Tag: Wedding Anniversary

  • ವಿವಾಹ ವಾರ್ಷಿಕೋತ್ಸವ ದಿನದಂದು ಆಕ್ಸಿಜನ್ ಸಿಲಿಂಡರ್ ದಾನ ಮಾಡಿದ ನಟಿ

    ವಿವಾಹ ವಾರ್ಷಿಕೋತ್ಸವ ದಿನದಂದು ಆಕ್ಸಿಜನ್ ಸಿಲಿಂಡರ್ ದಾನ ಮಾಡಿದ ನಟಿ

    ಮುಂಬೈ: ಬಾಲಿವುಡ್ ನಟಿ ಅಮೃತಾ ರಾವ್ ಹಾಗೂ  ಆರ್‌ಜೆ ಅನ್‍ಮೋಲ್ ತಮ್ಮ ವಿವಾಹ ವಾರ್ಷಿಕೋತ್ಸವನ್ನು ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ ಆಚರಿಸಲು ಮುಂದಾಗಿದ್ದಾರೆ. ಈ ಬಗ್ಗೆ ಇನ್‍ಸ್ಟಾಗ್ರಾಮ್‍ಖಾತೆಯಲ್ಲಿ ತಿಳಿಸಿದ್ದಾರೆ.

    ಈ ವರ್ಷದ ವಿವಾಹ ವಾರ್ಷಿಕೋತ್ಸವದ ದಿನದಂದು ನಾವು ಜನರಿಗೆ ಆಕ್ಸಿಜನ್ ಸಿಲಿಂಡರ್ ದಾನ ಮಾಡುವುದಾಗಿ ನಿರ್ಧಾರಿಸಿದ್ದೇವೆ. ಕಳೆದ ತಿಂಗಳಿಂದ ನಾವು ಮುಂಬೈ ತಂಡದ ಜೊತೆ ಕೆಲಸ ಮಾಡುತ್ತಿರುವೆವು. ನೀವೆಲ್ಲರೂ ನಮಗೆ ಸಹಕರಿಸಿದ್ದೀರಾ. ದಯವಿಟ್ಟು ಹೀಗೆ ಮುಂದುವರೆಸಿ . ಈಗ ಹಂಚಿಕೊಂಡಿರುವ ಫೋಟೋ ತುಂಬಾ ದಿನಗಳ ಹಿಂದೆ ಕ್ಲಿಕ್ ಮಾಡಿದ್ದು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

    ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಕೊರೊನಾ ಸಂಕಷ್ಟದಲ್ಲಿ ಇರುವವರಿಗೆ ಆಕ್ಸಿಜನ್ ಸಿಲಿಂಡರ್ ನೀಡಿವ ಕಾರ್ಯಕ್ಕೆ ಈ ದಂಪತಿ ಮುಂದಾಗಿದ್ದಾರೆ. 2013ರಲ್ಲಿ ಸತ್ಯಾಗ್ರಹ ಹಾಗೂ 2019ರಲ್ಲಿ ಬಿಡುಗಡೆಯಾದ ಠಾಕ್ರೆ ಚಿತ್ರದಲ್ಲಿ ಅಮೃತಾ ಅಭಿನಯಿಸಿದ್ದಾರೆ. 2015ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ಸಿನಿಮಾರಂಗ ದಿಂದ ದೂರವಾಗಿದ್ದರು. ಅಮೃತಾ ಒಂದು ಮಗುವಿನ ತಾಯಿ ಆಗಿ ವೈವಾಹಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಮಾಜ ಸೇವೆ ಮೂಲಕವಾಗಿ ಜನರ ನಡುವೆ ಕಾಣಿಸಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ.

  • ಸಂಜನಾ ಗಣೇಶನ್‍ಗೆ ಮೊದಲ ತಿಂಗಳ ಶುಭಕೋರಿದ ಜಸ್ಪ್ರೀತ್ ಬುಮ್ರಾ

    ಸಂಜನಾ ಗಣೇಶನ್‍ಗೆ ಮೊದಲ ತಿಂಗಳ ಶುಭಕೋರಿದ ಜಸ್ಪ್ರೀತ್ ಬುಮ್ರಾ

    ಮುಂಬೈ: ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಮದುವೆಯಾಗಿ ಇಂದಿಗೆ ಒಂದು ತಿಂಗಳಾಗಿದೆ. ಬುಮ್ರಾ ಮದುವೆಯಾಗಿ ಒಂದು ತಿಂಗಳಾಗುತ್ತಿದ್ದಂತೆ ಹೆಂಡತಿ ಸಂಜನಾ ಗಣೇಶನ್ ಅವರಿಗೆ ಮೊದಲ ತಿಂಗಳ  ಶುಭಕೋರಿದ್ದಾರೆ.

    ಮೇ 15 ರಂದು ಬುಮ್ರಾ ಕ್ರಿಕೆಟ್ ನಿರೂಪಕಿಯಾಗಿರುವ ಸಂಜನಾ ಗಣೇಶನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದಿಗೆ ಮದುವೆಯಾಗಿ ಒಂದು ತಿಂಗಳಾಗಿದೆ. ಇದೀಗ ಐಪಿಎಲ್‍ನಲ್ಲಿ ಬ್ಯುಸಿಯಾಗಿರುವ ಬುಮ್ರಾ ಸಾಮಾಜಿಕ ಜಾಲತಾಣದಲ್ಲಿ, ಹಲವು ದಿನಗಳ ಪ್ರೀತಿ, ಆ ನಗು, ಹಾಸ್ಯ, ಸಂಭಾಷಣೆಯೊಂದಿಗೆ ಕಳೆದ ದಿನಗಳು. ಇಂದಿಗೆ ನನ್ನ ಆತ್ಮೀಯ ಸ್ನೇಹಿತೆಯೊಂದಿಗೆ ಮದುವೆಯಾಗಿ ಒಂದು ತಿಂಗಳು ಕಳೆದಿದೆ ಎಂದು ಬರೆದುಕೊಂಡು ಇಬ್ಬರು ಜೊತೆಗಿರುವ ಫೋಟೋ ಒಂದನ್ನು ಹಾಕಿಕೊಂಡಿದ್ದಾರೆ.

