Tag: Wedding Anniversary

  • 25ನೇ ವೆಡ್ಡಿಂಗ್‌ ಆನಿವರ್ಸರಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು ಬಿದ್ದು ಹೃದಯಾಘಾತದಿಂದ ಸಾವು

    25ನೇ ವೆಡ್ಡಿಂಗ್‌ ಆನಿವರ್ಸರಿಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು ಬಿದ್ದು ಹೃದಯಾಘಾತದಿಂದ ಸಾವು

    ಲಕ್ನೋ: 25ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದ ವೇದಿಕೆಯಲ್ಲಿ ಕುಣಿಯುತ್ತಿದ್ದ ಪತಿ ಹೃದಯಾಘಾತದಿಂದ(Heartattack) ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ(Uttara Pradesh) ಬರೇಲಿಯಲ್ಲಿ ನಡೆದಿದೆ.

    ಶೂ ವ್ಯಾಪಾರಿ ವಾಸಿಮ್ ಸರ್ವತ್ (50) ಮೃತ ದುರ್ದೈವಿ. ಮೃತ ವಾಸಿಮ್ ಅವರು ಪತ್ನಿ ಫರಾ ಜೊತೆ ಬೆಳ್ಳಿ ಮಹೋತ್ಸವದ ಸಲುವಾಗಿ ಆಯೋಜಿಸಿದ್ದ ಪಾರ್ಟಿಯಲ್ಲಿ ನೃತ್ಯ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಇದನ್ನೂ ಓದಿ: ಸಂಜನಾ ಗಲ್ರಾನಿ ಮತ್ತೆ ಗರ್ಭಿಣಿ – 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ

    ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಾಸಿಮ್ ಅವರು ವೇದಿಕೆಯಲ್ಲಿ ಪತ್ನಿಯೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಈ ವೇಳೆ ವಾಸಿಮ್ ಏಕಾಏಕಿ ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಇದನ್ನೂ ಓದಿ: ನಾನಿನ್ನೂ ಸಿಂಗಲ್‌, ಮದ್ವೆಯಾಗಲು ನಾನು ಬಯಸುವವರ ಜೊತೆ ಮಾತ್ರ ಡೇಟಿಂಗ್‌ – ಚಹಲ್‌ ಜೊತೆ ಕಾಣಿಸಿಕೊಂಡ ಬ್ಯೂಟಿ ಸ್ಪಷ್ಟನೆ

  • 26ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡ ಬಳಿಕ ದಂಪತಿ ಆತ್ಮಹತ್ಯೆ

    26ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಂಡ ಬಳಿಕ ದಂಪತಿ ಆತ್ಮಹತ್ಯೆ

    ಮುಂಬೈ: 26ನೇ ವಿವಾಹ ವಾರ್ಷಿಕೋತ್ಸವವನ್ನು (Wedding Anniversary) ಸ್ನೇಹಿತರು, ಕುಟುಂಬದವರೊಂದಿಗೆ ಸಂಭ್ರಮದಿಂದ ಆಚರಿಸಿದ್ದ ದಂಪತಿ ಬಳಿಕ ನೇಣಿಗೆ ಶರಣಾದ ಘಟನೆ ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ (Nagpur) ನಡೆದಿದೆ.

    ಜೆರಿಲ್ ಡ್ಯಾಮ್ಸನ್ ಆಸ್ಕರ್ ಮಾನ್‌ಕ್ರಿಫ್ (57) ಹಾಗೂ ಪತ್ನಿ ಅನ್ನಿ (46) ಮಂಗಳವಾರ ರಾತ್ರಿ ಎಲ್ಲರೊಡಗೂಡಿ ತಮ್ಮ 26ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿದ್ದರು. ಬಳಿಕ ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಮೊದಲು ಪತ್ನಿ ನೇಣಿಗೆ ಶರಣಾಗಿದ್ದು, ಆಕೆಯ ಮೃತದೇಹಕ್ಕೆ ಮದುವೆಯಲ್ಲಿ ಧರಿಸಿದ್ದ ಬಟ್ಟೆಗಳನ್ನು ಹಾಕಿ ಪತಿ ಆಕೆಯನ್ನು ಅಲಂಕರಿಸಿದ್ದಾನೆ. ಕೊನೆಗೆ ತಾನೂ ಮದುವೆಗೆ ಧರಿಸಿದ್ದ ಬಟ್ಟೆಗಳನ್ನು ಹಾಕಿಕೊಂಡು ನೇಣಿಗೆ ಶರಣಾಗಿದ್ದಾನೆ. ಇದನ್ನೂ ಓದಿ: ಮದ್ಯಪ್ರಿಯರಿಗೆ ಬಿಗ್ ಶಾಕ್ – ಬಜೆಟ್‌ಗೆ ಮೊದಲೇ ದರ ಏರಿಕೆ!

    ಜೆರಿಲ್ ಹಾಗೂ ಅನ್ನಿಗೆ ಮಕ್ಕಳಾಗಿರಲಿಲ್ಲ. ಆತ್ಮಹತ್ಯೆಗೆ ಶರಣಾಗುವ ಮೊದಲು ದಂಪತಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೇ ನಮ್ಮ ಸಾವಿಗೆ ನಾವೇ ಕಾರಣ ಎಂದು ತಿಳಿಸಿದ್ದರು. ಇಷ್ಟು ಮಾತ್ರವಲ್ಲದೇ ತಮ್ಮ ಎಲ್ಲಾ ಆಸ್ತಿಯನ್ನು ಕುಟುಂಬಸ್ಥರು ಹಂಚಿಕೊಳ್ಳುವಂತೆ ಮಾನವಿ ಮಾಡಿದ್ದರು. ಇದನ್ನೂ ಓದಿ: ಆರೋಗ್ಯಕರ ಮಗುವಿಗೆ ಜನ್ಮ ನೀಡುವ 25 ವರ್ಷದೊಳಗಿನ ಯುವತಿಯರಿಗೆ ಬಂಪರ್‌ ಬಹುಮಾನ!

