Tag: Websites

  • ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    ಇರಾನ್‌ನಲ್ಲಿ ಹಿಜಬ್ ಹೋರಾಟ- ವಾಟ್ಸಪ್, ಇನ್‌ಸ್ಟಾಗ್ರಾಮ್ ಬಳಕೆ ಸ್ಥಗಿತ

    ತೆಹ್ರಾನ್: ಹಿಜಬ್ (Hijab) ಧರಿಸದ್ದಕ್ಕೆ ನೈತಿಕ ಪೊಲೀಸ್‌ಗಿರಿಗೆ (Police) ಯುವತಿ ಬಲಿಯಾದ ಪ್ರಕರಣ ವಿರೋಧಿಸಿ ಇರಾನ್‌ನಲ್ಲಿ ಪ್ರತಿಭಟನೆ (Iran Protest) ಭುಗಿಲೆದ್ದಿದ್ದು, ಇಂಟರ್‌ನೆಟ್ (Internet) ಬಳಕೆಯೊಂದಿಗೆ ವಾಟ್ಸಪ್‌ (WhatsApp), ಇನ್‌ಸ್ಟಾಗ್ರಾಮ್ (Instagram) ಬಳಕೆಯನ್ನೂ ನಿಷೇಧಿಸಲಾಗಿದೆ.

    ಇರಾನ್ ಮಹಿಳೆಯರ (Women) ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೆ ಅದನ್ನು ಹತ್ತಿಕ್ಕಲು ಪೊಲೀಸರು (Police) ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

    ಇತ್ತೀಚೆಗೆ ಇರಾನ್‌ನಲ್ಲಿ ಫೇಸ್‌ಬುಕ್ (FaceBook), ಟ್ವಿಟರ್ (Twitter), ಟೆಲಿಗ್ರಾಮ್, ಯೂಟ್ಯೂಬ್ (Youtube) ಮತ್ತು ಟಿಕ್‌ಟಾಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣದ (Social Media) ವೇದಿಕೆಗಳ ಮೇಲೆ ನಿರ್ಬಂಧ ವಿಧಿಸಿದ ನಂತರ ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಮ್ ವ್ಯಾಪಕವಾಗಿ ಬಳಕೆಯಾಗಿವೆ. ಹಾಗಾಗಿ ತುರ್ತು ಪರಿಸ್ಥಿತಿಯಲ್ಲಿ ಇಂಟರ್‌ನೆಟ್ (Internet) ಬಳಕೆಯನ್ನು ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲೂ ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ.

    ಸತತ 7ನೇ ದಿನ ಇರಾನ್‌ನ ಬಹುತೇಕ ನಗರ, ಪಟ್ಟಣಗಳಲ್ಲಿ ಮಹಿಳೆಯರ ಪ್ರತಿಭಟನೆಗಳು ಮುಂದುವರಿದಿವೆ. ಸಾವಿರ ಸಾವಿರ ಮಂದಿ ಮಹಿಳೆಯರು ಹಗಲು ರಾತ್ರಿ ಎನ್ನದೇ ಕೆರ್ಮಾನ್‌ನ ಆಜಾದಿ ವೃತ್ತದಲ್ಲಿ, ಸರ್ವಾಧಿಕಾರ ನಶಿಸಲಿ. ಹಿಜಬ್ ಕಟ್ಟುಪಾಡು ನಶಿಸಲಿ ಎಂದು ಘೋಷಣೆ ಕೂಗುತ್ತಿದ್ದಾರೆ. ಕತ್ತರಿ ಹಿಡಿದು ಕೂದಲು ಕತ್ತರಿಸಿಕೊಳ್ಳುವ ಅಭಿಯಾನವನ್ನು ಮುಂದುವರಿಸಿದ್ದಾರೆ. ಹಿಜಬ್ ಸುಟ್ಟು ಆಕ್ರೋಶ ಹೊರಹಾಕುತ್ತಿದ್ದಾರೆ. ನಾವು ಯುದ್ಧ ಭೂಮಿಯಲ್ಲಿ ಹುಟ್ಟಿದವರು. ಬನ್ನಿ ನಮ್ಮನ್ನು ಎದುರಿಸಿ ಎಂದು ಸರ್ಕಾರಕ್ಕೆ ಸವಾಲು ಹಾಕುತ್ತಿದ್ದಾರೆ.

    ಪ್ರತಿಭಟನೆ ದಮನಿಸಲು ರೈಸಿ ಸರ್ಕಾರ ಬಲಪ್ರಯೋಗ ಮಾಡುತ್ತಿದೆ. ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದೆ. ಈವರೆಗೂ ಪೊಲೀಸರ ಗುಂಡಿಗೆ ದೇಶದ ವಿವಿಧೆಡೆ 8 ಮಂದಿ ಬಲಿಯಾಗಿದ್ದಾರೆ. ಪ್ರತಿಭಟನಾಕಾರರು ಮಾತ್ರ ಹಿಂದೆ ಸರಿಯಲು ಸಿದ್ಧರಿಲ್ಲ. ಇದು ಇರಾನ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

    Live Tv
    [brid partner=56869869 player=32851 video=960834 autoplay=true]

  • 747 ವೆಬ್‌ಸೈಟ್, 94 ಯುಟ್ಯೂಬ್ ಚಾನೆಲ್‌ಗಳು ಬಂದ್

    747 ವೆಬ್‌ಸೈಟ್, 94 ಯುಟ್ಯೂಬ್ ಚಾನೆಲ್‌ಗಳು ಬಂದ್

    ನವದೆಹಲಿ: ಸುಳ್ಳು ಸುದ್ದಿ ಹರಡಿದ ಆರೋಪದ ಮೇಲೆ 747 ವೆಬ್‌ಸೈಟ್‌ಗಳು, 94 ಯೂಟ್ಯೂಬ್ ಚಾನೆಲ್ ಹಾಗೂ 19 ಸಾಮಾಜಿಕ ಮಾಧ್ಯಮದ ಖಾತೆಗಳ ಮೇಲೆ ಕೇಂದ್ರ ಸರ್ಕಾರವು 2021-22ನೇ ಸಾಲಿನಲ್ಲಿ ನಿರ್ಬಂಧ ಹೇರಿದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

    ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಸಂಬಂಧಿತ ಸುಳ್ಳುಸುದ್ದಿ ಹರಡುವುದನ್ನು ತಡೆಯಲು ಸತ್ಯ ಶೋಧನಾ ಘಟಕವನ್ನು 2020ರ ಮಾರ್ಚ್ 31 ರಂದು ಸ್ಥಾಪಿಸಲಾಗಿದೆ. ಇದು 875 ಸುಳ್ಳು ಸುದ್ದಿ ಹರಡುವ ಪೋಸ್ಟ್‌ಗಳ ಸತ್ಯಾಂಶ ಬಯಲಿಗೆಳೆದಿದೆ ಎಂದು ಅವರು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಪ್ರವೇಶದ ಸುಳಿವು ಕೊಟ್ಟ ಸೋನಿಯಾ ಅಳಿಯ ರಾಬರ್ಟ್ ವಾದ್ರಾ

    ಮಾಹಿತಿ ತಂತ್ರಜ್ಞಾನ ಕಾಯ್ದೆ- 2000ರ ಸೆಕ್ಷನ್ 69A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೊಬೈಲ್ ಟವರ್‌ಗಳಿಂದ ಅಪಾಯಕಾರಿ ವಿಕಿರಣ ಹೊರಹೊಮ್ಮುತ್ತದೆ ಎನ್ನುವುದು ತಪ್ಪು ಕಲ್ಪನೆ: ರಾಕೇಶ್ ಕುಮಾರ್ ದುಬೇ

    ಮೊಬೈಲ್ ಟವರ್‌ಗಳಿಂದ ಅಪಾಯಕಾರಿ ವಿಕಿರಣ ಹೊರಹೊಮ್ಮುತ್ತದೆ ಎನ್ನುವುದು ತಪ್ಪು ಕಲ್ಪನೆ: ರಾಕೇಶ್ ಕುಮಾರ್ ದುಬೇ

    ಬೆಂಗಳೂರು: ನಗರದ ಎಲ್ಲಾ ಮೊಬೈಲ್ ಟವರ್‌ಗಳು ದೂರ ಸಂಪರ್ಕ ಇಲಾಖೆ ನಿಯಮಗಳಿಗೆ ಒಳಪಟ್ಟಿದ್ದು, ಈ ಯಾವ ಟವರ್‌ಗಳು ಅಪಾಯಕಾರಿ ವಿಕಿರಣ ಹೊರ ಸೂಸುತ್ತಿಲ್ಲ ಎಂದು ಕರ್ನಾಟಕ ಲೈಸನ್ಸ್ ಸರ್ವಿಸ್ ಏರಿಯಾ (ಎಲ್‍ಎಸ್‍ಎ) ಸಲಹೆಗಾರರಾದ ರಾಕೇಶ್ ಕುಮಾರ್ ದುಬೇ ಹೇಳಿದರು.

