Tag: wedding

  • ಗುಡ್‌ನ್ಯೂಸ್‌ ಕೊಟ್ಟ ʻಕಾಟೇರʼ ನಿದೇರ್ಶಕ; ತರುಣ್‌ ಸುಧೀರ್‌ – ಸೋನಲ್‌ ಮದುವೆ ಡೇಟ್‌ ಫಿಕ್ಸ್‌

    ಗುಡ್‌ನ್ಯೂಸ್‌ ಕೊಟ್ಟ ʻಕಾಟೇರʼ ನಿದೇರ್ಶಕ; ತರುಣ್‌ ಸುಧೀರ್‌ – ಸೋನಲ್‌ ಮದುವೆ ಡೇಟ್‌ ಫಿಕ್ಸ್‌

    ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ಸೋನಲ್ ಮಂಥೆರೋ (Sonal Monterio) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ (Wedding) ಡೇಟ್ ಕೂಡ ಫಿಕ್ಸ್ ಆಗಿದೆ. ಇದೇ ಆಗಸ್ಟ್‌ನಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಡಲಿದ್ದಾರೆ. ಇದನ್ನೂ ಓದಿ:ನನ್ನ ಸಲುವಾಗಿ ಮದ್ವೆ ಡೇಟ್‌ ಬದಲಾವಣೆ ಮಾಡೋದು ಬೇಡ ಅಂದಿದ್ದಾರೆ ದರ್ಶನ್‌: ತರುಣ್‌ ಸುಧೀರ್

    ಇದೇ ಆಗಸ್ಟ್ 10, 11ರಂದು ತರುಣ್ ಮತ್ತು ಸೋನಲ್ ಮದುವೆ ಜರುಗಲಿದೆ. ದರ್ಶನ್ (Darshan) ಅವರೇ ತರುಣ್ ಮತ್ತು ಸೋನಲ್ ಮದುವೆಗೆ ಮುನ್ನುಡಿ ಬರೆದಿದ್ರಂತೆ. ಹಾಗಾಗಿ ಮದುವೆ ಡೇಟ್ ಮುಂದಕ್ಕೆ ಹಾಕಲು ತರುಣ್ ತೀರ್ಮಾನಿಸಿದ್ದರು. ಆದರೆ ಹಿರಿಯರ ಸಲಹೆ ಮತ್ತು ದರ್ಶನ್ ಒತ್ತಾಯ ಮೇರೆಗೆ ಮದುವೆಗೆ ಮುಂದಾಗಿದ್ದಾರೆ.

    ತರುಣ್ ಮದುವೆ ವಿಚಾರ ಮೊದಲೇ ದರ್ಶನ್‌ಗೆ ತಿಳಿದಿತ್ತು. ಜೈಲಿನಲ್ಲಿರುವ ಹಿನ್ನಲೆ, ತನ್ನ ಕಾರಣಕ್ಕೆ ತರುಣ್ ಮದುವೆ ಡೇಟ್ ಮುಂದೂಡಬಾರದು ಎಂದು ಪತ್ನಿ ವಿಜಯಲಕ್ಷ್ಮಿ ಕಡೆಯಿಂದ ದರ್ಶನ್ ಹೇಳಿ ಕಳುಹಿಸಿದ್ದರು. ಇದೀಗ ಜೈಲಿಗೆ ಭೇಟಿ ಕೊಟ್ಟ ವೇಳೆ ಕೂಡ ಇದನ್ನೇ ದರ್ಶನ್, ತರುಣ್‌ಗೆ ಹೇಳಿ ಕಳುಹಿಸಿದ್ದಾರೆ. ಇದೀಗ ದರ್ಶನ್ ಇಚ್ಛೆಯಂತೆ ಆಗಸ್ಟ್‌ 10,11ರಂದು ತರುಣ್ ಮದುವೆ ಜರುಗಲಿದೆ.

    ಅಂದಹಾಗೆ, ಚೌಕ, ರಾಬರ್ಟ್, ಕಾಟೇರ ಸಿನಿಮಾದ ಸಕ್ಸಸ್ ನಂತರ ತರುಣ್ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಎಂಎಲ್‌ಎ, ಮದುವೆ ದಿಬ್ಬಣ, ರಾಬರ್ಟ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದಾರೆ.

  • ನನ್ನ ಸಲುವಾಗಿ ಮದ್ವೆ ಡೇಟ್‌ ಬದಲಾವಣೆ ಮಾಡೋದು ಬೇಡ ಅಂದಿದ್ದಾರೆ ದರ್ಶನ್‌: ತರುಣ್‌ ಸುಧೀರ್

    ನನ್ನ ಸಲುವಾಗಿ ಮದ್ವೆ ಡೇಟ್‌ ಬದಲಾವಣೆ ಮಾಡೋದು ಬೇಡ ಅಂದಿದ್ದಾರೆ ದರ್ಶನ್‌: ತರುಣ್‌ ಸುಧೀರ್

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ರನ್ನು(Darshan) ಭೇಟಿಯಾದ ಬಳಿಕ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ (Tharun Sudhir) ಪ್ರತಿಕ್ರಿಯೆ ನೀಡಿದ್ದಾರೆ. ಅವರೇನು ತಪ್ಪು ಮಾಡಿಲ್ಲ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ ಎಂದು ತರುಣ್ ಸುಧೀರ್ ಮಾತನಾಡಿದ್ದಾರೆ. ಇದನ್ನೂ ಓದಿ:‘ಮೊಗ್ಗಿನ ಮನಸು’ ಚಿತ್ರಕ್ಕೆ 16 ವರ್ಷಗಳ ಸಂಭ್ರಮ- ಸೀಕ್ವೆಲ್ ಬಗ್ಗೆ ಸಿಕ್ತು ಗುಡ್ ನ್ಯೂಸ್

