Tag: weather

  • ರಾಜ್ಯದ ಹವಾಮಾನ ವರದಿ 23-05-2025

    ರಾಜ್ಯದ ಹವಾಮಾನ ವರದಿ 23-05-2025

    ಮೇ 26ರ ರವರಿಗೆ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮುಂದಿನ 5 ದಿನ ಆರೆಂಜ್ ಅಲರ್ಟ್ ಜಾರಿಯಾಗಿದ್ದು ಗಾಳಿ ಸಹಿತ ಮಳೆಯಾಗಲಿದೆ. ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-22
    ಮಂಗಳೂರು: 28-25
    ಶಿವಮೊಗ್ಗ: 27-22
    ಬೆಳಗಾವಿ: 24-22
    ಮೈಸೂರು: 30-22

    ಮಂಡ್ಯ: 29-22
    ಮಡಿಕೇರಿ: 26-20
    ರಾಮನಗರ: 28-22
    ಹಾಸನ: 26-20
    ಚಾಮರಾಜನಗರ: 31-22
    ಚಿಕ್ಕಬಳ್ಳಾಪುರ: 28-22

    ಕೋಲಾರ: 29-23
    ತುಮಕೂರು: 28-22
    ಉಡುಪಿ: 28-26
    ಕಾರವಾರ: 29-28
    ಚಿಕ್ಕಮಗಳೂರು: 24-19
    ದಾವಣಗೆರೆ: 28-23

    ಹುಬ್ಬಳ್ಳಿ: 25-23
    ಚಿತ್ರದುರ್ಗ: 28-23
    ಹಾವೇರಿ: 28-24
    ಬಳ್ಳಾರಿ: 32-25
    ಗದಗ: 27-23
    ಕೊಪ್ಪಳ: 30-24

    ರಾಯಚೂರು: 33-26
    ಯಾದಗಿರಿ: 32-25
    ವಿಜಯಪುರ: 29-23
    ಬೀದರ್: 30-24
    ಕಲಬುರಗಿ: 29-24
    ಬಾಗಲಕೋಟೆ: 29-24

  • ರಾಜ್ಯದ ಹವಾಮಾನ ವರದಿ 22-05-2025

    ರಾಜ್ಯದ ಹವಾಮಾನ ವರದಿ 22-05-2025

    ರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಒಂದು ವಾರ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಬೆಂಗಳೂರಿಗೆ ಮತ್ತೆ ಮಹಾ ಮಳೆಯ ಮುನ್ಸೂಚನೆ ಸಿಕ್ಕಿದ್ದು ಇಂದು ಯೆಲ್ಲೋ ಅಲರ್ಟ್ ಜಾರಿಯಾಗಿದೆ. ರಾಜ್ಯಕ್ಕೆ ಮೇ 27ಕ್ಕೆ ಮುಂಗಾರು ಪ್ರವೇಶವಾಗಲಿದೆ. ಮುಂಗಾರು ಪ್ರವೇಶಕ್ಕೆ ಮುನ್ನವೇ ಕರ್ನಾಟಕದಲ್ಲಿ ಭಾರೀ ಮಳೆ ಸುರಿಯುತ್ತಿದೆ.

    ಇಂದು ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಜಾರಿಯಾಗಿದ್ದು, ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 28-21
    ಮಂಗಳೂರು: 29-24
    ಶಿವಮೊಗ್ಗ: 28-22
    ಬೆಳಗಾವಿ: 26-22
    ಮೈಸೂರು: 31-22

    ಮಂಡ್ಯ: 31-22
    ಮಡಿಕೇರಿ: 27-20
    ರಾಮನಗರ: 29-22
    ಹಾಸನ: 27-20
    ಚಾಮರಾಜನಗರ: 31-22
    ಚಿಕ್ಕಬಳ್ಳಾಪುರ: 29-21

