Tag: weather

  • ರಣಮಳೆಗೆ ಭಾರೀ ಅವಾಂತರ – ಶೃಂಗೇರಿ ಗಾಂಧಿ ಮೈದಾನದ ಅಂಗಡಿಗಳು ಮುಳುಗಡೆ!

    ರಣಮಳೆಗೆ ಭಾರೀ ಅವಾಂತರ – ಶೃಂಗೇರಿ ಗಾಂಧಿ ಮೈದಾನದ ಅಂಗಡಿಗಳು ಮುಳುಗಡೆ!

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ಮಳೆಯ ಆರ್ಭಟ ಮುಂದುವರಿದಿದೆ. ಕುದುರೆಮುಖ ವ್ಯಾಪ್ತಿಯ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಭದ್ರಾ ನದಿ (Bhadra River) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

    ಮತ್ತೊಂದೆಡೆ ಕೊಗ್ರೆ-ಶೃಂಗೇರಿ ರಸ್ತೆ (Sringeri Road) ಸಂಪೂರ್ಣ ಜಲಾವೃತಗೊಂಡಿದ್ದು, ಕೊಗ್ರೆ ಸಮೀಪದ ಹುಲ್ಲಿನಗದ್ದೆ ಸೇತುವೆಗೂ ಜಲದಿಗ್ಭಂದನವಾಗಿದೆ. ಸೇತುವೆ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಸಂಚಾರಕ್ಕೆ ಪರದಾಡುವಂತಾಗಿದೆ. ಅಲ್ಲದೇ ರಣಮಳೆಗೆ ತುಂಗಾ ನದಿಯ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡಿದೆ. ಇದರಿಂದ ಶೃಂಗೇರಿ ಪಟ್ಟಣದ ಗಾಂಧಿ ಮೈದಾನ (Sringeri Gandhi Maidan) ಸಂಪೂರ್ಣ ಜಲಾವೃತಗೊಂಡಿದೆ. ಮೈದಾನದಲ್ಲಿರುವ ಅಂಗಡಿ ಮುಂಗಟ್ಟುಗಳು ಅರ್ಧದಷ್ಟು ಮುಳುಗಡೆಯಾಗಿವೆ. ರಕ್ಷಣಾ ತಂಡಗಳು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌ – 7ನೇ ವೇತನ ಆಯೋಗದ ಶಿಫಾರಸು ಜಾರಿ: ಸಿಎಂ ಘೋಷಣೆ

    ಹೆಬ್ಬಾಳೆ ಸೇತುವೆ ಮುಳುಗಡೆ:
    ಭದ್ರಾ ನದಿ ಅಬ್ಬರದಿಂದ ಕಳಸ ತಾಲೂಕಿನ ಹೊರನಾಡು ಸೇತುವೆ ಬಳಿಕ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಹೊರನಾಡು-ಕಳಸ ನಡುವಿನ ಸಂಪರ್ಕ ಕಡಿತಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸೇತುವೆ ಎರಡೂ ಕಡೆ ಬ್ಯಾರಿಕೇಡ್ ಇರಿಸಲಾಗಿದ್ದು, ಹೆಬ್ಬಾಳೆ ಸೇತುವೆಯ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಸೇತುವೆ ಬಳಿ ಕಳಸ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ 50-60 ಕಿಮೀ ವ್ಯಾಪ್ತಿಯಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ – ಎಂ.ಬಿ ಪಾಟೀಲ್ ಘೋಷಣೆ

    ಹೇಮಾವತಿ ನದಿಗೆ ನೀರು:
    ಮೂಡಿಗೆರೆ ತಾಲೂಕಿನ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಗೊರೂರು ಡ್ಯಾಂ ನಿಂದ ನೀರು ಹರಿಸಲಾಗಿದೆ. ಇದನ್ನೂ ಓದಿ: Jammu Terrorist Attack: ಜಮ್ಮುವಿನಲ್ಲಿ ದಿಢೀರ್‌ ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿರುವುದು ಏಕೆ?

  • ರಾಜ್ಯದ ಹವಾಮಾನ ವರದಿ: 16-07-2024

    ರಾಜ್ಯದ ಹವಾಮಾನ ವರದಿ: 16-07-2024

    ರಾಜ್ಯದಾದ್ಯಂತ ಮುಂದಿನ 5 ದಿನ ಭಾರೀ ಮಳೆಯ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಕರಾವಳಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ಮೂರು ಜಿಲ್ಲೆಗಳಿಗೂ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಬಳಿಕ ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಿದೆ.