    ದರ್ಶನ್ ಅವರಿಗಿಂತ ನಾವೇ ವೀಕ್ ಆಗಿದ್ದೇವೆ. ಅವರಿಗೆ ಜ್ವರ ಇತ್ತು ಈಗ ರಿಕವರಿ ಆಗಿದ್ದಾರೆ. ಇನ್ನೂ ನನ್ನ ಮತ್ತು ಸೋನಲ್ (Actress Sonal) ವಿಚಾರ ಅವರಿಗೆ ಮೊದಲೇ ತಿಳಿದಿತ್ತು. ದರ್ಶನ್ ಅವರೇ ನಮ್ಮ ಮದುವೆ (Wedding) ಡೇಟ್ ಫಿಕ್ಸ್ ಮಾಡಿದ್ದು ಎಂದಿದ್ದಾರೆ. ನನ್ನ ಸಲುವಾಗಿ ಮದುವೆ ಡೇಟ್‌ ಬದಲಾವಣೆ ಮಾಡೋದು ಬೇಡ ಅಂತ ಹೇಳಿದ್ದಾರೆ. ಅವರು ಏನು ತಪ್ಪು ಮಾಡಿಲ್ಲ ಎನ್ನುವ ನಂಬಿಕೆ ನಮಗೂ ಇದೆ. ನಮ್ಮನ್ನು ಹೆಚ್ಚಾಗಿ ಪ್ರೀತಿಸುವವರ ಮೇಲೆಯೇ ನಮಗೆ ನಂಬಿಕೆ ಹೆಚ್ಚಾಗಿರುತ್ತದೆ ಎಂದು ತರುಣ್ ಸುಧೀರ್ ಮಾತನಾಡಿದ್ದಾರೆ.

    ನಮ್ಮ ಮದುವೆ ದಿನಾಂಕದ ಮುಂಚೆಯೇ ಅವರು ಹೊರಗೆ ಬರುತ್ತಾರೆ ಎನ್ನುವ ಭರವಸೆಯಿದೆ. ಅವರಿಗೆ ಮದುವೆ ಪತ್ರಿಕೆ ಏನು ಕೊಟ್ಟಿಲ್ಲ. ಅದಕ್ಕೆ ಜೈಲಿನಲ್ಲಿ ಅನುಮತಿ ಇಲ್ಲ. ಈಗ ದರ್ಶನ್ ಅವರ ಆಶೀರ್ವಾದ ಪಡೆದು ಬಂದಿದ್ದೇನೆ ಎಂದಿದ್ದಾರೆ. ಈ ವೇಳೆ, ಮನೆ ಊಟದ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ನಗು ಮುಖದಲ್ಲೇ ಉತ್ತರ ಕೊಟ್ಟಿದ್ದಾರೆ. ದರ್ಶನ್ ಅವರು ತೂಕ ಕಮ್ಮಿ ಆದವರ ಹಾಗೆ ಕಾಣುತ್ತಿದ್ದಾರೆ ಎಂದಿದ್ದಾರೆ.

    ಈ ವೇಳೆ, ದರ್ಶನ್‌ಗೆ ಮನಪರಿವರ್ತನೆ ಆಗುವ 2 ಪುಸ್ತಕ ನೀಡಿರುವ ಬಗ್ಗೆ ತರುಣ್ ಹೇಳಿದ್ದಾರೆ. ಲೈಫ್ ಜರ್ನಿ ಹಾಗೂ ಫಿಲಾಸಫಿ ಪುಸ್ತಕ ಕೊಟ್ಟಿದ್ದೇನೆ. ಇನ್ನೂ ಪ್ರಕರಣ ಕೋರ್ಟ್‌ನಲ್ಲಿದೆ. ಈ ಬಗ್ಗೆ ಅದಕ್ಕಾಗಿ ಕಾನೂನು ಅಂತ ಇದೆ ತನಿಖೆ ನಡೆಯುತ್ತಿದೆ. ಇನ್ನೂ ಹೊರಗಿನವರು ಏನು ಯೋಚನೆ ಮಾಡುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಸಿನಿಮಾರಂಗದಲ್ಲಿ ಇದೇನು ಹೊಸತಲ್ಲ. ಅವರೇನು ತಪ್ಪು ಮಾಡಿಲ್ಲ ನ್ಯಾಯ ಸಿಗುತ್ತದೆ ಎಂದು ನಂಬಿಕೆ ಇದೆ ಎಂದು ತರುಣ್ ಸುಧೀರ್ ಮಾತನಾಡಿದ್ದಾರೆ.

    ಅಂದಹಾಗೆ, ಸೋನಲ್ ಮತ್ತು ತರುಣ್ ಸುಧೀರ್ ಮದುವೆ ಇದೇ ಆಗಸ್ಟ್ 10 ಮತ್ತು 11ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ.

  • ಭವಿಷ್ಯದ ದೃಷ್ಟಿಯಿಂದ ಇಬ್ಬರೂ ಬೇರೆಯಾಗುತ್ತಿದ್ದೇವೆ: ಡಿವೋರ್ಸ್‌ ಖಚಿತಪಡಿಸಿದ ನತಾಶಾ

    ಭವಿಷ್ಯದ ದೃಷ್ಟಿಯಿಂದ ಇಬ್ಬರೂ ಬೇರೆಯಾಗುತ್ತಿದ್ದೇವೆ: ಡಿವೋರ್ಸ್‌ ಖಚಿತಪಡಿಸಿದ ನತಾಶಾ

    ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ (Hardik Pandya) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿರೋದಾಗಿ ನಟಿ ನತಾಶಾ ಸ್ಟಾಂಕೋವಿಕ್ (Natasa Stankovic) ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಮ್ಮ ಭವಿಷ್ಯದ ದೃಷ್ಟಿಯಿಂದ ಇಬ್ಬರೂ ಬೇರೆಯಾಗುತ್ತಿದ್ದೇವೆ ಎಂದು ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ಜಾನ್ವಿ ಕಪೂರ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲಾದ ನಟಿ

    4 ವರ್ಷಗಳ ಕಾಲ ಜೊತೆಯಾಗಿ ಇದ್ದ ಹಾರ್ದಿಕ್ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಜೊತೆಯಾಗಿ ಇರಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಕೊನೆಗೆ ಭಿನ್ನಾಭಿಪ್ರಾಯ ಮಿತಿ ಮೀರಿದಾಗ ನಮ್ಮ ಒಳ್ಳೆಯದಕ್ಕೆ ಬೇರೆ ಆಗಬೇಕು ಎಂದು ನಿರ್ಧಾರ ಮಾಡಿದ್ದೇವೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ನಾವು ಕುಟುಂಬವಾಗಿ ಬೆಳೆದಿದ್ದೇವೆ. ಇದು ನಮಗೆ ಕಠಿಣ ನಿರ್ಧಾರ ಎಂದು ನತಾಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

