Tag: Wave

  • ಕಾರವಾರದ ಸಮುದ್ರದಲ್ಲಿ ವಿಸ್ಮಯ- ಅಲೆಯಲ್ಲಿ ಮೂಡಿತು ಬೆಳಕಿನ ಮಿಂಚು

    ಕಾರವಾರದ ಸಮುದ್ರದಲ್ಲಿ ವಿಸ್ಮಯ- ಅಲೆಯಲ್ಲಿ ಮೂಡಿತು ಬೆಳಕಿನ ಮಿಂಚು

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಅರಬ್ಬಿ ಸಮುದ್ರದಲ್ಲಿ ಹವಾಮಾನ ಮತ್ತು ಸಮುದ್ರದ ವಾತಾವರಣದಲ್ಲಿ ಬದಲಾವಣೆಯಿಂದಾಗಿ ಸಮುದ್ರದಲ್ಲಿ ಸೃಷ್ಟಿಯ ವೈಚಿತ್ರಗಳು ನಡೆಯುತ್ತಿದೆ. ಕಾರವಾರದ ಗೋವಾ ಗಡಿಗೆ ಅಂಟಿಕೊಂಡಿರುವ ಮಾಜಾಳಿ ಕಡಲ ಬಳಿ ಅಲೆಗಳಲ್ಲಿ ಮಿಂಚಿನ ಬೆಳಕು ಕಾಣತೊಡಗಿದೆ.

    ರಾತ್ರಿ ವೇಳೆ ಬೆಳಕು ಗೋಚರವಾಗುತ್ತಿದ್ದು, ಮಾಜಾಳಿಯಿಂದ ಕಪ್ಪು ಮರಳಿನ ಸಮುದ್ರ ಎಂದೇ ಪ್ರಸಿದ್ಧವಾಗಿರುವ ತಿಳಮಾತಿ ಕಡಲತೀರದವರೆಗೂ ಆವರಿಸಿದೆ. ಕಳೆದ ಒಂದು ವಾರದಿಂದ ಸಮುದ್ರದಲ್ಲಿ ಈ ಬೆಳವಣಿಗೆ ಕಾರಣವಾಗುತ್ತಿದೆ. ಈ ಬದಲಾವಣೆಯನ್ನು ಧಾರವಾಡ ವಿಶ್ವವಿದ್ಯಾನಿಲಯದ ಕಡಲ ಜೀವಶಾಸ್ತ್ರಜ್ಞ  ಶಿವಕುಮಾರ್ ಹರಗಿರವರು ಗುರುತಿಸಿದ್ದಾರೆ.

    ಅಲೆಗಳಲ್ಲಿ ಬೆಳಕು ಮೂಡುತ್ತಿರಲು ಕಾರಣವೇನು?
    ಸಮುದ್ರದಲ್ಲಿ ಮಲೀನದಿಂದಾಗಿ ನಾಕ್ಟುಲುಕ ಸೆಂಟನೆಲ್ಸ್ (noctiluca seintillans)ಎಂಬ ಪಾಚಿ ಹೇರಳವಾಗಿ ಬೆಳೆದಿದೆ. ಇದು ರಾತ್ರಿ ವೇಳೆ ಸಮುದ್ರದಲ್ಲಿ ಮಿಂಚಿನಂತೆ ಕಾಣುತಿದ್ದು, ಬೆಳಕನ್ನು ಹೊರಸೂಸುತ್ತಿದೆ. ತನ್ನಲ್ಲಿ ಬೆಳಕನ್ನು ಸೂಸುವ ಶಕ್ತಿ ಹೊಂದಿರುವ ಇದು ಸಮುದ್ರಕ್ಕೆ ಸೇರುವ ತ್ಯಾಜ್ಯಗಳ ಖನಿಜಾಂಶದಿಂದ ಹೆಚ್ಚು ಬೆಳೆದಿದೆ. ಈ ಹಿಂದೆ 2011ರಲ್ಲಿ ಮಂಗಳೂರಿನಲ್ಲಿ, 2017ರಲ್ಲಿ ಉಡುಪಿ, ಕಾರವಾರದ ಕಡಲತೀರದ ಬಳಿ ಹೇರಳವಾಗಿ ಕಾಣಿಸಿಕೊಂಡಿದ್ದವು. ಇವು ಹೆಚ್ಚಾದಾಗ ಸಮುದ್ರ ಹಸಿರಿನಂತೆ ಕಂಗೊಳಿಸುತ್ತವೆ.

