Tag: Wedding card

  • ವಾಟ್ಸಪ್‌ನಲ್ಲಿ ಬಂತು ಮದುವೆ ಕಾರ್ಡ್ – ಕ್ಲಿಕ್ ಮಾಡ್ತಿದ್ದಂಗೆ 2 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ

    ವಾಟ್ಸಪ್‌ನಲ್ಲಿ ಬಂತು ಮದುವೆ ಕಾರ್ಡ್ – ಕ್ಲಿಕ್ ಮಾಡ್ತಿದ್ದಂಗೆ 2 ಲಕ್ಷ ರೂ. ಕಳೆದುಕೊಂಡ ಸರ್ಕಾರಿ ನೌಕರ

    ಮುಂಬೈ: ವಾಟ್ಸಪ್‌ಲ್ಲಿ ವೆಡ್ಡಿಂಗ್ ಕಾರ್ಡ್ (Wedding Card) ಬಂದ ತಕ್ಷಣ ಕ್ಲಿಕ್ ಮಾಡೋಕು ಮುನ್ನ ಎಚ್ಚರವಿರಲಿ. ಹೌದು, ಸರ್ಕಾರಿ ನೌಕರರೊಬ್ಬರು ವಾಟ್ಸಪ್‌ನಲ್ಲಿ (Whatsapp) ಬಂದಿದ್ದ ವೆಡ್ಡಿಂಗ್ ಕಾರ್ಡ್‌ನ್ನು ಕ್ಲಿಕ್ ಮಾಡಿ ಸುಮಾರು 1.90 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದ (Maharashtra) ಹಿಂಗೋಲಿ (Hingoli) ಜಿಲ್ಲೆಯಲ್ಲಿ ನಡೆದಿದೆ.

    ಸೈಬರ್ ವಂಚನೆಗೊಳಗಾದ ವ್ಯಕ್ತಿಗೆ ಆ.20ರಂದು ವಾಟ್ಸಪ್‌ನಲ್ಲಿ ಅಪರಿಚಿತ ನಂಬರ್‌ನಿಂದ ಮೆಸೇಜ್ ಬಂದಿತ್ತು. ಸಂದೇಶದಲ್ಲಿ 30/08/2025ರಂದು ಮದುವೆಗೆ ತಪ್ಪದೇ ಬರಬೇಕು. ಪ್ರೀತಿಯು ಸಂತೋಷದ ದ್ವಾರವನ್ನು ತೆರೆಯುವ ಕೀಲಿ ಕೈಯಾಗಿದೆ ಎಂದು ಬರೆದಿದ್ದರು. ಜೊತೆಗೆ ಪಿಡಿಎಫ್ ಫೈಲ್‌ವೊಂದನ್ನು ಕಳುಹಿಸಿದ್ದರು.ಇದನ್ನೂ ಓದಿ: ಬಾಘಿ-4 ಟ್ರೈಲರ್‌ಗೆ ಮುಹೂರ್ತ ಫಿಕ್ಸ್

    ಪಿಡಿಎಫ್ ಫೈಲ್‌ನ್ನು ಓಪನ್ ಮಾಡಿದ ತಕ್ಷಣವೇ ಸೈಬರ್ ವಂಚಕರು ವ್ಯಕ್ತಿಯ ಬ್ಯಾಂಕ್ ಖಾತೆಯಿಂದ 1,90,000 ರೂ.ಯನ್ನು ವರ್ಗಾಯಿಸಿಕೊಂಡಿದ್ದಾರೆ. ಸದ್ಯ ಈ ಕುರಿತು ವಂಚನೆಗೊಳಗಾದ ವ್ಯಕ್ತಿ ಹಿಂಗೋಲಿ ಪೊಲೀಸ್ ಠಾಣೆ ಮತ್ತು ಸೈಬರ್ ಸೆಲ್ ಇಲಾಖೆಯಲ್ಲಿ ದೂರು ದಾಖಲಿಸಿದ್ದು, ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.

    ಸೈಬರ್ ವಂಚಕರು ವ್ಯಕ್ತಿಯ ಫೋನ್ ಹ್ಯಾಕ್ ಮಾಡಲು ಮತ್ತು ಮೊಬೈಲ್‌ನಲ್ಲಿನ ಡೇಟಾ ಕದಿಯಲು ಅಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ (APK) ಫೈಲ್ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

    ಈ ರೀತಿ ಬಂದ ಎಪಿಕೆ ಫೈಲ್ಸ್‌ನ್ನು ಒಮ್ಮೆ ಕ್ಲಿಕ್ ಮಾಡಿದರೆ ಮೊಬೈಲ್‌ನಲ್ಲಿ ಕೆಲವು ಫೈಲ್‌ಗಳು ಡೌನ್‌ಲೋಡ್ ಆಗುತ್ತವೆ. ಈ ಮೂಲಕ ಸೈಬರ್ ವಂಚಕರು ಮೊಬೈಲ್‌ನಲ್ಲಿನ ಎಲ್ಲಾ ಆಕ್ಟಿವಿಟಿಯನ್ನು ವೀಕ್ಷಣೆ ಮಾಡಬಹುದು. ಜೊತೆಗೆ ಫೋನ್ ಹ್ಯಾಕ್ ಮಾಡಿ, ಬೇರೆಯವರನ್ನು ವಂಚಿಸಬಹುದಾಗಿದೆ.

    ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಸೈಬರ್ ಪೊಲೀಸರು ಪರಿಚಯವಿಲ್ಲದ ಮೂಲಗಳಿಂದ ಬಂದ ಫೈಲ್‌ಗಳನ್ನು ಡೌನ್‌ಲೋಡ್ ಮಾಡದಂತೆ ಸಾರ್ವಜನರಿಗೆ ಸಲಹೆ ನೀಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.ಇದನ್ನೂ ಓದಿ: ಬೇಜವಾಬ್ದಾರಿ ಎಪಿಎಂಸಿ ಅಧಿಕಾರಿಗಳ ಅಮಾನತ್ತಿಗೆ ಸಚಿವ ಶಿವಾನಂದ ಪಾಟೀಲ್ ನಿರ್ದೇಶನ

