Tag: weather

  • ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ಗುಡ್‍ನ್ಯೂಸ್- ನಾಳೆ, ನಾಡಿದ್ದು ಬೆಂಗಳೂರಲ್ಲಿ ಮಳೆ ಸಾಧ್ಯತೆ

    ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ಗುಡ್‍ನ್ಯೂಸ್- ನಾಳೆ, ನಾಡಿದ್ದು ಬೆಂಗಳೂರಲ್ಲಿ ಮಳೆ ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಮಳೆ ಕಾಣದೇ ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಕರುನಾಡಿಗೆ ವರುಣದೇವನ (Rain In Karnataka) ಆಗಮನದ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಹೌದು. ಇಂದಿನಿಂದ ಮುಂದಿನ 7 ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬರದಿಂದ ಕೃಷಿ ಚಟುವಟಿಕೆಗಳೆಲ್ಲ ಸಂಪೂರ್ಣ ಸ್ಥಬ್ದವಾಗಿದ್ದು, ಮಳೆಯಾದ್ರೆ ಮತ್ತೆ ಚಟುವಟಿಕೆಗಳು ಗರಿಗೆದರುವ ಸಾಧ್ಯತೆ ಇದೆ. ಇಂದಿನಿಂದ ಮುಂದಿನ 7 ದಿನಗಳ ಪೈಕಿ ಕೊನೆಯ 3 ದಿನ ಕರಾವಳಿ ಪ್ರದೇಶಕ್ಕೆ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ಬಾಕಿ 7 ದಿನವು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಿಗೆ ಮಳೆಯಾಗುವ ಸಾಧ್ಯತೆ ಇದೆ. ಇದೇ ತಿಂಗಳ 12 ಮತ್ತು 13ರಂದು ಬೆಂಗಳೂರು ಸೇರಿದಂತೆ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಬಹುದೆಂದು ಹವಾಮಾನ ಇಲಾಖೆ (Weather Department) ಸೂಚನೆ ನೀಡಿದೆ.

    ಯಾವ ದಿನ..ಎಲ್ಲೆಲ್ಲಿ ಮಳೆ ಮುನ್ಸೂಚನೆ?:
    * ಏ.11: ಬೀದರ್, ಕಲಬುರಗಿ, ವಿಜಯಪುರ, ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ.
    * ಏ.12: ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಬೆಂಗಳೂರು ನಗರ, ಚಿಕ್ಕಬಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ, ತುಮಕೂರು.

    * ಏ.13: ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲ್ಬುರ್ಗಿ, ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ಬಳ್ಳಾರಿ, ದಾವಣಗೆರ , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ತುಮಕೂರು ಮಂಡ್ಯ.
    * ಏ.14: ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೀದರ್ ಗದಗ, ಕಲ್ಬುರ್ಗಿ ರಾಯಚೂರು, ವಿಜಯಪುರ, ಯಾದಗಿರಿ, ಕೊಪ್ಪಳ, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಚಾಮರಾಜನಗರ.
    * ಏ.15: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಕಲಬುರಗಿ, ವಿಜಯಪುರ, ಚಿತ್ರದುರ್ಗಾ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ.

