ಜೊತೆ ಅನುಷ್ಕಾ ಶೆಟ್ಟಿ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸ್ವೀಟಿ ಮದುವೆ (Wedding) ಮ್ಯಾಟರ್ ಕೇಳಿ ಫ್ಯಾನ್ಸ್ ಖುಷಿಪಡುತ್ತಿದ್ದಾರೆ.

    ಕನ್ನಡದ ದೊಡ್ಡ ನಿರ್ಮಾಪಕನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರಂತೆ. ಎರಡೂ ಕುಟುಂಬಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆ ನಿರ್ಮಾಪಕನಿಗೂ 42 ವರ್ಷ ಎನ್ನಲಾಗಿದೆ. ಇನ್ನೂ ನಟಿ ಮದುವೆಯಾಗುವ ವರನ ಬಗ್ಗೆ ಮಾಹಿತಿ ಹೊರಬೀಳಬೇಕಿದೆ. ಇದನ್ನೂ ಓದಿ:ಬೆಡ್‌ರೂಮ್‌ನಲ್ಲಿ ಹುಟ್ಟುಹಬ್ಬ ಆಚರಿಸಿದ ‘ಪುಷ್ಪ’ ನಟಿ

    ಅನುಷ್ಕಾ ಮದುವೆಗೆ ತಯಾರಿ ಶುರುವಾಗಿದೆ ಎನ್ನಲಾಗಿದೆ. ಸದ್ಯದಲ್ಲೇ ಮದುವೆ ಸುದ್ದಿ ಬಗ್ಗೆ ಅನುಷ್ಕಾ ಕುಟುಂಬ ಅಧಿಕೃತ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.

    ಅನುಷ್ಕಾ ಶೆಟ್ಟಿ ಕನ್ನಡದ ನಟಿಯೇ ಆಗಿದ್ದರೂ, ತೆಲುಗು ಸಿನಿಮಾಗಳಿಂದ ವೃತ್ತಿ ಬದುಕನ್ನು ಆರಂಭಿಸಿದ್ದರು. ಅಕ್ಕಿನೇನಿ ನಾಗಾರ್ಜುನ ನಟಿಸಿದ್ದ ‘ಸೂಪರ್’ ಸಿನಿಮಾ ಮೂಲಕ ತೆಲುಗಿಗೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದರು. ‘ಅರುಂಧತಿ’, ‘ಬಾಹುಬಲಿ’ (Bahubali) ಅಂತಹ ಸಿನಿಮಾ ಅನುಷ್ಕಾ ಶೆಟ್ಟಿ ವೃತ್ತಿ ಬದುಕಿಗೆ ಹೊಸ ತಿರುವನ್ನು ಕೊಟ್ಟಿತ್ತು. ಅದರಲ್ಲೂ ‘ಬಾಹುಬಲಿ’ ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡಿತ್ತು.

  • ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ಡೇಟ್ ಫಿಕ್ಸ್

    ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ಡೇಟ್ ಫಿಕ್ಸ್

    ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja) ಪುತ್ರಿ ಐಶ್ವರ್ಯಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ತಮಿಳಿನ ಖ್ಯಾತ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ (Umapathy ramaiah) ಜೊತೆ ನಟಿ ಮದುವೆಯಾಗಲಿದ್ದಾರೆ. ಸದ್ಯ ಮದುವೆಯ (Wedding) ದಿನಾಂಕ ಕೂಡ ನಿಗದಿಯಾಗಿದೆ.

    ನಟಿ ಐಶ್ವರ್ಯಾ ಸರ್ಜಾ (Aishwarya Sarja) ಅವರು ಜೂನ್ 10ಕ್ಕೆ ಚೆನ್ನೈನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಜರುಗಲಿದೆ. ಎರಡು ಕುಟುಂಬವು ಕಲಾವಿದರ ಕುಟುಂಬವೇ ಆಗಿರುವ ಕಾರಣ, ಕನ್ನಡ ಮತ್ತು ಸೌತ್‌ನ ನಟ, ನಟಿಯರಿಗೆ ಈ ಮದುವೆಗೆ ಆಹ್ವಾನ ಇರಲಿದೆ. ಇದನ್ನೂ ಓದಿ:ಮತ್ತಷ್ಟು ಎತ್ತರಕ್ಕೆ ಏರುತ್ತೀಯ- ‘ಕೆಜಿಎಫ್’ ನಟಿಗೆ ದೈವದ ಅಭಯ

    ತಮಿಳು ನಟ ಉಮಾಪತಿ ಮತ್ತು ಐಶ್ವರ್ಯಾ ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ಅಕ್ಟೋಬರ್ 27ರಂದು ಚೆನ್ನೈನಲ್ಲಿ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈ ಸಂಭ್ರಮದಲ್ಲಿ ಧ್ರುವ ಸರ್ಜಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

    ಅಂದಹಾಗೆ, ಐಶ್ವರ್ಯಾ ಅವರು 2018ರಲ್ಲಿ ‘ಪ್ರೇಮ ಬರಹ’ (Prema Baraha) ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಕುಮಾರ್‌ಗೆ ನಾಯಕಿಯಾಗಿದ್ದರು. ಮಗಳ ಚಿತ್ರಕ್ಕೆ ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದರು. ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ತೆರೆಕಂಡಿತ್ತು.