    ಕೇಂದ್ರ ದೂರ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಲೈಸನ್ಸ್ ಸರ್ವಿಸ್ ಏರಿಯಾ (ಎಲ್‍ಎಸ್‍ಎ) ಗುರುವಾರ ನಗರದಲ್ಲಿ ಸೆಕ್ಯೂಲಾರ್ ಟವರ್‌ಗಳಿಂದ ಹೊರಹೊಮ್ಮುವ ವಿಕಿರಣಗಳ ಬಗ್ಗೆ ತಪ್ಪು ತಿಳುವಳಿಕೆಯ ಕುರಿತು ಜಾಗೃತಿ ನೀಡುವ ವರ್ಚುವಲ್ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

    ಈ ವೇಳೆ ಮಾತನಾಡಿದ ರಾಕೇಶ್ ಕುಮಾರ್, ಬಹುತೇಕರಲ್ಲಿ ಮೊಬೈಲ್ ಟವರ್ ಕುರಿತು ಸಾಕಷ್ಟು ತಪ್ಪು ತಿಳುವಳಿಕೆ ಇದೆ. ಮೊಬೈಲ್ ಟವರ್‌ನಿಂದ ಅಪಾಯಕಾರಿ ವಿಕಿರಣ ಬಿಡುಗಡೆಯಾಗಲಿದ್ದು, ಇದು ಮೆದುಳು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ ಎನ್ನುವ ತಪ್ಪು ಮನವರಿಕೆ ಇದೆ. ಆದರೆ, ಕರ್ನಾಟಕದಲ್ಲಿ ನಿರ್ಮಿಸಿರುವ ಎಲ್ಲಾ ಮೊಬೈಲ್ ಟವರ್‌ಗಳು ಸುರಕ್ಷಿತ. ಅದರಿಂದ ಬಿಡುಗಡೆಯಾಗುವ ವಿಕಿರಣಗಳು ಯಾವುದೇ ಆರೋಗ್ಯ ಸಮಸ್ಯೆ ಉಂಟು ಮಾಡುತ್ತಿಲ್ಲ. ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್- ಹೈಜಂಪ್‍ನಲ್ಲಿ ಬೆಳ್ಳಿ ಗೆದ್ದ ತಂಗವೇಲು, ಕಂಚು ಶರದ್ ಕುಮಾರ್‌ಗೆ

    ಡಿಒಟಿಯು ದೇಶಾದ್ಯಂತ ಟವರ್‌ಗಳಿಂದ ಹೊರಹೊಮ್ಮುವ ಇಎಂಎಫ್‍ನನ್ನು ಗಮನಿಸುತ್ತಿರುತ್ತದೆ. ಟವರ್ ನಿರ್ಮಾಣದ ಮೊದಲು ಸುತ್ತಲಿನ ಪರಿಸರವನ್ನು ಅಧ್ಯಯನ ಮಾಡಿ, ಸೂಕ್ತ ಬೌದ್ಧಿಕ ತಾಣಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. 2021 ಜೂನ್ ತಿಂಗಳಿನಿಂದ ಡಿಸೆಂಬರ್‌ ವರೆಗೆ ಕರ್ನಾಟಕದ ಎಲ್ಲಾ ಮೊಬೈಲ್ ಟವರ್‌ಗಳಿಂದ ಬಿಡುಗಡೆಯಾಗುವ 5803 ಬಿಟಿಎಸ್‍ಗಳನ್ನು ಪರೀಕ್ಷಿಸಿದ್ದು, ಇದು ದೂರ ಸಂಪರ್ಕ ಇಲಾಖೆಯ ನಿಮಯಗಳಿಗೆ ಅನುಗುಣವಾಗಿಯೇ ಇದ್ದು, ಯಾವುದೇ ಅಪಾಯಕಾರಿಕ ವಿಕಿರಣ ಬಿಡುಗಡೆಯಾಗುತ್ತಿಲ್ಲ ಎಂದರು.

