Tag: Wedding Party

  • Gangwar: ಗುಂಡಿನ ದಾಳಿಗೆ ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ ಬಲಿ

    Gangwar: ಗುಂಡಿನ ದಾಳಿಗೆ ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ ಬಲಿ

    ಒಟ್ಟಾವ: ಮದುವೆ ಸಮಾರಂಭದಲ್ಲಿ ಅಪರಿಚಿತರು ನಡೆಸಿದ ಗುಂಡಿನ ದಾಳಿಗೆ ಪಂಜಾಬ್‌ ಮೂಲದ ಗ್ಯಾಂಗ್‌ಸ್ಟರ್‌ (Punjab Origin Gangster) ಬಲಿಯಾಗಿರುವ ಘಟನೆ ಕೆನಡಾದ (Canada) ವ್ಯಾಂಕೋವರ್‌ ನಗರದಲ್ಲಿ ನಡೆದಿದೆ.

    ತಡರಾತ್ರಿ ಸುಮಾರು 1:30ರ ವೇಳೆಗೆ ಗುಂಡಿನ ದಾಳಿ (Shotout) ನಡೆದಿದ್ದು, 28 ವರ್ಷದ ಅಮರ್‌ ಪ್ರೀತ್‌ (ಚುಕ್ಕಿ) ಬಲಿಯಾಗಿದ್ದಾನೆ. ಗ್ಯಾಂಗ್‌ಸ್ಟರ್‌ಗಳಾಗಿದ್ದ ಅಮರ್‌ ಪ್ರೀತ್‌ ಸಹೋದರರಾದ ಸಮ್ರಾ ಮತ್ತು ರವೀಂದರ್‌ ಇಬ್ಬರೂ ಮದುವೆ ಅತಿಥಿಗಳಾಗಿ ಬಂದಿದ್ದರು. ಇದೇ ಸಮಾರಂಭಕ್ಕೆ ಕೆಲವು ಅಪರಿಚಿತ ವ್ಯಕ್ತಿಗಳೂ ಸೇರಿದಂತೆ 60 ಮಂದಿ ಹಾಜರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 5, 6 ವರ್ಷದ ಬಾಲಕಿಯರ ಮೇಲೆ ಸಂಬಂಧಿಕನಿಂದಲೇ ರೇಪ್‌ – ಆರೋಪಿ ಎಸ್ಕೇಪ್‌

    CRIME 2

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಉದ್ದೇಶಿತ ಗ್ಯಾಂಗ್‌ ವಾರ್‌ ಆಗಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಸಹಾಯವಾಣಿ ಮೊ.ಸಂ. 6047172500ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಚಿನ್ನದ ಸರ ನುಂಗಿದ- ಗಂಟಲಲ್ಲಿ ಸಿಲುಕಿ ಆಸ್ಪತ್ರೆಯಲ್ಲಿ ನರಳಾಡಿದ! 

    2022ರ ಆಗಸ್ಟ್‌ನಲ್ಲಿ ಕೆನಡಾ ಪೊಲೀಸರು ಗ್ಯಾಂಗ್‌ಸ್ಟರ್‌ಗಳೊಂದಿಗೆ ಸಂಪರ್ಕದಲ್ಲಿದ್ದ 11 ವ್ಯಕ್ತಿಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರು. ಅವರಲ್ಲಿ ಅಮರ್‌ ಪ್ರೀತ್‌ ಮತ್ತು ಸಹೋದರ ರವೀಂದರ್‌ ಸೇರಿ 9 ಮಂದಿ ಪಂಜಾಬ್‌ ಮೂಲದವರು ಎಂದು ತಿಳಿಸಿದ್ದರು.

  • ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ – 25 ಮಂದಿ ದುರ್ಮರಣ

    ಮದುವೆ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ – 25 ಮಂದಿ ದುರ್ಮರಣ

    ಡೆಹ್ರಾಡೊನ್: ಮದುವೆ (Wedding) ಮುಗಿಸಿ ವಾಪಸ್ಸಾಗುತ್ತಿದ್ದ ಬಸ್‍ (Bus) ಅಪಘಾತಗೊಂಡು 25 ಮಂದಿ ಸಾವನ್ನಪ್ಪಿ, 21ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಉತ್ತರಾಖಂಡದ (Uttarakhand) ಪೌರಿ ಗರ್ವಾಲ್‍ನಲ್ಲಿ (Pauri Garhwal)  ನಡೆದಿದೆ.

