Tag: weather

  • ಸುಡುತ್ತಿದ್ದ ಸಿಲಿಕಾನ್ ಸಿಟಿಗೆ ವರುಣನ ಸಿಂಚನ – ಮೋಡ ಕವಿದ ವಾತಾವರಣ

    ಸುಡುತ್ತಿದ್ದ ಸಿಲಿಕಾನ್ ಸಿಟಿಗೆ ವರುಣನ ಸಿಂಚನ – ಮೋಡ ಕವಿದ ವಾತಾವರಣ

    – ಬೆಂಗ್ಳೂರಿನಲ್ಲಿ ಇನ್ನೂ ಎರಡು ದಿನ ಮಳೆ
    – ರಾಮನಗರ, ಮಂಡ್ಯ, ಕೋಲಾರದಲ್ಲೂ ವರುಣನ ಆಗಮನ

    ಬೆಂಗಳೂರು: ಇಷ್ಟು ದಿನ ಬಿಸಿಲು ಸುಡುತ್ತಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿಗೆ ವರುಣನ ಸಿಂಚನವಾಗಿದ್ದು, ಇನ್ನೂ ಎರಡು ದಿನಗಳ ಕಾಲ ಮಳೆ ಆಗಲಿದೆ.

    ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ ಸುತ್ತಮುತ್ತ ವರುಣನ ಸಿಂಚನವಾಗಿದ್ದು, ಮೋಡ ಕವಿದ ವಾತಾವರಣ ಇದೆ. ಒಡಿಶಾ ಮತ್ತು ತಮಿಳುನಾಡಿನಲ್ಲಿ ಕಾಣಿಸಿಕೊಂಡಿರುವ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಮಳೆ ಆಗುತ್ತಿದೆ. ಬೆಂಗಳೂರು, ರಾಮನಗರ ಮಂಡ್ಯ ಮತ್ತು ಕೋಲಾರ ಇನ್ನೂ ಎರಡು ದಿನ ಮಳೆ ಆಗುವ ಸಾಧ್ಯತೆಗಳಿದ್ದು, ಮೋಡ ಕವಿದ ವಾತಾವರಣ ಇರಲಿದೆ.

    ಶುಕ್ರವಾರ ಬೆಳಗ್ಗೆ ರಾಯಚೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ಜೊತೆಗೆ ಜಿಟಿ ಜಿಟಿ ಮಳೆ ಕೂಡ ಆಗಿತ್ತು. ಬಿಸಿಲ ನಾಡು ವಿಜಯಪುರದಲ್ಲೂ ಹವಾಮಾನದಲ್ಲಿ ಭಾರೀ ಬದಲಾವಣೆ ಆಗಿತ್ತು. ಬಿಸಿಲ ನಾಡಲ್ಲಿ ಬೇಸಿಗೆಯಲ್ಲೂ ಚಳಿಯ ವಾತಾವರಣವಿತ್ತು, ಜಿಲ್ಲೆಯ ಕೆಲವು ಕಡೆ ಮಂಜು ಮುಸುಕಿತ್ತು.

    ವಿಜಯಪುರ ಜಿಲ್ಲೆಯ ಸಾರವಾಡ ಬಳಿ ದಟ್ಟವಾದ ಮಂಜು ಆವರಿಸಿತ್ತು. ದಟ್ಟವಾದ ಮಂಜು ಇರುವ ಕಾರಣ ಚಾಲಕರು ಹೆಡ್‍ಲೈಟ್ ಬಳಸಿ ವಾಹನ ಚಲಾಯಿಸುತ್ತಿದ್ದರು.

  • ರಾಯಚೂರಿನಲ್ಲಿ ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ – ಜೋರು ವರ್ಷಧಾರೆ ಸಾಧ್ಯತೆ

    ರಾಯಚೂರಿನಲ್ಲಿ ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ – ಜೋರು ವರ್ಷಧಾರೆ ಸಾಧ್ಯತೆ

    – ಇತ್ತ ವಿಜಯಪುರದಲ್ಲಿ ಮಂಜು ಮುಸುಕಿದ ವಾತಾವರಣ

    ರಾಯಚೂರು/ ವಿಜಯಪುರ: ರಾಯಚೂರಿನಲ್ಲಿ ಬೆಳಗ್ಗೆಯಿಂದ ಜಿಟಿ ಜಿಟಿ ಮಳೆ ಬರುತ್ತಿದ್ದರೆ, ಇತ್ತ ಬಿಸಿಲ ನಾಡು ವಿಜಯಪುರದಲ್ಲಿ ಬೇಸಿಗೆಯಲ್ಲೂ ಚಳಿಯ ವಾತಾವರಣ ಇದೆ.

    ರಾಯಚೂರಿನಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಜಿಟಿ ಜಿಟಿ ಮಳೆ ಆಗುತ್ತಿದೆ. ಜೋರು ಮಳೆ ಬರುವ ಸಾಧ್ಯತೆಗಳಿದ್ದು, ಹತ್ತಿ, ಮೆಣಸಿನಕಾಯಿ ಬೆಳೆದ ರೈತರು ಕಟಾವಿಗೆ ಬಂದಿರುವ ಫಸಲು ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಇತ್ತ ವಿಜಯಪುರ ಹವಾಮಾನದಲ್ಲಿ ಭಾರೀ ಬದಲಾವಣೆ ಆಗಿದೆ. ಬಿಸಿಲ ನಾಡಲ್ಲಿ ಬೇಸಿಗೆಯಲ್ಲೂ ಚಳಿಯ ವಾತಾವರಣವಿದ್ದು, ಜಿಲ್ಲೆಯ ಕೆಲವು ಕಡೆ ಮಂಜು ಮುಸುಕಿದೆ. ವಿಜಯಪುರ ಜಿಲ್ಲೆಯ ಸಾರವಾಡ ಬಳಿ ದಟ್ಟವಾದ ಮಂಜು ಆವರಿಸಿದೆ.

    ದಟ್ಟವಾದ ಮಂಜು ಇರುವ ಕಾರಣ ಚಾಲಕರು ಹೆಡ್‍ಲೈಟ್ ಬಳಸಿ ವಾಹನ ಚಲಾಯಿಸುತ್ತಿದ್ದಾರೆ. ಇದೇ ವೇಳೆ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆತಂಕದಲ್ಲಿದ್ದಾರೆ.

  • ಬೆಂಗ್ಳೂರು ಸೇರಿದಂತೆ ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆ

    ಬೆಂಗ್ಳೂರು ಸೇರಿದಂತೆ ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆ

    – ಎಚ್ಚರ ವಹಿಸದಿದ್ರೆ ಆರೋಗ್ಯದಲ್ಲಿ ಏರುಪೇರು

    ಬೆಂಗಳೂರು: ಚಂದ್ರಗ್ರಹಣದ ಬಳಿಕ ರಾಜ್ಯದ ವಾತಾವರಣದಲ್ಲಿ ಭಾರೀ ಏರುಪೇರು ಉಂಟಾಗಿದೆ. ತೋಳ ಚಂದ್ರ ಗ್ರಹಣ ವಾತಾವರಣದಲ್ಲಿ ಆಪತ್ತು ತಂದೊಡ್ಡುತ್ತಿದೆ. ಶೀತ ಗಾಳಿ, ಮಂಜು, ಚಳಿ, ಉರಿ ಬಿಸಿಲು ಇದು ಯಾವುದು ವಾತಾವರಣದಿಂದ ಆದ ಬದಲಾವಣೆಯಲ್ಲ, ಬದಲಾಗಿ ತೋಳ ಗ್ರಹಣದಿಂದ ಆದ ಬದಲಾವಣೆಯಾಗಿದೆ. ಹೀಗಾಗಿ ಆರೋಗ್ಯದ ಕಡೆ ಗಮನ ಕೊಡದಿದರೆ ತೊಂದರೆ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ.

    2019ರ ವರ್ಷಾಂತ್ಯದಲ್ಲಿ ಸೂರ್ಯಗ್ರಹಣ 2020ರ ವರ್ಷದ ಆರಂಭದಲ್ಲಿ ಚಂದ್ರಗ್ರಹಣ ಈ ಎರಡು ಗ್ರಹಣಗಳಿಂದ ವಾತಾವರಣದಲ್ಲಿ ಭಾರೀ ಏರುಪೇರಾಗಿದೆ. ಈಗ ತೋಳ ಚಂದ್ರಗ್ರಹಣ ಮುಗಿದ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯದ ವಾತಾವರಣದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. ಗ್ರಹಣದ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವ ಸಮಯದಲ್ಲಿ ಯಾವ ರೀತಿ ವಾತಾವರಣ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಮುಂಜಾನೆ ಶೀತ ಗಾಳಿ ಇದ್ದರೆ, ಬೆಳಗ್ಗೆ 10 ಗಂಟೆ ಸುಮಾರಿಗೆ ಸೆಕೆ, ಬಿಸಿಲು, ಚಳಿ ಮತ್ತೆ ಸಂಜೆ ಆಗುತ್ತಿದ್ದಂತೆ ತಣ್ಣನೆ ಗಾಳಿ ಬೀಸುತ್ತಿದೆ. ಇದು ವಾತಾವರಣದಲ್ಲಿ ಆದ ಬದಲಾವಣೆಯಲ್ಲಿ ತೋಳ ಚಂದ್ರ ಗ್ರಹಣದಿಂದ ವಾತಾವರಣದಲ್ಲಿ ಆದ ಗಂಡಾಂತರ ಎಂಬ ಮಾತುಗಳು ಕೇಳಿ ಬರುತ್ತಿದೆ. ಜೀವ ಸಂಕುಲಕ್ಕೆ ವಾತಾವರಣದಲ್ಲಿ ಆದ ಬದಲಾವಣೆಯಿಂದಾಗಿ ಆಪತ್ತು ಕಾದಿದೆ ಎನ್ನಲಾಗುತ್ತಿದೆ.

    ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡು ನಲ್ಲಿ ವರ್ಷ ಆರಂಭದ ತೋಳ ಚಂದ್ರಗ್ರಹಣದಿಂದ ಹವಾಮಾನದಲ್ಲಿ ಮಹತ್ತರವಾದ ಬದಲಾವಣೆಯಾಗಲಿದ್ದು ಆಪತ್ತು ಕಾದಿದೆ ಎನ್ನಲಾಗುತ್ತಿದೆ. ಜ್ವಾಲಾಮುಖಿಗಳು ಕಾಣಿಸಿಕೊಳ್ಳುತ್ತಾ ಇರೋದು ವಾತಾವರಣದ ಬದಲಾವಣೆಗೆ ಮುಖ್ಯ ಕಾರಣವಾಗಿದೆ. ಇದರಿಂದ ರಾಜ್ಯದ ದಕ್ಷಿಣ ಕರಾವಳಿ, ಉತ್ತರ ಕರಾವಳಿ ಭಾಗ ಸೇರಿದಂತೆ ನಾನಾಕಡೆ ವಾತಾವರಣದಲ್ಲಿ ಬದಲಾವಣೆ ಆಗಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ ಅಂತ ಭೂ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಚಂದ್ರಗ್ರಹಣದ ಬಳಿಕ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗೆ ಜ್ಯೋತಿಷಿಗಳು ಆತಂಕ ವ್ಯಕ್ತಪಡಿಸಿದ್ದು, ಗ್ರಹಣದಿಂದ ಬೆಂಗಳೂರು ಮತ್ತು ರಾಜ್ಯದಾದ್ಯಂತ ಭಾರೀ ಬದಲಾವಣೆ ಆಗಲಿದೆ. ಈ ಹಿಂದೆ ಸೂರ್ಯ ಗ್ರಹಣದಿಂದಾಗಿ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಆಯ್ತು, ಈಗ ಚಂದ್ರಗ್ರಹಣದಿಂದ ಜಲ ಸಂಕಷ್ಟ ಕಾದಿದ್ದು ಜಲಪ್ರವಾಹ ಆಗುವ ಸಾಧ್ಯತೆ ಇದೆ ಎಂದು ಆನಂದ್ ಗುರೂಜಿ ಗ್ರಹಣದಿಂದ ಆಗುವ ಆಪತ್ತನ್ನ ಬಿಚ್ಚಿಟ್ಟಿದ್ದಾರೆ.

    ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಆದ ಪ್ರವಾಹ, ಮಡಿಕೇರಿ ಮತ್ತು ಕೊಡಗಿನಲ್ಲಿ ಆದ ಪ್ರಾಕೃತಿ ವಿಕೋಪ ಮತ್ತೆ ಮರುಕಳಿಸುಬಹುದು. ಅಷ್ಟೇ ಅಲ್ಲದೇ ವಾತಾವರಣ ಬದಲಾವಣೆಯಿಂದ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂದು ಚಂದ್ರಗ್ರಹಣದ ಬಳಿಕ ವಾತಾವರಣದಲ್ಲಿ ಆದ ಬದಲಾವಣೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

    ಗವಿಗಂಗಾಧರೇಶ್ವ ದೇವಾಲಯದ ಸೋಮ್ ಸುಂದರ್ ದೀಕ್ಷಿತ್ ಸ್ವಾಮೀಜಿಗಳು ಕೂಡ ಚಂದ್ರ ಗ್ರಹಣದ ನಂತರದ ವಾತಾವರಣದಲ್ಲಿ ಆಗುವ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದ್ದು, ವರ್ಷದ ಆರಂಭದ ಚಂದ್ರಗ್ರಹಣ ಎಫೆಕ್ಟ್ ಖಂಡಿತಾ ಇದೆ. ಚಂದ್ರ ಆಂದರೆ ಜಲ ಗಂಡಾಂತರ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಜಲ ಪ್ರವಾಹ ಆಗಬಹುದು ಮತ್ತು ಜನರಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಮಾತನ್ನ ಹೇಳಿದ್ದಾರೆ.