  • ಕೈ ಬರಹದಲ್ಲಿ ಮಳೆ ಹುಡುಗಿಯ ಮದುವೆ ಕಾರ್ಡ್: ಮೆಚ್ಚಿದ ಕರುನಾಡು

    ಕೈ ಬರಹದಲ್ಲಿ ಮಳೆ ಹುಡುಗಿಯ ಮದುವೆ ಕಾರ್ಡ್: ಮೆಚ್ಚಿದ ಕರುನಾಡು

    ಸೆಲೆಬ್ರಿಟಿಗಳ ಮದುವೆ ಕಾರ್ಡಿಗೆ ಲಕ್ಷ ಲಕ್ಷ ಖರ್ಚು ಮಾಡುವವರನ್ನು ನೋಡಿದ್ದೇವೆ. ದುಬಾರಿ ಮದುವೆ ಕಾರ್ಡ್ ಹಂಚಿದವರೂ ನಮ್ಮ ನಡುವೆ ಇದ್ದಾರೆ. ಆದರೆ, ಎಲ್ಲರಿಗೂ ಮಾದರಿ ಆಗುವಂತಹ ಕೆಲಸ ಮಾಡಿದ್ದಾರೆ ಮಳೆ ಹುಡುಗಿ ಖ್ಯಾತಿಯ ನಟಿ ಪೂಜಾ ಗಾಂಧಿ (Pooja Gandhi). ಸ್ವತಃ ತಮ್ಮದೇ ಕೈ ಬರಹದಲ್ಲಿ ಮದುವೆ ಕಾರ್ಡ್ ಸಿದ್ಧ ಪಡಿಸಿ, ಅದನ್ನೇ ಎಲ್ಲರಿಗೂ ಕಳುಹಿಸಿ ಕೊಟ್ಟಿದ್ದಾರೆ.

    ಮೂಲತಃ ಉತ್ತರ ಪ್ರದೇಶದವರಾದ ಪೂಜಾ ಗಾಂಧಿ, ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಬಂದವರು. ಕನ್ನಡವೇ ಬಾರದ ಪೂಜಾ ಇದೀಗ ಸ್ವಚ್ಛ ಕನ್ನಡದಲ್ಲಿ ಮಾತನಾಡುತ್ತಾರೆ. ವಚನಗಳನ್ನು ಪಟಪಟ ಹೇಳುತ್ತಾರೆ. ತಮ್ಮದೇ ಕೈ ಬರಹದಲ್ಲಿ ಕನ್ನಡದ ಮದುವೆ ಆಮಂತ್ರಣ ಪತ್ರಿಕೆಯನ್ನು (Wedding Card) ಸಿದ್ಧ ಮಾಡಿದ್ದಾರೆ. ಈ ನಡೆಗೆ ಕನ್ನಡಿಗರಿ ಮೆಚ್ಚಿದ್ದಾರೆ. ಆ ಪತ್ರಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

    ನಾಳೆ ಮದುವೆ

    ಈ ಹಿಂದೆ ನಿಶ್ಚಾತಾರ್ಥ ಮುರಿದು ಬಿದ್ದ ಕಾರಣದಿಂದಾಗಿ ಮದುವೆಯನ್ನೇ ಮರೆತಿದ್ದ ಪೂಜಾ ಗಾಂಧಿ, ಇದೀಗ ಎಲ್ಲ ಕಹಿ ಘಟನೆಗಳನ್ನು ಮರೆತು ಮತ್ತೆ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದಿಂದಲೂ ದೂರವಿರುವ ಪೂಜಾ, ಕನ್ನಡ ಕಲಿಕೆಯ ಕಾರಣದಿಂದಾಗಿ ಸಖತ್ ಸುದ್ದಿಯಾಗಿದ್ದರು. ಇದೀಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಗೆ ಬಂದಿದ್ದಾರೆ.

    ಮಳೆ ಹುಡುಗಿ ಎಂದೇ ಖ್ಯಾತಿಯ ಆಗಿರುವ ಪೂಜಾ ಗಾಂಧಿ ನಾಳೆ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅವರ ಆಪ್ತರು ಹೇಳುವಂತೆ ನಾಳೆ ಉದ್ಯಮಿ ಜೊತೆ ಅವರು ಮಂತ್ರ ಮಾಂಗಲ್ಯ ಮಾದರಿಯಲ್ಲಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿತ್ತು. ಅದೀಗ ಎಲ್ಲವೂ ನಿಜವಾಗಿದೆ. ಸ್ವತಃ ಪೂಜಾ ಗಾಂಧಿಯವರೆ ಮಾಧ್ಯಮಗಳಿಗೆ ತಮ್ಮ ಮದುವೆ ಕುರಿತಾಗಿ ಪತ್ರ ಬರೆದಿದ್ದಾರೆ.

    ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ ನಡೆಯುತ್ತಿದ್ದು, ಉದ್ಯಮಿ ಹಾಗೂ ಅವರಿಗೆ ಕನ್ನಡ ಕಲಿಸಿರುವ ವಿಜಯ್ ಘೋರ್ಪಡೆ (Vijay Ghorpade) ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು ಎಂದು ಹೇಳಲಾಗುತ್ತಿದೆ.

     

    ಈಗಾಗಲೇ ಪೂಜಾ ತಮ್ಮ ಆಪ್ತರಿಗೆ ಕರೆ ಮಾಡಿ, ಮದುವೆ ಆ‍ಹ್ವಾನ ನೀಡಿದ್ದಾರೆ. ಮದುವೆ ಅತ್ಯಂತ ಸರಳವಾಗಿ ನಡೆಯುವುದರಿಂದ ಕೇವಲ ಹಸ್ತಾಕ್ಷರದಲ್ಲಿ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಿ, ಆಪ್ತರಿಗೆ ಕಳುಹಿಸಿದ್ದಾರೆ. ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಾಗಿ ಈ ಹುಡುಗಿ ಇದೀಗ ಕನ್ನಡದವರೇ ಆಗಿದ್ದಾರೆ.

