Tag: website

  • WWW.Pradeepeshwarmla.com – ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಪ್ರತ್ಯೇಕ ವೆಬ್ ಸೈಟ್ ಲಾಂಚ್‌

    WWW.Pradeepeshwarmla.com – ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಪ್ರತ್ಯೇಕ ವೆಬ್ ಸೈಟ್ ಲಾಂಚ್‌

    ಚಿಕ್ಕಬಳ್ಳಾಪುರ: `ನಮಸ್ತೆ ಚಿಕ್ಕಬಳ್ಳಾಪುರʼ ಕಾರ್ಯಕ್ರಮದ ಮೂಲಕ ಕ್ಷೇತ್ರದ ಜನರ ಮನೆ ಬಾಗಿಲಿಗೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸುವ ವಿನೂತನ ಕಾರ್ಯಕ್ರಮ ಮಾಡಿ ಮಾದರಿಯಾಗಿದ್ದ ಶಾಸಕ ಪ್ರದೀಪ್ ಈಶ್ವರ್ (Pradeep Eshwar), ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ (Chikkaballapur Constituency) ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ʻwww.pradeepeshwarmla.comʼ ಎಂಬ ಹೊಸ ವೆಬ್‌ಸೈಟ್ ಆರಂಭಿಸಿದ್ದಾರೆ. ಕ್ಷೇತ್ರದ ಜನ ತಮ್ಮ ಸಮಸ್ಯೆಗಳನ್ನ ಹೇಳಿಕೊಳ್ಳಲು ದೂರು ನೀಡಲು ನೇರವಾಗಿ ಎಂಎಲ್‍ಎ ಬಳಿ ಬರೋದು ಬೇಡ, ಜನರು ತಮ್ಮ ಸಮಸ್ಯೆ, ಹಣ ಖರ್ಚು ಮಾಡೋದು ಬೇಡ ಎಂಬ ಸದುದ್ದೇಶದಿಂದ ಈ ವೆಬ್ ಸೈಟ್ ಆರಂಭಿಸಿಲಾಗಿದೆ.

    ಜನ ತಮ್ಮ ಮೊಬೈಲ್ ಮೂಲಕವೇ ತಮ್ಮ ಸಮಸ್ಯೆಗಳಿಗೆ ದೂರು ಹೇಳಿಕೊಳ್ಳಲು ವೆಬ್‌ಸೈಟ್‌ನಲ್ಲಿ (Website) ಬಲಗಡೆ ದೂರು/ಸಲಹೆಗಳು ಎಂಬ ವಿಭಾಗಗಳಿದ್ದು, ಅದರ ಮೇಲೆ ಕ್ಲಿಕ್‌ ಮಾಡಿದರೆ, ಕಂಪ್ಲೇಟ್‌ ಬಾಕ್ಸ್‌ ತೆರೆಯುತ್ತದೆ. ಜನ ಅಲ್ಲಿ ತಮ್ಮ ಅಭಿಪ್ರಾಯ/ದೂರು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ದೂರು ನೀಡುವ ಜನರ ಮೊಬೈಲ್ ನಂಬರ್‌ಗೆ ಕರೆ ಮಾಡಿ ಸ್ಪಂದಿಸಲು ನೂರು ಮಂದಿ ಸಿಬ್ಬಂದಿಯನ್ನ ನೇಮಕ ಮಾಡಿ ಕಚೇರಿ ಸಹ ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲ ಸಿಬ್ಬಂದಿ ಜನರಿಗೆ ಸ್ಪಂದಿಸಲಿದ್ದಾರೆ ಎಂದು ತಿಳಿಸಿದ್ದಾರೆ.

    ಜನ ಇನ್ಮುಂದೆ ತಮ್ಮ ಸಮಯ ವ್ಯರ್ಥ ಮಾಡದೇ ಮೊಬೈಲ್ ಮೂಲಕವೇ ತಮ್ಮ ಮನೆಯಲ್ಲಿರುವ ಮಗ-ಮಗಳು ಯಾರಿಂದಾದರೂ ವೆಬ್‌ಸೈಟ್‌ನಲ್ಲಿ ಸಮಸ್ಯೆ ಹೇಳಿಕೊಳ್ಳಬಹುದು ಎಂದು ಮನವಿ ಮಾಡಿದ್ದಾರೆ. ಇನ್ನೂ ಬಗೆಹರಿಯಲಾಗದ ಸಮಸ್ಯೆ ಇದ್ದಲ್ಲಿ, ಅದಕ್ಕೂ ಸಹ ಕಾರಣ ತಿಳಿಸಿ 24 ಗಂಟೆಯೊಳಗೆ ಪ್ರತಿಕ್ರಿಯಿಸುವುದಾಗಿ ಶಾಸಕರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೆಬ್ ಸೈಟ್‍ನಲ್ಲಿ ಯುವತಿಯರ ಫೋಟೋ ಅಪ್ಲೋಡ್ ಮಾಡಿ ವಂಚನೆ- ಐವರ ಬಂಧನ

    ವೆಬ್ ಸೈಟ್‍ನಲ್ಲಿ ಯುವತಿಯರ ಫೋಟೋ ಅಪ್ಲೋಡ್ ಮಾಡಿ ವಂಚನೆ- ಐವರ ಬಂಧನ

    ಬೆಂಗಳೂರು: ಈಗಂತೂ ಹದಿಹರೆಯದ ಹುಡುಗಿಯರಿಂದ ಹಿಡಿದು 60 ಪ್ಲಸ್ ಆದ ಮುದುಕಿಯರ ತನಕ ಎಲ್ಲರೂ ಸೋಶಿಯಲ್ ಮೀಡಿಯಾ (Social Media) ಬಳಸ್ತಾರೆ. ನಾವೆಷ್ಟು ಸೂಪರ್ ಅಂತಾ ತೋರಿಸಿಕೊಳ್ಳೋಕೆ ಅಂದದ ಫೋಟೋಗಳನ್ನು ಅಪ್ಲೋಡ್ ಮಾಡಿ ಲೈಕ್ಸ್, ಕಾಮೆಂಟ್‍ಗಳನ್ನು ನೋಡಿ ಖುಷಿ ಪಟ್ಟಿರ್ತಾರೆ. ಆದರೆ ನಿಮ್ಮ ಆ ಫೋಟೋಗಳು ಹೇಗೆಲ್ಲಾ ವ್ಯಾಪಾರ ಆಗುತ್ತವೆ ಅನ್ನೋದನ್ನು ಕೇಳಿದ್ರೆ ನೀವೂ ಶಾಕ್ ಆಗಿಬಿಡ್ತೀರಿ.