    ಒಟ್ಟಾರೆ ವರ್ಷದ ಆರಂಭದ ತೋಳ ಚಂದ್ರಗ್ರಹಣದಿಂದ ರಾಜ್ಯದ ವಾತಾವರಣದಲ್ಲಿ ಭಾರೀ ಏರುಪೇರಾಗುತ್ತಿದೆ. ಈ ಬದಲಾವಣೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಪ್ರಾಕೃತಿಕ ವಿಕೋಪ ಮತ್ತು ಜನರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಾತಾವರಣದಿಂದ ಆಗುವ ಆಪತ್ತನ್ನ ಪತ್ತೆ ಹಚ್ಚಿ ಸರ್ಕಾರ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಜೀವ ಸಂಕುಲ ಆಪತ್ತಿಂದ ಪಾರಾಗಬಹುದು.

  • ತೋಳ ಚಂದ್ರಗ್ರಹಣದ ಎಫೆಕ್ಟ್- ವಾತಾವರಣದಲ್ಲಿ ಭಾರೀ ಬದಲಾವಣೆ

    ತೋಳ ಚಂದ್ರಗ್ರಹಣದ ಎಫೆಕ್ಟ್- ವಾತಾವರಣದಲ್ಲಿ ಭಾರೀ ಬದಲಾವಣೆ

    ಬೆಂಗಳೂರು: ಕಳೆದ ವರ್ಷದ ಕೊನೆಯಲ್ಲಿ ಸೂರ್ಯಗ್ರಹಣ ಈ ವರ್ಷದ ಆರಂಭದಲ್ಲಿ ಚಂದ್ರಗ್ರಹಣ. ಹದಿನೈದು ದಿನಗಳ ಅಂತರದಲ್ಲಿ ಬಂದ ಈ ಎರಡು ಗ್ರಹಣಗಳು ವಾತಾವರಣದಲ್ಲಿ ಭಾರೀ ಬದಲಾವಣೆಗೆ ಕಾರಣವಾಗಿವೆ.

    ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮೈ ಕೊರೆವ ಚಳಿಯಿಂದ ಜನರು ಹೊರಗಡೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಬೆಳಗ್ಗೆ ಮೈಕೊರೆವ ಚಳಿ ಇದ್ದರೆ, ಮಧ್ಯಾಹ್ನದ ವೇಳೆ ಸೆಕೆ ಫೀಲ್ ಆಗುತ್ತೆ. ಸಂಜೆ ಹೊತ್ತಿಗೆ ಮತ್ತದೇ ರಣಭೀಕರ ಚಳಿ. ಹೀಗಾಗಿ ತೋಳ ಚಂದ್ರಗ್ರಹಣದಿಂದ ಹವಾಮಾನದಲ್ಲಿ ಮಹತ್ತರವಾದ ಬದಲಾವಣೆಯಾಗಿದೆ ಎನ್ನಲಾಗುತ್ತಿದೆ.

    ಚಂದ್ರಗ್ರಹಣದ ಬಳಿಕ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗೆ ಜ್ಯೋತಿಷಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಸೂರ್ಯಗ್ರಹಣವೇ ಕಾರಣ ಎನ್ನಲಾಗಿದೆ. ಈಗ ಚಂದ್ರಗ್ರಹಣದಿಂದ ಜಲ ಗಂಡಾಂತರ, ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇವೆ ಎಂದು ಹೇಳಲಾಗುತ್ತಿದೆ.

    ವಿಜ್ಞಾನಿಗಳ ಪ್ರಕಾರ, ರಾಜ್ಯದ ದಕ್ಷಿಣ ಕರಾವಳಿ, ಉತ್ತರ ಕರಾವಳಿ ಭಾಗ ಸೇರಿದಂತೆ ನಾನಾಕಡೆ ವಾತಾವರಣದಲ್ಲಿ ತೀವ್ರ ಬದಲಾವಣೆಗೆ ಕಾರಣವಾಗಿದ್ದು, ಸಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ದಿನೇ ದಿನೇ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು, ಮಕ್ಕಳು, ಮಹಿಳೆಯರು, ವಯಸ್ಸಾದವರು ಹೆಚ್ಚರ ವಹಿಸಿದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.

  • ಗ್ರಹಣದ ಬಳಿಕ ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆಯ ಸಿಂಚನ

    ಗ್ರಹಣದ ಬಳಿಕ ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆಯ ಸಿಂಚನ

    ಮಡಿಕೇರಿ: ಸೂರ್ಯಗ್ರಹಣವಾದ ಬಳಿಕ ಮಂಜಿನ ನಗರಿ ಮಡಿಕೇರಿಗೆ ಇಂದು ಸಂಜೆ ಮಳೆಯ ಸಿಂಚನವಾಗಿದೆ.