     

    View this post on Instagram

     

    A post shared by @natasastankovic__

    ನಮ್ಮಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿದ್ದು ಅಗಸ್ತ್ಯ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ. ಅವನಿಗೆ ಎಲ್ಲಾ ರೀತಿಯಲ್ಲೂ ಬೆಂಬಲವಾಗಿ ನಾವು ನಿಲ್ಲುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡಲು ನಾವು ಕಳಕಳಿಯಿಂದ ವಿನಂತಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಮೇನಲ್ಲಿ ಪಾಂಡ್ಯಾ ಹೆಸರನ್ನು ನಟಿ ತಮ್ಮ ಖಾತೆಯಿಂದ ತೆಗೆದು ಹಾಕಿದ್ದರು. ಅಲ್ಲಿಂದ ಇಬ್ಬರ ಡಿವೋರ್ಸ್ ಬಗ್ಗೆ ವದಂತಿ ಹಬ್ಬಿತ್ತು. ಆದರೆ ಈಗ ಇಬ್ಬರ ಕಡೆಯಿಂದಲೂ ದಿವೋರ್ಸ್  (Divorce) ಕುರಿತು ಅಧಿಕೃತ ಘೋಷಣೆ ಆಗಿದೆ.

    ಅಂದಹಾಗೆ, ನತಾಶಾ ಮತ್ತು ಹಾರ್ದಿಕ್ ಪಾಂಡ್ಯ 2020ರಲ್ಲಿ ಮೇ 31ರಂದು ವಿವಾಹವಾದರು. ಜುಲೈ 2020ರಲ್ಲಿ ತಮ್ಮ ಮೊದಲ ಮಗು ಅಗಸ್ತ್ಯನನ್ನು ಸ್ವಾಗತಿಸಿದರು. 2023ರ ಫೆಬ್ರವರಿಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿ ಪ್ರಕಾರ ಮತ್ತೊಮ್ಮೆ ಮದುವೆಯಾದರು.

  • ಮದುವೆಗೆ ಬಂದಿದ್ದ ಸ್ಟಾರ್ಸ್‌ಗೆ 2 ಕೋಟಿ ಮೌಲ್ಯದ ವಾಚ್ ಗಿಫ್ಟ್ ಮಾಡಿದ ಅಂಬಾನಿ

    ಮದುವೆಗೆ ಬಂದಿದ್ದ ಸ್ಟಾರ್ಸ್‌ಗೆ 2 ಕೋಟಿ ಮೌಲ್ಯದ ವಾಚ್ ಗಿಫ್ಟ್ ಮಾಡಿದ ಅಂಬಾನಿ

    ಅಂಬಾನಿ ಮನೆ ಮಗನ ಮದುವೆ ಅದ್ಧೂರಿಯಾಗಿ ಜು.12ರಂದು ನಡೆದಿದೆ. ಸಂಭ್ರಮದಿಂದ ಅನಂತ್ (Anant Ambani) ಮತ್ತು ರಾಧಿಕಾ (Radhika Merchant) ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕಿದೆ. ಅನಂತ್‌ ಮದುವೆಗೆ ಬಂದ ಸ್ಟಾರ್ಸ್‌ಗೆ ಅಂಬಾನಿ ದುಬಾರಿ ವಾಚ್ ಅನ್ನು ರಿಟರ್ನ್ ಗಿಫ್ಟ್ ಮಾಡಿದ್ದಾರೆ.

    ಮದುವೆಗೆ ಬಂದವರು ನವಜೋಡಿಗೆ ಉಡುಗೊರೆ ಕೊಡುವುದು ಪದ್ಧತಿ. ಆದರೆ ತಮ್ಮ ಮನೆಯ ಮದುವೆಗೆ ಅತಿಥಿಗಳಾಗಿ ಬಂದಿದ್ದ ಸಿನಿಮಾ ತಾರೆಯರಿಗೆ ದುಬಾರಿ ಉಡುಗೊರೆ ಕೊಟ್ಟು ಕಳುಹಿಸಿದ್ದಾರೆ ಅಂಬಾನಿ ಕುಟುಂಬಸ್ಥರು. ಇದು ಈಗ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಅನಂತ್‌ ಅಂಬಾನಿ ಮದುವೆಯಲ್ಲಿ 160 ವರ್ಷದ ಹಿಂದಿನ ಸೀರೆಯುಟ್ಟು ಕಂಗೊಳಿಸಿದ ಆಲಿಯಾ ಭಟ್

     

    View this post on Instagram

     

    A post shared by dia (@ltwt2497)


    ಈ ವಿವಾಹದಲ್ಲಿ ಭಾಗಿಯಾದ ಸಿನಿಮಾ ಮಂದಿಗೆ ಅನಂತ್ ಅಂಬಾನಿ ಐಷಾರಾಮಿ ವಾಚ್‌ಗಳನ್ನು ನೀಡಿದ್ದಾರೆ. ಬಾಲಿವುಡ್ ನಟರಾದ ಶಾರುಖ್ ಖಾನ್ (Sharukh Khan) ಮತ್ತು ರಣವೀರ್ ಸಿಂಗ್‌ಗೆ (Ranveer Singh) ಸೇರಿದಂತೆ ಅನೇಕರಿಗೆ ಈ ದುಬಾರಿ ವಾಚ್‌ಗಳು ಸಿಕ್ಕಿದೆ. ಈ ವಾಚ್‌ಗಳು ತಲಾ 2 ಕೋಟಿ ರೂ. ಮೌಲ್ಯದ್ದಾಗಿದೆ.

