Tag: Wedding reception

  • ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್

    ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್

    ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷದ ಶಾಸಕರೊಬ್ಬರು ತಮ್ಮ ಕ್ಷೇತ್ರದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಯುವತಿಯರೊಂದಿಗೆ ನೃತ್ಯ ಮಾಡುತ್ತಾ, ಫ್ಲೈಯಿಂಗ್ ಕಿಸ್ ನೀಡುತ್ತಾ, ಹಣವನ್ನು ಎಸೆದಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

    ಬಿಹಾರದ ಭಾಗಲ್ಪುರ್ ಜಿಲ್ಲೆಯ ಫತೇಪುರ್ ಗ್ರಾಮದಲ್ಲಿ ನಡೆದ ಮದುವೆಯ ಆರತಕ್ಷತೆ ಸಮಾರಂಭದಲ್ಲಿ, ಜೆಡಿಯು ಶಾಸಕ ಗೋಪಾಲ್ ಮಂಡಲ್ ಅವರು ಬಾಲಿವುಡ್‍ನ ಫೇಮಸ್ ದಿಲ್ಬರ್, ದಿಲ್ಬರ್ ಸಾಂಗ್‍ಗೆ ಧರಿಸಿದ್ದ ಕುರ್ತಾವನ್ನು ಮೇಲಕ್ಕೆ ಎತ್ತಿ ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ಯುವತಿಯರ ಕೈ ಹಿಡಿದು ವೇದಿಕೆ ಮೇಲೆ ಎಲ್ಲರ ಮುಂದೆ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ: ಸೌಂಡ್ ಕಮ್ಮಿ ಮಾಡಿ, ಲೌಡ್ ಸ್ಪೀಕರ್ ನಿಯಮ ನಮಗೂ ಅನ್ವಯಿಸುತ್ತದೆ: ಪೇಜಾವರ ಶ್ರೀ

    ಇದೀಗ ಗೋಪಾಲ್ ಮಂಡಲ್ ಅವರ ಡ್ಯಾನ್ಸ್ ವೀಡಿಯೋಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಲ್ಲದೇ ಈ ಕುರಿತಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗೋಪಾಲ್ ಮಂಡಲ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಗೋಪಾಲ್ ಮಂಡಲ್, ಮ್ಯೂಸಿಕ್ ಕೇಳಿದಾಗಲೆಲ್ಲ ನನ್ನನ್ನು ಡ್ಯಾನ್ಸ್ ಮಾಡಬೇಕೆಂದು ಅನಿಸುತ್ತದೆ. ಕಲಾವಿದರು ಕುಣಿಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ- ಕೋರ್ಟ್ ಅಂಗಳಕ್ಕೆ ಕೊಂಡೊಯ್ಯಲು ಸಿದ್ಧತೆ

    ಮತ್ತೊಂದೆಡೆ ಜೆಡಿಯು ಬಿಹಾರ ಘಟಕದ ಅಧ್ಯಕ್ಷ ಉಮೇಶ್ ಕುಶ್ವಾಹ ಅವರು, ಗೋಪಾಲ್ ಮಂಡಲ್ ಅವರಿಗೆ ನಡತೆ ಮತ್ತು ಕುರ್ಚಿಯ ಘನತೆಯನ್ನು ಕಾಪಾಡಿಕೊಳ್ಳಿ ಎಂದು ಟಾಂಗ್ ನೀಡಿದ್ದಾರೆ. ಈ ಮುನ್ನ ಫೆಬ್ರವರಿಯಲ್ಲಿ ನಡೆದ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಮಂಡಲ್ ಅವರು, ಬಾಲಿವುಡ್ ಹಿಟ್ ‘ದಿಲ್ಲಿವಾಲಿ ಗರ್ಲ್‍ಫ್ರೆಂಡ್’ ಸಾಂಗ್‍ಗೆ ನೃತ್ಯ ಮಾಡಿದ್ದ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.