  • ಷೇರು ಮಾರ್ಕೆಟ್ ಭಾಷೆಯಲ್ಲಿ ಆಮಂತ್ರಣ ಕಾರ್ಡ್ ಮಾಡಿಸಿದ ಜೋಡಿಗಳು – ಸ್ನೇಹಿತರನ್ನು ಚಿಲ್ಲರೆ ಹೂಡಿಕೆದಾರರು ಎಂದ್ರು

    ಷೇರು ಮಾರ್ಕೆಟ್ ಭಾಷೆಯಲ್ಲಿ ಆಮಂತ್ರಣ ಕಾರ್ಡ್ ಮಾಡಿಸಿದ ಜೋಡಿಗಳು – ಸ್ನೇಹಿತರನ್ನು ಚಿಲ್ಲರೆ ಹೂಡಿಕೆದಾರರು ಎಂದ್ರು

    ಮುಂಬೈ: ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಯು ತಮ್ಮ ಮದುವೆಯ ಪ್ರತಿಯೊಂದು ಸಿದ್ಧತೆಯ ಬಗ್ಗೆ ಅನೇಕ ಕನಸನ್ನು ಕಟ್ಟಿಕೊಂಡಿರುತ್ತಾರೆ. ಅದಕ್ಕೆ ಆಮಂತ್ರಣ ಪತ್ರಿಕೆಯೂ ಹೊರತಲ್ಲ. ಆಮಂತ್ರಣ ಪತ್ರಿಕೆಯನ್ನು (Wedding Card) ಕೆಲವರು ಗ್ರ್ಯಾಂಡ್ ಆಗಿ ಮಾಡಿಸುವುದು ಇತ್ತೀಚಿನ ದಿನಗಳಲ್ಲಿ ಕಾಮನ್. ಆದರೆ ಮಹಾರಾಷ್ಟ್ರದ ಜೋಡಿ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ಟಾಕ್ ಮಾರ್ಕೆಟ್ (Stock Market) ಪರಿಭಾಷೆಯಲ್ಲಿ ಮಾಡಿಸಿದ್ದಾರೆ.

    ಮಹಾರಾಷ್ಟ್ರದ (Maharashtra) ನಾಂದೇಡ್‍ನ ಜೋಡಿಗಳು ಉದ್ಯೋಗದಲ್ಲಿ ವೈದ್ಯರಾಗಿದ್ದರು(Doctor), ಷೇರು ಮಾರುಕಟ್ಟೆಯಿಂದ ಪ್ರೇರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯ ಪರಿಭಾಷೆಯಲ್ಲೇ ತಮ್ಮ ಮದುವೆ ಕಾರ್ಡ್‍ನ್ನು ಮಾಡಿಸಿದ್ದಾರೆ. ಈ ಕಾರ್ಡಿನ ವಿಶೇಷವೆಂದರೆ ಆಮಂತ್ರಣದಲ್ಲಿ ಬರುವ ಪ್ರತಿ ಶಬ್ದವನ್ನು ಷೇರು ಮಾರುಕಟ್ಟೆಗೆ ಸಂಬಂಧಿಸಿ ತಯಾರಿಸಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದಾರೆ.

    ಆಮಂತ್ರಣ ಕಾರ್ಡ್‍ನಲ್ಲಿ ಏನಿದೆ?: ವರನನ್ನು ಡಾ. ಸಂದೇಶ್ ಮೆಡಿಸಿನ್ ಲಿಮಿಟೆಡ್ ಎಂದು ಪರಿಚಯಿಸಿದ್ದರೆ ಮತ್ತು ಡಾ. ದಿವ್ಯಾ ಅನೆಸ್ತೇಶಿಯಾ ಲಿಮಿಟೆಡ್ ತಿಳಿಸಿದ್ದಾರೆ. ಇದು 2 ಘಟಕಗಳ ವಿಲೀನದ ಕಾರ್ಡ್ ಆಗಿದೆ ಎಂದು ತಿಳಿಸಿದ್ದಾರೆ. ಕಾರ್ಡ್‍ನ ಆರಂಭದಲ್ಲಿ ಅತ್ಯಮೂಲ್ಯ ಕಾರ್ಯಕ್ರಮದ ಆಹ್ವಾನಕ್ಕಾಗಿ ಎಂದು ತಿಳಿಸಿದೆ. ವಿಲೀನಗೊಂಡ ಘಟಕಗಳನ್ನು ನಿಯಂತ್ರಕ ಮಾನದಂಡಗಳಿಗೆ (ಹಿಂದೂ ಸಂಪ್ರದಾಯ) ಅನುಸಾರವಾಗಿ ಪಟ್ಟಿ ಮಾಡಲಾಗುತ್ತದೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಮೈಸೂರು ರಿಂಗ್ ರಸ್ತೆ – ಬೀದಿ ದೀಪಗಳ MCBಯನ್ನೇ ಕದ್ದ ಕಳ್ಳರು

    ವಿವಾಹ ಸಮಾರಂಭವನ್ನು ಪಟ್ಟಿ ಸಮಾರಂಭ ಎಂದು ತಿಳಿಸಿರುವ ಅವರು, ಸ್ನೇಹಿತರನ್ನು ಹಾಗೂ ಕುಟುಂಬದವರನ್ನು ಚಿಲ್ಲರೆ ಹೂಡಿಕೆದಾರರು ಎಂದಿದ್ದಾರೆ. ಸಮಾರಂಭಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳಿಗೆ ಸ್ಟಾಕ್ ಮಾರ್ಕೆಟ್‍ಗೆ ಸಂಬಂಧಿಸಿದ ಹೆಸರನ್ನೇ ನೀಡಿದ್ದಾರೆ. ಸಂಗೀತವನ್ನು ರಿಂಗಿಂಗ್ ಬೆಲ್, ಸ್ವಾಗತವನ್ನು ಮಧ್ಯಂತರ ಡಿವಿಡೆಂಡ್ ಪಾವತಿ ಎಂದು ತಿಳಿಸಿದ್ದಾರೆ. ಡಿಸೆಂಬರ್ 6 ಮತ್ತು 7 ಬಿಡ್ಡಿಂಗ್ ದಿನಾಂಕವಾಗಿದ್ದು, ಗುಲ್ಬರ್ಗದ ಹುನ್ನಾಬಾದ್ ರಸ್ತೆಯಲ್ಲಿರುವ ಸಾಕಾಸರ್ ಗಾರ್ಡನ್ಸ್‍ನಲ್ಲಿ ಸ್ಟಾಕ್ ಎಕ್ಸ್‍ಚೇಂಜ್ ನಡೆಯಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಬೋನಸ್ ರೂಪದಲ್ಲಿ ಸ್ಥಳೀಯದಲ್ಲವರಿಗೆ ಇರಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲೇಡಿ PSI ಕಿರುಕುಳ ಆರೋಪ- ಡೆತ್‌ನೋಟ್ ಬರೆದಿಟ್ಟು ಯುವಕ ನಾಪತ್ತೆ

    Live Tv
    [brid partner=56869869 player=32851 video=960834 autoplay=true]