    ಬುಮ್ರಾ ಮತ್ತು ಸಂಜನಾ ಗಣೇಶನ್ ಅವರು ಗೋವಾದಲ್ಲಿ ಮದುವೆಯಾಗಿದ್ದರು. ಬಳಿಕ ಬುಮ್ರಾ ಇನ್‍ಸ್ಟಾಗ್ರಾಂನಲ್ಲಿ ಮದುವೆ ಫೋಟೋ ಶೇರ್ ಮಾಡಿಕೊಂಡ ನಂತರ ಎಲ್ಲರಿಗೂ ಇವರಿಬ್ಬರು ಮದುವೆಯಾಗಿರುವ ವಿಷಯ ತಿಳಿದಿತ್ತು.

    ಇದೀಗ ಬುಮ್ರಾ 14ನೇ ಅವೃತ್ತಿಯ ಐಪಿಎಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದು ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

  • ಹ್ಯಾಪಿ ಆ್ಯನಿವರ್ಸರಿ ನಮಗೆ ಕ್ಯೂಟಿ ಅಂದ ಅಲ್ಲು ಅರ್ಜುನ್

    ಹ್ಯಾಪಿ ಆ್ಯನಿವರ್ಸರಿ ನಮಗೆ ಕ್ಯೂಟಿ ಅಂದ ಅಲ್ಲು ಅರ್ಜುನ್

    ಹೈದರಾಬಾದ್: ಟಾಲಿವುಡ್ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹತ್ತು ವರ್ಷ ಕಳೆದಿದೆ. ಇದೇ ಖುಷಿಯಲ್ಲಿ ಅಲ್ಲು ಅರ್ಜುನ್ ಪತ್ನಿ ಸ್ನೇಹ ರೆಡ್ಡಿ ಜೊತೆ ತಾಜ್‍ಮಹಲ್ ಮುಂದೆ ಕ್ಲಿಕ್ಕಿಸಿಕೊಂಡಿದ್ದ ಕೆಲ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಫೋಟೋಗಳ ಜೊತೆ ಅಲ್ಲು ಪತ್ನಿಯನ್ನು ಪ್ರೀತಿಯಿಂದ ಕ್ಯೂಟಿ ಎಂದು ಕರೆದಿರುವ ವಿಚಾರ ಬಹಿರಂಗಗೊಂಡಿದೆ. ಒಂದು ತಾಜ್ ಮಹಲ್ ಮುಂದೆ ಕ್ಲಿಕ್ಕಿಸಿಕೊಂಡಿರುವ ಫೋಟೋವಾದರೆ ಮತ್ತೊಂದು ಮದುವೆ ವೇಳೆ ಸೆರೆಹಿಡಿಯಲಾದ ಫೋಟೋವನ್ನು ಕೋಲಾಜ್ ಮಾಡಿ ಶೇರ್ ಮಾಡುವ ಮೂಲಕ ಸವಿನೆನಪುಗಳ ಮೆಲುಕು ಹಾಕಿದ್ದಾರೆ.

    ಫೋಟೋಗಳ ಶೇರ್ ಮಾಡಿರುವುದರ ಜೊತೆಗೆ, ಹ್ಯಾಪಿ ಆ್ಯನಿವರ್ಸರಿ ನಮಗೆ ಕ್ಯೂಟಿ. ಹತ್ತು ವರ್ಷಗಳು ಎಂತಹ ಅದ್ಭುತ ಪ್ರಯಾಣ. ಇನ್ನೂ ಅನೇಕ ವರ್ಷಗಳು ಹೀಗೆ ಬರಲಿ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಜೆಯನ್ನು ಎಂಜಾಯ್ ಮಾಡಲು ಅಲ್ಲು ಅರ್ಜುನ್ ಮತ್ತು ಕುಟುಂಬ ದುಬೈಗೆ ತೆರಳಿದ್ದರು. ಇದೀಗ ಒಂದೆರಡು ದಿನಗಳ ಹಿಂದೆಯಷ್ಟೇ ಹೈದರಾಬಾದ್‍ಗೆ ಹಿಂದಿರುಗಿದ್ದಾರೆ.