    ಅಂಬಾನಿಯಿಂದ ಉಡುಗೊರೆಯಾಗಿ ಪಡೆದ ವಾಚ್‌ಗಳು ಆಡೆಮರ್ಸ್ ಪಿಗುಯೆಟ್ ಕಂಪನಿಯದ್ದಾಗಿದೆ. 9.5 ಮಿಮೀ ದಪ್ಪವಿರುವ ಕೈಗಡಿಯಾರ ಇದಾಗಿದೆ. 41 ಎಂಎಂ 18 ಕ್ಯಾರಟ್‌ನ ಚಿನ್ನದ ವಾಚ್‌ಗಳಾಗಿವೆ. ವಾಚ್‌ನಲ್ಲಿ ವಾರ, ದಿನ, ದಿನಾಂಕ ಇನ್ನೀತರ ಮಾಹಿತಿಯನ್ನು ನೀಡುತ್ತದೆ.

  • ಅನಂತ್‌ ಅಂಬಾನಿ ಮದುವೆಯಲ್ಲಿ 160 ವರ್ಷದ ಹಿಂದಿನ ಸೀರೆಯುಟ್ಟು ಕಂಗೊಳಿಸಿದ ಆಲಿಯಾ ಭಟ್

    ಅನಂತ್‌ ಅಂಬಾನಿ ಮದುವೆಯಲ್ಲಿ 160 ವರ್ಷದ ಹಿಂದಿನ ಸೀರೆಯುಟ್ಟು ಕಂಗೊಳಿಸಿದ ಆಲಿಯಾ ಭಟ್

    ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ ಜು.12ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಯಲ್ಲಿ ಬಾಲಿವುಡ್ ನಟ, ನಟಿಯರು ಭಾಗಿಯಾಗಿದ್ದಾರೆ. ಇದರ ನಡುವೆ ಈಗ 160 ವರ್ಷದ ಹಿಂದಿನ ಸೀರೆಯುಟ್ಟು ಮಿಂಚಿದ ಆಲಿಯಾ ಭಟ್ (Alia Bhatt) ಲುಕ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಅನಂತ್, ರಾಧಿಕಾ ಮದುವೆಗೆ ಯಶ್ (Yash) ಮತ್ತು ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ (Rashmika Mandanna), ದೀಪಿಕಾ ಪಡುಕೋಣೆ, ಶಾರುಖ್, ಸಲ್ಮಾನ್ ಖಾನ್, ಬಿಗ್ ಬಿ ಫ್ಯಾಮಿಲಿ ಸೇರಿದಂತೆ ಹೀಗೆ ಅನೇಕರು ಭಾಗಿಯಾಗಿ ಸಂಭ್ರಮಿಸಿದ್ದರು. ಆಲಿಯಾ ಮತ್ತು ರಣ್‌ಬೀರ್ ಕಪೂರ್ ದಂಪತಿ ಕೂಡ ಮದುವೆಯಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ್ದರು. ಇದನ್ನೂ ಓದಿ:‘ನೈಸ್ ರೋಡ್’ನಲ್ಲಿ ಕಾಣಿಸಿಕೊಂಡ ಧರ್ಮ : ಟ್ರೈಲರ್ ರಿಲೀಸ್

    ಇನ್ನೂ ಮದುವೆಯಲ್ಲಿ ಆಲಿಯಾ ಭಟ್, 160 ವರ್ಷದ ಹಳೆಯ ಆಶಾವಲಿ ಸೀರೆಯನ್ನು ಧರಿಸಿ ಮಿಂಚಿದ್ದು ಎಲ್ಲರ ಗಮನ ಸೆಳೆದಿದೆ. ನಟಿ ಧರಿಸಿದ ಪಿಂಕ್ ಸೀರೆಯನ್ನು ಗುಜರಾತ್‌ನಲ್ಲಿ ತಯಾರಿಸಲಾಗಿದೆ. ಶುದ್ಧ ರೇಷ್ಮೆ, ಝರಿಯನ್ನು ಬಳಸಿದ್ದಾರೆ. ಜೊತೆಗೆ 6 ಗ್ರಾಂ ಶುದ್ಧ ಚಿನ್ನವನ್ನು ಹಾಕಿ ಸೀರೆಯನ್ನು ತಯಾರಿಸಲಾಗಿದೆ.

    ಶುದ್ಧ ರೇಷ್ಮೆ ಮತ್ತು 99%ರಷ್ಟು ಶುದ್ಧ ಬೆಳ್ಳಿಯಿಂದ ಮಾಡಿದ ಝರಿ ಬಾರ್ಡರ್ ಕೂಡ ಇದು ಹೊಂದಿದೆ. ಗುಜರಾತ್‌ನಲ್ಲಿ ತಯಾರಿಸಿದ ಈ ಸೀರೆಗೆ ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಹೊಸದಾಗಿ ಡಿಸೈನ್ ಮಾಡಿದ್ದಾರೆ. ಈ ಸೀರೆಯ ಬೆಲೆ 2 ಕೋಟಿ ರೂ. ಮೌಲ್ಯದಾಗಿದೆ. ಸದ್ಯ ಆಲಿಯಾ ಭಟ್ ಲುಕ್ ಮತ್ತು ಸೀರೆಯ ಬೆಲೆ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ.

  • AR Wedding Celebrations Photo Gallery: ಅನಂತ್‌ ಅಂಬಾನಿ – ರಾಧಿಕಾ ಮರ್ಚೆಂಟ್‌ ವಿವಾಹಮಹೋತ್ಸವದಲ್ಲಿ ತಾರೆಗಳ ದಂಡು!

    AR Wedding Celebrations Photo Gallery: ಅನಂತ್‌ ಅಂಬಾನಿ – ರಾಧಿಕಾ ಮರ್ಚೆಂಟ್‌ ವಿವಾಹಮಹೋತ್ಸವದಲ್ಲಿ ತಾರೆಗಳ ದಂಡು!

    ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್‌ ಅಂಬಾನಿ‌ (Anant Ambani) ಹಾಗೂ ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚೆಂಟ್‌ (RadhikaMerchant) ಅವರ ವಿವಾಹ ಮಹೋತ್ಸವ ವೈಭವೋಪೇತವಾಗಿ ನೆರವೇರಿದೆ. ಜುಲೈ 12ರಂದು ವಿವಾಹಮಹೋತ್ಸವ ನೆರವೇರಿದ್ದರೂ ಜು.13, 14ರಂದು ರಿಸೆಪ್ಷನ್ ಮಾದರಿಯ ಎರಡು ಸಮಾರಂಭ ಜರುಗಲಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಶನ್‌ ಸೆಂಟರ್‌ನಲ್ಲಿ ನಡೆಯುತ್ತಿರುವ ಈ ಅದ್ಧೂರಿ ವಿವಾಹ ಮಹೋತ್ಸವಕ್ಕೆ ದೇಶ-ವಿದೇಶಗಳಿಂದ ನೂರಾರು ಗಣ್ಯರು ಆಗಮಿಸಿದ್ದಾರೆ. ಅನಂತ್-ರಾಧಿಕಾ ಮದುವೆಗೆ ಯಾರೆಲ್ಲ ಆಗಮಿಸಿದ್ದಾರೆ? ಎಂಬುದನ್ನಿಲ್ಲಿ ನೋಡಿ….

    ಎಂ.ಎಸ್‌ ಧೋನಿ ಅವರೊಂದಿಗೆ ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಝಿವಾ

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಸಾರಾ ಅಲಿ ಖಾನ್ ಮತ್ತು ಸಹೋದರ ಇಬ್ರಾಹಿಂ ಅಲಿ ಖಾನ್‌

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಬಾಲಿವುಡ್‌ ನಟಿ ಅನನ್ಯಾ ಪಾಂಡೆ

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಬಾಲಿವುಡ್‌ ನಟಿ ಅನನ್ಯಾ ಪಾಂಡೆ

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ದಿಶಾ ಪಠಾಣಿ

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವ – ಕ್ರೇಜಿ ಲುಕ್‌ನಲ್ಲಿ ಅರ್ಜುನ್‌ ಕಪೂರ್‌

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಖ್ಯಾತ ಗಾಯಕ ಶಂಕರ್‌ ಮಹಾದೇವನ್‌ – ಪತ್ನಿ ಸಂಗೀತಾ ಮಹಾದೇವನ್‌

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ರಾಣಾ ದಗ್ಗುಬಾಟಿ – ಮಿಹೀಕಾ ದಗ್ಗುಬಾಟಿ ದಂಪತಿ

    ಅಂಬಾನಿ ಪುತ್ರನ ಮದುವೆ ಸಮಾರಂಭದಲ್ಲಿ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಹಾಗೂ ಪತ್ನಿ ಲೀನಾ ಅಲ್ ಅಶ್ಕರ್

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಮಹೇಶ್‌ ಬಾಬು ಜೊತೆಗೆ ಪತ್ನಿ ನಮ್ರತಾ ಶಿರೋಡ್ಕರ್

    ನಟ ಮಹೇಶ್‌ ಬಾಬು
    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಮತ್ತು ಕುಟುಂಬ
    ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್
    ಬಾಲಿವುಡ್‌ ಚಿತ್ರ ನಿರ್ಮಾಪಕ ಕರಣ್ ಜೋಹರ್
    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಸಾರಾ ಅಲಿ ಖಾನ್ ಮತ್ತು ಸಹೋದರ ಇಬ್ರಾಹಿಂ ಅಲಿ ಖಾನ್‌
    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಕರಣ್‌ ಜೋಹರ್‌, ಸ್ನೇಹಿತ ಪ್ರಬಲ್ ಗುರುಂಗ್

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಖುಷಿ ಕಪೂರ್‌!

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಪತ್ನಿಯೊಂದಿಗೆ ಮಿಂಚಿದ ಲೆಂಜೆಡರಿ ಕ್ರಿಕೆಟರ್‌ ಕೃಷ್ಣಮಾಚಾರಿ ಶ್ರೀಕಾಂತ್

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಮಿಂಚಿದ ಶನಯಾ ಕಪೂರ್ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಮಿಂಚಿದ ಶನಯಾ ಕಪೂರ್

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಆತ್ಮೀಯ ಗೆಳೆಯ ಓರ್ರಿ ಅವತ್ರಮಣಿ
    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಪತ್ನಿಯೊಂದಿಗೆ ಎ.ಆರ್‌ ರೆಹಮಾನ್‌
    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ತೆಲುಗು ನಟ ದಗ್ಗುಬಾಟಿ ವೆಂಕಟೇಶ್‌
    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಇಶಾನ್‌ ಕಿಶನ್‌, ಕೃನಾಲ್‌ ಪಾಂಡ್ಯ, ಕೃನಾಲ್‌ ಪತ್ನಿ ಪಂಖೂರಿ ಶರ್ಮಾ ಹಾಗೂ ಹಾರ್ದಿಕ್‌ ಪಾಂಡ್ಯ

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಖ್ಯಾತ ಸಿನಿ ನಿರ್ದೇಶಕ ಅಟ್ಲಿ ಕುಮಾರ್ – ಕೃಷ್ಣ ಪ್ರಿಯಾ ದಂಪತಿ

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ನಟ ರಜನಿಕಾಂತ್‌ ಕುಟುಂಬ

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ತಲೈವಾ

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ನಟ ಅನಿಲ್‌ ಕಪೂರ್‌ ಖದರ್‌ ಲುಕ್‌

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಕೃತಿ ಸನೋನ್

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಬಾಲಿವುಡ್‌ ನಟ ವರುಣ್‌ ಧವನ್‌

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಟ್ರೆಡಿಷನಲ್‌ ಲುಕ್‌ನಲ್ಲಿ ಮಿಂಚಿದ WWE ಸ್ಟಾರ್‌ ಜಾನ್‌ ಸೀನಾ

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಬಾಲಿವುಡ್‌ ನಟ ಜಾಕಿ ಶ್ರಾಫ್ ಖದರ್‌

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ಮದುವೆ ಸಮಾರಂಭದಲ್ಲಿ ಪತ್ನಿಯೊಂದಿಗೆ ರಾಜಕುಮಾರ್ ರಾವ್ ಪತ್ರಲೇಖ

