Tag: Wayanad

  • ಕೊಡಗು | ವಯನಾಡ್‌ ಸಮೀಪದ ತಮರಶೆರಿ ಘಾಟ್ ಬಳಿ ಭೂಕುಸಿತ; ಬದಲಿ ಮಾರ್ಗಕ್ಕೆ ಸೂಚನೆ

    ಕೊಡಗು | ವಯನಾಡ್‌ ಸಮೀಪದ ತಮರಶೆರಿ ಘಾಟ್ ಬಳಿ ಭೂಕುಸಿತ; ಬದಲಿ ಮಾರ್ಗಕ್ಕೆ ಸೂಚನೆ

    – ಮಲೆನಾಡು ಭಾಗದ ಶಾಲೆಗಳಿಗೆ ಶನಿವಾರ ರಜೆ

    ಮಡಿಕೇರಿ: ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ಕೇರಳದ ವಯನಾಡು ಜಿಲ್ಲೆಗೆ ಸಂಪರ್ಕಿಸುವ ತಮರಶೆರಿ ಘಾಟ್ ಬಳಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ವಯನಾಡ್‌ಗೆ (Wayanad) ಬದಲಿ ಮಾರ್ಗ ಸೂಚಿಸಿದೆ.

    ಅದರಂತೆ ಗಡಿಭಾಗವಾದ ಕುಟ್ಟ ಮೂಲಕ ಗುಡಲೂರು ಮಾರ್ಗವಾಗಿ ಸಂಚರಿಸುವ ವಾಹನಗಳನ್ನು ಬದಲೀ ಮಾರ್ಗವಾದ ಗೋಣಿಕೊಪ್ಪ ಕೂಟುಪುಳ – ಇರಿಟ್ಟಿ (ಕಣ್ಣೂರು ಜಿಲ್ಲೆ) ಮಾರ್ಗದ ಮೂಲಕ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾಎರೆ.

    ಆದ್ದರಿಂದ, ಗುಡಲೂರು ರಸ್ತೆಯಲ್ಲಿ ವಾಹನ ಸಂಚಾರ ಸುಗಮವಾಗುವವರೆಗೆ ಜಿಲ್ಲೆಯ ಕುಟ್ಟ ಮಾರ್ಗವಾಗಿ ಸಂಚರಿಸುವ ಸಾರ್ವಜನಿಕರು ಬದಲೀ ರಸ್ತೆ ಮಾಕುಟ್ಟ ಮುಖಾಂತರ ತಮರಶೆರಿ ಘಾಟ್, ಗುಡಲೂರು ಮಾರ್ಗವನ್ನು ಬಳಸಲು ಕೊಡಗು ಜಿಲ್ಲಾಡಳಿತ ಸಲಹೆ ನೀಡಿದೆ.

    ಮಲೆನಾಡು ಭಾಗದ ಶಾಲೆಗಳಿಗೆ ರಜೆ ಘೋಷಣೆ
    ಇನ್ನೂ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದ ಹಿನ್ನೆಲೆ ಆಗಸ್ಟ್‌ 30ರ ಶನಿವಾರದಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

    ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್ ಆರ್.ಪುರ, ಕಳಸ ತಾಲೂಕು, ಚಿಕ್ಕಮಗಳೂರು ತಾಲೂಕಿನ ಕಸಬಾ, ಅಂಬಳೆ, ಆಲ್ದೂರು, ವಸ್ತಾರೆ, ಖಾಂಡ್ಯ, ಆವತಿ, ಜಾಗರ ಹೋಬಳಿಗಳು, ತರೀಕೆರೆ ತಾಲೂಕಿನ ಲಿಂಗದಹಳ್ಳಿ-ಲಕ್ಕವಳ್ಳಿ ಹೋಬಳಿಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅದೇಶ ಹೊರಡಿಸಿದ್ದಾರೆ.

  • ವಯನಾಡ್ ಲೋಕಸಭಾ ಕ್ಷೇತ್ರದ ಮೆಪ್ಪಾಡಿಗೆ ಕರ್ನಾಟಕ ಸರ್ಕಾರದಿಂದ 10 ಕೋಟಿ ಹಣ

    ವಯನಾಡ್ ಲೋಕಸಭಾ ಕ್ಷೇತ್ರದ ಮೆಪ್ಪಾಡಿಗೆ ಕರ್ನಾಟಕ ಸರ್ಕಾರದಿಂದ 10 ಕೋಟಿ ಹಣ

    ಬೆಂಗಳೂರು: ನಮ್ಮ ದುಡ್ಡು, ಕೇರಳಕ್ಕೆ (Kerala) ನೆರವು. ಇದು ರಾಜ್ಯ ಸರ್ಕಾರದ ನಿಲುವು. ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ಕ್ಷೇತ್ರಕ್ಕೆ ಕರ್ನಾಟಕ (Karnataka) ಸರ್ಕಾರ ನೆರವು ನೀಡುತ್ತಿದೆ.