    ಎಐಐಎಂಎಸ್ ಅಸೋಸಿಯೇಟ್ ಪ್ರೊಫೇಸರ್ ಡಾ. ವಿವೇಕ್ ಟಂಡನ್ ಮಾತನಾಡಿ, ಮೊಬೈಲ್ ಟವರ್ ಕುರಿತು ಜನರಲ್ಲಿ ಸಾಕಷ್ಟು ತಪ್ಪು ತಿಳುವಳಿಕೆ ಇದೆ. ಇದು ಒಬ್ಬರಿಂದ ಒಬ್ಬರಿಗೆ ಹರಡಿ ಅನಗತ್ಯ ಸಮಸ್ಯೆ ಸೃಷ್ಟಿಯಾಗಿದೆ. ಮೊಬೈಲ್ ಟವರ್‌ಗಳಿಂದ ಬಿಡುಗಡೆಯಾಗುವ ವಿಕಿರಣಗಳು ಕಡಿಮೆ ಶಕ್ತಿಯ ನಾನ್ ಅಯೊನೈಸಿಂಗ್ ರೇಡಿಯೇಷನ್‍ಗಳನ್ನು ಹೊರಸೂಸುತ್ತವೆ. ಇದು ಮನುಷ್ಯನ ಮೇಲೆ ಅತ್ಯಲ್ಪ ಪರಿಣಾಮ ಬೀರುವ ವಿಕಿರಣವಾಗಿದ್ದು, ಇದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದು ಎಂದರು.

    ಮೊಬೈಲ್ ಟವರ್‌ಗಳ ಇಎಂಎಫ್ ವಿಕಿರಣಗಳು ಹೊರಹೊಮ್ಮುವದರ ಮೇಲೆ ಕಠಿಣ ಮೇಲ್ಪಚಾರಣೆ ಇರಲಿದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ, ಉಚ್ಛ ನ್ಯಾಯಾಲಯವು ಈ ದೃಷ್ಟಿ ಕೋನವನ್ನು ಎತ್ತಿ ಹಿಡಿದಿವೆ. ಹೀಗಾಗಿ ಮೊಬೈಲ್ ಟವರ್‌ಗಳು ಅತ್ಯಂತ ಸುರಕ್ಷಿತವಾಗಿವೆ ಎಂದು ಹೇಳಿದರು. ಮೊಬೈಲ್ ಟವರ್‌ನಿಂದ ಹೊರಸೂಸುವ ವಿಕಿರಣಗಳ ಕುರಿತು ಈ ವೆಬ್‍ಸೈಟ್‍ಗೆ ಭೇಟಿ ನೀಡಿ ಪರೀಕ್ಷಿಸಬಹುದು. ಇದನ್ನೂ ಓದಿ:  https://www.coai.com/

  • ಅರ್ಧಕ್ಕಿಂತ ಹೆಚ್ಚು ಆನ್‍ಲೈನ್ ವಿಡಿಯೋ ಗೇಮ್ಸ್ ಲೋಡಿಂಗ್ ಡೌನ್

    ಅರ್ಧಕ್ಕಿಂತ ಹೆಚ್ಚು ಆನ್‍ಲೈನ್ ವಿಡಿಯೋ ಗೇಮ್ಸ್ ಲೋಡಿಂಗ್ ಡೌನ್

    -ಜಾಗತಿಕ ಮಟ್ಟದಲ್ಲಿ ಇಂಟರ್ ನೆಟ್ ಬಳಕೆದಾರರಿಗೆ ಸಮಸ್ಯೆ

    ಬೆಂಗಳೂರು: ಇಂದು ಬೆಳಗ್ಗೆ ಆರು ಗಂಟೆಯಿಂದ ಅರ್ಧಕ್ಕಿಂತ ಹೆಚ್ಚು ಆನ್‍ಲೈನ್ ವಿಡಿಯೋ ಗೇಮ್ ಗಳ ಲೋಡಿಂಗ್ ಆಗದೇ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಜೊತೆ ಬಹುತೇಕ ವೆಬ್‍ಸೈಟ್ ಗಳು ಪಾಸ್ಟ್ ಎರರ್/ಲೋಡಿಂಗ್ ಪ್ರಾಬ್ಲಂ ಫೇಸ್ ಮಾಡಿವೆ.

