Tag: weather

  • ಮಳೆಗೆ ಮುಳುಗಿದ ಕರುನಾಡು – ಹಾವೇರಿ, ಕೊಡಗು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

    ಮಳೆಗೆ ಮುಳುಗಿದ ಕರುನಾಡು – ಹಾವೇರಿ, ಕೊಡಗು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

    ಬೆಂಗಳೂರು: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ (Heavy Rain) ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ರಸ್ತೆಗಳು ಮುಳುಗಡೆಯಾಗಿವೆ. ಜೊತೆಗೆ ತಂಪು ವಾತಾವರಣ ಹಾಗೂ ಶೀತಗಾಳಿಯು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ರಾಜ್ಯದ ವಿವಿಧೆಡೆ ಶಾಲಾ – ಕಾಲೇಜುಗಳಿಗೆ ರಜೆ (School Holiday) ಘೋಷಣೆ ಮಾಡಲಾಗಿದೆ.

    ಹಾವೇರಿ

    ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ 2 ದಿನಗಳ ಕಾಲ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹವಾಮಾನ ಇಲಾಖೆ ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ತಂಪು ವಾತಾವರಣ ಹಾಗೂ ಶೀತಗಾಳಿ ಬೀಸುವ ಮುನ್ಸೂಚನೆ ನೀಡಿದೆ. ಮಕ್ಕಳ ಆರೋಗ್ಯದ ಹಿತದೃಷ್ಠಿ ಮತ್ತು ರಕ್ಷಣೆಯ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜು.26 ಮತ್ತು 27ರಂದು ಎರಡು ದಿನ ಶಾಲಾ, ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಡಿಸಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ. ಇದನ್ನೂ ಓದಿ: ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆ – ಫಲಾನುಭವಿಗಳಿಗೆ 1 ಲಕ್ಷ ರೂ. ಹೊರೆ ಕಡಿಮೆ ಮಾಡಲು ನಿರ್ಧಾರ

    ಚಿಕ್ಕಮಗಳೂರು

    ಕಾಫಿನಾಡು ಭಾಗದಲ್ಲಿ ಮಳೆಯ ಪ್ರಮಾಣ ಕೊಂಚ ತಗ್ಗಿದ್ದರೂ ಶೀತಗಾಳಿ ಹೆಚ್ಚಾಗಿರುವ ಕಾರಣ ಮಲೆನಾಡು ಭಾಗದ 6 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಶುಕ್ರವಾರ (ಜು.26) ರಜೆ ಘೋಷಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್ ಪುರ ತಾಲೂಕಿನ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್‌ನಿಂದ 1.50 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

    weather

    ಕೊಡಗು

    ಕೊಡಗು ಜಿಲ್ಲೆಯಲ್ಲಿ ಗಾಳಿ-ಮಳೆಯ ಆರ್ಭಟ ಜೋರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನ ಹೊರತು ಪಡಿಸಿ, ಅಂಗನವಾಡಿ ಸೇರಿದಂತೆ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಆದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಟಿಬಿ ಡ್ಯಾಂ ಭರ್ತಿ, 28 ಕ್ರಸ್ಟ್‌ ಗೇಟ್‌ ಓಪನ್‌ – 83 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ

    weather

    ಹಾಸನ

    ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ರಸ್ತೆಗಳು ಮುಳುಗಡೆಯಾಗಿವೆ. ಈ ಹಿನ್ನೆಲೆಯಲ್ಲಿ ಜುಲೈ 26ರ ಶುಕ್ರವಾರದಂದು ಹಾಸನ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ ಮತ್ತು ಅರಕಲಗೂಡು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. 6 ತಾಲ್ಲೂಕಿನ ಅಂಗನವಾಡಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದು, ಕಾಲೇಜುಗಳು ಎಂದಿನಂತೆ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಕೆ ಪಾಂಡು ಸುತ್ತೋಲೆ ಹೊರಡಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಮುಂದುವರಿದ ಬಿಜೆಪಿ, ಜೆಡಿಎಸ್ ಧರಣಿ – ತುಳು ಸಂಭಾಷಣೆ ಸೊಗಡು, ವಿಧೇಯಕಗಳ ಅಂಗೀಕಾರ

  • ರಾಜ್ಯದ ಹವಾಮಾನ ವರದಿ: 25-07-2024

    ರಾಜ್ಯದ ಹವಾಮಾನ ವರದಿ: 25-07-2024

    ರಾಜ್ಯದಲ್ಲಿ ಇನ್ನೂ 3 ದಿನ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿ ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದು, ಇನ್ನೂ 3 ದಿನಗಳವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಅಲ್ಲದೇ ಬೆಂಗಳೂರು ನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-21
    ಮಂಗಳೂರು: 28-25
    ಶಿವಮೊಗ್ಗ: 24-22
    ಬೆಳಗಾವಿ: 23-21
    ಮೈಸೂರು: 26-22

    ಮಂಡ್ಯ: 28-22
    ಮಡಿಕೇರಿ: 20-17
    ರಾಮನಗರ: 28-22
    ಹಾಸನ: 23-20
    ಚಾಮರಾಜನಗರ: 27-22
    ಚಿಕ್ಕಬಳ್ಳಾಪುರ: 27-21

    ಕೋಲಾರ: 28-22
    ತುಮಕೂರು: 27-21
    ಉಡುಪಿ: 27-25
    ಕಾರವಾರ: 28-26
    ಚಿಕ್ಕಮಗಳೂರು: 22-19
    ದಾವಣಗೆರೆ: 26-22

    ಹುಬ್ಬಳ್ಳಿ: 24-21
    ಚಿತ್ರದುರ್ಗ: 25-21
    ಹಾವೇರಿ: 25-22
    ಬಳ್ಳಾರಿ: 29-24
    ಗದಗ: 26-22
    ಕೊಪ್ಪಳ: 27-22

    ರಾಯಚೂರು: 29-24
    ಯಾದಗಿರಿ: 29-24
    ವಿಜಯಪುರ: 26-22
    ಬೀದರ್: 26-22
    ಕಲಬುರಗಿ: 27-23
    ಬಾಗಲಕೋಟೆ: 27-23

  • ರಾಜ್ಯದ ಹವಾಮಾನ ವರದಿ: 24-07-2024

    ರಾಜ್ಯದ ಹವಾಮಾನ ವರದಿ: 24-07-2024

    ರಾಜ್ಯದಲ್ಲಿ ಇನ್ನೂ 4 ದಿನ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿ ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದು, ಇನ್ನೂ 4 ದಿನಗಳವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಅಲ್ಲದೇ ಬೆಂಗಳೂರು ನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-21
    ಮಂಗಳೂರು: 28-25
    ಶಿವಮೊಗ್ಗ: 25-22
    ಬೆಳಗಾವಿ: 27-21
    ಮೈಸೂರು: 27-21

    ಮಂಡ್ಯ: 29-22
    ಮಡಿಕೇರಿ: 20-17
    ರಾಮನಗರ: 29-22
    ಹಾಸನ: 24-19
    ಚಾಮರಾಜನಗರ: 28-21
    ಚಿಕ್ಕಬಳ್ಳಾಪುರ: 28-21

    ಕೋಲಾರ: 29-22
    ತುಮಕೂರು: 28-21
    ಉಡುಪಿ: 28-25
    ಕಾರವಾರ: 28-25
    ಚಿಕ್ಕಮಗಳೂರು: 22-19
    ದಾವಣಗೆರೆ: 26-22

    ಹುಬ್ಬಳ್ಳಿ: 24-21
    ಚಿತ್ರದುರ್ಗ: 26-21
    ಹಾವೇರಿ: 26-22
    ಬಳ್ಳಾರಿ: 30-24
    ಗದಗ: 26-22
    ಕೊಪ್ಪಳ: 28-23

    ರಾಯಚೂರು: 31-24
    ಯಾದಗಿರಿ: 29-24
    ವಿಜಯಪುರ: 27-23
    ಬೀದರ್: 26-22
    ಕಲಬುರಗಿ: 28-23
    ಬಾಗಲಕೋಟೆ: 28-23

  • ರಾಜ್ಯದ ಹವಾಮಾನ ವರದಿ: 23-07-2024

    ರಾಜ್ಯದ ಹವಾಮಾನ ವರದಿ: 23-07-2024

    ರಾಜ್ಯದಲ್ಲಿ ಇನ್ನೂ 6 ದಿನ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿ ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದು, ಇಂದಿನಿಂದ 6 ದಿನಗಳವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ ಕರಾವಳಿಯ ಎಲ್ಲಾ ಜಿಲ್ಲೆಗಳಿಗೂ ಇಂದಿನಿಂದ 4 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಇನ್ನೂ 4 ದಿನ ಮೋಡ ಕವಿದ ವಾತಾವರಣವಿರಲಿದೆ. ಅಲ್ಲದೇ ಬೆಂಗಳೂರು ನಗರದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 28-25
    ಶಿವಮೊಗ್ಗ: 26-22
    ಬೆಳಗಾವಿ: 24-21
    ಮೈಸೂರು: 28-21

    ಮಂಡ್ಯ: 29-22
    ಮಡಿಕೇರಿ: 21-17
    ರಾಮನಗರ: 29-22
    ಹಾಸನ: 24-19
    ಚಾಮರಾಜನಗರ: 29-22
    ಚಿಕ್ಕಬಳ್ಳಾಪುರ: 28-21

    ಕೋಲಾರ: 29-22
    ತುಮಕೂರು: 28-21
    ಉಡುಪಿ: 28-25
    ಕಾರವಾರ: 28-26
    ಚಿಕ್ಕಮಗಳೂರು: 23-19
    ದಾವಣಗೆರೆ: 27-22

    ಹುಬ್ಬಳ್ಳಿ: 25-21
    ಚಿತ್ರದುರ್ಗ: 27-21
    ಹಾವೇರಿ: 26-22
    ಬಳ್ಳಾರಿ: 31-24
    ಗದಗ: 27-22
    ಕೊಪ್ಪಳ: 29-23

    ರಾಯಚೂರು: 31-24
    ಯಾದಗಿರಿ: 30-24
    ವಿಜಯಪುರ: 28-23
    ಬೀದರ್: 26-22
    ಕಲಬುರಗಿ: 28-23
    ಬಾಗಲಕೋಟೆ: 28-23

  • ರಾಜ್ಯದ ಹವಾಮಾನ ವರದಿ: 22-07-2024

    ರಾಜ್ಯದ ಹವಾಮಾನ ವರದಿ: 22-07-2024

    ರಾವಳಿ ಸೇರಿದಂತೆ ಮಲೆನಾಡು ಭಾಗಗಳಲ್ಲಿ ವರುಣ ಅಬ್ಬರಿಸುತ್ತಿದ್ದು, ಮುಂದಿನ ಎರಡು-ಮೂರು ದಿನ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬಳಿಕ ಮಳೆ ಪ್ರಮಾಣ ತಗ್ಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕರಾವಳಿ ಕರ್ನಾಟಕ ಮತ್ತು ಪಕ್ಕದ ಪಶ್ಚಿಮ ಘಟ್ಟಗಳ ಜಿಲ್ಲೆಗಳಲ್ಲಿ ಬಲವಾದ ಗಾಳಿಯ ಪರಿಣಾಮ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಮತ್ತು ನಿರಂತರ ಗಾಳಿಯ ವೇಗವು 40-50 ಕಿ.ಮೀ ತಲುಪುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತವರಣ ಮುಂದುವರಿಯಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 28-25
    ಶಿವಮೊಗ್ಗ: 26-22
    ಬೆಳಗಾವಿ: 24-21
    ಮೈಸೂರು: 28-21

    ಮಂಡ್ಯ: 29-22
    ಮಡಿಕೇರಿ: 21-17
    ರಾಮನಗರ: 29-22
    ಹಾಸನ: 24-19
    ಚಾಮರಾಜನಗರ: 29-22
    ಚಿಕ್ಕಬಳ್ಳಾಪುರ: 28-21

    ಕೋಲಾರ: 29-22
    ತುಮಕೂರು: 28-21
    ಉಡುಪಿ: 28-25
    ಕಾರವಾರ: 28-26
    ಚಿಕ್ಕಮಗಳೂರು: 23-19
    ದಾವಣಗೆರೆ: 27-22

    ಹುಬ್ಬಳ್ಳಿ: 26-21
    ಚಿತ್ರದುರ್ಗ: 27-21
    ಹಾವೇರಿ: 27-22
    ಬಳ್ಳಾರಿ: 31-24
    ಗದಗ: 27-22
    ಕೊಪ್ಪಳ: 29-22

    ರಾಯಚೂರು: 31-24
    ಯಾದಗಿರಿ: 31-24
    ವಿಜಯಪುರ: 27-22
    ಬೀದರ್: 27-22
    ಕಲಬುರಗಿ: 29-23
    ಬಾಗಲಕೋಟೆ: 29-23

  • Rain Alert: ಉಡುಪಿಯ ಬ್ರಹ್ಮಾವರದಲ್ಲಿ ಕೃಷಿ ಭೂಮಿ ಜಲಾವೃತ – ಚಿಕ್ಕಮಗಳೂರು, ದಾವಣಗೆರೆ, ಕೊಪ್ಪಳದಲ್ಲೂ ಹೆಚ್ಚಿದ ಭೀತಿ

    Rain Alert: ಉಡುಪಿಯ ಬ್ರಹ್ಮಾವರದಲ್ಲಿ ಕೃಷಿ ಭೂಮಿ ಜಲಾವೃತ – ಚಿಕ್ಕಮಗಳೂರು, ದಾವಣಗೆರೆ, ಕೊಪ್ಪಳದಲ್ಲೂ ಹೆಚ್ಚಿದ ಭೀತಿ

    ಬೆಂಗಳೂರು: ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ (Heavy Rain) ಮುಂದುವರಿದಿದೆ. ಉಡುಪಿಯ ಬ್ರಹ್ಮಾವರ ತಾಲೂಕಿನ ಬೇಸಾಯ ಭೂಮಿಗಳು ಜಲಾವೃತವಾಗಿದೆ. ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೀರಿನಲ್ಲಿ ಭತ್ತದ ಗದ್ದೆಗಳು ಕೊಳೆಯುತ್ತಿವೆ. ಬೈಂದೂರು ಸೋಮೇಶ್ವರ ದೇವಳದ ಮೇಲ್ಭಾಗದಲ್ಲಿ ರಸ್ತೆಗೆ ಗುಡ್ಡಕುದಿದೆ. ಖಾಸಗಿ ರೆಸಾರ್ಟ್ ಕಾಮಗಾರಿ- ರಸ್ತೆ ನಿರ್ಮಾಣ ಹಿನ್ನೆಲೆಯಲ್ಲಿ ಸಮಸ್ಯೆ ಸಂಭವಿಸಿದೆ.

    ಹೆಬ್ಬಾಳೆ-ಹೊರನಾಡು ಸಂಪರ್ಕ ಸೇತುವೆ ಮುಳುಗಡೆ:
    ಇನ್ನೂ ಚಿಕ್ಕಮಗಳೂರಿನ (Chikkamagaluru) ಕಳಸ ಬಳಿ ಭದ್ರೆಯ ಅಬ್ಬರದಿಂದಾಗಿ ಹೆಬ್ಬಾಳೆ-ಹೊರನಾಡು ಸಂಪರ್ಕ ಸೇತುವೆ ಮುಳುಗಿದೆ. ಕೊಪ್ಪ ತಾಲೂಕಿನ ಬಸರೀಕಟ್ಟೆ ಸಮೀಪ ಅಬ್ಬಿಕಲ್ಲು ಜಲಪಾತ ಭೋರ್ಗರೆಯುತ್ತಿದೆ. ಮುಳ್ಳಯ್ಯನಗಿರಿಯಲ್ಲಿ ಭಾರೀ ಮಳೆ ಹಿನ್ನೆಲೆ ಚಿಕ್ಕಮಗಳೂರು ನಗರಕ್ಕೆ ನೀರುಣಿಸುವ ಹಿರೇಕೊಳಲೇ ಕೆರೆ ಕೋಡಿ ಬಿದ್ದಿದೆ. ಹೀಗಾಗಿ, ಕೆರೆಗೆ ಶಾಸಕ ಎಚ್‌.ಡಿ ತಮ್ಮಯ್ಯ, ಎಂಎಲ್‌ಸಿ ಸಿಟಿ ರವಿ, ಭೋಜೇಗೌಡ ಭಾಗಿನ ಅರ್ಪಿಸಿದ್ದಾರೆ.

    ಮೈದುಂಬಿ ಹರಿಯುತ್ತಿದೆ ತುಂಗಾಭದ್ರಾ ನದಿ:
    ಶಿವಮೊಗ್ಗದ ಸಾಗರದ ಶುಂಠಿಕೊಪ್ಪದ ಬಳಿ ವರದಾನದಿಯಿಂದಾಗಿ ಕೃಷಿ ಭೂಮಿ ಜಲಾವೃತಗೊಂಡಿದೆ. ಸೊರಬದ ಲಕ್ಕವಳ್ಳಿಯಲ್ಲಿ ವರದಾ-ದಂಡಾವತಿ ಸಂಗಮಕ್ಷೇತ್ರ ಜೈನಮಠ ಹೊಳೆಲಿಂಗೇಶ್ವರ ದೇವಾಲಯ ಸೇರಿದಂತೆ ಗದ್ದೆ, ತೋಟಗಳ ಮುಳುಗಿವೆ. ಶಿಕಾರಿಪುರದ ಧನರಾಜ್ ಹೇಮರಾಮ್ ಸರ್ಕಾರಿ ಶಾಲೆಯಲ್ಲಿ ನೀರು ತುಂಬಿಕೊಂಡಿದೆ. ದಾವಣಗೆರೆಯ ಹರಿಹರ ಪಕ್ಕದಲ್ಲಿ ತುಂಗಾಭದ್ರಾ ನದಿ ಮೈದುಂಬಿ ಹರೀತಿದೆ. ಕೊಪ್ಪಳದ ತುಂಗಭದ್ರಾ ಡ್ಯಾಮ್‌ಗೆ 1.27 ಲಕ್ಷ ಕ್ಯುಸೆಕ್‌ ಒಳಹರಿವಿದ್ದು, 105 ಟಿಎಂಸಿ ಪೈಕಿ 80 ಟಿಎಂಸಿಗೂ ಹೆಚ್ಚು ನೀರಿನ ಸಂಗ್ರವಾಗಿದೆ. 2 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ವಿಜಯನಗರ ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯಕ್ಕೆ ಶಾಸಕ ನೇಮಿರಾಜ್ ನಾಯ್ಕ್ ಮುಂದಾಳತ್ವದಲ್ಲಿ ರಾಜವಾಳ್ ಜಾಕ್ ವೆಲ್ ಮೂಲಕ ನೀರು ಬಿಡುಗಡೆ ಮಾಡಲಾಯಿತು.

    ಬೆಳಗಾವಿಯಲ್ಲೂ ಪ್ರವಾಹ ಭೀತಿ:
    ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿ ಪ್ರವಾಹ ಭೀತಿ, ಅವಾಂತರಗಳು ಸಂಭವಿಸಿವೆ. ಕೃಷ್ಣೆಯ ಒಳ ಹರಿವು 1.50 ಲಕ್ಷ ಕ್ಯೂಸೆಕ್ ದಾಟಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ದೂದ್‌ಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದೆ. ರೈತರ ಜಮೀನುಗಳಿಗೆ ನದಿ ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ 4 ಸೇತುವೆಗಳು ಮುಳುಗಡೆಯಾಗಿವೆ. 4 ಸೇತುವೆಗಳ 2 ಬದಿಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ.

    ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ:
    ಪ್ರವಾಹ ಎದುರಾಗುವ ಭೀತಿಗೆ ನದಿ ದಡದಲ್ಲಿರುವ ಪಂಪ್‌ಸೆಟ್‌ಗಳನ್ನು ರೈತರು ತೆಗೆದಿಟ್ಟಿದ್ದಾರೆ. ಖಾನಾಪೂರ ತಾಲೂಕಿನ ಜಾಂಬೋಟಿ ಬಳಿ ಕಸಮಳಿ ಬ್ರಿಡ್ಜ್ ಮೇಲೆ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ. ಪರಿಣಾಮ ಬೆಳಗಾವಿ – ಗೋವಾ ಸರಕು ಸಾಗಣೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಗೋವಾದಿಂದ ಬರುವ ಎಲ್ಲಾ ವಾಹನಗಳನ್ನು ತಡೆ ಹಿಡಿಯಲಾಗಿದೆ. ಕಿತ್ತೂರಿನ ಹುಣಶೀಕಟ್ಟಿಯ ಮಲಪ್ರಭಾ ನದಿಯಲ್ಲಿ ರೈತರ ಸಮಸ್ಯೆ ಹಿನ್ನೆಲೆಯಲ್ಲಿ ಡಿ.ಸಿ ಮೊಹಮ್ಮದ್ ರೋಷನ್ ಭೇಟಿ ನೀಡಿದರು. ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಲು ಸರ್ಕಾರಕ್ಕೆ ಮನವಿ ಕಳುಹಿಸುವ ಭರವಸೆ ನೀಡಿದರು. ನಿಪ್ಪಾಣಿ ನಗರದ ಜತ್ರಾಟ್‌ವೇಸ್‌ನಲ್ಲಿ ಗೋಡೆ ಕುಸಿದು 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಯಾದಗಿರಿಯ ನಾರಾಯಣಪುರ ಜಲಾಶಯ 33 ಟಿಎಂಸಿ ಸಾಮರ್ಥ್ಯದ ಪೈಕಿ 28 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಮ್‌ನಿಂದ ಕೃಷ್ಣಾ ನದಿಗೆ 1.60 ಲಕ್ಷ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಸುರಪುರದ ನೀಲಕಂಠರಾಯನ ಗಡ್ಡಿ, ಮೇಲಿನ ಗಡ್ಡಿ, ಜಂಗಣ್ಣದೊಡ್ಡಿ ಮುಳುಗಡೆಯಾಗುವ ಸಾಧ್ಯತೆ ಇದ್ದು, ಹೈಅಲರ್ಟ್ ಘೋಷಿಸಲಾಗಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಶೀಲಹಳ್ಳಿ ಸೇತುವೆ, ಹೂವಿನಹೆಡಗಿ ಸೇತುವೆಗಳಿಗೆ ಮುಳುಗಡೆ ಭೀತಿ ಎದುರಾಗಿದೆ.

    ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡು:
    ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಪ್ರವಾಸಿಗರ ದಂಡು ಹೆಚ್ಚಾಗಿದೆ. ಬೆಳಗ್ಗೆ 5 ಗಂಟೆಯಿಂದಲೇ ಕಾರು, ಬೈಕ್‌ಗಳ ಮೂಲಕ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟಕ್ಕೆ ಲಗ್ಗೆಯಿಡುತ್ತಿದ್ದಾರೆ. ನಂದಿಬೆಟ್ಟದ ಪಾರ್ಕಿಂಗ್ ಫ್ಲಾಟ್ ವಾಹನಗಳಿಂದ ಹೌಸ್‌ಫುಲ್ ಆಗುತ್ತಿದೆ. ಭಾನುವಾರ ಸಹ ಇಡೀ ನಂದಿಬೆಟ್ಟವನ್ನು ದಟ್ಟಮಂಜು-ಚುಮುಚುಮು ಚಳಿ ಆವರಿಸಿತ್ತು.

  • ರಾಜ್ಯದ ಹವಾಮಾನ ವರದಿ: 21-07-2024

    ರಾಜ್ಯದ ಹವಾಮಾನ ವರದಿ: 21-07-2024

    ರಾಜ್ಯದಲ್ಲಿ ಇನ್ನೂ ಐದು ದಿನ ಮಳೆಯ ಆರ್ಭಟ ಮುಂದುವರಿಯಲಿದ್ದು, ಕರಾವಳಿ, ಉತ್ತರ ಒಳನಾಡು, ಮಲೆನಾಡು, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ. ಮುಂದಿನ ಮೂರ್ನಾಲ್ಕು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದ್ದು, ಕೆಲವೊಮ್ಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-21
    ಮಂಗಳೂರು: 27-25
    ಶಿವಮೊಗ್ಗ: 24-22
    ಬೆಳಗಾವಿ: 23-21
    ಮೈಸೂರು: 27-21

    ಮಂಡ್ಯ: 29-22
    ಮಡಿಕೇರಿ: 20-17
    ರಾಮನಗರ: 29-22
    ಹಾಸನ: 23-19
    ಚಾಮರಾಜನಗರ: 28-22
    ಚಿಕ್ಕಬಳ್ಳಾಪುರ: 27-21

    ಕೋಲಾರ: 29-22
    ತುಮಕೂರು: 27-21
    ಉಡುಪಿ: 27-25
    ಕಾರವಾರ: 27-25
    ಚಿಕ್ಕಮಗಳೂರು: 22-19
    ದಾವಣಗೆರೆ: 25-22

    ಹುಬ್ಬಳ್ಳಿ: 24-21
    ಚಿತ್ರದುರ್ಗ: 25-21
    ಹಾವೇರಿ: 24-22
    ಬಳ್ಳಾರಿ: 28-24
    ಗದಗ: 25-22
    ಕೊಪ್ಪಳ: 26-22

    ರಾಯಚೂರು: 28-24
    ಯಾದಗಿರಿ: 28-24
    ವಿಜಯಪುರ: 26-23
    ಬೀದರ್: 26-22
    ಕಲಬುರಗಿ: 27-23
    ಬಾಗಲಕೋಟೆ: 27-23

  • ರಾಜ್ಯದ ಹವಾಮಾನ ವರದಿ: 20-07-2024

    ರಾಜ್ಯದ ಹವಾಮಾನ ವರದಿ: 20-07-2024

    ಬಂಗಾಳ ಉಪಸಾಗರದಲ್ಲಿ ವಾಯುಭಾರ ಕುಸಿತ ಭೀತಿ ಎದುರಾಗಿದೆ. ಇದರ ಪ್ರಭಾವದಿಂದ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

    ಕರಾವಳಿ ಹಾಗೂ ಮಲೆನಾಡಲ್ಲಿ ವರುಣಾರ್ಭಟ ಮುಂದುವರೆಯಲಿದ್ದು, ಇಂದು ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಜುಲೈ 21 ರವರೆಗೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-21
    ಮಂಗಳೂರು: 28-25
    ಶಿವಮೊಗ್ಗ: 24-22
    ಬೆಳಗಾವಿ: 23-21
    ಮೈಸೂರು: 26-21

    ಮಂಡ್ಯ: 26-22
    ಮಡಿಕೇರಿ: 20-17
    ರಾಮನಗರ: 27-21
    ಹಾಸನ: 22-19
    ಚಾಮರಾಜನಗರ: 27-22
    ಚಿಕ್ಕಬಳ್ಳಾಪುರ: 24-21

    ಕೋಲಾರ: 26-22
    ತುಮಕೂರು: 25-21
    ಉಡುಪಿ: 28-25
    ಕಾರವಾರ: 27-25
    ಚಿಕ್ಕಮಗಳೂರು: 22-19
    ದಾವಣಗೆರೆ: 25-22

    ಹುಬ್ಬಳ್ಳಿ: 24-21
    ಚಿತ್ರದುರ್ಗ: 24-21
    ಹಾವೇರಿ: 24-22
    ಬಳ್ಳಾರಿ: 27-23
    ಗದಗ: 24-22
    ಕೊಪ್ಪಳ: 26-23

    ರಾಯಚೂರು: 27-23
    ಯಾದಗಿರಿ: 26-23
    ವಿಜಯಪುರ: 26-22
    ಬೀದರ್: 24-22
    ಕಲಬುರಗಿ: 26-23
    ಬಾಗಲಕೋಟೆ: 26-23

  • ರಾಜ್ಯದ ಹವಾಮಾನ ವರದಿ: 19-07-2024

    ರಾಜ್ಯದ ಹವಾಮಾನ ವರದಿ: 19-07-2024

    ತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ನಿರಂತರ ಗಾಳಿಯ ವೇಗವು 30-40 ಕಿ.ಮೀ ತಲುಪುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಮತ್ತು ನಿರಂತರ ಗಾಳಿಯ ವೇಗವು 40-50 ಕಿ.ಮೀ ತಲುಪುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 24-20
    ಮಂಗಳೂರು: 27-25
    ಶಿವಮೊಗ್ಗ: 24-22
    ಬೆಳಗಾವಿ: 23-21
    ಮೈಸೂರು: 25-21

    ಮಂಡ್ಯ: 26-22
    ಮಡಿಕೇರಿ: 19-17
    ರಾಮನಗರ: 26-21
    ಹಾಸನ: 22-19
    ಚಾಮರಾಜನಗರ: 26-22
    ಚಿಕ್ಕಬಳ್ಳಾಪುರ: 24-21

    ಕೋಲಾರ: 26-21
    ತುಮಕೂರು: 24-21
    ಉಡುಪಿ: 27-25
    ಕಾರವಾರ: 27-25
    ಚಿಕ್ಕಮಗಳೂರು: 21-19
    ದಾವಣಗೆರೆ: 24-22

    ಹುಬ್ಬಳ್ಳಿ: 24-21
    ಚಿತ್ರದುರ್ಗ: 24-21
    ಹಾವೇರಿ: 24-22
    ಬಳ್ಳಾರಿ: 27-23
    ಗದಗ: 24-21
    ಕೊಪ್ಪಳ: 26-23

    ರಾಯಚೂರು: 27-23
    ಯಾದಗಿರಿ: 27-23
    ವಿಜಯಪುರ: 26-22
    ಬೀದರ್: 25-22
    ಕಲಬುರಗಿ: 26-23
    ಬಾಗಲಕೋಟೆ: 26-23

  • ರಾಜ್ಯದ ಹವಾಮಾನ ವರದಿ: 17-07-2024

    ರಾಜ್ಯದ ಹವಾಮಾನ ವರದಿ: 17-07-2024

    ರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ.

    ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. 18ರ ಬಳಿಕ ಕರಾವಳಿ ಜಿಲ್ಲೆಗಳು ಹಾಗೂ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-21
    ಮಂಗಳೂರು: 27-24
    ಶಿವಮೊಗ್ಗ: 24-21
    ಬೆಳಗಾವಿ: 23-21
    ಮೈಸೂರು: 26-21

    ಮಂಡ್ಯ: 27-22
    ಮಡಿಕೇರಿ: 19-17
    ರಾಮನಗರ: 27-22
    ಹಾಸನ: 23-19
    ಚಾಮರಾಜನಗರ: 27-22
    ಚಿಕ್ಕಬಳ್ಳಾಪುರ: 27-21

    ಕೋಲಾರ: 28-22
    ತುಮಕೂರು: 27-21
    ಉಡುಪಿ: 27-25
    ಕಾರವಾರ: 27-25
    ಚಿಕ್ಕಮಗಳೂರು: 22-19
    ದಾವಣಗೆರೆ: 26-22

    ಹುಬ್ಬಳ್ಳಿ: 24-21
    ಚಿತ್ರದುರ್ಗ: 25-21
    ಹಾವೇರಿ: 26-22
    ಬಳ್ಳಾರಿ: 29-24
    ಗದಗ: 26-22
    ಕೊಪ್ಪಳ: 27-23

    ರಾಯಚೂರು: 30-24
    ಯಾದಗಿರಿ: 30-24
    ವಿಜಯಪುರ: 27-23
    ಬೀದರ್: 28-22
    ಕಲಬುರಗಿ: 29-23
    ಬಾಗಲಕೋಟೆ: 28-23