    ಸದ್ಯ ಅಲ್ಲು ಅರ್ಜುನ್ ನಟಿ ರಶ್ಮಿಕಾ ಮಂದಣ್ಣ ಜೊತೆ ಪುಷ್ಪಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆದರೆ ಅಲ್ಲು ಇಷ್ಟು ದಿನ ದುಬೈಗೆ ತೆರಳಿದ್ದ ಕಾರಣ ಸಿನಿಮಾ ತಯಾರಕರು ಕೇವಲ ರಶ್ಮಿಕಾ ಪಾತ್ರದ ಭಾಗಗಳನ್ನು ಚಿತ್ರೀಕರಿಸಿದ್ದರು. ಇನ್ನೂ ಈ ಸಿನಿಮಾದ ಟೀಸರ್‍ನನ್ನು ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಕುರಿತಂತೆ ಸಿನಿಮಾ ತಯಾಕರು ಯಾವುದೇ ರೀತಿ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

     

    View this post on Instagram

     

    A post shared by Allu Arjun (@alluarjunonline)

  • ಜೀವನದ ಅದ್ಭುತ ಕ್ಷಣವನ್ನು ಹಂಚಿಕೊಂಡ ಸತ್ಯ ಇನ್ ಲವ್ ಬೆಡಗಿ

    ಜೀವನದ ಅದ್ಭುತ ಕ್ಷಣವನ್ನು ಹಂಚಿಕೊಂಡ ಸತ್ಯ ಇನ್ ಲವ್ ಬೆಡಗಿ

    ಮುಂಬೈ: ಸತ್ಯ ಇನ್ ಲವ್ ಚಿತ್ರದ ನಾಯಕಿ, ಬಾಲಿವುಡ್ ನಟಿ ಜೆನಿಲಿಯಾ ಡಿಸೋಜಾ ತಮ್ಮ 9ನೇ ವಿವಾಹ ವಾರ್ಷಿಕೋತ್ಸವವನ್ನು ಬುಧವಾರ ಆಚರಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ರಿತೇಶ್ ದೇಶ್ ಮುಖ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾಲ್ಲಿ ಫುಲ್ ವೈರಲ್ ಆಗುತ್ತಿದೆ.

    ವೀಡಿಯೋ ಹಂಚಿಕೊಂಡಿರುವ ರಿತೇಶ್ ಮ್ಯಾರೇಜ್ ಅನಿವರ್ಸರಿ ಸೆಲೆಬ್ರೆಷನ್‍ನ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸ್ವತಃ ಜೆನಿಲಿಯಾ ಖುದ್ದಾಗಿ ಮಾಡಿದ್ದಾರೆ. ನಮ್ಮ ಅನಿವರ್ಸರಿ ಸೆಲೆಬ್ರೆಷನ್‍ಗೆ ದೆಹಲಿಯಿಂದ ವಿಕ್ರಮ್‍ಜಿತ್ ರಾಯ್ ಬಾಣಸಿಗನಾಗಿ ಆಗಮಿಸಿದ್ದರು ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Riteish Deshmukh (@riteishd)

    ಇದೇ ರೀತಿ ಜೆನಿಲಿಯಾ ಕೂಡ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ನನ್ನ ಜೀವನದ ಅದ್ಭುತ ಕ್ಷಣಗಳನ್ನು ರಿತೇಶ್ ಜೊತೆ ಆಚರಿಸುತ್ತಿದ್ದೇನೆ. ನಮ್ಮ ಈ ಸುಮಧುರವಾದ ದಿನದಂದು ದೆಹಲಿಯಿಂದ ಆಗಮಿಸಿ ನಾವು ಕೇಳಿದ ಎಲ್ಲಾ ವೆಜಿಟೇರಿಯನ್ ಮೆನು ಹಾಗೂ ಸ್ವೀಟ್‍ಗಳನ್ನು ಮಾಡಿಕೊಟ್ಟಿದಕ್ಕೆ ವಿಕ್ರಮ್‍ಜಿತ್ ರಾಯ್‍ರಿಗೆ ಧನ್ಯವಾದ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

     

    View this post on Instagram

     

    A post shared by Genelia Deshmukh (@geneliad)

    ರಿತೇಶ್ ಹಾಗೂ ಜೆನಿಲಿಯಾ 2003ರಲ್ಲಿ ತುಜೆ ಮೆರಿ ಕಸಮ್ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿದ್ದರು. 2012 ರಂದು ಇಬ್ಬರು ವಿವಾಹವಾದರು. ಇದೀಗ ಈ ಜೋಡಿಗೆ ರಿಯಾನ್ ಹಾಗೂ ರಹೈಲ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

     