    ಪೂರಕ ಅಂದಾಜಿನಲ್ಲಿ ಕೇರಳ ರಾಜ್ಯದ ವಯನಾಡ್ (Wayanad) ಜಿಲ್ಲೆಯ ಮೆಪ್ಪಾಡಿ ಭೂಕುಸಿತ (Meppadi Landslide) ಕಾರಣದಿಂದ ಹಾನಿಗೊಳಗಾದವರ ಪುನರ್ವಸತಿಗೆ 10 ಕೋಟಿ ರೂ. ಕೊಡಲಾಗಿದೆ. ಭೂಕುಸಿತದಿಂದ ಹಾನಿಗೊಳಗಾದ 100 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 10 ಕೋಟಿ ಅನುದಾನ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಪೋಷಕರಿಗೆ ಸೆಡ್ಡು – ಸಹಾಯವಾಣಿಗೆ ಕರೆ ಮಾಡಿ ತನ್ನ ಬಾಲ್ಯ ವಿವಾಹವನ್ನೇ ನಿಲ್ಲಿಸಿದ ಬಾಲಕಿ

    ಕಂದಾಯ ಇಲಾಖೆ ಅಡಿಯಲ್ಲಿ ಬರುವ ಎಸ್‌ಡಿಆರ್‌ಎಫ್ ಅನುದಾನ ನೀಡುತ್ತಿರುವುದಾಗಿ ಉಲ್ಲೇಖಿಸಿದೆ. ಆದರೆ ಪ್ರಿಯಾಂಕ ಗಾಂಧಿ ಸಂಸದೆಯಾಗಿರುವ ವಯನಾಡ್ ಕ್ಷೇತ್ರದ ಮೆಪ್ಪಾಡಿ ಹಾನಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಕಳ್ಳತನ ಪ್ರಕರಣದ ಆರೋಪಿ ಠಾಣೆಯಲ್ಲಿ ಆತ್ಮಹತ್ಯೆ – ಕುಟುಂಬಸ್ಥರಿಂದ ಲಾಕಪ್ ಡೆತ್ ಶಂಕೆ

  • ಕಬಿನಿಯಿಂದ 25 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ – ಯಾವುದೇ ಕ್ಷಣದಲ್ಲಿ ಮತ್ತಷ್ಟು ನೀರು ಬಿಡುಗಡೆ

    ಕಬಿನಿಯಿಂದ 25 ಸಾವಿರ ಕ್ಯುಸೆಕ್‌ ನೀರು ಹೊರಕ್ಕೆ – ಯಾವುದೇ ಕ್ಷಣದಲ್ಲಿ ಮತ್ತಷ್ಟು ನೀರು ಬಿಡುಗಡೆ

    ಮೈಸೂರು: ಕೇರಳದ ವಯನಾಡಿನಲ್ಲಿ (Wayanad) ಮಳೆ ಹೆಚ್ಚಾದ ಪರಿಣಾಮ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯದ (Kabini Dam) ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ.

    ಜಲಾಶಯದ ಗರಿಷ್ಠ ನೀರಿನ ಮಟ್ಟ 2,284 ಅಡಿ ಇದ್ದು ಇಂದು 2,278.90 ಅಡಿಯಷ್ಟು ನೀರು ಸಂಗ್ರಹವಾಗಿದೆ. 20,225 ಕ್ಯುಸೆಕ್‌ ಒಳ ಹರಿವು ಇದ್ದರೆ 25,000 ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. 19.52 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಇಂದು 16.41 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ಮೈಸೂರು| ಜಾನುವಾರು ರಕ್ಷಣೆ ಹೆಸರಿನಲ್ಲಿ ಹಣ ವಸೂಲಿ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

     

    ಯಾವುದೇ ಕ್ಷಣದಲ್ಲಿ ಮತ್ತಷ್ಟು ನೀರನ್ನು ನದಿಗೆ ಹರಿಸುವ ಸಾಧ್ಯತೆ ಹಿನ್ನಲೆಯಲ್ಲಿ ನದಿ ಪಾತ್ರದಲ್ಲಿರುವ ಜನರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರು ರಕ್ಷಣೆ ಮಾಡಿಕೊಳ್ಳಬೇಕು. ಮುನ್ನಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮ ಸೂಚಿಸಿದೆ. ಇದನ್ನೂ ಓದಿ: ಅವಧಿಗೂ ಮುನ್ನ ಅರ್ಧದಷ್ಟು ಭರ್ತಿಯಾದ ಟಿಬಿ ಡ್ಯಾಂ – ಜು.1ಕ್ಕೆ ಕಾಲುವೆಗೆ ನೀರು ಬಿಡುಗಡೆ ಸಾಧ್ಯತೆ

