Tag: weather

  • ರಾಜ್ಯದ ಹವಾಮಾನ ವರದಿ 31-10-2024

    ರಾಜ್ಯದ ಹವಾಮಾನ ವರದಿ 31-10-2024

    ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಮಲೆನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 31-24
    ಶಿವಮೊಗ್ಗ:31-21
    ಬೆಳಗಾವಿ: 29-20
    ಮೈಸೂರು: 31-21


    ಮಂಡ್ಯ: 31-21
    ಮಡಿಕೇರಿ: 26-17
    ರಾಮನಗರ: 29-21
    ಹಾಸನ: 29-19
    ಚಾಮರಾಜನಗರ: 31-21
    ಚಿಕ್ಕಬಳ್ಳಾಪುರ: 28-20

    ಕೋಲಾರ: 28-21
    ತುಮಕೂರು: 28-21
    ಉಡುಪಿ: 31-24
    ಕಾರವಾರ: 31-24
    ಚಿಕ್ಕಮಗಳೂರು: 27-18
    ದಾವಣಗೆರೆ: 32-22

    ಹುಬ್ಬಳ್ಳಿ: 31-21
    ಚಿತ್ರದುರ್ಗ: 31-21
    ಹಾವೇರಿ: 32-22
    ಬಳ್ಳಾರಿ: 32-22
    ಗದಗ: 31-21
    ಕೊಪ್ಪಳ: 32-22

    ರಾಯಚೂರು: 32-23
    ಯಾದಗಿರಿ: 33-23
    ವಿಜಯಪುರ: 32-21
    ಬೀದರ್: 31-21
    ಕಲಬುರಗಿ: 33-23
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ 30-10-2024

    ರಾಜ್ಯದ ಹವಾಮಾನ ವರದಿ 30-10-2024

    ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ, ಆದರೂ ಮಲೆನಾಡಿನ ಕೆಲವು ಸ್ಥಳಗಳಲ್ಲಿ ಮಳೆಯಾಗುತ್ತಿದೆ. ಇಂದು ಸಹ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-19
    ಮಂಗಳೂರು: 30-22
    ಶಿವಮೊಗ್ಗ: 29-20
    ಬೆಳಗಾವಿ: 29-19
    ಮೈಸೂರು: 31-19

    ಮಂಡ್ಯ: 31-20
    ಮಡಿಕೇರಿ: 25-16
    ರಾಮನಗರ: 30-19
    ಹಾಸನ: 28-18
    ಚಾಮರಾಜನಗರ: 31-19
    ಚಿಕ್ಕಬಳ್ಳಾಪುರ: 29-19

    ಕೋಲಾರ: 29-20
    ತುಮಕೂರು: 29-19
    ಉಡುಪಿ: 30-23
    ಕಾರವಾರ: 30-24
    ಚಿಕ್ಕಮಗಳೂರು: 27-17
    ದಾವಣಗೆರೆ: 31-21

    ಹುಬ್ಬಳ್ಳಿ: 32-22
    ಚಿತ್ರದುರ್ಗ: 29-20
    ಹಾವೇರಿ: 31-21
    ಬಳ್ಳಾರಿ: 32-22
    ಗದಗ: 31-21
    ಕೊಪ್ಪಳ: 32-22

    ರಾಯಚೂರು: 32-23
    ಯಾದಗಿರಿ: 33-23
    ವಿಜಯಪುರ: 32-21
    ಬೀದರ್: 31-21
    ಕಲಬುರಗಿ: 33-23
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ 29-10-2024

    ರಾಜ್ಯದ ಹವಾಮಾನ ವರದಿ 29-10-2024

    ರಾಜ್ಯದ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿದ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-19
    ಮಂಗಳೂರು: 30-22
    ಶಿವಮೊಗ್ಗ: 29-20
    ಬೆಳಗಾವಿ: 29-19
    ಮೈಸೂರು: 31-19

    ಮಂಡ್ಯ: 31-20
    ಮಡಿಕೇರಿ: 25-16
    ರಾಮನಗರ: 30-19
    ಹಾಸನ: 28-18
    ಚಾಮರಾಜನಗರ: 31-19
    ಚಿಕ್ಕಬಳ್ಳಾಪುರ: 29-19

    ಕೋಲಾರ: 29-20
    ತುಮಕೂರು: 29-19
    ಉಡುಪಿ: 30-23
    ಕಾರವಾರ: 30-24
    ಚಿಕ್ಕಮಗಳೂರು: 27-17
    ದಾವಣಗೆರೆ: 31-21

    ಹುಬ್ಬಳ್ಳಿ: 32-22
    ಚಿತ್ರದುರ್ಗ: 29-20
    ಹಾವೇರಿ: 31-21
    ಬಳ್ಳಾರಿ: 32-22
    ಗದಗ: 31-21
    ಕೊಪ್ಪಳ: 32-22

    ರಾಯಚೂರು: 32-23
    ಯಾದಗಿರಿ: 33-23
    ವಿಜಯಪುರ: 32-21
    ಬೀದರ್: 31-21
    ಕಲಬುರಗಿ: 33-23
    ಬಾಗಲಕೋಟೆ: 32-22

  • ರಾಜ್ಯದ ಹವಾಮಾನ ವರದಿ: 28-10-2024

    ರಾಜ್ಯದ ಹವಾಮಾನ ವರದಿ: 28-10-2024

    ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರ್ನಾಟಕದ ರಾಯಚೂರು, ಬೀದರ್, ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-18
    ಮಂಗಳೂರು: 30-23
    ಶಿವಮೊಗ್ಗ: 29-20
    ಬೆಳಗಾವಿ: 29-19
    ಮೈಸೂರು: 31-19

    ಮಂಡ್ಯ: 31-19
    ಮಡಿಕೇರಿ: 24-15
    ರಾಮನಗರ: 30-19
    ಹಾಸನ: 27-17
    ಚಾಮರಾಜನಗರ: 31-19
    ಚಿಕ್ಕಬಳ್ಳಾಪುರ: 28-18

    ಕೋಲಾರ: 29-19
    ತುಮಕೂರು: 29-19
    ಉಡುಪಿ: 30-23
    ಕಾರವಾರ: 30-24
    ಚಿಕ್ಕಮಗಳೂರು: 27-17
    ದಾವಣಗೆರೆ: 31-20

    ಹುಬ್ಬಳ್ಳಿ: 30-20
    ಚಿತ್ರದುರ್ಗ: 29-19
    ಹಾವೇರಿ: 30-21
    ಬಳ್ಳಾರಿ: 32-22
    ಗದಗ: 31-20
    ಕೊಪ್ಪಳ: 31-21

    ರಾಯಚೂರು: 33-22
    ಯಾದಗಿರಿ: 33-22
    ವಿಜಯಪುರ: 32-21
    ಬೀದರ್: 31-21
    ಕಲಬುರಗಿ: 33-21
    ಬಾಗಲಕೋಟೆ: 32-21

  • ರಾಜ್ಯದ ಹವಾಮಾನ ವರದಿ: 27-10-2024

    ರಾಜ್ಯದ ಹವಾಮಾನ ವರದಿ: 27-10-2024

    ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮಳೆಯ ಆರ್ಭಟ ಕೊಂಚ ತಗ್ಗಿದೆ. ಇದರ ನಡುವೆಯೇ ರಾಜ್ಯದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮಂಡ್ಯ, ಚಾಮರಾಜನಗರ, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಹಾಸನ, ಕೊಡಗು, ರಾಮನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-18
    ಮಂಗಳೂರು: 31-24
    ಶಿವಮೊಗ್ಗ: 30-19
    ಬೆಳಗಾವಿ: 29-19
    ಮೈಸೂರು: 30-19

    ಮಂಡ್ಯ: 31-19
    ಮಡಿಕೇರಿ: 26-15
    ರಾಮನಗರ: 30-18
    ಹಾಸನ: 28-17
    ಚಾಮರಾಜನಗರ: 30-19
    ಚಿಕ್ಕಬಳ್ಳಾಪುರ: 28-18

    ಕೋಲಾರ: 28-18
    ತುಮಕೂರು: 29-18
    ಉಡುಪಿ: 31-23
    ಕಾರವಾರ: 31-24
    ಚಿಕ್ಕಮಗಳೂರು: 27-16
    ದಾವಣಗೆರೆ: 30-20

    ಹುಬ್ಬಳ್ಳಿ: 30-20
    ಚಿತ್ರದುರ್ಗ: 29-19
    ಹಾವೇರಿ: 31-20
    ಬಳ್ಳಾರಿ: 32-22
    ಗದಗ: 31-20
    ಕೊಪ್ಪಳ: 32-22

    ರಾಯಚೂರು: 33-21
    ಯಾದಗಿರಿ: 33-21
    ವಿಜಯಪುರ: 31-20
    ಬೀದರ್: 31-19
    ಕಲಬುರಗಿ: 32-20
    ಬಾಗಲಕೋಟೆ: 32-21

  • ರಾಜ್ಯ ಹವಾಮಾನ ವರದಿ: 26-10-2024

    ರಾಜ್ಯ ಹವಾಮಾನ ವರದಿ: 26-10-2024

    ಕ್ಷಿಣ ಒಳಗಿನ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕ ಮತ್ತು ಉತ್ತರ ಒಳ ಕರ್ನಾಟಕದ ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ.

    ಮಂಡ್ಯ, ಚಾಮರಾಜನಗರ, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಹಾಸನ, ಕೊಡಗು, ರಾಮನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳು, ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಹೆಚ್ಚಾಗಿರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-18
    ಮಂಗಳೂರು: 31-24
    ಶಿವಮೊಗ್ಗ: 30-19
    ಬೆಳಗಾವಿ: 29-19
    ಮೈಸೂರು: 30-19

    ಮಂಡ್ಯ: 31-19
    ಮಡಿಕೇರಿ: 26-15
    ರಾಮನಗರ: 30-18
    ಹಾಸನ: 28-17
    ಚಾಮರಾಜನಗರ: 30-19
    ಚಿಕ್ಕಬಳ್ಳಾಪುರ: 28-18

    ಕೋಲಾರ: 28-18
    ತುಮಕೂರು: 29-18
    ಉಡುಪಿ: 31-23
    ಕಾರವಾರ: 31-24
    ಚಿಕ್ಕಮಗಳೂರು: 27-16
    ದಾವಣಗೆರೆ: 30-20

    ಹುಬ್ಬಳ್ಳಿ: 30-20
    ಚಿತ್ರದುರ್ಗ: 29-19
    ಹಾವೇರಿ: 31-20
    ಬಳ್ಳಾರಿ: 32-22
    ಗದಗ: 31-20
    ಕೊಪ್ಪಳ: 32-22

    ರಾಯಚೂರು: 33-21
    ಯಾದಗಿರಿ: 33-21
    ವಿಜಯಪುರ: 31-20
    ಬೀದರ್: 31-19
    ಕಲಬುರಗಿ: 32-20
    ಬಾಗಲಕೋಟೆ: 32-21

     

  • ರಾಜ್ಯ ಹವಾಮಾನ ವರದಿ: 25-10-2024

    ರಾಜ್ಯ ಹವಾಮಾನ ವರದಿ: 25-10-2024

    ರಾಜ್ಯದಲ್ಲಿ ಮುಂದಿನ 4 ದಿನ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮಂಡ್ಯ, ಚಾಮರಾಜನಗರ, ಮೈಸೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಹಾಸನ, ಕೊಡಗು, ರಾಮನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳು, ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಹೆಚ್ಚಾಗಿರಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-19
    ಮಂಗಳೂರು: 30-24
    ಶಿವಮೊಗ್ಗ: 31-21
    ಬೆಳಗಾವಿ: 29-19
    ಮೈಸೂರು: 29-20

    weather

    ಮಂಡ್ಯ: 30-21
    ಮಡಿಕೇರಿ: 24-16
    ರಾಮನಗರ: 30-21
    ಹಾಸನ: 28-19
    ಚಾಮರಾಜನಗರ: 27-21
    ಚಿಕ್ಕಬಳ್ಳಾಪುರ: 28-19

    weather

    ಕೋಲಾರ: 28-19
    ತುಮಕೂರು: 29-19
    ಉಡುಪಿ: 30-24
    ಕಾರವಾರ: 31-24
    ಚಿಕ್ಕಮಗಳೂರು: 27-18
    ದಾವಣಗೆರೆ: 31-21

    ಹುಬ್ಬಳ್ಳಿ: 31-20
    ಚಿತ್ರದುರ್ಗ: 29-20
    ಹಾವೇರಿ: 31-21
    ಬಳ್ಳಾರಿ: 32-21
    ಗದಗ: 31-20
    ಕೊಪ್ಪಳ: 32-21

    weather

    ರಾಯಚೂರು: 33-21
    ಯಾದಗಿರಿ: 33-21
    ವಿಜಯಪುರ: 31-19
    ಬೀದರ್: 30-19
    ಕಲಬುರಗಿ: 32-21
    ಬಾಗಲಕೋಟೆ: 32-20

  • ಹವಾಮಾನ ವೈಪರೀತ್ಯ – ಕೊಡಗಿನಲ್ಲಿ ವೈರಲ್ ಫೀವರ್, ಒಂದೇ ದಿನ 200 ರಿಂದ 300 ಜನರಿಗೆ ಚಿಕಿತ್ಸೆ

    ಹವಾಮಾನ ವೈಪರೀತ್ಯ – ಕೊಡಗಿನಲ್ಲಿ ವೈರಲ್ ಫೀವರ್, ಒಂದೇ ದಿನ 200 ರಿಂದ 300 ಜನರಿಗೆ ಚಿಕಿತ್ಸೆ

    ಮಡಿಕೇರಿ: ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ವಾರಕ್ಕೆ ನೂರಾರು ಜನರು ಮಕ್ಕಳು ಸಾಮೂಹಿಕವಾಗಿ ಅನಾರೋಗ್ಯಕ್ಕೀಡಾಗುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಆಗೋಮ್ಮೆ ಈಗೊಮ್ಮೆ ಮಳೆ, ಬಿಸಿಲು, ಚಳಿಯ ವಾತಾವರಣ ಬರುತ್ತಿರುವುದರಿಂದ ಜಿಲ್ಲೆಯಲ್ಲಿ ಒಂದೇ ದಿನಕ್ಕೆ ಸುಮಾರು 200 ರಿಂದ 300 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

    ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದ ನಲುಗಿದ ಕೊಡಗಿನ ಜನರಿಗೆ ಈ ವರ್ಷ ಇಡಿ ಹವಾಮಾನ ವೈಪರೀತ್ಯದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಶೀತ, ಕೆಮ್ಮು, ವೈರಲ್ ಫೀವರ್, ರಿಕೆಟ್ಸಿಯಲ್ ಫೀವರ್ ಹರಡುತ್ತಿದೆ. ಅಲ್ಲದೇ ನಿರಂತರವಾಗಿ ಬಿಸಿಲಿನ ಉಷ್ಣಾಂಶ ಹಾಗೂ ಗಾಳಿ, ಚಳಿ ಹೆಚ್ಚಾಗಿರುವುದರಿಂದ ಆಸ್ತಮಾ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಉಸಿರಾಟದ ಸಮಸ್ಯೆ ಕಾಡುತ್ತಿದೆ. ಮಕ್ಕಳು, ಮಧ್ಯ ವಯಸ್ಕರು ವೃದ್ಧರು ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ದಿಢೀರ್‌ ಮಳೆ, ಬಿಸಿಲು ಬರುತ್ತಿರುವುದರಿಂದ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಂತು ಮಲೇರಿಯಾ ಸೊಳ್ಳೆಗಳ ಉತ್ಪತ್ತಿಯಾಗುವ ಸಾಧ್ಯತೆ ಇದೆ ಅನ್ನೋ ಅತಂಕವೂ ಎದುರಾಗಿದೆ.

    ಕೊಡಗು ಜಿಲ್ಲೆಯಲ್ಲಿ ವಾತಾವರಣದಲ್ಲಿ ವೈಪರೀತ್ಯ ಆಗುತ್ತಲೇ ಇದೆ. ಬೆಳಗ್ಗೆ ಮೋಡ ಕವಿದ ವಾತಾವರಣ ಇದ್ದರೇ ಸಂಜೆ ವೇಳೆಗೆ ದಿಢೀರ್ ಮಳೆ ಸುರಿಯುತ್ತೆ. ಈ ರೀತಿಯ ಭಾರಿ ಮಳೆಯ ಜೊತೆಗೆ ನಗರದಲ್ಲಿ ತಾಪಮಾನದ ಕುಸಿತವು ಜನರ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ನೆಗಡಿಯಿಂದ ಶುರುವಾಗಿ ನಂತರ ಗಂಟಲು ಕೆರೆತ, ಕೆಮ್ಮು, ಕಫಾ, ಜ್ವರದಿಂದ ಬಳಲುವ ಜನರು ಆಸ್ಪತ್ರೆ ಹಾಗೂ ಕ್ಲಿನಿಕ್ ಮೊರೆ ಹೋಗುತ್ತಿದ್ದಾರೆ. ಇದನ್ನೂ ಓದಿ: ಕಟ್ಟಡ ದುರಂತ ಸ್ಥಳಕ್ಕೆ ಭೇಟಿ ಕೊಟ್ಟ ಸಿಎಂ- ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

    ಕೊಡಗು ಐದು ತಾಲೂಕಿನಲ್ಲಿ ದಿನವೊಂದಕ್ಕೆ 200 ರಿಂದ 300 ಜನರು ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಅಕ್ಟೋಬರ್ ತಿಂಗಳಲ್ಲೇ ಸುಮಾರು 600 ರಿಂದ 700 ಜನರು ಚಿಕಿತ್ಸೆ ಪಡೆದು ಹೋಗಿದ್ದಾರೆ. ಅಷ್ಟೇ ಅಲ್ಲದೇ ಜನವರಿಯಿಂದ ಇಲ್ಲಿಯ ವರೆಗೂ… ಡೇಗ್ಯೂ ಜ್ವರ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಗ್ರಾಮೀಣ ಭಾಗದ ಜನರಲ್ಲಿ ಅರೋಗ್ಯ ಇಲಾಖೆ ಜಾಗೃತಿ ಕಾರ್ಯವನ್ನು ಮಾಡಲಾಗುತ್ತಿದೆ. ಇದನ್ನೂ ಓದಿ: ಮುಡಾದಲ್ಲಿ ಜಿಲ್ಲಾಧಿಕಾರಿ ಪಾತ್ರವಿಲ್ಲ, ಲೋಕಾಯುಕ್ತರಿಗೆ ಸ್ಪಷ್ಟನೆ ನೀಡಿದ್ದೇನೆ: ಜಿ.ಕುಮಾರ ನಾಯಕ್

  • ಮಲೆನಾಡಿನಲ್ಲಿ ಭಾರೀ ಮಳೆ- ರಸ್ತೆಯಲ್ಲಿ ನದಿಯಂತೆ ಹರಿದ ನೀರು

    ಮಲೆನಾಡಿನಲ್ಲಿ ಭಾರೀ ಮಳೆ- ರಸ್ತೆಯಲ್ಲಿ ನದಿಯಂತೆ ಹರಿದ ನೀರು

    – ಕಾಫಿ, ಅಡಿಕೆ, ಮೆಣಸು ಬೆಳೆಗೆ ಹಿಂಗಾರು ಭೀತಿ

    ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಧಾರಾಕಾರ ಮಳೆಗೆ ಜನಜೀವನ ಹೈರಾಣಾಗಿದೆ. ಚಿಕ್ಕಮಗಳೂರು (Chikkamagaluru) ತಾಲೂಕಿನ ಮಲ್ಲಂದೂರು ಭಾಗದಲ್ಲಿ ಒಂದೇ ಗಂಟೆಗೆ ಸುಮಾರು 4 ಇಂಚು ಮಳೆ ಸುರಿದಿದ್ದು ರಸ್ತೆಯಲ್ಲಿ ಮಳೆ ನೀರು ನದಿಯಂತೆ ಹರಿದಿದೆ.

    ಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಧಾರಾಕಾರ ಮಳೆಗೆ ಜನಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿದೆ. ಮಲೆನಾಡು, ಮಲ್ಲಂದೂರು ಭಾಗದಲ್ಲಿ ಒಂದೇ ಗಂಟೆಗೆ ಸುಮಾರು 4 ಇಂಚಿನಷ್ಟು ಮಳೆ ಸುರಿದಿದೆ. ರಸ್ತೆಯಲ್ಲಿ ಮಳೆ ನೀರು ನದಿಯಂತೆ ಹರಿದಿದೆ. ಮಲ್ಲಂದೂರು-ಮುತ್ತೋಡಿ ಭಾಗದಲ್ಲಿ ಭಾರೀ ಮಳೆ ಸುರಿದಿದ್ದು ಗುಡ್ಡದ ಮೇಲಿಂದ ಬಂಡೆ ಕಲ್ಲುಗಳು ಕೂಡ ರಸ್ತೆಗೆ ಉರುಳಿವೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ತುಂತುರು ಮಳೆ – ಯಲಹಂಕದಲ್ಲಿ 7 ಕಾರುಗಳು ಡಿಕ್ಕಿ

    ಧಾರಾಕಾರ ಪ್ರಮಾಣದ ಮಳೆ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ರಸ್ತೆಯ ಒಂದು ಬದಿಯ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. ಈ ಮಾರ್ಗದಲ್ಲಿ ದಿನಕ್ಕೆ ಒಂದೆರಡು ಬಸ್ ಅಷ್ಟೇ ಓಡಾಡುತ್ತದೆ. ರಸ್ತೆ ಹಾನಿಯಾದರೆ ಹತ್ತಾರು ಹಳ್ಳಿಯ ಜನ 40-50 ಕಿ.ಮೀ. ಸುತ್ತಿ ಚಿಕ್ಕಮಗಳೂರು ನಗರಕ್ಕೆ ಬರಬೇಕು. ಹಾಗಾಗಿ, ಮುಂಗಾರುಗಿಂತ ಹಿಂಗಾರು ಮಳೆಗೆ ಮಲೆನಾಡಿಗರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಇಂದು ಸೇರಿ ಇನ್ನೂ 4 ದಿನ ಬೆಂಗಳೂರಿನಲ್ಲಿ ಭಾರೀ ಮಳೆ

    ಕೊಪ್ಪ (Koppa) ತಾಲೂಕಿನ ಜಯಪುರ-ಮೇಗುಂದಾ-ಬಸರೀಕಟ್ಟೆ ಭಾಗದಲ್ಲಿ ಭಾರೀ ಮಳೆಯಾಗಿದೆ. ಬಸರೀಕಟ್ಟೆ ಸಮೀಪ ರಸ್ತೆ ಮೇಲೆ ತೋಟದ ಕೆಸರು ಮಿಶ್ರಿತ ನೀರು ಹರಿದ ಪರಿಣಾಮ ಪ್ರವಾಸಿಗರ ಜೊತೆ ಸ್ಥಳಿಯರು ಪರದಾಡುವಂತಾಗಿದೆ. ಧಾರಾಕಾರ ಮಳೆಯಿಂದ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ-ಕಾಫಿ-ಮೆಣಸಿಗೆ ಕೊಳೆ ರೋಗದ ಭೀತಿ ಆವರಿಸಿದೆ. ಇದನ್ನೂ ಓದಿ: 12 ಕೋಟಿ ರೂ. ಆಸ್ತಿ, ಎರಡು ಎಫ್‌ಐಆರ್‌ – ಪ್ರಿಯಾಂಕಾ ಗಾಂಧಿ ಬಳಿ ಚಿನ್ನ, ಭೂಮಿ ಎಷ್ಟಿದೆ?

  • ಇಂದು ಸೇರಿ ಇನ್ನೂ 4 ದಿನ ಬೆಂಗಳೂರಿನಲ್ಲಿ ಭಾರೀ ಮಳೆ

    ಇಂದು ಸೇರಿ ಇನ್ನೂ 4 ದಿನ ಬೆಂಗಳೂರಿನಲ್ಲಿ ಭಾರೀ ಮಳೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಈಗಾಗಲೇ ಮಳೆಯಿಂದ ಕಂಗಾಲಾಗಿದ್ದಾರೆ. ಈ ಬೆನ್ನಲ್ಲೇ ಇಂದು (ಗುರುವಾರ) ಸೇರಿ ಇನ್ನೂ ನಾಲ್ಕು 4 ದಿನ ಬೆಂಗಳೂರಿನಲ್ಲಿ (Bengaluru) ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ.

    ಇಂದು ಬೆಳಗ್ಗೆಯೇ ಸತತ 3 ಗಂಟೆಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಇದನ್ನೂ ಓದಿ: 12 ಕೋಟಿ ರೂ. ಆಸ್ತಿ, ಎರಡು ಎಫ್‌ಐಆರ್‌ – ಪ್ರಿಯಾಂಕಾ ಗಾಂಧಿ ಬಳಿ ಚಿನ್ನ, ಭೂಮಿ ಎಷ್ಟಿದೆ?

    ದಕ್ಷಿಣ ಒಳನಾಡಿನ ಹಾಸನ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಇದನ್ನೂ ಓದಿ: ಬಾಬುಸಾಬ್ ಪಾಳ್ಯ ಕಟ್ಟಡ ದುರಂತಕ್ಕೆ ಟ್ವಿಸ್ಟ್ – ಹಳೇ ಕಟ್ಟಡದಲ್ಲಿ ಹೊಸ ಬಿಲ್ಡಿಂಗ್ ನಿರ್ಮಾಣ