    ಕ್ಲೌಡ್‍ಫ್ಲೇರ್ ಜಗತ್ತಿನ ಲಕ್ಷಾಂತರ ಇಂಟರ್ ನೆಟ್ ಪೈಸ್ ಜೊತೆ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ಕ್ಲೌಡ್‍ಫ್ಲೇರ್ ನಲ್ಲಿ ಸಮಸ್ಯೆಯುಂಟಾದ್ರೆ ಅದು ನೇರವಾಗಿ ಹಲವು ಸೈಟ್ ಮತ್ತು ಸರ್ವಿಸ್ ಗಳ ಮೇಲೆ ಪರಿಣಾಮ ಬೀರುತ್ತದೆ.

    ಆನ್‍ಲೈನ್ ವಿಡಿಯೋ ಗೇಮ್ ಗಳಾದ ಕಾಲ್ ಆಫ್ ಡ್ಯೂಟಿ ಮಾಡರ್ನ್ ವಾರ್ ಫೇರ್, ವಾರ್ ಝೋನ್, ಜಿಟಿಎ 5, ಲೀಗ್ ಆಫ್ ಲಜೆಂಡ್ಸ್, ಅಪೆಕ್ಸ್ ಲೆಜೆಂಡ್ಸ್, ವಲೊರಂಟ್, ಡೆಸ್ಟಿನಿ 2, ಎಫ್‍ಐಎಫ್‍ಎ, ಫಾಲ್ ಗೈಸ್ ಬಳಕೆದಾರರು ಲೋಡಿಂಗ್ ಸಮಸ್ಯೆ ಎದುರಿಸಿದ್ದಾರೆ. ಇನ್ನು ಪಿಎಸ್‍ಎನ್, ಎಕ್ಸ್ ಬಾಕ್ಸ್ ಲೈವ್ ಆ್ಯಂಡ್ ಸ್ಟೀಮ್ ಇತ್ಯಾದಿ ಸರ್ವಿಸ್ ಗಳ ಕಾನ್ಟ್ ಲೋಡ್/ ಎರರ್ ಸಮಸ್ಯೆ ಎದುರಿಸಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕ್ಲೌಡ್‍ಫ್ಲೇರ್, ಹೆಚ್‍ಟಿಟಿಪಿ 522, 502, 503 ಎರರ್ ಸಮಸ್ಯೆ ಗಮನಕ್ಕೆ ಬಂದಿದೆ. ಇದು ಎಲ್ಲ ಟ್ರಾನ್ಸಿಟ್ ಪ್ರೈವಡೈರ್ ಡೇಟಾ ಸೆಂಟರ್ ಗಳಲ್ಲಿ ಅಫೆಕ್ಟ್ ಆಗಿದೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದೆ.

  • ನಾಳೆ ಸಿಇಟಿ ಫಲಿತಾಂಶ ಪ್ರಕಟ

    ನಾಳೆ ಸಿಇಟಿ ಫಲಿತಾಂಶ ಪ್ರಕಟ

    ಬೆಂಗಳೂರು: ಏಪ್ರಿಲ್‍ನಲ್ಲಿ ನಡೆದಿದ್ದ 2019 ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಶನಿವಾರ ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ.

    ಶನಿವಾರ ಬೆಳಗ್ಗೆ 11 ಗಂಟೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರಿಂದ ಸುದ್ದಿಗೋಷ್ಟಿ ನಡೆಯಲಿದ್ದು, ಈ ವೇಳೆ ಸಿಇಟಿ ಫಲಿತಾಂಶವನ್ನು ಪ್ರಕಟಗೊಳಿಸಲಾಗುತ್ತದೆ. ಮಧ್ಯಾಹ್ನ 1 ಗಂಟೆಯ ನಂತರ ಕೆಇಎ ವೆಬ್ ಸೈಟ್‍ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

    ಎ. 29 ಹಾಗೂ 30ರಂದು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಮುಂದಾದ ವಿದ್ಯಾರ್ಥಿಗಳಿಗೆ ಸಿಇಟಿ ಪರಿಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 1,94,311 ಮಂದಿ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. ಅದರಲ್ಲಿ ಶೇ. 79ರಿಂದ ಶೇ. 92 ವಿದ್ಯಾರ್ಥಿಗಳು ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ವಿಷಯಕ್ಕೆ ಪರೀಕ್ಷೆ ಬರೆದಿದ್ದಾರೆ.

    ಫಲಿತಾಂಶ ಲಭ್ಯವಾಗುವ ವೆಬ್ ಸೈಟ್‍ಗಳು:

    http://kea.kar.nic.in

    http://CET.kar.nic in

    http://karresults.nic.in.