Tag: Wedding Ceremony

  • ರಂಭಾಪುರಿ ಶ್ರೀಗಳು ನನಗೂ, ನಮ್ಮ ಪಕ್ಷಕ್ಕೂ ಆಶೀರ್ವಾದ ಮಾಡಿದ್ದಾರೆ: ಸಿದ್ದರಾಮಯ್ಯ

    ರಂಭಾಪುರಿ ಶ್ರೀಗಳು ನನಗೂ, ನಮ್ಮ ಪಕ್ಷಕ್ಕೂ ಆಶೀರ್ವಾದ ಮಾಡಿದ್ದಾರೆ: ಸಿದ್ದರಾಮಯ್ಯ

    ರಾಯಚೂರು: ಇಲ್ಲಿಯವರೆಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಂಭಾಪುರಿ ಮಠಕ್ಕೆ ಯಾವತ್ತೂ ಕೂಡ ಬಂದಿಲ್ಲ. ಒಮ್ಮೆ ಭೇಟಿ ನೀಡಬೇಕೆಂದು ರಂಭಾಪುರಿ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವೇದಿಕೆ ಕಾರ್ಯಕ್ರಮದಲ್ಲಿ ಆಹ್ವಾನ ನೀಡಿದರು.

    ಜಿಲ್ಲೆಯ ದೇವದುರ್ಗದ ಗಬ್ಬೂರನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು, ರಂಭಾಪುರಿ ಶ್ರೀಗಳು ನನಗೂ ನಮ್ಮ ಪಕ್ಷಕ್ಕೂ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಅನಂತ ಅನಂತ ಧನ್ಯವಾದಗಳು ಅಂತ ಸಿದ್ದರಾಮಯ್ಯ ಭಾಷಣದಲ್ಲಿ ಮಾತನಾಡಿದ ಹಿನ್ನೆಲೆ ಅದಕ್ಕೆ ಪ್ರತಿಯಾಗಿ ಮಠಕ್ಕೆ ಬರುವಂತೆ ಶ್ರೀಗಳು ಆಹ್ವಾನ ನೀಡಿದರು.  ಇದನ್ನೂ ಓದಿ: ನವಜೋತ್‌ ಸಿಂಗ್‌ ಸಿಧುಗೆ 1 ವರ್ಷ ಜೈಲು ಶಿಕ್ಷೆ

    ಮದುವೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಮತ್ತು ನಾನು ಬಂದಿದ್ದು ಯೋಗ ಯೋಗ ಅಂತ ಶ್ರೀಗಳು ಹೇಳಿದರು. ವೇದಿಕೆ ಮೇಲೆ ಇದ್ದ ರಂಭಾಪುರಿ ಶ್ರೀಗಳ ಬಗ್ಗೆ ಸಿದ್ದರಾಮಯ್ಯ ಮಾತನಾಡಿ, ಶ್ರೀಗಳ ಆಶೀರ್ವಾದ ನಮಗೆ ಇದೆ ಎಂದರು. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

    ಇನ್ನೂ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಸಮಾಜದಲ್ಲಿ ನಡೆಯುತ್ತಿರುವ ಧರ್ಮ ಮತ್ತು ರಾಜಕೀಯ ಸಂಘರ್ಷಗಳು ಒಳ್ಳೆಯದಲ್ಲ. ಇದನ್ನ ಪ್ರತಿಯೊಬ್ಬ ಮನುಷ್ಯ ಅರ್ಥ ಮಾಡಿಕೊಳ್ಳಬೇಕು. ಪ್ರತಿಯೊಂದು ಧರ್ಮದವರು ಪ್ರೀತಿ ವಿಶ್ವಾಸದಿಂದ ಬಾಳಬೇಕು. ಸೌಹಾರ್ದತೆಯಿಂದ ಬಾಳಿ ಬದುಕಬೇಕು ಅನ್ನೋದು ರಂಭಾಪುರಿ ಪೀಠದ ಧ್ಯೇಯವಾಗಿದೆ ಅಂತ ರಂಭಾಪುರಿ ಶ್ರೀಗಳು ತಿಳಿಸಿದರು.

  • ಮದುವೆ ಮನೆಯಲ್ಲೇ ವಧು ನಿಗೂಢ ಸಾವು

    ಮದುವೆ ಮನೆಯಲ್ಲೇ ವಧು ನಿಗೂಢ ಸಾವು

    ಹೈದರಾಬಾದ್: ಮದುವೆ ಸಮಾರಂಭದ ವೇಳೆ ವಧು ಕುಸಿದು ಬಿದ್ದಿದ್ದು, ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.

    ವಿಶಾಖಪಟ್ಟಣಂನಲ್ಲಿರುವ ಮಧುರವಾಡದ ಫಂಕ್ಷನ್ ಹಾಲ್‍ನಲ್ಲಿ ಬುಧವಾರ ಸಂಜೆ ಮದುವೆ ಸಮಾರಂಭದ ವಿಧಿ, ವಿಧಾನಗಳು ನಡೆಯುತ್ತಿತ್ತು. ಈ ವೇಳೆ ವಧು ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಧು ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ರಾಜ್ ಠಾಕ್ರೆ ಬೊಗಳುವ ನಾಯಿ – ಪರೋಕ್ಷವಾಗಿ ಅಕ್ಬರುದ್ದೀನ್ ಟಾಂಗ್

    ಮೃತ ದುರ್ದೈವಿಯನ್ನು ಸೃಜನಾ ಎಂದು ಗುರುತಿಸಲಾಗಿದ್ದು, ಮೇಲ್ನೋಟಕ್ಕೆ ವಿಷ ಸೇವಿಸಿ ಸಾವನ್ನಪ್ಪಿರುವಂತೆ ಕಾಣಿಸುತ್ತದೆ. ಆದರೆ ಈ ಸಂಬಂಧ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ

  • ಮದುವೆ ಮನೆಯಲ್ಲಿ ಗುಂಡಿನ ದಾಳಿ – ಮಹಿಳೆಗೆ ಗಾಯ

    ಮದುವೆ ಮನೆಯಲ್ಲಿ ಗುಂಡಿನ ದಾಳಿ – ಮಹಿಳೆಗೆ ಗಾಯ

    ನವದೆಹಲಿ: ಮದುವೆ ಸಮಾರಂಭದಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ವೇಳೆ 54 ವರ್ಷದ ಮಹಿಳೆಯೊಬ್ಬರಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ದೆಹಲಿಯ ಛತ್ತರ್‍ಪುರ ಪ್ರದೇಶದಲ್ಲಿ ನಡೆದಿದೆ.

    ಘಟನೆಯಲ್ಲಿ ಗುಂಡಿನ ದಾಳಿಯಿಂದ ಗಾಯಗೊಂಡ ಮಹಿಳೆಯನ್ನು ವಸಂತ್ ಕುಂಜ್‍ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಸಂಬಂಧ ಹೇಳಿಕೆ ಪಡೆಯಲು ಮಹಿಳೆ ಆರೋಗ್ಯ ಸ್ಥಿತಿ ಸರಿಯಾಗಿಲ್ಲದ ಕಾರಣ ಘಟನೆ ವಿಚಾರವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಊಟ ನಿರಾಕರಣೆ, ಎಸಿ ಇಲ್ದೆ ನಿದ್ರೆ ಇಲ್ಲ – PSI ಅಕ್ರಮದಲ್ಲಿ ಅರೆಸ್ಟ್ ಆದ ದಿವ್ಯಾ ಹಾಗರಗಿ ಹೈಡ್ರಾಮಾ