    ಮೀನುಗಾರಿಕೆಗೂ ಬೀರಲಿದೆ ಇದರ ಪರಿಣಾಮ!
    ಜಿಲ್ಲೆಯ ಮೀನುಗಾರರು ಈಗಾಗಲೇ ಮತ್ಸ್ಯ ಕ್ಷಾಮದಿಂದ ಬಳಲುತ್ತಿದ್ದಾರೆ. ಈ ಸಸ್ಯಗಳು ಬೆಳೆದಿದ್ದರಿಂದ ಮೀನುಗಾರಿಕೆ ಮೇಲೂ ಪರಿಣಾಮ ಬೀರುವ ಜೊತೆಗೆ ಮಾರಕವಾಗಿದ್ದು, ಪರಿಸರದ ಅಸಮತೋಲನಕ್ಕೆ ಸಾಕ್ಷಿಯಾಗಿದೆ ಎಂಬುದು ಸಂಶೋಧನೆ ನಿರತ ಕಡಲ ಜೀವಶಾಸ್ತ್ರಜ್ಞ ಡಾ.ಶಿವಕುಮಾರ್ ಹರಗಿ ರವರ ಅಭಿಪ್ರಾಯವಾಗಿದೆ.

    ಈ ಪಾಚಿಗಳು ಬೆಳೆಯುವುದರಿಂದ ಮೀನುಗಳು ದೂರ ಹೋಗುತ್ತದೆ ಇದು ಮತ್ಸ್ಯ ಕ್ಷಾಮದ ಸೂಚನೆ. ಈ ಪಾಚಿ ಸಸ್ಯ ಆಕ್ಸಿಜನ್ ತೆಗೆದುಕೊಂಡು ಬೆಳಕನ್ನು ಹೊರಸೂಸುತ್ತದೆ. ದಕ್ಷಿಣ ಕರಾವಳಿಯಲ್ಲಿ ಹೆಚ್ಚು ಪತ್ತೆಯಾಗುತ್ತಿದೆ. ಆಹಾರ ಸಿಕ್ಕಾಗ ಅತಿಯಾಗಿ ಬೆಳೆಯುತ್ತದೆ. ತ್ಯಾಜ್ಯ ಹೆಚ್ಚು ಸಮುದ್ರ ಸೇರುವುದರಿಂದ ಇವು ಹೆಚ್ಚು ಬೆಳೆಯುತ್ತದೆ. ತ್ಯಾಜ್ಯದ ಖನಿಜಾಂಶ ಹಾಗೂ ಸೂರ್ಯನ ಬೆಳಕು ಇವುಗಳ ಆಹಾರ. ಪಶ್ಚಿಮ ಕರಾವಳಿಯಲ್ಲಿ ಆಗುತ್ತಿರುವ ಹೆಚ್ಚಿನ ಮಾಲಿನ್ಯ ಇವುಗಳ ಬೆಳವಣಿಗೆಗೆ ಕಾರಣವಾಗಿದೆ.

    ಸದ್ಯ ಕಾರವಾರದ ಸಮುದ್ರದಲ್ಲಿ ಈ ಪಾಚಿಗಳು ಎರಡು ಮೂರು ದಿನ ಉಳಿಯಬಹುದು. ಯಾಕೆಂದರೆ ಬೇಸಿಗೆಯಲ್ಲಿ ಜಾಸ್ತಿ ಪ್ರಮಾಣದಲ್ಲಿ ಪಾಚಿ ಬೆಳೆಯುತ್ತಿದೆ. ಏಳು ದಿನ ಇವು ಬದುಕುತ್ತವೆ. ನಂತರ ಎರಡುಪಟ್ಟಾಗಿ ಬೆಳೆಯುತ್ತದೆ. ಇವುಗಳಲ್ಲಿ ರೆಡ್, ಗ್ರೀನ್ ಟೈಡ್ ಎಂಬ ಜಾತಿಯ ಪ್ರಭೇದ ಪಾಚಿಗಳಿವೆ. ಇವುಗಳು ಟಾಕ್ಸಿನ್ ಹೆಚ್ಚು ಉತ್ಪತ್ತಿ ಮಾಡುತ್ತದೆ. ಕೆಲವೊಮ್ಮೆ ಇವುಗಳು ಉಪಯುಕ್ತವಾದರೆ ಹಲವು ಬಾರಿ ಮಾರಕವಾಗಿ ಪರಿಣಮಿಸುತ್ತದೆ ಎಂಬುದು ಸಂಶೋಧಕರ ಮಾತು.