    ಉತ್ತರ ಒಳನಾಡಿಗೆ ಇಂದು ಆರೆಂಜ್ ಅಲರ್ಟ್ ಘೋಷಿಸಿದ್ದು, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಸಾಧಾರಣ ಅಥವಾ ತುಂತುರು ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಮುಂದಿನ ಮೂರ್ನಾಲ್ಕು ದಿನ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-21
    ಮಂಗಳೂರು: 27-25
    ಶಿವಮೊಗ್ಗ: 24-22
    ಬೆಳಗಾವಿ: 23-21
    ಮೈಸೂರು: 26-21

    ಮಂಡ್ಯ: 26-22
    ಮಡಿಕೇರಿ: 19-17
    ರಾಮನಗರ: 26-22
    ಹಾಸನ: 23-19
    ಚಾಮರಾಜನಗರ: 26-22
    ಚಿಕ್ಕಬಳ್ಳಾಪುರ: 25-21

    ಕೋಲಾರ: 26-22
    ತುಮಕೂರು: 25-21
    ಉಡುಪಿ: 27-25
    ಕಾರವಾರ: 27-25
    ಚಿಕ್ಕಮಗಳೂರು: 22-19
    ದಾವಣಗೆರೆ: 25-22

    ಹುಬ್ಬಳ್ಳಿ: 24-21
    ಚಿತ್ರದುರ್ಗ: 24-21
    ಹಾವೇರಿ: 24-22
    ಬಳ್ಳಾರಿ: 28-24
    ಗದಗ: 25-22
    ಕೊಪ್ಪಳ: 26-22

    ರಾಯಚೂರು: 28-24
    ಯಾದಗಿರಿ: 28-24
    ವಿಜಯಪುರ: 27-23
    ಬೀದರ್: 27-23
    ಕಲಬುರಗಿ: 28-23
    ಬಾಗಲಕೋಟೆ: 27-23

  • Rain Alert: ಮಳೆಗೆ ಮುಳುಗಿದ ಕರುನಾಡು; ಮಂಗಳವಾರ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ!

    Rain Alert: ಮಳೆಗೆ ಮುಳುಗಿದ ಕರುನಾಡು; ಮಂಗಳವಾರ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ!

    ಬೆಂಗಳೂರು: ರಾಜ್ಯದಂದು ಎಲ್ಲೆಡೆ ಭರ್ಜರಿ ಮಳೆಯಾಗಿದ್ದು (Heavy Rain), ಅಷ್ಟೇ ಅವಾಂತರವನ್ನೂ ಸೃಷ್ಟಿಸಿದೆ. ಉತ್ತರ ಕನ್ನಡದಲ್ಲಂತೂ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಅರಗಾ ಭಾಗದಲ್ಲಿ 10ಕ್ಕೂ ಹೆಚ್ಚು ಮನೆ, ಜಮೀನು ಜಲಾವೃತವಾಗಿವೆ. ಹೊನ್ನಾವರ-ಬೆಂಗಳೂರು ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ಮಳೆಯ ಆರ್ಭಟದಿಂದಾಗಿ ವಿವಿಧ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ (Holidays For Schools And Colleges) ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಕೋವಿಡ್ ನಿರ್ವಹಣೆಯಲ್ಲಿ 30 ಕೋಟಿ ಅಕ್ರಮ – ಬಿಜೆಪಿ ವಿರುದ್ಧ ಯು.ಬಿ ವೆಂಕಟೇಶ್ ಬಾಂಬ್!

    ರಾಜ್ಯಾದ್ಯಂತ ಯಾವ್ಯಾವ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ?

    ಮೈಸೂರು:
    ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಾದ್ಯಂತ ಸೋಮವಾರ ಭಾರೀ ಮಳೆಯಾಗಿದ್ದು, ಜಿಲ್ಲಾಡಳಿತ ಸೂಚನೆ ಮೇರೆಗೆ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೇ ಮಾಡಲಾಗಿದೆ.

    ದಕ್ಷಿಣ ಕನ್ನಡ:
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಜುಲೈ 16ರಂದು ಜಿಲ್ಲಾ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಂಗನವಾಡಿಯಿಂದ ದ್ವಿತೀಯ ಪಿಯುಸಿವರೆಗಿನ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಜೈಲಿನಲ್ಲಿರೋ ಇಮ್ರಾನ್‌ ಖಾನ್‌ಗೆ ಮತ್ತೆ ಶಾಕ್ – ದೇಶ ವಿರೋಧಿ ಚಟುವಟಿಕೆ ಆರೋಪದಡಿ ಪಿಟಿಐ ನಿಷೇಧ!

