Tag: weather

  • ರಾಜ್ಯದ ಹವಾಮಾನ ವರದಿ: 08-05-2024

    ರಾಜ್ಯದ ಹವಾಮಾನ ವರದಿ: 08-05-2024

    ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಸಿಲು, ಒಣಹವೆ ಮತ್ತು ಮಳೆಯ ವಾತಾವರಣ ಮುಂದುವರಿಯಲಿದೆ. ಇದರೊಂದಿಗೆ ಕೆಲ ಜಿಲ್ಲೆಗಳಲ್ಲಿ ಮಳೆಯ ಸಿಂಚನ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ದಕ್ಷಿಣ ಒಳನಾಡು ಪ್ರದೇಶದ ಜಿಲ್ಲೆಗಳಿಗೆ ಸದ್ಯ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ಮುಂದಿನ 2 ದಿನಗಳ ಕಾಲ ಬೆಂಗಳೂರು ಸೇರಿದಂತೆ ದಕ್ಷಿಣದ ಜಿಲ್ಲೆಗಳ ಕೆಲ ಪ್ರದೇಶಗಳಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೆಲ ಕಡೆ ಚದುರಿದಂತೆ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗುವ ಮುನ್ಸೂಚನೆಯನ್ನೂ ಹವಾಮಾನ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-22
    ಮಂಗಳೂರು: 33-27
    ಶಿವಮೊಗ್ಗ: 38-23
    ಬೆಳಗಾವಿ: 37-21
    ಮೈಸೂರು: 34-23

    ಮಂಡ್ಯ: 35-23
    ಮಡಿಕೇರಿ: 29-19
    ರಾಮನಗರ: 34-23
    ಹಾಸನ: 33-21
    ಚಾಮರಾಜನಗರ: 33-23
    ಚಿಕ್ಕಬಳ್ಳಾಪುರ: 34-23

    ಕೋಲಾರ: 33-23
    ತುಮಕೂರು: 33-23
    ಉಡುಪಿ: 33-27
    ಕಾರವಾರ: 31-25
    ಚಿಕ್ಕಮಗಳೂರು: 32-20
    ದಾವಣಗೆರೆ: 38-23

    ಹುಬ್ಬಳ್ಳಿ: 39-22
    ಚಿತ್ರದುರ್ಗ: 37-23
    ಹಾವೇರಿ: 39-23
    ಬಳ್ಳಾರಿ: 40-27
    ಗದಗ: 39-23
    ಕೊಪ್ಪಳ: 39-25

    ರಾಯಚೂರು: 41-28
    ಯಾದಗಿರಿ: 41-28
    ವಿಜಯಪುರ: 40-26
    ಬೀದರ್: 38-27
    ಕಲಬುರಗಿ: 41-28
    ಬಾಗಲಕೋಟೆ: 41-26

  • ರಾಜ್ಯದ ಹವಾಮಾನ ವರದಿ: 07-05-2024

    ರಾಜ್ಯದ ಹವಾಮಾನ ವರದಿ: 07-05-2024

    ಮುಂದಿನ 5 ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ (Karnataka) ಹಲವು ಭಾಗಗಳಲ್ಲಿ ಮಳೆಯಾಗುವ (Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ. ಬೆಂಗಳೂರಿನಲ್ಲಿ (Bengaluru) ಸದ್ಯ ಈಗ ಒಂದು ದಿನ ಭಾರೀ ಬಿಸಿಲು ಇದ್ದರೆ ಮತ್ತೊಂದು ದಿನ ಮಳೆಯಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದಿದೆ.

    ಮೇ 6 ರಿಂದ ಮೇ 10 ರವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಮೇ 6ರಂದು ಕರಾವಳಿ ಭಾಗದಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದರೆ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 33-28
    ಶಿವಮೊಗ್ಗ: 38-23
    ಬೆಳಗಾವಿ: 38-21
    ಮೈಸೂರು: 36-24

    ಮಂಡ್ಯ: 36-24
    ಮಡಿಕೇರಿ: 29-19
    ರಾಮನಗರ: 35-24
    ಹಾಸನ: 33-22
    ಚಾಮರಾಜನಗರ: 35-24
    ಚಿಕ್ಕಬಳ್ಳಾಪುರ: 36-23

