ತಿರುವನಂತಪುರಂ: ವಯನಾಡಿನಲ್ಲಿ ಭೂಕುಸಿತದಿಂದ ಇಡೀ ಕುಟುಂಬವನ್ನು ಕಳೆದುಕೊಂಡು ನೋವಿನಲ್ಲಿದ್ದ ಸಂತ್ರಸ್ತೆ ಶೃತಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಶೃತಿ ಭಾವಿ ಪತಿ ಜೆನ್ಸನ್ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಕೋಝಿಕ್ಕೋಡ್-ಕೊಳ್ಳೇಗಾಲ ರಾಷ್ಟ್ರೀಯ ಹೆದ್ದಾರಿಯ ವೆಲ್ಲರಂಕುನ್ನು ಬಳಿ ಬಸ್‌ಗೆ ಓಮ್ನಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಅಂಬ್ಲವಾಯಲ್ ಮೂಲದ ಜೆನ್ಸನ್ ತೀವ್ರವಾಗಿ ಗಾಯಗೊಂಡಿದ್ದರು.
ಮಂಗಳವಾರ ಮಧ್ಯಾಹ್ನ ಸುಮಾರು 3:30ಕ್ಕೆ ಅಪಘಾತವಾಗಿ ಜೆನ್ಸನ್ ಗಂಭೀರ ಗಾಯಗೊಂಡಿದ್ದರು. ಮೆಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರಕ್ತಸ್ರಾವ ತಡೆಯಲಾಗದೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ವ್ಯಾನ್‌ನಲ್ಲಿದ್ದವರಲ್ಲಿ ಶೃತಿ ಕಾಲಿಗೆ ಮಾತ್ರ ಸಣ್ಣಪುಟ್ಟ ಗಾಯವಾಗಿತ್ತು.
ಕೋಝಿಕ್ಕೋಡ್‌ನಿಂದ ಸುಲ್ತಾನ್ ಬತ್ತೇರಿಗೆ ತೆರಳುತ್ತಿದ್ದ ‘ಬಟರ್‌ಫ್ಲೈ’ ಹೆಸರಿನ ಬಸ್‌ಗೆ ವ್ಯಾನ್ ಡಿಕ್ಕಿ ಹೊಡೆದು ಅಪಘಾತವಾಗಿತ್ತು. ಕಲ್ಪೆಟ್ಟಾದಿಂದ ಬಂದ ಅಗ್ನಿಶಾಮಕ ರಕ್ಷಣಾ ತಂಡಗಳು ಸ್ಥಳೀಯ ನಿವಾಸಿಗಳ ನೆರವಿನಿಂದ ವಾಹನದೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಿದ್ದರು.
ಅಪಘಾತದಲ್ಲಿ ಶೃತಿ ಅವರ ಸೋದರ ಸಂಬಂಧಿ ಲಾವಣ್ಯ ಕೂಡ ಗಾಯಗೊಂಡಿದ್ದಾರೆ. ಈ ಹಿಂದೆ ಇದೇ ಭೂಕುಸಿತದಲ್ಲಿ ಲಾವಣ್ಯ ತನ್ನ ತಂದೆ-ತಾಯಿ ಮತ್ತು ಸಹೋದರನನ್ನು ಕಳೆದುಕೊಂಡಿದ್ದರು. ಈಕೆ ಶೃತಿ ಅವರ ತಂದೆ ಶಿವಣ್ಣರ ಸಹೋದರ ಸಿದ್ದರಾಜು ಮತ್ತು ಅವರ ಪತ್ನಿ ದಿವ್ಯಾ ದಂಪತಿ ಮಗಳು.
ನವದೆಹಲಿ: ಕೇಂದ್ರ ಸರ್ಕಾರವು ಕೇರಳ ಜೊತೆಗಿದೆ. ಹಣದ ಕೊರತೆಯಿಂದ ಯಾವುದೇ ಕೆಲಸಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭರವಸೆ ನೀಡಿದ್ದಾರೆ.
ಭೂಕುಸಿತ ಪೀಡಿತ ಕೇರಳದ (Kerala) ವಯನಾಡಿಗೆ (Wayanad Landslide) ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದರು. ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿ ಅವಲೋಕಿಸಿದರು. ಇದೇ ವೇಳೆ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದರು. ಬಳಿಕ ನೆರವಿನ ಕುರಿತು ಮಾತನಾಡಿದ ಅವರು, ಘಟನೆ ನಡೆದ ದಿನ ಬೆಳಗ್ಗೆ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Wayanad Landslides | ವಯನಾಡಿಗೆ ಮೋದಿ ಭೇಟಿ – ದುರಂತ ಭೂಮಿಯಲ್ಲಿ ವೈಮಾನಿಕ ಸಮೀಕ್ಷೆ
ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆ, ಪೊಲೀಸರು, ವೈದ್ಯರು, ಎಲ್ಲರೂ ಸಂತ್ರಸ್ತರಿಗೆ ಸಾಧ್ಯವಾದಷ್ಟು ಬೇಗ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ. ಕೇಂದ್ರ ಸರ್ಕಾರದ ಎಲ್ಲಾ ಏಜೆನ್ಸಿಗಳನ್ನು ತ್ವರಿತ ಕೆಲಸಗಳಿಗೆ ಸಜ್ಜುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಮೃತರ ಕುಟುಂಬಗಳು ಒಬ್ಬಂಟಿಯಾಗಿಲ್ಲ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ನಾವೆಲ್ಲರೂ ಅವರೊಂದಿಗೆ ನಿಂತಿದ್ದೇವೆ. ಕೇಂದ್ರವು ಕೇರಳ ಸರ್ಕಾರದ ಜೊತೆ ನಿಂತಿದ್ದು, ಹಣದ ಕೊರತೆಯಿಂದ ಯಾವುದೇ ಕೆಲಸಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಮೋದಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ; ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮ
ಈ ದುರಂತ ಸಾಮಾನ್ಯವಲ್ಲ. ಸಾವಿರಾರು ಕುಟುಂಬಗಳ ಕನಸುಗಳು ಭಗ್ನಗೊಂಡಿವೆ. ನಾನು ಸ್ಥಳದಲ್ಲೇ ಪರಿಸ್ಥಿತಿ ನೋಡಿದ್ದೇನೆ. ಈ ದುರಂತವನ್ನು ಎದುರಿಸಿದ ಸಂತ್ರಸ್ತರನ್ನು ನಾನು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಿದ್ದೇನೆ. ಆಸ್ಪತ್ರೆಯಲ್ಲಿ ಗಾಯಗೊಂಡಿರುವ ರೋಗಿಗಳನ್ನೂ ಭೇಟಿ ಮಾಡಿದ್ದೇನೆ ಎಂದು ನೋವಿನಿಂದ ಮಾತನಾಡಿದ್ದಾರೆ.
ವಯನಾಡು: ಇತ್ತೀಚೆಗೆ ಕೇರಳದ ವಯನಾಡಿನಲ್ಲಿ (Wayanad) ಭೂಕುಸಿತ ಸಂಭವಿಸಿದ್ದ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ಭೇಟಿ ನೀಡಿದ್ದಾರೆ. ವಿಪತ್ತು ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿರುವ ಪ್ರಧಾನಿ, ಸರ್ಕಾರ ಕೈಗೊಂಡ ಪರಿಹಾರ ಮತ್ತು ಪುನರ್ವಸತಿ ಕ್ರಮಗಳ ಕುರಿತು ಪರಿಶೀಲಿಸಿದ್ದಾರೆ.