  • ನರ್ಸ್, ಫಾರ್ಮಾಸಿಸ್ಟ್ ಜೋಡಿಯ ಟ್ಯಾಬ್ಲೆಟ್ ವೆಡ್ಡಿಂಗ್ ಕಾರ್ಡ್ ವೈರಲ್

    ನರ್ಸ್, ಫಾರ್ಮಾಸಿಸ್ಟ್ ಜೋಡಿಯ ಟ್ಯಾಬ್ಲೆಟ್ ವೆಡ್ಡಿಂಗ್ ಕಾರ್ಡ್ ವೈರಲ್

    ಹೈದರಾಬಾದ್: ಮದುವೆ ಪ್ರತಿಯೊಬ್ಬರ ಜೀವನದಲ್ಲೂ ಮಹತ್ವದ ಘಟ್ಟವಾಗಿದ್ದು, ಈ ಪ್ರಮುಖ ಘಟ್ಟದಲ್ಲಿ ಹಲವಾರು ಕನಸುಗಳನ್ನು ಕಂಡಿರುತ್ತಾರೆ. ಪ್ರತಿಯೊಂದು ಹಂತದಲ್ಲೂ ಕಂಡಿರುವ ಕನಸನ್ನು ನನಸು ಮಾಡಿಕೊಳ್ಳಬೇಕೆಂಬ ಹಂಬಲ ಇರುತ್ತೆ. ಅದೇ ರೀತಿ ಇಲ್ಲೊಂದು ಜೋಡಿ ವಿಶೇಷ ರೀತಿಯಲ್ಲಿ ಮದುವೆ ಕಾರ್ಡ್‍ನ್ನು ಮಾಡಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಹೌದು.. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ವರ ಎಜಿಲರಸನ್ ಹಾಗೂ ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಧು ವಸಂತಕುಮಾರಿ ಇಬ್ಬರೂ ಮುಂದಿನ ತಿಂಗಳು ಅಂದರೆ ಸೆ. 5 ರಂದು ಮದುವೆ ಆಗಲಿದ್ದಾರೆ. ಮೂಲತಃ ಈ ಇಬ್ಬರು ಜೋಡಿಗಳು ವೈದ್ಯಕೀಯ ವೃತ್ತಿಯಲ್ಲಿದ್ದಾರೆ. ವರ ಫಾರ್ಮಾಸಿಸ್ಟ್ ಹಾಗೂ ವಧು ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ತಮ್ಮ ವೃತ್ತಿಗೆ ಅನುಗುಣವಾಗಿಯೇ ಇರಲಿ ಎಂದು ಟ್ಯಾಬ್ಲೆಟ್ ಕಾರ್ಡ್ ಮಾದರಿಯ ಆಮಂತ್ರಣ ಪತ್ರವನ್ನು ಮಾಡಿಸಿದ್ದಾರೆ.

    ಈ ಕಾರ್ಡಿನ ವಿಶೇಷ ಏನೆಂದರೆ ಟ್ಯಾಬ್ಲೆಟ್ ಶಿಟ್‍ನಲ್ಲಿ ಯಾವ ರೀತಿಯಾಗಿ ಬರೆದಿರುತ್ತಾರೋ ಅದೇ ರೀತಿಯಾಗಿ ತಮ್ಮ ಮದುವೆ ಕಾರ್ಡ್‍ನ್ನು ಬರೆಸಿದ್ದಾರೆ. ನೀವು ಒಮ್ಮೆಲೇ ನೋಡಿದರೇ ಅರೇ.. ಇದೇನಪ್ಪ ಈ ಟ್ಯಾಬ್ಲೆಟ್ ಶಿಟ್ ನೀಡಿದ್ದಾರಲ್ಲ ಅಂದುಕೊಳ್ಳಬೇಕು, ಆ ರೀತಿಯೇ ಇದೆ. ಇದನ್ನೂ ಓದಿ: ಷರತ್ತಿನೊಂದಿಗೆ ಗಣೇಶೋತ್ಸವಕ್ಕೆ BBMP ಗ್ರೀನ್ ಸಿಗ್ನಲ್ – ಈದ್ಗಾ ಮೈದಾನ ಗಣಪನಿಗೆ ಸಿಕ್ಕಿಲ್ಲ ಪರ್ಮಿಷನ್

    ಈ ವೆಡ್ಡಿಂಗ್ ಕಾರ್ಡ್‍ನಲ್ಲಿ ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲ, ನೀಲಿ ಬಣ್ಣದಲ್ಲಿ ಮದುವೆ ಮತ್ತು ಆರತಕ್ಷತೆ ನಡೆಯುವ ದಿನಾಂಕ ಮತ್ತು ಸಮಯ ತಿಳಿಸಲಾಗಿದೆ. ಮ್ಯಾನುಫ್ಯಾಕ್ಚರ್ ವಿಭಾಗದಲ್ಲಿ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸ ಇದೆ.

    ಟ್ಯಾಬ್ಲೆಟ್ ಕಾರ್ಡ್‍ಗಳಲ್ಲಿ ಸೂಚಿಸುವ ವಾರ್ನಿಂಗ್ ಸ್ಥಳದಲ್ಲಿ ಎಲ್ಲ ಸ್ನೇಹಿತರೇ, ಬಂಧುಗಳೇ ನಮ್ಮ ಮದುವೆಯ ಶುಭಕಾರ್ಯಕ್ರಮಕ್ಕೆ ಮಿಸ್ ಮಾಡದೆ ಬನ್ನಿ ಎಂದು ಕೆಂಪು ಬಣ್ಣದಲ್ಲಿ ಮುದ್ರಿಸಲಾಗಿದೆ. ಇನ್ನು ತಮ್ಮ ಮದುವೆ ದಿನದ ವಿಶೇಷ ದಿನಗಳನ್ನೂ ಸ್ಮರಿಸಿದ್ದು, ಶಿಕ್ಷಕರ ದಿನ ಮತ್ತು ಮದರ್ ತೆರೇಸಾ ಸ್ಮರಣೆ ದಿನವಿದೆ ಎಂದಿದ್ದಾರೆ. ಮದುವೆ ಕರೆಯೋಲೆ ಪತ್ರಿಕೆಯಲ್ಲಿ ವಧು-ವರನ ಹೆಸರು ದೊಡ್ಡ ಅಕ್ಷರದಲ್ಲಿದ್ದು, ಪಕ್ಕದಲ್ಲೇ ಇಬ್ಬರ ಶಿಕ್ಷಣದ ವಿವರವೂ ಇದೆ. ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷರಾಗಲು ನೋ ಎಂದ ರಾಹುಲ್ ಗಾಂಧಿ; ಗಾಂಧಿಯೇತರರಿಗೆ ಅವಕಾಶ- ಮೂಲಗಳು

    Live Tv
    [brid partner=56869869 player=32851 video=960834 autoplay=true]

  • ಪುತ್ರನ ಮದುವೆ ಕಾರ್ಡ್ ಹಂಚಲು ಹೋದ ದಂಪತಿ ಮಸಣಕ್ಕೆ

    ಪುತ್ರನ ಮದುವೆ ಕಾರ್ಡ್ ಹಂಚಲು ಹೋದ ದಂಪತಿ ಮಸಣಕ್ಕೆ

    ಬೀದರ್: ಪುತ್ರನ ಮದುವೆ ಕಾರ್ಡ್ ಹಂಚಲು ಹೋದ ದಂಪತಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಸೇವಾಲಾಲ ತಾಂಡದ ಬಳಿ ನಡೆದಿದೆ.

