Tag: weather

  • ರಾಜ್ಯದ ಹವಾಮಾನ ವರದಿ 24-04-2025

    ರಾಜ್ಯದ ಹವಾಮಾನ ವರದಿ 24-04-2025

    ಇಂದು ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 35-23
    ಮಂಗಳೂರು: 32-26
    ಶಿವಮೊಗ್ಗ: 34-23
    ಬೆಳಗಾವಿ: 34-22
    ಮೈಸೂರು: 36-23

    ಮಂಡ್ಯ: 36-23
    ಮಡಿಕೇರಿ: 31-21
    ರಾಮನಗರ: 35-23
    ಹಾಸನ: 32-21
    ಚಾಮರಾಜನಗರ: 36-23
    ಚಿಕ್ಕಬಳ್ಳಾಪುರ: 34-22

    ಕೋಲಾರ: 34-23
    ತುಮಕೂರು: 34-22
    ಉಡುಪಿ: 32-27
    ಕಾರವಾರ: 34-28
    ಚಿಕ್ಕಮಗಳೂರು: 31-20
    ದಾವಣಗೆರೆ: 34-24

    ಹುಬ್ಬಳ್ಳಿ: 37-24
    ಚಿತ್ರದುರ್ಗ: 34-23
    ಹಾವೇರಿ: 36-24
    ಬಳ್ಳಾರಿ: 39-27
    ಗದಗ: 36-24
    ಕೊಪ್ಪಳ: 38-26

    ರಾಯಚೂರು: 40-29
    ಯಾದಗಿರಿ: 39-28
    ವಿಜಯಪುರ: 39-27
    ಬೀದರ್: 39-28
    ಕಲಬುರಗಿ: 40-29
    ಬಾಗಲಕೋಟೆ: 39-26

  • ಕರುನಾಡಲ್ಲಿ ಮುಂದಿನ ಒಂದು ವಾರ ಮಳೆ ಮುನ್ಸೂಚನೆ

    ಕರುನಾಡಲ್ಲಿ ಮುಂದಿನ ಒಂದು ವಾರ ಮಳೆ ಮುನ್ಸೂಚನೆ

    – ಕೆಲವೆಡೆ ಗುಡುಗು, ಸಿಡಿಲಬ್ಬರದ ಮಳೆ ಸಾಧ್ಯತೆ

    ಬೆಂಗಳೂರು: ರಾಜ್ಯದಲ್ಲಿ ಬಿಸಿಲಬ್ಬರ ಹೆಚ್ಚುತ್ತಿರುವ ಹೊತ್ತಲ್ಲಿ ಹಲವೆಡೆ ಮಳೆರಾಯ ತಂಪೆರೆಯುತ್ತಿದ್ದಾನೆ. ಕೆಲವೆಡೆ ವರುಣ ಅಬ್ಬರಿಸಿ ಬೊಬ್ಬರಿಯುತ್ತಿದ್ದರೇ ಇನ್ನೂ ಹಲವೆಡೆ ಸಾಧಾರಣ ಮಳೆಯಾಗುತ್ತಿದೆ. ಇದರ ನಡುವೆಯೇ ಹವಾಮಾನ ಇಲಾಖೆ ಮುಂದಿನ ಒಂದು ವಾರ ಗುಡುಗು ಸಹಿತ ಹಾಗೂ ಸಾಧಾರಣ ಮಳೆಯಾಗುವ (Rain) ಮುನ್ನೆಚ್ಚರಿಕೆ ನೀಡಿದೆ.