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ ಮಹೋತ್ಸವದಲ್ಲಿ ಕುಟುಂಬದೊಂದಿಗೆ ರಾಜ್‌ಕುಮಾರ್ ಹಿರಾಣಿ
  • ಅನಂತ್ ಅಂಬಾನಿ, ರಾಧಿಕಾ ಮದುವೆಯಲ್ಲಿ ಬಾಲಿವುಡ್ ಸ್ಟಾರ್ಸ್ ದಂಡು

    ಅನಂತ್ ಅಂಬಾನಿ, ರಾಧಿಕಾ ಮದುವೆಯಲ್ಲಿ ಬಾಲಿವುಡ್ ಸ್ಟಾರ್ಸ್ ದಂಡು

    ವಿಶ್ವದ ಶ್ರೀಮಂತರಲ್ಲಿ ಒಬ್ಬರಾದ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ (Radhika) ಇಂದು (ಜು.12) ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಸಂಭ್ರಮದಲ್ಲಿ ಯಶ್ ದಂಪತಿ(Yash), ಶಾರುಖ್ ಖಾನ್, ಜಾನ್ ಸೆನಾ ಸೇರಿದಂತೆ ಬಾಲಿವುಡ್ ದಂಡೇ ಹಾಜರಿ ಹಾಕಿದೆ.

    ಅಂಬಾನಿ ಮನೆ ಮಗನ ಮದುವೆಗೆ ಮುಂಬೈನಲ್ಲಿ ಸ್ವರ್ಗವೇ ಧರೆಗಿಳಿದಿದೆ. ಮುಖೇಶ್ ಅಂಬಾನಿ ಮನೆಯನ್ನು ಕಣ್ಣು ಕುಕ್ಕುವಂತೆ ಸಿಂಗರಿಸಲಾಗಿದೆ. ಭಾರತದ ನಾನಾ ಭಾಗದಲ್ಲಿರುವ ತಾರೆಯರು ಈ ಮದುವೆಯ ಕಳೆಯನ್ನ ಹೆಚ್ಚಿಸಲು ಈಗಾಗಲೇ ಮುಂಬೈಗೆ ಬಂದಿಳಿದಿದ್ದಾರೆ.

    ನ್ಯೂಯಾರ್ಕ್‌ನಲ್ಲಿದ್ದ ಶಾರುಖ್ ಖಾನ್ (Sharukh Khan), ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ (Priyanka Chopra), ಯಶ್ ದಂಪತಿ ಕೂಡ ಮುಂಬೈಗೆ ಎಂಟ್ರಿ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ಅರ್ಜುನ್ ಕಪೂರ್, ಜಾನ್ವಿ ಕಪೂರ್, ಸಿದ್ಧಾರ್ಥ್-ಕಿಯಾರಾ ಅಡ್ವಾಣಿ, ಶಾಹಿದ್ ಕಪೂರ್, ವಿಕ್ಕಿ ಕೌಶಲ್, ರಾಮ್‌ ಚರಣ್‌, ಸೋನಾಕ್ಷಿ ಸಿನ್ಹಾ ಎಂಟ್ರಿಯಿಂದ ಮದುವೆ ಸಮಾರಂಭದ ಮೆರಗು ಹೆಚ್ಚಾಗಿದೆ.

    ಭಾರತೀಯ ಸಂಸ್ಕೃತಿ ಮತ್ತು ಕಲೆಗಾರಿಕೆ, ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಹಿಂದೆಂದು ಯಾರೂ ಮಾಡಿರದಷ್ಟು ಅದ್ಧೂರಿಯಾಗಿ ಈ ಮದುವೆ ಕಾರ್ಯಕ್ರಮ ನಡೆಯುತ್ತಿದೆ. ಸನಾತನ ಶೈಲಿಯಲ್ಲಿ ಈ ಮದುವೆ ಜರುಗಲಿದೆ. ಇದನ್ನೂ ಓದಿ:ನಿರೂಪಣೆ ನೀವಿಲ್ಲದೇ ಅಪೂರ್ಣ ಅಪರ್ಣಾ ಅಕ್ಕ: ಅನುಶ್ರೀ ಭಾವುಕ

    ಅಂದಹಾಗೆ, ಅನಂತ್ ಮತ್ತು ರಾಧಿಕಾ ಈ ವಿವಾಹವು 3 ದಿನಗಳ ಕಾಲ ಇರುತ್ತದೆ. ಜು.12ರಂದು ಶುಭವಿವಾಹ, ಜು.13ರಂದು ಶುಭ್ ಆಶೀರ್ವಾದ್, ಜು.14ರಂದು ಆರತಕ್ಷತೆ ನಂತರ ಜು.15ರಂದು ಮತ್ತೊಂದು ಆರತಕ್ಷತೆ ಕಾರ್ಯಕ್ರಮ ಜರುಗಲಿದೆ.

  • ಕೊನೆಗೂ ಹೊರಬಿತ್ತು ‌’ಮಾಣಿಕ್ಯ’ ನಟಿಯ ಮದುವೆ ಫೋಟೋಸ್

    ಕೊನೆಗೂ ಹೊರಬಿತ್ತು ‌’ಮಾಣಿಕ್ಯ’ ನಟಿಯ ಮದುವೆ ಫೋಟೋಸ್

    ‘ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್‌ಕುಮಾರ್ (Varalaxmi Sarathkumar) ಇತ್ತೀಚೆಗೆ ಅದ್ಧೂರಿಯಾಗಿ ಥೈಲ್ಯಾಂಡ್‌ನಲ್ಲಿ ಮದುವೆಯಾಗಿದ್ದರು. ಬಳಿಕ ಚೆನ್ನೈನಲ್ಲಿ ಗ್ರ್ಯಾಂಡ್ ಆಗಿ ಆರತಕ್ಷತೆ ಆಯೋಜಿಸಿದ್ದರು. ಆದರೆ ಮದುವೆ ಫೋಟೋ ಮಾತ್ರ ಎಲ್ಲೂ ಶೇರ್ ಆಗಿರಲಿಲ್ಲ. ಇದೀಗ ನಟಿಯ ಮದುವೆಯ (Wedding) ಸುಂದರ ಫೋಟೋಗಳು ಹೊರಬಿದ್ದಿದೆ.

