Tag: Weather Bureau

  • ಇಂದು ಬೆಂಗಳೂರಿನಲ್ಲಿ ಬೀಳಲಿದೆ ಮಳೆ – ಭಾನುವಾರ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

    ಇಂದು ಬೆಂಗಳೂರಿನಲ್ಲಿ ಬೀಳಲಿದೆ ಮಳೆ – ಭಾನುವಾರ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?

    ಬೆಂಗಳೂರು: ಭಾನುವಾರ ಬೆಂಗಳೂರು (Bengaluru) ನಗರದಲ್ಲಿ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟ ಜನತೆಗೆ ಮಳೆರಾಯ (Rain) ತಂಪೆರಿದಿದ್ದಾನೆ. ಸೋಮವಾರ ಸಹ ನಗರದಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Weather Bureau) ತಿಳಿಸಿದೆ.

    ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜೂ.26 ರಿಂದ 29ರವರೆಗೆ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೇ ಬಲವಾದ ಗಾಳಿ ಬೀಸುವ ಸಾಧ್ಯತೆ ಇದ್ದು ಸಾರ್ವಜನಿಕರು ಎಚ್ಚರಿಕೆವಹಿಸುವಂತೆ ಇಲಾಖೆ ತಿಳಿಸಿದೆ.

    ನಗರದಲ್ಲಿ ಇಂದು ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದ್ದು, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರಲಿದೆ.

    ಬೆಂಗಳೂರಿನ ಎಲ್ಲೆಲ್ಲಿ ಎಷ್ಟು ಮಳೆ?
    ಪೀಣ್ಯ ಕೈಗಾರಿಕಾ ಪ್ರದೇಶ – 29.50 ಮಿ.ಮೀ
    ಬಾಗಲಗುಂಟೆ – 28.50 ಮಿ.ಮೀ
    ಶೆಟ್ಟಿಹಳ್ಳಿ – 27.50 ಮಿ.ಮೀ
    ದೊಡ್ಡಬಿದರೆ ಕಲ್ಲು – 25.50 ಮಿ.ಮೀ
    ನಂದಿನಿ ಲೇಔಟ್ ಮತ್ತು ನಾಗಪುರ – 21 ಮಿ.ಮೀ
    ಕೊಟ್ಟಿಗೆಪಾಳ್ಯ – 20.50 ಮಿ.ಮೀ
    ಹೆಗ್ಗನಹಳ್ಳಿ, ರಾಜಮಹಲ್ ಗುಟ್ಟಹಳ್ಳಿ – 18 ಮಿ.ಮೀ
    ಹೊರಮಾವು – 13.50 ಮಿ.ಮೀ
    ಹೆರೋಹಳ್ಳಿ – 13.50 ಮಿ.ಮೀ
    ದಯಾನಂದನಗರ, ರಾಜಾಜಿನಗರ – 13 ಮಿ. ಮೀ
    ಮಾರಪ್ಪಪಾಳ್ಯ, ವಿದ್ಯಾರಣ್ಯಪುರ – 11.50 ಮಿ.ಮೀ
    ಜಕ್ಕೂರು, ಯಲಹಂಕ – 10.50 ಮಿ.ಮೀ
    ಕೊಡಿಗೇಹಳ್ಳಿ, ಬಾಣಸವಾಡಿ – 10 ಮಿ.ಮೀ

  • ಕರಾವಳಿ ಗರಿಷ್ಠ ತಾಪಮಾನ ಇಳಿಕೆ ಸಾಧ್ಯತೆ – ಹೀಟ್ ವೇವ್ ಅಲರ್ಟ್ ವಾಪಸ್

    ಕರಾವಳಿ ಗರಿಷ್ಠ ತಾಪಮಾನ ಇಳಿಕೆ ಸಾಧ್ಯತೆ – ಹೀಟ್ ವೇವ್ ಅಲರ್ಟ್ ವಾಪಸ್

    ಬೆಂಗಳೂರು: ಕರಾವಳಿಯಲ್ಲಿ ಇಂದಿನಿಂದ ಗರಿಷ್ಠ ಉಷ್ಣಾಂಶ 2 ಡಿಗ್ರಿ ಸೆಲ್ಸಿಯಸ್‍ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ (Weather Bureau) ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ನೀಡಿದ್ದ ಬಿಸಿ ಗಾಳಿ ಎಚ್ಚರಿಕೆಯನ್ನು ಇಲಾಖೆ ಹಿಂಪಡೆದಿದೆ.

    ಕರಾವಳಿಯಲ್ಲಿ (Coastal Area) ಉಷ್ಣ ಅಲೆಯ ಪ್ರಭಾವ ಕಳೆದ ಎರಡು ದಿನದಿಂದ ಕಾಣಿಸಿಕೊಂಡಿತ್ತು. ಸಾಮಾನ್ಯವಾಗಿ ಉಂಟಾಗುವ ಹೀಟ್ ವೇವ್ (Heatwave) ಆಗಿರದೆ, ತಾಪಮಾನದ ದಿಢೀರ್ ಏರಿಕೆಯ ಪರಿಣಾಮ ಎಂದು ಇಲಾಖೆ ಎಚ್ಚರಿಸಿತ್ತು. ಇದನ್ನೂ ಓದಿ: ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ

     

    ಸಾಮಾನ್ಯವಾಗಿ ಏಪ್ರಿಲ್ -ಮೇ ತಿಂಗಳಲ್ಲಿ ಉಷ್ಣ ಅಲೆಯ ಪ್ರಮಾಣ ಹೆಚ್ಚಾಗಿ ತಾಪಮಾನ ಏರಿಕೆ ಕಾರಣವಾಗುತ್ತಿತ್ತು. ಕಳೆದ ಎರಡು ದಿನಗಳಿಂದ ಕರಾವಳಿ ಭಾಗದಲ್ಲಿ ಒಂದು ತಿಂಗಳ ಮುಂಚೆಯೇ ಆ ವಾತಾವರಣ ಉಂಟಾಗಿ ಇಲಾಖೆ ಉಷ್ಣ ಅಲೆಯ ಅಲರ್ಟ್ ನೀಡಿತ್ತು. ಆದರೆ ಉಷ್ಣಾಂಶ ಎರಡು ದಿನಗಳಿಗೆ ಸೀಮಿತಗೊಂಡು ಕಡಿಮೆಯಾಗಿದ್ದು ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಉಷ್ಣ ಅಲೆಯ ಪರಿಣಾಮ ಶನಿವಾರ ಉಷ್ಣತೆಯ ಅನುಭವ ಹೆಚ್ಚಾಗಿತ್ತು. ಮಂಗಳೂರಿನಲ್ಲಿ (Mangaluru) ಗರಿಷ್ಠ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್ (Celsius) ದಾಖಲಾಗಿದೆ. ಇದನ್ನೂ ಓದಿ: ಕೊರೋನಾ ಬಳಿಕ ದೇಶದಲ್ಲಿ ಫ್ಲೂ ಭೀತಿ- ಚಿಕಿತ್ಸೆ ಹೇಗೆ? ಏನು ಮಾಡಬೇಕು? ಏನು ಮಾಡಬಾರದು?