    ಬಿಸಿಲಿನ ತಾಪಮಾನ ಇಳಿಯೋ ಸಾಧ್ಯತೆ: ಈ ಮಧ್ಯೆ ಮತ್ತೊಂದು ಗಮನಾರ್ಹ ವಿಚಾರ ಅಂದ್ರೆ, ಕಳೆದ ಒಂದು ತಿಂಗಳಿನಿಂದ ಕಾಡಿದ್ದ ಬಿಸಿಲಿನ ತಾಪಮಾನ ಕೂಡ ಇಳಿಕೆ ಕಾಣುವ ಸಾಧ್ಯತೆ ಇದೆ. ವಾಡಿಕೆಗಿಂತ ಹೆಚ್ಚಾಗಿ ಅಬ್ಬರಿಸುತ್ತಿದ್ದ ಬಿಸಿಲು, ಸದ್ಯ ಮುಂದಿನ ಒಂದು ವಾರಗಳ ಕಾಲ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಾಣಲಿದೆ. ಸದ್ಯ ಬೆಂಗಳೂರು ಸೇರಿದಂತೆ ಇತರೆ ಭಾಗದಲ್ಲಿ ಸಾಮಾನ್ಯ ವರ್ಷಗಳಂತೆ ವಾಡಿಕೆಯಷ್ಟು ಬಿಸಿಲು ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಇದರ ಜೊತೆ ಮುಂದಿನ ಒಂದು ವಾರ ಮಳೆಯಾದರೂ ವಾಡಿಕೆಯಷ್ಟು ಮಳೆಯಾಗುವ ಸಾಧ್ಯತೆ ಕಡಿಮೆ. ಉತ್ತರ ಒಳನಾಡು ಪ್ರದೇಶಗಳಿಗೆ ಮಾತ್ರ ವಾಡಿಕೆ ಮಳೆಯಾಗುವ ಸಾಧ್ಯತೆ ಇದ್ದು, ಉಳಿದಂತೆ ದಕ್ಷಿಣ ಒಳನಾಡು, ಮತ್ತು ಕರಾವಳಿ ಪ್ರದೇಶಗಳಲ್ಲಿ ಏಪ್ರಿಲ್ ತಿಂಗಳು ಕೂಡ ವಾಡಿಕೆಗಿಂತ ಕಡಿಮೆ ಮಳೆ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ರಾಜ್ಯದ ಹವಾಮಾನ ವರದಿ: 11-04-2024

    ರಾಜ್ಯದ ಹವಾಮಾನ ವರದಿ: 11-04-2024

    ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಕರುನಾಡಿಗೆ ಹವಾಮಾನ ಇಲಾಖೆ ವರುಣಾಗಮನದ ಮುನ್ಸೂಚನೆ ಕೊಟ್ಟಿದೆ. ಮುಂದಿನ 5 ದಿನಗಳ ಕಾಲ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತರ, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಯ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು, 7 ದಿನಗಳ ಕಾಲ ಬಹುತೇಕ ಜಿಲ್ಲೆಗಳ ಕೆಲ ಭಾಗಗಳಿಗೆ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 35-22
    ಮಂಗಳೂರು: 33-26
    ಶಿವಮೊಗ್ಗ: 38-22
    ಬೆಳಗಾವಿ: 37-23
    ಮೈಸೂರು: 38-23

    ಮಂಡ್ಯ: 38-23
    ಮಡಿಕೇರಿ: 32-19
    ರಾಮನಗರ: 37-23
    ಹಾಸನ: 36-22
    ಚಾಮರಾಜನಗರ: 37-23
    ಚಿಕ್ಕಬಳ್ಳಾಪುರ: 36-21

    ಕೋಲಾರ: 36-21
    ತುಮಕೂರು: 37-22
    ಉಡುಪಿ: 33-26
    ಕಾರವಾರ: 33-26
    ಚಿಕ್ಕಮಗಳೂರು: 35-20
    ದಾವಣಗೆರೆ: 38-24

    ಹುಬ್ಬಳ್ಳಿ: 38-24
    ಚಿತ್ರದುರ್ಗ: 37-23
    ಹಾವೇರಿ: 38-24
    ಬಳ್ಳಾರಿ: 39-26
    ಗದಗ: 37-24
    ಕೊಪ್ಪಳ: 38-26

    weather

    ರಾಯಚೂರು: 38-26
    ಯಾದಗಿರಿ: 38-27
    ವಿಜಯಪುರ: 37-26
    ಬೀದರ್: 34-23
    ಕಲಬುರಗಿ: 37-26
    ಬಾಗಲಕೋಟೆ: 38-26

  • ರಾಜ್ಯದ ಹವಾಮಾನ ವರದಿ: 10-04-2024

    ರಾಜ್ಯದ ಹವಾಮಾನ ವರದಿ: 10-04-2024

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಸಿಲಿನ ತಾಪಕ್ಕೆ ಜನ ಬಸವಳಿಯುತ್ತಿದ್ದಾರೆ. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗಿದ್ದು, ಸದ್ಯ ಮತ್ತಷ್ಟು ತಾಪಮಾನ ಹೆಚ್ಚಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-21
    ಮಂಗಳೂರು: 37-22
    ಶಿವಮೊಗ್ಗ: 39-22
    ಬೆಳಗಾವಿ: 38-23
    ಮೈಸೂರು: 37-22

