Tag: Wayanad Landslide

  • Wayanad Landslide | ಜನರ ರಕ್ಷಣೆಗೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರ: ಪ್ರಹ್ಲಾದ್ ಜೋಶಿ

    Wayanad Landslide | ಜನರ ರಕ್ಷಣೆಗೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರ: ಪ್ರಹ್ಲಾದ್ ಜೋಶಿ

    ನವದೆಹಲಿ: ವಯನಾಡ್ (Wayanad) ದುರಂತ ಅತ್ಯಂತ ದುರದೃಷ್ಟಕರ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Prhlad Joshi) ವಿಷಾದ ವ್ಯಕ್ತಪಡಿಸಿದ್ದಾರೆ.

    ನವದೆಹಲಿಯಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿ, ವಯನಾಡ್ ಇಂದು ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದು, ಇಲ್ಲಿನವರ ರಕ್ಷಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.

     

    ಈ ದುರಂತ ಪರಿಸ್ಥಿತಿ ನಿರ್ವಹಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಅಲ್ಲಿಯ ನಿವಾಸಿಗಳ ರಕ್ಷಣಾ ಕಾರ್ಯಕ್ಕೆ ಕೇಂದ್ರ ಅಗತ್ಯ ನೆರವು ಕಲ್ಪಿಸಲಿದೆ ಎಂದರು.

    ವಯನಾಡಿನಲ್ಲಿ ಜನಜೀವನವನ್ನು ಸಹಜ ಸ್ಥಿತಿಗೆ ತರುವಲ್ಲಿ ಕೇಂದ್ರ ಸಂಪೂರ್ಣ ಸಹಕಾರ, ಬೆಂಬಲ ನೀಡಲು ಬದ್ಧವಾಗಿದೆ ಎಂದು ಪ್ರಹ್ಲಾದ್‌ ಜೋಶಿ ತಿಳಿಸಿದರು.

     

  • Wayanad Landslide| ಪಾಪುವನ್ನು ಹಿಡಿಯುವಷ್ಟರಲ್ಲಿ ಗೋಡೆ ಕುಸಿದು ಬಿತ್ತು: ಕಣ್ಣೀರಿಟ್ಟ ತಾಯಿ

    Wayanad Landslide| ಪಾಪುವನ್ನು ಹಿಡಿಯುವಷ್ಟರಲ್ಲಿ ಗೋಡೆ ಕುಸಿದು ಬಿತ್ತು: ಕಣ್ಣೀರಿಟ್ಟ ತಾಯಿ

    ಮಂಡ್ಯ: ಭೀಕರ ಜಲಪ್ರಳಯಕ್ಕೆ 143 ಮಂದಿ ಬಲಿಯಾಗಿದ್ದು, ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಕುಟುಂಬವೊಂದು ಸಿಲುಕಿದೆ. ಈ ಕುಟುಂಬದ ಪೈಕಿ ಅಜ್ಜಿ ಮೊಮ್ಮಗ ಸಾವನ್ನಪ್ಪಿದ್ರೆ, ಇನ್ನುಳಿದ ಮೂವರು ಗಾಯಾಳುಗಳಾಗಿ ಪತ್ತೆಯಾಗಿದ್ದಾರೆ. ಭೂಕುಸಿತದ ಭೀಕರತೆ (Wayanad Landslide) ಕುರಿತು ಕುಟುಂಬಸ್ಥರ ನೆನೆದು ಮಗಳು ಮಂಜುಳಾ ಕಣ್ಣೀರಿಟ್ಟಿದ್ದಾರೆ. ತುಂಬಾ ಮಳೆ ಬರುತ್ತಿದೆ ನಾಳೆ ಬರುತ್ತೇವೆ ಎಂದವರು ಬರಲೇ ಗಳಗಳನೆ ಅತ್ತಿದ್ದಾರೆ.

    ಪುತ್ರಿ ಮಂಜುಳಾ (Manjula) ಮಾತನಾಡಿ, ಮಳೆ ಜಾಸ್ತಿ ಆಗ್ತಿದೆ ಅಂತ ಟಿವಿಯಲ್ಲಿ ತೋರಿಸುತ್ತಿದ್ದಾರೆ ಬಂದು ಬಿಡಿ ಅಂದೆ. ಇಲ್ಲಿ ಅಷ್ಟು ಮಳೆ ಇಲ್ಲ ಆದರೆ ನಾಳೆ ಬರುತ್ತೇವೆ. ಬ್ಯಾಗ್ ಪ್ಯಾಕ್ ಮಾಡಿಕೊಳ್ಳುತ್ತೀವೆ ಎಂದರು. ಬೆಳಗ್ಗೆ ಆಗುವ ಮುನ್ನವೇ ನೀರಲ್ಲಿ ಕೊಚ್ಚಿ ಹೋದರು ಎಂದು ಕಣ್ಣೀರಿಟ್ಟಿದ್ದಾರೆ.

    ನಾವು ಹೊಸದಾಗಿ ಮನೆ ಕಟ್ಟಿದ್ದೇವೆ. ಮುಂದಿನ ತಿಂಗಳು ಗೃಹಪ್ರವೇಶ ಇತ್ತು. ಅಷ್ಟರಲ್ಲಿ ನನ್ನ ಅಮ್ಮನಿಗೆ (ಲೀಲಾವತಿ) ಬಂಡೆ ಹೊಡೆದು ಕೊಚ್ಚಿ ಹೋಗಿದ್ದಾರೆ. ಪಾಪು ನಿಹಾಲ್‌ನ ಹಿಡಿದುಕೊಳ್ಳೋಣ ಎಂದು ಅಂದುಕೊಳ್ಳುವಷ್ಟರಲ್ಲಿ ಅವನ ಮೇಲೆ ಗೋಡೆ ಬಿದ್ದಿದೆ. ನನ್ನ ತಂದೆ ಪಾಪುಗಾಗಿ ಹುಡುಕಿದ್ದಾರೆ. ಎಲ್ಲೂ ಸಿಕ್ತಿಲ್ಲ. ನನ್ನ ಅನಿಲ್ ಹೇಗೋ ಬಚಾವ್ ಆಗಿದ್ದಾನೆ. ಅವನಿಗೆ ಕಣ್ಣು, ಮೂಗು, ಶ್ವಾಸಕೋಶಕ್ಕೆ ಮಣ್ಣು ತುಂಬಿದೆ. ಬೆನ್ನು ಮುಳೆ ತುಂಡಾಗಿದೆ ಎಂದು ಮಂಜುಳಾ ಕಣ್ಣೀರಿಟ್ಟಿದ್ದಾರೆ.

    ಅಮ್ಮನ ಬಳಿ ಕಡೆಯದಾಗಿ ಮಾತನಾಡಿದಾಗ, ಬೇಗ ಬನ್ನಿ ಅಂದೆ ನಾಳೆ ಬರುತ್ತೀವಿ ಅಂದ್ರು. ನೀವು ಬರಲಿಲ್ಲ ಅಂದರೆ ಸಾಯಿರಿ ಅಲ್ಲೇ. ಮಗುನಾದರೂ ಕಳುಹಿಸಿ ಅಂದೆ. ಅವರು ಸಾಯುತ್ತಾರೆ ಅಂತ ಗೊತ್ತಿರಲಿಲ್ಲ. ಒಂದೇ ಒಂದು ಸಾರಿ ಅವರನ್ನು ನೋಡಬೇಕು. ಪಾಪುವಿಗಾಗಿ ಸೈಕಲ್, ಬುಕ್ಸ್ ಎಲ್ಲಾ ತೆಗೆದು ಇಟ್ಟೆದ್ದೆ. ಈಗ ನೋಡಿದ್ರೆ ಹೀಗೆ ಆಗಿದೆ. ದೇವರಿಗೆ ಕರುಣೆನೇ ಇಲ್ಲ. ಹೇಗಾದರೂ ಮಾಡಿ ಮೃತದೇಹ ಕರ್ನಾಟಕಕ್ಕೆ ತನ್ನಿ, ಕಡೆ ಬಾರಿ ಮುಖ ನೋಡಿಕೊಳ್ತೀವಿ ಎಂದು ಮಂಜುಳ ಮನವಿ ಮಾಡಿದ್ದಾರೆ.

    ಅಂದಹಾಗೆ, ಕತ್ತರಘಟ್ಟ ಗ್ರಾಮದ ದೇವರಾಜು, ಲೀಲಾವತಿ, ಅನೀಲ್, ಝಾನ್ಸಿ ಹಾಗೂ ಎರಡುವರೆ ವರ್ಷದ ನಿಹಾಲ್ ಅಲ್ಲಿ ನೆನಸಿದ್ದರು. ಗುಡ್ಡ ಕುಸಿತವಾದ ವೇಳೆ, ಇವರು ವಾಸವಿದ್ದ ಮನೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಈ ವೇಳೆ 55 ವರ್ಷದ ಲೀಲಾವತಿ ಗುಡ್ಡದ ಮಣ್ಣಿನ ಕೆಳಭಾಗದಲ್ಲಿ ಸೇರಿಕೊಂಡು ಸಾವನ್ನಪ್ಪಿದ್ದಾರೆ. ಇನ್ನೂ ಎರಡುವರೆ ವರ್ಷದ ನಿಹಾಲ್ ಮಣ್ಣು ಹಾಗೂ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಇದಲ್ಲದೇ ದೇವರಾಜು, ಅನೀಲ್, ಝಾನ್ಸಿ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ರು. ಬಳಿಕ ಗಾಯಳುಗಳ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಇದೀಗ ಈ ಮೂವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.