    ಕಾಂಗ್ರೆಸ್ ಮುಖಂಡ ಸೂರ್ಯಕಾಂತ್ ಪಾಟೀಲ್ (50) ಹಾಗೂ ಪತ್ನಿ ಜಯಶ್ರೀ ಪಾಟೀಲ್ (45) ಸಾವನ್ನಪ್ಪಿದ ದುರ್ದೈವಿಗಳು. ಇದೇ ತಿಂಗಳು 26 ರಂದು ಮಗನ ಮದುವೆ ಇದ್ದ ಕಾರಣ ಲಗ್ನ ಪತ್ರಿಕೆ ಹಂಚಲು ಸಂಬಂಧಿಕರ ಮನೆಗೆ ಹೋಗಿದ್ದರು. ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಮದುವೆ ಕಾರ್ಡ್ ಹಂಚಿಕೆ ಮಾಡಿ ಮನೆಗೆ ವಾಪಸ್ಸಾಗುತ್ತಿರುವ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಸೂರ್ಯಕಾಂತ್ ಪಾಟೀಲ್ ಮಾಜಿ ಗ್ರಾಪಂ ಅಧ್ಯಕ್ಷರಾಗಿದ್ದರು ಎಂದು ತಿಳಿದು ಬಂದಿದೆ. ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಕತ್ರಿನಾ, ವಿಕ್ಕಿ ಮದುವೆಗೆ ನಮಗೆ ಯಾವುದೇ ಆಹ್ವಾನ ಬಂದಿಲ್ಲ: ಸಲ್ಮಾನ್‌ ಖಾನ್‌ ಸಹೋದರಿ

  • ಕೊರೊನಾ ಅಲ್ಲ, ಇದು ಪ್ರೀತಿಯ ಸೋಂಕು- ವಿಭಿನ್ನ ಲಗ್ನ ಪತ್ರಿಕೆ ಫುಲ್ ವೈರಲ್

    ಕೊರೊನಾ ಅಲ್ಲ, ಇದು ಪ್ರೀತಿಯ ಸೋಂಕು- ವಿಭಿನ್ನ ಲಗ್ನ ಪತ್ರಿಕೆ ಫುಲ್ ವೈರಲ್

    ಶಿವಮೊಗ್ಗ: ಕೊರೊನಾ ಸೋಂಕಲ್ಲ, ಇದು ಪ್ರೀತಿಯ ಸೋಂಕು ಎಂದು ವರನೋರ್ವ ವಿಶೇಷವಾಗಿ ಲಗ್ನ ಪತ್ರಿಕೆಯೊಂದನ್ನು ಮುದ್ರಿಸಿದ್ದು, ಈ ಪತ್ರಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯುವಕ ವಿನೋದ್ ಇದೇ ತಿಂಗಳ ಜೂ. 15ರಂದು ಚಂದನಾ ಅವರೊಂದಿಗೆ ವಿವಾಹವಾಗುತ್ತಿದ್ದಾರೆ. ಇವರ ವಿವಾಹಕ್ಕೆ ವರ ವಿನೋದ್ ವಿಭಿನ್ನವಾದ ಲಗ್ನ ಪತ್ರಿಕೆ ಮಾಡಿಸಿದ್ದು, ಇದರಲ್ಲಿ ನಿಶ್ಚಿತಾರ್ಥವನ್ನು ಲಾಕ್‍ಡೌನ್‍ಗೆ ಮತ್ತು ಮದುವೆಯನ್ನು ಸೀಲ್‍ಡೌನ್‍ಗೆ ಹೋಲಿಸಲಾಗಿದೆ.

    ಈ ಪತ್ರಿಕೆಯ ಮುಂಭಾಗದಲ್ಲಿ ವಿನೋದ್ ಹಾಗೂ ಚಂದನಾ ಇವರಿಬ್ಬರಿಗೂ ಪರಸ್ಪರ ಪ್ರೀತಿ ಎಂಬ ಸೋಂಕು ಇರುವುದು ದೃಢಪಟ್ಟಿದ್ದು, ನಿಶ್ಚಿತಾರ್ಥದ ಮೂಲಕ ಲಾಕ್‍ಡೌನ್ ಮಾಡಿ, ಮದುವೆ ಎಂಬ ಸೀಲ್‍ಡೌನ್ ಮಾಡಿ, ನಂತರ ಜೀವನವಿಡಿ ಲವ್ ಕ್ವಾರಂಟೈನ್ ಮಾಡಲು ಗುರುಹಿರಿಯ ಬಂಧುಮಿತ್ರರು ತೀರ್ಮಾನಿಸಿದ್ದು, ತಾವುಗಳು ಮುಖಕ್ಕೆ ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಜರ್ ಹಚ್ಚಿಕೊಂಡು ಸಾಮಾಜಿಕ ಅಂತರದೊಂದಿಗೆ ಬಂದು ಆಶೀರ್ವಾದ ಮಾಡಬೇಕು ಎಂದು ಅಹ್ವಾನಿಸುತ್ತೇವೆ ಎಂದು ಬರೆಯಲಾಗಿದೆ.

  • ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಿಂಟ್- ಮದ್ವೆ ಕಾರ್ಡ್ ವೈರಲ್

    ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ಯೋಜನೆ ಪ್ರಿಂಟ್- ಮದ್ವೆ ಕಾರ್ಡ್ ವೈರಲ್

    ಬಳ್ಳಾರಿ: ಸಾಮಾನ್ಯವಾಗಿ ಲಗ್ನ ಪತ್ರಿಕೆಗಳನ್ನು ವಿಭಿನ್ನವಾಗಿ ಪ್ರಿಂಟ್ ಮಾಡಿಸುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಿಂಟ್ ಮಾಡುವ ಮೂಲಕ ಹೆಣ್ಣು ಮಕ್ಕಳ ಮೇಲೆ ತಮಗಿರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ನಿವಾಸಿಗಳಾದ ಕೃಷ್ಣಾರಾವ್ ಮತ್ತು ಜ್ಯೋತಿ ಕುಲಕರ್ಣಿ ಎಂಬವರು ತಮ್ಮ ಮಗಳಾದ ಅನುಷಾ ಅವರ ಮದುವೆಯನ್ನು ಇದೇ ದಿನಾಂಕ 27 ರಂದು ಮಾಡಲಿದ್ದಾರೆ. ಕಾರಣ ತಮ್ಮ ಮುದ್ದಿನ ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ‘ಬೇಟಿ ಬಚಾವೋ ಬೇಟಿ ಪಾಡಾವೋ’ ಎನ್ನುವ ಸ್ಲೋಗನ್ ಪ್ರಿಂಟ್ ಮಾಡಿಸಿದ್ದಾರೆ. ಈ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

    ಇದೇ ದಿನಾಂಕ 27 ರಂದು ಮಗಳ ಮದುವೆಯನ್ನು ಬೆಳಗಾವಿ ಮೂಲದ ನಿತಿನ್ ಎಂಬವರ ಜೊತೆ ನಡೆಯಲಿದ್ದು, ತಮ್ಮ ಮುದ್ದಿನ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಲು ನಿಶ್ಚಯಿಸಿದ್ದಾರೆ. ಈ ಇಬ್ಬರೂ ದಂಪತಿಗೆ ಹೆಣ್ಣು ಮಕ್ಕಳು ಎಂದರೆ ತುಂಬಾನೇ ಇಷ್ಟ ಅಂತೆ ಹೀಗಾಗಿ ತಮ್ಮ ಮಗಳನ್ನು ಬೆಳೆಸಿದ ರೀತಿಯಲ್ಲಿ ಬೇರೆಯವರು ಬೆಳೆಸಬೇಕು ಎನ್ನುವ ಉದ್ದೇಶದಿಂದ ಈ ರೀತಿಯಲ್ಲಿ ಲಗ್ನ ಪತ್ರಿಕೆಯಲ್ಲಿ ಪ್ರಿಂಟ್ ಮಾಡಿಸಿದ್ದಾರೆ ಎನ್ನಲಾಗಿದೆ.

  • ಹನುಮನನ್ನು ಲಗ್ನ ಪತ್ರಿಕೆಯಲ್ಲಿ ಮುದ್ರಿಸಿ ಭಕ್ತಿ ಮೆರೆದ ಅಯೋಧ್ಯೆಯ ಮುಸ್ಲಿಂ ಕುಟುಂಬ

    ಹನುಮನನ್ನು ಲಗ್ನ ಪತ್ರಿಕೆಯಲ್ಲಿ ಮುದ್ರಿಸಿ ಭಕ್ತಿ ಮೆರೆದ ಅಯೋಧ್ಯೆಯ ಮುಸ್ಲಿಂ ಕುಟುಂಬ

    ಲಕ್ನೋ: ಹಿಂದೂ, ಮುಸ್ಲಿಂ ಎಂಬ ಭೇದವಿಲ್ಲದೆ ಅಯೋಧ್ಯೆಯಲ್ಲಿ ಶ್ರೀರಾಮನನ್ನು ಆರಾಧಿಸಲಾಗುತ್ತಿದೆ. ಇದಕ್ಕೆ ಅಯೋಧ್ಯೆಯ ಮುಸ್ಲಿಂ ಕುಟುಂಬವೊಂದು ಸಾಕ್ಷಿಯಾಗಿದೆ. ತಮ್ಮ ಮಗ, ಮಗಳ ಮದುವೆ ಆಮಂತ್ರಣ ಪ್ರತಿಕೆಯಲ್ಲಿ ರಾಮನ ಭಂಟ ಹನುಮನ ಚಿತ್ರವನ್ನು ಮುದ್ರಿಸಿ ಕುಟುಂಬ ಭಕ್ತಿ ಮೆರೆದಿದೆ.

    ಹೌದು. ಉತ್ತರ ಪ್ರದೇಶ ಚಾರೇರ ಗ್ರಾಮದ ಮುಸ್ಲಿಂ ಕುಟುಂಬ ಶ್ರೀರಾಮನ ಬಂಟ ಹನುಮನ ಚಿತ್ರವುಳ್ಳ ಕ್ಯಾಲೆಂಡರ್ ಒಂದನ್ನು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದೆ. ಅಷ್ಟೇ ಅಲ್ಲದೆ ಈ ಪತ್ರಿಕೆಯಲ್ಲಿ ಬ್ರಹ್ಮ, ವಿಷ್ಣು, ಶಿವ ಹಾಗೂ ನಾರದರ ಚಿತ್ರವನ್ನೂ ಕೂಡ ಕುಟುಂಬ ಮುದ್ರಿಸಿದೆ. ರಸೂಲಾಬಾದ್‍ನ ಹೋಮಿಯೋಪತಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೊಹಮ್ಮದ್ ಮುಬೀನ್ ಅವರು ತಮ್ಮ ಮಗ ಮತ್ತು ಮಗಳು ಲಗ್ನ ಪತ್ರಿಕೆಯಲ್ಲಿ ಹಿಂದೂ ದೇವರ ಚಿತ್ರ ಮುದ್ರಿಸಿದ್ದಾರೆ. ಮುಬೀನ್ ಅವರ ಮಗ ಮೊಹಮದ್ ನಸೀರ್ ಹಾಗೂ ಮಗಳು ಅಮೀನಾ ಬಾನೋ ಅವರ ಮದುವೆ ನಡೆಯಲಿದೆ. ಶುಕ್ರವಾರ ನಸೀರ್ ಮದುವೆಯಾದರೆ, ರವಿವಾರದಂದು ಅಮೀನಾ ಮದುವೆ ನಡೆಯಲಿದೆ. ಹೀಗಾಗಿ ಮುಬೀನ್ ಅವರು ತಮ್ಮ ಮಕ್ಕಳ ಮದುವೆಗೆ ಹಿಂದೂ ದೇವರುಗಳುಳ್ಳ ವಿಶೇಷ ಲಗ್ನ ಪತ್ರಿಕೆ ಮುದ್ರಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಕುಟುಂಬ, ನಮ್ಮ ಅಲ್ಲಾಹುವಿನ ಮೇಲೆ ನಮಗೆ ಎಷ್ಟು ನಂಬಿಕೆ ಇದೆಯೋ ಅಷ್ಟೇ ನಂಬಿಕೆ ಹಿಂದೂ ದೇವ, ದೇವತೆಯರ ಮೇಲಿದೆ ಎಂದು ಹೇಳಿ ಎಲ್ಲರ ಮನ ಗೆದ್ದಿದ್ದಾರೆ.