    MARRIAGE

    ಛತ್ತರ್‍ಪುರ ದೇವಾಲಯದ ಮಾತಂಗಿ ಭವನದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಹರಿಯಾಣದ ಬಹದ್ದೂರ್‍ಗಢದಿಂದ ಮದುವೆ ಸಮಾರಂಭಕ್ಕೆ ಬಂದಿದ್ದವರ ಗುಂಪಿನಲ್ಲಿ ಮಹಿಳೆ ಕೂಡ ಒಬ್ಬರಾಗಿದ್ದಾರೆ ಎಂದು ಪೊಲೀಸ್ ಉಪ ಕಮಿಷನರ್ (ದಕ್ಷಿಣ) ಬೆನಿಟಾ ಮೇರಿ ಜೈಕರ್ ಹೇಳಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಭೇಟಿಯಾದ ಶರದ್ ಪವಾರ್

    ಇದೀಗ ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 307 (ಕೊಲೆಗೆ ಯತ್ನ) ಅಡಿಯಲ್ಲಿ ಪ್ರಕರಣವನ್ನು ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

  • ಮದುವೆಯಲ್ಲಿ ತಂಬಾಕು ಸೇವಿಸುತ್ತಿದ್ದ ವರನಿಗೆ ವಧುವಿನಿಂದ ಕಪಾಳಮೋಕ್ಷ

    ಮದುವೆಯಲ್ಲಿ ತಂಬಾಕು ಸೇವಿಸುತ್ತಿದ್ದ ವರನಿಗೆ ವಧುವಿನಿಂದ ಕಪಾಳಮೋಕ್ಷ

    ವಿವಾಹ ಸಮಯದಲ್ಲಿ ತಂಬಾಕು ಸೇವಿಸುತ್ತಿದ್ದ ವರನಿಗೆ ವಧು ಎಲ್ಲರ ಮುಂದೆ ಕಪಾಳ ಮೋಕ್ಷ ಮಾಡಿರುವ ವೀಡಿಯೋವೊಂದು ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    bride

    ಪ್ರಸ್ತುತ ಮದುವೆ ಸೀಸನ್ ಆಗಿರುವುದರಿಂದ ಹಲವಾರು ಮದುವೆಯ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದೆ. ಮದುವೆ ಸಮಾರಂಭದ ವೇಳೆ ನಡೆಯುವ ಹಲವಾರು ಹಾಸ್ಯಮಯ ಮತ್ತು ಇಂಟ್ರೆಸ್ಟಿಂಗ್ ದೃಶ್ಯಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಸದ್ಯ ವಿವಾಹ ನಡೆಯುತ್ತಿದ್ದ ವೇಳೆ ತಂಬಾಕು ಸೇವಿಸುತ್ತಿದ್ದ ವರನಿಗೆ ವಧು ಹೊಡೆದು ತಂಬಾಕನ್ನು ಉಗುಳಿಸಿದ್ದಾರೆ. ಇದನ್ನೂ ಓದಿ:ಜನರ ಮರ್ಯಾದೆಯನ್ನೆ ಬಂಡವಾಳ ಮಾಡಿಕೊಂಡಿದ್ದ ಗ್ಯಾಂಗ್ ರೇಪ್ ಕಿರಾತಕರು