    ಮಂಡ್ಯ: 37-22
    ಮಡಿಕೇರಿ: 33-18
    ರಾಮನಗರ: 37-22
    ಹಾಸನ: 36-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 36-21

    ಕೋಲಾರ: 35-19
    ತುಮಕೂರು: 37-22
    ಉಡುಪಿ: 34-27
    ಕಾರವಾರ: 33-26
    ಚಿಕ್ಕಮಗಳೂರು: 36-20
    ದಾವಣಗೆರೆ: 39-23

    ಹುಬ್ಬಳ್ಳಿ: 38-23
    ಚಿತ್ರದುರ್ಗ: 38-22
    ಹಾವೇರಿ: 39-23
    ಬಳ್ಳಾರಿ: 40-26
    ಗದಗ: 39-24
    ಕೊಪ್ಪಳ: 39-25

    weather

    ರಾಯಚೂರು: 39-26
    ಯಾದಗಿರಿ: 39-27
    ವಿಜಯಪುರ: 39-27
    ಬೀದರ್: 37-24
    ಕಲಬುರಗಿ: 39-27
    ಬಾಗಲಕೋಟೆ: 40-27

  • ಬಿಸಿಲಿನ ಆರ್ಭಟಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ: ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಆರಂಭ

    ಬಿಸಿಲಿನ ಆರ್ಭಟಕ್ಕೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆ: ರಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ ಆರಂಭ

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ (Raichur) ದಿನೇ ದಿನೇ ತಾಪಮಾನ ಹೆಚ್ಚಳವಾಗುತ್ತಲೇ ಇದೆ. ತಾಪಮಾನ ಹೆಚ್ಚಳದಿಂದ ಜನ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ (RIMS Hospital) ಹೀಟ್ ಸ್ಟ್ರೋಕ್ ಮ್ಯಾನೇಜ್ಮೆಂಟ್‌ ವಾರ್ಡ್‌‌ ಅನ್ನು ತೆರೆಯಲಾಗಿದೆ. ಬಿಸಿಲಿನ ತಾಪದಿಂದ ಉಂಟಾದ ಕಾಯಿಲೆಗಳ ಚಿಕಿತ್ಸೆಗೆ ರಿಮ್ಸ್ ವೈದ್ಯರು ವಿಶೇಷ ವಾರ್ಡ್ ಆರಂಭಿಸಿದ್ದಾರೆ.

    ಇಡೀ ರಾಜ್ಯದಲ್ಲಿ ಈ ಬಾರಿಯ ಬೇಸಿಗೆ (Summer) ಜನರನ್ನ ನಿತ್ರಾಣ ಮಾಡಿದೆ. ಅದರಲ್ಲೂ ಬಿಸಿಲನಾಡು ರಾಯಚೂರಿನಲ್ಲಿ ದಾಖಲೆಯ ತಾಪಮಾನ‌ ಜನರನ್ನ ಮನೆಯಿಂದ ಹೊರ ಬರದಂತೆ ಮಾಡಿದೆ. ಹೀಗಾಗಿ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಾಯಚೂರಿನ ರಿಮ್ಸ್ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ಅತಿಯಾದ ಶಾಖ (Heat Wave) ಆರೋಗ್ಯ ಸಮಸ್ಯೆಗಳ ವಿಶೇಷ ವಾರ್ಡನ್ನ ತೆರೆಯಲಾಗಿದೆ. ಸದ್ಯ 8 ಹಾಸಿಗೆಗಳ ವಾರ್ಡನ್ನ ಅಗತ್ಯಕ್ಕೆ ತಕ್ಕಂತೆ 20 ಬೆಡ್‌ವರೆಗೆ ವಿಸ್ತರಿಸಲು ರಿಮ್ಸ್ ಆಡಳಿತ ಮಂಡಳಿ ಮುಂದಾಗಿದೆ.