    ತಮ್ಮ ಸಾವಿನ ಬಳಿಕ ಒಂದೇ ಶವಪೆಟ್ಟಿಗೆಯಲ್ಲಿ ಕೈ-ಕೈ ಹಿಡಿದಿರುವಂತೆ ಅಂತಿಮ ಸಂಸ್ಕಾರ ಮಾಡಬೇಕು ಎಂದು ದಂಪತಿ ಆಸೆ ವ್ಯಕ್ತಪಡಿಸಿದ್ದರು. ಇವರ ಕೊನೆಯ ಆಸೆಯಂತೆ ಒಂದೇ ಶವಪೆಟ್ಟಿಗೆಯಲ್ಲಿ ಇವರಿಬ್ಬರ ಮೃತದೇಹ ಇರಿಸಿ ಅಂತ್ಯಸಂಸ್ಕಾರ ಮಾಡಲಾಗಿದೆ. ಇದನ್ನೂ ಓದಿ: ಡಿನ್ನರ್‌ಗೆ ಬ್ರೇಕ್‌, ಕಾಂಗ್ರೆಸ್‌ ಭಿನ್ನಮತ ತಾರಕಕ್ಕೆ – ಸಿಎಲ್‌ಪಿಯಲ್ಲಿ ಶಕ್ತಿ ಪ್ರದರ್ಶನ?

  • ವಿವಾಹ ವಾರ್ಷಿಕೋತ್ಸವದಂದೇ ಅಪ್ಪ-ಅಮ್ಮ, ಸಹೋದರಿ ಸಾವು – ಕೊಲೆ ಸಂಶಯ

    ವಿವಾಹ ವಾರ್ಷಿಕೋತ್ಸವದಂದೇ ಅಪ್ಪ-ಅಮ್ಮ, ಸಹೋದರಿ ಸಾವು – ಕೊಲೆ ಸಂಶಯ

    ನವದೆಹಲಿ: ವಿವಾಹ ವಾರ್ಷಿಕೋತ್ಸವದಂದೇ (Wedding Anniversary) ಅಪ್ಪ-ಅಮ್ಮ ಹಾಗೂ ಸಹೋದರಿ ಸಾವನ್ನಪ್ಪಿರುವ ಘಟನೆ ದಕ್ಷಿಣ ದೆಹಲಿಯಲ್ಲಿ (South Delhi) ಬುಧವಾರ ನಡೆದಿದೆ.

    ರಾಜೇಶ್ ಕುಮಾರ್ (51), ಪತ್ನಿ ಕೋಮಲ್ (46) ಮತ್ತು ಪುತ್ರಿ ಕವಿತಾ (23) ಮೃತರು.‌ ಅಪ್ಪ-ಅಮ್ಮನಿಗೆ ವಾರ್ಷಿಕೋತ್ಸವದ ಶುಭಾಶಯ ಹೇಳಿ ವಾಕಿಂಗ್‌ಗೆ ಹೊರಟಿದ್ದೆ. ಮನೆಗೆ ವಾಪಸ್‌ ಬರುವಷ್ಟರಲ್ಲಿ ಮೂವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಅವರ ಮಗ ಅರ್ಜುನ್‌ ತಿಳಿಸಿದ್ದಾನೆ. ದೇಹದ ಮೇಲೆ ಇರಿತದ ಗಾಯದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ತಟಸ್ಥ ನಿಲುವಿನ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಕುಟುಂಬದ ಮೇಲೆ ಆಕ್ರೋಶ ಇದೆ: ಯತ್ನಾಳ್

    ಪೊಲೀಸರ ಮಾಹಿತಿ ಪ್ರಕಾರ, ಮನೆಯಲ್ಲಿ ದರೋಡೆ ನಡೆದಿಲ್ಲ, ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ದೊಡ್ಡ ಸದ್ದು ಕೇಳಿಸಿದ ತಕ್ಷಣ ನೆರೆಯವರು ಮನೆಗೆ ಧಾವಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಜಯೇಂದ್ರ ಗುಂಪುಗಾರಿಕೆ ಮಾಡುತ್ತಿದ್ದಾರೆ, ಪಕ್ಷದ ಚೌಕಟ್ಟಿನಲ್ಲಿ ಮಾತನಾಡಿದ್ದೇನೆ: ಯತ್ನಾಳ್‌ ಚಾರ್ಜ್‌

    ಕೊಲೆಯಾಗಿರುವ ಬಗ್ಗೆ ಸಂಶಯ:
    ಇಂದು ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವ ಇತ್ತು. ಅವರಿಗೆ ಶುಭಹಾರೈಸಿ ನಾನು ಬೆಳಗ್ಗೆ ವಾಕಿಂಗ್‌ಗೆ ಹೋಗಿದ್ದೆ, ಬಂದು ನೋಡಿದಾಗ ಶವವಾಗಿ ಬಿದ್ದಿದ್ದರು. ಮೂವರ ಮೈಮೇಲೆ ಇರಿತದ ಗುರುತುಗಳಿದ್ದವು, ಎಲ್ಲೆಡೆ ರಕ್ತ ಚಿಮ್ಮಿತ್ತು ಎಂದು ಮಗ ಅರ್ಜುನ್‌ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಅಪರಾಧ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ದೇವೇಂದ್ರ ಫಡ್ನವೀಸ್ `ಮಹಾ’ ಸಿಎಂ – ಫಡ್ನವಿಸ್‌ ರಾಜಕೀಯ ಪಥ ಹೇಗಿದೆ? 

