Tag: wedding day

  • ಮಂಟಪಕ್ಕೆ ಬರುತ್ತಿದ್ದ ವರನನ್ನು ನೋಡಿ ಕುಣಿದು ಕುಪ್ಪಳಿಸಿದ ವಧು

    ಮಂಟಪಕ್ಕೆ ಬರುತ್ತಿದ್ದ ವರನನ್ನು ನೋಡಿ ಕುಣಿದು ಕುಪ್ಪಳಿಸಿದ ವಧು

    ನವದೆಹಲಿ: ಮದುವೆ ಮಂಟಪಕ್ಕೆ ವರ ಬರುವುದನ್ನು ನೋಡಿದ ವಧು ಫುಲ್ ಜೋಶ್ ನಲ್ಲಿ ಕುಣಿದು ಕುಪ್ಪಳಿಸಿದ್ದಾಳೆ.

    ಮದುವೆ ಎಂದರೆ ಎಲ್ಲ ವಧು-ವರರಿಗೂ ವಿಶೇಷದ ಸಂಗತಿಯಾಗಿರುತ್ತೆ. ಮದುವೆ ದಿನ ಹತ್ತಿರವಾಗುತ್ತಿದಂತೆ ವಧು-ವರರ ಸಂಭ್ರಮ ಮನೆ ಮಾಡಿರುತ್ತೆ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಮನೆಗೆ ವರನ ದಿಬ್ಬಣ ಬರುತ್ತಿರುವುದನ್ನು ನೋಡಿ ವಧು ಸ್ಟೆಪ್ ಹಾಕಿರುವ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಇನ್‍ಸ್ಟಾಗ್ರಾಮ್ ನ ವಿಟ್ಟಿ_ವೆಡ್ಡಿಂಗ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ನೆಟ್ಟಿಗರು ವೀಡಿಯೋವನ್ನು ಫುಲ್ ಎಂಜಯ್ ಮಾಡುತ್ತಿದ್ದಾರೆ. ವೀಡಿಯೋದಲ್ಲಿ ಕೆಂಪು ಲೆಹೆಂಗಾವನ್ನು ಧರಿಸಿರುವ ವಧು ಕಿಟಕಿಯ ಬಳಿ ನಿಂತಿಕೊಂಡು ತನ್ನ ಭಾವಿ ಪತಿಗಾಗಿ ಕಾಯುತ್ತಿರುತ್ತಾಳೆ. ನಂತರ ಮದುವೆ ಮನೆಗೆ ವರನ ದಿಬ್ಬಣ ಬರುತ್ತಿದ್ದಂತೆ ಆತನನ್ನು ನೋಡುತ್ತಾ ವಧು ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ಅಂಥ ವರನು ಸಹ ಶೆರ್ವಾನಿ ಧರಿಸಿದ್ದು, ಕುದುರೆಯ ಮೇಲೆ ಕುಳಿತು ತನ್ನ ಭಾವಿ ಹೆಂಡತಿಯನ್ನು ಪ್ರೀತಿಯಿಂದ ನೋಡುತ್ತಾ ನೃತ್ಯ ಮಾಡುತ್ತಿರುತ್ತಾನೆ.

    ಈ ವೇಳೆ ಸೋನು ನಿಗಮ್ ಮತ್ತು ಅಲ್ಕಾ ಯಾಗ್ನಿಕ್ ಅವರು ಹಾಡಿದ ‘ಚಲ್ ಪ್ಯಾರ್ ಕರೇಗಿ’ ಸಾಂಗ್ ಪ್ಲೇ ಆಗುತ್ತಿದ್ದು, ನಂತರ ವಧು-ವರ ಒಬ್ಬರನೊಬ್ಬರು ನೋಡಿಕೊಂಡು ಕೊಟ್ಟ ರಿಯಾಕ್ಷನ್ ನೋಡಿ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ: ಕೊರಗರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ: ಸುನಿಲ್ ಕುಮಾರ್

    ಈ ವೀಡಿಯೋ ನೋಡಿದ ನೆಟ್ಟಿಗರು ತಮ್ಮ ಮದುವೆಯ ದಿನಗಳನ್ನು ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ವೀಡಿಯೋ ನೋಡಿದರೆ ಅವರಿಬ್ಬರು ಎಷ್ಟು ಪ್ರೀತಿಸುತ್ತಾರೆ ಎಂಬುದು ಅರ್ಥವಾಗುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿ ವೆಡ್ಡಿಂಗ್ ಡೇ ಆಚರಿಸಿಕೊಂಡ ದಂಪತಿ