    ಕೋಲಾರ: 34-24
    ತುಮಕೂರು: 36-23
    ಉಡುಪಿ: 34-28
    ಕಾರವಾರ: 33-27
    ಚಿಕ್ಕಮಗಳೂರು: 33-21
    ದಾವಣಗೆರೆ: 39-23

    ಹುಬ್ಬಳ್ಳಿ: 39-22
    ಚಿತ್ರದುರ್ಗ: 38-23
    ಹಾವೇರಿ: 39-23
    ಬಳ್ಳಾರಿ: 42-27
    ಗದಗ: 40-23
    ಕೊಪ್ಪಳ: 41-25

    ರಾಯಚೂರು: 42-28
    ಯಾದಗಿರಿ: 42-28
    ವಿಜಯಪುರ: 41-26
    ಬೀದರ್: 41-27
    ಕಲಬುರಗಿ: 42-28
    ಬಾಗಲಕೋಟೆ: 42-26

  • ಕೋಲಾರ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ

    ಕೋಲಾರ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ

    ಕೋಲಾರ: ಬಿಸಿಲಿನಿಂದ ಬಸವಳಿದಿದ್ದ ಕೋಲಾರ (Kolar) ಜಿಲ್ಲೆಗೆ ಮಳೆಯ ಸಿಂಚನವಾಗಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು (Rain), ಬಿಸಿಗಾಳಿ, ಒಣಹವೆಗೆ ಬರಡಾಗಿದ್ದ ಭೂಮಿಗೆ ಜೀವ ಬಂದಂತಾಗಿದೆ.

    ಕಳೆದ 6 ತಿಂಗಳಿನಿಂದ ಮಳೆ ಕಾಣದೆ ಭೂಮಿ ಬರಡಾಗಿತ್ತು. ಇದೀಗ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಮಳೆಯ ಪರಿಣಾಮ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮಟೋ ಮಂಡಿ ಶೆಡ್ ಉರುಳಿದೆ. ಘಟನೆಯಿಂದ 50 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಮಳೆ ಸುರಿದಿದ್ದು, ಬೊಲೆರೋ ವಾಹನವೊಂದು ಮಳೆಗೆ ಜಖಂ ಆಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದ ಸುತ್ತಲೂ ಸಾಧಾರಣ ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣ ಕೃಪೆ ತೋರಿದ್ದಾನೆ. ಇದನ್ನೂ ಓದಿ: ಪೆನ್‍ಡ್ರೈವ್ ಪ್ರಕರಣದಲ್ಲಿ ಷಡ್ಯಂತ್ರ- ಡಿಕೆಶಿ ವಿರುದ್ಧ ದೇವರಾಜೇಗೌಡ ನೇರ ಆರೋಪ

    ಮೇ 6 ರಿಂದ ಮೇ 10 ರವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಮೇ 6ರಂದು ಕರಾವಳಿ ಭಾಗದಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದರೆ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.  ಇದನ್ನೂ ಓದಿ: ಮಂಡ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಭ್ರೂಣಹತ್ಯೆ ದಂಧೆ: ದಂಪತಿ ಅರೆಸ್ಟ್

  • ಮುಂದಿನ 3 ದಿನ ಬೆಂಗಳೂರಿಗೆ ಸಾಧಾರಣ ಮಳೆ ಸಾಧ್ಯತೆ

    ಮುಂದಿನ 3 ದಿನ ಬೆಂಗಳೂರಿಗೆ ಸಾಧಾರಣ ಮಳೆ ಸಾಧ್ಯತೆ

    – ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಕೆ

    ಬೆಂಗಳೂರು: ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ (Bengaluru) ಸಾಧಾರಣ ಮಳೆಯಾಗುವ (Rain) ಸಾಧ್ಯತೆಯಿದ್ದು, ಮೇ 7 ಹಾಗೂ 8 ರ ಬಳಿಕ ನಗರದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