    ಬೆಂಗಳೂರಿನ ಸುದ್ದಗುಂಟೆ ಪಾಳ್ಯ ಪೊಲೀಸ (Suddagunte Palya Police) ರು, ಇಂಥದೊಂದು ಇಂಟರೆಸ್ಟಿಂಗ್ ಪ್ರಕರಣವನ್ನು ಪತ್ತೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಗುವ ಚೆನ್ನಾಗಿರುವ ಯುವತಿಯರ ಫೋಟೋಗಳನ್ನು ಸೇವ್ ಮಾಡಿಕೊಳ್ಳುವ ಆರೋಪಿಗಳು, ಹೈಫೈ ವೇಶ್ಯಾವಾಟಿಕೆಗೆ ಪ್ರಸಿದ್ಧವಾದ ಲೊಕ್ಯಾಂಟೊ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಇದನ್ನೂ ಓದಿ: ಅಕ್ರಮ ಸಂಬಂಧ ನಿರಾಕರಿಸಿದ್ದಕ್ಕೆ ಮಹಿಳೆಗೆ ಚಾಕು ಇರಿದ ಆಟೋ ಚಾಲಕ

    ಆ ಫೋಟೋವನ್ನು ನೋಡಿದ ಕೆಲ ಗ್ರಾಹಕರು, ಆ ಅಕೌಂಟ್ ಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಅಡ್ವಾನ್ಸ್ ಹಣವಾಗಿ (Advance Money) ಇಂತಿಷ್ಟು ಹಣ ಅಂತಾ ಹಾಕಿಸಿಕೊಳ್ತಿದ್ದ ಆರೋಪಿಗಳು, ನಂತರ ಆ ಅಕೌಂಟ್ ನ ಬ್ಲಾಕ್ ಮಾಡಿ ಬಿಡುತ್ತಿದ್ದರು. ಮತ್ತೆ ಅದೇ ಹುಡುಗಿಯರ ಫೋಟೋಗಳನ್ನು ಬೇರೆ ಗ್ರಾಹಕರಿಗೆ ಕಳಸುಹಿಸಿ ಇದೇ ರೀತಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸುದ್ದಗುಂಟೆ ಪೊಲೀಸರು, ಮಂಜುನಾಥ್, ಮಲ್ಲಿಕಾರ್ಜುನಯ್ಯ, ಮಂಜುನಾಥ್, ಮೋಹನ್, ಹನುಮೇಶ್ ಮತ್ತು ರಾಜೇಶ್ ಅನ್ನೋರನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಬ್ಲಿಕ್‌ ಟಿವಿ ಇಂಗ್ಲಿಷ್‌ ವೆಬ್‌ಸೈಟ್‌ ಲೋಕಾರ್ಪಣೆ

    ಪಬ್ಲಿಕ್‌ ಟಿವಿ ಇಂಗ್ಲಿಷ್‌ ವೆಬ್‌ಸೈಟ್‌ ಲೋಕಾರ್ಪಣೆ

    ಬೆಂಗಳೂರು: ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ(PUBLiC TV) ಈಗ ಇಂಗ್ಲಿಷ್‍ನಲ್ಲೂ ಲಭ್ಯ. ಪಬ್ಲಿಕ್ ಟಿವಿಯ ಇಂಗ್ಲಿಷ್ ವೆಬ್‍ಸೈಟ್(English Website) ಇಂದು ಲೋಕಾರ್ಪಣೆಗೊಂಡಿದೆ.

    www.english.publictv.in ಭೇಟಿ ಆಗಿ ನೀವು ಸುದ್ದಿಗಳನ್ನು ಓದಬಹುದು. ರಾಜ್ಯದ ಹಳ್ಳಿಗಳಿಂದ ತೊಡಗಿ ವಿದೇಶದ ಮೂಲೆ ಮೂಲೆಗಳವರೆಗಿನ ಸುದ್ದಿ ಇಂಗ್ಲಿಷ್ ವೆಬ್‍ಸೈಟ್‍ನಲ್ಲಿ ಲಭ್ಯವಾಗಲಿದೆ.


    ರಾಜ್ಯ, ರಾಷ್ಟ್ರ, ಮನರಂಜನೆ, ಕ್ರಿಕೆಟ್, ಲೈಫ್‍ಸ್ಟೈಲ್, ಗೇಮಿಂಗ್ ಸಂಬಂಧಿಸಿದ ಸುದ್ದಿಗಳನ್ನು ನಮ್ಮ ಇಂಗ್ಲಿಷ್ ಸೈಟ್‍ನಲ್ಲಿ ಓದಬಹುದು.

    Live Tv
    [brid partner=56869869 player=32851 video=960834 autoplay=true]

  • 67 ಪೋರ್ನ್ ವೆಬ್‌ಸೈಟ್‌ಗಳು ಬ್ಲಾಕ್ – ಕೇಂದ್ರ ಆದೇಶ

    67 ಪೋರ್ನ್ ವೆಬ್‌ಸೈಟ್‌ಗಳು ಬ್ಲಾಕ್ – ಕೇಂದ್ರ ಆದೇಶ

    ನವದೆದಲಿ: 2021ರ ಐಟಿ ನಿಯಮ (IT Rules) ಉಲ್ಲಂಘಿಸಿದ್ದಕ್ಕಾಗಿ 67 ಪೋರ್ನ್ ವೆಬ್‌ಸೈಟ್‌ಗಳನ್ನು (Pornographic Websites) ಬ್ಲಾಕ್ ಮಾಡಿವಂತೆ ಕೇಂದ್ರ ಸರ್ಕಾರ (Central Government) ಇಂರ್ಟರ್‌ನೆಟ್ ಸೇವಾ ಪೂರೈಕೆದಾರರಿಗೆ ನೋಟಿಸ್ ನೀಡಿದೆ.