    ಕೋಲಾರ: 30-22
    ತುಮಕೂರು: 28-21
    ಉಡುಪಿ: 29-24
    ಕಾರವಾರ: 31-27
    ಚಿಕ್ಕಮಗಳೂರು: 26-19
    ದಾವಣಗೆರೆ: 29-23

    ಹುಬ್ಬಳ್ಳಿ: 27-23
    ಚಿತ್ರದುರ್ಗ: 28-22
    ಹಾವೇರಿ: 29-24
    ಬಳ್ಳಾರಿ: 31-24
    ಗದಗ: 28-23
    ಕೊಪ್ಪಳ: 30-23

    ರಾಯಚೂರು: 33-24
    ಯಾದಗಿರಿ: 32-24
    ವಿಜಯಪುರ: 30-23
    ಬೀದರ್: 29-24
    ಕಲಬುರಗಿ: 31-24
    ಬಾಗಲಕೋಟೆ: 31-23

  • ರಾಜ್ಯದ ಹವಾಮಾನ ವರದಿ 21-05-2025

    ರಾಜ್ಯದ ಹವಾಮಾನ ವರದಿ 21-05-2025

    ಮೇ 22 ರಂದು ಕರ್ನಾಟಕದ ಕರಾವಳಿ ಬಳಿ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ. ಹೀಗಾಗಿ ಮೇ 23ರವರೆಗೂ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಇಂದು ರಾಜ್ಯದ ಕರಾವಳಿ ಭಾಗ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗುವ ಸಂಭವವಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-21
    ಮಂಗಳೂರು: 29-24
    ಶಿವಮೊಗ್ಗ: 26-22
    ಬೆಳಗಾವಿ: 26-22
    ಮೈಸೂರು: 31-22

    ಮಂಡ್ಯ: 30-22
    ಮಡಿಕೇರಿ: 26-20
    ರಾಮನಗರ: 29-22
    ಹಾಸನ: 26-20
    ಚಾಮರಾಜನಗರ: 31-22
    ಚಿಕ್ಕಬಳ್ಳಾಪುರ: 27-21

    ಕೋಲಾರ: 27-22
    ತುಮಕೂರು: 28-21
    ಉಡುಪಿ: 28-25
    ಕಾರವಾರ: 30-27
    ಚಿಕ್ಕಮಗಳೂರು: 23-19
    ದಾವಣಗೆರೆ: 27-23

    ಹುಬ್ಬಳ್ಳಿ: 27-22
    ಚಿತ್ರದುರ್ಗ: 26-22
    ಹಾವೇರಿ: 26-23
    ಬಳ್ಳಾರಿ: 28-24
    ಗದಗ: 26-22
    ಕೊಪ್ಪಳ: 27-23

    ರಾಯಚೂರು: 31-24
    ಯಾದಗಿರಿ: 31-24
    ವಿಜಯಪುರ: 29-23
    ಬೀದರ್: 32-24
    ಕಲಬುರಗಿ: 31-24
    ಬಾಗಲಕೋಟೆ: 37-23

  • ಮುಂದಿನ 3 ಗಂಟೆಯಲ್ಲಿ ಬೆಂಗಳೂರು ಸೇರಿದಂತೆ 5 ಜಿಲ್ಲೆಗಳಲ್ಲಿ ಭಾರೀ ಮಳೆ

    ಮುಂದಿನ 3 ಗಂಟೆಯಲ್ಲಿ ಬೆಂಗಳೂರು ಸೇರಿದಂತೆ 5 ಜಿಲ್ಲೆಗಳಲ್ಲಿ ಭಾರೀ ಮಳೆ

    ಬೆಂಗಳೂರು: ಮುಂದಿನ 3 ಗಂಟೆಗಳಲ್ಲಿ ರಾಜ್ಯ ಐದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ (IMDD) ಮುನ್ಸೂಚನೆ ನೀಡಿದೆ.

    ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ (Yellow Alert) ಜಾರಿಯಾಗಿದೆ. ಇದನ್ನೂ ಓದಿ: ಬೆಳಗಾವಿ | ಯೋಧನ ಅಂತ್ಯಸಂಸ್ಕಾರಕ್ಕೆ ಜಾಗ ಕೇಳಿದ್ದಕ್ಕೆ ಲಾಠಿಚಾರ್ಜ್ – ಗ್ರಾಮಸ್ಥರ ಆಕ್ರೋಶ

    ಕರಾವಳಿ ಜಿಲ್ಲೆಗಳಲ್ಲಿ ಎಡೆಬಿಡದೇ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ರಾತ್ರಿಯಿಂದಶಲೇ ಮಳೆ ಸುರಿಯುತ್ತಿದ್ದು ಬೆಳಗ್ಗೆಯೂ ಮುಂದುವರಿದಿದೆ. ನಗರದ ಹಲವು ಕಡೆ ಮಳೆಯಾಗುತ್ತಿದ್ದು ಬೆಳ್ಳಂಬೆಳಗ್ಗೆ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.

    ಮೇ 22 ರಂದು ಕರ್ನಾಟಕದ ಕರಾವಳಿ ಬಳಿ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ. ಹೀಗಾಗಿ ಮೇ 23ರವರೆಗೂ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ.

    ಗಾಳಿ ವೇಗ 40 ಕಿ.ಮೀ ಇರುವ ಸಾಧ್ಯತೆಯಿದ್ದು ಬೆಂಗಳೂರಿಗೆ ಇಂದು ಯಲ್ಲೋ ಅಲರ್ಟ್ ಜಾರಿಯಾಗಿದ್ದು ಗುಡುಗು ಮಿಂಚು ಸಹಿತ ಜೋರು ಮಳೆಯ ಸಾಧ್ಯತೆಯಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಜಾರಿಯಾಗಿದೆ.

    ಇಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್​ ಘೋಷಣೆಯಾಗಿದೆ.

  • ರಾಜ್ಯದ ಹವಾಮಾನ ವರದಿ 20-05-2025

    ರಾಜ್ಯದ ಹವಾಮಾನ ವರದಿ 20-05-2025

    ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂದಿನ ಒಂದು ವಾರ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಗೆ ಇಂದಿನಿಂದ ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಿದ್ದು, ನಂತರದ ನಾಲ್ಕು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಉತ್ತರ, ದಕ್ಷಿಣ ಒಳನಾಡಿಗೆ ಇಂದಿನಿಂದ ಮೂರು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗುವ ಸಂಭವವಿದ್ದು, ಯಲ್ಲೋ ಅಲರ್ಟ್ ಘೊಷಿಸಲಾಗಿದೆ. ಜೋರು ಮಳೆ ಜೊತೆ ಗುಡುಗು ಸಿಡಿಲಿನ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಬಳ್ಳಾರಿ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಗದಗ, ಕೊಪ್ಪಳ, ವಿಜಯಪುರ, ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 26-22
    ಮಂಗಳೂರು: 28-25
    ಶಿವಮೊಗ್ಗ: 26-22
    ಬೆಳಗಾವಿ: 27-22
    ಮೈಸೂರು: 29-22

    ಮಂಡ್ಯ: 39-22
    ಮಡಿಕೇರಿ: 25-20
    ರಾಮನಗರ: 27-22
    ಹಾಸನ: 26-20
    ಚಾಮರಾಜನಗರ: 29-22
    ಚಿಕ್ಕಬಳ್ಳಾಪುರ: 26-22

    ಕೋಲಾರ: 26-22
    ತುಮಕೂರು: 25-22
    ಉಡುಪಿ: 28-25
    ಕಾರವಾರ: 30-26
    ಚಿಕ್ಕಮಗಳೂರು: 24-19
    ದಾವಣಗೆರೆ: 27-23