    ಈ ವೀಡಿಯೋವನ್ನು ನಿರಂಜನ್ ಮಹಾಪಾತ್ರಾ ಎಂಬವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಮಂಟಪದಲ್ಲಿ ವಧು, ವರ ಇಬ್ಬರು ಕುಳಿತುಕೊಂಡಿರುತ್ತಾರೆ. ಈ ವೇಳೆ ವಧು ಪಂಡಿತರನ್ನು ಏನೋ ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಪಂಡಿತರು ಉತ್ತರಿಸಿದಾಗ ಆತನಿಗೆ ಹೊಡೆಯುತ್ತಾರೆ. ಬಳಿಕ ಕೋಪದಿಂದ ಪಕ್ಕಕ್ಕೆ ತಿರುಗಿ ನೋಡಿದಾಗ ವರ ತಂಬಾಕು ಅಗಿಯುತ್ತಿರುವುದನ್ನು ಕಂಡು ವರನ ಕಪಾಳಕ್ಕೆ ಹೊಡೆದು ಅದನ್ನು ಉಗುಳಲು ಹೇಳುತ್ತಾರೆ. ಕೂಡಲೇ ಗಾಬರಿಯಿಂದ ವರ ತಂಬಾಕನ್ನು ಉಗುಳಿ ಮತ್ತೆ ವಧುವಿನ ಪಕ್ಕಕ್ಕೆ ಬಂದು ಭಯದಿಂದ ಕುಳಿತುಕೊಳ್ಳುತ್ತಾನೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದ್ದು, ನೋಡುಗರಿಗೆ ಸಖತ್ ನಗು ತರಿಸುತ್ತಿದೆ. ಇದನ್ನೂ ಓದಿ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆ.1 ರಿಂದ ದ್ವಿತೀಯ ಪಿಯುಸಿ ಆರಂಭಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್

  • ಮದುವೆ ವೇಳೆ ವಧುವಿಗೆ ಯಾವ ಮೆಹಂದಿ ಡಿಸೈನ್ ಸೂಟ್ ಆಗುತ್ತೆ ಗೊತ್ತಾ?

    ಮದುವೆ ವೇಳೆ ವಧುವಿಗೆ ಯಾವ ಮೆಹಂದಿ ಡಿಸೈನ್ ಸೂಟ್ ಆಗುತ್ತೆ ಗೊತ್ತಾ?

    ಮದುವೆ ಸಮಾರಂಭ ಅಂದರೆ ಸಾಕು. ಹೆಣ್ಣು ಮಕ್ಕಳಿಗೆ ಮೆಹಂದಿ ಇರಲೇ ಬೇಕು. ಚಿಕ್ಕ-ಮಕ್ಕಳಿಂದ ದೊಡ್ಡವರವರೆಗೂ ಮೆಹಂದಿ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಮದುವೆ ಸಮಾರಂಭಗಳಲ್ಲಂತೂ ಮದುಮಗಳು ಮೆಹಂದಿ ಹಾಕದೇ ಇದ್ದರೆ ಮದುವೆ ಕಂಪ್ಲೀಟ್ ಆಗಿದೆ ಎಂದು ಎನಿಸುವುದೇ ಇಲ್ಲ. ನಿಜವಾಗಿ ಹೇಳಬೇಕೆಂದರೆ ವಧುವಿನ ಮಹೆಂದಿ ಭಾರತ ಹಳೆಯ ಸಂಸ್ಕøತಿ ಮತ್ತು ಸಾಂಪ್ರದಾಯವನ್ನು ಸೂಚಿಸುತ್ತದೆ.

    ಮದುವೆ ಸಮಾರಂಭಗಳಲ್ಲಿ ವಧುವಿನ ಎರಡು ಕೈಗಳು ಮತ್ತಷ್ಟು ಸುಂದರ ಹಾಗೂ ಆಕರ್ಷಕವಾಗಿ ಎದ್ದು ಕಾಣಿಸಲು ಮೆಹಂದಿಯನ್ನು ಬಳಸಲಾಗುತ್ತದೆ. ಅಲ್ಲದೆ ಮದುವೆ ಸಂದರ್ಭದಲ್ಲಿ ವಧುವಿಗಷ್ಟೇ ಅಲ್ಲದೆ ವರನಿಗೂ ಮೆಹಂದಿ ಹಚ್ಚಲಾಗುತ್ತದೆ. ಹಿಂದಿನಿಂದಲೂ ಮದುವೆಯ ಎಲ್ಲ ಶಾಸ್ತ್ರಗಳಲ್ಲಿ ಮೆಹಂದಿ ಶಾಸ್ತ್ರ ಕೂಡ ಒಂದಾಗಿದೆ. ಮದುವೆ ಸಮಯದಲ್ಲಿ ವಧು-ವರನ ಕುಟುಂಬದವರು ಮೆಹಂದಿ ಶಾಸ್ತ್ರವನ್ನು ಆಯೋಜಿಸಿ ಮೆಹಂದಿ ಹಾಕಿಸಿಕೊಳ್ಳುವ ಹಳೆಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.