    500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿ ವೆಡ್ಡಿಂಗ್ ಡೇ ಆಚರಿಸಿಕೊಂಡ ದಂಪತಿ

    ಭುವನೇಶ್ವರ್: ಸಾಮಾನ್ಯವಾಗಿ ವಿವಾಹ ಮಹೋತ್ಸವವನ್ನು ತಮ್ಮ ಹತ್ತಿರದ ಸಂಬಂಧಿಗಳಿಗೆ ಪಾರ್ಟಿಗಳನ್ನು ಆಯೋಜಿಸುವ ಮೂಲಕ ಸೆಲೆಬ್ರೆಟ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ದಂಪತಿ ಮಾತ್ರ ವಿವಾಹವಾದ ದಿನವನ್ನು 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡುವ ಮೂಲಕ ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

    ಹೌದು. ಒಡಿಶಾ ಮೂಲದ ಯುರೇಕಾ ಅಪ್ತಾ ಹಾಗೂ ಜೋವಾನ್ನಾ ವಾಂಗ್ ದಂಪತಿ ಇಂತಹ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸೆಪ್ಟೆಂಬರ್ 25ರಂದು ದಂಪತಿ ಭುವನೇಶ್ವರದಲ್ಲಿ ವಿವಾಹವಾಗಿದ್ದಾರೆ. ಇದೇ ದಿನದಂದು ಅವರು ಪ್ರಾಣಿ ಸಂರಕ್ಷಣಾ ಸಂಸ್ಥೆಯ ಸಹಾಯದಿಂದ ನಗರದ ಸುಮಾರು 500ಕ್ಕೂ ಹೆಚ್ಚು ಶ್ವಾನಗಳಿಗೆ ಆಹಾರ ನೀಡಿದ್ದಾರೆ.

    ಟ್ಯಾಂಗಿ ಬಳಿಯ ದೇವಸ್ಥಾನವೊಂದರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಾಣಿ ಸಂರಕ್ಷಣಾ ಸಂಸ್ಥೆ ಶ್ವಾನಗಳಿಗೆ ಆಹಾರ ನೀಡಿದೆ. ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡಗೆಯನ್ನು ನಿಡಬೇಕು ಎಂದು ಇಬ್ಬರೂ ತೀರ್ಮಾನ ಮಾಡಿದ್ದೆವು ಎಂದು ಜೋವಾನ್ನಾ ವಾಂಗ್ ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ನಾವು ಪ್ರಾಣಿ ಸಂರಕ್ಷಣಾ ಸಂಸ್ಥೆಯ(ಎಡಬ್ಲ್ಯೂಟಿಇ) ಸಂಸ್ಥಾಪಕಿ ಪೂರ್ವಿ ಅವರೊಂದಿಗೆ ಭುವನೇಶ್ವರದಾದ್ಯಂತ ಸುಮಾರು 500ಕ್ಕೂ ಹೆಚ್ಚು ಪ್ರಾಣಿಗಳಿಗೆ ಆಹಾರ ನೀಡಲು ನಿರ್ಧರಿಸಿದೆವು ಎಂದು ಹೇಳಿದರು.

    ಎಡಬ್ಲ್ಯೂಟಿಇನಿಂದ ಮಾಡಲ್ಪಟ್ಟ ಕೆಲಸದಿಂದ ಅವರು ಸ್ಫೂರ್ತಿ ಪಡೆದಿದ್ದಾರೆ. ಹೀಗಾಗಿ ದಂಪತಿ ತಮ್ಮ ಮದುವೆಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದರು. ಪ್ರತಿಯೊಬ್ಬರೂ ಆಪ್ತಾ ಮತ್ತು ವಾಂಗ್‍ನಂತೆಯೇ ಯೋಚಿಸಲು ಪ್ರಾರಂಭಿಸಿದರೆ, ಈ ಜಗತ್ತಿನಲ್ಲಿ ಒಂದು ಬದಲಾವಣೆ ಸಂಭವಿಸುತ್ತದೆ. ಅಲ್ಲದೆ ಅದು ಅನೇಕ ಪ್ರಾಣಿಗಳ ಜೀವ ಉಳಿಸುವಂತಹ ಕೆಲಸವಗುತ್ತದೆ ಎಂದು ಸ್ಥಳೀಯರು ಹೇಳಿದರು.