Tag: wedding house

  • ಮದುವೆ ಹಾಲ್‍ನಲ್ಲಿ ಜಗಳ ಬಿಡಿಸಲು ಹೋಗಿ ತಾನೇ ಹೆಣವಾದ!

    ಮದುವೆ ಹಾಲ್‍ನಲ್ಲಿ ಜಗಳ ಬಿಡಿಸಲು ಹೋಗಿ ತಾನೇ ಹೆಣವಾದ!

    ಧಾರವಾಡ: ಜಗಳ ಬಿಡಿಸಲು ಹೋಗಿದ್ದ ವ್ಯಕ್ತಿಯ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸಾವನ್ನಪ್ಪಿರುವ ಘಟನೆ ಧಾರವಾಡ ನಗರದ ಪೆಂಡಾರ್ ಗಲ್ಲಿಯಲ್ಲಿ ನಡೆದಿದೆ.

    ಪೆಂಡಾರ್ ಗಲ್ಲಿಯ ಹಾಲ್‍ನಲ್ಲಿ ಮದುವೆ ಸಮಾರಂಭವೊಂದಕ್ಕೆ ಹೋದ ಧಾರವಾಡ ನಗರದ ಜಾಂಬವಂತನಗರ ನಿವಾಸಿ ಸಾದಿಕ್, ಇಬ್ಬರ ಮಧ್ಯೆ ಜಗಳ ನಡೆಯುತ್ತಿರುವುದನ್ನು ಬಿಡಿಸಲು ಹೋಗಿದ್ದನು. ಈ ವೇಳೆ ತಳ್ಳಾಟ, ನೂಕಾಟದಲ್ಲಿ ಸಿಲುಕಿದ್ದರಿಂದ ಸಾಧಿಕ್ ತಲೆಗೆ ಗೇಟ್ ಬಡಿದು ಗಂಭೀರ ಗಾಯಗೊಂಡಿದ್ದಾನೆ. ಇದನ್ನೂ ಓದಿ: ಹೋಟೆಲ್‍ನಲ್ಲಿ ಅತ್ಯಾಚಾರಕ್ಕೆ ಯತ್ನ – ಬಿಹಾರ ಕ್ರಿಕೆಟ್ ಮುಖ್ಯಸ್ಥನ ವಿರುದ್ಧ ಆರೋಪ 

    ತಕ್ಷಣ ಸ್ಥಳದಲ್ಲಿದ್ದ ಜನರು ಆತನನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾಧಿಕ್ ಸಾವನ್ನಪ್ಪಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.

    ರಿಜ್ವಾನ್, ಸಾಧಿಕ್‍ನನ್ನು ತಳ್ಳಿದ್ದರಿಂದ ಆತನ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಘಟನಾ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ, ಆರೋಪಿ ರಿಜ್ವಾನ್‍ನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ – ಮದುವೆ ಮನೆಗೂ ಕಾಲಿಟ್ಟಿದೆ ಮ್ಯಾಗಿ

    ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ – ಮದುವೆ ಮನೆಗೂ ಕಾಲಿಟ್ಟಿದೆ ಮ್ಯಾಗಿ

    ನವದೆಹಲಿ: ಮ್ಯಾಗಿ ಅಂದರೆ ಯಾರಿಗಿಷ್ಟ ಇಲ್ಲಾ ಹೇಳಿ? ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮ್ಯಾಗಿ ಎಲ್ಲರಿಗೂ ಅಚ್ಚು-ಮೆಚ್ಚು. 2 ನಿಮಿಷದಲ್ಲಿ ತಯಾರಾಗುವ ಬಿಸಿ ಬಿಸಿಯಾದ ಮ್ಯಾಗಿಯನ್ನು ನೋಡಿದವರು ಯಾರು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ. ಸದ್ಯ ಮ್ಯಾಗಿ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.

    ನಿಮ್ಮ ನೆಚ್ಚಿನ ಮ್ಯಾಗಿ ಇದೀಗ ಮದುವೆ ಮನೆಯ ಊಟದ ಮೆನು ಲಿಸ್ಟ್‍ಗಳಲ್ಲಿ ಕೂಡ ಒಂದಾಗಿದೆ. ಕೊರೊನಾದಂತಹ ಸಾಂಕ್ರಾಮಿಕ ರೋಗ ದೇಶದಲ್ಲಿ ಹರಡಿದ್ದಾಗ ಎಷ್ಟೋ ಮಂದಿ ಲಾಕ್ ಡೌನ್ ಸಮಯದಲ್ಲಿ ಮ್ಯಾಗಿಯನ್ನೇ ಆಹಾರವಾಗಿ ಅವಲಂಬಿಸಿದ್ದರು.