    ಹುಬ್ಬಳ್ಳಿ: 28-23
    ಚಿತ್ರದುರ್ಗ: 27-22
    ಹಾವೇರಿ: 29-23
    ಬಳ್ಳಾರಿ: 30-24
    ಗದಗ: 28-23
    ಕೊಪ್ಪಳ: 28-23

    ರಾಯಚೂರು: 33-25
    ಯಾದಗಿರಿ: 33-24
    ವಿಜಯಪುರ: 33-23
    ಬೀದರ್: 33-24
    ಕಲಬುರಗಿ: 34-24
    ಬಾಗಲಕೋಟೆ: 32-23

  • ರಾಯಚೂರು | ಭಾರೀ ಮಳೆಗೆ ಟಿನ್ ಶೆಡ್ ಮನೆ ಕುಸಿದು ಮೂವರಿಗೆ ಗಾಯ

    ರಾಯಚೂರು | ಭಾರೀ ಮಳೆಗೆ ಟಿನ್ ಶೆಡ್ ಮನೆ ಕುಸಿದು ಮೂವರಿಗೆ ಗಾಯ

    – ಮೈಸೂರಿನಲ್ಲಿ ಮನೆ ಗೋಡೆ ಕುಸಿತ

    ಮೈಸೂರು/ರಾಯಚೂರು: ರಾಯಚೂರು(Raichur) ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು ನಾನಾ ಅವಾಂತರ ಸೃಷ್ಟಿಸಿದೆ. ಲಿಂಗಸುಗೂರು(Lingasugur) ತಾಲೂಕಿನ ಪರಾಂಪುರ ತಾಂಡಾದಲ್ಲಿ ಗಾಳಿಗೆ ಟಿನ್ ಶೆಡ್ ಮನೆ ಕುಸಿದು ಬಿದ್ದು ಮನೆಯಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ.

    ಟಿನ್ ಹಾರಿ ಹೋಗದಂತೆ ಇಟ್ಟಿದ್ದ ಸಿಮೆಂಟ್ ಇಟ್ಟಿಗೆಗಳು ಮೈ ಮೇಲೆ ಬಿದ್ದು ಗಾಯಗಳಾಗಿವೆ. ಪರಾಂಪುರ ತಾಂಡಾದ ನಾರಾಯಣ ಎಂಬುವರ ಟಿನ್ ಶೆಡ್ ಮನೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ನಾರಾಯಣ ಮತ್ತವರ ಮಗ ಉಮೇಶ್ ಹಾಗೂ ಮೊಮ್ಮಗ ಸಂದೀಪ್‌ಗೆ ಗಾಯಗಳಾಗಿವೆ. ಇದನ್ನೂ ಓದಿ: ಜನೌಷಧಿ ಕೇಂದ್ರಗಳ ಪುನರಾರಂಭಕ್ಕೆ ಸಂಸದ ಕಾರಜೋಳ ಆಗ್ರಹ

    ಗಾಯಾಳುಗಳನ್ನ ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರೆದಿದೆ. ಇದನ್ನೂ ಓದಿ: Bengauru Rains Photo Gallery – ಮತ್ತೆ ಮಳೆಯಾಗಿದೆ…!

    ಮೈಸೂರಿನ ಹಲವೆಡೆ ಧಾರಾಕಾರ ಮಳೆ:
    ಇನ್ನೂ ಮೈಸೂರಿನ(Mysuru) ಹಲವೆಡೆ ಧಾರಾಕಾರ ಮಳೆಯಾಗಿದ್ದು, ರಾತ್ರಿಯಿಡೀ ಸುರಿದ ಮಳೆಗೆ ಜಿಲ್ಲೆಯ ಹುಣಸೂರು(Hunasuru) ತಾಲೂಕು ಕೊಳಘಟ್ಟ ಗ್ರಾಮದ ಕರಗಮ್ಮ ಎಂಬುವವರಿಗೆ ಸೇರಿದ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದಿದೆ. ಮಧ್ಯರಾತ್ರಿ ಮನೆಯವರು ಮಲಗಿದ್ದ ವೇಳೆ ಗೋಡೆ ಕುಸಿದಿದ್ದು, ಕೂಡಲೇ ಮನೆಯವರು ಹೊರಬಂದಿದ್ದಾರೆ. ಹೊರ ಬರುತ್ತಿದ್ದಂತೆ ಮನೆಯ ಮೇಲ್ಛಾವಣಿಯೂ ಕುಸಿದಿದೆ. ಸದ್ಯ ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದು, ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.

  • Bengauru Rains Photo Gallery – ಮತ್ತೆ ಮಳೆಯಾಗಿದೆ…!

    Bengauru Rains Photo Gallery – ಮತ್ತೆ ಮಳೆಯಾಗಿದೆ…!

    ಮಳೆ ಅಂದ್ರೆ ಏನೋ ಹರುಷ, ಸಂಭ್ರಮ.. ಆದ್ರೆ ಹಳ್ಳಿಯಲ್ಲಿ ಮಳೆ ಅಂದ್ರೆ ಸಂಮೃದ್ಧಿ. ಬೇಸಿಗೆಯ ಬೇಗೆಯನ್ನು ತೊಲಗಿಸಿ ಭೂರಮೆಯ ಬಂಜೆತನವ ತೊಡೆದು, ಹಸಿರು ಸೀರೆಯನುಡಿಸುವ ಅಮೃತ ಸಿಂಚನ. ಮಳೆಯ ಬಗ್ಗೆ ಹೇಳುತ್ತಾ ಹೋದ್ರೆ ವರ್ಣಿಸಲು ಪದಗಳೇ ಸಾಲುವುದಿಲ್ಲ. ಮಕ್ಕಳನ್ನು ಬಿಟ್ಟರೆ ಮಳೆಯನ್ನು ಹೆಚ್ಚು ಇಷ್ಟಪಡುವ ಜೀವವೆಂದರೆ ಅದು ನಮ್ಮ ರೈತ. ಅನ್ನದಾತ ತನ್ನ ಅನ್ನ ಹುಟ್ಟಿಸುವ ಕಾಯಕ ನಡೆಸಲು ಮಳೆರಾಯನ ಕೃಪೆ ಬೇಕೇ ಬೇಕು. ನಾವು ಚಿಕ್ಕವರಿದ್ದಾಗ ಈ ಮಳೆಯ ಹಿಂದೆಯೂ ಒಂದೊಂದು ಕಥೆ ಇರೋದನ್ನ ಅಜ್ಜಿ-ತಾತನಿಂದ ಕೇಳಿರ್ತೀವಿ. ಆದ್ರೆ ಈ ಬೆಂಗಳೂರಿನಂತಹ ಮಹಾನಗರಗಳನ್ನು ನೋಡಿದಾಗ ಮಳೆ ಯಾಕಾದ್ರೂ ಬರುತ್ತದೋ ಅನ್ನಿಸುತ್ತೆ.

    ಬೆಂಗಳೂರಿನಲ್ಲಿ ಕಳೆದ ರಾತ್ರಿಯಿಡೀ ಸುರಿದ ಮಳೆ ಇಂದು ಮಧ್ಯಾಹ್ನದಿಂದ ಮತ್ತೆ ಶುರುವಾಗಿದೆ. ನಗರದ ಮೇಖ್ರಿ ಸರ್ಕಲ್, ಸದಾಶಿವನಗರ, ಶಿವಾಜಿನಗರ, ವಸಂತನಗರ, ಹೈಗ್ರೌಂಡ್ಸ್, ವಿಧಾನಸೌಧ, ಸೆಂಟ್ರಲ್ ಸಿಲ್ಕ್ ಬೋರ್ಡ್, ಚಾಮರಾಜಪೇಟೆ, ಕೆ.ಆರ್ ಮಾರ್ಕೆಟ್, ಮೆಜೆಸ್ಟಿಕ್, ಮೈಸೂರು ರೋಡ್, ವಿಜಯನಗರ, ರಾಜಾಜಿನಗರ, ಮಲ್ಲೇಶ್ವರಂ, ಮಹಾಲಕ್ಷ್ಮಿ ಲೇಔಟ್, ಶೇಷಾದ್ರಿಪುರಂ, ಚಿಕ್ಕಪೇಟೆ, ಅರಮನೆ ಮೈದಾನ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಅವಾಂತರ ಸೃಷ್ಟಿಯಾಗಿದೆ. ಮಳೇ ಬಂದು ರಸ್ತೆಯಲ್ಲಾ ನೀರು ತುಂಬಿಕೊಂಡರೂ ಯಾರೇ ಕೂಡಾಗಲಿ ಊರೇ ಹೋರಾಡಲಿ ಅನ್ನೋ ತರ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುವ ಜನ ಒಂದುಕಡೆಯಾದ್ರೆ, ಅವಾಂತರಕ್ಕೆ ಸಿಕ್ಕಿ ನಲುಗಿದವರನ್ನ ರಕ್ಷಿಸುವ ಕೆಲಸ ಮತ್ತೊಂದೆಡೆ ಮುಂದುವರಿದಿದೆ. ಇದಕ್ಕೆ ಸಂಬಂಧಿಸಿದ ಒಂದಿಷ್ಟು ಚಿತ್ರಗಳು ಕಣ್ಣಿಗೆ ಕಟ್ಟಿದಂತಿವೆ…. ಮುಂದೆ ನೋಡಿ…

  • ಮುಂದಿನ ನಾಲ್ಕು ದಿನ ರಾಜ್ಯಕ್ಕೆ ಮಳೆ ಎಚ್ಚರಿಕೆ – ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್

    ಮುಂದಿನ ನಾಲ್ಕು ದಿನ ರಾಜ್ಯಕ್ಕೆ ಮಳೆ ಎಚ್ಚರಿಕೆ – ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್

    ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಮತ್ತಷ್ಟು ಮಳೆಯಾಗುವ (Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ.

    ಬೆಂಗಳೂರಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಿದ್ದು, ರಾತ್ರಿ ಅಥವಾ ಸಂಜೆ ಬಳಿಕ ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ವರುಣನ ಅಬ್ಬರ – 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲೆಯ ಮಳೆ

    ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ತುಮಕೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: Bengaluru Rain| ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್ ಬಂದ್ – ಶಿವಾನಂದ ಸರ್ಕಲ್‌ ಅಂಡರ್‌ ಪಾಸ್‌ ಮುಳುಗಡೆ

    ಇಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ʻಆಪರೇಷನ್‌ ಸಿಂಧೂರʼವನ್ನ ಬಿಜೆಪಿ ರಾಜಕೀಯಗೊಳಿಸುತ್ತಿದೆ – ಕಾಂಗ್ರೆಸ್‌ ಆರೋಪ

  • ಬೆಂಗಳೂರಲ್ಲಿ ವರುಣನ ಅಬ್ಬರ – 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲೆಯ ಮಳೆ

    ಬೆಂಗಳೂರಲ್ಲಿ ವರುಣನ ಅಬ್ಬರ – 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲೆಯ ಮಳೆ

    ಬೆಂಗಳೂರು: ಭಾನುವಾರ ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವೆಡೆ ಧಾರಾಕಾರ ಮಳೆ (Rain) ಸುರಿದಿದ್ದು, ಬೆಂಗಳೂರು ನಗರದಾದ್ಯಂತ ದಾಖಲೆಯ ಮಳೆಯಾಗಿದೆ.

    ರಾತ್ರಿಯಿಂದ ಬೆಳಗ್ಗೆ 5:30ರವರೆಗೆ ನಗರ ವ್ಯಾಪ್ತಿಯಲ್ಲಿ 104 ಮಿ.ಮೀ ಮಳೆಯಾಗಿದೆ. ಕಳೆದ 10 ವರ್ಷದಲ್ಲಿ ಮೇ ತಿಂಗಳಲ್ಲಿ ದಾಖಲಾದ ಅತಿಹೆಚ್ಚು ಮಳೆ ಇದಾಗಿದೆ. ಭಾರೀ ಮಳೆಗೆ ರಸ್ತೆಗಳಲ್ಲಿ ನೀರು ನಿಂತಿದೆ. ಅಲ್ಲದೇ ನಗರದ ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: Bengaluru Rain| ಎಲೆಕ್ಟ್ರಾನಿಕ್‌ ಸಿಟಿ ಫ್ಲೈಓವರ್ ಬಂದ್ – ಶಿವಾನಂದ ಸರ್ಕಲ್‌ ಅಂಡರ್‌ ಪಾಸ್‌ ಮುಳುಗಡೆ

    ರಾಜ್ಯದಲ್ಲಿ ಅತಿಹೆಚ್ಚು ಮಳೆಯಾದ ಪ್ರದೇಶ:
    ಮಂಗಳ: ಚಾಮರಾಜನಗರ – 130ಮಿ.ಮೀ
    ಕೆಂಗೇರಿ: ಬೆಂಗಳೂರು – 124ಮಿ.ಮೀ
    ನಾರಾಯಣಪುರ: ರಾಮನಗರ – 115ಮಿ.ಮೀ
    ಸಂತೆಹಳ್ಳಿ: ಕೋಲಾರ – 96ಮಿ.ಮೀ
    ಸಿಂಧುವಳ್ಳಿ: ಮೈಸೂರು – 87ಮಿ.ಮೀ
    ಹೊಸಹಳ್ಳಿ: ಮಂಡ್ಯ – 77ಮಿ.ಮೀ

  • ರಾಜ್ಯದ ಹವಾಮಾನ ವರದಿ 18-05-2025

    ರಾಜ್ಯದ ಹವಾಮಾನ ವರದಿ 18-05-2025

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮಂಗಳೂರು, ಬೆಳಗಾವಿ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಗದಗ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ, ಚಿಕ್ಕಮಗಳೂರು, ಶಿವಮೊಗ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳಲ್ಲಿ ಬಿಸಿಲು ಮಳೆ ಆಟ ಮುಂದುವರಿಯಲಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 27-21
    ಮಂಗಳೂರು: 29-24
    ಶಿವಮೊಗ್ಗ: 28-22
    ಬೆಳಗಾವಿ: 29-22
    ಮೈಸೂರು: 30-22

    ಮಂಡ್ಯ: 27-22
    ಮಡಿಕೇರಿ: 27-20
    ರಾಮನಗರ: 28-22
    ಹಾಸನ: 26-20
    ಚಾಮರಾಜನಗರ: 29-22
    ಚಿಕ್ಕಬಳ್ಳಾಪುರ: 27-21

    ಕೋಲಾರ: 27-22
    ತುಮಕೂರು: 27-22
    ಉಡುಪಿ: 30-24
    ಕಾರವಾರ: 32-27
    ಚಿಕ್ಕಮಗಳೂರು: 28-19
    ದಾವಣಗೆರೆ: 29-23

    weather

    ಹುಬ್ಬಳ್ಳಿ: 30-23
    ಚಿತ್ರದುರ್ಗ: 28-22
    ಹಾವೇರಿ: 31-23
    ಬಳ್ಳಾರಿ: 33-24
    ಗದಗ: 31-23
    ಕೊಪ್ಪಳ: 32-24

    weather

    ರಾಯಚೂರು: 35-26
    ಯಾದಗಿರಿ: 34-24
    ವಿಜಯಪುರ: 33-24
    ಬೀದರ್: 34-24
    ಕಲಬುರಗಿ: 34-25
    ಬಾಗಲಕೋಟೆ: 32-24