    ಮುಂದಿನ ಮೂರು ದಿನ ಉಷ್ಣಾಂಶ ಗರಿಷ್ಠ 38 ಹಾಗೂ ಕನಿಷ್ಠ 24 ಡಿಗ್ರಿ ತಾಪಮಾನ ಮುಂದುವರಿಯುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೆಲ ಕಡೆ ಹಗುರ ಮಳೆಯಾಗುವ ಸಂಭವವಿದೆ. ಮೇ 7ರ ಬಳಿಕ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಲಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ. ಇದನ್ನೂ ಓದಿ: ಎಳನೀರು ಸೇವಿಸಿ ದಲಿತರೊಂದಿಗೆ ನಾವಿದ್ದೇವೆ ಅಂದ್ರು ಯದುವೀರ್

    ಸತತ ಎರಡನೇ ದಿನವೂ ನಗರದಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ಗಾಳಿ ಸಹಿತ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಶುಕ್ರವಾರವೂ ಸಿಲಿಕಾನ್ ಸಿಟಿಯ ಹಲವೆಡೆ ಗಾಳಿ ಸಹಿತ ಮಳೆಯಾಗಿದ್ದು, ನಾಯಂಡಹಳ್ಳಿಯಲ್ಲಿ ಗರಿಷ್ಠ ಪ್ರಮಾಣದ ಮಳೆ ದಾಖಲಾಗಿದೆ. ಇಂದೂ ಕೂಡ ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಮಳೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಜಾಗತಿಕ ವೇದಿಕೆಯಲ್ಲಿ ಭಾರತವಲ್ಲ ಈಗ ಪಾಕಿಸ್ತಾನ ಅಳುತ್ತಿದೆ: ಮೋದಿ

    ಶುಕ್ರವಾರ ಎಲ್ಲೆಲ್ಲಿ ಎಷ್ಟು ಮಳೆ ದಾಖಲಾಗಿದೆ?
    ನಾಯಂಡಹಳ್ಳಿ -2.9 ಸೆಂ.ಮೀ
    ರಾಜರಾಜೇಶ್ವರಿನಗರ- 2.90 ಸೆಂ.ಮೀ
    ಮಾರುತಿ ಮಂದಿರವಾರ್ಡ್- 2.65 ಸೆಂ.ಮೀ
    ಬಿಳೇಕಹಳ್ಳಿ- 2.45 ಸೆಂ.ಮೀ
    ಹಂಪಿನಗರ – 2.40 ಸೆಂ.ಮೀ
    ಕೆಂಗೇರಿ – 2.05 ಸೆಂ.ಮೀ
    ವಿದ್ಯಾಪೀಠ – 2.05 ಸೆಂ.ಮೀ
    ಕಮ್ಮನಹಳ್ಳಿ – 1.90 ಸೆಂ.ಮೀ
    ರಾಮಮೂರ್ತಿನಗರ – 1.75 ಸೆಂ.ಮೀ
    ಹೊರಮಾವು – 1.75 ಸೆಂ.ಮೀ
    ಕೊಟ್ಟಿಗೆಪಾಳ್ಯ – 1.70 ಸೆಂ.ಮೀ
    ಹೆಮ್ಮಿಗೆಪುರ – 1.45 ಸೆಂ.ಮೀ
    ಅರಕೆರೆ – 1.35 ಸೆಂಟಿ ಮೀ
    ಬಿಟಿಎಂ ಲೇಔಟ್ – 1.35 ಸೆಂ.ಮೀ
    ಚಾಮರಾಜಪೇಟೆ – 1.35 ಸೆಂ.ಮೀ
    ಉತ್ತರಹಳ್ಳಿ – 1.15 ಸೆಂ.ಮೀ
    ಸಂಪಂಗಿರಾಮನಗರ – 1.10 ಸೆಂ.ಮೀ

  • ಬೆಂಗಳೂರಿಗೆ ತಂಪೆರೆದ ವರುಣ – ನಗರದ ಹಲವೆಡೆ ಮಳೆ

    ಬೆಂಗಳೂರಿಗೆ ತಂಪೆರೆದ ವರುಣ – ನಗರದ ಹಲವೆಡೆ ಮಳೆ

    ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟ ನಗರದ (Bengaluru) ಜನತೆಗೆ ಮಳೆರಾಯ (Rain) ಕೊಂಚ ತಂಪೆರೆದಿದ್ದಾನೆ. ನಗರದ ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು ಬಿಸಿಲಿನಿಂದ ಬೇಸತ್ತಿದ್ದ ಜನ ಕೊಂಚ ರಿಲೀಫ್ ಆಗಿದ್ದಾರೆ.