    ಮದುವೆಯಲ್ಲಿ ನಟಿ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ರೆ, ವರ ನಿಯೋಲಾಯ್ ಲೈಟ್ ಬಣ್ಣ ಶರ್ಟ್ ಮತ್ತು ಪಂಚೆ ಧರಿಸಿದ್ದಾರೆ. ಖುಷಿ ಖುಷಿಯಾಗಿ ಮದುವೆಯಾಗಿರುವ ನಟಿಯ ದಾಂಪತ್ಯಕ್ಕೆ ಈಗ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

    ವರಲಕ್ಷ್ಮಿ ಮತ್ತು ನಿಕೊಲಾಯ್ (Nicholai) ಹಿಂದೂ ಮತ್ತು ಕ್ರೈಸ್ತ ಎರಡು ಧರ್ಮದ ಪ್ರಕಾರ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಅಪರ್ಣಾ ಇನ್ನಿಲ್ಲ ಅನ್ನೋ ನೋವು ಯಾವಾಗಲೂ ಕಾಡುತ್ತದೆ: ಸೃಜನ್ ಲೋಕೇಶ್

    ಅಂದಹಾಗೆ, ಜುಲೈ 3ರಂದು ಚೆನ್ನೈನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ಕನ್ನಡದ ನಟ ಸುದೀಪ್ ಭಾಗಿಯಾಗಿದ್ದರು. ಸುದೀಪ್ ಜೊತೆ ಪತ್ನಿ ಪ್ರಿಯಾ, ಮಗಳು ಸಾನ್ವಿ ಕೂಡ ಭಾಗಿಯಾಗಿದ್ದರು. ಸುದೀಪ್ ಕುಟುಂಬದ ಜೊತೆ ವರಲಕ್ಷ್ಮಿ ಉತ್ತಮ ಒಡನಾಟ ಹೊಂದಿದ್ದಾರೆ.

    ನಟಿಯ ಆತರಕ್ಷತೆಯಲ್ಲಿ ತಮಿಳು ನಟ ಸಿದ್ಧಾರ್ಥ್, ಬಾಲಯ್ಯ, ನಟಿ ತ್ರಿಷಾ ಸೇರಿದಂತೆ ಅನೇಕರು ಭಾಗಿಯಾಗಿ ಹೊಸ ಜೋಡಿಗೆ ಶುಭಕೋರಿದ್ದಾರೆ.

    ಇನ್ನೂ ವರಲಕ್ಷ್ಮಿ ಅವರು ಉದ್ಯಮಿ ನಿಕೋಲಾಯ್ ಜೊತೆ ಮಾರ್ಚ್ 1ರಂದು ಮುಂಬೈನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಲವು ವರ್ಷಗಳ ಪ್ರೀತಿಗೆ ಇಬ್ಬರೂ ಉಂಗುರದ ಮುದ್ರೆ ಒತ್ತಿದ್ದರು.

  • ಸೋನಲ್ ಜೊತೆಗಿನ ಮದುವೆ ಸುದ್ದಿ ನಿಜ ಎಂದ ‘ಕಾಟೇರ’ ಡೈರೆಕ್ಟರ್

    ಸೋನಲ್ ಜೊತೆಗಿನ ಮದುವೆ ಸುದ್ದಿ ನಿಜ ಎಂದ ‘ಕಾಟೇರ’ ಡೈರೆಕ್ಟರ್

    ರಾಬರ್ಟ್, ಕಾಟೇರ (Kaatera) ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ತರುಣ್ ಸುಧೀರ್ (Tharun Sudhir) ಮದುವೆ ವಿಚಾರ ಕೆಲದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸೋನಲ್ (Sonal) ಜೊತೆಗಿನ ಮದುವೆ ಬಗ್ಗೆ ಇದೀಗ ತರುಣ್ ಪ್ರತಿಕ್ರಿಯೆ ನೀಡಿದ್ದಾರೆ.

    ನಟಿ ಸೋನಲ್ ‌ಜೊತೆಗಿನ ಮದುವೆ ವಿಚಾರ ನಿಜ ಎಂದು ತರುಣ್ ಸುಧೀರ್ ಒಪ್ಪಿಕೊಂಡಿದ್ದಾರೆ. ಅತೀ ಶೀಘ್ರದಲ್ಲಿ ಸಿಹಿ ಸುದ್ದಿ ಹಂಚಿಕೊಳ್ತೀವಿ ಎಂದಿದ್ದಾರೆ. ಮದುವೆ ಬಗ್ಗೆ ಶೀಘ್ರದಲ್ಲಿ ತಿಳಿಸುತ್ತೇವೆ. ‘ರಾಬರ್ಟ್’ ಸಿನಿಮಾ ಸೆಟ್‌ನಲ್ಲಿ ಪರಿಚಯ ಆಗಿದ್ದು, ದರ್ಶನ್ ಸರ್ ತಮಾಷೆ ಮಾಡುತ್ತಿದ್ದರು ಎಂದು ತರುಣ್ ಮಾತನಾಡಿದ್ದಾರೆ. ಇದನ್ನೂ ಓದಿ:ಮಾಲಿಕನಾದ ಶಿವಣ್ಣ- ‘ಉತ್ತರಕಾಂಡ’ ಚಿತ್ರದ ಫಸ್ಟ್‌ ಲುಕ್‌ ಔಟ್‌

    ಇತ್ತೀಚೆಗೆ ತರುಣ್ ತಾಯಿ ಮಾಲತಿ ಕೂಡ ಮದುವೆ ಬಗ್ಗೆ ಮಾತನಾಡಿ, ಮಗನ ಮದುವೆ ದಿನಾಂಕ ಫಿಕ್ಸ್ ಆಗಿಲ್ಲ. ಆಷಾಢ ಮಾಸ ಅಲ್ವಾ? ಕನ್ಫರ್ಮ್ ಆದ್ಮೇಲೆ ಹೇಳ್ತೀವಿ ಎಂದಿದ್ದಾರೆ. ಮದುವೆ ಛತ್ರಗಳು ಅಷ್ಟು ಬೇಗ ಸಿಕ್ತಿಲ್ಲ. ಮಗನ ಕೈಲಿ ಸದ್ಯ ಜಾಸ್ತಿ ಪ್ರಾಜೆಕ್ಟ್ ಇದೆ. ಅದೆಲ್ಲಾ ನೋಡ್ಕೊಂಡು ಮದುವೆ ಮಾಡಿಕೊಳ್ತಾರೆ ಎಂದು ತಿಳಿಸಿದ್ದರು.