    ವಿಶೇಷ ವಾರ್ಡ್‌ನಲ್ಲಿ ಅಗತ್ಯ ಫ್ಲೂಯಿಡ್ಸ್, ಡಿಫಿಬ್ರಲೇಟರ್ ಸೇರಿದಂತೆ ಅವಶ್ಯಕ ಪರಿಕರಗಳು, ಔಷಧಿ ವ್ಯವಸ್ಥೆ ಮಾಡಲಾಗಿದೆ. ಮಳೆ ಅಭಾವದಿಂದ ಈ ಬಾರಿ ರಣ ಬೇಸಿಗೆ ಇರುವುದರಿಂದ ಮೊದಲ ಬಾರಿಗೆ ಹೀಟ್ ಸ್ಟ್ರೋಕ್ ಮ್ಯಾನೇಜಮೆಂಟ್ ವಾರ್ಡ್‌ನ್ನ ತೆರೆಯಲಾಗಿದೆ. ಬೇಸಿಗೆಯ ಬೇಗೆಯಿಂದ ದೇಹದಲ್ಲಿ ಲವಣಾಂಶಗಳು ಏರುಪೇರಾದರೆ ಕಿಡ್ನಿ, ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆ ವಿಶೇಷ ವಾರ್ಡ್ ತೆರೆಯಲಾಗಿದೆ.

    ಇನ್ನೂ ರಿಮ್ಸ್ ಆಸ್ಪತ್ರೆಯ ವಿಶೇಷ ವಾರ್ಡ್‌ಗೆ ಈವರೆಗೆ ಯಾವುದೇ ರೋಗಿಗಳು ದಾಖಲಾಗದಿದ್ದರು, ಬಿಸಿಲಿನ ಅಬ್ಬರಕ್ಕೆ ಉರಿ ಮೂತ್ರ ತೊಂದರೆ, ಕಿಡ್ನಿ ಸಮಸ್ಯೆ, ಕಿಡ್ನಿಯಲ್ಲಿ ಕಲ್ಲು, ಡಿಹೈಡ್ರೇಷನ್, ಹೆಚ್ಚು ಸುಸ್ತಾಗುವುದು ಸೇರಿದಂತೆ ನಾನಾ ಸಮಸ್ಯೆಗಳಿಂದ ಹಲವಾರು ಜನ ಬಳಲುತ್ತಿದ್ದು. ಚಿಕ್ಕಮಕ್ಕಳಲ್ಲಿ ಹೆಚ್ಚಾಗಿ ನಿರ್ಜಲೀಕರಣ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಅನಾರೋಗ್ಯ ಪೀಡಿತರು ಎಡತಾಕುತ್ತಿದ್ದಾರೆ. ಆದ್ದರಿಂದ ಸಾಧ್ಯವಾದಷ್ಟು ಬಿಸಿಲಿನಲ್ಲಿ ಓಡಾಟ ಕಡಿಮೆ ಮಾಡುವಂತೆ, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆ ಇರುವವರು ಬಿಸಿಲಿನಲ್ಲಿ ಹೆಚ್ಚು ಓಡಾಡುವುದು ಅಥವಾ ಕೆಲಸ ಮಾಡದಂತೆ ವೈದ್ಯರು ಸಲಹೆ ನೀಡಿದ್ದಾರೆ.

  • ರಾಜ್ಯದ ಹವಾಮಾನ ವರದಿ: 09-04-2024

    ರಾಜ್ಯದ ಹವಾಮಾನ ವರದಿ: 09-04-2024

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. 8 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆಯಾಗಿದ್ದು, ಸದ್ಯ ಮತ್ತಷ್ಟು ತಾಪಮಾನ ಹೆಚ್ಚಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ, ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 35-20
    ಮಂಗಳೂರು: 33-27
    ಶಿವಮೊಗ್ಗ: 39-22
    ಬೆಳಗಾವಿ: 38-23
    ಮೈಸೂರು: 37-21

    weather (1)