  • ಮದ್ವೆಯಾದ್ರೆ ಮಾತ್ರ ಲಂಡನ್‍ಗೆ ಕರ್ಕೊಂಡು ಹೋಗು- ಬಿಗ್ ಬಿಗೆ ಆರ್ಡರ್ ಮಾಡಿದ್ದ ತಂದೆ

    ಮದ್ವೆಯಾದ್ರೆ ಮಾತ್ರ ಲಂಡನ್‍ಗೆ ಕರ್ಕೊಂಡು ಹೋಗು- ಬಿಗ್ ಬಿಗೆ ಆರ್ಡರ್ ಮಾಡಿದ್ದ ತಂದೆ

    ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ದಾಂಪತ್ಯಕ್ಕೆ ಇಂದಿಗೆ 47 ವರ್ಷಗಳು. ಇನ್ನು ಮೂರು ವರ್ಷ ಕಳೆದೆ ಸುವರ್ಣ ಮಹೋತ್ಸವವನ್ನು ಈ ದಂಪತಿ ಆಚರಿಸಿಕೊಳ್ಳಲಿದ್ದಾರೆ. 47ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಬಿಗ್ ತಮ್ಮ ಪ್ರೀತಿಯ ಆರಂಭದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅಪರೂಪದ ಘಟನೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಬಿಗ್ ಬಿ ಅವರದ್ದು ಲವ್ ಮ್ಯಾರೇಜ್ ಎಂಬುದು ತಿಳಿದಿರುವ ವಿಚಾರ. ಬಾಲಿವುಡ್‍ನಲ್ಲಿ ಬಿಗ್ ಬಿ ಹಾಗೂ ಜಯಾ ಆದರ್ಶ ದಂಪತಿ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಆ ಮಟ್ಟಕ್ಕೆ ತಮ್ಮ ಪ್ರೀತಿಯನ್ನು ಕಾಪಾಡಿಕೊಂಡಿದ್ದಾರೆ. ಅಂದಹಾಗೆ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಭೇಟಿಯಾಗಿದ್ದು 1970ರಲ್ಲಿ ಪುಣೆಯ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‍ಸ್ಟಿಟ್ಯೂಟ್‍ನಲ್ಲಿ ಆದರೆ ಇದು ಲವ್ ಆ್ಯಟ್ ಫಸ್ಟ್ ಸೈಟ್ ಅಲ್ಲ. ಬದಲಿಗೆ ಮ್ಯಾಗಜಿನ್ ಕವರ್ ಫೋಟೋದಲ್ಲಿ ಅವರನ್ನು ನೋಡಿದ್ದರಂತೆ. ಭೇಟಿಯಾದ ಆರಂಭದಲ್ಲಿ ಇಬ್ಬರೂ ಅಟ್ರ್ಯಾಕ್ಟ್ ಆಗಿದ್ದರಂತೆ. ಆದರೆ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು, 1972ರಲ್ಲಿ ಶುರುವಾದ ಎಕ್ ನಜರ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ.

    ಸ್ವತಃ ಜಯಾ ಬಚ್ಚನ್ ಅವರೇ ತಮ್ಮ ಲವ್ ಸ್ಟೋರಿ ಕುರಿತು ಮಾತನಾಡಿದ್ದು, ಗುಡ್ಡಿ ಸೆಟ್‍ನಲ್ಲಿ ಅವರನ್ನು ಪರಿಚಯ ಮಾಡಿಕೊಂಡಿದ್ದೆ. ನಂತರ ಅವರಿಗೆ ಮಾರುಹೋದೆ. ನಂತರ ಹರಿವನ್ಶಿರಾಯ್ ಬಚ್ಚನ್ ಅವರ ಮಗ ಎಂದು ತಿಳಿಯಿತು. ಅವರು ತುಂಬಾ ವಿಭಿನ್ನವಾಗಿದ್ದಾರೆ ಅನಿಸಿತು. ಇದನ್ನು ಹೇಳಿದಾಗ ಜನ ನನ್ನನ್ನು ನೋಡಿ ನಕ್ಕಿದ್ದರು. ನಾನು ನನ್ನ ಮನದಾಳವನ್ನು ಅವರಿಗೆ ಹೇಳಿದೆ. ನಾನು ಊಹಿಸಿದ್ದಕ್ಕಿಂತಲೂ ದೊಡ್ಡದಾಗಿಯೇ ಮಾಡುತ್ತಾರೆ ಎಂದು ಊಹಿಸಿದರೂ, ಅವರು ಸಾಮಾನ್ಯ ಹೀರೋ ಆಗಿರಲಿಲ್ಲ. ಹೀಗಾಗಿ ಅವರನ್ನು ಶೀಘ್ರದಲ್ಲೇ ಪ್ರೀತಿಸುತ್ತೇನೆ ಅನಿಸಿತು. ನಂತರ ಇಬ್ಬರೂ ಜೊತೆಯಾದೆವು ಎಂದು ಪ್ರೀತಿಯ ಕುರಿತು ವಿವರಿಸಿದ್ದಾರೆ.

    ಬಿಗ್ ಬಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿದ್ದು, ಈ ಮೂಲಕ ಅಭಿಮಾನಿಗಳಿಗೆ ತಮ್ಮ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕೆಲಸ ದಿನಗಳ ಹಿಂದೆ ಜಯಾ ಬಚ್ಚನ್ ಹಾಗೂ ತಮ್ಮ ಕುಟುಂಬದ ಜೊತೆಗೆ ಕಾಲ ಕಳೆದಿದ್ದನ್ನು ವಿಡಿಯೋವನ್ನು ಹಂಚಿಕೊಂಡಿದ್ದರು.

    ಇದೀಗ ಇನ್‍ಸ್ಟಾಗ್ರಾಮ್‍ನಲ್ಲಿ ತಮ್ಮ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಮೂಲಕ ಲಾಕ್‍ಡೌನ್ ಸಮಯದಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ನೆನಪಿಸಿಕೊಂಡಿದ್ದಾರೆ. ಫೋಟೋಗಳಿಗೆ ಸಾಲುಗಳನ್ನು ಬರೆದಿರುವ ಅವರು, ಇಂದಿಗೆ 47 ವರ್ಷಗಳಾಯಿತು, ಜೂನ್ 3, 1973ರಲ್ಲಿ ನಾವು ವಿವಾಹವಾದೆವು. ಇದಕ್ಕೂ ಮೊದಲು ನಾವು ಕೆಲ ಸ್ನೇಹಿತರೊಂದಿಗೆ ಮೊದಲ ಬಾರಿಗೆ ಲಂಡನ್‍ಗೆ ಹೋಗಲು ನಮ್ಮ ತಂದೆಯ ಬಳಿ ಕೇಳಿದೆವು. ಆಗ ನಮ್ಮ ತಂದೆ ಯಾರೊಂದಿಗೆ ಹೋಗುತ್ತಿದ್ದೀಯಾ ಎಂದು ಕೇಳಿದ್ದರು. ಯಾರೆಂದು ಹೇಳಿದಾಗ ಅವರು, ನೀನು ಅಲ್ಲಿಗೆ ಹೋಗುವುದಕ್ಕೂ ಮೊದಲು ಅವಳನ್ನು ವಿವಾಹವಾಗು. ಅಲ್ಲಿಯವರೆಗೆ ನೀನು ಎಲ್ಲಿಗೂ ಹೋಗುವಂತಿಲ್ಲ ಎಂದಿದ್ದರು. ನನ್ನ ತಂದೆಯ ಆಜ್ಞೆಯನ್ನು ಪಾಲಿಸಿದೆ ಎಂದಿದ್ದಾರೆ. ಅಲ್ಲದೆ ಅದೇ ದಿನ ವಿವಾಹವಾಗಿ ಅಂದೇ ಜೊತೆಯಾಗಿ ಇಬ್ಬರೂ ಲಂಡನ್‍ಗೆ ಹೋಗಿದ್ದರಂತೆ.