  • ಶೂಟಿಂಗ್ ಸ್ಪಾಟ್ ನಲ್ಲೇ ಮದುವೆ ವಾರ್ಷಿಕೋತ್ಸವ ಆಚರಿಸಿದ ಚಂದನ್

    ಶೂಟಿಂಗ್ ಸ್ಪಾಟ್ ನಲ್ಲೇ ಮದುವೆ ವಾರ್ಷಿಕೋತ್ಸವ ಆಚರಿಸಿದ ಚಂದನ್

    ದುವೆ ವಾರ್ಷಿಕೋತ್ಸವವನ್ನು (Wedding Anniversary) ಈ ಬಾರಿ ಶೂಟಿಂಗ್ ಸ್ಪಾಟ್ ನಲ್ಲಿ ಆಚರಿಸಿಕೊಂಡಿದ್ದಾರೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ದಂಪತಿ. ಈ ಜೋಡಿ ಇದೇ ಮೊದಲಬಾರಿಗೆ ಬೆಳ್ಳಿತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಕ್ಯಾಂಡಿ ಕ್ರಶ್ ಎಂದು ಹೆಸರಿಡಲಾಗಿದೆ.

    ಸೈಕೋಥ್ರಿಲ್ಲರ್ ಕಥಾಹಂದರ ಹೊಂದಿರುವ ಆ ಚಿತ್ರಕ್ಕೆ ಪುನೀತ್ ಶ್ರೀನಿವಾಸ್ (Puneeth Srinivas) ಅವರು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪುನೀತ್ ಶ್ರೀನಿವಾಸ್ ಕನ್ನಡ  ಚಿತ್ರರಂಗಕ್ಕೆ ಹೊಸಬರೇನಲ್ಲ, ಶಿವಣ್ಣ, ಸುದೀಪ್ ರಂಥ  ಸ್ಟಾರ್ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ  ನಂದಕಿಶೋರ್ ಅವರಬಳಿ ಅಧ್ಯಕ್ಷದಿಂದ ಟಗರು ಚಿತ್ರದವರೆಗೆ (ತೆಲುಗು ಸಿನಿಮಾ ಸೇರಿ) ಸುಮಾರು  12 ವರ್ಷಗಳ ಕಾಲ ಕೆಲಸ ಮಾಡಿ ನಿರ್ದೇಶನದ ಪಾಠ ಕಲಿತು ಇದೀಗ ಮೊದಲಬಾರಿಗೆ  ನಿರ್ದೇಶನಕ್ಕಿಳಿದಿದ್ದಾರೆ.

    ಅವರು ತಮ್ಮ  ಪ್ರಥಮ ಪ್ರಯತ್ನದಲ್ಲೇ ವಿಭಿನ್ನ ಕಾನ್ಸೆಪ್ಟ್ ಮೂಲಕ ತಮ್ಮ ಹೊಸ ಜರ್ನಿಯನ್ನು  ಆರಂಭಿಸಿದ್ದು, ಶ್ರೀ ಚೌಡೇಶ್ಬರಿ ಸಿನಿ ಕ್ರಿಯೇಶನ್ಸ್ ಮೂಲಕ ಎಲ್.ಮೋಹನ್ ಕುಮಾರ್ ಅವರು ದೊಡ್ಡ ಮಟ್ಟದ ಬಂಡವಾಳ ಹೂಡಿದ್ದಾರೆ.

     

    ಎಂ.ಎಸ್.ತ್ಯಾಗರಾಜ್ ಅವರ ಸಂಗೀತ ಸಂಯೋಜನೆ, ಕರುಣಾಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸದ್ಯ ರೊಮ್ಯಾಂಟಿಕ್ ಗೀತೆಯೊಂದರ ಶೂಟ್ ಮಾಡುತ್ತಿದ್ದಾರೆ ನಿರ್ದೇಶಕರು.