    ಮಂಡ್ಯ: 38-22
    ಮಡಿಕೇರಿ: 33-18
    ರಾಮನಗರ: 37-22
    ಹಾಸನ: 36-20
    ಚಾಮರಾಜನಗರ: 37-21
    ಚಿಕ್ಕಬಳ್ಳಾಪುರ: 36-20

    weather

    ಕೋಲಾರ: 34-20
    ತುಮಕೂರು: 37-21
    ಉಡುಪಿ: 34-26
    ಕಾರವಾರ: 33-26
    ಚಿಕ್ಕಮಗಳೂರು: 35-19
    ದಾವಣಗೆರೆ: 39-23

    Weather

    ಹುಬ್ಬಳ್ಳಿ: 39-23
    ಚಿತ್ರದುರ್ಗ: 38-23
    ಹಾವೇರಿ: 39-23
    ಬಳ್ಳಾರಿ: 40-26
    ಗದಗ: 39-25
    ಕೊಪ್ಪಳ: 39-26

    weather

    ರಾಯಚೂರು: 39-26
    ಯಾದಗಿರಿ: 40-27
    ವಿಜಯಪುರ: 39-27
    ಬೀದರ್: 37-24
    ಕಲಬುರಗಿ: 39-27
    ಬಾಗಲಕೋಟೆ: 40-27

  • ರಾಜ್ಯದ ಹವಾಮಾನ ವರದಿ: 08-04-2024

    ರಾಜ್ಯದ ಹವಾಮಾನ ವರದಿ: 08-04-2024

    ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. 8 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆಯಾಗಿದ್ದು, ಸದ್ಯ ಮತ್ತಷ್ಟು ತಾಪಮಾನ ಹೆಚ್ಚಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 36-22
    ಮಂಗಳೂರು: 33-26
    ಶಿವಮೊಗ್ಗ: 39-23
    ಬೆಳಗಾವಿ: 38-23
    ಮೈಸೂರು: 38-23

    ಮಂಡ್ಯ: 38-23
    ಮಡಿಕೇರಿ: 32-18
    ರಾಮನಗರ: 38-23
    ಹಾಸನ: 37-21
    ಚಾಮರಾಜನಗರ: 38-23
    ಚಿಕ್ಕಬಳ್ಳಾಪುರ: 37-22

    ಕೋಲಾರ: 37-21
    ತುಮಕೂರು: 37-23
    ಉಡುಪಿ: 33-26
    ಕಾರವಾರ: 33-25
    ಚಿಕ್ಕಮಗಳೂರು: 34-19
    ದಾವಣಗೆರೆ: 39-24

    ಹುಬ್ಬಳ್ಳಿ: 39-23
    ಚಿತ್ರದುರ್ಗ: 38-23
    ಹಾವೇರಿ: 40-23
    ಬಳ್ಳಾರಿ: 41-26
    ಗದಗ: 39-24
    ಕೊಪ್ಪಳ: 39-25

    weather

    ರಾಯಚೂರು: 41-26
    ಯಾದಗಿರಿ: 42-27
    ವಿಜಯಪುರ: 39-27
    ಬೀದರ್: 38-24
    ಕಲಬುರಗಿ: 41-27
    ಬಾಗಲಕೋಟೆ: 41-27

  • ರಾಜ್ಯದ ಹವಾಮಾನ ವರದಿ: 07-04-2024

    ರಾಜ್ಯದ ಹವಾಮಾನ ವರದಿ: 07-04-2024

    ರಾಜ್ಯದಲ್ಲಿ ಬಿಸಿಲಿನ ಅಬ್ಬರ ಹೆಚ್ಚಾಗಿದ್ದು, ಇದರ ನಡುವೆಯೂ ಕಳೆದ ಕೆಲವು ದಿನಗಳಿಂದ ಹಲವೆಡೆ ತುಂತುರು ಮಳೆಯಾಗಿದೆ. ಇಂದು ಸಹ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು, ಹಾಸನ, ಹಾಗೂ ತುಮಕೂರಿನ ಕೆಲವು ಭಾಗಗಳಲ್ಲಿ ಮಳೆಯಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 36-22
    ಮಂಗಳೂರು: 33-27
    ಶಿವಮೊಗ್ಗ: 39-23
    ಬೆಳಗಾವಿ: 38-25
    ಮೈಸೂರು: 39-22

