Tag: weather

  • ಬೆಂಗಳೂರಲ್ಲಿ ಭಾರೀ ಮಳೆ; ಹಲವೆಡೆ ಧರೆಗುರುಳಿದ ಮರ – ಎಲ್ಲೆಲ್ಲಿ ಎಷ್ಟು ಮಳೆ?

    ಬೆಂಗಳೂರಲ್ಲಿ ಭಾರೀ ಮಳೆ; ಹಲವೆಡೆ ಧರೆಗುರುಳಿದ ಮರ – ಎಲ್ಲೆಲ್ಲಿ ಎಷ್ಟು ಮಳೆ?

    ಬೆಂಗಳೂರು: ನಗರದಲ್ಲಿ (Bengaluru) ಮುಂಗಾರು ಪೂರ್ವ ಮಳೆಯ (Rain) ಅಬ್ಬರ ಜೋರಾಗಿದೆ. ಮಲ್ಲೇಶ್ವರಂ, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಗಾಂಧಿನಗರ, ಕೆ.ಆರ್ ಸರ್ಕಲ್, ಶಿವಾನಂದ ಸರ್ಕಲ್, ಕಾರ್ಪೋರೇಷನ್ ಸರ್ಕಲ್ ಸುತ್ತಮುತ್ತ ಭಾರೀ ಮಳೆಯಾಗಿದೆ. ಮಳೆಯಿಂದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.

    ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗಾಳಿ, ಮಳೆ ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲದಂತೆ ಹಾಗೂ ರಸ್ತೆಗಳಲ್ಲಿ ಓಡಾಡದಂತೆ ಸಾರ್ವಜನಿಕರಿಗೆ ಬಿಬಿಎಂಪಿ ಮನವಿ ಮಾಡಿದೆ.‌

    ಮಲ್ಲೇಶ್ವರಂ 17ನೇ ಕ್ರಾಸ್‍ನಲ್ಲಿ ಕಾರಿನ ಪಕ್ಕದಲ್ಲೇ ಮರದ ರೆಂಬೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ. ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಆನಂದರಾವ್ ಸರ್ಕಲ್ ಸುತ್ತಮುತ್ತ ಜೋರು ಮಳೆಯಾಗಿದ್ದು, ವಾಹನ ಸವಾರರು ಹಾಗೂ ಬೀದಿ ಬದಿ ವ್ಯಾಪಾರಿಗಳು ಪರದಾಡಿದ್ದಾರೆ. ಕೆಆರ್ ಮಾರ್ಕೆಟ್, ಟೌನ್ ಹಾಲ್, ಕೆಜಿ ರೋಡ್, ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಮಳೆಯಿಂದ ಟ್ರಾಫಿಕ್ ಉಂಟಾಗಿದೆ.

    ಶೇಷಾದ್ರಿಪುರಂ ಬಳಿ ರಸ್ತೆಯಲ್ಲಿ ಕಾರಿನ ಮೇಲೆ ಮರದ ರೆಂಬೆ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಗಿದೆ. ಮೈಸೂರು ರಸ್ತೆಯ ಕೆಲವೆಡೆ ಕೆರೆಯಂತೆ ನೀರು ನಿಂತಿದೆ. ಸರ್ಜಾಪುರದ ಸೋಂಪುರ ಗೇಟ್ ಬಳಿ ಬೃಹತ್ ಹೋರ್ಡಿಂಗ್ಸ್ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಆಗಿಲ್ಲ.

    ಮಲ್ಲೇಶ್ವರಂನ ಹೂವಿನ ಮಾರ್ಕೇಟ್‍ನ ಅಂಗಡಿಗಳಿಗೆ ನೀರು ನುಗ್ಗಿ, ಹೂಗಳು ಕೊಚ್ಚಿಹೋಗಿದ್ದು, ವ್ಯಾಪಾರಿಗಳು ಕಣ್ಣೀರಿಟ್ಟಿದ್ದಾರೆ. ಇನ್ನೂ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರದ ಕೊಂಬೆ ಕಾರಿನ ಮೇಲೆ ಬಿದ್ದು, ಕಾರು ಜಖಂಗೊಂಡಿದೆ.