    ನಗರದ ವಸಂತಪುರ, ಕುಮಾರಸ್ವಾಮಿ ಲೇಔಟ್, ವಿಜಯನಗರ, ಟಿನ್ ಫ್ಯಾಕ್ಟರಿ, ಕೆ.ಆರ್‌ಪುರಂ, ವೈಟ್ ಫೀಲ್ಡ್, ಕಲ್ಯಾಣ ನಗರ ಸೇರಿದಂತೆ ಪೂರ್ವ ವಲಯ ಹಾಗೂ ನಗರದ ದಕ್ಷಿಣ ಭಾಗಗಳ ಹಲವೆಡೆ ಸುತ್ತಮುತ್ತ ಗುಡುಗು, ಗಾಳಿ ಸಹಿತ ಮಳೆಯಾಗುತ್ತಿದೆ. ನಗರದ ಇನ್ನೂ ಹಲವು ಕಡೆ ಮೋಡ ಕವಿದ ವಾತಾವರಣವಿದ್ದು ಮಳೆಯ ಸೂಚನೆ ಇದೆ. ಕಳೆದ ಮೂರರಿಂದ ನಾಲ್ಕು ತಿಂಗಳ ಬಳಿಕ ಬೆಂಗಳೂರಿನಲ್ಲಿ ಮಳೆಯಾಗಿದೆ.

    ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ, ಕೋಲಾರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ ಈ ಭಾಗಗಳಲ್ಲಿ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

  • ಬಿಸಿಲಿನ ತಾಪಕ್ಕೆ ಹೊಲದ ಕೆಲಸಕ್ಕೆ ಹೋಗಿದ್ದ ರೈತ ಬಲಿ

    ಬಿಸಿಲಿನ ತಾಪಕ್ಕೆ ಹೊಲದ ಕೆಲಸಕ್ಕೆ ಹೋಗಿದ್ದ ರೈತ ಬಲಿ

    ರಾಯಚೂರು: ಬಿಸಿಲಿನ ತಾಪದಿಂದ  (Heatstroke) ಹೊಲದ ಕೆಲಸಕ್ಕೆ ತೆರಳಿದ್ದ ರೈತರೊಬ್ಬರು ಸಾವಿಗೀಡಾದ ಘಟನೆ ತಾಲೂಕಿನ (Raichur) ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹನುಮಂತು (45) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಹೊಲದಿಂದ ಬಣವೆ ಕೆಲಸ ಮುಗಿಸಿಕೊಂಡು ಮನೆಯ ಬಳಿ ಬಂದು ನೀರು ಕುಡಿಯುತ್ತಿದ್ದಂತೆ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಈ ಹಠಾತ್ ಸಾವಿನಿಂದ ಕಂಗಾಲಾದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ರಾಯಚೂರಿನಲ್ಲಿ 15 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು

    ರಾಯಚೂರಿನಲ್ಲಿ ಕಳೆದ 15 ವರ್ಷಗಳಲ್ಲೇ ಈ ಬಾರಿ ದಾಖಲೆಯ ಅತೀ ಹೆಚ್ಚು ತಾಪಮಾನ ದಾಖಲಾಗಿದೆ. ಕಳೆದ ಮೂರು ದಿನಗಳಿಂದ ರಾಯಚೂರಿನಲ್ಲಿ ಸರಾಸರಿ 46.7 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ದಾಖಲಾಗಿದೆ. ಇದನ್ನೂ ಓದಿ: ನಾಲ್ಕು ಸ್ಥಾನ ಕಳೆದುಕೊಳ್ಳುವ ಮೂಲಕ ಜೆಡಿಎಸ್ ರಾಜ್ಯದಲ್ಲಿ ಮುಕ್ತವಾಗುತ್ತೆ: ವಿನಯ್‌ಕುಮಾರ್ ಸೊರಕೆ

     