    ಭಾರತದಲ್ಲಿ ಅಶ್ಲೀಲ ಅಥವಾ ಪೋರ್ನ್ ವೆಬ್‌ಸೈಟ್‌ಗಳನ್ನು ಪ್ರಕಟಿಸುವುದು ಅಥವಾ ವೀಕ್ಷಿಸುವುದು ಕಾನೂನು ಬಾಹಿರ. ಆದರೂ ವಿವಿಧ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 67 ಪೋರ್ನ್ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಆದೇಶಿಸಿದೆ. ಇದನ್ನೂ ಓದಿ: ಸೂಕ್ತ ಒಳಉಡುಪು ಧರಿಸಲೇಬೇಕು – ಪಾಕ್ ವಿಮಾನಯಾನ ಸಂಸ್ಥೆ ಆದೇಶ

    ಪುಣೆ ನ್ಯಾಯಾಲಯದ (Pune Court) ಆದೇಶದ ಆಧಾರದ ಮೇಲೆ 63 ವೆಬ್‌ಸೈಟ್‌ಗಳು ಹಾಗೂ ಉತ್ತರಾಖಂಡ ಹೈಕೋರ್ಟ್ (Uttarakhand High court) ಆದೇಶದ ಆಧಾರದ ಮೇಲೆ 4 ವೆಬ್‌ಸೈಟ್‌ಗಳನ್ನು ನಿರ್ಬಂಧಿಸುವಂತೆ ಟೆಲಿಕಾಂ ಸಂಸ್ಥೆ (DOT) ಇಮೇಲ್ ಮೂಲಕ ಇಂಟರ್ನೆಟ್ ಸೇವಾ ಪೂರೈಕೆದಾರ ಕಂಪೆನಿಗಳಿಗೆ ಸೂಚಿಸಿದೆ. ಇದನ್ನೂ ಓದಿ: ದೇಗುಲಕ್ಕೆ 8 ಕೋಟಿ ಮೌಲ್ಯದ ನೋಟುಗಳಿಂದ ಅಲಂಕಾರ – ಗೋಡೆ, ನೆಲದಲ್ಲೆಲ್ಲ ನೋಟಿನ ದರ್ಬಾರ್

    ನ್ಯಾಯಾಲಯದ ಆದೇಶಗಳನ್ನು ಅನುಸರಿಸಿ ಮತ್ತು 2021ರಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊಸ ಐಟಿ ನಿಯಮಗಳ ಉಲ್ಲಂಘನೆಗಾಗಿ ಒಟ್ಟು 67 ಪೋರ್ನ್ ವೆಬ್‌ಸೈಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ ಸರ್ಕಾರ ಆದೇಶಿಸಿದ್ದು, ಈ ಕುರಿತು ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಇಂಟರ್ನೆಟ್ ಸರ್ವೀಸ್ ಪ್ರೊವೈಡರ್‌ಗಳಿಗೆ ವೆಬ್‌ಸೈಟ್‌ಗಳ ಮಾಹಿತಿ, ಯೂಆರ್‌ಎಲ್ ನೀಡಿರುವ ಸರ್ಕಾರ, ಈ ವೆಬ್‌ಸೈಟ್‌ನಲ್ಲಿ ಮಹಿಳೆಯರ ಘನತೆಗೆ ಕಳಂಕ ತರುವ ಅಶ್ಲೀಲ ವೀಡಿಯೋಗಳು ಇವೆ. ಈ ವೀಡಿಯೋಗಳು ಮಾರ್ಫ್ ಮಾಡಲಾಗಿರುವ ವೀಡಿಯೋಗಳಾಗಿವೆ ಎಂದು ನೋಟಿಸ್‌ನಲ್ಲಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಶಿಕ್ಷಣ ಇಲಾಖೆಗೆ ಹೊಸ ವೆಬ್‌ಸೈಟ್‌ – ಸಚಿವರಿಗೆ ನೀವೇ ದೂರು ಕೊಡಬಹುದು

    ಶಿಕ್ಷಣ ಇಲಾಖೆಗೆ ಹೊಸ ವೆಬ್‌ಸೈಟ್‌ – ಸಚಿವರಿಗೆ ನೀವೇ ದೂರು ಕೊಡಬಹುದು

    ಬೆಂಗಳೂರು: ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಇಲಾಖೆಯ ಸಮಸ್ಯೆಗಳು, ದೂರುಗಳನ್ನು ಇನ್ಮುಂದೆ ಯಾರು ಬೇಕಾದರು ನೇರವಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಗೆ ತಿಳಿಸಬಹುದು. ಪೋಷಕರು, ಸಾರ್ವಜನಿಕರು ನೀಡುವ ದೂರುಗಳಿಗೆ ಖುದ್ದು‌‌ ಶಿಕ್ಷಣ ಸಚಿವರೇ ಉತ್ತರ ಕೊಡುವ ಕೆಲಸ ಮಾಡ್ತಾರೆ.