    ಶನಿವಾರ (ಮೇ 3) ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಚೆನ್ನೈ ಪಂದ್ಯಕ್ಕೆ ಬಹುತೇಕ ಮಳೆ ಅಡ್ಡಿ ಸಾಧ್ಯತೆ ಇದ್ದು, ಇಂದು ಅಭ್ಯಾಸ ಪಂದ್ಯಕ್ಕಾಗಿ ಕ್ರೀಡಾಂಗಣಕ್ಕೆ ಆಗಮಿಸಿದ್ದ ಆಟಗಾರರು, ಮಳೆ ಹಿನ್ನೆಲೆ ಅರ್ಧಕ್ಕೇ ಮೊಟುಕುಗೊಳಿಸಿ ಮೈದಾನದಿಂದ ತೆರಳಿದ್ದಾರೆ.

  • ರಾಜ್ಯದ ಹವಾಮಾನ ವರದಿ 02-05-2025

    ರಾಜ್ಯದ ಹವಾಮಾನ ವರದಿ 02-05-2025

    ರಾಜ್ಯದಲ್ಲಿ ದಿನೇ ದಿನೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇದರ ನಡುವೆಯೂ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಮುಂದಿನ 4 ದಿನ ರಾಜ್ಯಾದ್ಯಂತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ವಿಜಯಪುರ ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 32-23
    ಮಂಗಳೂರು: 32-25
    ಶಿವಮೊಗ್ಗ: 34-22
    ಬೆಳಗಾವಿ: 36-21
    ಮೈಸೂರು: 36-23

    ಮಂಡ್ಯ: 34-23
    ಮಡಿಕೇರಿ: 30-21
    ರಾಮನಗರ: 33-23
    ಹಾಸನ: 31-21
    ಚಾಮರಾಜನಗರ: 34-23
    ಚಿಕ್ಕಬಳ್ಳಾಪುರ: 31-23

    ಕೋಲಾರ: 32-23
    ತುಮಕೂರು: 32-23
    ಉಡುಪಿ: 32-26
    ಕಾರವಾರ: 34-28
    ಚಿಕ್ಕಮಗಳೂರು: 29-19
    ದಾವಣಗೆರೆ: 34-24

    ಹುಬ್ಬಳ್ಳಿ: 38-24
    ಚಿತ್ರದುರ್ಗ: 33-23
    ಹಾವೇರಿ: 36-24
    ಬಳ್ಳಾರಿ: 38-26
    ಗದಗ: 37-24
    ಕೊಪ್ಪಳ: 37-26

    ರಾಯಚೂರು: 39-28
    ಯಾದಗಿರಿ: 39-27
    ವಿಜಯಪುರ: 41-25
    ಬೀದರ್: 39-28
    ಕಲಬುರಗಿ: 41-27
    ಬಾಗಲಕೋಟೆ: 40-24

  • ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆ – ವಾಹನ ಸವಾರರ ಪರದಾಟ

    ಬೆಂಗಳೂರಿನ ಹಲವೆಡೆ ಆಲಿಕಲ್ಲು ಮಳೆ – ವಾಹನ ಸವಾರರ ಪರದಾಟ

    – ಮುಂದಿನ 3 ಗಂಟೆಗಳಲ್ಲಿ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಹಲವಡೆ ಆಲಿಕಲ್ಲು ಸಹಿತ ಮಳೆಯಾಗಿದ್ದು (Rain),  ವಾಹನ ಸವಾರರು ಪರದಾಡಿದ್ದಾರೆ.

    ಮಲ್ಲೇಶ್ವರಂ, ಕಾರ್ಪೋರೇಷನ್, ವಿಧಾನಸೌಧ, ಜಯನಗರ, ಫ್ರೇಜರ್ ಟೌನ್, ಶಿವಾಜಿನಗರ ಸುತ್ತಮುತ್ತ ವರುಣನ ಅಬ್ಬರ ಜೋರಾಗಿದೆ. 8ನೇ ಮೈಲಿ, ದಾಸರಹಳ್ಳಿ, ಮಾದಾವರ, ಮಾದನಾಯಕನಹಳ್ಳಿ ಸುತ್ತಮುತ್ತ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಮುಂದಿನ 3 ಗಂಟೆಗಳಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ನೀವು ಬರೋದು ಬೇಡ – ತನ್ನ ಪ್ರಜೆಗಳನ್ನೇ ದೇಶಕ್ಕೆ ಸೇರಿಸದ ಪಾಕ್‌

    ಬೆಂಗಳೂರು ನಗರ ಹಾಗೂ ಗ್ರಾಮಾಂತರ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಜೋರು ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಬಲವಾದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಕುಡುಪು ಪ್ರಕರಣದಲ್ಲಿ ಪೊಲೀಸರು ಅಮಾಯಕರನ್ನ ಫಿಕ್ಸ್ ಮಾಡಲು ಹೊರಟಿದ್ದಾರೆ: ಭರತ್ ಶೆಟ್ಟಿ