  • ರಾಜ್ಯದ ಹವಾಮಾನ ವರದಿ: 30-04-2024

    ರಾಜ್ಯದ ಹವಾಮಾನ ವರದಿ: 30-04-2024

    ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದ ತಾಪಮಾನ ಕಂಡುಬಂದಿದೆ. ಅಲ್ಲದೇ ಮುಂದಿನ ಒಂದು ವಾರಗಳ ಕಾಲ ರಾಜ್ಯದಲ್ಲಿ ಬಿಸಿಲಿನ ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಹೀಟ್‌ವೇವ್ ಅಲರ್ಟ್ ನೀಡಲಾಗಿದೆ. ಕನಿಷ್ಠ ತಾಪಮಾನ 2-3 ಡಿಗ್ರಿ ಏರಿಕೆಯಾಗಲಿದೆ. ಮಡಿಕೇರಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ಉತ್ತರ ಕರ್ನಾಟಕದ ಕೆಲ ನಗರಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಮೇಲ್ಪಟ್ಟು ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 38-23
    ಮಂಗಳೂರು: 33-28
    ಶಿವಮೊಗ್ಗ: 39-24
    ಬೆಳಗಾವಿ: 38-23
    ಮೈಸೂರು: 39-23

    ಮಂಡ್ಯ: 40-24
    ಮಡಿಕೇರಿ: 31-19
    ರಾಮನಗರ: 39-24
    ಹಾಸನ: 37-22
    ಚಾಮರಾಜನಗರ: 39-24
    ಚಿಕ್ಕಬಳ್ಳಾಪುರ: 38-24

    ಕೋಲಾರ: 38-24
    ತುಮಕೂರು: 39-24
    ಉಡುಪಿ: 34-28
    ಕಾರವಾರ: 31-26
    ಚಿಕ್ಕಮಗಳೂರು: 35-21
    ದಾವಣಗೆರೆ: 41-25

    weather

    ಹುಬ್ಬಳ್ಳಿ: 40-24
    ಚಿತ್ರದುರ್ಗ: 39-24
    ಹಾವೇರಿ: 40-24
    ಬಳ್ಳಾರಿ: 43-28
    ಗದಗ: 41-25
    ಕೊಪ್ಪಳ: 41-26

    weather (1)

    ರಾಯಚೂರು: 43-31
    ಯಾದಗಿರಿ: 43-30
    ವಿಜಯಪುರ: 42-28
    ಬೀದರ್: 41-28
    ಕಲಬುರಗಿ: 43-31
    ಬಾಗಲಕೋಟೆ: 42-28

  • ಯಾದಗಿರಿಯಲ್ಲಿ ವಿಪರೀತ ಬಿಸಿಲಿಗೆ ವೃದ್ಧೆ ಸಾವು

    ಯಾದಗಿರಿಯಲ್ಲಿ ವಿಪರೀತ ಬಿಸಿಲಿಗೆ ವೃದ್ಧೆ ಸಾವು

    ಯಾದಗಿರಿ: ವಿಪರೀತ ಬಿಸಿಲಿಗೆ (Extreme Heat) ವೃದ್ಧೆ (Old Woman) ಸಾವನ್ನಪ್ಪಿದ ಘಟನೆ ಯಾದಗಿರಿ (Yadagiri) ಜಿಲ್ಲೆಯ ವಡಗೇರಾ (Wadagera) ತಾಲೂಕಿನ ಕುರಕುಂದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

    ಹಣಮಂತಿ (60) ಮೃತ ಕಾರ್ಮಿಕ ವೃದ್ಧೆ. ಇವರು ಉದ್ಯೋಗ ಖಾತ್ರಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅದೇ ರೀತಿ ಸೋಮವಾರವೂ ಕೂಲಿ ಕೆಲಸಕ್ಕೆ ಹೋಗಿದ್ದು, ಬಿಸಿಲಿನಲ್ಲೇ ಕೆಲಸ ಮಾಡುತ್ತಿದ್ದರು. ಈ ವೇಳೆ ಅಧಿಕ ಬಿಸಿಲಿನಿಂದಾಗಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಬಾಲಾಕೋಟ್ ಏರ್‌ಸ್ಟ್ರೈಕ್‌ ರಹಸ್ಯ ರಿವೀಲ್‌ ಮಾಡಿದ ಮೋದಿ

    ಮೃತ ವೃದ್ಧೆಯ ಮೃತದೇಹ ಯಾದಗಿರಿ ಯಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕಾವೇರಿ ನದಿಯಲ್ಲಿ ಮುಳುಗಿ ಐವರು ವಿದ್ಯಾರ್ಥಿಗಳ ದುರ್ಮರಣ

