ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು 2019 ಮತ್ತು 2024ರಲ್ಲಿ ಗೆಲುವು ಸಾಧಿಸಿದ್ದ ಕೇರಳದ ವಯನಾಡು ಕ್ಷೇತ್ರವನ್ನು ಬಿಟ್ಟು ಉತ್ತರ ಪ್ರದೇಶದ (Uttar Pradesh) ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ರಾಗಾ ಸಹೋದರಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಉಪ ಚುನಾವಣೆಯಲ್ಲಿ ವಯನಾಡಿನಿಂದ ಕಣಕ್ಕಿಳಿಯಲಿದ್ದಾರೆ.
ಸೋಮವಾರ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಹಾಗೂ ಕೆ.ಸಿ ವೇಣುಗೋಪಾಲ್ ಅವರ ಸಮ್ಮುಖದಲ್ಲಿ ನಡೆದ ಉನ್ನತ ಮಟ್ಟದ ಸಭೆ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿ ನಿರ್ಧಾರದ ಬಗ್ಗೆ ಘೋಷಣೆ ಮಾಡಿದ್ದಾರೆ. ಅವರು ವಯನಾಡ್ ಕ್ಷೇತ್ರವನ್ನು (Wayanad Constituency) ಬಿಟ್ಟು ರಾಯ್ ಬರೇಲಿ (Raebareli) ಕ್ಷೇತ್ರವನ್ನು ಉಳಿಸಿಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಿಂದಲೂ ಭರ್ಜರಿ ವಿಜಯ ಸಾಧಿಸಿದ್ದರು. ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿ ಕ್ಷೇತ್ರದಲ್ಲಿ 6,87,649 ಮತಗಳನ್ನು ಪಡೆಯುವ ಮೂಲಕ 3,90,030 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರೆ, ವಯನಾಡ್ ಕ್ಷೇತ್ರದಲ್ಲಿ (Wayanad Constituency) 6,47,445 ಮತಗಳನ್ನು ಪಡೆದು ಗೆಲುವು ಸಾಧಿಸಿರುವ ರಾಹುಲ್ 3,64,422 ಮತಗಳ ಅಂತರದಿಂದ ಗೆದ್ದು ಬೀಗಿದ್ದರು.
ಗಾಂಧಿ ಕುಟುಂಬಕ್ಕುಂಟು ರಾಯ್ ಬರೇಲಿ ನಂಟು:
ರಾಯ್‌ಬರೇಲಿ ಲೋಕಸಭೆ ಚುನಾವಣಾ ಇತಿಹಾಸ ಸಾಕಷ್ಟು ಕುತೂಹಲಕಾರಿ ಘಟ್ಟಗಳನ್ನು ನೋಡಿದೆ. 1951-52 ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿ ಮತ್ತು ಪ್ರತಾಪಗಢ ಜಿಲ್ಲೆಗಳನ್ನು ಒಳಗೊಂಡ ಒಂದು ಲೋಕಸಭಾ ಸ್ಥಾನವಿತ್ತು. ಇಂದಿರಾ ಗಾಂಧಿ ಅವರ ಪತಿ ಫಿರೋಜ್ ಗಾಂಧಿ ಅವರು ಇಲ್ಲಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 1957 ರಲ್ಲಿ ರಾಯ್‌ಬರೇಲಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಫಿರೋಜ್ ಗಾಂಧಿ ಮತ್ತೊಮ್ಮೆ ಇಲ್ಲಿಂದ ಸಂಸದರಾದರು.
1960 ರಿಂದ ರಾಯ್‌ಬರೇಲಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಫಿರೋಜ್ ಗಾಂಧಿ, ಇಂದಿರಾ ಗಾಂಧಿ ಕೂಡಾ ಇಲ್ಲಿಂದ ಸ್ಪರ್ಧಿಸಿದ್ದರು. 1952 ಮತ್ತಯ 1957 ರಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಫಿರೋಜ್ ಗಾಂಧಿ ಎರಡು ಬಾರಿ ಗೆದ್ದಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೊಮ್ಮಗ ಅರುಣ್ ನೆಹರು ಅವರು 1980ರ ಉಪಚುನಾವಣೆ ಮತ್ತು 1984ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ನೆಹರೂ ಸಹೋದರಿ ಶೀಲಾ ಕೌಲ್ 1989 ಮತ್ತು 1991 ರಲ್ಲಿ ಗೆಲುವು ಸಾಧಿಸಿದರು.
ಅಲ್ಲದೇ 2006 ರಿಂದ ಸೋನಿಯಾ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾಗಿದ್ದರಿಂದ ಕಣಕ್ಕಿಳಿದಿದ್ದ ರಾಹುಲ್ ಗಾಂಧಿ ಮತ್ತೆ ರಾಯ್ ಬರೇಲಿಯನ್ನು ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿಸಿಕೊಂಡಿದ್ದಾರೆ.
ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ (Priyanka Vadra) ಕೇರಳದ ವಯನಾಡು (Wayanad) ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಕಣಕ್ಕೆ ಇಳಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಹೌದು. ರಾಹುಲ್ ಗಾಂಧಿ (Rahul Gandhi) ಈ ಬಾರಿ ಉತ್ತರ ಪ್ರದೇಶದ ಅಮೇಠಿ ಮತ್ತು ಕೇರಳದ ವಯನಾಡಿನಲ್ಲಿ ಸ್ಪರ್ಧಿಸಿದ್ದರು. ಎರಡು ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಜಯಗಳಿಸಿದ ಹಿನ್ನೆಲೆಯಲ್ಲಿ ಒಂದು ಕ್ಷೇತ್ರವನ್ನು ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ.
ಇದಕ್ಕೆ ಪೂರಕ ಎಂಬಂತೆ ವಯನಾಡಿನ ಕಲ್ಪೆಟ್ಟಾದಲ್ಲಿ ರಾಹುಲ್ ಗಾಂಧಿ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಲು ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಕೇರಳ ಕಾಂಗ್ರೆಸ್ ಅಧ್ಯಕ್ಷ ಸುಧಾಕರನ್, ರಾಷ್ಟ್ರವನ್ನು ಮುನ್ನಡೆಸಬೇಕಾದ ರಾಹುಲ್ ಗಾಂಧಿ ಅವರು ವಯನಾಡಿನಲ್ಲಿ ಉಳಿಯುತ್ತಾರೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ, ನಾವು ದುಃಖಿಸಬಾರದು. ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಅವರಿಗೆ ತಮ್ಮ ಎಲ್ಲಾ ಶುಭಾಶಯಗಳನ್ನು ಮತ್ತು ಬೆಂಬಲವನ್ನು ನೀಡಬೇಕು ಎಂದು ಹೇಳಿದ್ದರು. ಇದನ್ನೂ ಓದಿ: ದರ್ಶನ್ ಇರೋ ಠಾಣೆಗೆ ಶಾಮಿಯಾನ ಹಾಕಿದ್ದರ ಹಿಂದಿನ ಸೀಕ್ರೆಟ್ ರಿವೀಲ್
ಹಾಗೆ ನೋಡಿದರೆ ಈ ಬಾರಿಯ ಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ ಕಣಕ್ಕೆ ಇಳಿಯುತ್ತಾರೆ ಎನ್ನಲಾಗುತ್ತಿತ್ತು. ಆದರೆ ಕಣಕ್ಕೆ ಇಳಿದರೆ ಆ ಕ್ಷೇತ್ರದಲ್ಲಿ ಜಾಸ್ತಿ ಪ್ರಚಾರ ನಡೆಸಬೇಕಾಗುತ್ತದೆ. ದೇಶವ್ಯಾಪಿ ಪ್ರಚಾರ ನಡೆಸಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಆಯ್ಕೆಯಾದರೆ ಬಿಜೆಪಿಗೆ ಕುಟುಂಬ ರಾಜಕಾರಣದ ಅಸ್ತ್ರ ಸಿಗುತ್ತದೆ ಎಂಬ ಕಾರಣಕ್ಕೆ ಪ್ರಿಯಾಂಕಾ ಹಿಂದೇಟು ಹಾಕಿದ್ದರು ಎಂದು ವರದಿಯಾಗಿತ್ತು.
ಈಗ ಕೆಲ ಕೈ ನಾಯಕರು ವಯನಾಡಿನಿಂದ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
ರಾಯ್‌ಬರೇಲಿಯಲ್ಲಿ ನಡೆದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಒಂದು ವೇಳೆ ವಾರಣಾಸಿಯಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದರೆ ಮೋದಿ 2-3 ಲಕ್ಷ ಮತಗಳ ಅಂತರದಿಂದ ಸೋಲುತ್ತಿದ್ದರು ಎಂದು ಹೇಳಿದ್ದರು. ಈ ಹೇಳಿಕೆ ನೀಡುವ ಮೂಲಕ ಪ್ರಿಯಾಂಕಾ ಅವರನ್ನು ಚುನಾವಣಾ ರಾಜಕೀಯಕ್ಕೆ ರಾಹುಲ್ ಎಳೆ ತಂದಿದ್ದರು.
ಇಲ್ಲಿಯವರೆಗೆ ರಾಹುಲ್ ಗಾಂಧಿ ಯಾವ ಕ್ಷೇತ್ರವನ್ನು ತೊರೆಯುತ್ತಾರೆ? ಆ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದು ಅಧಿಕೃತವಾಗಿ ಪ್ರಕಟವಾಗಿಲ್ಲ.
ವಯನಾಡ್‌ನಲ್ಲಿ ರಾಹುಲ್ ಗಾಂಧಿ 3,64,422 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ರಾಹುಲ್ ಗಾಂಧಿ 6,47,445 ಮತಗಳನ್ನು ಪಡೆದರೆ ಸಿಪಿಐನಿಂದ ಸ್ಪರ್ಧಿಸಿದ್ದ ಅನ್ನಿ ರಾಜ 2,83,023 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಕೆ ಸುರೇಂದ್ರನ್ 1,41,045 ಮತ ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ.
– ಸಂವಿಧಾನ ಉಳಿಸುವುದೇ ನಮ್ಮ ಹೋರಾಟದ ಮೊದಲ ಹೆಜ್ಜೆ
– ಇದು ಮೋದಿಯ ನೈತಿಕ ಸೋಲು ಎಂದ ಸಂಸದ
ನವದೆಹಲಿ: ಸಂವಿಧಾನ (Constitution) ಉಳಿಸುವುದೇ ನಮ್ಮ ಹೋರಾಟದ ಮೊದಲ ಹೆಜ್ಜೆಯಾಗಿರಲಿದೆ. ಇದರೊಂದಿಗೆ ನಾವು ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
#WATCH | Congress leader Rahul Gandhi says, “UP ki janta ne kamaal karke dikha diya…The people of UP understood the politics of the country and the danger to the Constitution, and they safeguarded the Constitution. I thank them for supporting Congress party and INDIA… pic.twitter.com/hNxvqRNjp2
2024ರ ಲೋಕಸಭಾ ಚುನಾವಣಾ ಫಲಿತಾಂಶ (Lok Sabha Elections Result) ಹೊರಬೀಳುತ್ತಿದ್ದಂತೆಯೇ, ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ಕೇಂದ್ರದಲ್ಲಿ 25 ಗ್ಯಾರಂಟಿಗಳನ್ನು ನೀಡಿದ್ದೇವೆ. ಅವುಗಳನ್ನು ಈಡೇರಿಸುತ್ತೇವೆ. ಮಹಿಳೆಯರಿಗೆ 1 ಲಕ್ಷ ರೂ. ಕೊಡುವ ಭರವಸೆಯನ್ನೂ ಪೂರ್ಣಗೊಳಿಸುತ್ತೇವೆ ಎಂದರಲ್ಲದೇ ಸಂವಿಧಾನ ಉಳಿಸುವುದು ನಮ್ಮ ಹೋರಾಟದ ಮೊದಲ ಹೆಜ್ಜೆಯಾಗಿರಲಿದೆ. ಇದಕ್ಕೆ ಸಹಕರಿಸಿದ ಮೈತ್ರಿ ಕೂಟಕ್ಕೂ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಚುನಾವಣೆಯಲ್ಲಿ ನಾವು ಬಿಜೆಪಿ ವಿರುದ್ಧ ಮಾತ್ರ ಹೋರಾಡಿಲ್ಲ. ದೇಶದ ಆಡಳಿತ ರಚನೆ, ಗುಪ್ತಚರ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಐ, ನ್ಯಾಯಾಂಗಗಳ ವಿರುದ್ಧ ಹೋರಾಡಿದ್ದೇವೆ. ಏಕೆಂದರೆ ಈ ಎಲ್ಲಾ ಸಂಸ್ಥೆಗಳನ್ನು ಮೋದಿ, ಅಮಿತ್ ಶಾ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ಇಂದಿನ ಚುನಾವಣಾ ಫಲಿತಾಂಶ ಹಲವು ಸಂಸ್ಥೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಬಿಜೆಪಿ ವಿರುದ್ಧ ವಿಪಕ್ಷಗಳ ಹೋರಾಟದ ಮೊದಲ ಹೆಜ್ಜೆಯೂ ಆಗಿದೆ ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದಲ್ಲಿ ಇಂಡಿಯಾ ಒಕ್ಕೂಟಕ್ಕೆ ಮತ ನೀಡಿದಿ ಮತದಾರ ಪ್ರಭುಗಳಿಗೆ ಅಭಿನಂದನೆ ಸಲ್ಲಿಸಿದ ರಾಗಾ, ರಾಯ್ ಬರೇಲಿ ಮತ್ತು ವಯನಾಡಿನ ನಾಯಕರೊಂದಿಗೆ ಚರ್ಚಿಸಿ ಯಾವ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ನಿರ್ಧರಿಸುವೆ ಎಂದಿದ್ದಾರೆ. ಇದನ್ನೂ ಓದಿ: ಇದು ಮೋದಿ ವಿರುದ್ಧದ ಸ್ಪಷ್ಟ ಜನಾದೇಶ: ಫಲಿತಾಂಶದ ಬಗ್ಗೆ ಖರ್ಗೆ ಮಾತು
3 ಲಕ್ಷಕ್ಕೂ ಅಧಿಕ ಮತಗಳ ಅಂತರದ ಜಯ:
ಉತ್ತರ ಪ್ರದೇಶದ ಪ್ರತಿಷ್ಠೆಯ ಕಣವಾಗಿದ್ದ ರಾಯ್ ಬರೇಲಿ (Raebareli) ಕ್ಷೇತ್ರದಲ್ಲಿ ರಾಹುಲ್ ಗಾಂಧಿ (Rahul Gandhi) ಗೆಲುವು ಸಾಧಿಸಿದ್ದು, ಪ್ರಸ್ತುತ ಕ್ಷೇತ್ರವನ್ನ ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಕೇರಳದ ವಯನಾಡಿನಲ್ಲೂ ಭರ್ಜರಿ ಗೆಲುವು ಸಾಧಿಸಿದ್ದಾರೆ. 2024ರ ಲೋಕಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ರಾಹುಲ್ ಗಾಂಧಿ ತಾವು ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿದ್ದಾರೆ. ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿ ಕ್ಷೇತ್ರದಲ್ಲಿ 6,87,649 ಮತಗಳನ್ನು ಪಡೆಯುವ ಮೂಲಕ 3,90,030 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ 2,97,619 ಮತಗಳನ್ನು ಪದು ಸೋಲೊಪ್ಪಿಕೊಂಡಿದ್ದಾರೆ.
ಲಕ್ನೋ/ತಿರುವನಂತರಪುರಂ: ಉತ್ತರ ಪ್ರದೇಶದ ಪ್ರತಿಷ್ಠೆಯ ಕಣವಾಗಿದ್ದ ರಾಯ್ ಬರೇಲಿ (Raebareli) ಕ್ಷೇತ್ರದಲ್ಲಿ ರಾಹುಲ್ ಗಾಂಧಿ (Rahul Gandhi) ಗೆಲುವು ಸಾಧಿಸಿದ್ದು, ಪ್ರಸ್ತುತ ಕ್ಷೇತ್ರವನ್ನ ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿಸಿಕೊಂಡಿದ್ದಾರೆ. ಇದರೊಂದಿಗೆ ಕೇರಳದ ವಯನಾಡಿನಲ್ಲೂ ಭರ್ಜರಿ ಗೆಲುವು ಸಾಧಿಸಿದ್ದಾರೆ.
2024ರ ಲೋಕಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ರಾಹುಲ್ ಗಾಂಧಿ ತಾವು ಸ್ಪರ್ಧಿಸಿದ ಎರಡೂ ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿದ್ದಾರೆ. ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿ ಕ್ಷೇತ್ರದಲ್ಲಿ 6,87,649 ಮತಗಳನ್ನು ಪಡೆಯುವ ಮೂಲಕ 3,90,030 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ 2,97,619 ಮತಗಳನ್ನು ಪದು ಸೋಲೊಪ್ಪಿಕೊಂಡಿದ್ದಾರೆ.
ಇನ್ನೂ ಕೇರಳದ ವಯನಾಡ್ ಕ್ಷೇತ್ರದಲ್ಲಿ (Wayanad Constituency) 6,47,445 ಮತಗಳನ್ನು ಪಡೆದು ಗೆಲುವು ಸಾಧಿಸಿರುವ ರಾಹುಲ್ 3,64,422 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. ಪ್ರತಿಸ್ಪರ್ಧಿ ಕಮ್ಯೂನಿಸ್ಟ್ ಪಕ್ಷದ ಅನ್ನಿ ರಾಜಾ 2,83,023 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ 1,41,045 ಮತಗಳನ್ನು ಪಡೆದು ನಿರಾಸೆ ಅನುಭವಿಸಿದೆ. ಇದನ್ನೂ ಓದಿ: ಒಡಿಶಾದಲ್ಲಿ ಬಿಜೆಡಿ ಕೋಟೆ ಛಿದ್ರ – ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ
ಗಾಂಧಿ ಕುಟುಂಬಕ್ಕುಂಟು ರಾಯ್ ಬರೇಲಿ ನಂಟು:
ರಾಯ್‌ಬರೇಲಿ ಲೋಕಸಭೆ ಚುನಾವಣಾ ಇತಿಹಾಸ ಸಾಕಷ್ಟು ಕುತೂಹಲಕಾರಿ ಘಟ್ಟಗಳನ್ನು ನೋಡಿದೆ. 1951-52 ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿ ಮತ್ತು ಪ್ರತಾಪಗಢ ಜಿಲ್ಲೆಗಳನ್ನು ಒಳಗೊಂಡ ಒಂದು ಲೋಕಸಭಾ ಸ್ಥಾನವಿತ್ತು. ಇಂದಿರಾ ಗಾಂಧಿ ಅವರ ಪತಿ ಫಿರೋಜ್ ಗಾಂಧಿ ಅವರು ಇಲ್ಲಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 1957 ರಲ್ಲಿ ರಾಯ್‌ಬರೇಲಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಫಿರೋಜ್ ಗಾಂಧಿ ಮತ್ತೊಮ್ಮೆ ಇಲ್ಲಿಂದ ಸಂಸದರಾದರು. ಇದನ್ನೂ ಓದಿ: ರಾಹುಲ್ ಗಾಂಧಿ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ, ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಸೋಲಾಗಿದೆ: ಸಿಎಂ
1960 ರಿಂದ ರಾಯ್‌ಬರೇಲಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಫಿರೋಜ್ ಗಾಂಧಿ, ಇಂದಿರಾ ಗಾಂಧಿ ಕೂಡಾ ಇಲ್ಲಿಂದ ಸ್ಪರ್ಧಿಸಿದ್ದರು. 1952 ಮತ್ತಯ 1957 ರಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಫಿರೋಜ್ ಗಾಂಧಿ ಎರಡು ಬಾರಿ ಗೆದ್ದಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೊಮ್ಮಗ ಅರುಣ್ ನೆಹರು ಅವರು 1980ರ ಉಪಚುನಾವಣೆ ಮತ್ತು 1984ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ನೆಹರೂ ಸಹೋದರಿ ಶೀಲಾ ಕೌಲ್ 1989 ಮತ್ತು 1991 ರಲ್ಲಿ ಗೆಲುವು ಸಾಧಿಸಿದರು.
ಅಲ್ಲದೇ 2006 ರಿಂದ ಸೋನಿಯಾ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾಗಿದ್ದರಿಂದ ಕಣಕ್ಕಿಳಿದಿದ್ದ ರಾಹುಲ್ ಗಾಂಧಿ ಮತ್ತೆ ರಾಯ್ ಬರೇಲಿಯನ್ನು ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ: ಕೊನೆಯಲ್ಲಿ ಕೈ ಹಿಡಿದ ಮಹಾದೇವಪುರ – ಸತತ 4ನೇ ಬಾರಿ ಪಿಸಿ ಮೋಹನ್‌ಗೆ ಜಯ
ಲೋಕಸಭಾ ಚುನಾವಣೆ (Lok Sabha Election) ಸನ್ನಿಹಿತವಾಗುತ್ತಿದ್ದಂತೆ ಕೇರಳದ ವಯನಾಡಿನಲ್ಲಿ (Wayanad) ಸುಲ್ತಾನ್ ಬತ್ತೇರಿ (Sulthan Bathery) ಹೆಸರು ಸಾಕಷ್ಟು ರಾಜಕೀಯ ತಿರುವನ್ನು ಪಡೆದುಕೊಂಡಿದೆ. ಈ ಚುನಾವಣೆಯಲ್ಲಿ ಗೆದ್ದರೆ ವಯನಾಡು ಜಿಲ್ಲೆಯಲ್ಲಿರುವ ಸುಲ್ತಾನ್ ಬತ್ತೇರಿ ಎಂಬ ಹೆಸರನ್ನು ಗಣಪತಿವಟ್ಟಂ (Ganapathyvattam) ಎಂದು ಬದಲಾಯಿಸುತ್ತೇನೆ ಎಂದು ವಯನಾಡು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಭರವಸೆ ನೀಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ರೆ ಸುಲ್ತಾನ್ ಬತ್ತೇರಿಯ ಪೂರ್ವ ಹೆಸರು ಮತ್ತು ಇತಿಹಾಸವೇನು? ಗಣಪತಿವಟ್ಟಂ ಸುಲ್ತಾನ್ ಬತ್ತೇರಿಯಾಗಿ ಬದಲಾಗಿದ್ದು ಹೇಗೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಸುಲ್ತಾನ್ ಬತ್ತೇರಿ ಹೆಸರು ಬಂದಿದ್ದು ಹೇಗೆ? ಸುಲ್ತಾನ್ ಬತ್ತೇರಿ ಕೇರಳದ ಸ್ವಚ್ಛ ನಗರಿ ಎಂಬ ಹೆಸರನ್ನು ಪಡೆದಿದೆ. ಮಲಬಾರ್‌ನಲ್ಲಿ ಮೈಸೂರು ಅರಸರು ಆಡಳಿತ ನಡೆಸುತ್ತಿದ್ದ ಸಂದರ್ಭ ಈ ಜಾಗ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಡಂಪಿಂಗ್ ಯಾರ್ಡ್ ಆಗಿತ್ತು ಎಂದು ಕೇರಳ ಪ್ರವಾಸೋದ್ಯಮದ ಅಧಿಕೃತ ವೆಬ್ಸೈಟ್ ಹೇಳುತ್ತದೆ. ಈ ಪಟ್ಟಣವನ್ನು ಮೂಲತಃ ಗಣಪತಿವಟ್ಟಂ ಎಂದು ಕರೆಯಲಾಗುತ್ತಿತ್ತು. ಸುಲ್ತಾನ್ ಬತ್ತೇರಿಯ ಪುರಸಭಾ ವೆಬ್‌ಸೈಟ್‌ನ ಪ್ರಕಾರ ಗಣಪತಿ ದೇವಸ್ಥಾನದ ಹೆಸರನ್ನು ಇಡಲಾಗಿತ್ತು.
ವಯನಾಡಿನ ಮೂರು ಮುನ್ಸಿಪಲ್ ಪಟ್ಟಣಗಳಲ್ಲಿ ಒಂದಾದ ಸುಲ್ತಾನ್ ಬತ್ತೇರಿ (ಇನ್ನೆರಡು ಮಾನಂತವಾಡಿ ಮತ್ತು ಕಲ್ಪೆಟ್ಟಾ), ಒಂದು ಕಾಲದಲ್ಲಿ ಗಣಪತಿವಟ್ಟಂ ಎಂದು ಕರೆಯಲ್ಪಡುವ ಕಲ್ಲಿನ ದೇವಾಲಯವನ್ನು ಹೊಂದಿತ್ತು. ವಿಜಯನಗರ ರಾಜವಂಶದ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು 13ನೇ ಶತಮಾನದಲ್ಲಿ ಇಂದಿನ ತಮಿಳುನಾಡು ಮತ್ತು ಕರ್ನಾಟಕದ ಪ್ರದೇಶಗಳಿಂದ ವಯನಾಡಿಗೆ ವಲಸೆ ಬಂದ ಜೈನರು ನಿರ್ಮಿಸಿದ್ದರು.
18ನೇ ಶತಮಾನದ ದ್ವಿತೀಯಾರ್ಧದಲ್ಲಿ ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನನ (Tipu Sultan) ಆಕ್ರಮಣದ ಸಮಯದಲ್ಲಿ ದೇವಾಲಯವು ಭಾಗಶಃ ನಾಶವಾಯಿತು. 1750 ಮತ್ತು 1790ರ ನಡುವೆ, ಇಂದಿನ ಉತ್ತರ ಕೇರಳವನ್ನು ಮೈಸೂರು, ಹೈದರಾಲಿ ಮತ್ತು ಅವನ ಮಗ ಟಿಪ್ಪು ಹಲವಾರು ಬಾರಿ ಆಕ್ರಮಣ ಮಾಡಿ ದೇವಾಲಯವನ್ನು ಕೆಡವಿದ್ದರು. ಬಳಿಕ ಅದನ್ನು ಸುಮಾರು 150ವರ್ಷಗಳ ಕಾಲ ಹಾಗೆಯೇ ಬಿಡಲಾಗಿತ್ತು. ನಂತರ ಇದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸ್ವಾಧೀನಪಡಿಸಿಕೊಂಡು ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಘೋಷಿಸಿತು.
ಟಿಪ್ಪುವಿನ ಸೇನೆಯು ಗಣಪತಿವಟ್ಟಂ ಪಟ್ಟಣವನ್ನು ತನ್ನ ಬ್ಯಾಟರಿಯನ್ನು (ಕ್ಯಾನನ್‌ಗಳ ಸಮೂಹ) ಶೇಖರಿಸುವ ಸ್ಥಳವಾಗಿ ಬಳಸಿಕೊಂಡಿತು. ಬ್ರಿಟಿಷರ ಈ ಜಾಗವನ್ನು ವಶಪಡಿಸಿದ ಬಳಿಕ ಈ ಪಟ್ಟಣವನ್ನು ‘ಸುಲ್ತಾನರ ಬ್ಯಾಟರಿ’ ಎಂದು ಕರೆಯುತ್ತಿದ್ದರು. ಕಾಲಾನಂತರದಲ್ಲಿ ಈ ಹೆಸರು ʼಸುಲ್ತಾನ್ ಬತ್ತೇರಿʼಯಾಗಿ ಬದಲಾಯಿತು.
ಸಮುದ್ರ ಮಟ್ಟದಿಂದ 1000ಮೀ ಎತ್ತರದಲ್ಲಿರುವ ಸುಲ್ತಾನ್ ಬತ್ತೇರಿಯು ವರ್ಷವಿಡೀ ಸಮಶೀತೋಷ್ಣ ಹವಾಮಾನವನ್ನು ಹೊಂದಿದೆ. ಕಣಿವೆಗಳು, ಬಯಲು ಪ್ರದೇಶಗಳು ಮತ್ತು ಪರ್ವತಮಯ ಭೂಪ್ರದೇಶಗಳೊಂದಿಗೆ ಹೆಣೆದುಕೊಂಡಿರುವ ಸ್ಥಳಾಕೃತಿಯು ಇಲ್ಲಿಗೆ ಭೇಟಿ ನೀಡುವವರನ್ನು ಮೋಡಿ ಮಾಡುತ್ತದೆ.
ಒಂದು ಕಾಲದಲ್ಲಿ ಮಲಬಾರ್ ಪ್ರದೇಶದಲ್ಲಿ ಆಯಕಟ್ಟಿನ ಸ್ಥಳವೆಂದು ಹೆಸರಾಗಿದ್ದ ಸುಲ್ತಾನ್ ಬತ್ತೇರಿಯು ಈಗ ವಯನಾಡು ಜಿಲ್ಲೆಯ ಅತಿ ದೊಡ್ಡ ಪಟ್ಟಣವಾಗಿದೆ ಮತ್ತು ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.ಪೂರ್ವ-ಐತಿಹಾಸಿಕ ಗುಹೆಗಳು, ಕಾಡಿನ ಹಾದಿಗಳು, ಹೊಳೆಯುವ ತೊರೆಗಳು ಮತ್ತು ನದಿಗಳು ಮತ್ತು ಬೆಟ್ಟಗಳ ಹಚ್ಚ ಹಸಿರಿನ ಪ್ರದೇಶವು ಪ್ರತಿವರ್ಷ ಈ ಪ್ರದೇಶಕ್ಕೆ ಬಹಳಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ.
ಈ ಸ್ಥಳವು NH 212 ಕೋಝಿಕ್ಕೋಡ್ – ಮೈಸೂರು ರಾಷ್ಟ್ರೀಯ ಹೆದ್ದಾರಿಯೊಂದಿಗೆ ವಿವಿಧ ಸ್ಥಳಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.
ಸುಲ್ತಾನ್ ಬತ್ತೇರಿ ಎಲ್ಲಿದೆ? ಕಲ್ಪೆಟ್ಟದಿಂದ 26 ಕಿ.ಮೀ ದೂರದಲ್ಲಿ, ಕೋಜಿಕೋಡ್‌ನಿಂದ 99 ಕಿ.ಮೀ, ಊಟಿಯಿಂದ 95 ಕಿ.ಮೀ ಮತ್ತು ಮೈಸೂರಿನಿಂದ 116 ಕಿ.ಮೀ ದೂರದಲ್ಲಿದೆ. ಹಿಂದೆ ಸುಲ್ತಾನ್ ಬತ್ತೇರಿ ಎಂದು ಕರೆಯಲಾಗುತ್ತಿದ್ದ ಸುಲ್ತಾನ್ ಬತ್ತೇರಿ, ಕೇರಳದ ವಯನಾಡ್ ಜಿಲ್ಲೆಯ ಒಂದು ಪಟ್ಟಣ ಮತ್ತು ಪುರಸಭೆಯಾಗಿದೆ. ಸಮುದ್ರ ಮಟ್ಟದಿಂದ 930 ಮೀಟರ್ ಎತ್ತರದಲ್ಲಿದೆ ಇದು ಕೇರಳದ ಒಂದು ಗಿರಿಧಾಮ ಮತ್ತು ಕೇರಳದ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.
ಸುಲ್ತಾನ್ ಬತ್ತೇರಿ ಭವ್ಯವಾದ ಸೌಂದರ್ಯ ಮತ್ತು ಮಸಾಲೆ ತೋಟಗಳಿಗೆ ಹೆಸರುವಾಸಿಯಾಗಿದೆ. ಹಚ್ಚ ಹಸಿರಿನ ಬೆಟ್ಟಗಳು ಮತ್ತು ತಂಪಾದ ಹವಾಮಾನವನ್ನು ಇಲ್ಲಿ ಆಹ್ಲಾದಿಸಬಹುದು. 13 ನೇ ಶತಮಾನದಲ್ಲಿ ನಿರ್ಮಿಸಲಾದ ಜೈನ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಗಣಪತಿ ದೇವಸ್ಥಾನ ಮತ್ತು ಮರಿಯಮ್ಮನ್ ದೇವಾಲಯವು ಪಟ್ಟಣದ ಇತರ ಆಕರ್ಷಣೆಗಳು. ಗಣಪತಿ ದೇವಾಲಯವು ಎಂಟು ಶತಮಾನಗಳಷ್ಟು ಹಳೆಯದಾದ ದೇವಾಲಯವಾಗಿದ್ದು, ಗಣೇಶನಿಗೆ ಅರ್ಪಿತವಾಗಿದೆ, ಇದು ಬುಡಕಟ್ಟು ಜನರಿಗೆ ಪೂಜಾ ಸ್ಥಳವಾಗಿದೆ.
ತಲುಪುವುದು ಹೇಗೆ? ಸುಲ್ತಾನ್ ಬತ್ತೇರಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಕೋಜಿಕೋಡ್‌ನ ಕರಿಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇದು 111 ಕಿ.ಮೀ ದೂರದಲ್ಲಿದೆ. ಕೋಜಿಕೋಡ್ ಹತ್ತಿರದ ರೈಲುಮಾರ್ಗವಾಗಿದ್ದು, ಇದು 100 ಕಿ.ಮೀ ದೂರದಲ್ಲಿದೆ. ಸುಲ್ತಾನ್ ಬತ್ತೇರಿ ಮೈಸೂರು, ಬೆಂಗಳೂರು, ಕೋಜಿಕೋಡ್, ಊಟಿ, ಕೊಯಮತ್ತೂರು, ಮಂಗಳೂರು, ಕಣ್ಣೂರು, ತಲಚೇರಿ ಮತ್ತು ಕಾಸರಗೋಡುಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ.
ಸುಲ್ತಾನ್ ಬತ್ತೇರಿ ವಯನಾಡ್ ಜಿಲ್ಲೆಯ ಅತಿದೊಡ್ಡ ಸಾರಿಗೆ ಕೇಂದ್ರವಾಗಿದೆ. ಇದು ಕರ್ನಾಟಕ ರಾಜ್ಯದ ಗಡಿಯ ಸಮೀಪದಲ್ಲಿದೆ. ಸುಲ್ತಾನ್ ಬತ್ತೇರಿಯಲ್ಲಿ ಕೇರಳದ ಪ್ರಮುಖ ಸಾರಿಗೆ ಡಿಪೋ ಇದೆ. ಕೋಜಿಕೋಡ್, ಊಟಿ ಮತ್ತು ಬೆಂಗಳೂರಿಗೆ ಬಸ್ಸುಗಳು ಈ ಡಿಪೋದಿಂದ ಪ್ರಾರಂಭವಾಗುತ್ತವೆ. ಪಟ್ಟಣದಲ್ಲಿ ಸ್ಥಳೀಯ ಪ್ರಯಾಣಿಕರಿಗಾಗಿ ಎರಡು ಸಣ್ಣ ಬಸ್ ನಿಲ್ದಾಣಗಳಿವೆ. ಪೆರಿಯಾ ಘಾಟ್ ರಸ್ತೆ ಮನಂತವಾಡಿಯನ್ನು ಕಣ್ಣೂರು ಮತ್ತು ತಲಚೇರಿಗೆ ಸಂಪರ್ಕಿಸುತ್ತದೆ.
ತಿರುವನಂತಪುರಂ: ವಯನಾಡ್‌ನಲ್ಲಿ (Wayanad) ರಾಹುಲ್ ಗಾಂಧಿಗೆ (Rahul Gandhi) ಬಿಜೆಪಿ ಬಿಗ್ ಶಾಕ್ ನೀಡಿದೆ. ವಯನಾಡ್ ಕಾಂಗ್ರೆಸ್ (Congress) ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿಎಂ ಸುಧಾಕರನ್ (PM Sudhakaran) ಅವರು ಪಕ್ಷವನ್ನು ತೊರೆದು ಬಿಜೆಪಿಯನ್ನು ಸೇರ್ಪಡೆಯಾಗಿದ್ದಾರೆ.
ಬಿಜೆಪಿಗೆ ಸೇರ್ಪಡೆಯಾದ ನಂತರ ಮಾತನಾಡಿದ ಸುಧಾಕರನ್, ನನಗೆ ರಾಹುಲ್ ಗಾಂಧಿ ಲಭ್ಯವಾಗದೇ ಇರುವಾಗ ಸಾಮಾನ್ಯ ಜನರಿಗೆ ಅವರು ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈಗಾಗಲೇ ಅವರಿಗೆ ಐದು ವರ್ಷಗಳ ಕಾಲಾವಕಾಶ ನೀಡಲಾಯಿತು. ನಾವು ಇನ್ನೊಂದು ಅವಧಿಯನ್ನು ನೀಡಿದರೆ ಅದು ವಯನಾಡಿನ ಅಭಿವೃದ್ಧಿಯ ಭವಿಷ್ಯವನ್ನು ನಾಶಪಡಿಸುತ್ತದೆ ಎಂದು ಹೇಳಿದರು.
Welcome to the @BJP4Keralam family, Shri PM Sudhakaran. He was the General Secretary of Wayanad DCC. Your decision to join us in our journey towards Viksit Bharat under the leadership of PM Shri @narendramodi ji, and dedication to serving the people of Wayanad is truly… pic.twitter.com/nwW3HE7fMy
VIDEO | Here’s what BJP leader Agnimitra Paul said on PM Modi’s remark on Congress MP Rahul Gandhi.
“He ran away from Amethi in fear, now he will have to leave from Wayanad as well. He is only good at making empty talks, or he has no political relevance.”#LSPolls2024WithPTI… pic.twitter.com/agbYu6bfCP
ಬಿಜೆಪಿ ಇಂದಿನ ಸಮಾಜದಲ್ಲಿ ಹೆಚ್ಚು ಪ್ರಸ್ತುತವಾಗಿರುವ ಪಕ್ಷವಾಗಿದೆ. ಪ್ರಧಾನಿ ಮೋದಿಯವರ ಅಭಿವೃದ್ಧಿ ಯೋಜನೆಗಳು ಜಾರಿಯಾಗಬೇಕಾದರೆ ಕೆ ಸುರೇಂದ್ರನ್ ಅವರನ್ನು ವಯನಾಡ್ ಸಂಸದರನ್ನಾಗಿ ಆಯ್ಕೆ ಮಾಡಬೇಕು ಮತ್ತು ಆ ನಿಟ್ಟಿನಲ್ಲಿ ನಾನು ಶ್ರಮಿಸುತ್ತೇನೆ. ಬಿಜೆಪಿಯ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ಆಯ್ಕೆ ಮಾಡಿದರೆ ವಯನಾಡಿನ ಜನರು ಅದರ ಲಾಭ ಪಡೆಯಲಿದ್ದಾರೆ ಸುಧಾಕರನ್ ಹೇಳಿದರು.
ನವದೆಹಲಿ: ವಯನಾಡಿನಿಂದಲೂ ಜನ ಬೆಂಬಲ ಸಿಗುವುದು ಕಷ್ಟಕರ ಆಗಿರೋದ್ರಿಂದ ಕಾಂಗ್ರೆಸ್ ರಾಜಕುಮಾರ ಅಲ್ಲಿಂದಲೂ ಓಡಿ ಹೋಗ್ತಾರೆ ಎಂದು ಸಂಸದ ರಾಹುಲ್ ಗಾಂಧಿ ಅವರನ್ನ ಪ್ರಧಾನಿ ಮೋದಿ (PM Modi) ವ್ಯಂಗ್ಯ ಮಾಡಿದ್ದಾರೆ.
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಮೇಥಿಯಲ್ಲಿ ಜನಬೆಂಬಲ ಸಿಗದೇ ಓಡಿ ಹೋದ ರಾಹುಲ್ ಗಾಂಧಿ (Rahul Gandhi) ವಯನಾಡಿನಿಂದ ಸ್ಪರ್ಧಿಸಿದ್ದಾರೆ. ಇಲ್ಲೂ ಜನ ಬೆಂಬಲ ಸಿಗುವುದು ಕಷ್ಟವಾಗಿದೆ, ಹೀಗಾಗೀ ಅವರ ಗ್ಯಾಂಗ್ ಚುನಾವಣೆ ಮುಗಿಯಲು ಕಾಯುತ್ತಿದೆ. ಚುನಾವಣೆ ಮುಗಿಯುತ್ತಿದ್ದಂತೆ ವಯನಾಡಿನಿಂದಲೂ ಓಡಿ ಹೋಗಲಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ಎಲೋನ್ ಮಸ್ಕ್ ಭಾರತ ಭೇಟಿ ಮುಂದಕ್ಕೆ – ಸದ್ಯಕ್ಕಿಲ್ಲ ಮೋದಿ ಜೊತೆಗೆ ಮಾತುಕತೆ
ಐ.ಎನ್.ಡಿ.ಐ.ಎ (I.N.D.I.A Block) ಒಕ್ಕೂಟದ ನಾಯಕ ಯಾರು? ಎಂದು ಹೇಳಲು ವಿರೋಧ ಪಕ್ಷದ ನಾಯಕರು ವಿಫಲವಾಗಿದ್ದಾರೆ. ಅವರು (ಕಾಂಗ್ರೆಸ್) ಏನು ಬೇಕಾದರೂ ಹೇಳಿಕೊಳ್ಳಬಹುದು. ಆದ್ರೆ ವಾಸ್ತವವೆಂದರೆ ಚುನಾವಣೆಯ ಘೋಷಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ಸೋಲನ್ನು ಒಪ್ಪಿಕೊಂಡಿದ್ದಾರೆ. ಮಹಾರಾಷ್ಟ್ರದ ಅಭಿವೃದ್ಧಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದ ಅವರು ದೊಡ್ಡ ಪ್ರಮಾಣ ಮತದಾನ ಮಾಡುವ ಮೂಲಕ ಎನ್‌ಡಿಎ ಒಕ್ಕೂಟ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ನಿನ್ನೆ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. ಮತದಾನ ಮಾಡಿದ ಎಲ್ಲರಿಗೂ, ವಿಶೇಷವಾಗಿ ಮೊದಲ ಬಾರಿಗೆ ಮತದಾರರಿಗೆ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ. ಮತದಾನ ಮುಗಿದ ನಂತರ ಬೂತ್ ಮಟ್ಟದಲ್ಲಿ ನಡೆಸಲಾದ ವಿಶ್ಲೇಷಣೆ ಪ್ರಕಾರ ಮೊದಲ ಹಂತದಲ್ಲಿ ಎನ್‌ಡಿಎಗೆ ಏಕಪಕ್ಷೀಯ ಮತದಾನವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಲಾರೆನ್ಸ್ ಹೆಸರಲ್ಲಿ ಸಲ್ಮಾನ್ ಖಾನ್ ಮನೆಯಿಂದ ಕ್ಯಾಬ್ ಬುಕ್ ಮಾಡಿದ್ದ ವ್ಯಕ್ತಿ ಬಂಧನ
ತಿರುವನಂತಪುರಂ: ಕೇರಳದ (Kerala) ವಯನಾಡ್ ಜಿಲ್ಲೆಯ (Wayanad) ಕಾಲೇಜೊಂದರ ಹಾಸ್ಟೆಲ್‍ನಲ್ಲಿ ಪಶುವೈದ್ಯಕೀಯ ವಿದ್ಯಾರ್ಥಿಯ (Student)
ಶವ ಪತ್ತೆಯಾದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (Central Bureau of Investigation) ವಹಿಸಿಕೊಂಡಿದೆ. ವಿದ್ಯಾರ್ಥಿ ಸಿದ್ಧಾರ್ಥನ್ (20) ಎಂಬಾತನ ಮೃತದೇಹ ಫೆಬ್ರವರಿ 18 ರಂದು ಹಾಸ್ಟೆಲ್‍ನ ಸ್ನಾನಗೃಹದೊಳಗೆ ಪತ್ತೆಯಾಗಿತ್ತು. ಇದೀಗ ಹಿರಿಯ ವಿದ್ಯಾರ್ಥಿಗಳು ಹಾಗೂ ಸಹಪಾಠಿಗಳ ಕಿರುಕುಳದಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು (Police) ಸಿಬಿಐಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಕೈ ಮತ್ತು ಬೆಲ್ಟ್ ಬಳಸಿ ನಿರಂತರವಾಗಿ ಸಿದ್ಧಾರ್ಥನ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ನಿರಂತರ ರ್ಯಾಗಿಂಗ್ ಮತ್ತು ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿ ಹಾಸ್ಟೆಲ್‍ನ ಬಾತ್‍ರೂಮ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ 20 ಜನರ ವಿರುದ್ಧ ವಯನಾಡ್‍ನ ವೈತಿರಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದೀಗ ಕೇಂದ್ರದಿಂದ ಅಧಿಸೂಚನೆ ಪಡೆದ ಕೆಲವೇ ಗಂಟೆಗಳಲ್ಲಿ ಸಿಬಿಐ ಪ್ರಕರಣ ಕೈಗೆತ್ತಿಕೊಂಡಿದೆ.
ಪ್ರಕರಣದ ಬಗ್ಗೆ ಮಾರ್ಚ್ 9 ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಬಿಐ ತನಿಖೆಗೆ ಭರವಸೆ ನೀಡಿದ್ದರು. ಇನ್ನೂ ಪ್ರಮುಖ ಕಡತಗಳು ಸಿಬಿಐಗೆ ನೀಡದ ಇರುವುದರಿಂದ, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಸಿಬಿಐ ತನಿಖೆಯನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದೆ. ಕಡತಗಳನ್ನು ಹಸ್ತಾಂತರಿಸದೆ ಸಾಕ್ಷ್ಯ ನಾಶಪಡಿಸಿದೆ ಎಂದು ವಿದ್ಯಾರ್ಥಿಯ ಕುಟುಂಬ ಆರೋಪಿಸಿದೆ.
ವಿದ್ಯಾರ್ಥಿಯ ತಂದೆ ಜಯಪ್ರಕಾಶ್, ಸಾಯುವ ಮೊದಲು ತನ್ನ ಮಗನಿಗೆ ಎಂಟು ತಿಂಗಳ ಕಾಲ ಕಿರುಕುಳ ನೀಡಲಾಗಿತ್ತು ಎಂದು ಆರೋಪಿಸಿದ್ದಾರೆ. ಅಲ್ಲದೇ ಎಸ್‍ಎಫ್‍ಐ ಮುಖಂಡರು ಹಲವು ತಿಂಗಳುಗಳಿಂದ ಕಾಲೇಜಿನಲ್ಲಿ ಕ್ಯಾಂಪ್ ಹಾಕಿದ್ದು, ಕೆಲವರು ನನ್ನ ಮಗನನ್ನು ಬಟ್ಟೆ ಬಿಚ್ಚಿ ಮಂಡಿಯೂರಿ ಕೂರಿಸಿದ್ದರು ಎಂದು ದೂರಿದ್ದಾರೆ.
ತಿರುವನಂತಪುರಂ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‍ಡಿಎ) ಅಭ್ಯರ್ಥಿ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar), ಸಿಬಿಐ ತನಿಖೆಯನ್ನು ತ್ವರಿತಗೊಳಿಸಲು ಕ್ರಮಕೈಗೊಳ್ಳುತ್ತೇವೆ ಎಂದು ವಿದ್ಯಾರ್ಥಿಯ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್ ಪಲ್ಟಿ- ಮೂವರ ದುರ್ಮರಣ, 38 ಮಂದಿಗೆ ಗಾಯ
ತಿರುವನಂತಪುರಂ: ವಯನಾಡ್ ಲೋಕಸಭಾ ಕ್ಷೇತ್ರಕ್ಕೆ (Wayanad) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ಇದೇ ವೇಳೆ 9.24 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ.
ನಾಮಿನೇಷನ್‌ಗಾಗಿ ಚುನಾವಣಾಧಿಕಾರಿಯ ಮುಂದೆ ಸಲ್ಲಿಸಿದ ಚುನಾವಣಾ ಅಫಿಡವಿಟ್‌ನಲ್ಲಿ, ರಾಹುಲ್ ಗಾಂಧಿ 2022-23 ರ ಹಣಕಾಸು ವರ್ಷದಲ್ಲಿ 1.02 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿದ್ದಾರೆ. ಬಾಡಿಗೆ, ಸಂಸದರ ವೇತನ, ರಾಯಲ್ಟಿ ಆದಾಯ, ಬ್ಯಾಂಕ್‌ಗಳಿಂದ ಬಡ್ಡಿ, ಬಾಂಡ್‌ಗಳು, ಡಿವಿಡೆಂಡ್ ಮತ್ತು ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳಿಂದ ಬಂಡವಾಳದ ಲಾಭವನ್ನು ಪಡೆಯುತ್ತಾರೆ ಎಂದು ಅಫಿಡವಿಟ್ ಹೇಳಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ – ವಯನಾಡ್‌ನಿಂದಲೇ ಸ್ಪರ್ಧೆ ಯಾಕೆ?
ಮಾರ್ಚ್ 15 ರ ವೇಳೆಗೆ ತಮ್ಮ ಕೈಯಲ್ಲಿ 55,000 ರೂಪಾಯಿ ನಗದು, ಉಳಿತಾಯ ಖಾತೆಯಲ್ಲಿ 26 ಲಕ್ಷ ರೂಪಾಯಿ ಇದೆ ಎಂದು ರಾಹುಲ್ ಗಾಂಧಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಸಂಸದ ಈಕ್ವಿಟಿ ಷೇರುಗಳಲ್ಲಿ 4.33 ಕೋಟಿ ರೂ. ಹೂಡಿಕೆ ಮಾಡಿದ್ದರೆ, 3.81 ಕೋಟಿ ರೂ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ವಾಣಿಜ್ಯ ಕಟ್ಟಡಗಳು, ಕೃಷಿಯೇತರ ಮತ್ತು ಕೃಷಿ ಭೂಮಿ ಸೇರಿದಂತೆ 11.15 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ.
ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಎರಡನೇ ಬಾರಿಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಮುನ್ನ ರಾಹುಲ್ ಗಾಂಧಿ ಬೃಹತ್ ರೋಡ್‌ಶೋ ನಡೆಸಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತದ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಸ್ವರೂಪವನ್ನು ನಾಶಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ನವದೆಹಲಿ: ಎಐಸಿಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ (Rahul Gandhi) ಕೇರಳದ ವಯನಾಡ್‌ನಿಂದ ಎರಡನೇ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ. ಕಳೆದ ಬಾರಿ ನಾಲ್ಕು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದ ಅವರು ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು ಇಂದು ಚುನಾವಣೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಕಾರ್ಯಕರ್ತರು, ಬೆಂಬಲಿಗರ ಸಮೂಹದಲ್ಲಿ ವಯನಾಡಿನ ಕಲ್ಪೆಟ್ಟಾದಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ, ಕೆಸಿ ವೇಣುಗೋಪಾಲ್, ಕೇರಳದ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಹಂಗಾಮಿ ಅಧ್ಯಕ್ಷ ಎಂಎಂ ಹಾಸನ್, ಪಕ್ಷದ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಸೇರಿದಂತೆ ಇತರ ರಾಜ್ಯ ನಾಯಕರು ಸಾಥ್ ನೀಡಿದರು. ಇದನ್ನೂ ಓದಿ: ಇವಿಎಂ ಜೊತೆಗೆ ವಿವಿಪ್ಯಾಟ್ ಮತ ಎಣಿಕೆಗೆ ಆಗ್ರಹ – ವಿಚಾರಣೆಗೆ ಒಪ್ಪಿದ ಸುಪ್ರೀಂ
ಬೃಹತ್ ರೋಡ್ ಶೋ ಉದ್ದೇಶಿಸಿ ಮಾತನಾಡಿದ ಅವರು ಸಂಸತ್‌ನಲ್ಲಿ ವಯನಾಡ್ ಪ್ರತಿನಿಧಿಸುವುದು ಗೌರವ ತಂದಿದೆ. ನಾನು ಚುನಾಯಿತ ಪ್ರತಿನಿಧಿಯಲ್ಲ. ನಾನು ನಿಮ್ಮ ಕುಟುಂಬ ಸದಸ್ಯನಂತೆ. ನನ್ನ ಸಹೋದರಿ ಪ್ರಿಯಾಂಕಾ ಗಾಂಧಿಯನ್ನು ಹೇಗೆ ನೋಡುತ್ತೇನೆ ಹಾಗೇಯೇ ನಾನು ನಿಮ್ಮನ್ನು ನೋಡುತ್ತೇನೆ. ಹೀಗಾಗೀ ಕ್ಷೇತ್ರದಲ್ಲಿ ತಂದೆ-ತಾಯಿ ಸಹೋದರಿಯರಿದ್ದಾರೆ ಎಂದರು.
ಮುಂದುವರಿದು, ಕ್ಷೇತ್ರದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ರಾಷ್ಟ್ರ ಹಾಗೂ ವಿಶ್ವದ ಗಮನಕ್ಕೆ ತರಲು ನಾನು ಸದಾ ಸಿದ್ಧ. ಮನುಷ್ಯ-ಪ್ರಾಣಿ ಸಂಘರ್ಷ, ವೈದ್ಯಕೀಯ ಕಾಲೇಜು ಸಮಸ್ಯೆಗಳು ಈ ಹೋರಾಟದಲ್ಲಿ ನಾನು ವಯನಾಡು ಜನರೊಂದಿಗೆ ನಿಲ್ಲುತ್ತೇನೆ. ನಾವು ವೈದ್ಯಕೀಯ ಕಾಲೇಜಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದೇವೆ. ನಾನು ಸಿಎಂಗೆ ಪತ್ರ ಬರೆದಿದ್ದೇನೆ. ಆದರೆ, ದುರದೃಷ್ಟವಶಾತ್ ಅವರು ಮುಂದೆ ಹೋಗಲಿಲ್ಲ. ಇದನ್ನೂ ಓದಿ: ಬರ ಪರಿಹಾರ; ಕೇಂದ್ರ V/S ಕರ್ನಾಟಕ ಸರ್ಕಾರ – ರಾಜ್ಯ ‘ಸುಪ್ರೀಂ’ ಮೆಟ್ಟಿಲೇರಿದ್ಯಾಕೆ?
ದೆಹಲಿಯಲ್ಲಿ ನಮ್ಮ ಸರ್ಕಾರವಿದ್ದರೆ ಮತ್ತು ಕೇರಳದಲ್ಲಿ ನಮ್ಮ ಸರ್ಕಾರ ಬಂದಾಗ, ಇವೆರಡನ್ನೂ ನಾವು ಮಾಡುತ್ತೇವೆ. ನಾವು ಈ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ನನಗೆ ಸಂಪೂರ್ಣವಾಗಿ ಭರವಸೆ ಇದೆ. ನಾನು ಕೇವಲ ರಾಜಕೀಯ ಭಾಷಣ ಮಾಡುತ್ತಿಲ್ಲ. ಪಕ್ಷಗಳು, ಸಮುದಾಯಗಳು, ವಯಸ್ಸಿನ ಹೊರತಾಗಿಯೂ, ವಯನಾಡಿನ ಪ್ರತಿಯೊಬ್ಬ ವ್ಯಕ್ತಿಯೂ ನನಗೆ ಪ್ರೀತಿ, ಮಮತೆ, ಗೌರವವನ್ನು ನೀಡಿದ್ದಾರೆ. ನನ್ನನ್ನು ಅವರವರಂತೆ ನೋಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಅಭ್ಯರ್ಥಿ ಅನ್ನಿ ರಾಜಾ ಅವರು ಇಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ ಸಂಸದ ರಾಹುಲ್ ಗಾಂಧಿ ವಿರುದ್ಧ ವಯನಾಡ್‌ಗೆ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ತನ್ನ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರನ್ನು ವಯನಾಡಿನಿಂದ ಕಣಕ್ಕಿಳಿಸಿದೆ. ಇದನ್ನೂ ಓದಿ: ಜೈಲು ಸೇರಿದ ಕೇಜ್ರಿವಾಲ್ 4.5 ಕೆಜಿ ಕಳೆದುಕೊಂಡಿದ್ದಾರೆ: ಆಪ್ ಗಂಭೀರ ಆರೋಪ
ರಾಹುಲ್ ಗಾಂಧಿಗೆ ವಯನಾಡು ಯಾಕೆ ಭದ್ರ
ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸುತ್ತಿದ್ದ ರಾಹುಲ್ ಗಾಂಧಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದಲೂ ಸ್ಪರ್ಧಿಸಲು ನಿರ್ಧರಿಸಿದರು. ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ತೀವ್ರ ಪೈಪೋಟಿ ಹಿನ್ನಲೆ ಕೇರಳದ ವಯನಾಡಿನಿಂತಹ ಭದ್ರ ಕ್ಷೇತ್ರವನ್ನು ರಾಹುಲ್ ಗಾಂಧಿ ಹುಡುಕಿಕೊಂಡರು.
ವಯನಾಡಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಾಬಲ್ಯ ಹೊಂದಿದೆ. ವಯನಾಡಿನ ಜನಸಂಖ್ಯೆಯಲ್ಲಿ ಮುಸ್ಲಿಮರು 32% ಮತ್ತು ಕ್ರಿಶ್ಚಿಯನ್ನರು 13% ರಷ್ಟಿದ್ದಾರೆ. ಈ ಕಾರಣಕ್ಕೆ ಕಳೆದ ಬಾರಿ ನಾಲ್ಕು ಲಕ್ಷ ಅಧಿಕ ಮತಗಳ ಅಂತರದಲ್ಲಿ ರಾಹುಲ್ ಗಾಂಧಿ ಗೆದ್ದು ಬೀಗಿದ್ದರು. ಇದನ್ನೂ ಓದಿ: ಮಹುವಾ ಮೊಯಿತ್ರಾ ವಿರುದ್ಧ ಅಕ್ರಮ ಹಣ ವರ್ಗಾವಣೆ ಕೇಸ್ ದಾಖಲಿಸಿದ ಇ.ಡಿ
ಆದರೆ ಈ ಬಾರಿ ಪರಿಸ್ಥಿತಿ ಕಳೆದ ಬಾರಿಯಂತಿಲ್ಲ. ಸಿಪಿಐ ನಿಂದ ಸ್ಪರ್ಧಿಸಿರುವ ಅನ್ನಿ ರಾಜಾ ಜನಪ್ರಿಯ ನಾಯಕಿಯಾಗಿದ್ದು ತೀವ್ರ ಪೈಪೊಟಿ ಕೊಡಲಿದ್ದಾರೆ. 6%-9% ಗೆ ಮತ ಪ್ರಮಾನ ಏರಿಸಿಕೊಂಡಿರುವ ಬಿಜೆಪಿ ಕೂಡಾ ಒಂದಷ್ಟು ಸೆಳೆಯುವ ಪ್ರಯತ್ನ ನಡೆಸಿದೆ. ಈ ನಡುವೆ ರಾಹುಲ್ ಗಾಂಧಿ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಚಾರ ಮಾಡಿದ್ದಾರೆ.