  • ರಾಜ್ಯಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆ ಮುನ್ಸೂಚನೆ

    ರಾಜ್ಯಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆ ಮುನ್ಸೂಚನೆ

    ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

    ಇಂದಿನಿಂದ ಮೇ 4ರವರೆಗೆ ಭಾರೀ ಮಳೆಯಾಗಲಿದ್ದು, ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಇದನ್ನೂ ಓದಿ: ಐಎಸ್ಐ ಮುಖ್ಯಸ್ಥನನ್ನು ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿ ನೇಮಿಸಿದ ಪಾಕ್‌

    ಬೆಳಗಾವಿ, ರಾಯಚೂರು, ವಿಜಯಪುರ, ಕೊಪ್ಪಳ, ಹುಬ್ಬಳ್ಳಿ, ಯಾದಗಿರಿ, ಬಾಗಲಕೋಟೆ, ವಿಜಯಪುರ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.

    ಇನ್ನೂ ಮೇ ತಿಂಗಳಲ್ಲಿ ಉಷ್ಣ ಹವೆ ಹೆಚ್ಚಾಗಿರಲಿದ್ದು, ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಅಧಿಕವಾಗುವ ಸಾಧ್ಯತೆಯಿದೆ. ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಉಷ್ಣ ಹವೆ ಹೆಚ್ಚಳವಾಗಲಿದೆ. ಭಾರತದ ಹಲವು ರಾಜ್ಯಗಳಿಗೆ ಅಧಿಕ ತಾಪಮಾನದ ಬಿಸಿ ತಟ್ಟಲಿದ್ದು, ರಾಜಸ್ಥಾನ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ ಏರಿಕೆಯಾಗಲಿದೆ. ಉಷ್ಣ ಹವೆಯಿದ್ದರೂ ಕೂಡ ಉತ್ತಮ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.ಇದನ್ನೂ ಓದಿ: ನೆಲಮಂಗಲ| ಗ್ಯಾಸ್‌ ಲೀಕೇಜ್‌ನಿಂದ ಹೊತ್ತಿ ಉರಿದ ಬೆಂಕಿ – ಇಬ್ಬರು ಸಾವು

  • ರಾಜ್ಯದ ಹವಾಮಾನ ವರದಿ 29-04-2025

    ರಾಜ್ಯದ ಹವಾಮಾನ ವರದಿ 29-04-2025

    ರಾಜ್ಯದಲ್ಲಿ ದಿನೇ ದಿನೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇದರ ನಡುವೆಯೂ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಹಾವೇರಿ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 33-23
    ಮಂಗಳೂರು: 32-26
    ಶಿವಮೊಗ್ಗ: 35-23
    ಬೆಳಗಾವಿ: 33-22
    ಮೈಸೂರು: 37-23

    ಮಂಡ್ಯ: 36-23
    ಮಡಿಕೇರಿ: 31-21
    ರಾಮನಗರ: 35-23
    ಹಾಸನ: 33-21
    ಚಾಮರಾಜನಗರ: 36-23
    ಚಿಕ್ಕಬಳ್ಳಾಪುರ: 34-22

    ಕೋಲಾರ: 34-23
    ತುಮಕೂರು: 34-23
    ಉಡುಪಿ: 33-27
    ಕಾರವಾರ: 34-28
    ಚಿಕ್ಕಮಗಳೂರು: 31-20
    ದಾವಣಗೆರೆ: 34-24

    ಹುಬ್ಬಳ್ಳಿ: 36-24
    ಚಿತ್ರದುರ್ಗ: 34-23
    ಹಾವೇರಿ: 36-24
    ಬಳ್ಳಾರಿ: 39-26
    ಗದಗ: 36-24
    ಕೊಪ್ಪಳ: 38-26

    ರಾಯಚೂರು: 41-29
    ಯಾದಗಿರಿ: 39-28
    ವಿಜಯಪುರ: 39-28
    ಬೀದರ್: 38-29
    ಕಲಬುರಗಿ: 41-29
    ಬಾಗಲಕೋಟೆ: 39-27

  • ರಾಜ್ಯದ ಹವಾಮಾನ ವರದಿ 28-04-2025

    ರಾಜ್ಯದ ಹವಾಮಾನ ವರದಿ 28-04-2025

    ರಾಜ್ಯದಲ್ಲಿ ದಿನೇ ದಿನೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇದರ ನಡುವೆಯೂ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಮುಂದಿನ 3 ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಹಾವೇರಿ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 32-26
    ಶಿವಮೊಗ್ಗ: 35-23
    ಬೆಳಗಾವಿ: 33-22
    ಮೈಸೂರು: 37-23

    ಮಂಡ್ಯ: 36-23
    ಮಡಿಕೇರಿ: 31-21
    ರಾಮನಗರ: 35-23
    ಹಾಸನ: 33-21
    ಚಾಮರಾಜನಗರ: 36-23
    ಚಿಕ್ಕಬಳ್ಳಾಪುರ: 34-22

    ಕೋಲಾರ: 34-23
    ತುಮಕೂರು: 34-23
    ಉಡುಪಿ: 33-27
    ಕಾರವಾರ: 34-28
    ಚಿಕ್ಕಮಗಳೂರು: 31-20
    ದಾವಣಗೆರೆ: 34-24

    ಹುಬ್ಬಳ್ಳಿ: 36-24
    ಚಿತ್ರದುರ್ಗ: 34-23
    ಹಾವೇರಿ: 36-24
    ಬಳ್ಳಾರಿ: 39-26
    ಗದಗ: 36-24
    ಕೊಪ್ಪಳ: 38-26

    ರಾಯಚೂರು: 41-29
    ಯಾದಗಿರಿ: 39-28
    ವಿಜಯಪುರ: 39-28
    ಬೀದರ್: 38-29
    ಕಲಬುರಗಿ: 41-29
    ಬಾಗಲಕೋಟೆ: 39-27

  • ರಾಜ್ಯದ ಹವಾಮಾನ ವರದಿ 27-04-2025

    ರಾಜ್ಯದ ಹವಾಮಾನ ವರದಿ 27-04-2025

    ರಾಜ್ಯದಲ್ಲಿ ದಿನೇ ದಿನೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಇದರ ನಡುವೆಯೂ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಹಾವೇರಿ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 32-26
    ಶಿವಮೊಗ್ಗ: 35-23
    ಬೆಳಗಾವಿ: 33-22
    ಮೈಸೂರು: 37-23

    ಮಂಡ್ಯ: 36-23
    ಮಡಿಕೇರಿ: 31-21
    ರಾಮನಗರ: 35-23
    ಹಾಸನ: 33-21
    ಚಾಮರಾಜನಗರ: 36-23
    ಚಿಕ್ಕಬಳ್ಳಾಪುರ: 34-22

    ಕೋಲಾರ: 34-23
    ತುಮಕೂರು: 34-23
    ಉಡುಪಿ: 33-27
    ಕಾರವಾರ: 34-28
    ಚಿಕ್ಕಮಗಳೂರು: 31-20
    ದಾವಣಗೆರೆ: 34-24

    ಹುಬ್ಬಳ್ಳಿ: 36-24
    ಚಿತ್ರದುರ್ಗ: 34-23
    ಹಾವೇರಿ: 36-24
    ಬಳ್ಳಾರಿ: 39-26
    ಗದಗ: 36-24
    ಕೊಪ್ಪಳ: 38-26

    ರಾಯಚೂರು: 41-29
    ಯಾದಗಿರಿ: 39-28
    ವಿಜಯಪುರ: 39-28
    ಬೀದರ್: 38-29
    ಕಲಬುರಗಿ: 41-29
    ಬಾಗಲಕೋಟೆ: 39-27

  • ಹಾಸನದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ

    ಹಾಸನದಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ

    – ಹಾವೇರಿಯಲ್ಲೂ ಬಿರುಗಾಳಿ, ಗುಡುಗು ಸಹಿತ ಮಳೆ

    ಹಾಸನ: ಜಿಲ್ಲೆಯ ಅರಸೀಕೆರೆ (Arasikere) ನಗರ ಸೇರಿದಂತೆ, ತಾಲೂಕಿನ ಅಲ್ಲಲ್ಲಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಳ್ಳುವುದರ ಜೊತೆಗೆ ಅಪಾರ ಪ್ರಮಾಣದ ಹಾನಿ ಕೂಡ ಸಂಭವಿಸಿದೆ.

    ಬೇಸಿಗೆ ಬಿಸಿಲಿನ ತಾಪಕ್ಕೆ ನಲುಗಿದ್ದ ಜನತೆಗೆ ರಾತ್ರಿ ಸುರಿದ ಆಲಿಕಲ್ಲು ಸಹಿತ ಮಳೆ (Hailstorm) ಸ್ವಲ್ಪಮಟ್ಟಿಗೆ ವಾತಾವರಣವನ್ನು ತಂಪು ಮಾಡಿರುವುದು ಸಂತಸ ತರಿಸಿದ್ದರೆ, ಮಳೆಯ ಜೊತೆಗೆ ಬೀಸಿದ ಬಿರುಗಾಳಿ ಹಲವು ಮನೆಗಳ ಮೇಲ್ಛಾವಣಿಯನ್ನು ನೆಲಕ್ಕೆ ಬೀಳಿಸಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಇದನ್ನೂ ಓದಿ: ಕಾಶ್ಮೀರದ ಹಲವೆಡೆ ಭದ್ರತಾ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ – ಇದುವರೆಗೆ 175ಕ್ಕೂ ಹೆಚ್ಚು ಮಂದಿ ವಶಕ್ಕೆ

    ತಾಲೂಕು ದಂಡಾಧಿಕಾರಿ ಸಂತೋಷ್‌ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಾರ್ಯಾಚರಣೆಗೆ ಇಳಿದಿದ್ದು, ತೊಂದರೆಗೆ ಸಿಲುಕಿರುವ ರೈತರು, ಜನರ ಆಗು ಹೋಗುಗಳಿಗೆ ಸ್ಪಂದಿಸುತ್ತಿದ್ದಾರೆ. ಮಳೆಯ ನಡುವೆಯೇ ನಗರದ ತಗ್ಗು ಪ್ರದೇಶದ ಬಡಾವಣೆಗಳಿಗೆ ಭೇಟಿ ನೀಡಿದ ತಹಶೀಲ್ದಾರ್ ಸಂತೋಷ್ ಕುಮಾರ್ ಮತ್ತು ನಗರಸಭೆ ಅಧಿಕಾರಿಗಳು ಮಳೆ, ಗಾಳಿಯಿಂದ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿದರು. ಅಲ್ಲದೇ ನಿರಾಶ್ರಿತರಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು. ಇದನ್ನೂ ಓದಿ: ನಾನು ಭಾರತದ ಸೊಸೆ, ಇಲ್ಲೇ ಇರುತ್ತೇನೆ: ಸೀಮಾ ಹೈದರ್

    ಇನ್ನು ಹಾವೇರಿ (Haveri) ಜಿಲ್ಲೆಯ ಹಲವೆಡೆ ಬಿರುಗಾಳಿ ಮತ್ತು ಗುಡುಗು ಸಿಡಿಲು ಸಮೇತ ಧಾರಾಕಾರವಾಗಿ ಮಳೆಯಾಗಿದೆ. ಹಾವೇರಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿ ಬಿರುಗಾಳಿ ಬೀಸಿದ ಪರಿಣಾಮ 5ಕ್ಕೂ ಅಧಿಕ ಮರಗಳು ಧರಗೆ ಉರುಳಿವೆ. ಹೀಗಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನೂ ಓದಿ: ಲಂಡನ್‌ನಲ್ಲಿ ಭಾರತೀಯರ ಪ್ರತಿಭಟನೆ ವೇಳೆ ಕತ್ತು ಕೊಯ್ಯುವ ಸನ್ನೆ ಮಾಡಿದ ಪಾಕ್ ಅಧಿಕಾರಿ

    ಹಾವೇರಿ ಟು ಗುತ್ತಲ ರಸ್ತೆ ಬೃಹತ್ ಗಾತ್ರದ ಬೇವಿನಮರ ಬಿದ್ದು ರಸ್ತೆ ಸಂಚಾರ ಬಂದ್ ಆಗಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಮರ ತೆರವು ಕಾರ್ಯಚರಣೆ ನಡೆಸುತ್ತಿದ್ದಾರೆ. ಹಾವೇರಿ ನಗರದ ಕೆಲವು ಭಾಗಗಳಲ್ಲಿ ಬಿರುಗಾಳಿಗೆ ಮರಗಳು ಧರಗೆ ಉರುಳಿದ್ದು, ಕೆಲಕಾಲ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಬಳಿಕ ಮರಗಳ ತೆರವು ಕಾರ್ಯಚರಣೆ ಮಾಡಲಾಗಿದೆ. ಇದನ್ನೂ ಓದಿ: ಇರಾನ್‌ನ ಪೋರ್ಟ್ ಸಿಟಿಯಲ್ಲಿ ಬಾಂಬ್ ಸ್ಫೋಟ – ನಾಲ್ವರು ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

  • ರಾಜ್ಯದ ಹವಾಮಾನ ವರದಿ 26-04-2025

    ರಾಜ್ಯದ ಹವಾಮಾನ ವರದಿ 26-04-2025

    ರಾಜ್ಯದಲ್ಲಿ ಹಲವೆಡೆ ಮಳೆಯಾಗುತ್ತಿದ್ದು, ಮುಂದಿನ ಒಂದು ವಾರ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಹಾವೇರಿ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 32-26
    ಶಿವಮೊಗ್ಗ: 35-23
    ಬೆಳಗಾವಿ: 33-22
    ಮೈಸೂರು: 37-23

    ಮಂಡ್ಯ: 36-23
    ಮಡಿಕೇರಿ: 31-21
    ರಾಮನಗರ: 35-23
    ಹಾಸನ: 33-21
    ಚಾಮರಾಜನಗರ: 36-23
    ಚಿಕ್ಕಬಳ್ಳಾಪುರ: 34-22

    ಕೋಲಾರ: 34-23
    ತುಮಕೂರು: 34-23
    ಉಡುಪಿ: 33-27
    ಕಾರವಾರ: 34-28
    ಚಿಕ್ಕಮಗಳೂರು: 31-20
    ದಾವಣಗೆರೆ: 34-24

    ಹುಬ್ಬಳ್ಳಿ: 36-24
    ಚಿತ್ರದುರ್ಗ: 34-23
    ಹಾವೇರಿ: 36-24
    ಬಳ್ಳಾರಿ: 39-26
    ಗದಗ: 36-24
    ಕೊಪ್ಪಳ: 38-26

    ರಾಯಚೂರು: 41-29
    ಯಾದಗಿರಿ: 39-28
    ವಿಜಯಪುರ: 39-28
    ಬೀದರ್: 38-29
    ಕಲಬುರಗಿ: 41-29
    ಬಾಗಲಕೋಟೆ: 39-27

  • ರಾಜ್ಯದ ಹವಾಮಾನ ವರದಿ 25-04-2025

    ರಾಜ್ಯದ ಹವಾಮಾನ ವರದಿ 25-04-2025

    ರಾಜ್ಯದಲ್ಲಿ ಇನ್ನೂ ಒಂದು ವಾರ ಮಳೆಯಾಗಲಿದ್ದು, ದಕ್ಷಿಣ ಕರ್ನಾಟಕದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. ಉತ್ತರ ಒಳನಾಡಿನಲ್ಲಿ ಬಿಸಿಲು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ದಕ್ಷಿಣ ಕನ್ನಡ, ಗದಗ, ಧಾರವಾಡ, ಕೊಪ್ಪಳ, ರಾಯಚೂರು, ಹಾವೇರಿ, ಮೈಸೂರು, ಹಾಸನ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 34-23
    ಮಂಗಳೂರು: 32-26
    ಶಿವಮೊಗ್ಗ: 35-23
    ಬೆಳಗಾವಿ: 33-22
    ಮೈಸೂರು: 37-23

    ಮಂಡ್ಯ: 36-23
    ಮಡಿಕೇರಿ: 31-21
    ರಾಮನಗರ: 35-23
    ಹಾಸನ: 33-21
    ಚಾಮರಾಜನಗರ: 36-23
    ಚಿಕ್ಕಬಳ್ಳಾಪುರ: 34-22

    ಕೋಲಾರ: 34-23
    ತುಮಕೂರು: 34-23
    ಉಡುಪಿ: 33-27
    ಕಾರವಾರ: 34-28
    ಚಿಕ್ಕಮಗಳೂರು: 31-20
    ದಾವಣಗೆರೆ: 34-24

    ಹುಬ್ಬಳ್ಳಿ: 36-24
    ಚಿತ್ರದುರ್ಗ: 34-23
    ಹಾವೇರಿ: 36-24
    ಬಳ್ಳಾರಿ: 39-26
    ಗದಗ: 36-24
    ಕೊಪ್ಪಳ: 38-26

    ರಾಯಚೂರು: 41-29
    ಯಾದಗಿರಿ: 39-28
    ವಿಜಯಪುರ: 39-28
    ಬೀದರ್: 38-29
    ಕಲಬುರಗಿ: 41-29
    ಬಾಗಲಕೋಟೆ: 39-27