  • ವಿವಾಹ ವಾರ್ಷಿಕೋತ್ಸವ: ಭಾವುಕ ಸಾಲುಗಳ ಬರೆದು ಪತ್ನಿಗೆ ವಿಶ್ ಮಾಡಿದ ವಿಜಯ ರಾಘವೇಂದ್ರ

    ವಿವಾಹ ವಾರ್ಷಿಕೋತ್ಸವ: ಭಾವುಕ ಸಾಲುಗಳ ಬರೆದು ಪತ್ನಿಗೆ ವಿಶ್ ಮಾಡಿದ ವಿಜಯ ರಾಘವೇಂದ್ರ

    ಇಂದು ನಟ ವಿಜಯ ರಾಘವೇಂದ್ರ (Vijaya Raghavendra) ಮತ್ತು ಸ್ಪಂದನಾ (Spandana) ಅವರ 16ನೇ ವಿವಾಹ ವಾರ್ಷಿಕೋತ್ಸವ (Wedding Anniversary). ಪ್ರತಿ ವರ್ಷವೂ ಸಂಭ್ರಮದಿಂದ ಈ ದಿನವನ್ನು ಬರಮಾಡಿಕೊಳ್ಳುತ್ತಿದ್ದರು ಈ ದಂಪತಿ. ಆದರೆ, ವಿಧಿಯಾಟ ಈ ಬಾರಿ ಬೇರೆಯೇ ಆಗಿದೆ. ಸ್ಪಂದನಾ ಹೃದಯಾಘಾತದಿಂದ ನಿಧನರಾಗಿ, ವಿಜಯ್ ಅವರ ಎದೆಯಲ್ಲಿ ಆರದ ಗಾಯ ಮಾಡಿ ಹೋಗಿದ್ದಾರೆ. ಅಗಲಿದ ಪತ್ನಿಗೆ ವಿಜಯ ರಾಘವೇಂದ್ರ ಭಾವುಕ ಸಾಲುಗಳ ಮೂಲಕ ವಿಶ್ ಮಾಡಿದ್ದಾರೆ. ಪ್ರೀತಿಸಿ ಗುರುಹಿರಿಯರ ಸಮ್ಮತಿ ಪಡೆದು ಆಗಸ್ಟ್ 26ರಂದು 2017ರಲ್ಲಿ ವಿಜಯ-ಸ್ಪಂದನಾ ಮದುವೆಯಾದವರು. ಅವರ ದಾಂಪತ್ಯಕ್ಕೆ ಪ್ರೀತಿಗೆ ಶೌರ್ಯ ಎಂಬ ಪುತ್ರ ಸಾಕ್ಷಿಯಾಗಿದ್ದಾರೆ.

    ಭಾವುಕ ಸಾಲುಗಳನ್ನು ಬರೆದು, ಅದಕ್ಕೆ ವಿಡಿಯೋ ಸ್ಪರ್ಶ ಕೂಡ ನೀಡಿರುವ ವಿಜಯ ರಾಘವೇಂದ್ರ “ಚಿನ್ನ, ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ.. ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ.. ಬದುಕನ್ನು ಕಟ್ಟಿ ಸರ್ವಸ್ವವಾದೆ.. ಉಸಿರಲ್ಲಿ ಬೆರೆತು ಜೀವಂತವಾದೆ.. ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು.. ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ..” ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಹರ್ಷಿಕಾ ಪೂಣಚ್ಚ- ಭುವನ್

    ಪತ್ನಿಯ ನಿಧನದಿಂದ ಮೌನಕ್ಕೆ ಶರಣಾಗಿದ್ದ ವಿಜಯ್ ಮೊನ್ನೆಯಷ್ಟೇ ಸ್ಪಂದನಾ ಬಗ್ಗೆ ಭಾವುಕರಾಗಿ ವೀಡಿಯೋ ಮೂಲಕ ಮನದಾಳದ ಭಾವನೆಗಳನ್ನ ಅಕ್ಷರ ರೂಪಕ್ಕೆ ಇಳಿಸಿದ್ದರು. ಸ್ಪಂದನಾ ನೆನಪನ್ನ ತಮ್ಮೊಳಗಿನ ಪ್ರೀತಿಯನ್ನ ಅವರು ಬಿಚ್ಚಿಟ್ಟಿದ್ದರು. ಆ ಸಾಲುಗಳು ಕೂಡ ಅನೇಕರನ್ನು ಭಾವುಕರನ್ನಾಗಿಸಿದ್ದವು.

    ಸ್ಪಂದನಾ ಹೆಸರಿಗೆ ತಕ್ಕ ಜೀವ. ಉಸಿರಿಗೆ ತಕ್ಕ ಭಾವ. ಅಳತೆಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ. ಕೇವಲ ನಿನ್ನವ ಎಂದು ವಿಜಯ ರಾಘವೇಂದ್ರ ಭಾವನ್ಮಾತಕವಾಗಿ ಸಾಲುಗಳನ್ನು ಬರೆದುಕೊಂಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲಿಪ್‌ಲಾಕ್ ಫೋಟೋ ಶೇರ್ ಮಾಡಿ ಪತ್ನಿಗೆ ಫರ್ಹಾನ್ ಅಖ್ತರ್ ರೊಮ್ಯಾಂಟಿಕ್ ವಿಶ್

    ಲಿಪ್‌ಲಾಕ್ ಫೋಟೋ ಶೇರ್ ಮಾಡಿ ಪತ್ನಿಗೆ ಫರ್ಹಾನ್ ಅಖ್ತರ್ ರೊಮ್ಯಾಂಟಿಕ್ ವಿಶ್

    ಬಾಲಿವುಡ್ (Bollywood) ನಟ ಫರ್ಹಾನ್ ಅಖ್ತರ್ (Farhan Akhtar) ಮದುವೆ ಮೊದಲ ವಾರ್ಷಿಕೋತ್ಸವದ (Wedding Anniversary) ಸಂಭ್ರಮದಲ್ಲಿದ್ದಾರೆ. ಬಿಟೌನ್‌ನ ಬೆಸ್ಟ್ ಜೋಡಿಗಳಲ್ಲಿ ಫರ್ಹಾನ್-ಶಿಬಾನಿ (Shibani) ಕೂಡ ಒಬ್ಬರು. ಇದೀಗ ಆ್ಯನಿವರ್ಸರಿ ದಿನ ಪತ್ನಿ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನ ನಟ ಫರ್ಹಾನ್ ಶೇರ್ ಮಾಡಿದ್ದಾರೆ.