    ಇಂದು ಬೆಳಿಗ್ಗೆಯಿಂದಲೂ ಕೊಡಗಿನ ಬಹುತೇಕ ಕಡೆಗಳಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬಂದಿತ್ತು. ಹೆಚ್ಚಾಗಿ ಸೂರ್ಯಗ್ರಹಣ ಗೋಚರ ಕೊಡಗಿನ ಕುಟ್ಟ ಭಾಗದಲ್ಲಿ ಕಂಡು ಬರುತ್ತದೆ ಎಂದು ಖಗೋಳಶಾಸ್ತ್ರ ಅಧ್ಯಯನ ತಂಡದವರು ವಿದ್ಯಾರ್ಥಿಗಳು ಸೂರ್ಯಗ್ರಹಣ ವೀಕ್ಷಣೆ ಮಾಡಲು ಮುಂದಾಗಿದ್ದರು.

    ಅದರೆ ಬೆಳಿಗ್ಗೆ ಕುಟ್ಟ ಸಮೀಪದ ಕಾಯಿಮಾನಿ ಗ್ರಾಮದಲ್ಲಿ ಮಂಜುಮುಸುಕಿದ ವಾತಾವರಣ ಕಂಡುಬಂತು. ನಂತರ ಕುಟ್ಟ ಸಮೀಪದ ಎಸ್ಟೇಟ್ ನಲ್ಲಿ ಕೇವಲ ಮೂರು ನಿಮಿಷಗಳ ಕಾಲ ಶೇ.80ರಷ್ಟು ಮಾತ್ರ ಸೂರ್ಯ ಗ್ರಹಣ ಗೋಚರಿಸಿತ್ತು. ಸಂಜೆ ಸೂರ್ಯಸ್ತಮಾನದ ಸಮಯದಲ್ಲಿ ಮಡಿಕೇರಿ ನಗರದ ಸುತ್ತಮುತ್ತ ಕೆಲ ನಿಮಿಷಗಳ ಕಾಲ ಮಳೆಯ ಸಿಂಚನವಾಗಿದೆ.

    ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ಕೊನೆಯಲ್ಲಿ ಮಡಿಕೇರಿಯಲ್ಲಿ ಮಂಜು ಕವಿದು ಚಳಿಯ ವಾತಾವರಣ ಸೃಷ್ಟಿಯಾಗುತ್ತದೆ. ಚಳಿ ಹಾಗೂ ಮಂಜುಮುಸುಕಿದ ವಾತಾವರಣ ವನ್ನು ವೀಕ್ಷಿಸಲು ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. ಇಂದು ಮಂಜಿನಿಂದಾಗಿ ಮಡಿಕೇರಿ ಮನಮೋಹಕವಾಗಿ ಕಾಣುತ್ತಿತ್ತು. ಕಳೆದ ತಿಂಗಳಿನಿಂದ ಬಿಸಿಲಿನ ತಾಪದಿಂದ ಬಳಲಿದ್ದ ಮಂದಿ ಇದೀಗ ಚಳಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವಾಗಲೇ ಮಡಿಕೇರಿಯಲ್ಲಿ ಮಳೆಯ ಸಿಂಚನವಾಗಿದೆ.

  • ಸುಡು ಬಿಸಿಲಿನಿಂದ ದೂರಾಗಿ ಮಂಜಿನಗರಿಯಾದ ಗಡಿ ಜಿಲ್ಲೆ

    ಸುಡು ಬಿಸಿಲಿನಿಂದ ದೂರಾಗಿ ಮಂಜಿನಗರಿಯಾದ ಗಡಿ ಜಿಲ್ಲೆ

    ಬೀದರ್: ಸದಾ ಬಿಸಿಲಿನ ಬೆಗೆಯಿಂದ ಸುಡುತ್ತಿದ್ದ ಗಡಿ ಜಿಲ್ಲೆ ಬೀದರ್ ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಮಂಜಿನನಗರಿಯಾಗಿ ಬದಲಾಗಿದ್ದು, ಮೊದಲ ಬಾರಿಗೆ ಕೂಲ್ ವಾತಾವರಣ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ.

    ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಬೀದರ್ ಜಿಲ್ಲೆ ಮಂಜಿನಿಂದ ಆವರಿಸಿಕೊಂಡಿದೆ. ಯಾವಾಗಲೂ ಕೆಂಡದಂತ ಬಿಸಿಲಿನ ಬೇಗೆಗೆ ಸುಡುತ್ತಿದ್ದ ಜನರು ಇಂದು ಮಂಜಿನ ವಾತವಾರಣಕ್ಕೆ ಮನಸೋತ್ತಿದ್ದಾರೆ.

    ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ದಟ್ಟವಾದ ಮಂಜು ಕವಿದಿದ್ದು ಜನರು ಸುಂದರ ವಾತಾವರಣವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಚಳಿ ಗಡಿ ಜಿಲ್ಲೆಯಲ್ಲಿ ದಾಖಲಾಗಿದ್ದು, ಒಂದೆಡೆ ಜಿಲ್ಲೆ ಮಂಜಿನ ನಗರಿಯಾಗಿದೆ ಎಂದು ಜನರು ಖುಷಿ ಪಟ್ಟರೆ, ಇನ್ನೊಂದೆಡೆ ಚಳಿಗೆ ಹೈರಾಣಾಗಿದ್ದಾರೆ.

    ಶಬ್ಬಲ್ ಬರಿದ್, ಕೋಟೆ, ರಿಂಗ್ ರೋಡ್ ಸೇರಿದಂತೆ ಹಲವು ಕಡೆ ಜನರು ಹೆಚ್ಚಾಗಿ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದರು. ಆದರೆ ಇಂದು ದಟ್ಟವಾದ ಮಂಜು ಕವಿದಿರುವ ವಾತಾವರಣ ಇರುವ ಪರಿಣಾಮ ಜನರು ಮನೆಯಿಂದ ಹೊರಗೆ ಬಾದರೆ ಬೆಚ್ಚಗೆ ಕುಳಿತಿದ್ದಾರೆ.

  • ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

    ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

    ನವದೆಹಲಿ: ಅಮೆರಿಕ ಇಂಧನ ಇಲಾಖೆಯ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್’ ಅನ್ನು ಅಭಿವೃದ್ಧಿಪಡಿಸಿದೆ.

    ವಿಜ್ಞಾನದಲ್ಲಿನ ಆವಿಷ್ಕಾರಗಳಿಗೆ ಅಭೂತಪೂರ್ವ ಸಾಮಥ್ರ್ಯ ಇರುವ ಸೂಪರ್ ಕಂಪ್ಯೂಟರ್ ಗಳ ಅವಶ್ಯಕತೆ ಇದೆ. ಹಾಗಾಗಿ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ಸಮಿತ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದಿನ ಟೈಟಾನ್ ಸೂಪರ್ ಕಂಪ್ಯೂಟರ್ ಗಿಂತ 8 ಪಟ್ಟು ವೇಗವಾಗಿ ಸಮಿತ್ ಕೆಲಸ ನಿರ್ವಹಿಸುತ್ತದೆ.

    ಸಮಿತ್ ನ ಕಾರ್ಯನಿರ್ವಹಣಾ ಸಾಮರ್ಥ್ಯ 200 ಪೆಟಾ ಫ್ಲಾಪ್ಸ್ ಆಗಿದ್ದು 5 ವರ್ಷ ಹಿಂದಿನ ಚೈನಾದ 93 ಪೆಟಾ ಫ್ಲಾಪ್ಸ್ ಸಾಮಥ್ರ್ಯದ ತೈಹುಲೈಟ್ ಸೂಪರ್ ಕಂಪ್ಯೂಟರ್ ಅನ್ನು ಹಿಂದಿಕ್ಕಿದೆ. ವಿಜ್ಞಾನಿಗಳು ಸಮಿತ್ ಅನ್ನು ತಮ್ಮ ಜಿನೋಮ್ ಗಳ ಅಧ್ಯಯನದಲ್ಲಿ ಬಳಸಿದ್ದಾರೆ. ಹಿಂದಿನ ಸೂಪರ್ ಕಂಪ್ಯೂಟರ್ ಗಳಿಗಿಂತ ಕ್ಷಣಮಾತ್ರದಲ್ಲಿ ಲಕ್ಷಾಂತರ ಜಿನೋಮ್ ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

    ಆರೋಗ್ಯ, ಕೃತಕ ಬುದ್ಧಿಮತ್ತೆ, ಶಕ್ತಿ, ಹವಾಮಾನ, ಭೌತಶಾಸ್ತ್ರ ಹಾಗೂ ಇತರ ಸಂಶೋಧನ ಕ್ಷೇತ್ರಗಳಲ್ಲಿ ಬೇಕಾಗಿದ್ದ ನಂಬಲು ಅಸಾಧ್ಯವಾದ ಸೂಪರ್ ಕಂಪ್ಯೂಟರ್ ಸಮಿತ್ ಆಗಿದೆ. ಈ ಸಂಶೋಧನೆಗಳಿಂದ ಬ್ರಹ್ಮಾಂಡವನ್ನು ಇನ್ನೂ ಸರಿಯಾಗಿ ಅರ್ಥೈಸಬಹುದಾಗಿದ್ದು ಅಮೆರಿಕಾದ ಆರ್ಥಿಕ ವ್ಯವಸ್ಥೆಯನ್ನು ಇನ್ನೂ ಸ್ಪರ್ಧಾತ್ಮಕವಾಗಿಸುವುದರ ಜೊತೆಗೆ ಉತ್ತಮ ಭವಿಷ್ಯಕ್ಕೆ ಸಹಾಯವಾಗಲಿದೆ.

    4,608 ಸರ್ವರ್ ಗಳನ್ನು ಹೊಂದಿರುವ ಸಮಿತ್ 2 ಟೆನ್ನಿಸ್ ಕೋರ್ಟ್‍ಗಳ ಜಾಗವನ್ನು ತೆಗೆದುಕೊಳ್ಳಲಿದೆ. 9 ಸಾವಿರ 22-ಕೋರ್ ಐಬಿಎಂ ಪವರ್ 9 ಪ್ರೊಸೆಸರ್ ಗಳನ್ನು ಒಳಗೊಂಡಿದ್ದೂ 27 ಸಾವಿರಕ್ಕೂ ಹೆಚ್ಚು ಎನ್ವಿಡಿಯಾ ಟೆಸ್ಲಾ ವಿ100 ಗ್ರಾಫಿಕ್ ಪ್ರೊಸೆಸರ್ ಗಳನ್ನು ಹೊಂದಿದೆ. ಇಡೀ ವ್ಯವಸ್ಥೆಯನ್ನು ತಂಪಾಗಿಡಲು ಒಂದು ನಿಮಿಷಕ್ಕೆ 15 ಸಾವಿರ ಲೀಟರ್ ನಷ್ಟು ನೀರು ಬೇಕಾಗುತ್ತದೆ. 8100 ಮನೆಗಳು ಬಳಸುವಷ್ಟು ವಿದ್ಯುತ್ ಅನ್ನು ಸಮಿತ್ ಬಳಸುತ್ತದೆ.

    ಅಮೆರಿಕಾ, ಚೈನಾ ದೇಶಗಳಲ್ಲದೆ ಯುರೋಪ್, ಜಪಾನ್ ಹಾಗೂ ಇತರ ದೇಶಗಳ ನಡುವೆ ವೇಗದ ಸೂಪರ್ ಕಂಪ್ಯೂಟರ್ ತಯಾರು ಮಾಡಲು ಸ್ಪರ್ಧೆ ಏರ್ಪಟ್ಟಿದೆ. ಆರೋಗ್ಯ, ಪರಿಸರ ಕ್ಷೇತ್ರಗಳಲ್ಲದೆ ವಿಮಾನ ವಿನ್ಯಾಸ, ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲೂ ಸೂಪರ್ ಕಂಪ್ಯೂಟರ್ ಗಳನ್ನು ಬಳಸಲಾಗುತ್ತದೆ.

    ಕಂಪ್ಯೂಟರ್ ಸಾಮಥ್ರ್ಯ ಮತ್ತು ಫ್ಲಾಪ್ಸ್
    ಫ್ಲಾಪ್ಸ್ (FLOPS) ಎಂದರೆ ಕಂಪ್ಯೂಟರ್ ನ ಸಾಮರ್ಥ್ಯ ಅಳೆಯಲು ಬಳಸುವ ಮಾನದಂಡ. ಫ್ಲೋಟಿಂಗ್ ಪಾಯಿಂಟ್ ಆಪರೇಷನ್ಸ್ ಪರ್ ಸೆಕೆಂಡ್ (Floating Point Operations per Second) ಎಂಬುದು ಇದರ ವಿಸ್ತೃತ ರೂಪ. ಅಂದರೆ, ಒಂದು ಸೆಕೆಂಡ್ ಅವಧಿಯಲ್ಲಿ ಲೆಕ್ಕ ಮಾಡುವ ಕಂಪ್ಯೂಟರ್ ನ ಸಾಮರ್ಥ್ಯ. ಕಂಪ್ಯೂಟರ್ ನ ಕಾರ್ಯನಿರ್ವಹಣಾ ಸಾಮರ್ಥ್ಯ ಒಂದು ಪೆಟಾ ಫ್ಲಾಪ್ಸ್ ಇದ್ದರೆ ಆ ಕಂಪ್ಯೂಟರ್ ಒಂದು ಸೆಕೆಂಡ್‍ನಲ್ಲಿ ಸಾವಿರ ಲಕ್ಷಕೋಟಿಗಳಷ್ಟು ಲೆಕ್ಕಾಚಾರ ಮಾಡುವ ಸಾಮರ್ಥ್ಯ ಹೊಂದಿದೆ ಎಂದರ್ಥ.

  • ಬಿಸಿಲಿನ ತಾಪ ಹೆಚ್ಚಾಗಿದ್ದಕ್ಕೆ ವಿಮಾನ ಹಾರಾಟವೇ ರದ್ದಾಯ್ತು!

    ಬಿಸಿಲಿನ ತಾಪ ಹೆಚ್ಚಾಗಿದ್ದಕ್ಕೆ ವಿಮಾನ ಹಾರಾಟವೇ ರದ್ದಾಯ್ತು!

    ವಾಷಿಂಗ್ಟನ್: ನಿಲ್ದಾಣಗಳಲ್ಲಿ ಮಂಜು ಹೆಚ್ಚಿದ್ದರೆ ವಿಮಾನಗಳು ಲ್ಯಾಂಡ್ ಆಗದೇ ಇರುವುದನ್ನು ನೀವು ಈ ಹಿಂದೆ ಓದಿರಬಹುದು. ಆದರೆ ಈಗ ಬಿಸಿಲು ಜಾಸ್ತಿಯಾದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ಅಮೆರಿಕದಲ್ಲಿ ರದ್ದುಮಾಡಲಾಗಿದೆ.

    ಹೌದು, ಅಮೆರಿಕ ದೇಶದ ರಾಜ್ಯವಾದ ಅರಿಜೋನಾದ ರಾಜಧಾನಿ ಫೀನಿಕ್ಸ್ ನಲ್ಲಿ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

    ಫಿನಿಕ್ಸ್ ನಲ್ಲಿ ಮಂಗಳವಾರ 49 ಡಿಗ್ರಿ ಸೆಲ್ಸಿಯಸ್ ದಾಖಲಾದ ಹಿನ್ನೆಲೆಯಲ್ಲಿ ವಿಮಾನಯಾನ ಕಂಪೆನಿಗಳು ಹಾರಾಟವನ್ನು ಸ್ಥಗಿತಗೊಳಿಸಿದೆ. ಬಂಬಾರ್ಡಿಯರ್ ಸಿಆರ್‍ಜಿ ವಿಮಾನಗಳು ಗರಿಷ್ಠ 48 ಡಿಗ್ರಿ ಸೆಲ್ಸಿಯಸ್ ನಲ್ಲಿ ಹಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಈ ಸಂಸ್ಥೆಯ 40 ವಿಮಾನಗಳ ಹಾರಾಟ ರದ್ದಾಗಿದೆ.

    ದೊಡ್ಡ ವಿಮಾನಗಳಾದ ಬೋಯಿಂಗ್ 747 ಮತ್ತು ಏರ್‍ಬಸ್ ಎ320 ಗಳು ಗರಿಷ್ಠ 52 ಡಿಗ್ರಿ ಸೆಲ್ಸಿಯಸ್ ನಲ್ಲಿ ಹಾರಾಟ ಮಾಡುವ ಸಾಮರ್ಥ್ಯ ಇರುವ ಕಾರಣ ಈ ವಿಮಾನಗಳು ಈ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿವೆ.

    ಯಾಕೆ ವಿಮಾನ ಹಾರಲ್ಲ:
    ವಾತಾವರಣದ ಉಷ್ಣಾಂಶ ಸಾಧಾರಣವಾಗಿದ್ದರೆ ವಿಮಾನಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಎತ್ತರದಲ್ಲಿ ಹಾರಾಟ ನಡೆಸುವುದರಿಂದ ಬಿಸಿಲಿನ ತಾಪ ಮತ್ತು ಎಂಜಿನ್ ನಿಂದ ಉತ್ಪಾದನೆಯಾಗುವ ಶಾಖವನ್ನು ವಿಮಾನ ತಡೆದುಕೊಳ್ಳಬೇಕಾಗುತ್ತದೆ. ಉಷ್ಣಾಂಶ ತಡೆದುಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚಿನ ಸೆಲ್ಸಿಯಸ್ ಇದ್ದರೆ ಎಂಜಿನ್ ಮತ್ತು ವಾತಾವರಣದ ಉಷ್ಣತೆ ಎರಡನ್ನೂ ನಿಯಂತ್ರಿಸುವುದು ಕಷ್ಟವಾಗುತ್ತದೆ. ಅದರಲ್ಲೂ ಫುಲ್ ಟ್ಯಾಂಕ್ ಇಂಧನ ತುಂಬಿದ್ದರೆ ವಿಮಾನಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

    https://twitter.com/VanessaR12News/status/877341854101929985

    https://twitter.com/BiologistDan/status/877215847407902721