ಇದಕ್ಕೂ ಮುನ್ನ ಬೆಳಗ್ಗೆ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರನ್ನು, ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಸರಳ, ಸಾಂಪ್ರದಾಯಿಕವಾಗಿ ಕೈಮುಗಿದು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಉಪಸ್ಥಿತರಿದ್ದರು. ಸ್ವಾಗತ ಸ್ವೀಕರಿಸಿ ಬಳಿಕ ಮೋದಿ, ಸಿಎಂ ಜೊತೆಗೂಡಿ ವೈಮಾನಿಕ ಸಮೀಕ್ಷೆ (Aerial Survey) ನಡೆಸಿದರು. ಇದನ್ನೂ ಓದಿ: ಶೀಘ್ರವೇ ಭಾರತದ ದೊಡ್ಡ ಸುದ್ದಿ: ಬ್ರೇಕಿಂಗ್ ನ್ಯೂಸ್ ಕೊಟ್ಟ ಹಿಂಡನ್‌ಬರ್ಗ್
Wayanad landslides
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಭೂಕುಸಿತದಿಂದ ಧ್ವಂಸಗೊಂಡ ಚೂರಲ್ಮಲಾ (Chooralmala), ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಕುಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಸಮೀಕ್ಷೆ ಮುಗಿದ ಬಳಿಕ ಇಲ್ಲಿನ ಕಲ್ಪೆಟ್ಟಾದ ಎಸ್‌ಕೆಎಂಜೆ ಹೈಯರ್ ಸೆಕೆಂಡರಿ ಶಾಲೆಗೆ ಬಂದಿಳಿಯಲಿದ್ದು, ಅಲ್ಲಿಂದ ರಸ್ತೆ ಮೂಲಕ ಭೂಕುಸಿತ ಪೀಡಿತ ಪ್ರದೇಶಗಳಿಗೆ ಮೋದಿ ತೆರಳಲಿದ್ದಾರೆ. ಇದನ್ನೂ ಓದಿ: 530 ದಿನಗಳ ಬಳಿಕ ಜೈಲಿನಿಂದ ಹೊರಬಂದ AAP ನಾಯಕ ಮನೀಶ್ ಸಿಸೋಡಿಯಾ
ಕಳೆದ ಜು.30 ರಂದು ವಯನಾಡಲ್ಲಿ ಭೂಕುಸಿತ ಸಂಭವಿಸಿದ ನಂತರ ಕನಿಷ್ಠ 226 ಜನರು ಸಾವನ್ನಪ್ಪಿದ್ದರು. ಅನೇಕರು ಈ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಇದು ಕೇರಳಕ್ಕೆ ಅಪ್ಪಳಿಸಿದ ಅತಿದೊಡ್ಡ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ. ವಿಪತ್ತು ಪೀಡಿತ ಪ್ರದೇಶಗಳಿಗೆ ಪುನರ್ವಸತಿ ಹಾಗೂ ಪರಿಹಾರ ಕಲ್ಪಿಸಿಕೊಡಲು ಕೇರಳ ಸರ್ಕಾರ, ಕೇಂದ್ರದ ಬಳಿ 2,000 ಕೋಟಿ ರೂ. ನೆರವು ನೀಡುವಂತೆ ಮನವಿ ಮಾಡಿತ್ತು. ಈ ಬೆನ್ನಲ್ಲೇ ಖುದ್ದು ಪ್ರಧಾನಿ ಅವರೇ ಭೇಟಿ ನೀಡಿ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದ್ದಾರೆ. ಇದನ್ನೂ ಓದಿ: ಎಸ್ಸಿ-ಎಸ್ಟಿ: ಕೆನೆಪದರ ಮೀಸಲಾತಿಗೆ ನೂರಾರು ಸಂಸದರ ವಿರೋಧ
– ಭೂಕುಸಿತದಿಂದ ತತ್ತರಿಸಿದ್ದ ಪ್ರದೇಶದಲ್ಲಿ ಮತ್ತೊಂದು ಭೀತಿ!
ತಿರುವನಂತಪುರಂ: ಭೂಕುಸಿತದ ಕರಾಳ ಭೀಕರತೆಯನ್ನು ಅನುಭವಿಸಿದ ವಯನಾಡಿಗೆ ಈಗ ಭೂಕಂಪದ (Wayanad Earthquake) ಭೀತಿ ಎದುರಾಗಿದೆ. ಇಂದು ಬೆಳಗ್ಗೆ 10:15 ಕ್ಕೆ ವಯನಾಡಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
ಪಕ್ಕದ ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳ ಭಾಗಗಳಿಂದ ಇದೇ ರೀತಿಯ ಶಬ್ದಗಳು ಕೇಳಿಬಂದಿವೆ ಎಂದು ವರದಿಯಾಗಿದೆ. ಶಬ್ದ ಕೇಳಿ ಅಂಬಲವಾಯಲ್-ಎಡಕಲ್ ಭಾಗದ ಜನರು ಮನೆಯಿಂದ ಹೊರ ಬಂದರು. ಈ ಪ್ರದೇಶದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪರಿಹಾರ ಶಿಬಿರದಲ್ಲಿ ಹಲವು ಕುಟುಂಬಗಳು ಆಶ್ರಯ ಪಡೆದಿವೆ.
ಆರಂಭದಲ್ಲಿ ಗುಡುಗು ಇರಬಹುದು ಎಂದು ಹಲವರು ಭಾವಿಸಿದ್ದರು. ಆದರೆ ಶಬ್ದವು ಭೂಮಿಯ ಮೇಲ್ಮೈಯಿಂದ ಬಂದಿದೆ. ಹಲವರಿಗೆ ತಮ್ಮ ಮನೆಯ ಕಿಟಕಿ ಗಾಜುಗಳು ಅಲುಗಾಡಿರುವ ಅನುಭವವಾಗಿದೆ. ಭೂಕುಸಿತದ ತೀವ್ರತೆಯನ್ನು ಮೌಲ್ಯಮಾಪನ ಮಾಡಲು ಕೇಂದ್ರದ ತಜ್ಞರ ತಂಡವು ಈಗಾಗಲೇ ವಯನಾಡು ಪ್ರದೇಶಕ್ಕೆ ಭೇಟಿ ನೀಡುತ್ತಿದೆ. ಇದನ್ನೂ ಓದಿ: ಜಾಮೀನು ನಿರಾಕರಿಸುವ ಮೂಲಕ ಕೆಳ ಹಂತದ ನ್ಯಾಯಲಯಗಳು ಸುರಕ್ಷಿತ ಆಟವಾಡುತ್ತಿವೆ: ಸುಪ್ರೀಂ ಆಕ್ರೋಶ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಈಗಾಗಲೇ ಈ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಜು.30 ರಂದು ಚೂರಲ್ಮಲಾ-ಮುಂಡಕ್ಕೈ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ 225 ಜನರು ಸಾವನ್ನಪ್ಪಿದ್ದಾರೆ. 131 ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ದೇವರನಾಡು ಕೇರಳದ (Kerala) ಮೇಲೆ ನಿಸರ್ಗಮಾತೆ ಮುನಿಸಿಕೊಂಡಿದ್ದಾಳೆ. ವಯನಾಡಿನಲ್ಲಿ (Wayanad) ಮುಂಡಕ್ಕೈ, ಚುರಲ್ಮಲದಲ್ಲಿ ಸಂಭವಿಸಿದ ದುರಂತದಿಂದ ಆಸ್ತಿಪಾಸ್ತಿ ಹಾನಿ, ಪ್ರಾಣಹಾನಿ ವರದಿಯಾಗುತ್ತಲೇ ಇದೆ. ನಿಸರ್ಗದೇವಿಯ ಕೋಪಕ್ಕೀಡಾಗಿರುವ ಜನ ತಮ್ಮನ್ನು ತಾವು ಸುರಕ್ಷಿತ ನೆಲೆಗಳಿಗೆ ಪಾರು ಮಾಡಿಕೊಳ್ಳಲು ಹೋರಾಡುತ್ತಿರುವ ದೃಶ್ಯಗಳಂತು ಎದೆ ಝಲ್ ಎನಿಸುತ್ತಿವೆ. ಕೇಂದ್ರ ಹಾಗೂ ರಾಜ್ಯಗಳ ನೈಸರ್ಗಿಕ ವಿಕೋಪ ನಿರ್ವಹಣಾ ಪಡೆಗಳು, ಸೇನೆ, ನೌಕಾಪಡೆ ಮತ್ತು ವಾಯುಪಡೆ ಯೋಧರು ಜೀವ ಉಳಿಸಿಕೊಳ್ಳಲು ಹಾತೊರೆಯುತ್ತಿದ್ದವರನ್ನ ಹುಡುಕಿ ಮೇಲಕ್ಕೆತ್ತಿದ್ದಾರೆ. ಮಣ್ಣಿನಡಿ ಜೀವ ಬಿಟ್ಟವರನ್ನ ಭೂಮಿ ಬಗೆದು ಹೊರಕ್ಕೆ ತೆಗೆಯುತ್ತಿದ್ದಾರೆ. ಇನ್ನೂ ಕಣ್ಣಿಗೆ ಕಾಣದ ಅದೆಷ್ಟೋ ಶವಗಳು ಮಣ್ಣಿನಲ್ಲಿ ಊತು ಹೋಗಿವೆ. ಸತತ 9ನೇ ದಿನವೂ ಸೇನಾ (Army) ಕಾರ್ಯಚರಣೆ ಮುಂದುವರಿದಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿವೆ.
Wayanad landslides
ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತ ತೀರ ಅಸಹಜವಾದುದ್ದೇನಲ್ಲ. ನೀಲಗಿರಿ ಬೆಟ್ಟಗಳಲ್ಲಿಯೂ (Nilgiri Hills) ನೂರಾರು ವರ್ಷಗಳಿಂದ ಭೂಕುಸಿತವಾದ ದಾಖಲೆಗಳಿವೆ. 2009ರ ನವೆಂಬರ್‌ನಲ್ಲಿ ಕೇವಲ 5 ದಿನಗಳಲ್ಲಿ 1,150 ಭೂಕುಸಿತ ಸಂಭವಿಸಿತ್ತು. ಇದನ್ನು ಅಧ್ಯಯನ ಮಾಡಿರುವ ತಜ್ಞರು ಮೊದಲು ಕೈತೋರಿಸಿದ್ದು ವ್ಯಾಪಕವಾಗಿ ತಲೆ ಎತ್ತಿದ್ದ ಟೀ ತೋಟಗಳತ್ತ. ಅದಕ್ಕಾಗಿ ಮಾಡಿರುವ ಅರಣ್ಯ ಆಕ್ರಮಣದತ್ತ. ನೀಲಗಿರಿ ಕೂಡ ಭೂಕಂಪನ ವಲಯದಲ್ಲೇ ಇದ್ದರೂ ಅದರಿಂದ ಆಗಿರುವ ನಷ್ಟಕ್ಕಿಂತ ಭೂಕುಸಿತ ತಂದಿರುವ ನಷ್ಟವೇ ಹೆಚ್ಚು ಎಂಬುದು ತಜ್ಞರ ಅಭಿಪ್ರಾಯ. ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿ ಅತ್ಯಂತ ಸೂಕ್ಷ್ಮ ಪರ್ವತ ಸಾಲುಗಳಲ್ಲಿ ಒಂದು. ಇದು ಇಡೀ ದಖ್ಖನ್ ಪ್ರಸ್ಥಭೂಮಿಯ ಜೀವಸೆಲೆ ಇಡೀ ಭರತ ಖಂಡದ ಹವಾಮಾನ ನಿರ್ಧರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಪೂರ್ವ ಹಿಮಾಲಯವನ್ನು ಬಿಟ್ಟರೆ ಪಶ್ಚಿಮ ಘಟ್ಟಗಳು ಜೀವ ವೈವಿಧ್ಯತೆಯ 2ನೇ ಭಂಡಾರವಾಗಿದೆ. ಜಗತ್ತಿನ 8 ಜೀವ ವೈವಿಧ್ಯತೆಯ ಸೂಕ್ಷ್ಮ ಪರಿಸರ ತಾಣಗಳಲ್ಲಿ ಪಶ್ಚಿಮ ಘಟ್ಟವನ್ನು ಒಂದು ಪ್ರಮುಖ ತಾಣವೆಂದು ಪರಿಗಣಿಸಲಾಗಿದೆ.
ಇಂತಹ ಹೊತ್ತಿನಲ್ಲಿ ಕಳೆದ ಕೆಲ ವರ್ಷಗಳಲ್ಲಿ ದಕ್ಷಿಣ ಭಾರತವನ್ನ ಕಾಡಿದ ಭೂಕುಸಿತಗಳು ನಮ್ಮ ಕಣ್ಣಿಗೆ ಕಟ್ಟಿದಂತಿವೆ. ಕೇರಳದ ವಯನಾಡಿನ ಕಳೆದ ಜುಲೈ 30 ರಂದು ಸಂಭವಿಸಿದ ಭೂಕುಸಿತ, ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಉಂಟಾದ ಗುಡ್ಡ ಕುಸಿತ ದುರಂತ ಹಾಗೂ 2018ರಲ್ಲಿ ಸಂಭವಿಸಿದ ಕೊಡಕು ಭೂಕುಸಿತ ಇಡೀ ದಕ್ಷಿಣ ಭಾರತದ ಜನರ ಕಣ್ಣಿಗೆ ಕಟ್ಟಿದಂತಿವೆ. ಅವುಗಳ ಬಗ್ಗೆ ತಿಳಿಯಲು ಒಮ್ಮೆ ಕಣ್ಣು ಹಾಯಿಸೋಣ…
ಕೊಡಗಿಗೆ ʻಆಗಸ್ಟ್ ಆತಂಕʼ
2018ರ ಆಗಸ್ಟ್ 13 ರಿಂದ 17ರ ತನಕ ಕೊಡಗು (Kodagu) ಅಕ್ಷರಶಃ ತತ್ತರಿಸಿ ಹೋಗಿತ್ತು. ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಅನೇಕ ಕಡೆಗಳಲ್ಲಿ ಮಹಾಮಳೆ ಸುರಿದ ಬೆನ್ನಲ್ಲೇ ಬೆಟ್ಟಗಳು ಕುಸಿದು ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು. ಸಾವಿರಕ್ಕೂ ಅಧಿಕ ಮಂದಿ ಮನೆಗಳನ್ನು ಕಳೆದುಕೊಂಡು ಬೀದಿಗೆ ಬಂದರು. ಹಲವರು ಜೀವ ಕಳೆದುಕೊಂಡರು. ಬೆಟ್ಟ ಕುಸಿತದಿಂದ ತೋಟಗಳೂ ನಾಶವಾಗಿ ಜನರ ಬದುಕನ್ನೇ ಮೂರಾಬಟ್ಟೆ ಮಾಡಿಬಿಟ್ಟಿತು. ಅಂದಿನ ದುರಂತದಲ್ಲಿ 20 ಜನ ಸಾವನ್ನಪ್ಪಿದರು, 4,056 ಮನೆಗಳಿಗೆ ಹಾನಿಯಾಯಿತು ಮತ್ತು ಕೊಡಗಿನಲ್ಲಿ 18,000 ಜನರನ್ನು ಸ್ಥಳಾಂತರಿಸಲಾಗಿತ್ತು. ಇದು ಜಿಲ್ಲೆಯು ಅನುಭವಿಸಿದ ಮೊದಲ ಬೃಹತ್ ದುರಂತ ಮತ್ತು ಕರ್ನಾಟಕದಲ್ಲಿ ಮೊದಲ ಮಹತ್ವದ ಭೂಕುಸಿತ ಸಂಬಂಧಿತ ವಿಪತ್ತು ಆಗಿತ್ತು. ಭೂಕುಸಿತದ ಆರ್ಭಟಕ್ಕೆ ಮನೆಗಳು ಆಟಿಕೆಗಳಂತೆ ತೇಲಿ ಹೋಗಿದ್ದವು. ದುಃಸ್ವಪ್ನದಂತೆ ಕಳೆದು ಹೋದ ಆ ದುರ್ಘಟನೆಗೆ ಕಾರಣವಾದ ವೈಜ್ಞಾನಿಕ ಅಂಶಗಳ ಬಗ್ಗೆ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲವಾದರೂ, ಹಾನಿಗೀಡಾದ ಜಾಗವನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಕೃತಿ ತನ್ನ ಕೆಲಸವನ್ನು ಸದ್ದಿಲ್ಲದೆ ನಡೆಸುತ್ತಿದೆ.
ಇಂತಹ ಹೊತ್ತಿನಲ್ಲಿ ಕೊಡಗಿನಲ್ಲಿ ಮತ್ತೊಂದು ಆತಂಕ ಎದುರಾಗಿದೆ. ಈ ಹಿಂದೆ ಅಪಾಯ ಸಂಭವಿಸಿದ ಪ್ರದೇಶಗಳ ಆಧಾರದಲ್ಲಿ 104 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳನ್ನು ‘ಮ್ಯಾಪಿಂಗ್’ ಮಾಡಲಾಗಿದ್ದು, ಅಪಾಯದ ಸ್ಥಳದಲ್ಲಿರುವ 2,995 ಕುಟುಂಬಗಳು ಸ್ಥಳಾಂತರಕ್ಕೆಂದು ಗುರುತು ಮಾಡಲಾಗಿದೆ. ಮಳೆಗಾಲದಲ್ಲಿಯೂ ಗ್ರಾಮೀಣ ಪ್ರದೇಶಗಳ ಜನತೆ ಭೂಕುಸಿತ, ಪ್ರವಾಹದ ಭಯದಲ್ಲಿ ದಿನದೂಡಬೇಕಾದ ಪರಿಸ್ಥಿತಿ ಬಂದಿದ್ದು, ಪ್ರಕೃತಿ ಮುನಿಯದಿರಲಿ ಎಂಬ ಪ್ರಾರ್ಥನೆ ಮೊಳಗುತ್ತಿದೆ.
ಅಭಿವೃದ್ಧಿಯೇ ಕೊಡಗನ್ನು ಕಾಡುತ್ತಿದೆಯೇ?
ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಕಷ್ಟ-ನಷ್ಟ ಸಾವು-ನೋವುಗಳನ್ನು ಅಧಿಕ ಮಳೆಯಲ್ಲಿ ಅನುಭವಿಸಿದ ಪ್ರದೇಶ ಕೊಡಗು ಜಿಲ್ಲೆ. ಪರಿಸರ ಪ್ರಿಯರು ನಿರಂತರವಾಗಿ ಕೊಡಗಿನಲ್ಲಿ ಜಾರಿಯಾಗಿರುವ, ಜಾರಿಯಾಗುತ್ತಿರುವ ಹಲವಾರು ಯೋಜನೆಗಳ ವಿರುದ್ಧ ಧ್ವನಿಯೆತ್ತಿ ಪ್ರತಿಭಟಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ತೀರಾ ಇತ್ತೀಚೆಗೆ ಕೊಡಗಿನ ಮೂಲಕ ಹಾದು ಹೋಗಲಿರುವ ಎರಡು ರೈಲ್ವೇ ಮಾರ್ಗ ನಿರ್ಮಾಣ ಯೋಜನೆಗಳಿಗೆ ಸಂಘಟಿತವಾಗಿ ವಿರೋಧ ವ್ಯಕ್ತವಾಗಿತ್ತು. ಒಂದು ರೈಲ್ವೇ ಮಾರ್ಗ ಕೇರಳದ ತಲಶ್ಶೇರಿಯಿಂದ ದಕ್ಷಿಣ ಕೊಡಗಿನ ಮೂಲಕ ಮೈಸೂರಿಗೆ ರೈಲ್ವೇ ಸಂಪರ್ಕ ಕಲ್ಪಿಸುವ ಯೋಜನೆ. ಮತ್ತೊಂದು ಹುಣಸೂರಿನಿಂದ ಪಿರಿಯಾಪಟ್ಟಣ ಮಾರ್ಗವಾಗಿ ಕುಶಾಲನಗರ ಮೂಲಕ ಮಂಗಳೂರು ತಲುಪುವ ಯೋಜನೆ. ಈ ಎರಡೂ ಯೋಜನೆಗಳಿಗೆ ಪಶ್ಚಿಮ ಘಟ್ಟಗಳ ಹಲವಾರು ಗುಡ್ಡಗಳನ್ನು ಕಡಿದೇ ರೈಲು ಮಾರ್ಗ ನಿರ್ಮಾಣ ಮಾಡಬೇಕಾಗುತ್ತದೆ. ಈ ಯೋಜನೆಗಳಿಗೆ ಎರಡು ಲಕ್ಷ ಮರಗಳು ಬಲಿಯಾಗುತ್ತವೆಂಬ ಆತಂಕವನ್ನು ಪರಿಸರ ಕಾರ್ಯಕರ್ತರು ವ್ಯಕ್ತಪಡಿಸಿದ್ದರು. ಈ ಅರಣ್ಯ ನಾಶದಿಂದ ಆನೆ, ಕರಡಿಗಳಿಗೆ ಅಡಚಣೆಯುಂಟಾಗಿ ವನ್ಯಜೀವಿ ಮಾನವ ಸಂಘರ್ಷ ಮತ್ತಷ್ಟು ಉಲ್ಬಣಿಸಲಿದೆ ಎಂಬ ಆತಂಕನ್ನು ತಜ್ಞರು ವ್ಯಕ್ತಪಡಿಸಿದ್ದರು. ಈ ಸಂಘರ್ಷ ಕೊಡಗಿನಲ್ಲಿ ಅನೇಕ ಜನರ ಜೀವ ಬಲಿ ಪಡೆದಿದೆ.
ಸ್ಥಳೀಯ ಮೂಲಗಳ ಪ್ರಕಾರ, ಕೊಡಗು ಜಿಲ್ಲೆಯಲ್ಲಿ ಅಂದಾಜು 4 ಸಾವಿರಕ್ಕೂ ಅಧಿಕ ಹೋಂಸ್ಟೇಗಳಿವೆ. ಅಧಿಕೃತ ಹೋಮ್‌ಸ್ಟೇಗಳಿಗಿಂತ ಅನಧಿಕೃತ ಹೋಮ್‌ಸ್ಟೇಗಳೇ ಹತ್ತಾರು ಪಟ್ಟು ಹೆಚ್ಚಾಗಿವೆ. ಇದಲ್ಲದೇ ಅನೇಕ ಐಷಾರಾಮಿ ರೆಸಾರ್ಟ್‌ಗಳು ಖಾಸಗಿ ವಿಲ್ಲಾಗಳು ಕಾರ್ಯಾಚರಣೆ ನಡೆಸುತ್ತಿವೆ. ರಜಾ ದಿನಗಳಲ್ಲಿ ಪ್ರವಾಸಿಗರ ಮಹಾ ಪ್ರವಾಹದ ಕಾಲ್ತುಳಿತಕ್ಕೆ ಕೊಡಗಿನ ಪರಿಸರ ತತ್ತರಿಸಿ ಹೋಗುತ್ತಿದೆ. ಪ್ರವಾಸಿಗರ ಆಕರ್ಷಣೆಗೆ, ಅನುಕೂಲಕ್ಕೆ ಓಡಾಟ ಹಾಗೂ ಮೋಜು-ಮಸ್ತಿಗೆ ಕೊಡಗಿನ ಪರಿಸರವನ್ನ ಕೊಚ್ಚೆಗುಂಡಿ ಮಾಡಿ ಹಾಳುಗೆಡವಲಾಗುತ್ತಿದೆ. ಸುಮಾರು ಎಂಟು ವರ್ಷಗಳ ಹಿಂದೆ ಕೇರಳ ರಾಜ್ಯದ ಕೋಝಿಕ್ಕೋಡ್‌ಗೆ ಮೈಸೂರು, ಕೊಡಗು ಮೂಲಕ ಎಳೆಯಲಾದ ಹೈಟೆಶ್ಶನ್ ವಿದ್ಯುತ್ ಮಾರ್ಗಕ್ಕೆ ಅಂದಾಜು 56,000 ಮರಗಳು ಬಲಿಯಾಗಿವೆ.
ಕೊಡಗಿನ ಮೂಲಕ 4 ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿರುವುದರಿಂದ ಕೊಡಗಿನ ಅರಣ್ಯ ಪ್ರದೇಶದ ಮೇಲೆ ವ್ಯಾಪಕ ದುಷ್ಪರಿಣಾಮ ಉಂಟಾಗಿದೆ. ಅಭಯಾರಣ್ಯಗಳಿಂದ ಹೊರದೂಡಿಸಿಕೊಂಡ ವಸತಿ ಹೀನರಿಗೆ ಕೊಡಗಿನ ಗುಡ್ಡಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಕೃಷಿ ಭೂಮಿಯ ಹಾಗೂ ಎಸ್ಟೇಟ್ ಗಳ ಪಕ್ಕದಲ್ಲಿ ವ್ಯಾಪಕ ಒತ್ತುವರಿ ನಡೆಯುತ್ತಿದೆ. ಇಂಥ ಅಪಾಯಕಾರಿ ಯೋಜನೆಗಳಿಂದಾಗಿ ಕೊಡಗಿನ ಅರಣ್ಯ ಪ್ರದೇಶ 102 ಚದರ ಕಿಮೀ ಕಡಿಮೆಯಾಗಿದೆ ಎಂದು ಭಾರತೀಯ ಅರಣ್ಯ ಸರ್ವೇಕ್ಷಣ ಇಲಾಖೆಯ ವಾರ್ಷಿಕ ವರದಿ ಹೇಳಿದೆ.
ಮೇಲಿನ ಎಲ್ಲ ಕಾರಣಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಕಾವೇರಿ ನದಿಯು ಬೇಸಿಗೆಯ ಮೂರು ತಿಂಗಳು ಬತ್ತಿ ಹೋಗುತ್ತಿದೆ. ನದಿಯ ಅಂಚಿನಲ್ಲಿ ರೆಸಾರ್ಟ್ ಹೋಂಸ್ಟೇ ನಿರ್ಮಿಸಲು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿದು ಗುಡ್ಡಗಳ ಇಳಿಜಾರಿನ ಪ್ರದೇಶಗಳನ್ನು ಕಟ್ಟಡ ನಿರ್ಮಾಣಕ್ಕೆ ಸಿದ್ಧಪಡಿಸಲು ಅಸ್ಥಿರಗೊಳಿಸಲಾಗಿದೆ. ಮಣ್ಣಿಗೆ ಸ್ಥಿರತೆಯನ್ನು ನೀಡಿ ಅಂತರ್ಜಲ ವರ್ಧನೆ ಮಾಡುತ್ತಿದ್ದ ಕಾಡುಜಾತಿಯ ಮರಗಳನ್ನು ತೆಗೆದು ಬರೀ ಸಿಲ್ವರ್ ಓಕ್‌ನಂಥ ಮರಗಳನ್ನು ನೆಡಲಾಗುತ್ತಿದೆ. ಈ ರೀತಿಯ ಚಟುವಟಿಕೆಗಳಿಂದಲೂ ವ್ಯಾಪಕ ಅರಣ್ಯನಾಶವಾಗಿ ಗುಡ್ಡ ಗುಡ್ಡಗಳೇ ಕುಸಿದು ಕಣ್ಮರೆಯಾಗುವ ಪರಿಸ್ಥಿತಿಯನ್ನು ವಿನಾಶಕಾರಿ ಅಭಿವೃದ್ಧಿ ಯೋಜನೆಗಳು ಕೊಡಗಿನಲ್ಲಿ ಸೃಷ್ಟಿಸಿವೆ ಎಂದು ಪರಿಸರ ತಜ್ಞರು ಹೇಳುತ್ತಾರೆ.
ಕೇರಳವನ್ನು ನಡುಗಿಸಿದ ಭೂಕುಸಿತಗಳು
ಕೇರಳಕ್ಕೆ ಪ್ರವಾಹ ಅಪ್ಪಳಿಸಿರುವುದು ಇದೇ ಮೊದಲೇನಲ್ಲ. 2019ರ ಆಗಸ್ಟ್ 6ರಂದು ಪುತ್ತುಮಲ ಸಮೀಪದಲ್ಲಿ ಭೂಕುಸಿತ ಉಟಾಗಿ 17 ಜನ ಸಾವಿಗೀಡಾಗಿದ್ದರು. ಈ ಪೈಕಿ ಐವರ ಮೃತದೇಹಗಳು ಪತ್ತೆಯಾಗಲೇ ಇಲ್ಲ. 65 ಮನೆಗಳು ಸಂಪೂರ್ಣ ಹಾನಿಗೆ ಒಳಗಾದವು. ಆದ್ರೆ ಇದಕ್ಕೂ ಮುನ್ನ ಕೇರಳದಲ್ಲಿ 2018ರಲ್ಲಿ ಕೇರಳ ಶತಮಾನಗಳಲ್ಲೇ ಅತೀ ಭೀಕರ ಪ್ರವಾಹವೊಂದನ್ನು ಎದುರಿಸಿತ್ತು. ಸುಮಾರು 483 ಮಂದಿ ಜೀವ ಕಳೆದುಕೊಂಡಿದ್ದರು. ವ್ಯಾಪಕ ಹಾನಿಯನ್ನುಂಟುಮಾಡಿತ್ತು ಈ ಪ್ರವಾಹ.
2020 – ಪೆಟ್ಟಿಮುಡಿ: ಪೆಟ್ಟಿಮುಡಿಯಲ್ಲಿ 2020ರ ಆಗಸ್ಟ್ 6 ರಂದು ರಾತ್ರಿ 10:30ರ ವೇಳೆಗೆ ದುರಂತ ಸಂಭವಿಸಿದ ಸ್ವಲ್ಪ ಸಮಯದಲ್ಲೇ ಎಲ್ಲವೂ ನೆಲದಡಿಯಲ್ಲಿ ಹೂತುಹೋಗಿದ್ದವು. ಅಂದು ಕೆಲಸ ಮುಗಿಸಿ ನಿದ್ರೆಗೆ ಜಾರಿದ್ದ ಜನರ ಮನೆಗಳ ಮೇಲೆ ಬಂಡೆಗಳು ಉರುಳಿ ಬಿದ್ದಿದ್ದವು. ಇದಾದ 10 ಗಂಟೆಗಳ ನಂತರ ಅನಾಹುತ ಸಂಭವಿಸಿರುವುದು ಹೊರಜಗತ್ತಿಗೆ ತಿಳಿದಿತ್ತು. ವಿಪತ್ತು ನಿರ್ವಹಣಾ ಪಡೆಗಳು ಮತ್ತು ವಿವಿಧ ಇಲಾಖೆಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದವು. 500ಕ್ಕೂ ಹೆಚ್ಚು ಜನ ಕೋವಿಡ್ ಅನ್ನೂ ನಿರ್ಲಕ್ಷಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಸುಮಾರು 19 ದಿನಗಳ ಕಾಲ ಶವಗಳಿಗಾಗಿ ಹುಡುಕಾಟ ನಡೆಯಿತು. ಶೋಧದ ವೇಳೆ 14 ಕಿ.ಮೀ ದೂರದಿಂದ ಮೃತದೇಹಗಳು ಪತ್ತೆಯಾಗಿದ್ದವು. ರೀ ಮಳೆ, ಕೆಸರು, ವಿಪರೀತ ಚಳಿ ಮತ್ತು ಹಿಮವು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿತ್ತು. ಅಂತಿಮವಾಗಿ 70 ಮಂದಿಗಳು ಜೀವ ಕಳೆದುಕೊಂಡಿದ್ದು ಪೂರ್ಣ ಕಾರ್ಯಾಚರಣೆ ಬಳಿಕ ಬೆಳಕಿಗೆ ಬಂದಿತು. 2024ರ ಜುಲೈ 30ರಂದು ವಯನಾಡಿನ ಮುಂಡಕ್ಕೈನಲ್ಲಿ ಸಂಭವಿಸಿದ ದುರಂತವೂ ಇದೀಗ ಇ ಕಹಿ ಘಟನೆಗಳನ್ನು ನೆನಪಿಸಿದೆ.
ಮರೆಯಲಾಗದ ಶಿರೂರು ಗುಡ್ಡ ಕುಸಿತ
ಜುಲೈ 15 ರಾತ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚರಿಸುತ್ತಿದ್ದ ಎಲ್ಪಿಜಿ ಟ್ಯಾಂಕರ್ ಮೇಲೆ ಗುಡ್ಡ ಕುಸಿದು ಬಿದ್ದಿತ್ತು. ಈ ದುರ್ಘಟನೆಯಲ್ಲಿ ಹಲವಾರು ಜನ ಮೃತಪಟ್ಟಿದ್ದರು. ಹಲವರ ಶವವನ್ನು ಪತ್ತೆ ಮಾಡಿ ಹೊರತೆಗೆಯಲಾಗಿತ್ತು. ಇನ್ನು ಹಲವರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನದಿಯಲ್ಲಿ ತೇಲಿ ಹೋಗಿರಬಹುದೂ ಎಂಬ ಅನುಮಾನ ಇದೆ. ಈ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಶಿರೂರು ಗುಡ್ಡ ಕುಸಿತಕ್ಕೆ ಕಾರಣ ಏನು?
ಅಂಕೋಲಾ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಗುಡ್ಡ ಕುಸಿತಕ್ಕೆ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಯ ಅವೈಜ್ಞಾನಿಕವಾಗಿ ಗುಡ್ಡ ಕೊರೆದಿರುವುದು ಒಂದು ಕಾರಣವಾದರೆ, ಗುಡ್ಡದ ಮೇಲಿನ ಪ್ರದೇಶದಿಂದ ವ್ಯಾಪಕ ಪ್ರಮಾಣದಲ್ಲಿ ನೀರು ಇಂಗಿ ಗುಡ್ಡದಿಂದ ಒಸರುತ್ತಿರುವುದು ಮತ್ತೊಂದು ಕಾರಣ ಆಗಿರಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ʻಗುಡ್ಡದ ಮೇಲೆ ಅರಣ್ಯ ಪ್ರದೇಶವಿದ್ದರೂ ನೀರು ಇಂಗಲು ಬಯಲು ಸೃಷ್ಟಿಯಾದಂತಿದೆ. ಅರಣ್ಯ ನಾಶ ಆಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಸಮೀಕ್ಷೆ ನಡೆಸುವುದು ಸೂಕ್ತ’ ಎಂದು ಪರಿಸರ ತಜ್ಞರು ತಿಳಿಸಿದ್ದಾರೆ. ಹೆದ್ದಾರಿ ವಿಸ್ತರಣೆಗೆ ಗುಡ್ಡವನ್ನು ಲಂಬಕೋನದಲ್ಲಿ ಕತ್ತರಿಸಿದ್ದು ಅವಘಡಕ್ಕೆ ಕಾರಣವಾಗಬಹುದು ಎಂದು ಕೆಲ ತಿಂಗಳ ಹಿಂದೆ ಎಚ್ಚರಿಸಲಾಗಿತ್ತು. ಹೆದ್ದಾರಿ ನಿರ್ಮಾಣಕ್ಕೆ ಯಂತ್ರೋಪಕರಣಗಳ ನಿರಂತರ ಬಳಕೆಯಿಂದ ಗುಡ್ಡಗಳಿಗೆ ಹಾನಿ ಆಗಿರಬಹುದು. ಡ್ರಿಲ್ಲಿಂಗ್, ಬ್ಲಾಸ್ಟಿಂಗ್ ಸೇರಿ ಮಿತಿಮೀರಿ ಕಾಮಗಾರಿ ನಡೆದಿದೆ. ಈಗ ಎಲ್ಲವೂ ಕಂಪಿಸಿ, ಮಳೆಗಾಲದಲ್ಲಿ ಅಡ್ಡ ಪರಿಣಾಮ ಬೀರಿದೆ’ ಎಂದು ಪರಿಸರ ತಜ್ಞ ವಿ.ಎನ್.ನಾಯಕ ತಿಳಿಸಿದ್ದಾರೆ.
ಕೇರಳದ ವಯನಾಡಿನಲ್ಲಿ (Wayanad Landslide) ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಈಗ 400 ದಾಟಿದೆ. ಈ ದುರಂತದಲ್ಲಿ ಮನೆಯನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಸಂತ್ರಸ್ತರ ಸಹಾಯಕ್ಕೆ ಡಾರ್ಲಿಂಗ್ ಪ್ರಭಾಸ್ (Prabhas) ನೆರವಾಗಿದ್ದಾರೆ.
ವಯನಾಡು ಭೂಕುಸಿತ ದುರಂತದ ನಿಮಿತ್ತ ಸಂಕಷ್ಟದಲ್ಲಿರುವವರಿಗೆ ನಟ ಪ್ರಭಾಸ್ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಕೇರಳದ ಸಿಎಂ ಪರಿಹಾರ ನಿಧಿಗೆ 2 ಕೋಟಿ ರೂ. ನೀಡುವ ಮೂಲಕ ಪ್ರಭಾಸ್ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಕೊಡೆ ಹಿಡಿದು ನಿಂತ ‘ಬಿಗ್ ಬಾಸ್’ ಖ್ಯಾತಿಯ ಸೋನು
ಅಂದಹಾಗೆ, ವಯನಾಡು ಭೂಕುಸಿತ ದುರಂತ ಹಿನ್ನೆಲೆ ಈಗಾಗಲೇ ರಶ್ಮಿಕಾ ಮಂದಣ್ಣ, ಸೂರ್ಯ ದಂಪತಿ, ಮಮ್ಮುಟ್ಟಿ, ಚಿಯಾನ್ ವಿಕ್ರಮ್, ದುಲ್ಕರ್ ಸಲ್ಮಾನ್, ಅಲ್ಲು ಅರ್ಜುನ್, ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಸೇರಿದಂತೆ ಅನೇಕರು ಕೇರಳದ ಸಿಎಂ ಫಂಡ್‌ಗೆ ಲಕ್ಷ ಲಕ್ಷ ದೇಣಿಗೆ ನೀಡಿದ್ದಾರೆ.
ತಿರುವನಂತಪುರಂ: ಕೇರಳದ (Kerala) ವಯನಾಡು ಭೂಕುಸಿತ (Wayanad Landslide) ದುರಂತ 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡಾ ರಕ್ಷಣಾ ಪಡೆಗಳು ಶೋಧ ಕಾರ್ಯವನ್ನು ಮುಂದುವರಿಸಿವೆ. ಭೂಕುಸಿತ ದುರಂತವು ಹಲವು ಮನಕಲಕುವ ಘಟನಾವಳಿಗಳಿಗೆ ಸಾಕ್ಷಿಯಾಗಿದೆ.
ಭೂಕುಸಿತದಲ್ಲಿ ಒಟ್ಟು 1,208 ಮನೆಗಳಿಗೆ ಹಾನಿಯುಂಟಾಗಿದೆ. ಇದರಲ್ಲಿ ಮುಂಡಕ್ಕೈನಲ್ಲಿ 540 ಮನೆಗಳು, ಚೂರಲ್ಮಲದಲ್ಲಿ 600, ಅಟ್ಟಮಾಲದಲ್ಲಿ 68 ಮನೆಗಳು ನೆಲಸಮವಾಗಿದೆ.
3,700 ಎಕರೆ ಕೃಷಿಭೂಮಿ ನಾಶವಾಗಿದ್ದು, 21,111 ಕೋಟಿ ಮೌಲ್ಯದ ಬೆಳೆ ನೆಲಕಚ್ಚಿದೆ. ಭೂಕುಸಿತದಿಂದ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ಕೇರಳ ಸರ್ಕಾರ ಉಚಿತ ಪಡಿತರ ಘೋಷಿಸಿದೆ. ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ತೆಲುಗು ನಟರಾದ ಚಿರಂಜೀವಿ-ರಾಮಚರಣ್ 1 ಕೋಟಿ, ಅಲ್ಲು ಅರ್ಜುನ್ 25 ಲಕ್ಷ ರೂ.ದೇಣಿಗೆ ನೀಡಿದ್ದಾರೆ. ಯುಡಿಎಫ್‌ನ ಶಾಸಕರು ತಮ್ಮ 1 ತಿಂಗಳ ಸಂಬಳವನ್ನು ಸಂತ್ರಸ್ತರಿಗೆ ನೀಡೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವಯನಾಡು ಭೂಕುಸಿತಕ್ಕೆ ಗೋ ಹತ್ಯೆ ಕಾರಣ – ಬಿಜೆಪಿ ನಾಯಕ ವಿವಾದಾತ್ಮಕ ಹೇಳಿಕೆ
ಈ ನಡುವೆ ಶ್ವಾನವೊಂದು 6 ದಿನಗಳ ಬಳಿಕ ತನ್ನ ಮನೆ ಒಡತಿಯನ್ನು ಕಂಡ ತಕ್ಷಣ ಓಡಿ ಬಂದ ದೃಶ್ಯ ಮನಕಲುಕುವಂತಿದೆ. ಇನ್ನು ಭೂಕುಸಿತದಿಂದ ನಲುಗಿ ಹೋಗಿರುವ ವಯನಾಡಿನಲ್ಲಿ ಕಳ್ಳರ ಹಾವಳಿ ಆರಂಭವಾಗಿದೆ. ನಿರಾಶ್ರಿತರ ಮನೆಗಳಿಗೆ ನುಗ್ಗಿ ಕಳ್ಳತನ ಮಾಡಲಾಗುತ್ತಿದ್ದು, ಈ ಬಗ್ಗೆ ನಿರಾಶ್ರಿತರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಗುರುತು ಸಿಗದ ಶವಗಳನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ಮಾಡಲಾಗ್ತಿದೆ.
ಕೇರಳದ ವಯನಾಡಿನಲ್ಲಿ (Wayanad Landslides) ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಈಗ 300 ದಾಟಿದೆ. ಈ ದುರಂತದಲ್ಲಿ ಮನೆಯನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಸಂತ್ರಸ್ತರ ಸಹಾಯಕ್ಕೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮುಂದಾಗಿದ್ದಾರೆ.
ವಯನಾಡು ಭೂಕುಸಿತ ದುರಂತದ ನಿಮಿತ್ತ ಸಂಕಷ್ಟದಲ್ಲಿರುವವರಿಗೆ ಈಗ ಅಲ್ಲು ಅರ್ಜುನ್ 25 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಕುರಿತು ಸ್ವತಃ ನಟ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬದುಕಿನಲ್ಲಿ ಎದುರಿಸಿದ ಏರಿಳಿತಗಳ ಬಗ್ಗೆ ಮಾತನಾಡಿದ ಸಮಂತಾ
I am deeply saddened by the recent landslide in Wayanad. Kerala has always given me so much love, and I want to do my bit by donating ₹25 lakh to the Kerala CM Relief Fund to support the rehabilitation work. Praying for your safety and strength . @CMOKerala
ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಕೇರಳದ ಜನರು ನನಗೆ ಯಾವಾಗಲೂ ತುಂಬಾ ಪ್ರೀತಿಯನ್ನು ನೀಡಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡಲು ಬಯಸುತ್ತೇನೆ. ನಿಮ್ಮೆಲ್ಲರ ಸುರಕ್ಷೆ ಮತ್ತು ಶಕ್ತಿಗಾಗಿ ಪ್ರಾರ್ಥಿಸುತ್ತೇನೆ ಎಂದು ಅಲ್ಲು ಅರ್ಜುನ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈಗ ನಟನ ನಡೆಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.
ಅಂದಹಾಗೆ, ವಯನಾಡು ಭೂಕುಸಿತ ದುರಂತ ಹಿನ್ನೆಲೆ ಈಗಾಗಲೇ ರಶ್ಮಿಕಾ ಮಂದಣ್ಣ (Rashmika Mandanna), ಸೂರ್ಯ ದಂಪತಿ, ಮಮ್ಮುಟ್ಟಿ, ಚಿಯಾನ್ ವಿಕ್ರಮ್, ದುಲ್ಕರ್ ಸಲ್ಮಾನ್ ಸೇರಿದಂತೆ ಅನೇಕರು ಕೇರಳದ ಸಿಎಂ ಫಂಡ್‌ಗೆ ಲಕ್ಷ ಲಕ್ಷ ದೇಣಿಗೆ ನೀಡುವ ಮೂಲಕ ಸಹಾಯ ಮಾಡಿದ್ದಾರೆ.
– ನಾನೂ ಭಾರತೀಯ ಸೇನೆ ಸೇರ್ತೀನಿ: ಯೋಧರಿಗೆ 3ನೇ ತರಗತಿ ಬಾಲಕನ ಹೃದಯಸ್ಪರ್ಶಿ ಪತ್ರ
ತಿರುವನಂತರಪುರಂ: ಭೂಕುಸಿತ ಪೀಡಿತ ಕೇರಳದ (Kerala) ವಯನಾಡ್‌ನಲ್ಲಿ (Wayanad) ಸೈನಿಕರ ರಕ್ಷಣಾ ಕಾರ್ಯಾಚರಣೆ ಮೆಚ್ಚಿ ಪುಟ್ಟ ಬಾಲಕನೊಬ್ಬ ಭಾರತೀಯ ಸೇನೆಗೆ ಹೃದಯಸ್ಪರ್ಶಿ ಪತ್ರ ಬರೆದಿದ್ದಾನೆ.
ಆತ್ಮೀಯ ಭಾರತೀಯ ಸೇನೆ, ನನ್ನ ಪ್ರೀತಿಯ ವಯನಾಡ್ ಭಾರಿ ಭೂಕುಸಿತದಿಂದ ಅಪ್ಪಳಿಸಿತು. ವಿನಾಶವನ್ನು ಸೃಷ್ಟಿಸಿತು. ಶಿಲಾಖಂಡರಾಶಿಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ನೀವು ರಕ್ಷಿಸುತ್ತಿರುವುದನ್ನು ನೋಡಿ ನನಗೆ ಹೆಮ್ಮೆ ಮತ್ತು ಸಂತೋಷವಾಯಿತು ಎಂದು ಮಲಯಾಳಂ ಭಾಷೆಯಲ್ಲಿ ಭಾರತೀಯ ಸೇನೆಗೆ ಬಾಲಕ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾನೆ.
Your heartfelt words have deeply touched us. In times of adversity, we aim to be a beacon of hope, and your letter reaffirms this mission. Heroes like you inspire us to give our utmost. We eagerly await the day you don the uniform and stand… pic.twitter.com/zvBkCz14ai
— Southern Command INDIAN ARMY (@IaSouthern) August 3, 2024
ಬಾಲಕನ ಕೃತಜ್ಞತೆಗೆ ಪ್ರತಿಕ್ರಿಯಿಸಿರುವ ಭಾರತೀಯ ಸೇನೆ ಧನ್ಯವಾದ ತಿಳಿಸಿದೆ. ‘ಯುವ ಯೋಧನಿಗೆ’ ಧನ್ಯವಾದ ಎಂದಿದೆ. ನಿಮ್ಮ ಮನದಾಳದ ಮಾತುಗಳು ನಮ್ಮನ್ನು ಆಳವಾಗಿ ಮುಟ್ಟಿವೆ. ಸಂಕಷ್ಟದ ಸಮಯದಲ್ಲಿ, ನಾವು ಭರವಸೆಯ ದಾರಿದೀಪವಾಗಲು ಗುರಿ ಹೊಂದಿದ್ದೇವೆ. ನಿಮ್ಮ ಪತ್ರವು ಈ ಧ್ಯೇಯವನ್ನು ಪುನರುಚ್ಚರಿಸಿದೆ. ನಿಮ್ಮಂತಹ ವೀರರು ನಮ್ಮ ಕೈಲಾದದ್ದನ್ನು ನೀಡಲು ನಮಗೆ ಸ್ಫೂರ್ತಿ ನೀಡುತ್ತಾರೆ. ನೀವು ಸಮವಸ್ತ್ರವನ್ನು ಧರಿಸಿ ನಮ್ಮೊಂದಿಗೆ ನಿಲ್ಲುವ ದಿನಕ್ಕಾಗಿ ನಾವು ಕುತೂಹಲದಿಂದ ಕಾಯುತ್ತಿದ್ದೇವೆ. ಒಟ್ಟಾಗಿ, ನಾವು ನಮ್ಮ ದೇಶದ ಬಗ್ಗೆ ಹೆಮ್ಮೆಪಡುತ್ತೇವೆ. ಯುವ ಯೋಧರೇ, ನಿಮ್ಮ ಧೈರ್ಯ ಮತ್ತು ಸ್ಫೂರ್ತಿಗಾಗಿ ಧನ್ಯವಾದಗಳು ಎಂದು ಬಾಲಕನ ಪತ್ರಕ್ಕೆ ಭಾರತೀಯ ಸೇನೆ ಪ್ರತಿಕ್ರಿಯಿಸಿದೆ.
ಮಂಗಳವಾರ ಮುಂಜಾನೆ ದೇವರ ನಾಡು ಕೇರಳದ ವಯನಾಡಿನಲ್ಲಿ ಸಂಭವಿಸಿದ ಅವಳಿ ಭೂಕುಸಿತಕ್ಕೆ 200ಕ್ಕೂ ಹೆಚ್ಚು ಜನರು ಬಲಿಯಾದರು. ಸಾವಿನ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, ಭಾರತೀಯ ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಣಾ ಸಿಬ್ಬಂದಿಯಲ್ಲಿ 500 ಕ್ಕೂ ಹೆಚ್ಚು ಸೈನಿಕರನ್ನು ಹೊಂದಿರುವ ಸೇನಾ ತಂಡಗಳು ಭೂಕುಸಿತದಿಂದ ಹಾನಿಗೊಳಗಾದ ಭಾಗಗಳಲ್ಲಿ ರಕ್ಷಣಾ ಕಾರ್ಯ ಕೈಗೊಂಡಿವೆ. ಇದನ್ನೂ ಓದಿ: Wayanad Landslides | ಪ್ರತಿ ವರ್ಷ ಮೆಪ್ಪಾಡಿಯಲ್ಲಿ ತಲೆ ಎತ್ತುತ್ತಿವೆ 380 ಹೊಸ ಕಟ್ಟಡಗಳು
In light of the tragic landslide in Wayanad, Karnataka stands in solidarity with Kerala. I have assured CM Shri @pinarayivijayan of our support and announced that Karnataka will construct 100 houses for the victims. Together, we will rebuild and restore hope.
ಪೋಸ್ಟ್‌ನಲ್ಲಿ ಏನಿದೆ?
ವಯನಾಡಿನಲ್ಲಿ ಸಂಭವಿಸಿದ ದುರಂತ ಭೂಕುಸಿತದ ಬೆಳಕಿನಲ್ಲಿ, ಕರ್ನಾಟಕವು ಕೇರಳದೊಂದಿಗೆ (Kerala) ಒಗ್ಗಟ್ಟಿನಿಂದ ನಿಂತಿದೆ. ನಾನು ಕೇರಳ ಸಿಎಂ ಪಿಣರಾಯಿ ವಿಜಯನ್ ಜೊತೆ ಮಾತನಾಡಿ ಬೆಂಬಲ ವ್ಯಕ್ತಪಡಿಸಿದ್ದೇನೆ. ಕರ್ನಾಟಕವು ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿ ಕೊಡಲಿದೆ. ಒಟ್ಟಾಗಿ ನಾವು ಪುನರ್ ನಿರ್ಮಾಣ ಮಾಡುತ್ತೇವೆ ಮತ್ತು ಭರವಸೆಯನ್ನು ಪುನಃಸ್ಥಾಪಿಸುತ್ತೇವೆ.