Tag: weapon

  • ಯುದ್ಧ ಪೀಡಿತ ಗಾಜಾ, ಸುಡಾನ್, ಉಕ್ರೇನ್‌ನಲ್ಲಿ ಆಯುಧವಾಗ್ತಿದೆ ಆಹಾರ!

    ಯುದ್ಧ ಪೀಡಿತ ಗಾಜಾ, ಸುಡಾನ್, ಉಕ್ರೇನ್‌ನಲ್ಲಿ ಆಯುಧವಾಗ್ತಿದೆ ಆಹಾರ!

    ಮುಖ್ಯಾಂಶಗಳು
    – ಆಹಾರ ಶಸ್ತ್ರಾಸ್ತ್ರೀಕರಣ
    – ಯುದ್ಧ ಪೀಡಿತ ಗಾಜಾ, ಸುಡಾನ್, ಉಕ್ರೇನ್‌ನಲ್ಲಿ ಅಸ್ತ್ರವಾದ ಆಹಾರ
    – ಉದ್ದೇಶಪೂರ್ವಕ ಆಹಾರ ಕೊರತೆ ಸೃಷ್ಟಿ
    – ಆಹಾರ ಪ್ರವೇಶ ನಿರ್ಬಂಧ
    – ಮಿಲಿಟರಿ ಸಂಘರ್ಷಕ್ಕಿಂತ ಹೆಚ್ಚಿನ ಜನ ಇದರಿಂದ ಸಾಯಬಹುದು ಎಂದ ತಜ್ಞರು 

    ಇಂದಿನ ದಿನಗಳಲ್ಲಿ ಬರಿ ಗನ್‌, ಯುದ್ಧ ಟ್ಯಾಂಕರ್‌, ಬಾಂಬ್‌, ಅಣ್ವಸ್ತ್ರಗಳನ್ನು ಬಳಸಿ ಮಾತ್ರ ಯುದ್ಧ ಮಾಡಲಾಗುತ್ತಿಲ್ಲ. ಅದು ಬದಲಾಗಿ ಹೊಸ ಹೊಸ ತಂತ್ರ, ಕುತಂತ್ರಗಳಿಗೂ ತಿರುಗಿದೆ. ಅದರಲ್ಲಿ ಆಹಾರ (Food) ಆಯುಧೀಕರಣವೂ ಒಂದು. ಹೌದು ಆಹಾರವನ್ನು ಆಯುಧೀಕರಿಸಲಾಗುತ್ತಿದೆ. ಇದಕ್ಕೆ ತಂತ್ರಜ್ಞಾನ, ಜಾಗತೀಕರಣ ಮತ್ತು ರಾಜಕೀಯ ಸಾಥ್‌ ಕೊಡುತ್ತಿದೆ. ಆಹಾರ ಹೇಗೆ ಯುದ್ಧದಲ್ಲಿ ಆಯುಧವಾಗಿ ಬಳಕೆಯಾಗುತ್ತಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. 

    ಏನಿದು ಆಹಾರ ಆಯುಧೀಕರಣ?
    ಆಹಾರ ಅಗ್ಗದ ಆಯುಧಗಳಲ್ಲಿ ಒಂದಾಗಿದೆ! ಆಹಾರದ ಆಯುಧೀಕರಣ (Weapon) ಎಂದರೆ ಉದ್ದೇಶಪೂರ್ವಕ ಆಹಾರದ ಕೊರತೆಯನ್ನು ಸೃಷ್ಟಿಸುವುದು. ಶತ್ರು  ದೇಶಕ್ಕೆ ಸರಬರಾಜಾಗುವ ಆಹಾರದ ಸಾಮಾಗ್ರಿಗಳನ್ನು ಪೂರೈಕೆ ಆಗದಂತೆ ನಿರ್ಬಂಧಿಸುವುದು. ಅಂದರೆ ಆಹಾರ ಸಾಮಾಗ್ರಿಗಳನ್ನು ತಲುಪದಂತೆ ನೆಲ, ಜಲ, ವಾಯು ಗಡಿಯನ್ನು, ಮಾರ್ಗಗಳನ್ನು ಮುಚ್ಚುವುದಾಗಿದೆ. ಇದು ಯುದ್ಧ ಭೂಮಿ ಮಾತ್ರವಲ್ಲದೇ ದೇಶದ ಒಳಗೆ ಇರುವ ಸಾವಿರಾರು, ಲಕ್ಷಾಂತರ ಜನರ ಸಾವಿಗೆ ಕಾರಣ ಆಗಬಹುದು. ಪ್ರಸ್ತುತ ಯುದ್ದ ಪೀಡಿತ ದೇಶಗಳಲ್ಲಿ ಹಸಿವಿನಿಂದಾಗಿ 12 ಕೋಟಿಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಸಾವಿರಾರು ಜನ ಸಾವಿಗೀಡಾಗಿದ್ದಾರೆ.

    ಸುಡಾನ್‌ನ್ನು ಸುಡುತ್ತಿರುವ ಹಸಿವು
    ಸುಡಾನ್‌ನಲ್ಲಿ ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಆಂತರಿಕ ಗಲಭೆಯಿಂದ ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಈ ಎರಡು ಪಡೆಗಳು ಜನರಿಗೆ ಒದಗಿಸುವ ಸಹಾಯವನ್ನು ನಿರ್ಬಂಧಿಸುತ್ತಿವೆ. ಅಲ್ಲದೇ ಆಹಾರ ಸರಬರಾಜು ಮಾಡುವ ವಾಹನಗಳನ್ನು ನಾಶಮಾಡುತ್ತಿವೆ. ಜನರ ಮೇಲೆ ದಾಳಿ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಚಾಡ್‌ನಂತಹ ನೆರೆಯ ದೇಶಗಳಿಗೆ ಅಲ್ಲಿನ ಜನ ಸಾಮೂಹಿಕ ವಲಸೆ ಬಂದಿದ್ದು, ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

    ಉಕ್ರೇನ್‌ ಕೃಷಿ ಭೂಮಿ ನಾಶ
    ಉಕ್ರೇನ್‌ನಲ್ಲಿ (Ukraine) ನಡೆಯುತ್ತಿರುವ ಯುದ್ಧ (War) ಆಹಾರ ಶಸ್ತ್ರಾಸ್ತ್ರೀಕರಣದ ವಾಸ್ತವವನ್ನು ಬಿಚ್ಚಿಟ್ಟಿದೆ. ಇದರ ಪರಿಣಾಮ ಒಮ್ಮೆ ಯುರೋಪಿನ ಬ್ರೆಡ್‌ಬಾಸ್ಕೆಟ್ ಆಗಿದ್ದ ಉಕ್ರೇನ್‌ನ ಕೃಷಿ ಭೂಮಿಯನ್ನು ಈಗ ಗಣಿಯನ್ನಾಗಿ ಪರಿವರ್ತಿಸಿ ದಿಗ್ಬಂಧನ ಮಾಡಲಾಗಿದೆ. ಜಾಗತಿಕ ಧಾನ್ಯ ಪೂರೈಕೆಯನ್ನು ಕಡಿತಗೊಳಿಸಲಾಗಿದೆ. ಇದೇ ರೀತಿಯ ತಂತ್ರಗಳು (Gaza) ಗಾಜಾದಲ್ಲಿ, ಹಮಾಸ್ ವಿರುದ್ಧ ಇಸ್ರೇಲ್ ಮಾಡಿದೆ. ಇಲ್ಲಿಗೆ ಆಹಾರ ಸಾಮಾಗ್ರಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

    ಇತಿಹಾಸದುದ್ದಕ್ಕೂ ನಡೆದು ಬಂದ ತಂತ್ರ
    ಆಹಾರವನ್ನು ಶಸ್ತ್ರಾಸ್ತ್ರವಾಗಿ ಬಳಸುವುದು ಹೊಸದೇನಲ್ಲ, ಲೆನಿನ್‌ಗ್ರಾಡ್ ಮುತ್ತಿಗೆ (1941–1944)  10 ಲಕ್ಷಕ್ಕಿಂತಲೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದರು. ಬ್ರಿಟಿಷ್ ನೀತಿಗಳಿಂದ 1943ರಲ್ಲಿ ಉಂಟಾದ ಬಂಗಾಳ ಕ್ಷಾಮವು ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿತ್ತು.

    ನೈಜೀರಿಯಾದ ಬಿಯಾಫ್ರಾನ್ ಯುದ್ಧದ ಸಮಯದಲ್ಲಿ (1967–1970), ಪ್ರತ್ಯೇಕತಾವಾದಿಗಳನ್ನು ದುರ್ಬಲಗೊಳಿಸಲು ಇದೇ ತಂತ್ರ ಬಳಸಲಾಗಿತ್ತು. 1990ರ ಬಾಲ್ಕನ್ ಯುದ್ಧದಲ್ಲಿ ಆಹಾರ ಸರಬರಾಜಿನಿಂದ ಕಡಿತಗೊಳಿಸಲಾಗಿತ್ತು.  

    ಅಂತರರಾಷ್ಟ್ರೀಯ ಕಾನೂನು ಹೇಳೋದೇನು?
    ವಿಶ್ವಸಂಸ್ಥೆ ಸ್ಥಾಪನೆಯಾದ ಬಳಿಕವೂ ಮಾನವ ನಿರ್ಮಿತ ಕ್ಷಾಮ ಮತ್ತು ಹಸಿವಿನಂತ ಬಿಕ್ಕಟ್ಟುಗಳನ್ನು ಪದೇ ಪದೇ ಎದುರಿಸಿದೆ. ಇದರ ನಡುವೆ ಆಹಾರವನ್ನು ತಡೆಹಿಡಿಯುವುದನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಮಾನವೀಯ ಸಹಾಯಕ್ಕೆ ಅಡ್ಡಿಪಡಿಸುವವರಿಗೆ ಶಿಕ್ಷೆ ವಿಧಿಸುವ ಅಂತರರಾಷ್ಟ್ರೀಯ ಕಾನೂನನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಆದರೂ ಇದರ ಜವಾಬ್ಧಾರಿ ಅಸ್ಪಷ್ಟವಾಗಿದೆ.

    1998 ರಲ್ಲಿ ಸ್ಥಾಪಿಸಲಾದ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ) ನಾಗರಿಕರನ್ನು ಉದ್ದೇಶಪೂರ್ವಕವಾಗಿ ಹಸಿವಿನಿಂದ ಬಳಲುವಂತೆ ಮಾಡುವುದನ್ನು ಅಪರಾಧವೆಂದು ಪರಿಗಣಿಸಿದೆ. 

    ಆಹಾರವನ್ನು ಆಯುಧವಾಗಿ ಬಳಸುವುದು ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಕಾನೂನುಬಾಹಿರ ಎಂದು CFR (ವಿದೇಶಾಂಗ ಮಂಡಳಿ) ಕಾನೂನು ತಜ್ಞ ವೆರ್ಜ್ ಮತ್ತು ಡೇವಿಡ್ ಶೆಫರ್ ವಾದಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು, ಆಹಾರ ಭದ್ರತೆಯನ್ನು ಕೇವಲ ಮಾನವೀಯ ಸಮಸ್ಯೆಯಾಗಿ ಮಾತ್ರವಲ್ಲದೇ ಭೌಗೋಳಿಕ ರಾಜಕೀಯವಾಗಿಯೂ ಪರಿಗಣಿಸಬೇಕಾಗಿದೆ. ಅಂತರರಾಷ್ಟ್ರೀಯ ವ್ಯವಹಾರಗಳ ಮೇಲೆ ಹೆಚ್ಚು ಪ್ರಭಾವ ಬೀರುವ ಬಿಕ್ಕಟ್ಟಿನ ಬಗ್ಗೆ ಮಿಲಿಟರಿ ಮತ್ತು ರಾಜತಾಂತ್ರಿಕ ನಾಯಕರು ಯೋಚಿಸುವ ಅಗತ್ಯವಿದೆ.

    CFR ಆಫ್ರಿಕಾ ತಜ್ಞೆ ಮಿಚೆಲ್ ಗೇವಿನ್, ರಾಜಕೀಯ ಕಾರಣಗಳಿಗಾಗಿ ಮುಗ್ಧ ನಾಗರಿಕರನ್ನು ಹಸಿವಿನಿಂದ ಸಾಯಿಸುವುದು ನಾಗರಿಕ ಸಮಾಜ ಒಪ್ಪುವಂತಹದ್ದಲ್ಲ. ಇದು ಮಾನವೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ವಾದಿಸಿದ್ದಾರೆ.

    ಆಹಾರದ ಶಸ್ತ್ರಾಸ್ತ್ರೀಕರಣ ಕೊನೆ ಇಂದಿನ ತುರ್ತು 
    2030ರ ವೇಳೆಗೆ ಶೂನ್ಯ ಹಸಿವಿನ ಗುರಿ ತಲುಪಲು ವಿಶ್ವಸಂಸ್ಥೆ 2015 ರಲ್ಲಿ ಪ್ರತಿಜ್ಞೆ ಮಾಡಿದೆ. ಈ ದಾರಿಯ ಪ್ರಗತಿ ಕುಂಠಿತವಾಗುತ್ತಿದೆ. ಮಾನವ ನಿರ್ಮಿತ ಹಸಿವು ತಡೆಗಟ್ಟಬೇಕಾಗಿರುವುದು ಇಂದಿನ ತುರ್ತಾಗಿ ನಡೆಯಬೇಕಾದ ಕೆಲಸವಾಗಿದೆ. ಯುದ್ಧ ಅಮಾನವೀಯ ಕೃತ್ಯವೆಂದು ಜಗತ್ತು ಗುರುತಿಸಬೇಕು, ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸುವ ಕಾರ್ಯವಿಧಾನಗಳನ್ನು ಬಲಪಡಿಸಬೇಕಿದೆ. 

  • 74 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್‌ – ಸ್ವದೇಶಿ ಗನ್‌ಗಳಿಂದ ಸೆಲ್ಯೂಟ್‌

    74 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್‌ – ಸ್ವದೇಶಿ ಗನ್‌ಗಳಿಂದ ಸೆಲ್ಯೂಟ್‌

    ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ (Republic Day) ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ (Made In India) ಆಗಿರಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರಿಗೆ ಇದೇ ಮೊದಲ ಬಾರಿಗೆ ದೇಶಿಯ ಕುಶಾಲುತೋಪಿನ ಗೌರವ ಸಿಗಲಿದೆ.

    ಇಷ್ಟು ವರ್ಷಗಳ ಕಾಲ ಗನ್ ಸೆಲ್ಯೂಟ್‍ಗೆ ಬ್ರಿಟೀಷರ ಕಾಲದ 25 ಪೌಂಡರ್ ಗನ್‍ಗಳನ್ನು ಭಾರತೀಯ ಸೇನೆ ಬಳಸುತ್ತಿತ್ತು. ಆದರೆ ಈ ಸಂಪ್ರದಾಯಕ್ಕೆ ಈಗ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಭಾರತದಲ್ಲೇ ದೇಶಿಯವಾಗಿ ತಯಾರಿಸಲಾದ ಫೀಲ್ಡ್ ಗನ್‍ಗಳಾದ 105 ಎಂಎಂ ಗನ್‍ಗಳನ್ನು ಬಳಸಿ ರಾಷ್ಟ್ರಪತಿಗೆ ಗನ್ ಸೆಲ್ಯೂಟ್ ಸಲ್ಲಿಸಲಾಗುತ್ತದೆ. ಇದನ್ನೂ ಓದಿ: ಕುರ್ಚಿ ತರಲು ವಿಳಂಬ – ಕಾರ್ಯಕರ್ತರಿಗೆ ಕಲ್ಲು ಎಸೆದ ತಮಿಳುನಾಡಿನ ಸಚಿವ

    ಈ ಬಗ್ಗೆ ಸೇನೆಯ ದೆಹಲಿ ವಿಭಾಗದ ಸಿಬ್ಬಂದಿ ಮುಖ್ಯಸ್ಥ ಮೇಜರ್ ಜನರಲ್ ಭವಾನಿ ಕುಮಾರ್ ಮಾಹಿತಿ ನೀಡಿದ್ದಾರೆ. ನಮ್ಮೆಲ್ಲ ಆಯುಧಗಳು ಸಂಪೂರ್ಣ ಸ್ವದೇಶಿ ನಿರ್ಮಿತ ಆಗುವ ದಿನಗಳು ದೂರವಿಲ್ಲ ಎಂದಿದ್ದಾರೆ.

    ಅಷ್ಟೇ ಅಲ್ಲದೇ ಪರೇಡ್‍ನಲ್ಲಿ ಕೇವಲ ಮೇಡ್ ಇನ್ ಇಂಡಿಯಾ ಶಸ್ತ್ರಾಸ್ತ್ರಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. ನೌಕಾ ಪಡೆಯ ಪದಾತಿ ದಳವನ್ನು ಮಹಿಳಾ ಸೇನಾಧಿಕಾರಿ, ಕರ್ನಾಟಕ ಮೂಲದ ಲೆಫ್ಟಿನೆಂಟ್ ಕಮಾಂಡರ್ ದಿಶಾ ಅಮೃತ್ ಮುನ್ನಡೆಸಲಿದ್ದಾರೆ. ಅಗ್ನಿವೀರರು ಪರೇಡ್‍ನಲ್ಲಿ ಮೊದಲ ಬಾರಿಗೆ ಭಾಗವಹಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪತ್ನಿಯ ನಡವಳಿಕೆ ಮೇಲೆ ಸಂಶಯಗೊಂಡು ಚೂಪಾದ ಆಯುಧದಿಂದ ಚುಚ್ಚಿಕೊಂದ ವೃದ್ಧ

    ಪತ್ನಿಯ ನಡವಳಿಕೆ ಮೇಲೆ ಸಂಶಯಗೊಂಡು ಚೂಪಾದ ಆಯುಧದಿಂದ ಚುಚ್ಚಿಕೊಂದ ವೃದ್ಧ

    ಲಕ್ನೋ: ವೃದ್ಧನೊಬ್ಬ ತನ್ನ ಪತ್ನಿಯ ನಡವಳಿಕೆಯ ಮೇಲೆ ಅನುಮಾನಗೊಂಡು ಅವರನ್ನು ಚೂಪಾದ ಆಯುಧದಿಂದ ಚುಚ್ಚಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯ ಅಸೋಥರ್ ಪ್ರದೇಶದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಲಲಿತಾ ದೇವಿ (66) ಕೊಲೆಗೀಡಾದ ವೃದ್ಧೆ. ಶಿವ ಬರನ್ (75) ಕೊಲೆಗೈದ ವೃದ್ಧ. ದಂಪತಿ ಈ ಒಂದು ವಿಚಾರಕ್ಕಾಗಿ ಕಳೆದ 5 ತಿಂಗಳಿಂದ ಜಗಳವಾಡುತ್ತಿದ್ದರು. ಈ ಹಿನ್ನೆಲೆ ಆರೋಪಿಯು ಲಲಿತಾ ಅವರನ್ನು ಕೊಲೆಗೈದಿದ್ದು, ವರಾಂಡಾದಲ್ಲಿ ಗ್ರಾಮಸ್ಥರು ವೃದ್ಧೆಯ ರಕ್ತವನ್ನು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ ಗ್ರಾಮಸ್ಥರು ಮಂಚದ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಂತ್ರಸ್ತೆಯ ಶವವನ್ನು ಕಂಡುಕೊಂಡಿದ್ದಾರೆ. ನಂತರದಲ್ಲಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

    ವಿಚಾರಣೆಯ ಸಮಯದಲ್ಲಿ ಆರೋಪಿ ವೃದ್ಧನು ತಪ್ಪೊಪ್ಪಿಕೊಂಡಿದ್ದಾನೆ. ತನಗೆ ಸ್ವಲ್ಪ ಸಮಯದಿಂದ ಲಲಿತಾಳ ನಡುವಳಿಕೆ ಬಗ್ಗೆ ಅನುಮಾನವಿತ್ತು. ಅವಳು ಹೊರಗಡೆ ಹೋದಾಗಲೆಲ್ಲಾ ಒಬ್ಬ ವ್ಯಕ್ತಿ ಜೊತೆ ತಿರುಗುತ್ತಿದ್ದಳು ಎಂದು ಬಹಿರಂಗಪಡಿಸಿದ್ದಾನೆ. ಈ ವಿಷಯದ ಬಗ್ಗೆ ಆಗಾಗ ವೃದ್ಧ ದಂಪತಿಯ ನಡುವೆ ಜಗಳಗಳು ನಡೆಯುತ್ತಿದ್ದವು. ಹಾಗಾಗಿ ಬುಧವಾರ ರಾತ್ರಿ ಲಲಿತಾ ಅವರು ವರಾಂಡಾದಲ್ಲಿ ಗಾಢ ನಿದ್ದೆಯಲ್ಲಿದ್ದಾಗ ಕೊಲೆ ಮಾಡಿದ್ದಾನೆ.ಇದನ್ನೂ ಓದಿ: ವಿಮಾನ ಪತನದ ಸ್ಥಳದಲ್ಲಿ 16 ಮೃತದೇಹ ಪತ್ತೆ- ಪ್ರಯಾಣಿಕರೆಲ್ಲರೂ ಮೃತಪಟ್ಟಿರುವ ಶಂಕೆ

    ಪೊಲೀಸ್ ಅಧೀಕ್ಷಕ (ಎಸ್‍ಪಿ), ರಾಜೇಶ್ ಕುಮಾರ್ ಸಿಂಗ್, ಆರೋಪಿಯು ತನ್ನ ಹೆಂಡತಿಯ ನಡುವಳಿಕೆಯ ಬಗ್ಗೆ ಅನುಮಾನ ಹೊಂದಿದ್ದಕ್ಕಾಗಿ ಹರಿತವಾದ ಆಯುಧದಿಂದ ಕೊಂದಿದ್ದಾನೆ. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

  • ಪೊಲೀಸರಿಂದ ಕೊಲೆಯ ಸಾಕ್ಷ್ಯಾಧಾರಗಳನ್ನು ಕದ್ದ ಕೋತಿ!

    ಪೊಲೀಸರಿಂದ ಕೊಲೆಯ ಸಾಕ್ಷ್ಯಾಧಾರಗಳನ್ನು ಕದ್ದ ಕೋತಿ!

    ಜೈಪುರ: ಕೊಲೆ ಮಾಡುವುದು ಅಪರಾಧ. ಕೊಲೆಗೆ ಸಹಕರಿಸುವುದು, ಸಾಕ್ಷ್ಯಾಧಾರಗಳನ್ನೇ ಕಳವು ಮಾಡಿ ಬಚ್ಚಿಡುವುದು, ಅದಕ್ಕಿಂತಲೂ ದೊಡ್ಡ ಅಪರಾಧ. ಆದರಿಲ್ಲಿ ಕೋತಿಯೊಂದು ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದ ಮುಖ್ಯ ಸಾಕ್ಷ್ಯಾಧಾರಗಳನ್ನೇ ಕದ್ದು ಪರಾರಿಯಾಗಿರುವ ಅಪರೂಪದ ಘಟನೆ ರಾಜಾಸ್ಥಾನದ ಜೈಪುರದಲ್ಲಿ ಬೆಳಕಿಗೆ ಬಂದಿದೆ.

    MONKEY (1)

    ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಸಾಕ್ಷ್ಯಾಧಾರಗಳನ್ನು ಹಾಜರುಪಡಿಸುವಂತೆ ಸೂಚನೆ ನೀಡಿದಾಗ ಆರೋಪಿಗಳು ಕೊಲೆಗೆ ಬಳಸಿದ್ದ ಚಾಕು ಹಾಗೂ ಇತರ 15 ಸಾಕ್ಷ್ಯಾಧಾರಗಳಿದ್ದ ಬ್ಯಾಗ್ ಅನ್ನು ಕೋತಿ ಕದ್ದಿರುವ ಸತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ತಹಶೀಲ್ದಾರ್ ಕಚೇರಿಯಲ್ಲೇ ಚಾಕುವಿನಿಂದ ಇರಿದು ವ್ಯಕ್ತಿ ಬರ್ಬರ ಕೊಲೆ

    ಯಾವ ಪ್ರಕರಣದ ಸಾಕ್ಷ್ಯ?: 2016ರಲ್ಲಿ ಶಶಿಕಾಂತ್ ಶರ್ಮಾ ಎಂಬ ವ್ಯಕ್ತಿಯು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಚಾಂದ್ವಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು, ಶವ ಪತ್ತೆಯಾದ ನಂತರ, ಮೃತರ ಸಂಬಂಧಿಕರು ಈ ಬಗ್ಗೆ ತನಿಖೆಗೆ ಒತ್ತಾಯಿಸಿ ಜೈಪುರ-ದೆಹಲಿ ಹೆದ್ದಾರಿಯಲ್ಲಿ ರಸ್ತೆತಡೆ ಪ್ರತಿಭಟನೆಯನ್ನೂ ನಡೆಸಿದ್ದರು. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ?

    MONKEY (1)

    ಇದರಿಂದ ತನಿಖೆ ಚುರುಕುಗೊಳಿಸಿದ್ದ ಪೊಲೀಸರು 5 ದಿನಗಳ ಹಿಂದೆಯಷ್ಟೇ ರಾಹುಲ್ ಕಂದೆರಾ ಮತ್ತು ಮೋಹನ್‌ಲಾಲ್ ಕಂದೇರಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಕೊಲೆ ಪ್ರಕರಣ ದಾಖಲಿಸಿ, ಇಬ್ಬರು ಆರೋಪಿಗಳನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಿತ್ತು. ಈ ಹೊತ್ತಿನಲ್ಲೇ ಆರೋಪಿಗಳಿಂದ ಸಂಗ್ರಹಿಸಲಾಗಿದ್ದ ಸಾಕ್ಷ್ಯಾಧಾರಗಳ ಬ್ಯಾಗ್‌ನ್ನು ಕೋತಿಯೊಂದು ಹೊತ್ತೊಯ್ದಿದೆ. ಕೊಲೆ ಮಾಡಲು ಬಳಸಿದ್ದ ಪ್ರಾಥಮಿಕ ಸಾಕ್ಷ್ಯವಾದ ಚಾಕು ಸಹ ಇದೇ ಬ್ಯಾಗ್‌ನಲ್ಲಿತ್ತು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಕ್ಷುಲ್ಲಕ ವಿಚಾರಕ್ಕೆ ಪತ್ನಿಯ ಕತ್ತು ಹಿಸುಕಿ ಕೊಲೆ?

    CRIME 2

    ಬ್ಯಾಗ್ ಕದ್ದದ್ದು ಹೇಗೆ?: ಕೊಲೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ಪೊಲೀಸರು ಕೊಲೆಗೆ ಬಳಸಿದ ಚಾಕು ಹಾಗೂ ಇತರ 15 ಮುಖ್ಯ ಸಾಕ್ಷ್ಯಾಧಾರಗಳನ್ನು ಬ್ಯಾಗ್‌ವೊಂದರಲ್ಲಿಟ್ಟಿದ್ದರು. ಮಲ್ಖಾನದಲ್ಲಿ (ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕೊಠಡಿ) ಸ್ಥಳಾವಕಾಶದ ಕೊರತೆ ಇದ್ದುದರಿಂದ ಬ್ಯಾಗ್ ಅನ್ನು ಮರದ ಕೆಳಗೆ ಇಡಲಾಗಿತ್ತು. ಈ ವೇಳೆ ಕೋತಿ ಅದನ್ನು ಹೊತ್ತಿಕೊಂಡು ಓಡಿಹೋಗಿದೆ. ನ್ಯಾಯಾಲಕ್ಕೆ ಸಾಕ್ಷ್ಯವನ್ನು ಹಾಜರುಪಡಿಸುವಂತೆ ಸೂಚನೆ ನೀಡಿದಾಗ ಪೊಲೀಸರು ಈ ವಿಷಯವನ್ನು ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

  • ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

    ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ: ಉಕ್ರೇನ್ ಅಧ್ಯಕ್ಷ

    ಕೀವ್: ಉಕ್ರೇನ್-ರಷ್ಯಾ ನಡುವೆ ಘನಘೋರ ಯುದ್ಧ ಮುಂದುವರಿದಿದೆ. ಈ ಮಧ್ಯೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಹೇಳಿರುವ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಉಕ್ರೇನ್‍ನಲ್ಲಿ ರಾಸಾಯನಿಕ ಮತ್ತು ಜೈವಿಕ ಆಯುಧಗಳಿಗೆ ಸಂಬಂಧಿಸಿದ ಪ್ರಯೋಗಗಳು ನಡೆಯುತ್ತಿವೆ. ಚೆರ್ನೋಬಿಲ್ ರಿಯಾಕ್ಟರ್‌ನಲ್ಲಿ  ಅಣು ಆಯುಧ ತಯಾರಿಸುತ್ತಿದೆ ಎಂಬ ಗಂಭೀರ ಆಪಾದನೆಯನ್ನು ರಷ್ಯಾ ಮಾಡಿದೆ. ಆದರೆ ಈ ಆರೋಪಗಳನ್ನು ಉಕ್ರೇನ್ ಅಧ್ಯಕ್ಷ ಝೆಲೆನ್‍ಸ್ಕಿ ತಳ್ಳಿ ಹಾಕಿದ್ದಾರೆ. ನಾನೊಬ್ಬ ಅಧ್ಯಕ್ಷ, ಆದರೆ ಅದಕ್ಕೂ ಮೊದಲು 2 ಮಕ್ಕಳ ತಂದೆ, ನಮ್ಮ ದೇಶದಲ್ಲಿ ಸಾಮೂಹಿಕ ನರಮೇಧಕ್ಕೆ ಸಂಬಂಧಿಸಿದ ಯಾವುದೇ ಶಸ್ತ್ರಾಸ್ತಗಳನ್ನು ಯಾವತ್ತಿಗೂ ತಯಾರಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    ಇದೇ ವೇಳೆ, ಕ್ರೆಮ್ಲಿನ್ ಆಧಾರಹಿತ ಆರೋಪಗಳನ್ನು ಅಮೆರಿಕ ಸೇರಿ ಹಲವು ದೇಶಗಳು ಖಂಡಿಸಿವೆ. ಆರೋಪ- ಪ್ರತ್ಯಾರೋಪಗಳ ನಡುವೆ ಉಕ್ರೇನ್‍ನ ಪ್ರಯೋಗಶಾಲೆಗಳಲ್ಲಿ ಇರುವ ತೀವ್ರ ಅಪಾಯ ಉಂಟು ಮಾಡುವ ಅಂಟುರೋಗಗಳ ಕ್ರಿಮಿಗಳನ್ನು ನಾಶಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.

    ರಷ್ಯಾ ದಾಳಿಯಿಂದ ಲ್ಯಾಬ್‍ಗಳು ಧ್ವಂಸವಾಗಿ, ಸಾಂಕ್ರಾಮಿಕ ರೋಗ ಹರಡಬಲ್ಲ ಕ್ರಿಮಿಗಳು ಹೊರಗೆ ಹಬ್ಬುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಎಚ್ಚರಿಕೆ ನೀಡಿದೆ. ಜನ-ಜಾನುವಾರುಗಳ ಮೇಲೆ ಈ ಕ್ರಿಮಿಗಳ ಪ್ರಭಾವ ಕಡಿಮೆ ಮಾಡುವ ಸಲುವಾಗಿ ಉಕ್ರೇನ್‍ನ ಹಲವು ಲ್ಯಾಬ್‍ಗಳಲ್ಲಿ ಪ್ರಯೋಗಗಳು ನಡೆಯುತ್ತಿದ್ದವು.

  • ಕುಡಿತ ಬಿಟ್ಟರೆ ಮಾತ್ರ ಮನೆಗೆ ಬರುತ್ತೇನೆ ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ

    ಕುಡಿತ ಬಿಟ್ಟರೆ ಮಾತ್ರ ಮನೆಗೆ ಬರುತ್ತೇನೆ ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ

    ವಿಜಯಪುರ: ಪಾಪಿ ಗಂಡನೊಬ್ಬ ಹೆಂಡತಿಯನ್ನು ಕೊಲೆಗೈದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ನಡೆದಿದೆ.

    ಶೀಲವಂತಿ ಕನ್ನಾಳ ಕೊಲೆಯಾದ ಪತ್ನಿ. ಪತಿ ಗುರುಬಾಳ ಕನ್ನಾಳನು ಹರಿತವಾದ ಆಯುಧದಿಂದ ಪತ್ನಿಗೆ ತಿವಿದು ಹತ್ಯೆಗೈದಿದ್ದಾನೆ. ಗಂಡನ ಕುಡಿತದ ಕಾರಣ ಸಂಸಾರದಲ್ಲಿ ಬಿರುಕು ಉಂಟಾಗಿತ್ತು. ಹೀಗಾಗಿ ಪತ್ನಿಯು ತನ್ನ ತವರು ಮನೆಯಲ್ಲಿದ್ದಳು. ಈ ಸಂದರ್ಭದಲ್ಲಿ ಅವನು ಹೆಂಡತಿಯ ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದನು. ಆಗ ಪತ್ನಿಯು ಕುಡಿತ ಬಿಟ್ಟರೆ ಮನೆಗೆ ಬರುವೆ ಅಂತ ಕರಾರು ಹಾಕಿದ್ದರು. ಇದನ್ನೂ ಓದಿ: ಫುಟ್‍ಪಾತ್ ಮೇಲೆ ಕಾರು ಚಾಲನೆ – ಅಪ್ರಾಪ್ತನ ಹುಚ್ಚಾಟಕ್ಕೆ ನಾಲ್ವರು ಬಲಿ

    ಪತ್ನಿಯ ಕರಾರಿಗೆ ಒಪ್ಪದ ಅವನು, ಶೀಲವಂತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆಯು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ED ದಾಳಿ ಬಿಜೆಪಿಯ ನೆಚ್ಚಿನ ಅಸ್ತ್ರ: ರಾಹುಲ್ ಗಾಂಧಿ

    ED ದಾಳಿ ಬಿಜೆಪಿಯ ನೆಚ್ಚಿನ ಅಸ್ತ್ರ: ರಾಹುಲ್ ಗಾಂಧಿ

    ನವದೆಹಲಿ: ಜಾರಿ ನಿರ್ದೇಶನಾಲಯದ(Enforcement Directorate​ raids) ದಾಳಿ ಬಿಜೆಪಿಯ ನೆಚ್ಚಿನ ಅಸ್ತ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ಬಿಜೆಪಿ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ದಾರೆ.

    ಮಂಗಳವಾರ ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರ ಸಂಬಂಧಿಕರ ಮನೆಯಲ್ಲಿ ನಡೆದ ದಾಳಿಯ ನಡೆದ ಬೆನ್ನಲ್ಲೆ, ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಡಿ ದಾಳಿ ನಡೆಸುವುದು ಬಿಜೆಪಿಯ ಅಚ್ಚುಮೆಚ್ಚಿನ ಅಸ್ತ್ರವಾಗಿದೆ. ಏಕೆಂದರೆ ಅವರಲ್ಲಿಯೇ ಮರೆಮಾಚಲು ವಿಷಯಗಳಿವೆ. ಅಂತಹ ದಾಳಿಗಳಿಗೆ ಪಕ್ಷವು ಹೆದರುವುದಿಲ್ಲ ಎಂದು ರಾಹುಲ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚರಣ್​ಜಿತ್ ಸಿಂಗ್ ಚೆನ್ನಿ ಸಂಬಂಧಿ ಮನೆಯ ಮೇಲೆ ಇಡಿ ದಾಳಿ

    ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಚರಣ್?ಜಿತ್ ಸಿಂಗ್ ಚೆನ್ನಿ ಅವರ ಸಂಬಂಧಿಕರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಮರಳು ದಂಧೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಭೂಪಿಂದರ್ ಸಿಂಗ್ ಹನಿ ಚರಣ್?ಜಿತ್ ಸಿಂಗ್ ಚೆನ್ನಿ ಸೋದರಳಿಯ ಆಗಿದ್ದಾರೆ. ಸದ್ಯ ಮೊಹಾಲಿ ಸೇರಿದಂತೆ ಪಂಜಾಬ್‍ನಲ್ಲಿ 10 ರಿಂದ 12 ಕಡೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದೆ. ಚುನಾವಣೆ ಸಮೀಪವಿರುವ ಸಂದರ್ಭದಲ್ಲಿ ನಡೆಸಿರುವ ಈ ದಾಳಿ ಇದೀಗ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:  ಟೆಲಿಪ್ರೊಂಪ್ಟರ್ ಕೂಡ ಇಷ್ಟೊಂದು ಸುಳ್ಳುಗಳನ್ನು ಹೇಳಲು ಸಾಧ್ಯವಿಲ್ಲ – ಮೋದಿ ವಿರುದ್ಧ ರಾಹುಲ್ ವ್ಯಂಗ್ಯ

    ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರ ಮನೆಯಿಂದ 4 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸಂದೀಪ್ ಕುಮಾರ್ ಎಂಬುವವರ ಮನೆಯಿಂದ 2 ಕೋಟಿ ರೂ. ಭೂಪಿಂದರ್ ಸಿಂಗ್ ಹನಿ ಅವರ ಮನೆ ಸೇರಿದಂತೆ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ.

     

  • ಭದ್ರಾವತಿಯಲ್ಲಿ ಶಿಲಾಯುಗದ ನಿಲಸುಗಲ್ಲು ಪತ್ತೆ

    ಭದ್ರಾವತಿಯಲ್ಲಿ ಶಿಲಾಯುಗದ ನಿಲಸುಗಲ್ಲು ಪತ್ತೆ

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸ ನಂಜಾಪುರ ಗ್ರಾಮದಲ್ಲಿ ಶಿಲಾಯುಗ ಕಾಲದ ನಿಲಸುಗಲ್ಲು ಪತ್ತೆಯಾಗಿದೆ. ನಿಲಸುಗಲ್ಲು ಮಾನವ ಪ್ರಥಮವಾಗಿ ಕಬ್ಬಿಣದ ಆಯುಧಗಳನ್ನು ಬಳಸಲು ಪ್ರಾರಂಭಿಸಿದಾಗ ಕಲ್ಲು ಬಂಡೆಗಳನ್ನು ಸೀಳಿ ಅದರಲ್ಲಿ ಚಪ್ಪಡಿ ರೀತಿ ಆಕೃತಿ ಕೊಟ್ಟು ಮಾಡಿದ ಕಲ್ಲಾಗಿದೆ. ಇದನ್ನು ಶಿಲಾಗೋರಿಗಳೆಂದು ಸಹ ಕರೆಯುತ್ತಾರೆ.

    7 ಅಡಿ ಎತ್ತರ ಇರುವ ಈ ಕಲ್ಲು ಶಿಲಾಯುಗದ ಸಂಸ್ಕೃತಿಯ ಸಂಕೇತವಾಗಿದೆ. ಇದನ್ನು ಸ್ಥಳೀಯರು ಪಾಂಡವರ ಮನೆ, ಪಾಂಡವರ ಕಲ್ಲು, ರಾಕ್ಷಸರ ಕಲ್ಲು, ಮೊರೆರ ಮನೆ, ಮೊರೆರ ಅಂಗಡಿ ಎಂದು ಕರೆಯುತ್ತಾರೆ. ಇವುಗಳಲ್ಲಿ ನಿಲುಸು ಕಲ್ಲುಗಳು, ಕಲ್ಪನೆ, ಕಲ್ಲುಪ್ಪೆಗಳು, ಕಲ್ಲು ವೃತ್ತಗಳು, ಅಸ್ಥಿ ಮಡಿಕೆಗಳು, ಶವ ಪೆಟ್ಟಿಗೆಗಳು, ಸಮಾಧಿ ದಿಬ್ಬ, ನೆಲಕೋಣೆ, ಹೆಡೆಕಲ್ಲು, ಮಾನವಾಕೃತಿಯ ಚಪ್ಪಡಿಕಲ್ಲು, ಸಮಾಧಿ, ನೆಲದಡಿ ಕಲ್ಲು ಗುಹೆಗಳು ಮೊದಲಾದ ಬೃಹತ್ ಶಿಲಾಗೋರಿಗಳು ಕಂಡು ಬರುತ್ತವೆ.

    ಈ ಸಂಸ್ಕೃತಿಯ ಜನರು ಜೀವಿಸುತ್ತಿದ್ದ ಪ್ರದೇಶಗಳನ್ನು ವಾಸ್ತವ್ಯದ ನೆಲೆಗಳೆಂದು ಹಾಗೂ ಶವಸಂಸ್ಕಾರದ ಕೇಂದ್ರಗಳನ್ನು ಗೋರಿ ಶವಸಂಸ್ಕಾರಕ ಕೇಂದ್ರಗಳನ್ನು ಗೋರಿ ನೆಲೆಗಳೆಂದು ಕರೆಯುತ್ತಾರೆ.

    ಇದು ನಿಲುಸುಗಲ್ಲಾಗಿದ್ದು, ಬೃಹತ್ ಶಿಲಾಯುಗದ ಮಾನವನು ಸಮಾಧಿ ಮಾಡುವಾಗ ಈ ರೀತಿ ನಿಲುಸುಗಲ್ಲನ್ನು ನೆನಪಿಗೆ ಸ್ಮಾರಕದ ರೀತಿ ನಿಲ್ಲಿಸುತ್ತಿದ್ದರು. ಇದರಲ್ಲಿ ಯಾವುದೇ ಕೆತ್ತನೆಯ ಕಲೆಯಾಗಲಿ ಇರುವುದಿಲ್ಲ. ಈ ಸಮಾಧಿಗಳು ಆಯಾ ಪ್ರದೇಶದಲ್ಲಿರುವ ನೈಸರ್ಗಿಕ ಶಿಲಾ ರಚನೆಗೆ ಅನುಸಾರವಾಗಿ ನಿರ್ಮಿತವಾಗಿರುತ್ತದೆ. ಹೊಸನಂಜಾಪುರದಲ್ಲಿ ದೊರೆತ ಶಿಲೆಯು ಕ್ರಿ.ಪೂ. 1200ರಿಂದ ಕ್ರಿ.ಶ 200 ಎಂದು ತಿಳಿದು ಬರುತ್ತದೆ.

    ಈ ರೀತಿಯ ಸಮಾಧಿಗಳು ಹೊಸನಗರದ ನಿಲುಗಲ್ಲು ಗ್ರಾಮದ ಹೊರ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ಜೊತೆಗೆ ಭದ್ರಾವತಿಯ ಆನವೇರಿ, ನಾಗಸಮುದ್ರ, ನಿಂಬೆಗೊಂದಿ, ವಡೇರಪುರ ಸೇರಿ ಇತರೆ ಕಡೆ ಪತ್ತೆಯಾಗಿದೆ. ಈ ನಿಲಸುಗಲ್ಲನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ನಿರ್ದೇಶಕರಾದ ಆರ್. ಶೇಜೇಶ್ವರ್ ಅವರು ಡಾ. ಮಧುಸೂಧನ್ ಹಾಗೂ ಡಾ.ಅನಿಲ್ ಅವರ ಸಹಾಯದೊಂದಿಗೆ ಪತ್ತೆ ಮಾಡಿದ್ದಾರೆ.

  • ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಸ್ಫೋಟಕ ಸುದ್ದಿ ಬಹಿರಂಗ!

    ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆಯಲ್ಲಿ ಸ್ಫೋಟಕ ಸುದ್ದಿ ಬಹಿರಂಗ!

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಎಸ್‍ಐಟಿ ಶಂಕಿತ ಆರೋಪಿಯೊಬ್ಬನನ್ನು ವಶಪಡಿಸಿಕೊಂಡು ವಿಚಾರಣೆ ಮಾಡಲಾಗುತ್ತಿದೆ. ಆದರೆ ವಿಚಾರಣೆಯಲ್ಲಿ ಶಂಕಿತ ಆರೋಪಿ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಾರೆ. ಹೀಗಾಗಿ ಆರೋಪಿಯ ಮಂಪರು ಪರೀಕ್ಷೆಗೆ ಕೋರ್ಟ್ ಆದೇಶಿಸಿದೆ.

    ವಿಚಾರಣೆಯಲ್ಲಿ ಮತ್ತೊಂದು ಸ್ಫೋಟಕ ಸ್ಟೋರಿ ಹೊರಗೆ ಬರುತ್ತಿದ್ದು, ಸಾಹಿತಿ ಕೆ.ಎಸ್.ಭಗವಾನ್ ಬಚಾವಾಗಿದ್ದು ಹೇಗೆ ಎಂದು ಬಾಯಿ ಬಿಟ್ಟಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಆದ್ರೆ ಭಗವಾನ್ ಕೊಲೆ ಮಾಡಲು ಸಾಧ್ಯವಾಗಿಲ್ಲ ಅಂತಾ ಹೇಳಿದ್ದಾನೆ ಎಂದು ತಿಳಿದು ಬಂದಿದೆ.

    ಭಗವಾನ್ ಅವರನ್ನು ಕೊಲೆ ಮಾಡಲು ಶ್ರೀರಂಗಪಟ್ಟಣದ ಅನಿಲ್ ಎಂಬುವನ ಮನೆಯಲ್ಲಿ ಟ್ರೈನಿಂಗ್ ಆಗಿತ್ತು. ಆದರೆ ಟ್ರೈನಿಂಗ್ ಮುಗಿಸಿಕೊಂಡಿದ್ದ ಆರೋಪಿಗಳು ಬೇರೊಂದು ವೆಪನ್ ಕೇಳಿದ್ದರು. ಭಗವಾನ್ ಕೊಲೆ ಮಾಡೋದಕ್ಕೆ ಈ ರಿವಾಲ್ವರ್ ಸೂಕ್ತ ಅಲ್ಲ ಎಂದು ಹೇಳಿ ಬೇರೆ ರಿವಾಲ್ವರ್ ಗಳನ್ನು ತರೋದಕ್ಕೆ ಸೂಚನೆ ನೀಡಿದ್ದರು. ಸರಿಯಾದ ಸಮಯದಲ್ಲಿ ರಿವಾಲ್ವರ್ ಅನ್ನು ಒದಗಿಸೋದಕ್ಕೆ ಆಗದೆ ಭಗವಾನ್ ಬಚಾವ್ ಆಗಿ ಹೋದ್ದರು. ಇನ್ನೂ ಗೋವಾದಲ್ಲಿ ಹಂತಕನನ್ನು ಸೆಲೆಕ್ಟ್ ಮಾಡಲಾಗಿತ್ತು ಎನ್ನಲಾಗಿದೆ.

  • ಲಾಂಗ್-ಮಚ್ಚು ಹಿಡಿದು ಬಾರ್‍ಗೆ ನುಗ್ಗಿ ಹಣ ದೋಚಿದ್ರು- ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

    ಲಾಂಗ್-ಮಚ್ಚು ಹಿಡಿದು ಬಾರ್‍ಗೆ ನುಗ್ಗಿ ಹಣ ದೋಚಿದ್ರು- ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

    ಬೆಂಗಳೂರು: ಲಾಂಗ್, ಮಚ್ಚು ಹಿಡಿದು ವೈನ್ ಶಾಪ್‍ಗೆ ನುಗ್ಗಿದ ದುಷ್ಕರ್ಮಿಗಳು ಕ್ಯಾಶಿಯರ್ ನನ್ನ ಬೆದರಿಸಿ ನಗದು ದೋಚಿರೋ ಘಟನೆ ಬೆಂಗಳೂರಿನ ಏರ್‍ಪೋರ್ಟ್ ರಸ್ತೆಯ ಗೊಲ್ಲಹಳ್ಳಿ ಗೇಟ್ ಬಳಿ ನಡೆದಿದೆ.

    ಹೈವೇಗಳಲ್ಲಿ ಬಾರ್ ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಗೊಲ್ಲಹಳ್ಳಿಯಲ್ಲಿ ಹೊಸದಾಗಿ ವೈನ್ಸ್ ಶಾಪ್‍ವೊಂದನ್ನು ತೆರೆಯಲಾಗಿತ್ತು. ಸೋಮವಾರ ರಾತ್ರಿ 10 ಘಂಟೆ ಸುಮಾರಿಗೆ ಮಂಕಿ ಕ್ಯಾಪ್ ಹಾಕಿಕೊಂಡು ಶಾಪ್ ಒಳಗೆ ನುಗ್ಗಿದ ದುಷ್ಕರ್ಮಿಗಳು ಲಾಂಗ್ ಬೀಸಿ ಕ್ಯಾಶಿಯರ್‍ನನ್ನ ಬೆದರಿಸಿದ್ದಾರೆ.

    ಬಳಿಕ ಕೌಂಟರ್‍ನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಬಾಗಲೂರು ಪೊಲೀಸರು ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    https://www.youtube.com/watch?v=2SBaDiDjJNI