    ಮಂಡ್ಯ: 39-22
    ಮಡಿಕೇರಿ: 33-18
    ರಾಮನಗರ: 39-22
    ಹಾಸನ: 37-21
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 38-23

    ಕೋಲಾರ: 37-22
    ತುಮಕೂರು: 38-22
    ಉಡುಪಿ: 33-26
    ಕಾರವಾರ: 32-24
    ಚಿಕ್ಕಮಗಳೂರು: 36-20
    ದಾವಣಗೆರೆ: 40-23

    ಹುಬ್ಬಳ್ಳಿ: 40-24
    ಚಿತ್ರದುರ್ಗ: 39-23
    ಹಾವೇರಿ: 41-23
    ಬಳ್ಳಾರಿ: 42-26
    ಗದಗ: 41-25
    ಕೊಪ್ಪಳ: 40-26

    ರಾಯಚೂರು: 42-28
    ಯಾದಗಿರಿ: 42-29
    ವಿಜಯಪುರ: 41-28
    ಬೀದರ್: 39-27
    ಕಲಬುರಗಿ: 42-29
    ಬಾಗಲಕೋಟೆ: 41-28

  • ರಾಜ್ಯದ ಹವಾಮಾನ ವರದಿ: 06-04-2024

    ರಾಜ್ಯದ ಹವಾಮಾನ ವರದಿ: 06-04-2024

    ರಾಜ್ಯದಲ್ಲಿ ಬಿಸಿಲಿನ ಅಬ್ಬರದ ನಡುವೆಯೂ ಕಳೆದ ಎರಡು ದಿನಗಳಿಂದ ಕೆಲವೆಡೆ ಮಳೆಯಾಗಿದೆ. ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ಉತ್ತರ ಕರ್ನಾಟಕದಲ್ಲಿ ಇಂದು ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.

    ಇಂದಿನಿಂದ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣಕನ್ನಡ, ಬೀದರ್, ಕಲಬುರಗಿ, ಕೊಡಗು, ಮಂಡ್ಯ, ಮತ್ತು ಮೈಸೂರು ಜಿಲ್ಲೆಯಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಏ.7ರಂದು, ಬೆಂಗಳೂರು, ಹಾಸನ, ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 37-22
    ಮಂಗಳೂರು: 33-27
    ಶಿವಮೊಗ್ಗ: 39-23
    ಬೆಳಗಾವಿ: 38-25
    ಮೈಸೂರು: 39-22

    ಮಂಡ್ಯ: 39-22
    ಮಡಿಕೇರಿ: 33-18
    ರಾಮನಗರ: 39-22
    ಹಾಸನ: 37-21
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 38-23

    ಕೋಲಾರ: 37-22
    ತುಮಕೂರು: 38-22
    ಉಡುಪಿ: 33-26
    ಕಾರವಾರ: 32-24
    ಚಿಕ್ಕಮಗಳೂರು: 36-20
    ದಾವಣಗೆರೆ: 40-23

    ಹುಬ್ಬಳ್ಳಿ: 40-24
    ಚಿತ್ರದುರ್ಗ: 39-23
    ಹಾವೇರಿ: 41-23
    ಬಳ್ಳಾರಿ: 42-26
    ಗದಗ: 41-25
    ಕೊಪ್ಪಳ: 40-26

    ರಾಯಚೂರು: 42-28
    ಯಾದಗಿರಿ: 42-29
    ವಿಜಯಪುರ: 41-28
    ಬೀದರ್: 39-27
    ಕಲಬುರಗಿ: 42-29
    ಬಾಗಲಕೋಟೆ: 41-28