    ವಾಯುಭಾರ ಕುಸಿತದ ಹಿನ್ನೆಲೆ ರಾಜ್ಯದಲ್ಲಿ ಏಳು ದಿನಗಳ ಕಾಲ ಮಳೆಯಾಗಲಿದೆ ಎಂಬ ಮುನ್ಸೂಚನೆಯನ್ನು ಹವಮಾನ ಕೇಂದ್ರ/ರಾಜ್ಯ ಪವನಶಾಸ್ತ್ರ ಕೇಂದ್ರ ನೀಡಿದೆ. ಕರ್ನಾಟಕದ (Karnataka) ಬಹುತೇಕ ಜಿಲ್ಲೆಗಳಲ್ಲಿ ಬಿರುಗಾಳಿ, ಸಿಡಿಲು-ಗುಡುಗು ಸಹಿತ ಭಾರೀ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸುತ್ತಿದ್ದು, ಈ ಆರ್ಭಟ ಮುಂದಿನ ಒಂದು ವಾರವೂ ಮುಂದುವರೆಯಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ನಿವೃತ್ತ ಡಿಜಿಪಿ ಬರ್ಬರ ಹತ್ಯೆ – ತಂಗಿಯರಿಗೆ ಆಸ್ತಿ ಕೊಟ್ಟಿದ್ದಕ್ಕೆ ನಡೀತಾ ಕೊಲೆ?

    ಏ.21ರಿಂದ ಏ.27ರವರೆಗೆ ಮಳೆ ಬರುವ ಮುನ್ಸೂಚನೆ ನೀಡಲಾಗಿದೆ. ಸೋಮವಾರ, ಮಂಗಳವಾರ ಹಾಗೂ ಬುಧವಾರ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದ ಒಂದೆರಡು ಸ್ಥಳಗಳಲ್ಲಿ ಬಲವಾದ ಮೇಲ್ಮೈ ಸುಳಿಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಏ.24 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆಯಿದೆ. ಇದನ್ನೂ ಓದಿ: ಕೋಟಿ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ ಮಂಗಳಮುಖಿಯ ಬರ್ಬರ ಹತ್ಯೆ – ಪತಿ, ಮನೆಗೆಲಸದಾಕೆ ಪರಾರಿ

    ಏ.25 ರಂದು ಉಡುಪಿ, ದಕ್ಷಿಣ ಕನ್ನಡದ ಎರಡು ಸ್ಥಳಗಳಲ್ಲಿ, ಉತ್ತರ ಕರ್ನಾಟಕದ ಒಳನಾಡಿನ ಎರಡು ಸ್ಥಳಗಳಲ್ಲಿ, ದಕ್ಷಿಣ ಕನ್ನಡದ ಕೆಲವು ಸ್ಥಳಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಏ.26ರಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಎರಡು ಸ್ಥಳಗಳಲ್ಲಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ನಿವೃತ್ತ IPS ಅಧಿಕಾರಿಗೆ 10 ಬಾರಿ ಚಾಕುವಿನಿಂದ ಇರಿದು ಕೊಂದ ಪತ್ನಿ; 15 ನಿಮಿಷ ನರಳಿ ಪ್ರಾಣಬಿಟ್ಟ ಓಂ ಪ್ರಕಾಶ್‌

  • ರಾಜ್ಯದ ಹವಾಮಾನ ವರದಿ 21-04-2025

    ರಾಜ್ಯದ ಹವಾಮಾನ ವರದಿ 21-04-2025

    ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೂ 4 ದಿನ ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.

    ಪ್ರತಿ ಗಂಟೆಗೆ 30-50 ಕಿಮೀ ವೇಗದಲ್ಲಿ ಗಾಳಿ ಬಿಸಲಿದೆ. ಮುಂದಿನ 2 ದಿನ ಕರಾವಳಿ ಭಾಗದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-23
    ಮಂಗಳೂರು: 32-26
    ಶಿವಮೊಗ್ಗ: 34-24
    ಬೆಳಗಾವಿ: 36-23
    ಮೈಸೂರು: 35-23

    ಮಂಡ್ಯ: 34-23
    ಮಡಿಕೇರಿ: 32-22
    ರಾಮನಗರ: 34-23
    ಹಾಸನ: 32-21
    ಚಾಮರಾಜನಗರ: 35-22
    ಚಿಕ್ಕಬಳ್ಳಾಪುರ: 32-22

    ಕೋಲಾರ: 33-22
    ತುಮಕೂರು: 33-24
    ಉಡುಪಿ: 32-27
    ಕಾರವಾರ: 34-28
    ಚಿಕ್ಕಮಗಳೂರು: 30-21
    ದಾವಣಗೆರೆ: 34-24