    ಕೆಲವರು ಮೆಹಂದಿ ಹಾಕಿಸಿಕೊಂಡ ಬಳಿಕ ಅದು ಅತಿಯಾದ ಬಣ್ಣ ನೀಡಿದರೆ ತಮ್ಮ ಜೀವನ ಸಂಗಾತಿ ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ನಿಮ್ಮ ದೇಹದಲ್ಲಿ ಉಷ್ಣಾಂಶ ಅಧಿಕವಾಗಿದ್ದರೆ ಮೆಹಂದಿ ಹೆಚ್ಚು ಬಣ್ಣ ಕೊಡುತ್ತದೆ ಎಂದು ಕೂಡ ಹೇಳುತ್ತಾರೆ. ಇಷ್ಟೆಲ್ಲಾ ಗಾಢವಾದ ಪ್ರಾಮುಖ್ಯತೆ ಇರುವ ಮೆಹಂದಿ ಬಗ್ಗೆ ತಿಳಿದಿದ್ದು, ಸಮಾರಂಭಗಳಲ್ಲಿ ಯಾವ ಮೆಹಂದಿ ಡಿಸೈನ್ಸ್ ಹಾಕಿಕೊಳ್ಳಬೇಕೆಂದು ತಿಳಿಯದೇ ಇರುವವರಿಗೆ ಒಂದಷ್ಟು ಮೆಹಂದಿ ಡಿಸೈನ್ಸ್ ಈ ಕೆಳಗಿನಂತಿವೆ.

    ನವಿಲು ಡಿಸೈನ್ಸ್
    ಈ ಸುಂದರವಾದ ಮೆಹಂದಿ ಡಿಸೈನ್‍ನಲ್ಲಿ ಕೈನ ಮೇಲಿನ ತುದಿಯಲ್ಲಿ ಎರಡು ನವಿಲುಗಳು ಅದಲು-ಬದಲಾಗಿ ತಲೆ ಬಾಗಿಸಿಕೊಂಡಿದ್ದು, ಕೈನ ಮಧ್ಯದಲ್ಲಿ ವಧು-ವರನನ್ನು ಮಂಟಪಕ್ಕೆ ಕರೆದೊಯ್ಯಲಾಗುತ್ತಿರುವಂತೆ ಚಿತ್ರ ಬಿಡಿಸಲಾಗಿದೆ. ಜೊತೆಗೆ ವಧು-ವರ ಇಬ್ಬರು ಹಾರ ಬದಲಿಸಿಕೊಳ್ಳುವಂತಿದ್ದು ಒಂದು ಸುಂದರ ಮದುವೆ ಕಥೆ ಹೇಳುವಂತೆ ತೋರುತ್ತದೆ.

    ಮಿಕ್ಕಿ ಮೌಸ್ ಡಿಸೈನ್
    ಈ ಮೆಹಂದಿ ಡಿಸೈನ್‍ನಲ್ಲಿ ವಧು ಬಹಳ ಸಿಂಪಲ್ ಹಾಗೂ ಡಿಫರೆಂಟ್ ಆಗಿರುವ ಮಿಕ್ಕಿಮೌಸ್‍ನ ಚಿತ್ರವನ್ನು ಕೈ ಮೇಲೆ ಬರೆಸಿಕೊಂಡಿದ್ದಾರೆ. ಈ ಡಿಸೈನ್ ಒಂದು ರೀತಿ ಮಹಿಳೆಯರಿಗೆ ಯುನಿಕ್ ಲುಕ್ ನೀಡುತ್ತದೆ.