  • Wayanad | ರೆಸಾರ್ಟ್‌ನಲ್ಲಿ ತಾತ್ಕಾಲಿಕ ಟೆಂಟ್ ಕುಸಿದು ಟೂರಿಸ್ಟ್ ಯುವತಿ ಸಾವು

    Wayanad | ರೆಸಾರ್ಟ್‌ನಲ್ಲಿ ತಾತ್ಕಾಲಿಕ ಟೆಂಟ್ ಕುಸಿದು ಟೂರಿಸ್ಟ್ ಯುವತಿ ಸಾವು

    – ಮೂವರು ಪ್ರವಾಸಿಗರಿಗೆ ಗಾಯ

    ತಿರುವನಂತಪುರ: ತಾತ್ಕಾಲಿಕ ಟೆಂಟ್ (Makeshift Tent) ಕುಸಿದು 24 ವರ್ಷದ ಯುವತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಕೇರಳದ (Kerala) ವಯನಾಡ್ (Wayanad) ಜಿಲ್ಲೆಯ ಜನಪ್ರಿಯ ರೆಸಾರ್ಟ್‌ವೊಂದರಲ್ಲಿ ನಡೆದಿದೆ.

    ಮೆಪ್ಪಾಡಿಯಲ್ಲಿರುವ 900 ಕಂಡಿ ಇಕೋಪಾರ್ಕ್ ಎಂಬ ರೆಸಾರ್ಟ್‌ನಲ್ಲಿ ಬುಧವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಮೃತ ಯುವತಿಯನ್ನು ಮಲಪ್ಪುರಂ ಜಿಲ್ಲೆಯ ನಿಲಂಬೂರ್ ಬಳಿಯ ಅಕಂಪಡಂ ಮೂಲದ ನಿಶ್ಮಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಸರಕು ಹಡಗು ಮುಳುಗಡೆ – 6 ಮಂದಿ ರಕ್ಷಣೆ

    ಮರದ ಕಂಬಗಳು ಮತ್ತು ಒಣ ಹುಲ್ಲನ್ನು ಬಳಸಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಟೆಂಟ್ ನಾಲ್ವರು ಪ್ರವಾಸಿಗರ ಮೇಲೆ ಬಿದ್ದಿದೆ. ಘಟನೆಯಲ್ಲಿ ಯುವತಿ ನಿಶ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಗಾಯಗೊಂಡ ಮೂವರು ಪ್ರವಾಸಿಗರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.‌ ಇದನ್ನೂ ಓದಿ: ಮೊದಲು ಉಗ್ರರನ್ನು ಹಸ್ತಾಂತರಿಸಿ – ಪಾಕ್‌ನ ಸಿಂಧೂ ನದಿ ಒಪ್ಪಂದ ಮನವಿಗೆ ಜೈಶಂಕರ್‌ ಮಾತು