    ಸಾರ್ವಜನಿಕರ ಸಮಸ್ಯೆ ಆಲಿಸಲು, ‌ದೂರು ಸ್ವೀಕಾರ ಮಾಡಲು ಪ್ರಾಥಮಿಕ ಶಿಕ್ಷಣ ‌ಇಲಾಖೆ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ‌. ಶಾಲಾ ಶಿಕ್ಷಣ ಇಲಾಖೆಗೆ ‌ನೂತನವಾಗಿ ವೆಬ್‌ಸೈಟ್‌ ಪ್ರಾರಂಭ ಮಾಡಲು ನಿರ್ಧಾರ ಮಾಡಿದೆ. ಈಗಾಗಲೇ ವೆಬ್‌ಸೈಟ್‌ ಕೆಲಸ ನಡೆಯುತ್ತಿದ್ದು, ಶೀಘ್ರವೇ ಸಚಿವರು ಲೋಕಾರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: 40% ಕಮಿಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಗುತ್ತಿಗೆದಾರರ ಸಂಘದಿಂದ ದಾಖಲೆ ಕೇಳಿದ ಕೇಂದ್ರ ಗೃಹ ಸಚಿವಾಲಯ

    ನೂತನ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ದೂರು ನೀಡಲು ವಿಶೇಷ ಪೇಜ್ ಪ್ರಾರಂಭ ಮಾಡಲಾಗುತ್ತದೆ. ಶಿಕ್ಷಣ ‌ಇಲಾಖೆಗೆ ಸಂಬಂಧಿಸಿದ ಯಾವುದು ದೂರನ್ನು ನೇರವಾಗಿ ಸಾರ್ವಜನಿಕರು ಇಲ್ಲಿಗೆ ಸಲ್ಲಿಸಬಹುದು. ಈ‌ ದೂರನ್ನು ಖುದ್ದು ಶಿಕ್ಷಣ ಸಚಿವರೇ ನೋಡ್ತಾರೆ. ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ನೀಡ್ತಾರೆ. ಅಷ್ಟೇ ಅಲ್ಲ ಸಮಸ್ಯೆ ಪರಿಹಾರಕ್ಕೆ ಟೀಂ ರಚನೆ ಮಾಡಲಿದ್ದು, ದೂರು ಇತ್ಯರ್ಥ ಆಗೋವರೆಗೂ ಈ ಟೀಂ ಕೆಲಸ ಮಾಡಲಿದೆ. ದೂರು ಪರಿಹಾರ ಆದ ಮೇಲೆ ಸಚಿವರ ಗಮನಕ್ಕೆ ಈ ಟೀಂ ತರಲಿದೆ.

    ಇಷ್ಟೇ ಅಲ್ಲ ಶಾಲಾ ಶಿಕ್ಷಣ ಇಲಾಖೆ ನೂತನವಾಗಿ ಸಾಮಾಜಿಕ ಜಾಲತಾಣಗಳನ್ನು ಪ್ರಾರಂಭ ಮಾಡ್ತಿದೆ. ಟ್ವಿಟರ್, ಫೇಸ್‌ಬುಕ್, ಕೂ ಆ್ಯಪ್‌ನಲ್ಲೂ ಶಿಕ್ಷಣ ಇಲಾಖೆ ಮಾಹಿತಿಗಳು ಇನ್ನು ಮುಂದೆ ಲಭ್ಯವಾಗಲಿವೆ. ಇಲಾಖೆಯ ಆದೇಶಗಳು, ಕಾರ್ಯಕ್ರಮಗಳು, ಮಾಹಿತಿಗಳು ಈ‌ ಸಾಮಾಜಿಕ ಜಾಲತಾಣಗಳಲ್ಲಿ ಇನ್ನು ಮುಂದೆ ಲಭ್ಯವಾಗಲಿವೆ. ಈಗಾಗಲೇ ಸಾಮಾಜಿಕ ಜಾಲತಾಣಗಳ ಸಿದ್ದತೆ ಕಾರ್ಯ ನಡೆದಿದ್ದು, ಶೀಘ್ರವೇ ಸಾಮಾಜಿಕ ಜಾಲತಾಣಗಳು ಲೋಕಾರ್ಪಣೆ ಆಗಲಿವೆ. ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ – ಜನರಲ್ಲಿ ಹೆಚ್ಚಿದ ಆತಂಕ

    Live Tv

  • ಮಂತ್ರಾಲಯದ ಹೆಸರಲ್ಲಿ ನಕಲಿ ವೆಬ್‍ಸೈಟ್ – ಭಕ್ತರಿಂದ ಹಣ ವಸೂಲಿ ಮಾಡಿರುವ ಖದೀಮರು

    ಮಂತ್ರಾಲಯದ ಹೆಸರಲ್ಲಿ ನಕಲಿ ವೆಬ್‍ಸೈಟ್ – ಭಕ್ತರಿಂದ ಹಣ ವಸೂಲಿ ಮಾಡಿರುವ ಖದೀಮರು

    ರಾಯಚೂರು: ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಭಕ್ತರು ದೇಶ ಮಾತ್ರವಲ್ಲ ವಿದೇಶದಲ್ಲೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಖದೀಮರು ಮಠದ ಹೆಸರಿನಲ್ಲಿ ಆನ್‍ಲೈನ್ ಮೂಲಕ ಭಕ್ತರಿಂದ ಹಣ ವಸೂಲಿ ಮಾಡಿದ್ದಾರೆ. ಸಾಕಷ್ಟು ಜನ ಭಕ್ತರು ಸತ್ಯ ಅರಿಯದೇ ಕಾಣಿಕೆ ಅಂತಲೋ, ಭಕ್ತಿ ಸಮರ್ಪಣೆ ಅಂತಲೋ ದುಡ್ಡನ್ನು ಹಾಕಿ ಮೋಸ ಹೋಗಿದ್ದಾರೆ.