    ಅಮಿತಾಬ್ ಬಚ್ಚನ್ ಅವರು ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿದೆ.

  • ತಾತ-ಅಜ್ಜಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ ನಿಖಿಲ್

    ತಾತ-ಅಜ್ಜಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ ನಿಖಿಲ್

    ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ದಂಪತಿ ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

    ಎಚ್.ಡಿ.ದೇವೇಗೌಡರು ಮತ್ತು ಪತ್ನಿ ಚೆನ್ನಮ್ಮ ದಂಪತಿ ತಮ್ಮ 66ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸೋಶಿಯಲ್ ಮೀಡಿಯಾದ ಮೂಲಕ ತಾತಾ-ಅಜ್ಜಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯನ್ನು ಕೋರಿದ್ದಾರೆ.

    “ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 66 ವಸಂತಗಳನ್ನು ಪೂರೈಸಿರುವ ನಾಡಿನ ಆದರ್ಶ ದಂಪತಿಗಳಾಗಿರುವ ಪ್ರೀತಿಯ ತಾತ ಎಚ್.ಡಿ.ದೇವೇಗೌಡರು ಹಾಗೂ ಅಜ್ಜಿ ಚೆನ್ಮಮ್ಮ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು” ಎಂದು ನಿಖಿಲ್ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ. ಜೊತೆಗೆ ತಾತ-ಅಜ್ಜಿಯ ಫೋಟೋವನ್ನು ಶೇರ್ ಮಾಡಿದ್ದಾರೆ.

    ಎಚ್.ಡಿ.ದೇವೇಗೌಡರು 1954 ರಲ್ಲಿ ಚೆನ್ನಮ್ಮರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ನಾಲ್ವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ಲಾಕ್‍ಡೌನ್ ನಡುವೆಯೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಏಪ್ರಿಲ್ 17 ರಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಮನಗರ ತಾಲೂಕಿನ ಕೇತಗಾನಹಳ್ಳಿಯಲ್ಲಿನ ಎಚ್‍.ಡಿ ಕುಮಾರಸ್ವಾಮಿ ಫಾರ್ಮ್ ಹೌಸ್‍ನಲ್ಲಿ ನಟ ನಿಖಿಲ್, ರೇವತಿ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಿಖಿಲ್ ಹಾಗೂ ರೇವತಿ ಮದುವೆಯಲ್ಲಿ ಎರಡು ಕುಟುಂಬದವರ ಮತ್ತು ಆಪ್ತರಷ್ಟೆ ಭಾಗಿಯಾಗಿದ್ದರು.

  • ದರ್ಶನ್ ದಂಪತಿಗೆ 17ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ದರ್ಶನ್ ದಂಪತಿಗೆ 17ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಗೆ ಮೇ 19 ಮಹತ್ವದ ದಿನವಾಗಿದ್ದು, ಈ ವಿಶೇಷ ದಿನವನ್ನು ಸಂಭ್ರಮದಿಂದ ಆಚರಿಸಬೇಕಿತ್ತು. ಆದರೆ ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಕಾಲ ಕಳೆಯುವಂತಾಗಿದೆ.

    ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿಗೆ ಇಂದು ಮರೆಯಲಾಗದ ದಿನ. ಸ್ಯಾಂಡಲ್‍ವುಡ್‍ನ ಈ ಜೋಡಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಲ್ಲದೆ ಡಿ ಬಾಸ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರುತ್ತಿದ್ದು, ಈ ಮೂಲಕ ದೂರದಿಂದಲೇ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ಡಿ ಬಾಸ್ ಹಾಗೂ ವಿಜಯಲಕ್ಷ್ಮಿ ದಂಪತಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ 17 ವರ್ಷಗಳಾಗಿದ್ದು, ಇಂದು 17ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2003ರಲ್ಲಿ ಈ ದಂಪತಿ ಹಸೆಮಣೆ ಏರಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 17 ವರ್ಷಗಳಾಗಿವೆ. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

    ಡಿ ಬಾಸ್ ಹಾಗೂ ವಿಜಯಲಕ್ಷ್ಮಿಯವರ ವಿವಾಹ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಮಂಜುನಾಥ ಸ್ವಾಮಿಯ ದೇವಸ್ಥಾನದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಸಿನಿ ತಾರೆಯರ ಸಮ್ಮುಖದಲ್ಲಿ ನಡೆದಿತ್ತು. ಪುತ್ರ ವಿನೀಶ್ ಸಹ ದರ್ಶನ್ ಅಭಿನಯದ ಐರಾವತ ಹಾಗೂ ಯಜಮಾನ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಹೊರಗಡೆ ಸುತ್ತಾಟ ನಡೆಸಿದ್ದ, ಡಿ ಬಾಸ್ ದಂಪತಿ ಪಾರ್ಕ್ ನಲ್ಲಿ ಕಾಣಿಸಿಕೊಂಡಿದ್ದರು, ಇದನ್ನು ಅವರ ಅಭಿಮಾನಿ ವಿಡಿಯೋ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.