  • ರಾಜ್ಯದ ಹವಾಮಾನ ವರದಿ: 05-04-2024

    ರಾಜ್ಯದ ಹವಾಮಾನ ವರದಿ: 05-04-2024

    ಬಿಸಿಲಿನಿಂದ ಕಂಗೆಟ್ಟಿರುವ ಕರ್ನಾಟಕದ ಜನತೆಗೆ ಭಾರತೀಯ ಹವಾಮಾನ ಇಲಾಖೆ ಸಿಹಿ ಸುದ್ದಿ ನೀಡಿದೆ. ಇನ್ನು ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ಉತ್ತರ ಕರ್ನಾಟಕದಲ್ಲಿ ಮುಂದಿನ ಎರಡು ದಿನ ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ

    ಇದೇ ಏಪ್ರಿಲ್ 6 ರಿಂದ ನಾಲ್ಕು ದಿನ ಸಾಧಾರಣ ಮಳೆಯ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 6 ರಂದು ದಕ್ಷಿಣಕನ್ನಡ, ಬೀದರ್, ಕಲಬುರಗಿ, ಕೊಡಗು, ಮಂಡ್ಯ, ಮತ್ತು ಮೈಸೂರು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಏಪ್ರಿಲ್ 7ರಂದು, ಬೆಂಗಳೂರು, ಹಾಸನ, ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದ್ದರೆ ಏಪ್ರಿಲ್ 9 ರಂದು ಕರವಾಳಿಯ ಎಲ್ಲಾ ಜಿಲ್ಲೆಗಳು, ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳು ಸೇರಿ 18 ಜಿಲ್ಲೆಗಳಲ್ಲಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 37-22
    ಮಂಗಳೂರು: 33-27
    ಶಿವಮೊಗ್ಗ: 39-23
    ಬೆಳಗಾವಿ: 38-25
    ಮೈಸೂರು: 39-22

    ಮಂಡ್ಯ: 39-22
    ಮಡಿಕೇರಿ: 32-18
    ರಾಮನಗರ: 39-22
    ಹಾಸನ: 37-21
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 38-23

    ಕೋಲಾರ: 37-22
    ತುಮಕೂರು: 38-22
    ಉಡುಪಿ: 33-26
    ಕಾರವಾರ: 32-24
    ಚಿಕ್ಕಮಗಳೂರು: 36-20
    ದಾವಣಗೆರೆ: 40-23

    weather

    ಹುಬ್ಬಳ್ಳಿ: 40-24
    ಚಿತ್ರದುರ್ಗ: 39-23
    ಹಾವೇರಿ: 41-23
    ಬಳ್ಳಾರಿ: 42-26
    ಗದಗ: 41-25
    ಕೊಪ್ಪಳ: 40-26

    Weather

    ರಾಯಚೂರು: 42-28
    ಯಾದಗಿರಿ: 42-29
    ವಿಜಯಪುರ: 41-28
    ಬೀದರ್: 39-27
    ಕಲಬುರಗಿ: 42-29
    ಬಾಗಲಕೋಟೆ: 41-28

  • ಬಿಸಿಲಿನ ಬೇಗೆಗೆ ಬೆಂಗಳೂರು ತತ್ತರ – 8 ವಲಯಗಳಲ್ಲಿ ದಾಖಲೆಯ ತಾಪಮಾನ

    ಬಿಸಿಲಿನ ಬೇಗೆಗೆ ಬೆಂಗಳೂರು ತತ್ತರ – 8 ವಲಯಗಳಲ್ಲಿ ದಾಖಲೆಯ ತಾಪಮಾನ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ದಾಖಲೆಯ ತಾಪಮಾನ ಏರಿಕೆಯಾಗಿದೆ. ಮೂರು ವರ್ಷಗಳ ದಾಖಲೆ ಸರಿಗಟ್ಟಿದೆ. ಬರೋಬ್ಬರಿ 36 ರಿಂದ 37 ಡಿಗ್ರಿ ಸೆಲ್ಸಿಯಸ್‌ವರೆಗೆ ತಾಪಮಾನ ಏರಿಕೆಯಾಗಿದೆ. ಬಿಸಿಲಿನ ಬೇಗೆಗೆ ಬೆಂಗಳೂರು ಜನ ತತ್ತರಿಸಿ ಹೋಗಿದ್ದಾರೆ. ಒಟ್ಟು ಬೆಂಗಳೂರಿನಲ್ಲಿ 36 ರಿಂದ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಆದರೆ ಬೆಂಗಳೂರಿನ ಎಂಟು ವಲಯಗಳಲ್ಲಿ ತಾಪಮಾನ ದಾಖಲೆ ಬರೆದಿದೆ.