    ಮೊದಲ ಪ್ರಕರಣ
    ಕಲಿಯುಗದ ಕಾಮಧೇನು ಮಂತ್ರಾಲಯ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಹೆಸರು ದುರ್ಬಳಕೆ ಮಾಡಿಕೊಂಡು ಕಳೆದ ಎರಡು ವರ್ಷಗಳಿಂದ ವಿವಿಧ ಗುಂಪುಗಳು ಆನ್‍ಲೈನ್‍ನಲ್ಲಿ ಭಕ್ತರಿಂದ ಹಣ ವಸೂಲಿ ನಡೆಸಿವೆ. ಮಠದಲ್ಲಿ 25 ರೂಪಾಯಿಗೆ ಸಿಗುವ ಪರಿಮಳ ಪ್ರಸಾದದ ಒಂದು ಪ್ಯಾಕೆಟ್‍ನ್ನು ನೇರವಾಗಿ ಹೋಂ ಡೆಲಿವರಿ ಮಾಡುತ್ತೇವೆ ಎಂದು ಒಂದು ಪ್ಯಾಕೆಟ್‍ಗೆ 400 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಇದರಿಂದಲೇ ಭಕ್ತರಿಂದ ಲಕ್ಷಾಂತರ ರೂಪಾಯಿ ವಸೂಲಿಯಾಗಿದೆ. ಇದನ್ನೂ ಓದಿ: ಪ್ರತ್ಯೇಕ ರಾಜ್ಯ ಕೇಳುವುದು ಮೂರ್ಖತನ, ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು: ಬಸವರಾಜ ಹೊರಟ್ಟಿ 

    ಎರಡನೇ ಪ್ರಕರಣ
    ಮಂತ್ರಾಲಯದ ಸ್ಥಳೀಯ ಧಿರೇಂದ್ರ ಕೊರೊನಾ ಬಳಿಕ ಮಠದ ಸಿಬ್ಬಂದಿ, ಅರ್ಚಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಿ ಎಂದು ಬ್ಯಾಂಕ್ ಅಕೌಂಟ್ ನಂಬರ್, ಗೂಗಲ್ ಪೇ ನಂಬರ್ ನೀಡಿ ಭಕ್ತರಿಂದ ಹಣ ವಸೂಲಿ ಮಾಡಿದ್ದಾನೆ.

    ಮೂರನೇ ಪ್ರಕರಣ
    ಮಂತ್ರಾಲಯದಲ್ಲಿನ ಯೋಜನೆಗೆ ಶ್ರೀಮಠದ ಭಕ್ತರು ಪ್ರಯೋಜಕತ್ವವನ್ನು ವಹಿಸಿಕೊಳ್ಳುವುದಕ್ಕೆ ಹಾಗೂ ದೇಣಿಗೆ ನೀಡುವಂತೆ ಕೋರಿ ‘ಮಾತೃಭೂಮಿ ಹಿಂದೂ ಸ್ಪಂದನೆ’ ಹೆಸರಿನ ವಾಟ್ಸಪ್ ಗ್ರೂಪ್‍ನಲ್ಲಿ ಹಣ ವಸೂಲಿ ನಡೆಸಲಾಗಿದೆ. ಈಗಾಗಲೇ ಪ್ರತ್ಯೇಕ ಮೂರು ಪ್ರಕರಣಗಳು ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಇಬ್ಬರು ಆರೋಪಿಗಳ ಬಂಧನವಾಗಿದೆ.

    ಮುಂದೆ ಯಾವುದೇ ಭಕ್ತರು ವಂಚಕರ ಬಲೆಗೆ ಬೀಳದೆ, ಕಾಣಿಕೆ ನೀಡುವವರು ನೇರವಾಗಿ ಮಠದ ಅಧಿಕೃತ ವೆಬ್‍ಸೈಟ್ ಮೂಲಕ ಅಥವಾ ನೇರವಾಗಿ ದೇಣಿಗೆ ನೀಡಬೇಕು. ಮೋಸ ಹೋದವರು ತಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲೇ ದೂರು ದಾಖಲಿಸಬೇಕು ಎಂದು ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ತಿಳಿಸಿದ್ದಾರೆ.

    ಭಕ್ತರು ವಂಚಕರ ಹಾವಳಿ ಹೆಚ್ಚಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನಕಲಿ ವೆಬ್‍ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಠದ ಹೆಸರು ಬಳಸಿಕೊಂಡು ಹಣ ವಸೂಲಿಗೆ ನಿಂತಿರುವವರನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: 819 ಕೋಟಿ ವಂಚಿಸಿದ್ರಾ ಮಾಜಿ ಸಚಿವ..? – ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ್ ಗಂಭೀರ ಆರೋಪ

    ಕಳೆದ ಎರಡು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ವಿವಿಧ ಗುಂಪುಗಳು ರಾಯರ ಮಠದ ಹೆಸರಿನಲ್ಲಿ ವಸೂಲಿ ಮಾಡಿವೆ. ಕನಿಷ್ಠ ಈಗಲಾದ್ರೂ ಭಕ್ತರು ಎಚ್ಚೆತ್ತುಕೊಂಡು ಹಣ ವರ್ಗಾವಣೆ ಮಾಡಬೇಕಿದೆ. ಆಂಧ್ರಪ್ರದೇಶ ಹಾಗೂ ಕರ್ನಾಟಕ ಪೊಲೀಸರು ಖದೀಮರ ಗುಂಪುಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕಿದೆ.

    Live Tv

  • ಅಶ್ಲೀಲ ಚಿತ್ರ ವೀಕ್ಷಿಸುವ ಕೆಲಸಕ್ಕೆ 22ರ ಯುವತಿ ನೇಮಕ – ಗಂಟೆಗೆ 1,500 ರೂ. ವೇತನ

    ಅಶ್ಲೀಲ ಚಿತ್ರ ವೀಕ್ಷಿಸುವ ಕೆಲಸಕ್ಕೆ 22ರ ಯುವತಿ ನೇಮಕ – ಗಂಟೆಗೆ 1,500 ರೂ. ವೇತನ

    ಸ್ಕಾಟ್‌ಲ್ಯಾಂಡ್: ಸ್ಕಾಟ್‌ಲ್ಯಾಂಡ್‌ನ 22 ವರ್ಷದ ಮಹಿಳೆಯನ್ನು ವೆಬ್‌ಸೈಟ್ ಕಂಪನಿಯೊಂದು ಅಶ್ಲೀಲ ಚಿತ್ರ ವೀಕ್ಷಿಸಲು ನೇಮಿಸಿಕೊಂಡಿದೆ.

    ಗಂಟೆಗೆ 1,500 ರೂ. ವೇತನ ನೀಡುವ ಮೂಲಕ ಗ್ರೀನಾಕ್‌ನಿಂದ ಬಂದಿರುವ ರೆಬೆಕಾ ಡಿಕ್ಸನ್ ಎನ್ನುವ ಯುವತಿಯನ್ನು ನೇಮಕ ಮಾಡಿಕೊಂಡಿದೆ. ಸಂಸ್ಥೆಯು ಅಶ್ಲೀಲ ಉದ್ಯಮದ ಬಗ್ಗೆ ಸಂಶೋಧನೆ ನಡೆಸಲು ಈಕೆಯನ್ನು ನೇಮಿಸಿಕೊಂಡಿದೆ. 90 ಸಾವಿರ ಅರ್ಜಿದಾರರು ಪೂರೈಕೆ ಸಂಸ್ಥೆ ರೆಬೆಕಾರನ್ನು ಆಯ್ಕೆ ಮಾಡಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಪಾಕಿಸ್ತಾನಿ ಎಲ್‍ಇಟಿ ಉಗ್ರ ಎನ್‍ಕೌಂಟರ್ – ಮೂವರು ಅರೆಸ್ಟ್

    ಈ ಕೆಲಸವು ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಲೈಂಗಿಕ ಸ್ಥಾನಗಳು, ಅವಧಿ, ಪರಾಕಾಷ್ಠೆಗಳ ಸಂಖ್ಯೆ, ಪುರುಷ – ಸ್ತ್ರೀಯರ ಅನುಪಾತ ಮತ್ತು ಭಾಷೆಯ ವಿತರಣೆಯಂತಹ ಕೇಂದ್ರೀಕೃತ ಕ್ಷೇತ್ರಗಳ ಕುರಿತು ಡೇಟಾವನ್ನು ಸಂಗ್ರಹಿಸುವುದಾಗಿದೆ. ಇದನ್ನೂ ಓದಿ: ಅಸ್ಸಾಂ, ಮೇಘಾಲಯ ಪ್ರವಾಹ: ಸಾವಿನಸಂಖ್ಯೆ 46ಕ್ಕೆ ಏರಿಕೆ – 4,000 ಹಳ್ಳಿಗಳಿಗೆ ಹಾನಿ

    ಈ ಕುರಿತು ಮಾತನಾಡಿರುವ ಯುವತಿ, ನನ್ನನ್ನು ಈ ಕೆಲಸಕ್ಕೆ ನೇಮಿಸಿಕೊಂಡದ್ದು ನನಗೇ ಶಾಕ್ ಆಗಿದೆ. ಅಲ್ಲದೆ ಈ ಕೆಲಸ ನನಗೆ ಉತ್ತಮ ಅವಕಾಶ ನೀಡಿದೆ. ನಾನು ಇದನ್ನು ಒಂದು ಪ್ರಾಜೆಕ್ಟ್ ಆಗಿಯೇ ಪರಿಗಣಿಸುತ್ತೇನೆ ಎಂದು ಹೇಳಿದ್ದರೆ.

    Live Tv

  • ವಿಶ್ವವೇ ಮುಸ್ಲಿಮರಿಗೆ ಕ್ಷಮೆ ಕೇಳ್ಬೇಕು – 500 ವೆಬ್‌ಸೈಟ್ಸ್ ಹ್ಯಾಕ್, ಪ್ರವಾದಿ ಅವಹೇಳನಕ್ಕಿದೆಯಾ ಲಿಂಕ್?

    ವಿಶ್ವವೇ ಮುಸ್ಲಿಮರಿಗೆ ಕ್ಷಮೆ ಕೇಳ್ಬೇಕು – 500 ವೆಬ್‌ಸೈಟ್ಸ್ ಹ್ಯಾಕ್, ಪ್ರವಾದಿ ಅವಹೇಳನಕ್ಕಿದೆಯಾ ಲಿಂಕ್?

    ಮುಂಬೈ: ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಬಗೆಗಿನ ಗದ್ದಲದ ನಡುವೆಯೇ ಮಹಾರಾಷ್ಟ್ರದ ಥಾಣೆ ನಗರ ಪೊಲೀಸ್ ಕಮಿಷನರೇಟ್ ಸೇರಿಂತೆ 500ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಮಂಗಳವಾರ ಹ್ಯಾಕ್ ಆಗಿವೆ.

    ಕಮಿಷನರೇಟ್‌ನ ಹ್ಯಾಕ್ ಆದ ವೆಬ್‌ಸೈಟ್‌ನಲ್ಲಿ ಸಂದೇಶವೊಂದು ಕಾಣಿಸಿಕೊಂಡಿದ್ದು, ಅದರಲ್ಲಿ ಜಗತ್ತಿನಾದ್ಯಂತ ಮುಸ್ಲಿಮರಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ. ಮೇಲ್ನೋಟಕ್ಕೆ ಈ ಸಂದೇಶವನ್ನು ಭಾರತ ಸರ್ಕಾರಕ್ಕೆ ನಿರ್ದೇಶಿಸಿರುವಂತಿದೆ.

    ಘಟನೆ ಬಳಿಕ ಮಹಾರಾಷ್ಟ್ರದ ಸೈಬರ್ ಸೆಲ್ ಹ್ಯಾಕ್ ಆಗಿರುವ ರಾಜ್ಯ ಸರ್ಕಾರದ ವೆಬ್‌ಸೈಟ್‌ಗಳನ್ನು ಸರಿಪಡಿಸುವಂತೆ ಆದೇಶಿಸಿದೆ ಹಾಗೂ ಘಟನೆ ಬಗ್ಗೆ ತನಿಖೆ ಪ್ರಾರಂಭಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಯುಪಿಯಲ್ಲಿ ಬುಲ್ಡೋಜರ್ ಆ್ಯಕ್ಷನ್ ಕಾನೂನಿನ ಅಪಹಾಸ್ಯ- ಕೋರ್ಟ್ ಮೆಟ್ಟಿಲೇರಲು ಮಾಜಿ ನ್ಯಾಯಾಧೀಶರ ಒತ್ತಾಯ

    ಈ ಬಗ್ಗೆ ಮಾಹಿತಿ ನೀಡಿದ ಮಹಾರಾಷ್ಟ್ರದ ಸೈಬರ್ ಸೆಲ್ ಎಡಿಜಿ ಮಧುಕರ್ ಪಾಂಡೆ, ಇಂದು 500ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. 70ಕ್ಕೂ ಹೆಚ್ಚು ವೆಬ್‌ಸೈಟ್‌ಗಳ ಮೇಲೆ ದಾಳಿ ನಡೆಸಲಾಗಿದ್ದು, ಅವುಗಳಲ್ಲಿ 3 ಸರ್ಕಾರಿ ವೆಬ್‌ಸೈಟ್‌ಗಳು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ವೆಬ್‌ಸೈಟ್‌ಗಳು ಸೇರಿವೆ. ನಾವು ಈಗಾಗಲೇ ಹಲವು ವೆಬ್‌ಸೈಟ್‌ಗಳನ್ನು ಸರಿಪಡಿಸಿದ್ದೇವೆ, ಇನ್ನೂ ಹಲವು ವೆಬ್‌ಸೈಟ್‌ಗಳನ್ನು ಸರಿಪಡಿಸಬೇಕಿದೆ ಎಂದು ತಿಳಿಸಿದರು.

    ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಇದೀಗ ಎಲ್ಲೆಡೆ ಉದ್ವಿಗ್ನತೆ ಎದ್ದಿದ್ದು, ಇದರ ಬೆನ್ನಲ್ಲೇ ಹಲವು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. ಈ ಗದ್ದಲಕ್ಕೂ ಸೈಬರ್ ಹ್ಯಾಕ್‌ಗೂ ಸಂಬಂಧ ಇರುವಂತೆ ತೋರುತ್ತದೆ. ಭಾರತದಲ್ಲಿ ಹಲವು ವೆಬ್‌ಸೈಟ್‌ಗಳು ಹ್ಯಾಕ್ ಆಗಿವೆ. ಮಲೇಷ್ಯಾ ಹಾಗೂ ಇಂಡೋನೇಷ್ಯಾದಲ್ಲೂ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಹ್ಯಾಕರ್ಸ್‌ಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಚಾಮುಲ್ ಚುನಾವಣೆ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ತೀವ್ರ ಮುಖಭಂಗ

    ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ತಮ್ಮ ಸ್ಥಾನದಿಂದ ಅಮಾನತಾಗಿದ್ದರು. ಅವರ ಹೇಳಿಕೆಯಿಂದ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಮುಸ್ಲಿಂ ಸಮುದಾಯದವರಿಂದ ಟೀಕೆಗೆ ಗುರುಯಾಗಿ ಪ್ರತಿಭಟನೆಗಳನ್ನು ಮಾಡಲಾಗಿತ್ತು.

  • ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಆಸೆ ತೋರಿಸಿ ವಂಚನೆ!

    ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಆಸೆ ತೋರಿಸಿ ವಂಚನೆ!

    ಜೈಪುರ: ವೈಷ್ಣೋದೇವಿ ಯಾತ್ರಾರ್ಥಿಗಳಿಗೆ ನಕಲಿ ಹೆಲಿಕಾಪ್ಟರ್ ಟಿಕೆಟ್‍ಗಳನ್ನು ಮಾರಾಟ ಮಾಡುತ್ತಿದ್ದ ನಾಲ್ಕು ಜನರ ತಂಡವನ್ನು ಬಂಧಿಸಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ಬೆಳಕಿಗೆ ಬಂದಿದೆ.

    ಜಮ್ಮು ಮತ್ತು ರಾಜಸ್ಥಾನದ ಸೈಬರ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಸುನೀಲ್ ಚಾವ್ಲಾ, ದೀಪಕ್, ಗಜಾನಂದ್ ಮತ್ತು ಮೋನು ಪಂಕಜ್ ಬಂಧಿತ ಆರೋಪಿಗಳು. ವೈಷ್ಣೋದೇವಿ ದೇಗುಲಕ್ಕೆ ಭೇಟಿ ನೀಡಲು ಉದ್ದೇಶಿಸಿರುವ ಯಾತ್ರಾರ್ಥಿಗಳಿಗೆ ವಿಶೇಷ ಟೂರ್ ಪ್ಯಾಕೇಜ್ ಅಡಿಯಲ್ಲಿ ಹೆಲಿಕಾಪ್ಟರ್ ಟಿಕೆಟ್ ನೀಡುವ ನಕಲಿ ಆನ್‍ಲೈನ್ ಸೈಟ್‍ಗಳ ಕುರಿತು ಶ್ರೀ ಮಾತಾ ವೈಷ್ಣೋದೇವಿ ಪುಣ್ಯಕ್ಷೇತ್ರ ಮಂಡಳಿ, ಹೆಲಿಕಾಪ್ಟರ್ ಸೇವಾ ಸಂಸ್ಥೆಗಳು ಹಾಗೂ ಹಲವು ಯಾತ್ರಾರ್ಥಿಗಳು ನೀಡಿದ್ದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

    ಈ ಸಂಬಂಧ ನಕಲಿ ವೆಬ್‍ಸೈಟ್‍ಗಳ ಬಗ್ಗೆ ಡೊಮೇನ್ ಪೂರೈಕೆದಾರ `ಗೋಡ್ಯಾಡಿ’ಯಿಂದ ಮಾಹಿತಿ ಪಡೆದುಕೊಂಡ ಜಮ್ಮು ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಡೊಮೇನ್ ಸಹಾಯದಿಂದ ಐಪಿ ವಿಳಾಸ ಹಾಗೂ ನೋಂದಣಿ ವಿವರಗಳನ್ನು ಆಧರಿಸಿ ತನಿಖೆ ಮುಂದುವರಿಸಿದಾಗ ಸುಮಾರು 40 ನಕಲಿ ವೆಬ್‍ಸೈಟ್‍ಗಳು ಪತ್ತೆಯಾಗಿವೆ. ಇದನ್ನೂ ಓದಿ: ಪರೀಕ್ಷಾ ಸಮಯದಲ್ಲೇ ಉಪಚುನಾವಣೆ ಯಾಕೆ – ಆಯೋಗದ ವಿರುದ್ಧ ಮಮತಾ ಕಿಡಿ

    ಇದೇ ವೇಳೆ ರಾಜಸ್ಥಾನದ ಕೋಟಾದಲ್ಲಿ ವಂಚಕರು ಎಲ್ಲಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಸೈಬರ್ ತಜ್ಞರ ತನಿಖೆ ಆಧಾರದ ಮೇಲೆ ಜಮ್ಮುವಿನ ಸೈಬರ್ ಪೊಲೀಸ್ ವಷ್ಠಾಧಿಕಾರಿ ನರೇಶ್‍ಸಿಂಗ್ ಅವರು ವಿಶೇಷ ತಂಡ ರಚಿಸಿ ವಂಚಕರನ್ನು ಬಂಧಿಸಲು ರಾಜಸ್ಥಾನಕ್ಕೆ ಕಳುಹಿಸಿದರು. ಈ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಮುಂದಿನ ತನಿಖೆಗಾಗಿ ಜಮ್ಮುವಿಗೆ ಕರೆತರಲಾಗುತ್ತಿದೆ ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದ್ದಾರೆ.

  • ಜುಲೈ 20ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ – ಪಿಯುಸಿ ಬೋರ್ಡ್

    ಜುಲೈ 20ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ – ಪಿಯುಸಿ ಬೋರ್ಡ್

    ಬೆಂಗಳೂರು: ಕೊರೊನಾದಿಂದ ರದ್ದಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜುಲೈ 20 ರಂದು ಪ್ರಕಟವಾಗಲಿದೆ. ಈಗಾಗಲೇ ಫಲಿತಾಂಶ ಪ್ರಕಟ ಮಾಡಲು ಪಿಯುಸಿ ಬೋರ್ಡ್ ಸಿದ್ಧತೆ ಮಾಡಿಕೊಂಡಿದೆ. ಜುಲೈ 20ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಅಂತ ಪಬ್ಲಿಕ್ ಟಿವಿಗೆ ಪಿಯುಸಿ ಬೋರ್ಡ್ ನಿರ್ದೇಶಕಿ ಸ್ನೇಹಲ್ ಮಾಹಿತಿ ನೀಡಿದ್ದಾರೆ.

    ಜುಲೈ 20 ರಂದು ಇಲಾಖೆಯ ವೆಬ್ ಸೈಟ್ ನಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದ್ದು, ಗ್ರೇಡ್ ಬದಲಿಗೆ ಅಂಕಗಳನ್ನೇ ನೀಡಲು ಪಿಯುಸಿ ಬೋರ್ಡ್ ನಿರ್ಧಾರ ಮಾಡಿದೆ. ಹೀಗಾಗಿ ಅಂಕಗಳ ಮಾದರಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ.

    ವಿದ್ಯಾರ್ಥಿಗಳು ಫಲಿತಾಂಶ ನೋಡಲು ನೋಂದಣಿ ಸಂಖ್ಯೆ ಪಡೆದುಕೊಳ್ಳಬೇಕು. ಇಲಾಖೆ ವೆಬ್ ಸೈಟ್ ನಲ್ಲಿ “Know my registration number”ಲಿಂಕ್ ನೀಡಿ ಆ ಲಿಂಕ್ ಮೂಲಕ ಪ್ರತಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಪಡೆಯಬಹುದು. ಇಂದಿನಿಂದ ಈ ಲಿಂಕ್ ಓಪನ್ ಆಗಲಿದೆ ಅಂತ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳ ಇಮೇಲ್ ಮತ್ತು ಮೊಬೈಲ್ ಗೆ ಪಿಯುಸಿ ಬೋರ್ಡ್ ಲಿಂಕ್ ಕಳಿಸಿ ಕೊಡಲಿದೆ.

    ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡಿ ಎಲ್ಲಾ ವಿದ್ಯಾರ್ಥಿಗಳನ್ನ ಸರ್ಕಾರ ಪಾಸ್ ಮಾಡಿತ್ತು. ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲು ವಿದ್ಯಾರ್ಥಿಯು ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಶೇ.45 ಅಂಕ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪಡೆದ ಶೇ.45 ಅಂಕ ಹಾಗೂ ಶೇ.10 ಇಂಟರ್ನಲ್ ಅಸೆಸ್ಮೆಂಟ್ ಅಂಕಗಳ ಆಧಾರದಲ್ಲಿ ಈ ವರ್ಷ ಪಿಯುಸಿ ಬೋರ್ಡ್ ಫಲಿತಾಂಶ ಪ್ರಕಟ ಮಾಡಲಿದೆ. ಒಂದು ವೇಳೆ ಫಲಿತಾಂಶ ತೃಪ್ತಿಯಾಗದ ವಿದ್ಯಾರ್ಥಿಗಳು ಬಯಸಿದರೆ ಮತ್ತೆ ಪರೀಕ್ಷೆ ಬರೆಯಲು ಬೋರ್ಡ್ ಅವಕಾಶ ಮಾಡಿಕೊಡಲಿದೆ. ಇದನ್ನೂ ಓದಿ:ಬನ್ನೇರುಘಟ್ಟದಿಂದ ಶಿವಮೊಗ್ಗದ ಹುಲಿ ಸಿಂಹಧಾಮಕ್ಕೆ ಆಗಮಿಸಿದ ಹೊಸ ಅತಿಥಿಗಳು