    ಹೂವಿನ ರಾಶಿ ಡಿಸೈನ್
    ಇದೊಂದು ಯುನಿಕ್ ಮೆಹಂದಿ ಡಿಸೈನ್ ಆಗಿದ್ದು, ಹಲವಾರು ಮೆಹಂದಿ ಡಿಸೈನ್‍ಗಳ ಮಧ್ಯೆ ಒನ್ ಆಫ್ ದಿ ಬೆಸ್ಟ್ ಡಿಸೈನ್ ಎಂದೇ ಹೇಳಬಹುದು. ಕೈ ತುಂಬಾ ಹೂವಿನ ರಾಶಿಗಳಿಂದ ತುಂಬಿಕೊಂಡಿರುವ ಈ ಡಿಸೈನ್ ನೋಡಲು ಅತ್ಯಂತ ಆಕರ್ಷಕವಾಗಿದ್ದು, ಬಹಳ ಸುಂದರವಾಗಿ ಕಾಣಿಸುತ್ತದೆ.

    ವಧು-ವರ ಡಿಸೈನ್
    ವಧು ವರನ ಚಿತ್ರ ಹೊಂದಿರುವ ಈ ಮೆಹಂದಿ ಕಲಾ ವಿನ್ಯಾಸದಲ್ಲಿ, ನವಿಲು, ಕಮಲ, ಹೂಗಳಿದೆ ಹಾಗೂ ಇವೆಲ್ಲವೂ ವಧು-ವರರನ್ನು ಮದುವೆಗೆ ಸ್ವಾಗತ ಕೋರುವ ರೀತಿಯಲ್ಲಿದ್ದು, ಈ ಡಿಸೈನ್ ನೋಡಲು ಎರಡು ಕಣ್ಣುಗಳು ಸಾಲದು ಎಂದು ಹೇಳಿದರೆ ತಪ್ಪಾಗಲಾರದು.

    ರಾಧಾ-ಕೃಷ್ಣ ಡಿಸೈನ್
    ಒಂದು ಕೈನಲ್ಲಿ ರಾಧಾ-ಕೃಷ್ಣನೊಂದಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದು, ಕೃಷ್ಣನ ಜೊತೆ ರಾಧೆ ಕೊಳಲನ್ನು ಹಿಡಿದುಕೊಂಡಿರುವಂತೆ ಚಿತ್ರವನ್ನು ಬಿಡಿಸಲಾಗಿದೆ. ಮತ್ತೊಂದು ಕೈ ಮೇಲೆ ದೇವಾಲಯ, ಮಕ್ಕಳು, ಓಂ, ಸ್ವಸ್ತಿಕ್ ಚಿತ್ರದ ಜೊತೆ ದಿನಾಂಕ, ವರ್ಷವನ್ನು ಬರೆಯಲಾಗಿದೆ.

  • ವಿವಾಹ ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ಎಳೆದಾಟ- ಮದುವೆ ಕ್ಯಾನ್ಸಲ್ ಮಾಡಿದ ವಧು

    ವಿವಾಹ ಸಮಾರಂಭದಲ್ಲಿ ಡ್ಯಾನ್ಸ್ ಮಾಡಲು ಎಳೆದಾಟ- ಮದುವೆ ಕ್ಯಾನ್ಸಲ್ ಮಾಡಿದ ವಧು

    ಲಕ್ನೋ: ವಿವಾಹ ಸಮಾರಂಭದ ವೇಳೆ ಡ್ಯಾನ್ಸ್ ಮಾಡಲು ವಧುವನ್ನು ಎಳೆದಾಡಿದ್ದಕ್ಕೆ ಗಲಾಟೆಯಾಗಿದ್ದು, ಸಿಟ್ಟಿಗೆದ್ದ ಯುವತಿ ವಿವಾಹವನ್ನೇ ಕ್ಯಾನ್ಸಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