    ಎಲ್ಲಿ ಎಷ್ಟು ತಾಪಮಾನ?
    ಆರ್‌ಆರ್ ನಗರ – 38.60 ಡಿಗ್ರಿ ಸೆಲ್ಸಿಯಸ್
    ಬೆಂಗಳೂರು ಪೂರ್ವ- 37 ಡಿಗ್ರಿ ಸೆಲ್ಸಿಯಸ್
    ಯಲಹಂಕ – 34.90 ಡಿಗ್ರಿ ಸೆಲ್ಸಿಯಸ್
    ಬೆಂಗಳೂರು ದಕ್ಷಿಣ – 35.90 ಡಿಗ್ರಿ ಸೆಲ್ಸಿಯಸ್
    ದಾಸರಹಳ್ಳಿ – 36.60 ಡಿಗ್ರಿ ಸೆಲ್ಸಿಯಸ್
    ಬೊಮ್ಮನಹಳ್ಳಿ – 36.70%
    ಮಹಾದೇವಪುರ – 34.80 ಡಿಗ್ರಿ ಸೆಲ್ಸಿಯಸ್
    ಪಶ್ಚಿಮ ವಲಯ – 35.40 ಡಿಗ್ರಿ ಸೆಲ್ಸಿಯಸ್

    weather

    ಬೆಂಗಳೂರಿನಲ್ಲಿ ಎಲ್ಲೆಲ್ಲಿ ಅಂತರ್ಜಲ ಕುಸಿದಿದೆ. ಮರ ಗಿಡಗಳು ಕಡಿಮೆ ಇದೆಯೋ ಅಲ್ಲಿ ತಾಪಮಾನ (Temperature) ಏರಿಕೆ ಆಗಿದೆ. ಎಲ್ಲೆಲ್ಲಿ ಮರ ಗಿಡಗಳು ಇವೆ ಆ ಭಾಗದಲ್ಲಿ ತಾಪಮಾನ ಕಡಿಮೆ ಇದೆ. ಗಾಳಿಯ ವೇಗ ಕೂಡ ಕಡಿಮೆ ಇದೆ. ಜನರು ಕೂಡ ಪರಿಸರ ಸಂರಕ್ಷಿಸುವ ಕೆಲಸ ಮಾಡಬೇಕು. ಬಿಸಿಲಿನಿಂದ ಎಚ್ಚರ ವಹಿಸಬೇಕು. ಇದನ್ನೂ ಓದಿ: ತೀವ್ರ ಬರ – ಯಾದಗಿರಿ ಜಿಲ್ಲೆಯ 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

    ಒಟ್ಟಾರೆ ಬೆಂಗಳೂರಿನ ತಾಪಮಾನ ಅಲ್ಲದೇ ವಲಯಗಳಲ್ಲೂ ತಾಪಮಾನ ಏರಿಕೆ ಆಗಿದೆ. ಹೀಗಾಗಿ ಜನರು ಕೂಡ ಎಚ್ಚರಿಕೆ ವಹಿಸಬೇಕಿದೆ. ಸಮೃದ್ಧಿ ಮಳೆ ಆದರೆ ತಾಪಮಾನ ತಗ್ಗಲಿದೆ. ವರುಣ ದೇವ ಯಾವಾಗ ಕರುಣಿಸಲಿದ್ದಾನೋ ಕಾದು ನೋಡಬೇಕಿದೆ. ಇದನ್ನೂ ಓದಿ: ಬಂದ ದಾರಿಗಿಲ್ಲ ಸುಂಕ – ದೆಹಲಿಯಲ್ಲಿ ಈಶ್ವರಪ್ಪ ಭೇಟಿಯಾಗದ ಅಮಿತ್ ಶಾ