  • ಸೋನಿಯಾ ಗಾಂಧಿ ಮನವೊಲಿಸಲು ವಯನಾಡಿಗೆ ನೂರು ಮನೆ: ಈಶ್ವರಪ್ಪ ವ್ಯಂಗ್ಯ

    ಸೋನಿಯಾ ಗಾಂಧಿ ಮನವೊಲಿಸಲು ವಯನಾಡಿಗೆ ನೂರು ಮನೆ: ಈಶ್ವರಪ್ಪ ವ್ಯಂಗ್ಯ

    ಶಿವಮೊಗ್ಗ: ಕೇರಳದ ವಯನಾಡಿಗೆ (Wayanad) ನೂರು ಮನೆ ಕಟ್ಟಿ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಅದು ಕರುಣೆಯೂ ಅಲ್ಲ, ಭಿಕ್ಷೆಯೂ ಅಲ್ಲ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಮನವೊಲಿಸಲು ಆ ರೀತಿ ಹೇಳಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (K.S Eshwarappa) ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ (Shivamogga) ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ವಯನಾಡಿನಲ್ಲಿ ಪ್ರಿಯಾಂಕ ಗಾಂಧಿ ಗೆದ್ದಿರುವುದರಿಂದ, ಮುಸಲ್ಮಾನರನ್ನು ತೃಪ್ತಿ ಪಡಿಸಲು ಇವರು ಹೊಟಿದ್ದಾರೆ. ರಾಜ್ಯದಲ್ಲೂ ಮನೆಗಳು ಬಿದ್ದಿವೆ, ಶಿವಮೊಗ್ಗದಲ್ಲಿ ಮನೆಗಳು ಬಿದ್ದಿವೆ. ಅವರಿಗೆ ಇನ್ನೂ ಪರಿಹಾರ ಬಂದಿಲ್ಲ. ಅವರಿಗೆ ಮೊದಲು ಪರಿಹಾರ ನೀಡಲಿ. ಕರ್ನಾಟಕದಲ್ಲಿ ಮನೆ ಬಿದ್ದಿರೋ ಕಡೆ ಸಿಎಂ, ಡಿಸಿಎಂ ಹೋಗಿ ಸಮಸ್ಯೆ ಕೇಳಿಲ್ಲ. ಅವರ ನಾಯಕರನ್ನು ತೃಪ್ತಿಪಡಿಸಲು ರಾಜ್ಯ ಸರ್ಕಾರದ ಅನುದಾನ ವಿನಿಯೋಗಿಸಬಾರದು ಎಂದಿದ್ದಾರೆ.

    ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ವಿಚಾರವಾಗಿ, ಇದರಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ. ಯಾವುದೇ ಸಮಾಜ ಸ್ವಾಭಾವಿಕವಾಗಿ ಬೇಡಿಕೆಗಳಿಗೆ ಮನವಿ ಸಲ್ಲಿಸುತ್ತಾರೆ. ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಸರ್ಕಾರ ತಿಳಿದಿರಬೇಕು. ಪಂಚಮಸಾಲಿಯವರು ಮೊದಲೇ ಪ್ರತಿಭಟನೆ ಬಗ್ಗೆ ತಿಳಿಸಿದ್ದರು. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

    ಸರ್ಕಾರ ಮೊದಲು ಪ್ರತಿಭಟನಾಕಾರರ ಮೇಲಿನ ಕೇಸ್ ವಾಪಸ್ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೋರಬೇಕು. ಸರ್ಕಾರ ಬೇಡಿಕೆ ಬಗ್ಗೆ ಕೂತು ಮೊದಲು ಚರ್ಚೆ ಮಾಡಲಿ. ಲಾಠಿ ಚಾರ್ಜ್ ಕ್ರಮ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

  • ವಯನಾಡಿಗೆ 100 ಮನೆ – ರಾಜಕೀಯ ಗುಲಾಮಗಿರಿಯ ಸಂಕೇತ: ಸಿಎಂ ವಿರುದ್ಧ ಸಿ.ಟಿ.ರವಿ ಕಿಡಿ

    ವಯನಾಡಿಗೆ 100 ಮನೆ – ರಾಜಕೀಯ ಗುಲಾಮಗಿರಿಯ ಸಂಕೇತ: ಸಿಎಂ ವಿರುದ್ಧ ಸಿ.ಟಿ.ರವಿ ಕಿಡಿ

    ಚಿಕ್ಕಮಗಳೂರು: ಕೇರಳದ ವಯನಾಡಿಗೆ (Wayanad) 100 ಮನೆಗಳನ್ನು ನೀಡಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯನವರ (Siddaramaiah) ನಡೆ, ರಾಜಕೀಯ ಗುಲಾಮಗಿರಿಯ ಸಂಕೇತ ಎಂದು ಮಾಜಿ ಸಚಿವ ಸಿ.ಟಿ. ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.

    ನಗರದ ಬೋಳರಾಮೇಶ್ವರ ದೇಗುಲದ ಬಳಿ ದತ್ತಜಯಂತಿಯ ಮೊದಲ ದಿನದ ಅನುಸೂಯ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿದ್ದರಾಮಯ್ಯನವರು ಕೇರಳದ ವಯನಾಡಿನಲ್ಲಿ 100 ಮನೆ ಕಟ್ಟಿಸಿ ಕೊಡುತ್ತೇವೆ ಎಂದು ಪತ್ರ ಬರೆದಿರುವ ವಿಚಾರವಾಗಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    ಇಡೀ ಅಖಂಡ ಭಾರತ ಒಂದು. ಇಡೀ ವಿಶ್ವವೇ ಒಂದು ಮನೆ ಎಂಬ ಉದಾತ್ತ ಮನೋಭಾವನೆ ಹೊಂದಿರುವವರು ನಾವು. ಅಕ್ಕಪಕ್ಕದವರಿಗೆ ಸಹಾಯ ಮಾಡುವುದು ತಪ್ಪಲ್ಲ. ಆದರೆ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಪ್ರತಿನಿಧಿಸುವ ಕ್ಷೇತ್ರ ಎಂದು ಜಿಲ್ಲೆಗೆ ಮಾತ್ರ ಈ ರೀತಿ ಮನೆ ನೀಡಲು ಮುಂದಾಗಿರುವುದು ರಾಜಕೀಯ ಗುಲಾಮಗಿರಿಯ ಸಂಕೇತವಾಗಿದೆ ಎಂದು ಅವರು ಕುಟುಕಿದ್ದಾರೆ.