    ನಾನೇ ಸರಿಯಾಗಿ ಇನ್ನೂ ಆ ಹುಡ್ಗಿನಾ ನೋಡಿಲ್ಲ. ಮನೆಯವರೆಲ್ಲಾ ಕೂತು ಮಾತಾಡಬೇಕು. ಛತ್ರ ಬುಕ್ ಆದ್ಮೇಲೆ ನಾವೇ ಮಾತಾಡ್ತೀವಿ ಎಂದು ತರುಣ್ ಮತ್ತು ಸೋನಲ್ ಮದುವೆ ಸುದ್ದಿಯನ್ನು ಅಧಿಕೃತವಾಗಿ ತಿಳಿಸಿದ್ದರು ಮಾಲತಿ ಸುಧೀರ್.

    ಅಂದಹಾಗೆ, ಚೌಕ, ರಾಬರ್ಟ್, ಕಾಟೇರ ಸಿನಿಮಾದ ಸಕ್ಸಸ್ ನಂತರ ತರುಣ್ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಇದರ ನಡುವೆ ತರುಣ್ ಶೋವೊಂದರ ಜಡ್ಜ್ ಆಗಿದ್ದಾರೆ. ಎಂಎಲ್‌ಎ, ಮದುವೆ ದಿಬ್ಬಣ, ರಾಬರ್ಟ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದಾರೆ.

  • ಮದುವೆ ಬಳಿಕ ಬಿಗ್ ಬಾಸ್ ಸ್ಪರ್ಧಿಗಳಿಗೆ ಸಿರಿ ಪಾರ್ಟಿ

    ಮದುವೆ ಬಳಿಕ ಬಿಗ್ ಬಾಸ್ ಸ್ಪರ್ಧಿಗಳಿಗೆ ಸಿರಿ ಪಾರ್ಟಿ

    ಬಿಗ್ ಬಾಸ್ ಬೆಡಗಿ (Bigg Boss Kannada 10) ಸಿರಿ (Siri) ಇತ್ತೀಚೆಗೆ ನಟ ಕಮ್ ಉದ್ಯಮಿ ಪ್ರಭಾಕರ್ ಭೋರೆಗೌಡ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಈ ಮದುವೆ ಜರುಗಿತ್ತು. ಈಗ ಬಿಗ್ ಬಾಸ್ ಕನ್ನಡ 10ರ ಸ್ಪರ್ಧಿಗಳಿಗೆ ಮತ್ತು ಚಿತ್ರರಂಗದ ಕಲಾವಿದರಿಗೆ ಸಿರಿ ಪಾರ್ಟಿ ನೀಡಿದ್ದಾರೆ.

    ಸಿರಿ ಮತ್ತು ಪ್ರಭಾಕರ್ ಭೋರೆಗೌಡ ಏರ್ಪಡಿಸಿದ್ದ ಪಾರ್ಟಿಗೆ ದೊಡ್ಮನೆ ಮಂದಿಯೆಲ್ಲಾ ಭಾಗವಹಿಸಿ ಈ ಜೋಡಿಗೆ ಶುಭಕೋರಿದ್ದಾರೆ. ಸಂಗೀತಾ ಶೃಂಗೇರಿ ಕಾರಣಾಂತರಗಳಿಂದ ಗೈರಾಗಿದ್ದರು. ಆದರೆ ಸಂಗೀತಾ ಸಹೋದರ ಸಂತೋಷ್ ಮತ್ತು ಅತ್ತಿಗೆ ಭಾಗಿಯಾಗಿದ್ದರು. ಇದನ್ನೂ ಓದಿ:ದರ್ಶನ್ ಘಟನೆ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ರಂಗಾಯಣ ರಘು

    ಸಿರಿ ಜೊತೆ ಇಂದಿಗೂ ಉತ್ತಮ ಒಡನಾಟ ಹೊಂದಿರುವ ಕಾರ್ತಿಕ್ ಮಹೇಶ್, ಪವಿ ಪೂವಪ್ಪ, ಮೈಕಲ್ ಅಜಯ್, ಐಶಾನಿ, ವಿನಯ್ ಗೌಡ ದಂಪತಿ, ನಮ್ರತಾ ಗೌಡ ಸೇರಿದಂತೆ ಕಿರುತೆರೆ ನಟ, ನಟಿಯರು ಭಾಗಿಯಾಗಿ ಈ ಜೋಡಿಗೆ ವಿಶ್ ಮಾಡಿದರು. ಬಳಿಕ ಕಾರ್ಯಕ್ರಮದಲ್ಲಿ ರೊಮ್ಯಾಂಟಿಕ್ ಹಾಡೋದಕ್ಕೆ ಹೆಜ್ಜೆ ಹಾಕಿದ್ದಾರೆ ಸಿರಿ ಮತ್ತು ಪ್ರಭಾಕರ್.

    ಇನ್ನೂ ಜೂನ್ 13ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿನ ಭೋಗ ನಂದೀಶ್ವರ ದೇವಾಲಯದಲ್ಲಿ ಸಿರಿ ಮತ್ತು ಉದ್ಯಮಿ ಪ್ರಭಾಕರ್ ಮದುವೆ ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿತ್ತು. ಪ್ರಭಾಕರ್ ಅವರು ಮೂಲತಃ ಮಂಡ್ಯದವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

    ಅಂದಹಾಗೆ, ಮನೆಯೊಂದು ಮೂರು ಬಾಗಿಲು, ರಂಗೋಲಿ, ಬದುಕು ಸೀರಿಯಲ್‌ಗಳು ಮೂಲಕ ಟಿವಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಸೀಸನ್ 10ರ ಬಿಗ್ ಬಾಸ್ ಕನ್ನಡ ಶೋನಿಂದ ನಟಿ ಸಿರಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದಾರೆ.