Tag: web portal

  • ಸೋಮವಾರದಿಂದ ಟಫ್ ರೂಲ್ಸ್ – ಪಿಜಿಗಳಿಗಾಗಿಯೇ ಹೊಸ ವೆಬ್ ಪೋರ್ಟಲ್

    ಸೋಮವಾರದಿಂದ ಟಫ್ ರೂಲ್ಸ್ – ಪಿಜಿಗಳಿಗಾಗಿಯೇ ಹೊಸ ವೆಬ್ ಪೋರ್ಟಲ್

    ಬೆಂಗಳೂರು: ಪಿಜಿಗಳಲ್ಲಿ (PG) ಇದ್ದುಕೊಂಡು ಅನೈತಿಕ ಚಟುವಟಿಕೆಗಳನ್ನು (Unethical Activity) ನಡೆಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನಗರದಲ್ಲಿ ಸುಮಾರು ಐದು ಸಾವಿರ ಪಿಜಿಗಳದ್ದು, ಯಾರು ಬರುತ್ತಾರೆ, ಯಾರು ಹೋಗುತ್ತಾರೆ, ಅವರ ಹಿನ್ನೆಲೆ ಏನು ಎಂಬುದು ಗೊತ್ತಾಗುತ್ತಿಲ್ಲ. ಹಾಗಾಗಿ ಪೊಲೀಸರು ಹೊಸದೊಂದು ಪ್ಲಾನ್ ಮಾಡಿದ್ದಾರೆ.

    ಬೆಂಗಳೂರು (Bengaluru) ಎಂಬ ಈ ಮಾಯನಗರಿಗೆ ದಿನ ಲಕ್ಷಾಂತರ ಜನ ಬಂದು ಹೋಗಿ ಮಾಡುತ್ತಾರೆ. ಯಾರು ಎಲ್ಲಿಂದ ಬರುತ್ತಾರೆ? ಎಲ್ಲಿಗೆ ಹೋಗುತ್ತಾರೆ? ಅವರು ಬೆಂಗಳೂರಿಗೆ ಬಂದಿರುವುದು ಯಾಕೆ ಎಂಬುದನ್ನು ಕಂಡುಹಿಡಿಯುವುದೇ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಇತ್ತೀಚಿಗೆ ದೇಶವಿರೋಧಿ ಚಟುವಟಿಗಳು ನಡೆಸುವವರು, ರೌಡಿಶೀಟರ್‌ಗಳು ಪಿಜಿಗಳ ಕಡೆ ಮುಖ ಮಾಡಿದ್ದಾರೆ. ಹೋಟೆಲ್, ಲಾಡ್ಜ್‌ಗಳಲ್ಲಿ ಉಳಿದುಕೊಂಡರೇ ಪೊಲೀಸರ ಕಣ್ಣುತಪ್ಪಿಸುವುದು ಕಷ್ಟ ಎಂಬುದನ್ನು ತಿಳಿದಿರುವ ಆರೋಪಿಗಳು, ನಕಲಿ ಐಡಿ ಅಡ್ರೆಸ್‌ಗಳನ್ನು ನೀಡಿ ಪಿಜಿಗಳಲ್ಲಿ ವಾಸ ಮಾಡಲು ಶುರುಮಾಡಿದ್ದಾರೆ ಎಂಬುದು ಬಯಲಾಗಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ಬೆಂಗಳೂರಿನಲ್ಲಿ ಸುಮಾರು ಐದು ಸಾವಿರ ಪಿಜಿಗಳಿದ್ದು, ಅದರಲ್ಲಿ ಬರೋಬ್ಬರಿ ನಾಲ್ಕೂವರೆ ಲಕ್ಷ ಜನ ವಾಸವಾಗಿದ್ದಾರೆ. ಇದರಿಂದ ಎಚ್ಚೆತ್ತ ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳು ನಗರದ ಎಲ್ಲಾ ಪಿಜಿಗಳಿಗೆ ಪ್ರತ್ಯೇಕ ವೆಬ್ ಪೋರ್ಟಲ್ (Web Portal) ಮಾಡಲು ಮುಂದಾಗಿದ್ಧಾರೆ. ಪಿಜಿಯ ಹೆಸರು, ಮಾಲೀಕರ ಅಡ್ರೆಸ್, ಅಲ್ಲಿಗೆ ಬರುವವರ ಗುರುತು, ಅಧಾರ್ ಕಾರ್ಡ್, ಫೋಟೋ, ಸಿಸಿಟಿವಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಈ ವೆಬ್ ಪೋರ್ಟಲ್‌ನಲ್ಲಿ ನಮೂದಿಸಬೇಕು. ಹೀಗೆ ಮಾಡುವುದರಿಂದ ಅಪರಿಚಿತ ವ್ಯಕ್ತಿಗಳ ಗುರುತು ಪತ್ತೆ ಮಾಡಲು ಅಥವಾ ಅಪರಾಧ ಚಟುವಟಿಕೆಗಳು ನಡೆದರೆ ಆರೋಪಿಗಳನ್ನು ಸೆರೆಹಿಡಿಯಲು ಸುಲಭವಾಗುತ್ತದೆ ಎಂಬ ನಿಟ್ಟಿನಲ್ಲಿ ಈ ಪ್ಲಾನ್ ಮಾಡಲಾಗಿದೆ. ಈಗಾಗಲೇ ನಗರದ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ 147 ಪಿಜಿಗಳನ್ನು ಪೋರ್ಟಲ್‌ಗೆ ನಮೂದಿಸುತ್ತಿದ್ದು, ಹಂತ ಹಂತವಾಗಿ ಇಡೀ ಬೆಂಗಳೂರಿನ ಪಿಜಿಗಳನ್ನು ಇದರ ವ್ಯಾಪ್ತಿಗೆ ತರಲು ಮುಂದಾಗಿದ್ದಾರೆ. ಇದನ್ನೂ ಓದಿ: ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಕಸರತ್ತು – ಅಧ್ಯಕ್ಷರ ಮೊದಲ ಪಟ್ಟಿ ಫೈನಲ್: ಸಭೆಯಲ್ಲಿ ಏನಾಯ್ತು?

    ಬೇರೆ ಬೇರೆ ಉದ್ದೇಶಗಳಿಗೆ ನಗರಕ್ಕೆ ಬಂದು ಕೃತ್ಯವೆಸಗಿ ಎಸ್ಕೇಪ್ ಆಗುವವರನ್ನು ಪತ್ತೆ ಮಾಡಲು ಇದು ಸಹಕಾರಿಯಾಗಲಿದೆ ಎಂಬುದು ಪೊಲೀಸರ ವಾದ. ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲ ನೀಡಲಿದೆ? ಇದರ ಸಾಧಕಬಾದಕಗಳೇನು ಎಂದು ಎಲ್ಲಾ ಪಿಜಿಗಳನ್ನು ಪೋರ್ಟಲ್ ವ್ಯಾಪ್ತಿಗೆ ತಂದ ಮೇಲಷ್ಟೇ ಗೊತ್ತಾಗಬೇಕಿದೆ. ಇದನ್ನೂ ಓದಿ: ಧೂಳು ಹಿಡಿದ ಲಾರಿಯಲ್ಲಿ ಬೆಲೆ ಬಾಳುವ ಔಷಧಿಗಳ ಸಂಗ್ರಹ

  • ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ

    ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ರಕ್ಷಣೆಗೆ ರಾಜ್ಯ ಸರ್ಕಾರದಿಂದ ವೆಬ್ ಪೋರ್ಟಲ್ ಪ್ರಾರಂಭ

    ವಾಷಿಂಗ್ಟನ್: ರಷ್ಯಾ ದಾಳಿಯಿಂದ ನಲುಗಿರುವ ಉಕ್ರೇನ್‍ನಲ್ಲಿ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ  ವೆಬ್ ಪೋರ್ಟಲ್ ಪ್ರಾರಂಭ ಮಾಡಿದೆ.

    ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಕ್ಕೆ ಸರ್ಕಾರ ವೆಬ್ ಫೋರ್ಟಲ್ ಪ್ರಾರಂಭಿಸಿದೆ.  http://ukraine.karnataka.tech/stranded ಈ ವೆಬ್ ಪೋರ್ಟಲ್ ಮೂಲಕ ಮಾಹಿತಿಗಳನ್ನ ಅಪ್ ಲೋಡ್ ಮಾಡಬಹುದಾಗಿದೆ.

    ಉಕ್ರೇನ್‍ನಲ್ಲಿರುವ ಕನ್ನಡಿಗರ ರಕ್ಷಣೆ ವಿಚಾರವಾಗಿ ಮಾತನಾಡಿದ ನೋಡಲ್ ಅಧಿಕಾರಿ ಮನೋಜ್ ರಾಜನ್, ಸಿಎಂ ಸೂಚನೆ ಮೇರೆಗೆ ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ನಿನ್ನೆ ರಾತ್ರಿಯಿಂದ ನಾವು ಕೆಲಸ ಮಾಡುತ್ತಿದ್ದೇವೆ. 27 ಜಿಲ್ಲೆಗಳ 281 ಕನ್ನಡಿಗರು ರಿಪೋರ್ಟ್ ಆಗಿದ್ದಾರೆ. ಅವರು ನಮಗೆ ಮಾಹಿತಿ ನೀಡಿದ್ದಾರೆ. ಆ ಮಾಹಿತಿಯನ್ನು ನಾವು ಕೇಂದ್ರ ಮತ್ತು ಉಕ್ರೇನ್ ರಾಯಭಾರಿ ಕಚೇರಿಗೂ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.

    ಬೆಳಗಿನ ಜಾವ 6 ಗಂಟೆಯಲ್ಲಿ ನಡೆದಿರೋ ದಾಳಿಯ ಕುರಿತಾಗಿ ವಿದ್ಯಾರ್ಥಿಗಳ ಮಾಹಿತಿ ಪಡೆಯಲು ಆ್ಯಪ್ ಪ್ರಾರಂಭ ಮಾಡಿದ್ದೇವೆ. ಈ ಆ್ಯಪ್‌ನಲ್ಲಿ ವಿದ್ಯಾರ್ಥಿಗಳು ಮಾಹಿತಿ ಕೊಡಬಹುದು. ವಿದ್ಯಾರ್ಥಿಗಳು ಮಾಹಿತಿ ಅಪ್ ಲೋಡಬೇಕು. ಮೊಬೈಲ್ ಆ್ಯಪ್‌ನಲ್ಲಿ ಮಾಹಿತಿ ಕೊಟ್ಟ ಬಳಿಕ ಅವರ ಮಾಹಿತಿ ಕೇಂದ್ರ ಸರ್ಕಾರ ಮತ್ತು ಉಕ್ರೇನ್ ರಾಯಭಾರಿ ಕಚೇರಿಗೆ ಕೊಡುತ್ತೇವೆ. ವಿದ್ಯಾರ್ಥಿಗಳ ರಕ್ಷಣೆಗಾಗಿ ನಾವು ಕ್ರಮವಹಿಸಿದ್ದೇವೆ. ಪೋಷಕರು ಆತಂಕ ಪಡುವುದು ಬೇಡ. ನಾವು ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ. ವಿದ್ಯಾರ್ಥಿಗಳು ವೆಬ್ ಫೋರ್ಟ್‍ನಲ್ಲಿ ಸರಳವಾಗಿ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ಈವರೆಗೆ 281 ಜನ ನಮಗೆ ಉಕ್ರೇನ್ ನಿಂದ ಮಾಹಿತಿ ನೀಡಿದ್ದಾರೆ. 27 ಜಿಲ್ಲೆಗಳ ವಿದ್ಯಾರ್ಥಿಗಳು ಇದರಲ್ಲಿ ಇದ್ದಾರೆ. ಎಷ್ಟು ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಇದ್ದಾರೆ ಅನ್ನೋ ಮಾಹಿತಿ ಇಲ್ಲ. ಆದರೆ ಎಲ್ಲಾ ವಿದ್ಯಾರ್ಥಿಗಳು ಮೆಡಿಕಲ್ ಎಜುಕೇಶನ್‍ಗೆ ಹೋಗಿದ್ದಾರೆ. 19, 20, 21 ವರ್ಷದವರು ಹೆಚ್ಚಾಗಿ ಇದ್ದಾರೆ. ನಮ್ಮ ಜೊತೆ ಅಲ್ಲಿ ಇರೋರು ಕಾಲ್ ಮಾಡಿ ಮಾತಾಡಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದೇವೆ. ಈವರೆಗೂ ಯಾವುದೇ ಸಾವು ನೋವು ರಿಪೋರ್ಟ್ ಅಗಿಲ್ಲ. ವಿದ್ಯಾರ್ಥಿಗಳ ಮಾಹಿತಿ ಉಕ್ರೇನ್ ರಾಯಭಾರಿ ಕಚೇರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಕೊಡೋದು ನಮ್ಮ ಮೊದಲ ಆದ್ಯತೆ. ಅಲ್ಲಿನ ವಿದ್ಯಾರ್ಥಿಗಳಿಗೆ ಅಗತ್ಯ ಊಟದ ವ್ಯವಸ್ಥೆ, ಇನ್ನಿತರ ಸೌಕರ್ಯ ಒದಗಿಸೋದು ನಮ್ಮ ಆದ್ಯತೆ ಎಂದು ನೋಡಲ್ ಅಧಿಕಾರಿ ಮನೋಜ್ ರಾಜನ್ ಹೇಳಿದ್ದಾರೆ. ಇದನ್ನೂ ಓದಿ:  ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    ಉಕ್ರೇನ್‍ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಕರೆತರುವ ವಿಚಾರ ವಿದೇಶಾಂಗ ಸಚಿವ ಜೈಶಂಕರ್ ಜೊತೆ ಮಾತನಾಡಿದ್ದೇನೆ. ವಿದ್ಯಾರ್ಥಿಗಳ ಸುರಕ್ಷತೆಗೆ ಸಂಪೂರ್ಣ ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.