    ರಾಜ್ಯದ ರೈತರಿಗೆ ಸೂಕ್ತ ಪರಿಹಾರ ನೀಡಿಲ್ಲ. ಇಲ್ಲಿಯ ಸಂತ್ರಸ್ತರು ಬೀದಿಯಲ್ಲಿದ್ದಾರೆ. ಇಲ್ಲಿಯವರನ್ನು ಬಿಟ್ಟು ಅಲ್ಲಿಯವರಿಗೆ ಸಹಾಯ ಮಾಡುವುದು ರಾಜಕೀಯದ ಗುಲಾಮಗಿರಿ.‌ ಕನ್ನಡಿಗರ ಕಷ್ಟಕ್ಕೆ ಸ್ಪಂದಿಸದೆ, ಕನ್ನಡಿಗರ ತೆರಿಗೆ ಹಣವನ್ನು ಅಲ್ಲಿ ವಿನಿಯೋಗಿಸುವುದು ಎಷ್ಟರ ಮಟ್ಟಿಗೆ ಸರಿ? ರಾಜ್ಯದ ಜನರ ಸಂಕಷ್ಟಗಳನ್ನ ಕಡೆಗಣಿಸಿ ಖರ್ಚು ಮಾಡುವುದು ಸೂಕ್ತವಾದ ನಡವಳಿಕೆ ಅಲ್ಲ ಎಂದಿದ್ದಾರೆ.

  • ಜಾರ್ಖಂಡ್, ವಯನಾಡಲ್ಲಿ ಕಾಂಗ್ರೆಸ್ ಗೆಲುವಿಗೆ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ

    ಜಾರ್ಖಂಡ್, ವಯನಾಡಲ್ಲಿ ಕಾಂಗ್ರೆಸ್ ಗೆಲುವಿಗೆ ಧನ್ಯವಾದ ತಿಳಿಸಿದ ರಾಹುಲ್ ಗಾಂಧಿ

    ನವದೆಹಲಿ: ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ ಇನ್ನಿತರ ಚುನಾವಣೆಗಳ ಫಲಿತಾಂಶ ಇಂದು (ನ.23) ಹೊರಬಿದ್ದಿದ್ದು, ಜಾರ್ಖಂಡ್ ಹಾಗೂ ವಯನಾಡು ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯಕ್ಕೆ ರಾಹುಲ್ ಗಾಂಧಿ (Rahul Gandhi) ಟ್ವೀಟ್ ಮೂಲಕ ಜನತೆಗೆ ಧನ್ಯವಾದ ತಿಳಿಸಿದ್ದಾರೆ.

    ಜಾರ್ಖಂಡ್‌ನಲ್ಲಿ `ಇಂಡಿಯಾ’ ಒಕ್ಕೂಟಕ್ಕೆ ಮತಚಲಾಯಿಸಿ ಗೆಲುವು ನೀಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಸಿಎಂ ಹೇಮಂತ್ ಸೊರೆನ್ ಅವರಿಗೆ ಹಾಗೂ ಕಾಂಗ್ರೆಸ್, ಜೆಎಂಎಂ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಯನ್ನು ತಿಳಿಸಿದ್ದಾರೆ. ಈ ಗೆಲುವು ಕೇವಲ ಸಂವಿಧಾನದ ಜಯವಲ್ಲ. ಇದು ನೆಲ, ಜಲ, ಅರಣ್ಯಕ್ಕೆ ಸಲ್ಲುವ ಜಯವಾಗಿದೆ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ವ್ಯಕ್ತಿ ಮದುವೆಯಾಗಲು 5 ವರ್ಷದ ಮಗುವನ್ನು ಕೊಂದ ತಾಯಿ

    ಇನ್ನೂ ಮಹರಾಷ್ಟ್ರದ ಚುನಾವಣಾ ಫಲಿತಾಂಶ ಕುರಿತು ಹಂಚಿಕೊಂಡು, ರಾಜ್ಯದ ಎಲ್ಲಾ ಮತದಾರರಿಗೆ, ಕಾರ್ಯಕರ್ತರ ಶ್ರಮಕ್ಕಾಗಿ ಧನ್ಯವಾದಗಳು ತಿಳಿಸುತ್ತೇನೆ. ಆದರೆ ಮಹಾರಾಷ್ಟ್ರದ ಚುನಾವಣಾ ಫಲಿತಾಂಶ ಅನಿರೀಕ್ಷಿತವಾಗಿದ್ದು, ಈ ಕುರಿತು ವಿವರವಾಗಿ ವಿಶ್ಲೇಷಣೆ ನಡೆಸುತ್ತೇವೆ ಎಂದಿದ್ದಾರೆ.

    ವಯನಾಡಿನಲ್ಲಿರುವ ನನ್ನ ಕುಟುಂಬದ ಜನತೆ ಪ್ರಿಯಾಂಕಾ ಅವರ ಮೇಲೆ ಇಟ್ಟಿರುವ ನಂಬಿಕೆಯ ಕುರಿತು ನನಗೆ ಹೆಮ್ಮೆಯಿದೆ. ವಯನಾಡಿನ ಪ್ರಗತಿಗಾಗಿ ಪ್ರಿಯಾಂಕಾ ಧೈರ್ಯದಿಂದ ಮುನ್ನಡೆಯುತ್ತಾಳೆ ಎಂದು ನಾನು ನಂಬಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟ 34 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 21ರಲ್ಲಿ ಗೆಲುವು ಸಾಧಿಸಿದೆ.

    ಸಂಜೆ 7 ಗಂಟೆಯವರೆಗೆ ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು 230 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಹಾವಿಕಾಸ ಅಘಾಡಿ 1 ಹಾಗೂ ಪಕ್ಷೇತರರು 7 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.ಇದನ್ನೂ ಓದಿ: ಯಶ್‌ ನಟನೆಯ ‘ಟಾಕ್ಸಿಕ್‌’ ಸೆಟ್‌ನಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಬಾಲಿವುಡ್‌ ನಟಿ

  • ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು

    ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು

    ತಿರುವನಂತಪುರಂ: ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಕೇರಳ (Kerala) ವಯನಾಡ್ (wayanad) ಲೋಕಸಭಾ ಕ್ಷೇತ್ರದಲ್ಲಿ (Loksabha Constituency) 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ರಾಹುಲ್ ಗಾಂಧಿ (Rahul Gandhi) ಅವರ ರಾಜೀನಾಮೆಯಿಂದ ತೆರವಾದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದು 4,10,931 ಅಧಿಕ ಮತಗಳ ಅಂತರದಿಂದ ಚೊಚ್ಚಲ ಗೆಲುವು ಸಾಧಿಸಿದ್ದಾರೆ.ಇದನ್ನೂ ಓದಿ: 11 ಮುಸ್ಲಿಂ ಸ್ಪರ್ಧಿಗಳನ್ನು ಹಿಂದಿಕ್ಕಿ ಏಕೈಕ ಹಿಂದೂ ಅಭ್ಯರ್ಥಿ ಮುನ್ನಡೆ

    ಪ್ರಿಯಾಂಕಾ ಗಾಂಧಿ ಅವರು ಒಟ್ಟು 6,22,338 ಮತಗಳನ್ನು ಪಡೆದುಕೊಂಡಿದ್ದು, ಸಿಪಿಐನ ಹಿರಿಯ ನಾಯಕ ಸತ್ಯನ್ ಮೊಕೇರಿ 2,11,407 ಲಕ್ಷ ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿಯ ನವ್ಯಾ ಹರಿದಾಸ್ ಸುಮಾರು 1,09,939 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

    2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ವಯನಾಡ್ ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಗೆದ್ದಿದ್ದರು. ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಪ್ರವೇಶಿಸಿದ್ದರಿಂದ ರಾಯ್ ಬರೇಲಿ ಕ್ಷೇತ್ರ ಉಳಿಸಿಕೊಂಡ ರಾಹುಲ್ ಗಾಂಧಿ, ವಯನಾಡ್ ಕ್ಷೇತ್ರವನ್ನು ಸಹೋದರಿಗೆ ಬಿಟ್ಟುಕೊಟ್ಟರು.

    ವಿಶೇಷವೆಂದರೆ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ 3.64 ಲಕ್ಷ ಮತಗಳ ಅಂತರದಿಂದ ಒಟ್ಟು 6.47 ಲಕ್ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಇದೀಗ ಪ್ರಿಯಾಂಕಾ ಗಾಂಧಿ 4.10 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಕಳೆದ ಒಂದು ತಿಂಗಳಿಂದ ಪ್ರಿಯಾಂಕಾ ಪರ ಪ್ರಚಾರ ನಡೆಸಿದ್ದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರು 5 ಲಕ್ಷಕ್ಕೂ ಹೆಚ್ಚು ಅಂತರದಿಂದ ಪ್ರಿಯಾಂಕಾ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದರು.ಇದನ್ನೂ ಓದಿ: ಶಿಗ್ಗಾಂವಿ ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ತೇನೆ: ಬೊಮ್ಮಾಯಿ

  • ವಯನಾಡಿನಲ್ಲಿ ಪ್ರಿಯಾಂಕಾಗೆ 68,000 ಮತಗಳ ಭರ್ಜರಿ ಮುನ್ನಡೆ

    ವಯನಾಡಿನಲ್ಲಿ ಪ್ರಿಯಾಂಕಾಗೆ 68,000 ಮತಗಳ ಭರ್ಜರಿ ಮುನ್ನಡೆ

    ತಿರುವನಂತಪುರಂ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಕೇರಳ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ 68,000 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ (Congress Workers) ಸಂಭ್ರಮ ಮುಗಿಲು ಮುಟ್ಟಿದೆ.

    ರಾಹುಲ್‌ ಗಾಂಧಿ (Rahul Gandhi) ಅವರ ರಾಜೀನಾಮೆಯಿಂದ ತೆರವಾದ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ (Wayanad Lok Sabha Constituency) ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿದ್ದು, ಚೊಚ್ಚಲ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ. ಇದನ್ನೂ ಓದಿ: ಗಯಾನಾ ಅಧ್ಯಕ್ಷಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ನೀಡಿದ ಮೋದಿ

    ಈವರೆಗೆ ನಡೆದ ಮತ ಎಣಿಕೆಯಲ್ಲಿ ಪ್ರಿಯಾಂಕಾ ಗಾಂಧಿ 68,000 ಮತಗಳನ್ನು ಗಳಿಸಿದ್ದಾರೆ. ಸಿಪಿಐನ ಹಿರಿಯ ನಾಯಕ ಸತ್ಯನ್ ಮೊಕೇರಿ 20,000 ಮತಗಳು ಹಾಗೂ ಬಿಜೆಪಿಯ ನವ್ಯಾ ಹರಿದಾಸ್ 11,235 ಮತಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಪ್ರಿಯಾಂಕಾ ಗಾಂಧಿ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು ವಯನಾಡ್‌ ಉಪಚುನಾವಣಾ ಕಣದಲ್ಲಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣಾ ಮತ ಎಣಿಕೆ ಆರಂಭ

    2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ಸ್ಮೃತಿ ಇರಾನಿ ಎದುರು ಸೋತಿದ್ದ ರಾಹುಲ್‌ ಗಾಂಧಿ, ವಯನಾಡ್‌ ಕ್ಷೇತ್ರದಿಂದ ಗೆದ್ದು ಸಂಸದರಾಗಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ವಯನಾಡ್‌ ಮತ್ತು ರಾಯ್‌ ಬರೇಲಿ ಎರಡೂ ಕ್ಷೇತ್ರದಲ್ಲಿ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಗೆದ್ದಿದ್ದರು. ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ಪ್ರವೇಶಿಸಿದ್ದರಿಂದ ರಾಯ್‌ ಬರೇಲಿ ಕ್ಷೇತ್ರ ಉಳಿಸಿಕೊಂಡ ರಾಹುಲ್‌ ಗಾಂಧಿ, ವಯನಾಡ್‌ ಕ್ಷೇತ್ರವನ್ನು ಸಹೋದರಿಗೆ ಬಿಟ್ಟುಕೊಟ್ಟರು.

    ಕಳೆದ ಒಂದು ತಿಂಗಳಿಂದ ಪ್ರಿಯಾಂಕಾ ಪರ ಪ್ರಚಾರ ನಡೆಸಿದ್ದ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು 5 ಲಕ್ಷಕ್ಕೂ ಹೆಚ್ಚು ಅಂತರದಿಂದ ಪ್ರಿಯಾಂಕಾ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇದನ್ನೂ ಓದಿ: ಮಹಾರಾಷ್ಟ್ರ ಮತ ಎಣಿಕೆ: ಎನ್‌ಡಿಎಗೆ ಆರಂಭಿಕ ಮುನ್ನಡೆ

  • ದೆಹಲಿಗೆ ಬರುತ್ತಿದ್ದಂತೆ ಗ್ಯಾಸ್ ಚೇಂಬರ್‌ಗೆ ಪ್ರವೇಶಿಸಿದಂತಾಯ್ತು: ಪ್ರಿಯಾಂಕಾ ಗಾಂಧಿ

    ದೆಹಲಿಗೆ ಬರುತ್ತಿದ್ದಂತೆ ಗ್ಯಾಸ್ ಚೇಂಬರ್‌ಗೆ ಪ್ರವೇಶಿಸಿದಂತಾಯ್ತು: ಪ್ರಿಯಾಂಕಾ ಗಾಂಧಿ

    – ವಯನಾಡಿನಿಂದ ದೆಹಲಿಗೆ ವಾಪಸ್ ಆದ ಪ್ರಿಯಾಂಕಾ

    ನವದೆಹಲಿ: ಗಾಳಿಯ ಗುಣಮಟ್ಟ ಸೂಚ್ಯಂಕ (AQI) 35 ಹೊಂದಿರುವ, ಪರಿಶುದ್ಧ ಗಾಳಿಯಿರುವ ವಯನಾಡಿನಿಂದ ದೆಹಲಿಗೆ ಪ್ರವೇಶಿಸುತ್ತಿದ್ದಂತೆ ಗ್ಯಾಸ್ ಚೇಂಬರ್ ಒಳಗೆ ಪ್ರವೇಶಿಸಿದಂತಾಯಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಹೇಳಿದ್ದಾರೆ.

    ವಯನಾಡು (Wayanad) ಲೋಕಸಭಾ ಉಪಚುನಾವಣೆಯ ಬಳಿಕ ದೆಹಲಿಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ ಅಲ್ಲಿನ ವಾಯುಮಾಲಿನ್ಯದ (Air Pollution) ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ದೆಹಲಿಯಲ್ಲಿ (New Delhi) ಕಲುಷಿತ ಗಾಳಿ ಚಾದರದಂತೆ ನಗರವನ್ನು ಹೊದ್ದುಕೊಂಡಿದೆ. ಮೇಲಿನಿಂದ ನೋಡಿದರೆ ಭಯಾನಕ ಎನಿಸುತ್ತದೆ. ದೆಹಲಿಯ ವಾಯುಗುಣಮಟ್ಟವು ವರ್ಷದಿಂದ ವರ್ಷಕ್ಕೆ ಇಳಿಕೆ ಕಾಣುತ್ತಿದೆ. ನಾವೆಲ್ಲರೂ ಒಟ್ಟಾಗಿ ಈ ಬಗ್ಗೆ ಕೆಲಸ ಮಾಡಬೇಕಿದೆ ಎಂದಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ – ಪ್ರಾಥಮಿಕ ಶಾಲೆಗಳಲ್ಲಿ ಆನ್‌ಲೈನ್ ಕ್ಲಾಸ್

    ಈ ಕೆಲಸದಲ್ಲಿ ಪಕ್ಷಗಳ ಭೇದ ಬೇಡ. ಶುದ್ಧಗಾಳಿಗಾಗಿ ನಾವೆಲ್ಲಾ ಪಕ್ಷಾತೀತವಾಗಿ ಕೆಲಸ ಮಾಡಬೇಕಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವುದರಿಂದ ಇಲ್ಲಿನ ಜನರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ದೆಹಲಿಯಲ್ಲಿ ಮಕ್ಕಳಿಗೆ, ಹಿರಿಯರಿಗೆ ಹಾಗೂ ಶ್ವಾಸಕೋಶದ ಸಮಸ್ಯೆ ಇರುವವರಿಗೆ ಈ ಗಾಳಿಯನ್ನು ಉಸಿರಾಡಲು ಸಾಧ್ಯವೇ ಇಲ್ಲದಂತಾಗಿದೆ. ಇದಕ್ಕೆ ನಾವೆಲ್ಲರೂ ಏನಾದರೂ ಮಾಡಬೇಕಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 50 ಶಾಸಕರಿಗೆ 2,500 ಕೋಟಿ ಬೇಕು, ಯಾರ ಬಳಿ ಇದೆ ಅಷ್ಟೊಂದು ಹಣ? – ಬೊಮ್ಮಾಯಿ

    ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕ ಗಾಂಧಿ 12 ದಿನ ವಯನಾಡಿನಲ್ಲಿ ಮತಪ್ರಚಾರ ನಡೆಸಿದ್ದರು. ಮತದಾನ ಮುಗಿದ ಬಳಿಕ ಈಗ ದೆಹಲಿಗೆ ವಾಪಸ್ ಆಗಿದ್ದಾರೆ. ಇದನ್ನೂ ಓದಿ: ನ.24ಕ್ಕೆ ಕೆ-ಸೆಟ್, ರಾಯಚೂರು ವಿವಿ ಪರೀಕ್ಷೆ- ಕೆಇಎ