    `ತೂಫಾನ್’ ಆಕ್ಟರ್ ಫರ್ಹಾನ್ ಅಖ್ತರ್ ದಂಪತಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಫರ್ಹಾನ್ ತನ್ನ ಪತ್ನಿ ಶಿಬಾನಿಗೆ ಲಿಪ್ ಕಿಸ್ ಮಾಡಿರುವ ಫೋಟೋ ಶೇರ್ ಮಾಡಿ ರೊಮ್ಯಾಂಟಿಕ್ ಸಾಲನ್ನು ಬರೆದಿದ್ದಾರೆ. 365 ಸಂತಸದ ದಿನಗಳು ಎಂದು ಫರ್ಹಾನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ ವಿಚಾರಕ್ಕೆ ನಟಿ ಅದಿತಿ ರಾವ್‌ ಹೈದರಿ ಪ್ರತಿಕ್ರಿಯೆ

     

    View this post on Instagram

     

    A post shared by Farhan Akhtar (@faroutakhtar)

    ಶಿಬಾನಿ ಕೆಂಪು ಬಣ್ಣದ ಲೆಹಂಗಾದಲ್ಲಿ ಮಿಂಚಿದ್ದರೆ, ಫರ್ಹಾನ್ ಕಪ್ಪು ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾರೆ. ಇನ್ನೂ ಜೋಡಿಗೆ ಹೃತಿಕ್ ರೋಷನ್, ರಿಯಾ ಚಕ್ರವರ್ತಿ, ಹೀಗೆ ಅನೇಕರು ವಾರ್ಷಿಕೋತ್ಸವಕ್ಕೆ ಶುಭಕೋರಿದ್ದಾರೆ.

     

    View this post on Instagram

     

    A post shared by Farhan Akhtar (@faroutakhtar)

    ಇನ್ನೂ ಫರ್ಹಾನ್ ಅಖ್ತರ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿ ಅದುನಾ ಭಬಾನಿಗೆ 2017ರಲ್ಲಿ ಅವರು ವಿಚ್ಛೇದನ ನೀಡಿದ್ದರು. ಬಳಿಕ ಶಿಬಾನಿ ಅವರನ್ನು ಪ್ರೀತಿಸಲು ಆರಂಭಿಸಿದರು. ಇಬ್ಬರ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಪಡೆದು ದಾಂಪತ್ಯಕ್ಕೆ ಕಾಲಿಟ್ಟರು. ಫರ್ಹಾನ್ ಅಖ್ತರ್ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರು. ಶಿಬಾನಿ ದಂಡೇಕರ್ ಹಿಂದು ಧರ್ಮದವರಾಗಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸೈಕ್ಲೋನ್ ಎಫೆಕ್ಟ್ ನಲ್ಲೂ ನಂದಿಬೆಟ್ಟಕ್ಕೆ ಹೋದ ರಾಕಿಂಗ್ ಸ್ಟಾರ್ ಯಶ್ ದಂಪತಿ

    ಸೈಕ್ಲೋನ್ ಎಫೆಕ್ಟ್ ನಲ್ಲೂ ನಂದಿಬೆಟ್ಟಕ್ಕೆ ಹೋದ ರಾಕಿಂಗ್ ಸ್ಟಾರ್ ಯಶ್ ದಂಪತಿ

    ಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರು ಚಳಿಯಿಂದ ನಡುಗುತ್ತಿದೆ. ತುಂತುರ ಮಳೆಹನಿಯಿಂದ ನೆನೆದು ಹೋಗಿದೆ. ಈ ನಡುವೆ ಸೈಕ್ಲೋನ್ ಎಫೆಕ್ಟ್ ಗೆ ನರಳುತ್ತಿದೆ. ಇಷ್ಟರ ಮಧ್ಯೆಯೂ ರಾಕಿಂಗ್‍ಸ್ಟಾರ್ ಯಶ್ ದಂಪತಿ ನಂದಿಗಿರಿಧಾಮ ಸೌಂದರ್ಯ ಸವಿದಿದ್ದಾರೆ. ವಿವಾಹ ವಾರ್ಷಿಕೋತ್ಸವದ ನೆನಪಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕೆಲ ಹೊತ್ತು ನಂದಿ ಗಿರಿಧಾಮದಲ್ಲಿ ಕಳೆದಿದ್ದಾರೆ.

    ವಿಶ್ವವಿಖ್ಯಾತ ನಂದಿಗಿರಿಧಾಮ, ಪ್ರೇಮಿಗಳ ಪಾಲಿನ ಹಾಟ್ ಫೇವರೆಟ್ ತಾಣ, ಬೆಂಗಳೂರಿಗರ ಪಾಲಿನ ವಿಕೇಂಡ್ ಹಾಟ್ ಸ್ಪಾಟ್. ಹಾಗಾಗಿ ನಂದಿಬೆಟ್ಟಕ್ಕೆ ರಾಕಿಂಗ್ ಸ್ಟಾರ್ ಯಶ್ ದಂಪತಿ ಭೇಟಿ ನೀಡಿ ನಂದಿಗಿರಿಧಾಮದ ಸೌಂದರ್ಯ ಕಣ್ತುಂಬಿಕೊಂಡಿದ್ದಾರೆ. ಅಂದಹಾಗೆ ಕಳೆದ ಎರಡು ದಿನಗಳಿಂದ ಮಾಂಡೌಸ್ ಸೈಕ್ಲೋನ್ ಎಫೆಕ್ಟ್ ನಿಂದ ಕೂಲ್ ಕೂಲ್ ನಂದಿಬೆಟ್ಟ ಮತ್ತಷ್ಟು ಮಗದಷ್ಟು ಕೂಲ್ ಆಗಿದ್ದು, ನಿನ್ನೆ ಬೆಳಿಗ್ಗೆ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಪತ್ನಿ ರಾಧಿಕಾ ಪಂಡಿತ್ ನಂದಿಬೆಟ್ಟಕ್ಕೆ ಆಗಮಿಸಿ ನಂದಿಬೆಟ್ಟದ ಪ್ರಾಕೃತಿಕ ಸೊಬಗನ್ನ ಸವಿದಿದ್ದಾರೆ. ಇದನ್ನೂ ಓದಿ: `ಬಿಗ್ ಬಾಸ್’ ಖ್ಯಾತಿಯ ಭೂಮಿ ಶೆಟ್ಟಿ ಫಿಟ್ನೆಸ್ ನೋಡಿ ವಾವ್ ಎಂದ ಫ್ಯಾನ್ಸ್