    ಮುಬೀನ್ ಅವರು ಈ ಬಗ್ಗೆ ಮಾತನಾಡಿ, ಲಗ್ನ ಪತ್ರಿಕೆ ಮುದ್ರಿಸುವ ವಿಚಾರದಲ್ಲಿ ಯಾರೂ ನನ್ನ ಮೇಲೆ ಒತ್ತಡ ಹೇರಿರಲಿಲ್ಲ. ಕುಟುಂಬ ಸದಸ್ಯರ ಅನುಮತಿ, ಅಭಿಪ್ರಾಯ ಪಡೆದು ನಾನು ಪತ್ರಿಕೆ ಆಯ್ಕೆ ಮಾಡಿದ್ದೇನೆ ಎಂದಿದ್ದಾರೆ.

    ಈಗಾಗಲೇ 700 ಮಂದಿಗೆ ಲಗ್ನ ಪತ್ರಿಕೆ ಹಂಚಿದ್ದೇನೆ. ಹಿಂದೂ ಮಿತ್ರರಿಗೂ ಲಗ್ನ ಪತ್ರಿಕೆ ಹಂಚಿ ಮದುವೆಗೆ ಕರೆದಿದ್ದೇನೆ. ಯಾರೂ ಕೂಡ ಈವರೆಗೆ ಇದಕ್ಕೆ ವಿರೋಧಿಸಿಲ್ಲ. ನನ್ನ ಸಂಬಂಧಿಕರು ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಮಕ್ಕಳು ಕೂಡ ಖುಷಿಯಿಂದ ಲಗ್ನ ಪತ್ರಿಕೆಯನ್ನು ಒಪ್ಪಿದ್ದಾರೆ. ಎಲ್ಲರೂ ಇದು ಒಳ್ಳೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಖುಷಿಯಿಂದ ಮುಬೀನ್ ಹೇಳಿದ್ದಾರೆ.

    ಹಿಂದೂಗಳು ಮತ್ತು ಮುಸ್ಲಿಮರು ಯಾವಾಗಲೂ ಇಲ್ಲಿ ಪರಿಪೂರ್ಣ ಸಾಮರಸ್ಯದಿಂದ ವಾಸಿಸುತ್ತಿದ್ದಾರೆ. ಈ ಸಾಮರಸ್ಯ ಎರಡು ಸಮುದಾಯಗಳ ನಡುವಿನ ಬಾಂಧವ್ಯವನ್ನು ಬಲಪಡಿಸಿದೆ ಎಂದು ಸ್ಥಳೀಯರೊಬ್ಬರು ಮುಬೀನ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಮದುವೆ ಆಮಂತ್ರಣದಲ್ಲಿ ರಾಮ-ಸೀತೆ: ಸೌಹಾರ್ದ ಮೆರೆದ ಮುಸ್ಲಿಂ ಕುಟುಂಬ

    ಮದುವೆ ಆಮಂತ್ರಣದಲ್ಲಿ ರಾಮ-ಸೀತೆ: ಸೌಹಾರ್ದ ಮೆರೆದ ಮುಸ್ಲಿಂ ಕುಟುಂಬ

    ಲಕ್ನೋ: ಉತ್ತರ ಪ್ರದೇಶದ ಮುಸ್ಲಿಂ ಕುಟುಂಬವೊಂದು ಮದುವೆ ಆಮಂತ್ರಣ ಪತ್ರಿಕೆಯಲ್ಲಿ ರಾಮ-ಸೀತಾ ಚಿತ್ರವನ್ನು ಮುದ್ರಿಸುವ ಮೂಲಕ ಕೋಮು ಸೌಹಾರ್ದತೆ ಮೆರೆದಿದೆ.

    ಷಹಜಹಾನ್ಪರ್ ಜಿಲ್ಲೆಯ ಚಿಲೌವಾ ಹಳ್ಳಿಯ ಮುಸ್ಲಿಂ ಮಹಿಳೆ ಬೇಬಿ ಅವರು ತಮ್ಮ ಮಗಳು ರುಕ್ಷಾರ್ ಮದುವೆಗೆ ಇಂತಹ ವಿಶೇಷ ಆಮಂತ್ರಣ ಪತ್ರಿಕೆ ಮುದ್ರಿಸಿದ್ದು, ಗ್ರಾಮಸ್ಥರಿಗೆ ಹಾಗೂ ಸಂಬಂಧಿಕರಿಗೆ ನೀಡಿದ್ದಾರೆ. ನಮ್ಮ ಗ್ರಾಮದಲ್ಲಿ ಕೋಮು ಸಾಮರಸ್ಯ ಸಾರಲು ನಮ್ಮದೊಂದು ಪುಟ್ಟ ಹೆಜ್ಜೆ ಇಟ್ಟಿದ್ದೇವೆ ಎಂದು ಕುಟುಂಬದವರು ತಿಳಿಸಿದ್ದಾರೆ.

    ನಮ್ಮ ಹಳ್ಳಿಯಲ್ಲಿ ಹಿಂದೂ ಹಾಗೂ ಮುಸ್ಲಿಂ ಕುಟುಂಬಗಳು ಒಟ್ಟಾಗಿ ಬಾಳುತ್ತಿವೆ. ಅವರಲ್ಲಿ ಕೋಮು ಸೌಹಾರ್ದತೆ ತರಬೇಕು ಎನ್ನುವುದು ನಮ್ಮ ಇಚ್ಛೆಯಾಗಿದೆ. ಧರ್ಮದ ಆಧಾರದ ಮೇಲೆ ಯಾರನ್ನೂ ಪ್ರತ್ಯೇಕವಾಗಿ ಕಾಣಬಾರದು. ಹೀಗಾಗಿ ಆಮಂತ್ರಣ ಪತ್ರಿಕೆಯಲ್ಲಿ ರಾಮ-ಸೀತಾ ಚಿತ್ರವನ್ನು ಮುದ್ರಿಸಲಾಗಿದೆ ಎಂದು ಬೇಬಿ ಹೇಳಿದ್ದಾರೆ.