  • ರಾಜ್ಯದ ಹವಾಮಾನ ವರದಿ: 29-04-2024

    ರಾಜ್ಯದ ಹವಾಮಾನ ವರದಿ: 29-04-2024

    ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಇಂದು ಸಹ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಶಿವಮೊಗ್ಗದಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 38-23
    ಮಂಗಳೂರು: 34-28
    ಶಿವಮೊಗ್ಗ: 39-24
    ಬೆಳಗಾವಿ: 38-24
    ಮೈಸೂರು: 39-23

    weather

    ಮಂಡ್ಯ: 39-23
    ಮಡಿಕೇರಿ: 33-19
    ರಾಮನಗರ: 35-21
    ಹಾಸನ: 38-22
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 37-22

    ಕೋಲಾರ: 37-21
    ತುಮಕೂರು: 39-22
    ಉಡುಪಿ: 34-28
    ಕಾರವಾರ: 33-27
    ಚಿಕ್ಕಮಗಳೂರು: 36-20
    ದಾವಣಗೆರೆ: 41-24

    ಹುಬ್ಬಳ್ಳಿ: 40-24
    ಚಿತ್ರದುರ್ಗ: 39-23
    ಹಾವೇರಿ: 40-24
    ಬಳ್ಳಾರಿ: 42-27
    ಗದಗ: 40-24
    ಕೊಪ್ಪಳ: 40-26

    ರಾಯಚೂರು: 42-28
    ಯಾದಗಿರಿ: 42-28
    ವಿಜಯಪುರ: 41-29
    ಬೀದರ್: 40-28
    ಕಲಬುರಗಿ: 42-29
    ಬಾಗಲಕೋಟೆ: 42-28

  • ರಾಜ್ಯದ ಹವಾಮಾನ ವರದಿ: 28-04-2024

    ರಾಜ್ಯದ ಹವಾಮಾನ ವರದಿ: 28-04-2024

    ರಾಜ್ಯದಲ್ಲಿ ಕಳೆದ ಒಂದು ವಾರದಿಂದ ತೀವ್ರ ಬಿಸಿಲಿನ ವಾತಾವರಣವಿದೆ. ಇಂದು ಸಹ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಕೆಲವೆಡೆ ಕಳೆದ ಎರಡು ದಿನಗಳಿಂದ ಬಿಸಿ ಗಾಳಿ ಬೀಸಿದ ಅನುಭವ ಕೂಡ ಜನರ ಅರಿವಿಗೆ ಬಂದಿದೆ. ಮುಂದಿನ ಒಂದು ವಾರ ಗರಿಷ್ಠ ಉಷ್ಣಾಂಶ 2ರಿಂದ 3 ಡಿಗ್ರಿ ಏರಿಕೆ ಆಗಲಿದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 37-23
    ಮಂಗಳೂರು: 34-28
    ಶಿವಮೊಗ್ಗ: 40-23
    ಬೆಳಗಾವಿ: 38-24
    ಮೈಸೂರು: 39-23

    ಮಂಡ್ಯ: 39-23
    ಮಡಿಕೇರಿ: 33-19
    ರಾಮನಗರ: 35-21
    ಹಾಸನ: 38-22
    ಚಾಮರಾಜನಗರ: 38-22
    ಚಿಕ್ಕಬಳ್ಳಾಪುರ: 37-22

    ಕೋಲಾರ: 37-21
    ತುಮಕೂರು: 39-22
    ಉಡುಪಿ: 34-28
    ಕಾರವಾರ: 33-27
    ಚಿಕ್ಕಮಗಳೂರು: 36-20
    ದಾವಣಗೆರೆ: 41-24

    ಹುಬ್ಬಳ್ಳಿ: 40-24
    ಚಿತ್ರದುರ್ಗ: 39-23
    ಹಾವೇರಿ: 40-24
    ಬಳ್ಳಾರಿ: 42-27
    ಗದಗ: 40-24
    ಕೊಪ್ಪಳ: 40-26

    ರಾಯಚೂರು: 42-28
    ಯಾದಗಿರಿ: 42-28
    ವಿಜಯಪುರ: 41-29
    ಬೀದರ್: 40-28
    ಕಲಬುರಗಿ: 42-29
    ಬಾಗಲಕೋಟೆ: 42-28