    ಸ್ನೇಹಿತರು, ಕುಟುಂಬಸ್ಥರು ಸಹ ದರ್ಶನ್ ದಂಪತಿಗೆ ಕರೆ ಹಾಗೂ ಮೆಸೇಜ್‍ಗಳ ಮೂಲಕ ಹಾರೈಸುತ್ತಿದ್ದಾರೆ. ಅಲ್ಲದೆ ತಮ್ಮ ನೆಚ್ಚಿನ ನಟನ ವಿವಾಹ ವಾರ್ಷಿಕೋತ್ಸವಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲೇ ಶುಭ ಕೋರುತ್ತಿದ್ದು, ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಹಾಗೂ ಫೇಸ್‍ಬುಕ್‍ಗಳಲ್ಲಿ ಪೋಸ್ಟ್ ಹಾಕುವ ಮೂಲಕ ಶುಭಾಶಯ ತಿಳಿಸಿದ್ದಾರೆ.

  • ತಂದೆ-ತಾಯಿ ವಿವಾಹ ವಾರ್ಷಿಕೋತ್ಸವಕ್ಕೆ ಕಿಚ್ಚನ ಭಾವನಾತ್ಮಕ ಸಾಲು

    ತಂದೆ-ತಾಯಿ ವಿವಾಹ ವಾರ್ಷಿಕೋತ್ಸವಕ್ಕೆ ಕಿಚ್ಚನ ಭಾವನಾತ್ಮಕ ಸಾಲು

    ಬೆಂಗಳೂರು: ಲಾಕ್‍ಡೌನ್ ಸಮಯದಲ್ಲಿ ಎಲ್ಲ ನಟ, ನಟಿಯರು ಮನೆಯಲ್ಲೇ ಕಾಲ ಕಳೆಯುತ್ತಿದ್ದು, ಕುಟುಂಬದೊಂದಿಗೆ ಸಂತಸ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಕಿಚ್ಚ ಸುದೀಪ್ ತಮ್ಮ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದು, ತಂದೆ ತಾಯಿಯ ವಿವಾಹ ವಾರ್ಷಿಕೋತ್ಸಕ್ಕೆ ಶುಭ ಕೋರಿದ್ದು, ಭಾವನಾತ್ಮಕ ಸಾಲುಗಳ ಮೂಲಕ ಟ್ವೀಟ್ ಮಾಡಿದ್ದಾರೆ.

    ಅವರು ನನ್ನನ್ನು ರೂಪಿಸಿದವರು, ಬೆಳೆಸಿದವರು, ಬಿಗಿಗೊಳಿಸಿದವರು, ಅಂದವಾಗಿಸಿದವರು. ಇಷ್ಟು ಮಾತ್ರವಲ್ಲ ನನ್ನನ್ನು ಆಶೀರ್ವದಿಸಿ, ನನಗಾಗಿ ಪ್ರಾರ್ಥಿಸುವವರು. ಅಮ್ಮ-ಅಪ್ಪ 54 ವರ್ಷಗಳ ನಿಮ್ಮ ಒಗ್ಗಟ್ಟಿನ ಜೀವನಕ್ಕೆ ಶುಭಾಶಯ. ನೀವು ಇನ್ನೂ ಹಲವು ವರ್ಷಗಳ ಕಾಲ ನಮ್ಮೊಂದಿಗೆ ಇರಬೇಕಿದೆ. ಲವ್ ಯು ಬೋತ್ ಫಾರ್‍ಎವರ್ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಭಾವನಾತ್ಮಕವಾಗಿ ತಂದೆ, ತಾಯಿಯನ್ನು ನೆನೆದಿದ್ದಾರೆ.

    ಮನೆಯಲ್ಲೇ ಕಾಲ ಕಳೆಯುತ್ತಿರುವ ಕಿಚ್ಚ ಸುದೀಪ್, ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುತ್ತಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಅವರ ಅಭಿಮಾನಿಗಳು ಮಾಡುವ ಸಹಾಯದ ಕುರಿತು ಪ್ರತಿಕ್ರಿಯಿಸುತ್ತಿರುತ್ತಾರೆ. ಅಲ್ಲದೆ ಹಲವು ಅಭಿಮಾನಿಗಳ ಪ್ರಶ್ನೆಗೆಗಳಿಗೆ ಉತ್ತರಿಸುತ್ತಿದ್ದಾರೆ. ಹೀಗೆ ಲಾಕ್‍ಡೌನ್ ಸಮಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.