    ಉಡುಪಿ:
    ಉಡುಪಿ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲ್ಟ್ ಘೋಷಿಸಿದ್ದು, ಜು.16ರಂದು ಎಲ್ಲಾ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್, ಐಟಿಐ, ಡಿಪ್ಲೋಮೋ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶದಲ್ಲಿ ತಿಳಿಸಿದ್ದಾರೆ.

    ಕೊಡಗು:
    ಕೊಡಗು ಜಿಲ್ಲೆಯಾದ್ಯಂತ ಗಾಳಿ ಸಹಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಜು.16) ಜಿಲ್ಲೆಯಾದ್ಯಂತ ಅಂಗನವಾಡಿಯಿಂದ ಶಾಲೆ, ಪಿಯು ಕಾಲೇಜುವರೆಗೆ ರಜೆ ಘೋಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ. ಇದನ್ನೂ ಓದಿ: ಕಟಾಕಟ್‌ ಅಂತ ದಲಿತರ ಹಣ ಲೂಟಿಯಾಗಿದೆ, ಇದು ಕರ್ನಾಟಕ ಇತಿಹಾಸಕ್ಕೆ ಕಪ್ಪು ಚುಕ್ಕೆ: ಗುಡುಗಿದ ಅಶೋಕ್‌

    ಉತ್ತರ ಕನ್ನಡ:
    ಉತ್ತರ ಕನ್ನಡ ಜಿಲ್ಲೆಯ 10 ತಾಲೂಕಿನ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ. ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಆದೇಶಿಸಿದ್ದಾರೆ. ಹಳಿಯಾಳ ಮತ್ತು ಮುಂಡಗೊಂಡ ತಾಲೂಕಿನಲ್ಲಿ ಶಾಲಾ-ಕಾಲೇಜುಗಳು ಎಂದಿನಂತೆ ಮುಂದುವರಿಯಲಿವೆ. ಕಾರವಾರ, ಕುಮಟಾ, ಅಂಕೋಲಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೋಯಿಡಾ, ದಾಂಡೇಲಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ಮಾತ್ರ ರಜೆ ಘೋಷಿಸಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.

    ಹಾಸನ:
    ಇನ್ನೂ ಮಳೆ ಹಿನ್ನೆಲೆ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು ಹಾಗೂ ಬೇಲೂರು ತಾಲ್ಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಡಿಡಿಪಿಯು ಮಹಾಲಿಂಗಯ್ಯ ಆದೇಶಿಸಿದ್ದಾರೆ. ಉಳಿದ ಕಡೆ ಎಂದಿನಂತೆ ಶಾಲಾ ಕಾಲೇಜುಗಳು ಮುಂದುವರಿಯಲಿದೆ.

  • ರಾಜ್ಯದ ಹವಾಮಾನ ವರದಿ: 15-07-2024

    ರಾಜ್ಯದ ಹವಾಮಾನ ವರದಿ: 15-07-2024

    ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ಮಲೆನಾಡಿನ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದೆ. ಇಂದು ಸಹ ದಕ್ಷಿಣ ಕನ್ನಡ, ಉಡುಪಿ, ಕಾರವಾರ ಸೇರಿದಂತೆ ಮಲೆನಾಡಿನ ಭಾಗಗಳಲ್ಲಿ ಮಳೆ ಮುಂದುವರಿಯಲಿದಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಸಂಜೆ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-20
    ಮಂಗಳೂರು: 26-24
    ಶಿವಮೊಗ್ಗ: 24-21
    ಬೆಳಗಾವಿ: 23-21
    ಮೈಸೂರು: 24-21

    ಮಂಡ್ಯ: 26-22
    ಮಡಿಕೇರಿ: 19-17
    ರಾಮನಗರ: 25-21
    ಹಾಸನ: 22-19
    ಚಾಮರಾಜನಗರ: 26-22
    ಚಿಕ್ಕಬಳ್ಳಾಪುರ: 24-21

    ಕೋಲಾರ: 25-21
    ತುಮಕೂರು: 24-21
    ಉಡುಪಿ: 27-24
    ಕಾರವಾರ: 27-24
    ಚಿಕ್ಕಮಗಳೂರು: 21-19
    ದಾವಣಗೆರೆ: 24-22

