Tag: Wealth Redistribution

  • ದೇಶವಾಸಿಗಳೇ ಎಚ್ಚರ, ಕಾಂಗ್ರೆಸ್‌ ನಿಮ್ಮ ಆಸ್ತಿ, ಚಿನ್ನದ ಮೇಲೆ ಕಣ್ಣಿಟ್ಟಿದೆ: ಮೋದಿ

    ದೇಶವಾಸಿಗಳೇ ಎಚ್ಚರ, ಕಾಂಗ್ರೆಸ್‌ ನಿಮ್ಮ ಆಸ್ತಿ, ಚಿನ್ನದ ಮೇಲೆ ಕಣ್ಣಿಟ್ಟಿದೆ: ಮೋದಿ

    – ನನ್ನ ಪ್ರಯತ್ನದಿಂದಾಗಿ ಹಜ್‌ ಕೋಟಾ ಹೆಚ್ಚಳವಾಗಿದೆ
    – ಮಾವೋವಾದಿ ಚಿಂತನೆಯನ್ನು ಜಾರಿಗೆ ತರಲು ಕಾಂಗ್ರೆಸ್‌ ಮುಂದಾಗಿದೆ

    ಲಕ್ನೋ: ಕಾಂಗ್ರೆಸ್ ಮತ್ತು INDIA ಮೈತ್ರಿಕೂಟವು ನಿಮ್ಮ ಗಳಿಕೆ ಮತ್ತು ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ಸಂಪತ್ತಿನ ಮರು ಹಂಚಿಕೆಯನ್ನು (Wealth Redistribution) ಉಲ್ಲೇಖಿಸಿ ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ದೇಶವಾಸಿಗಳನ್ನು ಎಚ್ಚರಿಸಲು ಬಯಸುತ್ತೇನೆ. ಕಾಂಗ್ರೆಸ್ ಮತ್ತು ಭಾರತ ಮೈತ್ರಿಕೂಟವು ನಿಮ್ಮ ಗಳಿಕೆ ಮತ್ತು ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟಿದೆ. INDIA ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ, ಯಾರು ಎಷ್ಟು ಸಂಪಾದಿಸುತ್ತಾರೆ ಎಂಬುದನ್ನು ಸಮೀಕ್ಷೆ ಮಾಡುತ್ತೇವೆ ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ  ಹೇಳಿದೆ ಎಂದು ಕಿಡಿಕಾರಿದರು.

    ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಭಾಷಣವನ್ನು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ರಾಜಕುಮಾರ ಅವರು ಸರ್ಕಾರ ರಚಿಸಿದರೆ, ಯಾರು ಎಷ್ಟು ಸಂಪಾದಿಸುತ್ತಾರೆ, ಎಷ್ಟು ಆಸ್ತಿ ಹೊಂದಿದ್ದಾರೆ ಮತ್ತು ಎಷ್ಟು ಮನೆ ಹೊಂದಿದ್ದಾರೆ ಎಂದು ಸಮೀಕ್ಷೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಅವರು ಸರ್ಕಾರವು ನಿಮ್ಮ ಆಸ್ತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ.  ಇದು ಮಾವೋವಾದಿ ಚಿಂತನೆ. ಇದು ಕಮ್ಯುನಿಸ್ಟರ ಚಿಂತನೆಯಾಗಿದ್ದು ಇದೇ ನೀತಿಯನ್ನು ಕಾಂಗ್ರೆಸ್ ಪಕ್ಷ ಮತ್ತು ಭಾರತ ಮೈತ್ರಿಕೂಟವು ಭಾರತದಲ್ಲಿ ಜಾರಿಗೆ ತರಲು ಬಯಸಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಈ ದೇಶ ಉಳಿಸುವ ವ್ಯಕ್ತಿ ಮೋದಿ ಒಬ್ಬರೇ – ಪ್ರಧಾನಿಗಳ ಗುಣಗಾನ ಮಾಡಿದ ದೊಡ್ಡಗೌಡರು

    ಹಜ್‌ ಕೋಟಾ ಹೆಚ್ಚಳ: ಹಿಂದೆ ಹಜ್ ಕೋಟಾ (Haj Quota) ಕಡಿಮೆ ಇದ್ದ ಕಾರಣ ಅಲ್ಲಿ ಸಾಕಷ್ಟು ಜಗಳ ನಡೆಯುತ್ತಿತ್ತು. ಲಂಚ (Corruption) ಜಾಸ್ತಿ ಇದ್ದ ಕಾರಣ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಹಜ್‌ಗೆ ಹೋಗುವ ಅವಕಾಶ ಸಿಗುತ್ತಿತ್ತು. ಭಾರತದಲ್ಲಿನ ನಮ್ಮ ಮುಸ್ಲಿಂ (Musilm) ಸಹೋದರ ಸಹೋದರಿಯರಿಗೆ ಹಜ್ ಕೋಟಾವನ್ನು ಹೆಚ್ಚಿಸುವಂತೆ ನಾನು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್‌ಗೆ ವಿನಂತಿಸಿದ್ದೆ. ಇದನ್ನೂ ಓದಿ: ಸಿಇಟಿ ಔಟ್ ಆಫ್ ಸಿಲಬಸ್ ಪ್ರಶ್ನೆ – ಕೊನೆಗೂ ಸಮಿತಿ ರಚಿಸಿದ ಸರ್ಕಾರ

    ಇಂದು ಭಾರತದ ಹಜ್ ಕೋಟಾವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ವೀಸಾ ನಿಯಮಗಳನ್ನು (Visa Rules) ಸಹ ಸುಲಭಗೊಳಿಸಲಾಗಿದೆ. ಸರ್ಕಾರ ಅತ್ಯಂತ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರು ಹಜ್‌ಗೆ ಒಬ್ಬರೇ ಹೋಗುತ್ತಿರಲಿಲ್ಲ. ಮೆಹ್ರಮ್ ಇಲ್ಲದೆ ಮಹಿಳೆಯರಿಗೆ ಹಜ್‌ಗೆ ಹೋಗಲು ಸರ್ಕಾರವು ಅವಕಾಶ ಮಾಡಿಕೊಟ್ಟಿದೆ.  ಹಜ್‌ಗೆ ಹೋಗುವ ಕನಸು ನನಸಾಗುವ ಸಾವಿರಾರು ಸಹೋದರಿಯರಿಂದ ನಾನು ಆಶೀರ್ವದಿಸುತ್ತಿದ್ದೇನೆ ಎಂದು ತಿಳಿಸಿದರು.

  • ಸಂಪತ್ತಿನ ಮರು ಹಂಚಿಕೆ: ಆರ್‌ಆರ್‌, ಕೆಕೆಆರ್‌ನಿಂದ 4 ಅಂಕ ತೆಗೆದು ಉಳಿದ ತಂಡಗಳಿಗೆ ಹಂಚಿದಂತೆ – ವೆಂಕಟೇಶ್‌ ಪ್ರಸಾದ್‌

    ಸಂಪತ್ತಿನ ಮರು ಹಂಚಿಕೆ: ಆರ್‌ಆರ್‌, ಕೆಕೆಆರ್‌ನಿಂದ 4 ಅಂಕ ತೆಗೆದು ಉಳಿದ ತಂಡಗಳಿಗೆ ಹಂಚಿದಂತೆ – ವೆಂಕಟೇಶ್‌ ಪ್ರಸಾದ್‌

    ಬೆಂಗಳೂರು: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ (Congress Manifesto) ಘೋಷಣೆ ಮಾಡಿದ ಸಂಪತ್ತಿನ ಮರು ಹಂಚಿಕೆಯನ್ನು (Wealth Redistribution) ಟೀಂ ಇಂಡಿಯಾದ (Team India) ಮಾಜಿ ವೇಗದ ಬೌಲರ್‌ ವೆಂಕಟೇಶ್‌ ಪ್ರಸಾದ್‌ (Venkatesh Prasad) ಐಪಿಎಲ್‌ ಅಂಕಪಟ್ಟಿಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ.

    ಶ್ರೀಮಂತರ ಸಂಪತ್ತನ್ನು ಬಡವರಿಗೆ (Poor) ಮರುಹಂಚಿಕೆ ಮಾಡುವುದಾಗಿ ರಾಜಕೀಯ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಬಡವರನ್ನು ನಿಜವಾಗಿಯೂ ಮೇಲಕ್ಕೆ ಎತ್ತಬೇಕು. ಆದರೆ ಈ ಚಿಂತನೆಯ ಪ್ರಕ್ರಿಯೆಯು ತುಂಬಾ ಕರುಣಾಜನಕವಾಗಿದೆ. ನಾವು ರಾಜಸ್ಥಾನ ರಾಯಲ್ಸ್‌ನಿಂದ 4 ಅಂಕ, ಕೋಲ್ಕತ್ತಾ ನೈಟ್‌ ರೈಡರ್ಸ್‌, ಸನ್‌ ರೈಸರ್ಸಸ್‌ ಹೈದಾಬಾದ್‌ನಿಂದ 4 ಅಂಕಗಳನ್ನ ತೆಗೆದು ಕೆಳಗಿನ 3 ತಂಡಗಳಿಗೆ ಮರು-ಹಂಚಿಕೆ ಮಾಡಿದರೆ ಅವರು ಪ್ಲೇ ಆಫ್‌ಗೆ ಬರಬಹುದು ಎಂದು ಟ್ವೀಟ್‌ ಮಾಡಿ ಕಾಲೆಳೆದಿದ್ದಾರೆ.  ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನವೇ ಗೆಲುವಿನ ಖಾತೆ ತೆರೆದ ಬಿಜೆಪಿ!

    ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ನುಸುಳುಕೋರರು ಮತ್ತು ಹೆಚ್ಚು ಮಕ್ಕಳಿರುವವರಿಗೆ ಮರುಹಂಚಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆರೋಪಿಸಿದ ಒಂದು ದಿನದ ನಂತರ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ್ರೆ ಎಲ್ಲ ಧರ್ಮದ ತಾಯಂದಿರು ಗಂಡ-ಮಕ್ಕಳನ್ನ ಕಳೆದುಕೊಳ್ತಾರೆ: ಯತೀಂದ್ರ

    ಏಪ್ರಿಲ್ 6 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ದೇಶದಲ್ಲಿನ ಜನರ ನಡುವೆ ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಹಣಕಾಸು ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸಲಿದೆ ಎಂದು ಹೇಳಿದ ನಂತರ ಪ್ರಧಾನಿಯವರ ಈ ಹೇಳಿಕೆಯು ಹೊರಬಿದ್ದಿದೆ.

     

    ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾತರಿಗೆ ಎಷ್ಟು ಜನರು ಸೇರಿದ್ದಾರೆ ಎಂಬುದನ್ನು ನಿರ್ಧರಿಸಲು ನಾವು ಮೊದಲು ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸುತ್ತೇವೆ. ನಂತರ ನಾವು ಆರ್ಥಿಕ ಮತ್ತು ಸಾಂಸ್ಥಿಕ ಸಮೀಕ್ಷೆಯನ್ನು ನಡೆಸುತ್ತೇವೆ. ಸಂಪತ್ತಿನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳಲು ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ. ಸಮೀಕ್ಷೆಯ ನಂತರ ಜನರಿಗೆ ಸರಿಯಾದ ಪಾಲು ನೀಡುವುದನ್ನು ಕಾಂಗ್ರೆಸ್ ಖಚಿತಪಡಿಸುತ್ತದೆ ಎಂದು ರಾಹುಲ್‌ ಗಾಂಧಿ (Rahul Gandhi) ಹೈದರಾಬಾದ್‌ನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ತಿಳಿಸಿದ್ದರು.