    ಕೋಟಿಗೊಬ್ಬ-3 ಸಿನಿಮಾದಲ್ಲಿ ಕಿಚ್ಚ ಸುದೀಪ್ ಬ್ಯುಸಿಯಾಗಿದ್ದು, ಸಿನಿಮಾ ಅಂತಿಮ ಹಂತ ತಲುಪಿದೆ. ಇನ್ನೇನು ಬಿಡುಗಡೆಯಾಗಲಿದೆ ಎನ್ನುವಷ್ಟರಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಸಿನಿಮಾ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಚಿತ್ರವನ್ನು ಶಿವ ಕಾರ್ತಿಕ್ ನಿರ್ದೇಶಿಸುತ್ತಿದ್ದು, ಕಿಚ್ಚನಿಗೆ ಜೋಡಿಯಾಗಿ ಮೆಡೋನ್ನ ಸೆಬಾಸ್ಟಿಯನ್ ನಟಿಸುತ್ತಿದ್ದಾರೆ. ಶ್ರದ್ಧಾ ದಾಸ್ ಇಂಟರ್‍ಪೋಲ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಹಾಗೂ ಎಂ.ಬಿ ಬಾಬು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

  • ನಮ್ಮದು ಅರೇಂಜ್ಡ್ ಮ್ಯಾರೆಜೋ, ಪ್ರೇಮ ವಿವಾಹವೋ?: ಪ್ರಶಾಂತ್ ನೀಲ್

    ನಮ್ಮದು ಅರೇಂಜ್ಡ್ ಮ್ಯಾರೆಜೋ, ಪ್ರೇಮ ವಿವಾಹವೋ?: ಪ್ರಶಾಂತ್ ನೀಲ್

    – ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ದಂಪತಿ

    ಬೆಂಗಳೂರು: ಇಡೀ ಭಾರತವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ‘ಕೆಜಿಎಫ್’ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಇಂದು ತಮ್ಮ ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

    ಪ್ರಶಾಂತ್ ನೀಲ್ ಅವರು ಪತ್ನಿ ಲಿಖಿತಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ (ಮೇ 5) ಒಂಬತ್ತು ವರ್ಷವಾಗಿದೆ. ಹೀಗಾಗಿ ಇಂದು ತಮ್ಮ 9ನೇ ವಿವಾಹ ವಾರ್ಷಿಕೋತ್ಸದ ಸಂಭ್ರಮದಲ್ಲಿದ್ದಾರೆ. ತಮ್ಮ ವಿವಾಹ ವಾರ್ಷಿಕೋತ್ಸವದ ಖುಷಿಯನ್ನು ಪ್ರಶಾಂತ್ ನೀಲ್ ಅವರು ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ.

    ಪ್ರಶಾಂತ್ ನೀಲ್ ಅವರು ಇನ್‍ಸ್ಟಾಗ್ರಾಂನಲ್ಲಿ ತಮ್ಮ ಪತ್ನಿ ಜೊತೆಗೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ತಮ್ಮ ಪತ್ನಿ ತೋರಿಸುತ್ತಿರುವ ಕಾಳಜಿಯನ್ನು ಹೇಳಿಕೊಂಡಿದ್ದಾರೆ. ಅಲ್ಲದೇ ತಮ್ಮ ಮೊದಲ ಭೇಟಿಯ ನೆನಪನ್ನು ಒಂದು ಸಾಲಿನಲ್ಲಿ ಹಂಚಿಕೊಳ್ಳುವ ಮೂಲಕ, ತಮ್ಮ ಮದುವೆ ಯಾವ ರೀತಿಯದ್ದು ಎಂದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದಾರೆ.

    “ನಮ್ಮ ಬದುಕು ಆರಂಭವಾಗಿ 9 ವರ್ಷಗಳಾಗಿವೆ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನಾನಾ ಎಂದು ಪತ್ನಿಗೆ ಪ್ರಶಾಂತ್ ನೀಲ್ ಶುಭ ಹಾರೈಸಿದ್ದಾರೆ. ಪ್ರಶಾಂತ್ ನೀಲ್ ತಮ್ಮ ಪತ್ನಿಯನ್ನು ‘ನಾನಾ’ ಪ್ರೀತಿಯಿಂದ ಕರೆಯುತ್ತಾರೆ. ನಾವು ಮೊದಲ ಬಾರಿ ಭೇಟಿಯಾದ ಸಂದರ್ಭದಲ್ಲಿ ಮಾಡಿದಂತೆಯೇ ಈಗಲೂ ನನ್ನ ಕೂದಲು ಸೆಟ್ ಮಾಡುವುದನ್ನು, ಕಾಳಜಿ ಮಾಡುವುದನ್ನು ಮಾಡುತ್ತೀಯ ” ಎಂದು ಪತ್ನಿಯ ಬಗ್ಗೆ ಮಾತನಾಡಿದ್ದಾರೆ.

    https://www.instagram.com/p/B_ywBPogcu3/?utm_source=ig_web_copy_link

    “ನಮ್ಮಿಬ್ಬರದು ಅರೇಂಜ್ಡ್ ಮ್ಯಾರೆಜೋ ಅಥವಾ ಪ್ರೇಮ ವಿವಾಹವೋ ಎಂಬ ನಮ್ಮ ವಾದವನ್ನು ಮುಂದುವರಿಸೋಣ. ಯಾಕೆಂದರೆ ನಮ್ಮ ಮದುವೆ ಬಗ್ಗೆ ನನಗೆ ಇನ್ನೂ ಸ್ಪಷ್ಟವಾಗಿಲ್ಲ. ಅನೇಕ ಹುಚ್ಚು ನೆನಪುಗಳು ಮತ್ತು ಜಗಳಗಳಿವೆ. ಹೀಗಾಗಿ ನಮ್ಮ ನೀಲ್‍ಗ್ಯಾಂಗ್ ಅನ್ನು ಕಟ್ಟುವ ಕೆಲಸವನ್ನು ಮುಂದುವರಿಸೋಣ” ಎಂದು ಬರೆದುಕೊಂಡಿದ್ದಾರೆ.

    ಈ ಮೂಲಕ ಪ್ರಶಾಂತ್ ನೀಲ್ ತಮ್ಮ ಮದುವೆ ಅರೇಂಜ್ಡ್ ಮ್ಯಾರೆಜೋ ಅಥವಾ ಲವ್ ಮ್ಯಾರೆಜೋ ಎಂಬ ಗೊಂದಲವನ್ನು ಅಭಿಮಾನಿಗಳಲ್ಲಿ ಮೂಡಿಸಿದ್ದಾರೆ. ಸದ್ಯಕ್ಕೆ ಪ್ರಶಾಂತ್ ನೀಲ್ ಲಾಕ್‍ಡೌನ್ ಅವಧಿಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ.

  • ಪ್ರೇಮಿಗಳ ದಿನದಂದೇ ಪ್ರೇಮಲೋಕದ ಕನಸುಗಾರನ ವಿವಾಹ ವಾರ್ಷಿಕೋತ್ಸವ

    ಪ್ರೇಮಿಗಳ ದಿನದಂದೇ ಪ್ರೇಮಲೋಕದ ಕನಸುಗಾರನ ವಿವಾಹ ವಾರ್ಷಿಕೋತ್ಸವ

    ಬೆಂಗಳೂರು: ಚಂದನವನದ ಪ್ರೇಮಲೋಕದ ಕನಸುಗಾರ ಡಾ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇಂದು ತಮ್ಮ 33ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ.

    ರವಿಚಂದ್ರನ್ ಅವರ ವಿವಾಹ ವಾರ್ಷಿಕೋತ್ಸವದ ಇನ್ನೊಂದು ವಿಶೇಷವೆನೆಂದರೆ, ಪ್ರೀತಿ ಪ್ರೇಮ ಎಂಬ ಪದಕ್ಕೆ ಸಮಾನದ ಅವರ ಮದುವೆ ಪ್ರೇಮಿಗಳ ದಿನದೊಂದು ನೇರವೇರಿದೆ. ಹೌದು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು, 1986 ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಮದುವೆಯಾಗಿದ್ದಾರೆ.

    ನಿರ್ದೇಶಕ ಎನ್ ವೀರಸ್ವಾಮಿ ಪುತ್ರನಾಗಿ 1961 ಮೇ 30ರಂದು ಜನಿಸಿದ ವೀರಸ್ವಾಮಿ ರವಿಚಂದ್ರನ್ ಅವರು, 1986 ಫೆಬ್ರವರಿ 14 ರಂದು ಆರ್ ಸುಮತಿ ಅವರನ್ನು ವಿವಾಹವಾದರು. ಈ ದಂಪತಿ ವಿವಾಹವಾಗಿ ಇಂದಿಗೆ 33 ವರ್ಷಗಳಾಗಿವೆ. ನಟ, ನಿರ್ದೇಶಕ ನಿರ್ಮಾಪಕನಾಗಿ ಮಿಂಚಿದ್ದ ರವಿಚಂದ್ರನ್ ಅವರು ಒಳ್ಳೆಯ ಪತಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಈ ದಂಪತಿಗೆ ವಿಕ್ರಂ, ಮನೋರಂಜನ್ ಮತ್ತು ಗೀತಾಂಜಲಿ ಮೂವರು ಮಕ್ಕಳಿದ್ದಾರೆ.

    ರವಿಚಂದ್ರನ್ ಅವರ ಗಂಡು ಮಕ್ಕಳಿಬ್ಬರು ಅಪ್ಪನ ಹಾಗೇ ಸಿನಿಮಾದಲ್ಲಿ ಗುರುತಿಸಿಕೊಂಡಿದ್ದು, ಕಳೆದ ವರ್ಷವಷ್ಟೇ ಮಗಳು ಗೀತಾಂಜಲಿಯನ್ನು ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ಕಳೆದ ವರ್ಷ ಮೇ ತಿಂಗಳ 29 ರಂದು ಮಗಳು ಗೀತಾಂಜಲಿಯನ್ನು ಉದ್ಯಮಿ ಅಜಯ್ ಅವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ರವಿಚಂದ್ರನ್ ಅವರು ತಮ್ಮ ಸಿನಿಮಾಗಳಂತೆ ಮಗಳು ಮದುವೆಯನ್ನು ಸಖತ್ ಅದ್ಧೂರಿಯಾಗಿ ಮತ್ತು ವಿಶಿಷ್ಟವಾಗಿ ಮಾಡಿದ್ದರು.

    ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಶುಭಕೋರಿರುವ ಮಗ ಮನೋರಂಜನ್, ನಮ್ಮ ಜೀವನದ ಏಳು ಬೀಳಿನಲ್ಲಿ ನೀವು ಜೊತೆಗೆ ಇದ್ದೀರಿ. ನೀವು ನಮಗೆ ಪ್ರೀತಿ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದೀರಾ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ರವಿಂಚದ್ರನ್ ಅವರು, ರವಿ ಬೋಪಣ್ಣ, ರವಿಚಂದ್ರ, ರಾಜೇಂದ್ರ ಪೊನ್ನಪ್ಪ ಎಂಬ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳ ವಿಶೇಷವೆನೆಂದರೆ ರವಿ ಬೋಪಣ್ಣ ಹಾಗೂ ರಾಜೇಂದ್ರ ಪೊನ್ನಪ್ಪ ಈ ಎರಡು ಸಿನಿಮಾಗಳನ್ನು ಸ್ವತಃ ರವಿಚಂದ್ರನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ.

    https://www.instagram.com/p/B8iE7FOgBDT/