    ಹುಬ್ಬಳ್ಳಿ: 24-21
    ಚಿತ್ರದುರ್ಗ: 24-21
    ಹಾವೇರಿ: 25-22
    ಬಳ್ಳಾರಿ: 27-23
    ಗದಗ: 25-21
    ಕೊಪ್ಪಳ: 26-22

    ರಾಯಚೂರು: 28-24
    ಯಾದಗಿರಿ: 28-24
    ವಿಜಯಪುರ: 26-22
    ಬೀದರ್: 26-22
    ಕಲಬುರಗಿ: 27-23
    ಬಾಗಲಕೋಟೆ: 27-23

  • ರಾಜ್ಯದ ಹವಾಮಾನ ವರದಿ: 07-07-2024

    ರಾಜ್ಯದ ಹವಾಮಾನ ವರದಿ: 07-07-2024

    ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಇನ್ನೂ ಮುಂದಿನ ಒಂದು ವಾರ ರಾಜ್ಯದ ಕರಾವಳಿ ಜಿಲ್ಲೆ ಹಾಗೂ ಮಲೆನಾಡಿನ ಭಾಗಗಳಲ್ಲಿ ಭಾರೀ ಮಳೆ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 28-24
    ಶಿವಮೊಗ್ಗ: 26-22
    ಬೆಳಗಾವಿ: 25-21
    ಮೈಸೂರು: 28-22

    ಮಂಡ್ಯ: 29-22
    ಮಡಿಕೇರಿ: 21-17
    ರಾಮನಗರ: 29-22
    ಹಾಸನ: 24-19
    ಚಾಮರಾಜನಗರ: 29-22
    ಚಿಕ್ಕಬಳ್ಳಾಪುರ: 28-21

    ಕೋಲಾರ: 29-22
    ತುಮಕೂರು: 28-21
    ಉಡುಪಿ: 27-24
    ಕಾರವಾರ: 28-26
    ಚಿಕ್ಕಮಗಳೂರು: 23-19
    ದಾವಣಗೆರೆ: 28-22

    ಹುಬ್ಬಳ್ಳಿ: 26-22
    ಚಿತ್ರದುರ್ಗ: 28-22
    ಹಾವೇರಿ: 27-22
    ಬಳ್ಳಾರಿ: 32-24
    ಗದಗ: 28-22
    ಕೊಪ್ಪಳ: 30-23

    ರಾಯಚೂರು: 33-25
    ಯಾದಗಿರಿ: 32-25
    ವಿಜಯಪುರ: 30-23
    ಬೀದರ್: 30-23
    ಕಲಬುರಗಿ: 32-24
    ಬಾಗಲಕೋಟೆ: 31-24

  • ರಾಜ್ಯದ ಹವಾಮಾನ ವರದಿ: 05-07-2024

    ರಾಜ್ಯದ ಹವಾಮಾನ ವರದಿ: 05-07-2024

    ಮುಂದಿನ ಒಂದು ವಾರ ಭಾರೀ ಮಳೆ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳ ಕೆಲವು ಕಡೆ 30-40 ವೇಗದಲ್ಲಿ ಗಾಳಿ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 28-24
    ಶಿವಮೊಗ್ಗ: 26-22
    ಬೆಳಗಾವಿ: 25-21
    ಮೈಸೂರು: 28-22

    ಮಂಡ್ಯ: 29-22
    ಮಡಿಕೇರಿ: 22-17
    ರಾಮನಗರ: 29-22
    ಹಾಸನ: 24-19
    ಚಾಮರಾಜನಗರ: 29-22
    ಚಿಕ್ಕಬಳ್ಳಾಪುರ: 28-21

    ಕೋಲಾರ: 29-22
    ತುಮಕೂರು: 28-21
    ಉಡುಪಿ: 27-24
    ಕಾರವಾರ: 28-26
    ಚಿಕ್ಕಮಗಳೂರು: 23-19
    ದಾವಣಗೆರೆ: 28-22

    ಹುಬ್ಬಳ್ಳಿ: 26-22
    ಚಿತ್ರದುರ್ಗ: 28-22
    ಹಾವೇರಿ: 27-22
    ಬಳ್ಳಾರಿ: 32-24
    ಗದಗ: 28-22
    ಕೊಪ್ಪಳ: 30-23

    ರಾಯಚೂರು: 33-25
    ಯಾದಗಿರಿ: 32-25
    ವಿಜಯಪುರ: 30-23
    ಬೀದರ್: 30-23
    ಕಲಬುರಗಿ: 32-24
    ಬಾಗಲಕೋಟೆ: 31-24

  • ರಾಜ್ಯದ ಹವಾಮಾನ ವರದಿ: 04-07-2024

    ರಾಜ್ಯದ ಹವಾಮಾನ ವರದಿ: 04-07-2024

    ಮುಂದಿನ ಒಂದು ವಾರ ಭಾರೀ ಮಳೆ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ಎಲ್ಲಾ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಜಿಲ್ಲೆಗಳ ಕೆಲವು ಕಡೆ 30-40 ವೇಗದಲ್ಲಿ ಗಾಳಿ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-21
    ಮಂಗಳೂರು: 28-24
    ಶಿವಮೊಗ್ಗ: 27-22
    ಬೆಳಗಾವಿ: 26-21
    ಮೈಸೂರು: 29-22

    ಮಂಡ್ಯ: 30-22
    ಮಡಿಕೇರಿ: 24-19
    ರಾಮನಗರ: 30-22
    ಹಾಸನ: 26-20
    ಚಾಮರಾಜನಗರ: 30-22
    ಚಿಕ್ಕಬಳ್ಳಾಪುರ: 29-21

    ಕೋಲಾರ: 30-22
    ತುಮಕೂರು: 29-21
    ಉಡುಪಿ: 28-24
    ಕಾರವಾರ: 28-25
    ಚಿಕ್ಕಮಗಳೂರು: 24-19
    ದಾವಣಗೆರೆ: 29-22

    ಹುಬ್ಬಳ್ಳಿ: 27-22
    ಚಿತ್ರದುರ್ಗ: 29-22
    ಹಾವೇರಿ: 27-22
    ಬಳ್ಳಾರಿ: 33-24
    ಗದಗ: 29-22
    ಕೊಪ್ಪಳ: 29-23

    ರಾಯಚೂರು: 33-25
    ಯಾದಗಿರಿ: 33-25
    ವಿಜಯಪುರ: 31-23
    ಬೀದರ್: 31-23
    ಕಲಬುರಗಿ: 32-24
    ಬಾಗಲಕೋಟೆ: 31-24

  • ರಾಜ್ಯದ ಹವಾಮಾನ ವರದಿ: 03-07-2024

    ರಾಜ್ಯದ ಹವಾಮಾನ ವರದಿ: 03-07-2024

    ಮುಂದಿನ 5 ದಿನ ಕರಾವಳಿಯಲ್ಲಿ ವರುಣದೇವ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಗೆ ಮುಂದಿನ 5 ದಿನ ಭಾರಿ ಮಳೆಯ ಮುನ್ಸೂಚನೆ ನೀಡಿದ್ದು, ಮೂರು ದಿನ ಯಲ್ಲೋ ಅಲರ್ಟ್ ಘೋಷಿಸಿದೆ.

    ಜುಲೈ 5 ಮತ್ತು 6ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಮುಂದಿನ ಮೂರ್ನಾಲ್ಕು ದಿನ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಕೆಲವೊಮ್ಮೆ ಸಾಧಾರಣ ಮಳೆ ಸಾಧ್ಯತೆಯಿದ್ದು, ಗಾಳಿಯ ವೇಗ ಹೆಚ್ಚಾಗುವ ಸಂಭವವಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 28-24
    ಶಿವಮೊಗ್ಗ: 27-22
    ಬೆಳಗಾವಿ: 25-21
    ಮೈಸೂರು: 29-22

    ಮಂಡ್ಯ: 31-22
    ಮಡಿಕೇರಿ: 23-18
    ರಾಮನಗರ: 30-22
    ಹಾಸನ: 26-20
    ಚಾಮರಾಜನಗರ: 30-22
    ಚಿಕ್ಕಬಳ್ಳಾಪುರ: 29-21

    ಕೋಲಾರ: 30-22
    ತುಮಕೂರು: 29-22
    ಉಡುಪಿ: 28-24
    ಕಾರವಾರ: 28-26
    ಚಿಕ್ಕಮಗಳೂರು: 24-19
    ದಾವಣಗೆರೆ: 28-22

    ಹುಬ್ಬಳ್ಳಿ: 26-22
    ಚಿತ್ರದುರ್ಗ: 28-22
    ಹಾವೇರಿ: 27-22
    ಬಳ್ಳಾರಿ: 32-24
    ಗದಗ: 28-22
    ಕೊಪ್ಪಳ: 29-23

    ರಾಯಚೂರು: 33-25
    ಯಾದಗಿರಿ: 33-25
    ವಿಜಯಪುರ: 29-23
    ಬೀದರ್: 31-23
    ಕಲಬುರಗಿ: 32-24
    ಬಾಗಲಕೋಟೆ: 31-23

  • ರಾಜ್ಯದ ಹವಾಮಾನ ವರದಿ: 02-07-2024

    ರಾಜ್ಯದ ಹವಾಮಾನ ವರದಿ: 02-07-2024

    ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ 3 ದಿನ ಮೋಡ ಕವಿದ ವಾತಾವರಣ ಇರಲಿದ್ದು, ಚಳಿಯ ಅನುಭವ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅಲ್ಲದೇ ಕರಾವಳಿ ಮಲೆನಾಡು ಭಾಗಕ್ಕೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ.

    ಗುಡುಗು, ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆಯನ್ನು ನೀಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಶಿವಮೊಗ್ಗ ಜಿಲ್ಲೆಯ ಒಂದೆರಡು ಸ್ಥಳಗಳಿಗೆ ಭಾರಿ ಮಳೆಯ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿಯಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-21
    ಮಂಗಳೂರು: 29-25
    ಶಿವಮೊಗ್ಗ: 28-22
    ಬೆಳಗಾವಿ: 26-21
    ಮೈಸೂರು: 29-22

    ಮಂಡ್ಯ: 30-22
    ಮಡಿಕೇರಿ: 22-18
    ರಾಮನಗರ: 30-22
    ಹಾಸನ: 26-20
    ಚಾಮರಾಜನಗರ: 30-22
    ಚಿಕ್ಕಬಳ್ಳಾಪುರ: 30-21

    ಕೋಲಾರ: 31-22
    ತುಮಕೂರು: 30-22
    ಉಡುಪಿ: 29-25
    ಕಾರವಾರ: 29-26
    ಚಿಕ್ಕಮಗಳೂರು: 24-19
    ದಾವಣಗೆರೆ: 30-23

    ಹುಬ್ಬಳ್ಳಿ: 27-22
    ಚಿತ್ರದುರ್ಗ: 29-22
    ಹಾವೇರಿ: 29-23
    ಬಳ್ಳಾರಿ: 33-24
    ಗದಗ: 29-22
    ಕೊಪ್ಪಳ: 31-23

    ರಾಯಚೂರು: 34-25
    ಯಾದಗಿರಿ: 34-26
    ವಿಜಯಪುರ: 31-23
    ಬೀದರ್: 31-23
    ಕಲಬುರಗಿ: 33-24
    ಬಾಗಲಕೋಟೆ: 32-24

  • ರಾಜ್ಯದ ಹವಾಮಾನ ವರದಿ: 01-07-2024

    ರಾಜ್ಯದ ಹವಾಮಾನ ವರದಿ: 01-07-2024

    ರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಹಾಗೂ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಅತ್ಯಧಿಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಭಾರೀ ಮಳೆ ಪ್ರಯುಕ್ತ ಈ ಆರು ಜಿಲ್ಲೆಗಳಿಗೆ ಇಂದು ಮತ್ತು ಮಂಗಳವಾರ (ಜುಲೈ 2) ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 28-25
    ಶಿವಮೊಗ್ಗ: 27-22
    ಬೆಳಗಾವಿ: 26-22
    ಮೈಸೂರು: 28-22

    ಮಂಡ್ಯ: 29-22
    ಮಡಿಕೇರಿ: 22-17
    ರಾಮನಗರ: 29-22
    ಹಾಸನ: 24-20
    ಚಾಮರಾಜನಗರ: 29-22
    ಚಿಕ್ಕಬಳ್ಳಾಪುರ: 29-21

    ಕೋಲಾರ: 29-22
    ತುಮಕೂರು: 29-22
    ಉಡುಪಿ: 28-24
    ಕಾರವಾರ: 27-24
    ಚಿಕ್ಕಮಗಳೂರು: 24-19
    ದಾವಣಗೆರೆ: 29-23

    ಹುಬ್ಬಳ್ಳಿ: 28-22
    ಚಿತ್ರದುರ್ಗ: 29-22
    ಹಾವೇರಿ: 28-23
    ಬಳ್ಳಾರಿ: 33-25
    ಗದಗ: 29-23
    ಕೊಪ್ಪಳ: 31-24

    ರಾಯಚೂರು: 34-26
    ಯಾದಗಿರಿ: 34-26
    ವಿಜಯಪುರ: 32-23
    ಬೀದರ್: 31-24
    ಕಲಬುರಗಿ: 33-25
    ಬಾಗಲಕೋಟೆ: 32-24