    ಇಲ್ಲಿನ ಪ್ರತಿಯೊಬ್ಬರೂ ಸಹೋದರಿ ರುಕ್ಷಾರ್ ಮದುವೆಯ ಆಮಂತ್ರಣ ಪತ್ರಿಕೆಯನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ಇದು ನಮಗೂ ಖುಷಿ ತಂದಿದೆ ಎಂದು ಮೊಮ್ಮದ್ ಉಮರ್ ಸಂತ ವ್ಯಕ್ತಪಡಿಸಿದ್ದಾರೆ.

    ಈ ವಿಶೇಷ ಮದುವೆ ಆಮಂತ್ರಣವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿಲೌವಾ ಹಳ್ಳಿಯು ದೆಹಲಿಯಿಂದ 250 ಕಿ.ಮೀ. ದೂರದಲ್ಲಿದೆ.

  • ಮದುವೆ ಆಹ್ವಾನ ಪತ್ರಿಕೆಗೆ ತಟ್ಟಿತು ನೀತಿಸಂಹಿತೆ ಬಿಸಿ!

    ಮದುವೆ ಆಹ್ವಾನ ಪತ್ರಿಕೆಗೆ ತಟ್ಟಿತು ನೀತಿಸಂಹಿತೆ ಬಿಸಿ!

    ಯಾದಗಿರಿ: ಮದುವೆಯ ಆಮಂತ್ರಣ ಪತ್ರದ ಮೂಲಕ ಬಿಜೆಪಿ ಕಾರ್ಯಕರ್ತನೋರ್ವ ಪ್ರಚಾರ ಮಾಡಲು ಹೋಗಿ ಫಜೀತಿಗೆ ಸಿಲುಕಿಕೊಂಡಿರುವ ಘಟನೆ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ನಡೆದಿದೆ.

    ಲೋಕಸಭೆ ಚುನಾವಣೆ ಹಿನ್ನೆಲೆ ಭಾನುವಾರದಿಂದ ನೀತಿಸಂಹಿತೆ ಜಾರಿಯಾಗಿದ್ದು, ಯಾದಗಿರಿಯ ಬಿಜೆಪಿ ಕಾರ್ಯಕರ್ತ ಬಸವರಾಜ `ಮತ್ತೊಮ್ಮೆ ಮೋದಿ’ ಅಂತ ಬರೆಸಿ, ಕೆಲ ಬಿಜೆಪಿ ನಾಯಕರ ಫೋಟೋವನ್ನೂ ಕೂಡ ತಮ್ಮ ಮದುವೆ ಆಮಂತ್ರಣ ಪತ್ರದಲ್ಲಿ ಪ್ರಿಂಟ್ ಹಾಕಿಸಿದ್ದರು. ಆದ್ರೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಈ ರೀತಿ ರಾಜಕೀಯ ಪಕ್ಷ ಪರವಾಗಿ ಪ್ರಚಾರ ಮಾಡುವಂತ ಮದುವೆ ಕಾರ್ಡ್ ಹಂಚುವಂತಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ:ರಾಜಕಾರಣಿಗಳ ಮೇಲೆ ಆಯೋಗದಿಂದ ಹೊಸ ಬ್ರಹ್ಮಾಸ್ತ್ರ..!

    ಕಳೆದ ಹದಿನೈದು ದಿನಗಳಿಂದ ಲಗ್ನ ಪತ್ರಿಕೆಗಳನ್ನು ಬಸವರಾಜ ಹಂಚುತ್ತಿದ್ದರು. ಆದರೆ ಭಾನುವಾರ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ, ಇಂದಿನಿಂದ ಲಗ್ನಪತ್ರಿಕೆ ಹಂಚಿಕೆ ಮಾಡದಿರುವಂತೆ ಚುನಾವಣಾ ಅಧಿಕಾರಿಗಳು ಬಸವರಾಜ ಅವರಿಗೆ ಸೂಚಿಸಿದ್ದಾರೆ. ಈಗಾಗಲೇ ಈ ಬಗ್ಗೆ ಪ್ರಾಥಮಿಕ ವರದಿ ತಯಾರಿಸಿರುವ ಆರ್‍ಓ ಅಧಿಕಾರಿ ಲಗ್ನಪತ್ರಿಕೆಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ ಪತ್ರಿಕೆ ಮುದ್ರಿಸಿದ ಮುದ್ರಣಾಲಯಕ್ಕೆ ಮುದ್ರಿತ ಪತ್ರಿಕೆಗಳ ಲೆಕ್ಕ ಕೂಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ:ಸೇನೆ, ಸೈನಿಕರ ಚಿತ್ರಗಳನ್ನು ಬಳಸುವಂತಿಲ್ಲ: ರಾಜಕೀಯ ಪಕ್ಷಗಳಿಗೆ ಆಯೋಗ ಎಚ್ಚರಿಕೆ

    ಇದೆ ಮಾರ್ಚ್ 24ಕ್ಕೆ ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ಬಸವರಾಜ ಹಾಗೂ ಸಹೋದರ ಶರಣಬಸವ ಇಬ್ಬರ ಮದುವೆಗಳು ನಿಶ್ಚಯವಾಗಿದೆ. ಆದರಿಂದ ಬಿಜೆಪಿ ಕಾರ್ಯಕರ್ತ ಆಗಿರುವ ಬಸವರಾಜ ಮತ್ತೊಮ್ಮೆ ಮೋದಿ ಅಂತ ಪ್ರಿಂಟ್ ಮಾಡಿಸಿದ್ದ ತಮ್ಮ ಲಗ್ನಪತ್ರಿಕೆಯನ್ನು ಎಲ್ಲರಿಗೂ ಹಂಚುವ ಮೂಲಕ ಮದುವೆಯ ಆಮಂತ್ರಣದ ಜೊತೆಗೆ ಬಿಜೆಪಿ ಪರ ಪ್ರಚಾರವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಆಮಂತ್ರಣದ ಮೇಲೆ ಸಾಲು ಸಾಲು ಬಿಜೆಪಿ ನಾಯಕರ ಫೋಟೋವನ್ನು ಕೂಡ ಹಾಕಿಸಿದ್ದರು. ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ನಾಯಕ ರಾಜುಗೌಡ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ್ ಭಾವಚಿತ್ರಗಳನ್ನ ಪ್ರಿಂಟ್ ಮಾಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv