Tag: weather

  • ಚಿತ್ರದುರ್ಗದಲ್ಲಿ ಮೊದಲ ವರ್ಷಧಾರೆ – ಜನರಲ್ಲಿ ಮಂದಹಾಸ

    ಚಿತ್ರದುರ್ಗದಲ್ಲಿ ಮೊದಲ ವರ್ಷಧಾರೆ – ಜನರಲ್ಲಿ ಮಂದಹಾಸ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ವರ್ಷದ ಮೊದಲ ಮಳೆ ಸುರಿದಿದೆ. ಯುಗಾದಿ ಹಬ್ಬವಾಗಿ ಮೂರು ದಿನಗಳ ನಂತರ ಮೋಡ ಮುಸುಕಿದ ವಾತಾವರಣವಿದ್ದ ಚಿತ್ರದುರ್ಗ ನಗರದಲ್ಲಿ ಉತ್ತಮ ಮಳೆಯಾಗಿದೆ.

    ನಗರದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶುರುವಾದ ಮಳೆ (Rain) ಮೂರು ಗಂಟೆವರೆಗೂ ಹದವಾಗಿ ಸುರಿಯಿತು. ಮಳೆಯ ನಿರೀಕ್ಷೆ ಇಲ್ಲದೆ ರಸ್ತೆಯಲ್ಲಿ ಕಾರ್ಯನಿಮಿತ್ತ ಓಡಾಡುತ್ತಿದ್ದವರು ಮಳೆ ಆರಂಭವಾಗುತ್ತಿದ್ದಂತೆ ಪರದಾಡಿದರು. ವಾಹನ ಸವಾರರು ಕೂಡಾ ಆಕಸ್ಮಿಕ ಮಳೆಗೆ ಸಿಲುಕಿದರು. ಇದನ್ನೂ ಓದಿ: ನೀರಾವರಿ ಯೋಜನೆಗಳಿಗೆ ಅನುಮತಿ ನೀಡಲು ಸಿಎಂ ಮನವಿ

    ಬುಧವಾರ ಕೂಡ ಮಳೆ ಮೋಡ ಕವಿದ ವಾತಾವರಣವಿತ್ತು. ರಾತ್ರಿ ಒಂದೆರಡು ನಿಮಿಷ ಕೆಲವೆಡೆ ಮಳೆ ಸುರಿದಿತ್ತು. ಆದರೆ, ಇಂದು ಸುರಿದ ಮಳೆಯಿಂದ ಬೇಸಿಗೆ ಬಿಸಿಲಿಗೆ ಕಾದು ಕಾವಲಿಯಾಗಿದ್ದ ಭೂಮಿ ತಂಪಾಗಿದೆ. ಮರ, ಗಿಡಗಳು ತೊಳೆದು ನಿಲ್ಲಿಸದಂತೆ ಭಾಸವಾದವು. ಇದನ್ನೂ ಓದಿ: ರಾಹುಲ್ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಮಂಥನ – ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ

    ಇನ್ನು ಬೇಸಿಗೆ ಆರಂಭದಲ್ಲೇ ತಾಪಮಾನದ ಹೊಡೆತಕ್ಕೆ ಸುಸ್ತಾಗಿದ್ದ ಜನರಿಗೆ ಇಂದು ಸುರಿದ ಮಳೆ ಸಂತಸ ತಂದಿದೆ. ಮಳೆಯಿಂದ ವಾತಾವರಣ ತಂಪಾಗಿದ್ದು, ಜನರಲ್ಲಿ ಮಂದಹಾಸ ಮೂಡಿಸಿದೆ. ಇದನ್ನೂ ಓದಿ: 25 ಸಾವಿರ ಶಿಕ್ಷಕರನ್ನು ವಜಾಗೊಳಿಸಿದ ಸುಪ್ರೀಂ – ದೀದಿ ಸರ್ಕಾರಕ್ಕೆ ಮುಖಭಂಗ

  • ಹವಾಮಾನ ವರದಿ 03-04-2025

    ಹವಾಮಾನ ವರದಿ 03-04-2025

    ಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಪರಿಣಾಮದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಇಂದು ಮತ್ತು ನಾಳೆ ಸಹ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಮಧ್ಯಮ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

    ಹಾಸನ, ಮೈಸೂರು, ಚಿತ್ರದುರ್ಗ, ತುಮಕೂರು ಮತ್ತು ಕೊಡಗು ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳ ಹಲವೆಡೆ ಮಳೆಯಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-22
    ಮಂಗಳೂರು: 30-25
    ಶಿವಮೊಗ್ಗ: 31-21
    ಬೆಳಗಾವಿ: 31-21
    ಮೈಸೂರು: 30-22

    ಮಂಡ್ಯ: 30-12
    ಮಡಿಕೇರಿ: 28-19
    ರಾಮನಗರ: 29-22
    ಹಾಸನ: 27-21
    ಚಾಮರಾಜನಗರ: 30-22
    ಚಿಕ್ಕಬಳ್ಳಾಪುರ: 27-22

     

     

    ಕೋಲಾರ: 28-22
    ತುಮಕೂರು: 28-22
    ಉಡುಪಿ: 30-25
    ಕಾರವಾರ: 29-19
    ಚಿಕ್ಕಮಗಳೂರು: 26-19
    ದಾವಣಗೆರೆ: 32-23

    ಹುಬ್ಬಳ್ಳಿ: 31-22
    ಚಿತ್ರದುರ್ಗ: 30-23
    ಹಾವೇರಿ: 31-22
    ಬಳ್ಳಾರಿ: 34-24
    ಗದಗ: 31-23
    ಕೊಪ್ಪಳ: 32-24

    ರಾಯಚೂರು: 34-25
    ಯಾದಗಿರಿ: 33-24
    ವಿಜಯಪುರ: 33-23
    ಬೀದರ್: 33-24
    ಕಲಬುರಗಿ: 35-24
    ಬಾಗಲಕೋಟೆ: 32-24

     

  • ರಾಜ್ಯದ ಹವಾಮಾನ ವರದಿ 02-04-2025

    ರಾಜ್ಯದ ಹವಾಮಾನ ವರದಿ 02-04-2025

    ಡಿಶಾ ಕರಾವಳಿಯಲ್ಲಿ ಸೈಕ್ಲೋನ್ ಪರಿಣಾಮದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವೆಡೆ ಇಂದು ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿಗೆ ಮಳೆ ಮುನ್ಸೂಚನೆ ನೀಡಲಾಗಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ವಿಜಯಪುರ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 31-26
    ಶಿವಮೊಗ್ಗ: 36-23
    ಬೆಳಗಾವಿ: 37-23
    ಮೈಸೂರು: 37-23

    ಮಂಡ್ಯ: 36-22
    ಮಡಿಕೇರಿ: 33-19
    ರಾಮನಗರ: 36-22
    ಹಾಸನ: 34-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 34-21

    ಕೋಲಾರ: 34-21
    ತುಮಕೂರು: 35-22
    ಉಡುಪಿ: 32-26
    ಕಾರವಾರ: 33-26
    ಚಿಕ್ಕಮಗಳೂರು: 32-21
    ದಾವಣಗೆರೆ: 37-24

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-24
    ಹಾವೇರಿ: 38-23
    ಬಳ್ಳಾರಿ: 40-26
    ಗದಗ: 37-24
    ಕೊಪ್ಪಳ: 37-26

    ರಾಯಚೂರು: 39-28
    ಯಾದಗಿರಿ: 39-26
    ವಿಜಯಪುರ: 38-26
    ಬೀದರ್: 38-26
    ಕಲಬುರಗಿ: 38-27
    ಬಾಗಲಕೋಟೆ: 38-26

  • ರಾಜ್ಯದ ಹವಾಮಾನ ವರದಿ 01-04-2025

    ರಾಜ್ಯದ ಹವಾಮಾನ ವರದಿ 01-04-2025

    ರಾಜ್ಯದ ಹಲವೆಡೆ ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತವರಣ ಇದೆ. ವಾಯುಭಾರ ಕುಸಿತದ ಪರಿಣಾಮ ಇಂದು ಮತ್ತು ನಾಳೆ ರಾಜ್ಯದ್ಯಾಂತ ಗುಡುಗು ಸಹಿತ ಹಗುರ ಮಳೆ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ಮಲೆನಾಡು ಭಾಗವಾದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನದ ಕೆಲವೆಡೆ ಹಗುರ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 31-26
    ಶಿವಮೊಗ್ಗ: 36-23
    ಬೆಳಗಾವಿ: 37-23
    ಮೈಸೂರು: 37-23

    ಮಂಡ್ಯ: 36-22
    ಮಡಿಕೇರಿ: 33-19
    ರಾಮನಗರ: 36-22
    ಹಾಸನ: 34-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 34-21

    ಕೋಲಾರ: 34-21
    ತುಮಕೂರು: 35-22
    ಉಡುಪಿ: 32-26
    ಕಾರವಾರ: 33-26
    ಚಿಕ್ಕಮಗಳೂರು: 32-21
    ದಾವಣಗೆರೆ: 37-24

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-24
    ಹಾವೇರಿ: 38-23
    ಬಳ್ಳಾರಿ: 40-26
    ಗದಗ: 37-24
    ಕೊಪ್ಪಳ: 37-26

    ರಾಯಚೂರು: 39-28
    ಯಾದಗಿರಿ: 39-26
    ವಿಜಯಪುರ: 38-26
    ಬೀದರ್: 38-26
    ಕಲಬುರಗಿ: 38-27
    ಬಾಗಲಕೋಟೆ: 38-26

  • ರಾಜ್ಯದ ಹವಾಮಾನ ವರದಿ 31-03-2025

    ರಾಜ್ಯದ ಹವಾಮಾನ ವರದಿ 31-03-2025

    ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ಅಬ್ಬರ ಕಡಿಮೆಯಾಗಿದೆ. ಇಂದು ಸಹ ರಾಜ್ಯದ ಹಲವೆಡೆ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಇನ್ನೂ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮಲೆನಾಡು ಭಾಗವಾದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನದ ಕೆಲವೆಡೆ ಹಗುರ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 31-26
    ಶಿವಮೊಗ್ಗ: 36-23
    ಬೆಳಗಾವಿ: 37-23
    ಮೈಸೂರು: 37-23

    ಮಂಡ್ಯ: 36-22
    ಮಡಿಕೇರಿ: 33-19
    ರಾಮನಗರ: 36-22
    ಹಾಸನ: 34-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 34-21

    ಕೋಲಾರ: 34-21
    ತುಮಕೂರು: 35-22
    ಉಡುಪಿ: 32-26
    ಕಾರವಾರ: 33-26
    ಚಿಕ್ಕಮಗಳೂರು: 32-21
    ದಾವಣಗೆರೆ: 37-24

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-24
    ಹಾವೇರಿ: 38-23
    ಬಳ್ಳಾರಿ: 40-26
    ಗದಗ: 37-24
    ಕೊಪ್ಪಳ: 37-26

    ರಾಯಚೂರು: 39-28
    ಯಾದಗಿರಿ: 39-26
    ವಿಜಯಪುರ: 38-26
    ಬೀದರ್: 38-26
    ಕಲಬುರಗಿ: 38-27
    ಬಾಗಲಕೋಟೆ: 38-26

  • ರಾಜ್ಯದ ಹವಾಮಾನ ವರದಿ 30-03-2025

    ರಾಜ್ಯದ ಹವಾಮಾನ ವರದಿ 30-03-2025

    ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲಿನ ಅಬ್ಬರ ಕಡಿಮೆಯಾಗಿದೆ. ಇಂದು ಸಹ ರಾಜ್ಯದ ಹಲವೆಡೆ ಮುಂಜಾನೆ ಹಾಗೂ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನದ ವೇಳೆಗೆ ಬಿಸಿಲಿನ ವಾತಾವರಣ ಇರಲಿದೆ. ಇನ್ನೂ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಮಲೆನಾಡು ಭಾಗವಾದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನದ ಕೆಲವೆಡೆ ಹಗುರ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 31-26
    ಶಿವಮೊಗ್ಗ: 36-23
    ಬೆಳಗಾವಿ: 37-23
    ಮೈಸೂರು: 37-23

    ಮಂಡ್ಯ: 36-22
    ಮಡಿಕೇರಿ: 33-19
    ರಾಮನಗರ: 36-22
    ಹಾಸನ: 34-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 34-21

    ಕೋಲಾರ: 34-21
    ತುಮಕೂರು: 35-22
    ಉಡುಪಿ: 32-26
    ಕಾರವಾರ: 33-26
    ಚಿಕ್ಕಮಗಳೂರು: 32-21
    ದಾವಣಗೆರೆ: 37-24

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-24
    ಹಾವೇರಿ: 38-23
    ಬಳ್ಳಾರಿ: 40-26
    ಗದಗ: 37-24
    ಕೊಪ್ಪಳ: 37-26

    ರಾಯಚೂರು: 39-28
    ಯಾದಗಿರಿ: 39-26
    ವಿಜಯಪುರ: 38-26
    ಬೀದರ್: 38-26
    ಕಲಬುರಗಿ: 38-27
    ಬಾಗಲಕೋಟೆ: 38-26

     

  • ರಾಜ್ಯ ಹವಾಮಾನ ವರದಿ 29-03-2025

    ರಾಜ್ಯ ಹವಾಮಾನ ವರದಿ 29-03-2025

    ಸಾಮಾನ್ಯವಾಗಿ ಬೆಳಗಿನ ಜಾವ ವಾತಾವರಣ ತಂಪಾಗಿರಲಿದ್ದು, ಮಧ್ಯಾಹ್ನದ ವೇಳೆದ ಬಿಸಿಲು ಅಬ್ಬರಿಸಲಿದೆ. ಇನ್ನೂ ಸಂಜೆ ಹೊತ್ತಿನಲ್ಲಿ ತಂಪು ಗಾಳಿ ಬೀಸಲಿದೆ. ಇಂದು ಮಳೆಯಾಗುವ ನಿರೀಕ್ಷೆಯಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 31-26
    ಶಿವಮೊಗ್ಗ: 36-23
    ಬೆಳಗಾವಿ: 37-23
    ಮೈಸೂರು: 37-23

    ಮಂಡ್ಯ: 36-22
    ಮಡಿಕೇರಿ: 33-19
    ರಾಮನಗರ: 36-22
    ಹಾಸನ: 34-21
    ಚಾಮರಾಜನಗರ: 37-22
    ಚಿಕ್ಕಬಳ್ಳಾಪುರ: 34-21

    ಕೋಲಾರ: 34-21
    ತುಮಕೂರು: 35-22
    ಉಡುಪಿ: 32-26
    ಕಾರವಾರ: 33-26
    ಚಿಕ್ಕಮಗಳೂರು: 32-21
    ದಾವಣಗೆರೆ: 37-24

    ಹುಬ್ಬಳ್ಳಿ: 38-23
    ಚಿತ್ರದುರ್ಗ: 37-24
    ಹಾವೇರಿ: 38-23
    ಬಳ್ಳಾರಿ: 40-26
    ಗದಗ: 37-24
    ಕೊಪ್ಪಳ: 37-26

    ರಾಯಚೂರು: 39-28
    ಯಾದಗಿರಿ: 39-26
    ವಿಜಯಪುರ: 38-26
    ಬೀದರ್: 38-26
    ಕಲಬುರಗಿ: 38-27
    ಬಾಗಲಕೋಟೆ: 38-26

  • ಬಾಗಲಕೋಟೆ | ಹಲವೆಡೆ ಬಿರುಗಾಳಿ ಸಹಿತ ಮಳೆ, ನೆಲಕ್ಕುರುಳಿದ ಬೆಳೆ

    ಬಾಗಲಕೋಟೆ | ಹಲವೆಡೆ ಬಿರುಗಾಳಿ ಸಹಿತ ಮಳೆ, ನೆಲಕ್ಕುರುಳಿದ ಬೆಳೆ

    ಬಾಗಲಕೋಟೆ: ಜಿಲ್ಲೆಯ ಜಮಖಂಡಿ (JamaKhandi) ತಾಲೂಕಿನ ಕೆಲವು ಕಡೆಗಳಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆಯಿಂದ ಕಟಾವಿಗೆ ಬಂದಿದ್ದ ಬೆಳೆಗಳು ನೆಲಕ್ಕುರುಳಿದೆ.

    ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಕೇಶವ್ ಜಾಧವ್, ಅನೀಲ್ ಬಬಲೇಶ್ವರ, ಉಮೇಶ್ ಜಾಧವ್, ಶಿವಾಜಿ ಜಾಧವ್ ಎಂಬುವವರ ಒಣದ್ರಾಕ್ಷಿ ಘಟಕಗಳಿಗೆ ಗಾಳಿ ಸಹಿತ ಮಳೆಯಿಂದ ಹಾನಿ ಆಗಿದೆ. ಹಾಗೆಯೇ ತೊದಲಬಾಗಿ ಗ್ರಾಮದ ಅಣ್ಣಪ್ಪ ಶಿರಹಟ್ಟಿ ಎನ್ನುವವರ ಜಮೀನಿನಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ ಗಾಳಿ ಹೊಡೆತಕ್ಕೆ ಸಿಕ್ಕು ನೆಲಕ್ಕಪ್ಪಳಿಸಿದೆ. ಇದನ್ನೂ ಓದಿ: ನಾಗ್ಪುರ ಕೋಮು ಗಲಭೆ – ಮಾಸ್ಟರ್‌ಮೈಂಡ್‌ ಮನೆ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗ!

    ಜಿಲ್ಲೆಯಲ್ಲಿ ಒಂದು ಕಡೆಗೆ ಬೇಸಿಗೆ ಬಿರುಬಿಸಿಲು ಜನಸಾಮಾನ್ಯರನ್ನು ಹೈರಾಣಾಗಿಸುತ್ತಿದೆ. ಮತ್ತೊಂದೆಡೆ ತಾಪಮಾನ ಹೆಚ್ಚಾಗಿ ಅಕಾಲಿಕ ಮಳೆ ಆಗುತ್ತಿದ್ದು, ಇದೀಗ ಮಳೆಯ ಜೊತೆ ಗಾಳಿ ಬೀಸುವುದು ಬೆಳೆಗಳಿಗೆ ಕಂಟಕವಾಗುತ್ತಿದೆ. ಗಾಳಿ ಹಾಗೂ ಅಕಾಲಿಕ ಮಳೆಯು ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಹೇಳಿಕೆ ಡಿಕೆಶಿ ಬಂಡವಾಳ ಬಯಲು ಮಾಡಿದೆ: ಬಿವೈವಿ

  • ರಾಜ್ಯದ ಹವಾಮಾನ ವರದಿ 24-03-2025

    ರಾಜ್ಯದ ಹವಾಮಾನ ವರದಿ 24-03-2025

    ರಾಜ್ಯದಲ್ಲಿ ಪೂರ್ವ ಮುಂಗಾರು ಆಕ್ಟೀವ್ ಆಗಿದ್ದು, ಮುಂದಿನ ನಾಲ್ಕೈದು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೆಲ ಕಡೆ ಚದುರಿದ ಮಳೆಯಾಗುವ ಸಂಭವಿದೆ ಎಂದು ಹವಾಮಾನ ವರದಿ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 32-26
    ಶಿವಮೊಗ್ಗ: 36-22
    ಬೆಳಗಾವಿ: 35-23
    ಮೈಸೂರು: 32-22

    ಮಂಡ್ಯ: 32-22
    ಮಡಿಕೇರಿ: 32-20
    ರಾಮನಗರ: 33-22
    ಹಾಸನ: 32-21
    ಚಾಮರಾಜನಗರ: 32-22
    ಚಿಕ್ಕಬಳ್ಳಾಪುರ: 31-20

    ಕೋಲಾರ: 31-21
    ತುಮಕೂರು: 33-21
    ಉಡುಪಿ: 32-26
    ಕಾರವಾರ: 33-26
    ಚಿಕ್ಕಮಗಳೂರು: 30-20
    ದಾವಣಗೆರೆ: 36-24

    ಹುಬ್ಬಳ್ಳಿ: 37-23
    ಚಿತ್ರದುರ್ಗ: 34-24
    ಹಾವೇರಿ: 37-23
    ಬಳ್ಳಾರಿ: 37-26
    ಗದಗ: 35-24
    ಕೊಪ್ಪಳ: 36-25

    ರಾಯಚೂರು: 36-27
    ಯಾದಗಿರಿ: 36-26
    ವಿಜಯಪುರ: 37-26
    ಬೀದರ್: 34-24
    ಕಲಬುರಗಿ: 36-26
    ಬಾಗಲಕೋಟೆ: 37-26

  • ಚಿಕ್ಕಮಗಳೂರಲ್ಲಿ ಭಾರೀ ಮಳೆ – ಸಿಡಿಲಿಗೆ ವೃದ್ಧೆ ಬಲಿ

    ಚಿಕ್ಕಮಗಳೂರಲ್ಲಿ ಭಾರೀ ಮಳೆ – ಸಿಡಿಲಿಗೆ ವೃದ್ಧೆ ಬಲಿ

    ಚಿಕ್ಕಮಗಳೂರು: ಕಾಫಿನಾಡಲ್ಲಿ ಮಹಾಮಳೆಗೆ (Rain) ಮೊದಲ ಬಲಿಯಾಗಿದೆ. ತಾಲೂಕಿನ (Chikkamagaluru) ಕುರುಬರಹಳ್ಳಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆಯೊಬ್ಬರು ಸಿಡಿಲು (Lightning) ಬಡಿದು ಸಾವನ್ನಪ್ಪಿದ್ದಾರೆ.

    ಮೃತ ವೃದ್ಧೆಯನ್ನು ನಾಗಮ್ಮ (65) ಎಂದು ಗುರುತಿಸಲಾಗಿದೆ. ಬೇಲೂರು ತಾಲೂಕಿನ ಹೆಬ್ಬಾಳ ತಿಮ್ಮನಹಳ್ಳಿಯ ನಾಗಮ್ಮ, ತಮ್ಮ ಮಗಳ ಮನೆಗೆ ಶುಂಠಿ ಬಿತ್ತನೆಗೆ ಬಂದಿದ್ದರು. ಈ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇಂದು (ಮಾ.23) ಬೆಳಗ್ಗೆ ಅತ್ತೆ-ಮಾವನನ್ನು ಅಳಿಯನೇ ಹೋಗಿ ಕರೆದುಕೊಂಡು ಬಂದಿದ್ದರು. ಇನ್ನೂ ಹೊಲದಲ್ಲಿ ಒಟ್ಟು 12 ಜನ ಕೆಲಸ ಮಾಡುತ್ತಿದ್ದರು. ಉಳಿದವರು ಅಪಾಯದಿಂದ ಪಾರಾಗಿದ್ದಾರೆ.

    ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.