    ಮಂಗಳವಾರ ತಡರಾತ್ರಿ ಪೌರಿ ಗರ್ವಾಲ್‍ನಲ್ಲಿ ಕಂದಕಕ್ಕೆ ಉರುಳಿ ಬಸ್‌ ಅಪಘಾತಗೊಂಡಿದೆ. ಅಪಘಾತದಲ್ಲಿ 25 ಮಂದಿ ಮೃತಪಟ್ಟಿದ್ದು, ಈಗಾಗಲೇ 21 ಮಂದಿಯನ್ನು ರಾಜ್ಯ ವಿಪತ್ತು ನಿರ್ವಹಣಾ ತಂಡ (SDRF) ರಕ್ಷಣೆ ಮಾಡಿದೆ ಎಂದು ಪೊಲೀಸ್ (Police) ನಿರ್ದೇಶಕರಾದ ಅಶೋಕ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ

    ಈ ಬಗ್ಗೆ ರಾಜ್ಯ ಪೊಲೀಸ್ ತಂಡ ರಕ್ಷಣಾ ಕಾರ್ಯಚರಣೆಯ ವೀಡಿಯೋ ಬಿಡುಗಡೆ ಮಾಡಿದೆ. ಅಪಘಾತದಿಂದ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತದಲ್ಲಿ ಸಾವಿಗೀಡಾದವರಿಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ  (Pushkar Singh Dhami) ಸಂತಾಪ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಅವರ ಕುಟುಂಬಗಳೊಂದಿಗಿದೆ ಎಂದು ಧೈರ್ಯ ತುಂಬಿದ್ದಾರೆ. ಇದನ್ನೂ ಓದಿ: ಜಂಬೂ ಸವಾರಿ ಭದ್ರತೆಗೆ ವಿಶೇಷ ಆದ್ಯತೆ- 5000 ಪೊಲೀಸರ ನಿಯೋಜನೆ

    ಇನ್ನೊಂದೆಡೆ ಮಂಗಳವಾರ ಉತ್ತರಾಖಂಡದ (Uttarakhand) ದ್ರೌಪದಿ ಕಾ ದಂಡಾ-2 (Draupadi ka Danda) ಶಿಖರದಲ್ಲಿ ಇಂದು ಭಾರೀ ಹಿಮಪಾತ (Avalanche) ಸಂಭವಿಸಿದ್ದು, 20ಕ್ಕೂ ಹೆಚ್ಚು ಪರ್ವತಾರೋಹಿರು (Mountaineers) ಹಿಮದಲ್ಲಿ ಸಿಲುಕಿದ್ದರು. ವರದಿಗಳ ಪ್ರಕಾರ ನಾಪತ್ತೆಯಾದವರು ಉತ್ತರ ಕಾಶಿಯ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನವರಾಗಿದ್ದಾರೆ. ಟ್ರಕ್ಕಿಂಗ್ ತೆರಳಿದ್ದ 40 ಜನರ ಗುಂಪಿನಲ್ಲಿ 22 ವಿದ್ಯಾರ್ಥಿಗಳು ಹಾಗೂ 7 ಮಂದಿ ಬೋಧಕರಿದ್ದರು ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ರೋಮ್ಯಾಂಟಿಕ್ ಆಗಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ರಿಯಲ್ ಸ್ಟಾರ್ ದಂಪತಿ

    ರೋಮ್ಯಾಂಟಿಕ್ ಆಗಿ ವಿವಾಹ ವಾರ್ಷಿಕೋತ್ಸವ ಆಚರಿಸಿದ ರಿಯಲ್ ಸ್ಟಾರ್ ದಂಪತಿ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ಯೂಟ್ ಪೇರ್ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟು 18 ವರ್ಷ ಕಳೆದಿದ್ದು, ತಮ್ಮ ವಾರ್ಷಿಕೋತ್ಸವನ್ನು ರೆಸಾರ್ಟ್‍ವೊಂದರಲ್ಲಿ ರೋಮ್ಯಾಂಟಿಕ್ ಆಗಿ ಆಚರಿಸಿದ್ದಾರೆ.