    ಇತ್ತೀಚೆಗೆ ಪತ್ರಕರ್ತೆ ಸೌಮ್ಯ ಲೇಖನಿ ಎಂಬವರು ತಮ್ಮ ಸೋದರ ಸಂಬಂಧಿ ವಿವಾಹ ಮಹೋತ್ಸವಕ್ಕೆ ಹೋಗಿದ್ದಾಗ, ಅಲ್ಲಿನ ಫುಡ್ ಕೌಂಟರ್‍ನಲ್ಲಿ ಮ್ಯಾಗಿ ಕೂಡ ಇರುವುದನ್ನು ಕಂಡು ಮೊಬೈಲ್ ನಲ್ಲಿ ಫೋಟೋವನ್ನು ಸೆರೆಹಿಡಿದಿದ್ದಾರೆ. ಅಲ್ಲದೆ ಕ್ಯಾಪ್ಷನ್‍ನಲ್ಲಿ ನನ್ನ ಸೋದರ ಸಂಬಂಧಿ ಯೋಚಿಸಿರುವ ರೀತಿ ಮತ್ತು ಅವರ ಮದುವೆಯಲ್ಲಿ ಮ್ಯಾಗಿ ಕೌಂಟರ್ ಏರ್ಪಡಿಸಿರುವುದಕ್ಕಾಗಿ ನಾನು ಅವರನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಇನ್ನೂ ಫೋಟೋದಲ್ಲಿ ಮರದ ರ್ಯಾಕ್‍ಗಳಲ್ಲಿ ಮ್ಯಾಗಿ ಪ್ಯಾಕೆಟ್‍ಗಳನ್ನು ಇಟ್ಟುಕೊಂಡು, ಸ್ವಲ್ಪ ಮ್ಯಾಗಿಯನ್ನು ಒಲೆ ಮೇಲೆ ಬಾಣಸಿಗ ಬೇಯಿಸುತ್ತಿರುವುದನ್ನು ಕಂಡು ಬಂದಿದೆ. ಈ ಫೋಟೋ ಟ್ವೀಟರ್ ನಲ್ಲಿ ವೈರಲ್ ಆಗುತ್ತಿದ್ದಂತೆಯೇ 1 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ಸ್ ಗಳು ಬಂದಿದೆ.

  • ಮದ್ವೆ ಮನೆಯಿಂದ 20 ಗ್ರಾಂ ಚಿನ್ನ, ನಗದು ಕಳವು

    ಮದ್ವೆ ಮನೆಯಿಂದ 20 ಗ್ರಾಂ ಚಿನ್ನ, ನಗದು ಕಳವು

    ಮಂಡ್ಯ: ಮದುವೆ ಸಂಭ್ರಮದಲ್ಲಿದ್ದ ವಧುವಿನ ಮನೆಯಲ್ಲಿ ಕಳ್ಳರು ಲಕ್ಷಾಂತರ ರೂ. ನಗದು ಹಾಗು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ನೀಲನಹಳ್ಳಿ ಗೇಟ್ ಬಳಿ ನಡೆದಿದೆ.

    ಲಕ್ಷ್ಮಿಸಾಗರ ಗ್ರಾಮದ ಸಣ್ಣ ಹನುಮೇಗೌಡ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಿಂದ 1 ಲಕ್ಷದ 20 ಸಾವಿರ ರೂ. ಹಾಗೂ 20 ಗ್ರಾಂ ಚಿನ್ನವನ್ನು ಖದೀಮರು ಕಳವು ಮಾಡಿದ್ದಾರೆ.

    ಮದುವೆ ಕಾರ್ಯಕೆಂದು ಹನುಮೇಗೌಡ ಹಾಗೂ ಅವರ ಕುಟುಂಬಸ್ಥರೆಲ್ಲಾ ಪಾಂಡವಪುರದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪಕ್ಕೆ ತೆರೆಳಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದ್ದನ್ನು ತಿಳಿದ ಕಳ್ಳರು ಶನಿವಾರ ರಾತ್ರಿ 9-10 ಗಂಟೆ ಸುಮಾರಿಗೆ ಮನೆಯನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.

    ಮನೆಯಿಂದ 1.20 ಸಾವಿರ ರೂ. ಹಾಗೂ 20 ಗ್ರಾಂ ಚಿನ್ನ ಕಳವಾಗಿದೆ ಎಂದು ಇದೀಗ ಹನುಮೇಗೌಡ ಪೊಲೀಸರಿಗೆ ದೂರು ನೀಡಿದ್ದಾರೆ.

    ಘಟನೆ ಕುರಿತು ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews