Tag: WCL 2025

  • WCL 2025 | ನೋವಿನಲ್ಲೂ ದೇಶಕ್ಕಾಗಿ ಎಬಿಡಿ ಕಟ್ಟಿದ ಇನ್ನಿಂಗ್ಸ್‌ – ದಕ್ಷಿಣ ಆಫ್ರಿಕಾ ಚಾಂಪಿಯನ್‌

    WCL 2025 | ನೋವಿನಲ್ಲೂ ದೇಶಕ್ಕಾಗಿ ಎಬಿಡಿ ಕಟ್ಟಿದ ಇನ್ನಿಂಗ್ಸ್‌ – ದಕ್ಷಿಣ ಆಫ್ರಿಕಾ ಚಾಂಪಿಯನ್‌

    – ಮತ್ತೊಮ್ಮೆ ತೂಫಾನ್‌ ಶತಕ, 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಎಬಿಡಿ

    South Africa Vs Pakistan – ಎಬಿ ಡಿ ವಿಲಿಯರ್ಸ್ ಅವರ ಅಭೂತಪೂರ್ವ ಬ್ಯಾಟಿಂಗ್‌ನಿಂದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ತಂಡ ವಿಶ್ವ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ (WCL 2025) ಟ್ರೋಫಿಯನ್ನು ಗೆದ್ದುಕೊಂಡಿದೆ. ಸ್ನಾಯು ಸೆಳೆತದ ಸಮಸ್ಯೆಯ ಮಧ್ಯೆಯೂ 48 ಎಸೆತಗಳಲ್ಲಿ ಶತಕ ಸಿಡಿಸಿದ ಅವರು, ಅಜೇಯ 120 ರನ್ ಗಳಿಸುವ ಮೂಲಕ ಏಕಾಂಗಿಯಾಗಿ ತಂಡವನ್ನು ದಡ ಸೇರಿಸಿದರು.

    ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂ ನಗರದ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳ ಅಂತರದಿಂದ ಜಯಿಸುವ ಮೂಲಕ ಹಿರಿಯರ ಲೀಗ್‌ನ ಟೂರ್ನಿಯಲ್ಲಿ ಜಯಗಳಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು. ಗೆಲುವಿಗೆ ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, 3.1 ಓವರ್‌ಗಳು ಬಾಕಿ ಇರುಬಾಗಲೇ ಈ ಗುರಿ ತಲುಪಿತು. ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ವಿಲಿಯರ್ಸ್ ಅವರ ಅದ್ಭುತ ಫೀಲ್ಡಿಂಗ್‌ನಿಂದ ದಕ್ಷಿಣ ಆಫ್ರಿಕಾ 1 ರನ್‌ನಿಂದ ರೋಚಕ ಜಯ ಗಳಿಸಿತ್ತು.

    ಎಬಿಡಿ ಅಬ್ಬರ ಹೀಗಿತ್ತು
    ದಕ್ಷಿಣ ಆಫ್ರಿಕಾದ ವೈಟ್ ಬಾಲ್ ಕ್ರಿಕೆಟ್ ದಂತಕತೆಯಾಗಿರುವ ಎಬಿ ಡಿ ವಿಲಿಯರ್ಸ್ ಪಾಕ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 60 ಎಸೆತಗಳಲ್ಲಿ ಅಜೇಯ 120 ರನ್ ಗಳಿಸಿದರು. ಇದಕ್ಕೂ ಮೊದಲು ಅವರು ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಸ್ಫೋಟಕ ಇನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್ ಗಳಿದ್ದವು.

    ಡಿ ವಿಲಿಯರ್ಸ್ ಆಟದ ನಡುವೆ ನೋವಿನಿಂದ ಬಳಲುತ್ತಿದ್ದು ಸ್ಫಷ್ಟವಾಗಿ ಗೋಚರಿಸಿತ್ತು. ಆದರೂ ಧೃತಿಗೆಡದ ಅವರು ವೈದ್ಯಕೀಯ ಸಹಾಯವನ್ನು ಪಡೆದು ಆಟವನ್ನು ಮುಂದುವರಿಸಿದರು. ಅವರೊಂದಿಗೆ ಕಣಕ್ಕಿಳಿದ ಮತ್ತೊಬ್ಬ ಆರಂಭಿಕ ಆಟಗಾರ ಹಶೀಂ ಆಮ್ಲ 14 ಎಸೆತಗಳಲ್ಲಿ 18 ರನ್ ಗಳಿಸಿ ಸ್ಪಿನ್ನರ್ ಸಯೀದ್ ಅಜ್ಮಲ್ ಗೆ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂದಲ್ಲಿ ಕ್ರೀಸಿಗೆ ಆಗಮಿಸಿದ ಜೆಪಿ ಡುಮಿನಿ 28 ಎಸೆತಗಳಲ್ಲಿ 50 ರನ್ ಗಳಿಸಿ ಉತ್ತಮ ಬೆಂಬಲ ನೀಡಿದರು. ವಿಲಿಯರ್ಸ್ ಮತ್ತು ಡುವಿಮಿ 125 ರನ್ ಗಳ ಜೊತೆಯಾಟವಾಡಿದರು.

    ಸಂಕ್ಷಿಪ್ತ ಸ್ಕೋರ್
    ಪಾಕಿಸ್ತಾನ ಚಾಂಪಿಯನ್ಸ್ 20 ಓವರ್ ಗಳಲ್ಲಿ 195/5, ಶಾರ್ಜಿಲ್ ಖಾನ್ 76(44), ಉಮರ್ ಅಮೀನ್ 36(19), ಆಲಿಫ್ ಅಲಿ 28(15), ವಿಜೋಯಿನ್ 38ಕ್ಕೆ 2, ಪಾರ್ನೆಲ್ 32ಕ್ಕೆ 2.

    ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ 16.5 ಓವರ್ ಗಳಲ್ಲಿ 197, ಎಬಿ ಡಿ ವಿಲಿಯರ್ಸ್ ಅಜೇಯ 120(60), ಜೆಪಿ ಡುಮಿನಿ ಅಜೇಯ 50(28) ಹಾಶಿಂ ಆಮ್ಲಾ 18(14).

  • ಈಗಲೂ ಅದೇ ಖದರ್‌ – 15 ಫೋರ್‌, 8 ಸಿಕ್ಸ್‌, ಆಸೀಸ್‌ ವಿರುದ್ಧ ತೂಫಾನ್‌ ಶತಕ ಸಿಡಿಸಿದ ಎಬಿಡಿ

    ಈಗಲೂ ಅದೇ ಖದರ್‌ – 15 ಫೋರ್‌, 8 ಸಿಕ್ಸ್‌, ಆಸೀಸ್‌ ವಿರುದ್ಧ ತೂಫಾನ್‌ ಶತಕ ಸಿಡಿಸಿದ ಎಬಿಡಿ

    ಯಾರು ಹೇಳಿದ್ದು ಎಬಿ ಡಿವಿಲಿಯರ್ಸ್‌ ಗೆ (AB de Villiers) ವಯಸ್ಸಾಗಿದೆ ಅಂತ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದು 7-8 ವರ್ಷಗಳೇ ಕಳೆದರೂ ಅವರ ಆಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಲೆಜೆಂಡ್ಸ್ (WCL 2025) ಟೂರ್ನಿಯಲ್ಲೂ ಅಂತಹದ್ದೇ ಬ್ಯಾಟಿಂಗ್ ಪ್ರದರ್ಶನ ತೋರಿ ಮಿಂಚುತ್ತಿದ್ದಾರೆ. ಲೆಕ್ಕವಿಲ್ಲದಂತೆ ಸಿಕ್ಸರ್‌, ಬೌಂಡರಿಗಳನ್ನು ಬಾರಿಸುತ್ತಾ ಯುವಕರನ್ನು ನಾಚಿಸುವಂತೆ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಎಬಿಡಿ ಅಬ್ಬರಿಸಿದ ಎಲ್ಲ ಪಂದ್ಯಗಳಲ್ಲೂ ದಕ್ಷಿಣ ಆಫ್ರಿಕಾ ತಂಡಕ್ಕೆ ಜಯ ಒಲಿದುಬಂದಿದೆ.

    ಕಳೆದ ಪಂದ್ಯಗಳಲ್ಲಿ 41 ವರ್ಷದ ಎಬಿಡಿ 41 ಎಸೆತಗಳಲ್ಲಿ ಶತಕ ಸಿಡಿಸಿದ್ದ ಎಬಿಡಿ ಹಿರಿಯರ ಕ್ರಿಕೆಟ್ ನಲ್ಲಿ ಶತಕ ಗಳಿಸಿದ ಅತ್ಯಂತ ಹಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಟೀಂ ಇಂಡಿಯಾ ಚಾಂಪಿಯನ್ಸ್‌ ತಂಡದ ವಿರುದ್ಧ ಮಿಂಚಿನ ಅರ್ಧಶತಕ, ಇಂಗ್ಲೆಂಡ್‌ ವಿರುದ್ಧ 41 ಎಸೆತಗಳಲ್ಲಿ ಶತಕ ಸಿಡಿಸಿ ಗೆಲುವು ತಂದುಕೊಟ್ಟಿದ್ದ ಎಬಿಡಿ ಇಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲೂ ತೂಫಾನ್‌ ಶತಕದ ಮೂಲಕವೇ ಗೆಲುವು ತಂದುಕೊಟ್ಟಿದ್ದಾರೆ. ಇದರೊಂದಿಗೆ ಈ ಬಾರಿ ಚಾಂಪಿಯನ್‌ ಪಟ್ಟ ಗೆಲ್ಲಿಸಿಕೊಡುವ ಭರವಸೆ ಮೂಡಿಸಿದ್ದಾರೆ. ಇದನ್ನೂ ಓದಿ: ಒಂದೇ ಶತಕ, ಹಲವು ದಾಖಲೆ – ಡಾನ್‌ ಬ್ರಾಡ್ಮನ್, ಗವಾಸ್ಕರ್‌ ದಾಖಲೆ ಸರಿಗಟ್ಟಿದ ಗಿಲ್‌

    ಆಸ್ಟ್ರೇಲಿಯಾ ಚಾಂಪಿಯನ್ಸ್‌ ತಂಡದ ವಿರುದ್ಧ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ನಷ್ಟಕ್ಕೆ 241 ರನ್‌ ಸಿಡಿಸಿತು. ಆರಂಭಿಕನಾಗಿ ಕಣಕ್ಕಿಳಿದ ಎಬಿಡಿ ಕೇವಲ 39 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದರು. ಒಟ್ಟು ಎದುರಿಸಿದ 46 ಎಸೆತಗಳಲ್ಲಿ 8 ಸಿಕ್ಸರ್‌, 15 ಬೌಂಡರಿ ಸಹಿತ ಬರೋಬ್ಬರಿ 123 ರನ್‌ ಬಾರಿಸಿ ಔಟಾದರು. ಈ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ 15 ಓವರ್‌ಗಳಲ್ಲಿ 137 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು ಸೋಲಿನ ಅಂಚಿಗೆ ತಲುಪಿದೆ.

    ಈಗಲೂ ಯಾರೂ ಮುರಿಯದ ದಾಖಲೆ
    ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಎಬಿಡಿ ಗುಡ್‌ಬೈ ಗೇಳಿ 7-8 ವರ್ಷಗಳೇ ಕಳೆದಿವೆ. ಆದ್ರೆ ಅವರ ಹೆಸರಿನಲ್ಲಿರುವ ದಾಖಲೆಯೊಂದು ಅಚ್ಚಳಿಯದೇ ಉಳಿದಿದೆ. ಹೌದು. 2015ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಎಬಿಡಿ 31 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಅಂತಾರಾಷ್ಟ್ರೀಯ ಏಕದುನ ಕ್ರಿಕೆಟ್‌ನಲ್ಲಿ ಇದು ಸಾರ್ವಕಾಲಿಕ ವೇಗ ಶತಕವಾಗಿ ಉಳಿದಿದೆ. ಇದನ್ನೂ ಓದಿ: Asia Cup T20 | ಏಷ್ಯಾ ಕಪ್‌ ಟೂರ್ನಿಗೆ ದಿನಾಂಕ ಪ್ರಕಟ; ಭಾರತ – ಪಾಕ್ ಕದನಕ್ಕೆ ಮುಹೂರ್ತ ಫಿಕ್ಸ್!