    ಉತ್ತರ ಪ್ರದೇಶದ ಬರೇಲಿ ಬಳಿ ಘಟನೆ ನಡೆದಿದ್ದು, ಅದ್ಧೂರಿಯಾಗಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ವರನ ಕೆಲಸ ಸ್ನೇಹಿತರು ಡ್ಯಾನ್ಸ್ ಮಾಡುವಂತೆ ವಧುವನ್ನು ಎಳೆದಿದ್ದಕ್ಕೆ ಯುವತಿ ಕೋಪಗೊಂಡಿದ್ದಾಳೆ ಈ ವೇಳೆ ವಧು ಹಾಗೂ ವರರ ಸಂಬಂಧಿಕರ ಮಧ್ಯೆ ಗಲಾಟೆ ಉಂಟಾಗಿದ್ದು, ಮದುವೆ ಕ್ಯಾನ್ಸಲ್ ಮಾಡುವ ಹಂತವನ್ನು ತಲುಪಿದೆ.

    ಶುಕ್ರವಾರ ವಧು ಹಾಗೂ ಆಕೆಯ ಕುಟುಂಸ್ಥರು ಅದ್ಧೂರಿ ವಿವಾಹ ಸಮಾರಂಭಕ್ಕೆ ಆಗಮಿಸಿದ್ದಾರೆ. ವಧು-ವರ ಇಬ್ಬರೂ ಪದವಿಧರರಾಗಿದ್ದು, ಕಣ್ಣುಜ್ ಹಾಗೂ ಬರೇಲಿಯವರು. ವಿವಾಹ ಸಮಾರಂಭ ಅದ್ಧೂರಿಯಾಗಿ ಹಾಗೂ ಸರಾಗವಾಗಿಯೇ ನಡೆದಿತ್ತು. ಆದರೆ ವರನ ಕೆಲಸ ಸ್ನೇಹಿತರು ಡ್ಯಾನ್ಸ್ ಮಾಡುವಂತೆ ವಧುವನ್ನು ಎಳೆದಿದ್ದಾರೆ. ಬಳಿಕ ಎರಡೂ ಕಡೆಯವರ ಮಧ್ಯೆ ವಾಗ್ವಾದ ನಡೆದಿದೆ.

    ವಾಗ್ವಾದ ತಾರಕಕ್ಕೇರಿದ್ದರಿಂದ ವಿವಾಹವನ್ನು ಕ್ಯಾನ್ಸಲ್ ಮಾಡಲಾಗಿದೆ. ಅಲ್ಲದೆ ವಧು ಮರಳಿ ಮನೆಗೆ ತೆರಳಿದ್ದಾರೆ. ಬಳಿಕ ವಧುವಿನ ಕುಟುಂಬದ್ಥರು ವರನ ಕುಟುಂಬದವರ ವಿರುದ್ಧ ವರದಕ್ಷಿಣೆ ದೂರು ದಾಖಲಿಸಿದ್ದಾರೆ. ಬಳಿಕ ಎರಡೂ ಕಡೆಯವರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ನಿರ್ಧರಿಸಿದ್ದು, ಬಳಿಕ ವರನ ಕುಟುಂಬದ್ಥರು 6.5 ಲಕ್ಷ ನೀಡಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಎಫ್‍ಐಆರ್ ದಾಖಲಾಗದ್ದರಿಂದ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದಾರೆ.

    ಭಾನುವಾರ ವರನ ಕುಟುಂಬಸ್ಥರು ವಧುವಿನ ಕುಟುಂಬದವರನ್ನು ಮನವೊಲಿಸಲು ಯತ್ನಿಸಿದ್ದು, ಮತ್ತೆ ಸರಳ ವಿವಾಹವನ್ನು ಏರ್ಪಡಿಸುವಂತೆ ಮನವಿ ಮಾಡಿದ್ದಾರೆ. ಆದರೆ ವಧು ಇದಕ್ಕೆ ಒಪ್ಪಿಲ್ಲ. ದುರ್ವರ್ತನೆ ತೋರಿದ್ದಾರೆ ಹೀಗಾಗಿ ನಾನು ವಿವಾಹವಾಗಲ್ಲ ಎಂದಿದ್ದಾಳೆ.