    Upendra

    ಯಾವಾಗಲೂ ಸಖತ್ ಕ್ರಿಯೆಟೀವ್ ಆಗಿ ಆಲೋಚಿಸುವ ಉಪೇಂದ್ರ ಅವರು, ಕನ್ನಡದಲ್ಲಿ ಹೊಸ ರೀತಿಯ ಬಗೆ, ಬಗೆಯ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದಾರೆ. ಸದಾ ಸಿನಿಮಾ ಶೂಟಿಂಗ್, ರಾಜಕೀಯ ಎಂದೆಲ್ಲಾ ಬ್ಯುಸಿಯಾಗಿರುವ ಉಪೇಂದ್ರ ಅವರು ಒಬ್ಬ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಇದಕ್ಕೆ ಆಗಾಗಾ ಅವರ ಮನೆಯಲ್ಲಿ ಹಬ್ಬದ ಸಂದರ್ಭಗಳಲ್ಲಿ ಸಂಪ್ರದಾಯಿಕ ಪೂಜೆ, ಆಚರಣೆಗಳೇ ಸಾಕ್ಷಿ ಎನ್ನಬಹುದು. ತಾವೂ ಎಷ್ಟೇ ಬ್ಯೂಸಿಯಾಗಿದ್ದರೂ ಈ ಮಧ್ಯೆ ಪತ್ನಿ, ಮಕ್ಕಳಿಗೂ ಕೂಡ ಅಷ್ಟೇ ಸಮಯ ಮೀಸಲಿಡುತ್ತಾರೆ. ಇದನ್ನೂ ಓದಿ:  ಮೊದಲ ಪದಗಳನ್ನು ಕಲಿಯುತ್ತಿರುವ ರಾಯನ್ – ಫುಲ್ ಖುಷ್ ಆದ ಮೇಘನಾ

    Upendra

    ಸದ್ಯ ಡಿಸೆಂಬರ್ 14ಕ್ಕೆ ಉಪೇಂದ್ರ ಹಾಗೂ ಪ್ರಿಯಾಂಕಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 18 ವರ್ಷ ಕಳೆದಿದ್ದು, ಇದೇ ಖುಷಿಯಲ್ಲಿ ದಂಪತಿ ಕೇರಳದಲ್ಲಿರುವ ವೈಲ್ಡ್ ಪ್ಲಾನೆಟ್ ರೆಸಾರ್ಟ್‍ಗೆ ಭೇಟಿ ನೀಡಿ ಇಬ್ಬರು ಏಕಾಂತವಾಗಿ ಕಾಲ ಕಳೆದಿದ್ದಾರೆ. ಜೊತೆಗೆ ತಮ್ಮ ವಿವಾಹವಾರ್ಷಿಕೋತ್ಸವವನ್ನು ಕೇಕ್ ಕಟ್ ಮಾಡಿ ಸಖತ್ ರೋಮ್ಯಾಂಟಿಕ್ ಆಗಿ ಆಚರಿಸಿದ್ದಾರೆ.

    ಇನ್ನೂ ಈ ಫೋಟೋಗಳನ್ನು ಪ್ರಿಯಾಂಕಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಥ್ಯಾಂಕ್ಯು ವೈಲ್ಡ್ ಪ್ಲಾನೆಟ್ ರೆಸಾರ್ಟ್. ಬೆಚ್ಚಗಿನ ಮತ್ತು ಮರೆಯಲಾಗದಂತಹ ಅನುಭವ. ಅಲ್ಲಿನ ಸುಂದರವಾದ ದೃಶ್ಯಗಳು, ಅಧಿಕೃತ ಕೊಠಡಿಗಳು, ರುಚಿಕರವಾದ ಫುಡ್, ಸಿಬ್ಬಂದಿಯ ಸ್ನೇಹ ಮತ್ತು ವಿಶ್ವಾಸ ನಿಮ್ಮ ಅದ್ಭುತ ಆತಿಥ್ಯ ನಮಗೆ ಬಹಳ ಇಷ್ಟವಾಯಿತು. ಮತ್ತೊಮ್ಮೆ ವೈಲ್ಡ್ ಪ್ಲಾನೆಟ್ ರೆಸಾರ್ಟ್‍ಗೆ ಭೇಟಿ ನೀಡಲು ಎದುರು ನೋಡುತ್ತಿದ್ದೇನೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬೋಲ್ಡ್ ದೃಶ್ಯಗಳೇ ಸಮಂತಾ ದಾಂಪತ್ಯಕ್ಕೆ ಮುಳುವಾಯ್ತು!

     

    View this post on Instagram

     

    A post shared by priyanka upendra (@priyanka_upendra)

    ಉಪೇಂದ್ರ ಹಾಗೂ ಪ್ರಿಯಾಂಕಾ ಪ್ರೀತಿಸಿ 2003ರ ಡಿಸೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ದಂಪತಿಗೆ ಆಯುಷ್ ಹಾಗೂ ಐಶ್ವರ್ಯ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.