    ಬೆಳಿಗ್ಗೆ 6.30 ರ ಸುಮಾರಿಗೆ ನಂದಿಗಿರಿಧಾಮಕ್ಕೆ ಆಗಮಿಸಿರುವ ದಂಪತಿ ನಂದಿಬೆಟ್ಟದ ಮೇಲಿ ಕೆಲ ಕಾಲ ರೌಂಡ್ಸ್ ಹಾಕಿದ್ದು, ಮಯೂರ ಹೋಟೆಲ್ ನಲ್ಲಿ ತಿಂಡಿ ತಿಂದು ಮರಳಿ ವಾಪಾಸ್ಸಾಗಿದ್ದಾರೆ. ಇನ್ನೂ ಸಹಜವಾಗಿ ನಟ ಯಶ್ ಹಾಗೂ ರಾಧಿಕಾ ಪಂಡಿತ್ ರನ್ನ ನೋಡುತ್ತಿದ್ದಂತೆ ಪ್ರವಾಸಿಗರು ಸಹ ನಾ ಮುಂದು ತಾ ಮುಂದು ಅಂತ ನೋಡಲು ಮುಗಿಬಿದ್ದಿದ್ದಾರೆ. ಕೆಲವರು ಪೋಟೋ ಸೆಲ್ಫಿ ತಗೊಂಡು ಖುಷಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಯ ದಿನ ನಮಗೆ ಬಾಯಿಗೆ ಬಂದಂತೆ ಬೈದರು: ವೆಡ್ಡಿಂಗ್ ಆ್ಯನಿವರ್ಸರಿಗೆ ಸನ್ನಿ ಲಿಯೋನ್ ಭಾವುಕ ಪತ್ರ

    ಮದುವೆಯ ದಿನ ನಮಗೆ ಬಾಯಿಗೆ ಬಂದಂತೆ ಬೈದರು: ವೆಡ್ಡಿಂಗ್ ಆ್ಯನಿವರ್ಸರಿಗೆ ಸನ್ನಿ ಲಿಯೋನ್ ಭಾವುಕ ಪತ್ರ

    ಬಾಲಿವುಡ್ ಖ್ಯಾತಿಯ ಮಾದಕ ಸುಂದರಿ ಮತ್ತು ಪಡ್ಡೆ ಹುಡುಗರ ಕನಸಿನ ರಾಣಿ ಸನ್ನಿ ಲಿಯೋನ್ ಮದುವೆಯಾಗಿ ಇವತ್ತಿಗೆ 11 ವರ್ಷ ಕಳೆದಿದ್ದು, ವೆಡ್ಡಿಂಗ್ ಆ್ಯನಿವರ್ಸರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಅವರು ತಮ್ಮ ಮದುವೆ ಫೋಟೋ ಹಂಚಿಕೊಂಡಿದ್ದಾರೆ.

    ಫೋಟೋದಲ್ಲಿ ದಂಪತಿ ಇಬ್ಬರು ಸಿಖ್ ಧರ್ಮದ ಸಂಪ್ರದಾಯದಂತೆ ವೆಡ್ಡಿಂಗ್ ಡ್ರೆಸ್ ಮೇಲೆ ಗುರುದ್ವಾರದಲ್ಲಿ ಗುಲಾಬಿ ಹೂವುಗಳ ದಳದ ಮೇಲೆ ಮಂಡಿ ಉರಿ ಕುಳಿತುಕೊಂಡು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

     

    View this post on Instagram

     

    A post shared by Sunny Leone (@sunnyleone)

    ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ಒಬ್ಬರನ್ನೊಬ್ಬರು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇವತ್ತಿಗೆ 11 ವರ್ಷಗಳು ಕಳೆದಿವೆ. ವೃತ್ತಿಪರ ಜೀವನದಲ್ಲಿಯೂ ಸಹ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದವರು.

    ಈ ಕುರಿತು ಭಾವನಾತ್ಮಕವಾಗಿ ಬರೆದುಕೊಂಡಿರುವ ಕನ್ನಡದ ಶೇಷಮ್ಮ, ’11 ವರ್ಷಗಳ ಹಿಂದೆ ಅಂದು ಮದುವೆ ಆದಾಗ ಹಣವಿಲ್ಲದೇ ಮದುವೆಗೆ ಕೇವಲ 50 ಜನರನ್ನು ಮಾತ್ರ ಆಹ್ವಾನ ಮಾಡಿದ್ದೆವು. ಆರತಕ್ಷತೆ ಮಾಡಿಕೊಳ್ಳಲು ಸಹ ನಮ್ಮ ಹತ್ತಿರ ಬಿಡಿಗಾಸು ಇರಲ್ಲಿಲ್ಲ. ಮದುವೆಯಲ್ಲಿ ಮಾಡಿದ ಹೂವುಗಳ ಅಲಂಕಾರ ಕೂಡಾ ಸರಿ ಇರಲಿಲ್ಲ. ಅಂದು ನಮ್ಮ ಮದುವೆಗೆ ಬಂದಿದ್ದ ಗೆಸ್ಟ್‌ಗಳೆಲ್ಲಾ ಸ್ಟೇಜ್ ಮೇಲೆ ನಿಂತು ಕುಡಿದ ಅಮಲಿನಲ್ಲಿ ನಮಗೆ ಬಾಯಿಗೆ ಬಂದಂತೆ ಬೈಯಿದಿದ್ದರು. ನಮ್ಮ ಜೀವನದಲ್ಲಿ ಆದ ಕೆಲ ಕಹಿ ಘಟನೆಗಳನ್ನೆಲ್ಲಾ ದಾಟಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಇಷ್ಟು ವರ್ಷ ಒಂದು ಸುಂದರ ಜೀವನ ಕಟ್ಟಿಕೊಂಡಿದ್ದೇವೆ. ಲವ್ ಯ್ಯೂ ಬೇಬಿ’ ಎಂದು ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದಾರೆ.

    ಸನ್ನಿ ಮತ್ತು ಡೇನಿಯಲ್ ಇತ್ತೀಚೆಗೆ ಮೂವರು ಸುಂದರ ಮಕ್ಕಳಿಗೆ ಪೊಷಕರಾಗಿದ್ದಾರೆ. ಕಳೆದ ವರ್ಷ ಅವರ ಹಿರಿಯ ಮಗಳನ್ನು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಿಂದ ದತ್ತು ಪಡೆದಿದ್ದರು. ಬಾಡಿಗೆ ತಾಯ್ತನದ ಮೂಲಕ ಅವರ ಇಬ್ಬರು ಅವಳಿ ಗಂಡು ಮಕ್ಕಳು ಜನಿಸಿವೆ.

    ಈಗಾಗಲೇ ಅವರು ತಮ್ಮ ವೃತ್ತಿಜೀವನದಲ್ಲಿ ಯಶಸ್ವಿ ಆಗಿದ್ದು, ಕನ್ನಡದಲ್ಲೂ ಇವರು ಎರಡು ಸಿನಿಮಾಗಳಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಕನ್ನಡದ ಮತ್ತೊಂದು ಚಿತ್ರದ ಹಾಡಿಗೂ ಹೆಜ್ಜೆ ಹಾಕಿ ಹೋಗಿದ್ದಾರೆ.

  • ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಜಗ್ಗೇಶ್ ಕೊಟ್ಟ ಡಿಫರೆಂಟ್ ಗಿಫ್ಟ್

    ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಜಗ್ಗೇಶ್ ಕೊಟ್ಟ ಡಿಫರೆಂಟ್ ಗಿಫ್ಟ್

    ಸ್ಯಾಂಡಲ್‍ವುಡ್ ನವರಸ ನಾಯಕ ಜಗ್ಗೇಶ್ ಹಾಗೂ ಪರಿಮಳ ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ವೈವಾಹಿಕ ಜೀವನಕ್ಕೆ ಕಾಲಿಟ್ಟು 38 ವರ್ಷ ಕಳೆದಿರುವ ಸಂದರ್ಭದಲ್ಲಿ ನಟ ಜಗ್ಗೇಶ್ ಇದೇ ಸಂತಸದಲ್ಲಿ ಒಂದಷ್ಟು ಫೋಟೋಗಳನ್ನು ಕೋಲಾಜ್ ಮಾಡಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

     

    ಜಗ್ಗೇಶ್ ಅವರು ಆಗಾಗ ಕೆಲವು ಸಂದರ್ಶಗಳಲ್ಲಿ ತಮ್ಮ ಇಂಟ್ರೆಸ್ಟಿಂಗ್ ಲವ್ ಸ್ಟೋರಿಯನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಜಗ್ಗೇಶ್ ಮನೆಯವರ ವಿರೋಧದ ನಡುವೆಯೂ ಪರಿಮಳ ಅವರ ಕೈಹಿಡಿದಿದ್ದು, ಈ ಜೋಡಿಯ ಪ್ರೇಮ್ ಕಹಾನಿ ವೆರಿ ಡಿಫರೆಂಟ್. 1984ರ ಮಾರ್ಚ್ 22ರಂದು ಸಪ್ತಪದಿ ತುಳಿದ ಜಗ್ಗೇಶ್ ಹಾಗೂ ಪರಿಮಳ ಅವರ ದಾಂಪತ್ಯಕ್ಕೆ ಇಂದಿಗೆ ಮೂರು ಮುಕ್ಕಾಲು ದಶಕ.

    ಸದ್ಯ ಈ ವಿಶೇಷ ದಿನದಂದು ಜಗ್ಗೇಶ್ ಅವರು ತಮ್ಮ ಮತ್ತು ಅವರ ಪತ್ನಿಯ ಬಾಲ್ಯದ ಫೋಟೋ, ತಮ್ಮ ವಿವಾಹದ ಫೋಟೋ, ಮಕ್ಕಳಾದ ಗುರುರಾಜ್, ಯತಿರಾಜ್ ಫೋಟೋ, ಹಿರಿಯ ಪುತ್ರ ಗುರುರಾಜ್ ವಿವಾಹದ ಫೋಟೋ, ಮೊಮ್ಮಗ ಅರ್ಜುನ್ ಸೇರಿದಂತೆ ಫ್ಯಾಮಿಲಿ ಫೋಟೋವನ್ನು ಕೋಲಾಜ್ ಮಾಡಿರುವ ವೀಡಿಯೋವನ್ನು ಪತ್ನಿಗೆ ಗಿಫ್ಟ್ ಎಂಬಂತೆ ನೀಡಿದ್ದಾರೆ. ಇದನ್ನೂ ಓದಿ : ಅಜಿತ್ ನಟನೆ ಬ್ಲಾಕ್ ಬಸ್ಟರ್ ‘ವಲಿಮೈ’ಸಿನಿಮಾ ಒಟಿಟಿಗೆ ಎಂಟ್ರಿ

    ಈ ಸುಂದರವಾದ ವೀಡಿಯೋ ಜೊತೆಗೆ ಇಂದು ಪರಿಮಳನಿಗೆ ತಾಳಿ ಕಟ್ಟಿ 38ನೆ ವರ್ಷ. ಪರಿಮಳಚಾರ್ಯರು, ಗುರುರಾಜ, ಯತಿರಾಜ ರಾಯರ ಸಂಬಂಧಿತ ನಾಮಾಂಕಿತ. ಅರ್ಜುನ, ಕೃಷ್ಣನ ಪ್ರಿಯ ಸಖ. ರಾಯರು ಕೃಷ್ಣನ ಪ್ರಿಯ ಸಖ. ಇಷ್ಟು ಹೆಸರು ದಿನ ಬಳಸಲು ರಾಯರು ನನ್ನ ಬದುಕಿಗೆ ನೀಡಿದ ದೇಣಿಗೆ. ಪರಿಮಳ ಮಡದಿ, ಗುರುರಾಜ ಯತಿರಾಜ ಮಕ್ಕಳು, ಅರ್ಜುನ ಮೂಮ್ಮಗ ಶುಭ ಮಂಗಳವಾರ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

  • ಚಂದನ್, ನಿವೇದಿತಾ ದಾಂಪತ್ಯಕ್ಕೆ 2 ವರ್ಷ – ಔಟ್ ಆಫ್ ಸ್ಟೇಶನ್‍ಗೆ ಹಾರಿದ ಕ್ಯೂಟ್ ಜೋಡಿ

    ಚಂದನ್, ನಿವೇದಿತಾ ದಾಂಪತ್ಯಕ್ಕೆ 2 ವರ್ಷ – ಔಟ್ ಆಫ್ ಸ್ಟೇಶನ್‍ಗೆ ಹಾರಿದ ಕ್ಯೂಟ್ ಜೋಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

    ಚಂದನ್ ಹಾಗೂ ನಿವೇದಿತಾ ಗೌಡ ಆಗಾಗ ಫೋಟೋ ಹಾಗೂ ವೀಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಇತ್ತೀಚೆಗಷ್ಟೇ ಚಂದನ್ ಲಕ್ ಲಕ್ ಲಂಬೋರ್ಗಿನಿ ಹಾಡು ಬಿಡುಗಡೆ ಮಾಡಿದ್ದರು. ಇನ್ನೂ ಈ ಹಾಡು ಸಖತ್ ಸದ್ದು ಮಾಡಿತ್ತು. ಸದ್ಯ ಚಂದನ್ ನಿವೇದಿತಾ ಕೈ ಹಿಡಿದು ಇಂದಿಗೆ 2 ವರ್ಷ ತುಂಬಿದ್ದು, ಇದೇ ಖುಷಿಯಲ್ಲಿ ಜೋಡಿ ಔಟ್ ಆಫ್ ಸ್ಟೇಷನ್‍ನಲ್ಲಿ ಟೂರ್ ಹೊಡೆಯುತ್ತಿದ್ದಾರೆ.

    ಈ ವಿಶೇಷ ದಿನದಂದು ನಿವೇದಿತಾ ಗೌಡ ತಮ್ಮ ಮದುವೆಯ ಫೋಟೋಗಳನ್ನು ಕೊಲಾಜ್ ಮಾಡಿರುವ ಪುಟ್ಟ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಇನ್ನೂ ಈ ಕ್ಯೂಟ್ ಜೋಡಿಗೆ ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

    ಬಿಗ್‍ಬಾಸ್ ಸೀಸನ್-5ರಲ್ಲಿ ಖ್ಯಾತಿ ಪಡೆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಬಿಗ್‍ಬಾಸ್ ಮನೆಯಿಂದ ಹೊರಬಂದ ಮೇಲೆ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದರು. ಮೈಸೂರಿನ ದಸರಾ ಕಾರ್ಯಕ್ರಮದ ವೇಳೆ ಚಂದನ್ ನಿವೇದಿತಾ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ನಿವೇದಿತಾ ಮುಂದೆ ಮದುವೆ ಪ್ರಪೋಸಲ್ ಇಟ್ಟರು. ಈ ವೇಳೆ ಚಂದನ್ ಪ್ರೀತಿಗೆ ಮನಸೋತು ನಿವೇದಿತಾ ಗೌಡ ಕೂಡ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದರು.

    ನಂತರ 2020ರ ಫೆಬ್ರವರಿ 27ರಂದು ಮೈಸೂರಿನಲ್ಲಿ ಶುಭ ಮೂಹೂರ್ತದಲ್ಲಿ ಶುಭ ಮೂಹೂರ್ತದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಚಂದನ್ ನಿವೇದಿತರನ್ನು ವರಿಸಿದರು. ಈ ಜೋಡಿ ಮದುವೆಗೆ ಅನೇಕ ಚಿತ್ರರಂಗದ ಗಣ್ಯರು ಆಗಮಿಸಿ ಶುಭ ಕೋರಿದ್ದರು. ಇದನ್ನೂ ಓದಿ: ದೇಶ ವಿದೇಶದಲ್ಲಿ ಜೇಮ್ಸ್ ಅಬ್ಬರ ಶುರು – ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್!