    ಹುಬ್ಬಳ್ಳಿ: 37-24
    ಚಿತ್ರದುರ್ಗ: 34-24
    ಹಾವೇರಿ: 36-24
    ಬಳ್ಳಾರಿ: 38-27
    ಗದಗ: 36-26
    ಕೊಪ್ಪಳ: 37-27

    ರಾಯಚೂರು: 39-29
    ಯಾದಗಿರಿ: 39-29
    ವಿಜಯಪುರ: 40-28
    ಬೀದರ್: 39-29
    ಕಲಬುರಗಿ: 41-30
    ಬಾಗಲಕೋಟೆ: 39-28

  • ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

    ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

    ಬೆಂಗಳೂರು: ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.ಇದನ್ನೂ ಓದಿ: ಪ್ರಣಿತಾ ಸುಭಾಷ್ ಮಗನ ಅದ್ಧೂರಿ ನಾಮಕರಣ- ರಮ್ಯಾ ಭಾಗಿ

    ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

    ಈಗಾಗಲೇ ಕೋರಮಂಗಲ, ಆಡುಗೋಡಿ, ಎಲೆಕ್ಟ್ರಾನ್ ಸಿಟಿ ಸುತ್ತಮುತ್ತ ಮಳೆಯಾಗುತ್ತಿದ್ದು, ಬಿಸಿಲ ಬೇಗೆಗೆ ವರುಣ ತಂಪೆರೆದಿದ್ದಾನೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುತ್ತಿದ್ದಾರೆ.ಇದನ್ನೂ ಓದಿ: `ಕೈ’ ಸರ್ಕಾರ ಬಂದ್ಮೇಲೆ ಜನಿವಾರ, ಶಿವದಾರ, ಉಡುದಾರಕ್ಕೂ ಕತ್ತರಿ ಬೀಳ್ತಿದೆ, ಹಿಜಬ್‌ಗೆ ಬಹುಪರಾಕ್ ನಡೀತಿದೆ: ಆರ್.ಅಶೋಕ್

  • ರಾಜ್ಯದ ಹವಾಮಾನ ವರದಿ 20-04-2025

    ರಾಜ್ಯದ ಹವಾಮಾನ ವರದಿ 20-04-2025

    ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೂ 4 ದಿನ ಗುಡುಗು, ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.

    ಪ್ರತಿ ಗಂಟೆಗೆ 30-50 ಕಿಮೀ ವೇಗದಲ್ಲಿ ಗಾಳಿ ಬಿಸಲಿದೆ. ಮುಂದಿನ 2 ದಿನ ಕರಾವಳಿ ಭಾಗದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬೀದರ್, ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-23
    ಮಂಗಳೂರು: 32-26
    ಶಿವಮೊಗ್ಗ: 33-22
    ಬೆಳಗಾವಿ: 36-21
    ಮೈಸೂರು: 35-23

    ಮಂಡ್ಯ: 34-22
    ಮಡಿಕೇರಿ: 29-20
    ರಾಮನಗರ: 33-23
    ಹಾಸನ: 31-21
    ಚಾಮರಾಜನಗರ: 34-22
    ಚಿಕ್ಕಬಳ್ಳಾಪುರ: 32-22

    ಕೋಲಾರ: 33-23
    ತುಮಕೂರು: 32-22
    ಉಡುಪಿ: 32-26
    ಕಾರವಾರ: 34-28
    ಚಿಕ್ಕಮಗಳೂರು: 27-19
    ದಾವಣಗೆರೆ: 32-24

    ಹುಬ್ಬಳ್ಳಿ: 37-23
    ಚಿತ್ರದುರ್ಗ: 33-23
    ಹಾವೇರಿ: 34-24
    ಬಳ್ಳಾರಿ: 37-26
    ಗದಗ: 36-24
    ಕೊಪ್ಪಳ: 36-26

    ರಾಯಚೂರು: 39-28
    ಯಾದಗಿರಿ: 39-28
    ವಿಜಯಪುರ: 38-27
    ಬೀದರ್: 39-28
    ಕಲಬುರಗಿ: 39-28
    ಬಾಗಲಕೋಟೆ: 39-26

  • ಬೆಂಗಳೂರಿನಲ್ಲಿ ಮಳೆ – ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

    ಬೆಂಗಳೂರಿನಲ್ಲಿ ಮಳೆ – ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

    – ಏ.19ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಬುಧವಾರ ಸಂಜೆ ವರುಣನ (Rain) ಆಗಮನವಾಗಿದೆ. ಅರ್ಧ ಗಂಟೆ ಮಳೆ ಸುರಿದ ಪರಿಣಾಮ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದ್ದಾರೆ.

    ವೈಟ್ ಫೀಲ್ಡ್, ಜಯನಗರ, ಕೆಂಗೇರಿ ಸೇರಿದಂತೆ ಹಲವೆಡೆ ಮಳೆ ಸುರಿದಿದ್ದು, ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದೆ. ಮಲ್ಲೇಶ್ವರಂ, ಶಾಂತಿನಗರ, ರಾಜಾಜಿನಗರ, ಬನಶಂಕರಿ, ಜಯನಗರ ಮತ್ತು ಕೆಲವು ಭಾಗಗಳಲ್ಲಿ ಮಳೆಯಾಗಿದೆ. ವೈಟ್ ಫೀಲ್ಡ್, ವರ್ತೂರು ಭಾಗದಲ್ಲಿ ಜೋರು ಮಳೆಯಾಗಿದೆ. ಭಾರೀ ಮಳೆಯ ಪರಿಣಾಮ ವರ್ತೂರು ರಸ್ತೆ ಕೆರೆಯಂತಾಗಿದೆ. ಬೆಂಗಳೂರು ಸೇರಿದಂತೆ ಕೆಲವು ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ಜಾತಿ ಜಿದ್ದಾಜಿದ್ದಿ – ಸಿಎಂ ಮುಂದಿರುವ ಆಯ್ಕೆ ಏನು?

    ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ರಾಮನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಏ.19ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ನಮ್ಮ ಸರ್ಕಾರ ತೆಗೆಯಲು ಪ್ಲ್ಯಾನ್‌ ನಡೆದಿದೆ ಒಗ್ಗಟ್ಟಾಗಿ ಇರಿ: ಖರ್ಗೆ ಶಾಕಿಂಗ್ ಹೇಳಿಕೆ

  • Haveri | ಬಿರುಗಾಳಿ ಸಹಿತ ಮಳೆ – 20ಕ್ಕೂ ಅಧಿಕ ಮರಗಳು ಧರಾಶಾಹಿ, ಕಾರುಗಳು ಜಖಂ

    Haveri | ಬಿರುಗಾಳಿ ಸಹಿತ ಮಳೆ – 20ಕ್ಕೂ ಅಧಿಕ ಮರಗಳು ಧರಾಶಾಹಿ, ಕಾರುಗಳು ಜಖಂ

    ಹಾವೇರಿ: ಜಿಲ್ಲೆಯ ಹಲವೆಡೆ ಸಂಜೆ 1 ಗಂಟೆ ಕಾಲ ಧಾರಾಕಾರ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮರಗಳು ಧರೆಗುರುಳಿದ ಪರಿಣಾಮ 4 ಕಾರುಗಳು ಜಖಂ ಆಗಿವೆ.

    ಹಾವೇರಿ (Haveri) ನಗರದ ಮಾತ್ರವಲ್ಲದೇ ತಾಲೂಕಿನ ಹಲವೆಡೆ ವರುಣರಾಯ ಅಬ್ಬರಿಸಿದ್ದಾನೆ. ನಗರದಲ್ಲಿ 20ಕ್ಕೂ ಅಧಿಕ ಮರಗಳು ಧರೆಗೆ ಉರುಳಿವೆ. ಭಾರೀ ಗಾಳಿಗೆ ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ಮನೆಯ ಮೇಲ್ಛಾವಣಿಗೆ ಹಾಕಿದ್ದ ತಗಡುಗಳು ಹಾರಿ ಹೋಗಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ. ಇದನ್ನೂ ಓದಿ: ಜಾತಿಗಣತಿ ವಿರುದ್ಧ ಸಿಡಿದ ಒಕ್ಕಲಿಗರು- ವರದಿ ಜಾರಿಯಾದ್ರೆ ಸರ್ಕಾರ ಪತನದ ಎಚ್ಚರಿಕೆ

    ತಗಡುಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಕೆಲಕಾಲ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಆದರೆ ಗಾಳಿ ಮಳೆಯ ಅಬ್ಬರ ಆರಂಭ ಆಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದರು. ಇದನ್ನೂ ಓದಿ: ಚಿಲ್ಲರೆ ಹಣದುಬ್ಬರ| 2019ರ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆ

    ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮ ಮತ್ತು ನಗರಸಭೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆ – ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ

    ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆ – ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ

    ನವದೆಹಲಿ: ಈ ಬಾರಿಯ ಮುಂಗಾರು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು (Mansoon Rain) ತರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಕಾಲ ಸರಾಸರಿ 87 ಸೆಂ.ಮೀ. ಮಳೆಯ ದೀರ್ಘಕಾಲೀನ ಸರಾಸರಿಗಿಂತ 105% ಮಳೆಯಾಗುವ ಸಾಧ್ಯತೆಯಿದೆ, ಇದರಲ್ಲಿ ±5% ದೋಷಾಂಶವಿರಲಿದೆ ಎಂದು ಅಂದಾಜಿಸಿದೆ.

    ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್ 1ರ ಸುಮಾರಿಗೆ ಕೇರಳದ ಮೂಲಕ ತನ್ನ ಮುನ್ನಡೆಯನ್ನು ಪ್ರಾರಂಭಿಸಿ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಹಿಂದೆ ಸರಿಯುತ್ತದೆ. ಸರಾಸರಿಗಿಂತ ಹೆಚ್ಚಿನ ಮಳೆಯು ಕೃಷಿ ವಲಯಕ್ಕೆ ಅಗತ್ಯವಾದ ಉತ್ತೇಜನವನ್ನು ನೀಡಬಹುದು ಎಂದು ಭೂ ವಿಜ್ಞಾನ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಿಗೆ ಕೂಡಲೇ ಅಮಾನತುಗೊಳಿಸಿ: ಸುಪ್ರೀಂ

    ಈ ವರ್ಷದ ಮುನ್ಸೂಚನೆಯ ಪ್ರಕಾರ, ಕೆಲವು ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಹೆಚ್ಚಿನ ಭಾಗಗಳು ಅನುಕೂಲಕರ ಮಳೆಯಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ. ನಾಲ್ಕು ತಿಂಗಳ ಮಾನ್ಸೂನ್ ಋತುವಿನಲ್ಲಿ ಲಡಾಖ್, ಈಶಾನ್ಯ ಮತ್ತು ತಮಿಳುನಾಡಿನಲ್ಲಿ ಮಳೆ ಸಾಮಾನ್ಯಕ್ಕಿಂತ ಕಡಿಮೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: Gadag | ಡೆತ್‌ನೋಟ್ ಬರೆದಿಟ್ಟು ನವ ವಿವಾಹಿತೆ ಆತ್ಮಹತ್ಯೆ

    ಐಎಂಡಿ ಸಾಮಾನ್ಯ ಮಳೆಯನ್ನು 50 ವರ್ಷಗಳ ಸರಾಸರಿ 87 ಸೆಂ.ಮೀ (ಸುಮಾರು 35 ಇಂಚುಗಳು) 96% ರಿಂದ 104% ರವರೆಗೆ ವ್ಯಾಖ್ಯಾನಿಸುತ್ತದೆ. ಈ ವ್ಯಾಪ್ತಿಗಿಂತ ಹೆಚ್ಚಿನ ಪ್ರಮಾಣವನ್ನು ‘ಸಾಮಾನ್ಯಕ್ಕಿಂತ ಹೆಚ್ಚು’ ಎಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ವರದಿಯೇ ಹೊರಗೆ ಬಾರದೇ ಜಾತಿಗಣತಿ ವಿರೋಧ ಮಾಡೋದು ಸರಿಯಲ್ಲ: ಸಂತೋಷ್ ಲಾಡ್

    ಭಾರತೀಯ ಸಾಗರದ ಡೈಪೋಲ್ ಸಕಾರಾತ್ಮಕವಾಗಿರುವುದು ದಕ್ಷಿಣ ಭಾರತದ ರಾಜ್ಯಗಳಿಗೆ ಹೆಚ್ಚಿನ ಮಳೆಯನ್ನು ತರಲಿದೆ. ಈ ವರ್ಷದ ಉತ್ತರ ಗೋಳಾರ್ಧದಲ್ಲಿ ಕಡಿಮೆ ಹಿಮಪಾತವೂ ಮುಂಗಾರಿಗೆ ಪೂರಕವಾಗಿದೆ ಎಂದು ಹವಮಾನ ಇಲಾಖೆ ಮುಖ್ಯಸ್ಥ ಡಾ. ಮೃತ್ಯುಂಜಯ್ ಮೊಹಪಾತ್ರಾ ತಿಳಿಸಿದ್ದಾರೆ. ಕಳೆದ ವರ್ಷ ಮುಂಗಾರು 108% LPA ಮಳೆಯನ್ನು ಒದಗಿಸಿತ್ತು. ಆದರೆ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಕಡಿಮೆ ಮಳೆಯಾಗಿತ್ತು. ಐಎಂಡಿ ತನ್ನ ಮುನ್ಸೂಚನೆಯನ್ನು ಮೇ ತಿಂಗಳಲ್ಲಿ ನವೀಕರಿಸಲಿದೆ. ಇದನ್ನೂ ಓದಿ: Chitradurga | ಗಂಜಲಗುಂಟೆ ಗ್ರಾಮದಲ್ಲಿ 3 ತಿಂಗಳಿಂದ ನೀಗದ ನೀರಿನ ಬವಣೆ – ಗ್ರಾಮಸ್ಥರು ಕಂಗಾಲು

  • ರಾಜ್ಯದಲ್ಲಿ ಇಂದಿನಿಂದ 5 ದಿನಗಳ ಕಾಲ ಗುಡುಗು ಸಹಿತ ಮಳೆ – ಗಂಟೆಗೆ 50 ಕಿಮೀ ವೇಗದಲ್ಲಿ ಬೀಸಲಿದೆ ಗಾಳಿ!

    ರಾಜ್ಯದಲ್ಲಿ ಇಂದಿನಿಂದ 5 ದಿನಗಳ ಕಾಲ ಗುಡುಗು ಸಹಿತ ಮಳೆ – ಗಂಟೆಗೆ 50 ಕಿಮೀ ವೇಗದಲ್ಲಿ ಬೀಸಲಿದೆ ಗಾಳಿ!

    ಬೆಂಗಳೂರು: ರಾಜ್ಯದ ಹಲವೆಡೆ ಇಂದಿನಿಂದ ಏ.16ರ ವರೆಗೆ ಭಾರೀ ಗಾಳಿ, ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಗಾಳಿ ಪ್ರತಿ ಗಂಟೆಗೆ 40-50 ಕಿಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿನಲ್ಲಿ ಇಂದು ನಾಳೆ ಹಗುರ ಮಳೆಯಾಗಲಿದೆ. ನಗರದ ಕೆಲವೆಡೆ ಮೋಡಕವಿದ ವಾತಾವರಣ ಇದ್ದು, ಸಂಜೆಯ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ತಿಳಿಸಿದೆ.

    ಧಾರವಾಡ, ಗದಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ಕೋಲಾರ, ತುಮಕೂರು, ಬೆಳಗಾವಿ, ಚಾಮರಾಜನಗರ, ಹಾಸನ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

  • ಬಿಹಾರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ- ಗುರುವಾರ ಒಂದೇ ದಿನ 58 ಬಲಿ

    ಬಿಹಾರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ- ಗುರುವಾರ ಒಂದೇ ದಿನ 58 ಬಲಿ

    ಪಾಟ್ನಾ: ಬಿಹಾರದಲ್ಲಿ (Bihar) ಭಾರೀ ಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗುತ್ತಿದ್ದು (Rain) ಗುರುವಾರ ಒಂದೇ ದಿನ ರಾಜ್ಯಾದ್ಯಂತ 58 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 23 ಜನರು ಸಿಡಿಲು (Lightning Strikes) ಬಡಿದು ಸಾವನ್ನಪ್ಪಿದ್ದರೆ, 35 ಜನರು ಭಾರೀ ಮಳೆ ಮತ್ತು ಗಾಳಿಯಿಂದ ಮರ, ಗೋಡೆಗಳು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

    ಮಾಹಿತಿಯ ಪ್ರಕಾರ ನಳಂದ (Nalanda) ಜಿಲ್ಲೆಯಲ್ಲಿ ಭಾರೀ ಹಾನಿ ಸಂಭವಿಸಿದೆ. ಗಾಳಿಯಿಂದ 22 ಮಂದಿ ಸಾವನ್ನಪ್ಪಿದ್ದಾರೆ. ಸಿವಾನ್‌ನಲ್ಲಿ ಸಿಡಿಲು ಬಡಿದು 4 ಮಂದಿ ಬಲಿಯಾಗಿದ್ದಾರೆ.

    ಬಿಹಾರದ ಎಂಟು ಜಿಲ್ಲೆಗಳಲ್ಲಿ ಸಿಡಿಲು ಬಡಿದು 25 ಜನರು ಸಾವನ್ನಪ್ಪಿದ ಒಂದು ದಿನದ ನಂತರ ಇದು ಸಂಭವಿಸಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ರೈತರು ಮತ್ತು ದಿನಗೂಲಿ ಕಾರ್ಮಿಕರಾಗಿದ್ದು ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಸಾವನ್ನಪ್ಪಿದ್ದಾರೆ.


    ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂತಾಪ ಸೂಚಿಸಿ ಮೃತರ ಹತ್ತಿರದ ಸಂಬಂಧಿಕರಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಸಲಹೆಗಳನ್ನು ಪಾಲಿಸುವಂತೆ ಅವರು ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಿರಿಯಡ್ಸ್ ಆಗಿದ್ದಕ್ಕೆ 8ನೇ ತರಗತಿ ವಿದ್ಯಾರ್ಥಿನಿಗೆ ಕ್ಲಾಸ್ ರೂಂ ಹೊರಗೆ ಪರೀಕ್ಷೆ

    ಈ ವರ್ಷದ ಫೆಬ್ರವರಿಯಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಬಿಹಾರ ಆರ್ಥಿಕ ಸಮೀಕ್ಷೆಯಲ್ಲಿ 2023 ರಲ್ಲಿ ರಾಜ್ಯದಲ್ಲಿ ಸಿಡಿಲು ಅಥವಾ ಗುಡುಗುನಿಂದ 275 ಮಂದಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಲಾಗಿದೆ.


    ದರ್ಭಂಗಾ, ಪೂರ್ವ ಚಂಪಾರಣ್, ಗೋಪಾಲ್‌ಗಂಜ್, ಪಶ್ಚಿಮ ಚಂಪಾರಣ್, ಕಿಶನ್‌ಗಂಜ್, ಅರಾರಿಯಾ, ಸುಪೌಲ್, ಗಯಾ, ಸೀತಾಮರ್ಹಿ, ಶಿಯೋಹರ್, ನಲಂದಾ, ನವಾಡ ಮತ್ತು ಪಾಟ್ನಾ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಭಾರತ ಹವಾಮಾನ ಇಲಾಖೆ ಅರೇಂಜ್‌ ಅಲರ್ಟ್‌ ಜಾರಿ ಮಾಡಿದೆ. ಈ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.

    ಮಧುಬನಿ, ದರ್ಭಂಗಾ, ಪೂರ್ವ ಚಂಪಾರಣ್, ಗೋಪಾಲ್‌ಗಂಜ್, ಪಶ್ಚಿಮ ಚಂಪಾರಣ್, ಕಿಶನ್‌ಗಂಜ್, ಅರಾರಿಯಾ, ಸುಪೌಲ್, ಗಯಾ, ಸೀತಾಮರ್ಹಿ, ಶಿಯೋಹರ್, ನಲಂದಾ, ನವಾಡ, ಪಾಟ್ನಾಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.