    ಮೀನುಗಾರರಲ್ಲಿ ಹುಟ್ಟಿದ ಭಯ?
    ಕಳೆದ ಹಲವು ದಿನದಿಂದ ಸಮುದ್ರದಲ್ಲಿ ಆಗುವ ಈ ಬೆಳವಣಿಗೆ ಮೀನುಗಾರರಲ್ಲಿ ಭಯ ಮೂಡಿಸಿದೆ. ಸ್ಥಳೀಯ ಮೀನುಗಾರರು ಹೇಳುವಂತೆ ಈ ರೀತಿ ಮಿಂಚುಗಳ ಬೆಳಕು ಬಂದರೆ ಸಮುದ್ರದಲ್ಲಿ ಮೀನುಗಳು ಬರುವುದಿಲ್ಲ ಎಂದಿದ್ದಾರೆ.

    ಸಂಶೋಧಕರು ಕೂಡ ಇದನ್ನು ಪುಷ್ಟಿಕರಿಸಿದ್ದು, ಸಮುದ್ರಕ್ಕೆ ಮಲೀನ ನೀರುಗಳು ಅತಿ ಹೆಚ್ಚು ಸೇರುತ್ತಿದೆ. ಇದರಿಂದಾಗಿ ಈ ಪಾಚಿಗಳು ಹೇರಳವಾಗಿ ಬೆಳೆಯಲು ಕಾರಣವಾಗಿದೆ. ಇದು ಸಮುದ್ರದ ವಾತಾವರಕ್ಕೆ ಪೂರಕವಾಗಿಲ್ಲ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ ಎನ್ನುತ್ತಾರೆ. ಕಳೆದ ಒಂದು ವರ್ಷಗಳಿಂದ ಜಿಲ್ಲೆಯ ಕರಾವಳಿ ಭಾಗದ ಸಮುದ್ರ ಭಾಗದಲ್ಲಿ ನೈಸರ್ಗಿಕ ಬದಲಾವಣೆ ಹೆಚ್ಚಾಗುತ್ತಿದೆ.

  • ಆಕಾಶದಲ್ಲಿ ಮೂಡಿದ ಮೋಡಗಳ ಅಲೆ: ಫೋಟೋ ವೈರಲ್

    ಆಕಾಶದಲ್ಲಿ ಮೂಡಿದ ಮೋಡಗಳ ಅಲೆ: ಫೋಟೋ ವೈರಲ್

    ವಾಷಿಂಗ್‍ಟನ್: ಆಕಾಶದಲ್ಲಿ ಮೋಡಗಳ ಅಲೆ ಮೂಡಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿ ಜನರು ಆಶ್ಚರ್ಯಪಡುತ್ತಿದ್ದಾರೆ.

    ಮೋಡಗಳ ಫೋಟೋವನ್ನು ಮಂಗಳವಾರ ಸಂಜೆ ವರ್ಜೀನಿಯಾದ ಲೇಕ್ ಸ್ಮಿತ್ ಪರ್ವತದಲ್ಲಿ ಕ್ಲಿಕ್ಕಿಸಲಾಗಿದೆ. ಈ ಅಲೆಗಳ ಮೋಡವನ್ನು ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ವೇವ್ ಎಂದು ಕರೆಯಲಾಗುತ್ತದೆ. ಇದರ ಫೋಟೋವನ್ನು ಆ್ಯಮಿ ಕ್ರಿಸ್ಟೈ ಹಂಟರ್ ಸೆರೆ ಹಿಡಿದಿದ್ದಾರೆ.

    ಆ್ಯಮಿ ಕ್ರಿಸ್ಟೈ ಈ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಾಕಿ ಅದಕ್ಕೆ, ಇಂದು ಸಂಜೆ ಸ್ಮಿತ್ ಮೌಂಟೇನ್‍ನಲ್ಲಿ ಅತ್ಯಂತ ತಂಪಾದ ಮೋಡಗಳು ಪರ್ವತದ ಮೇಲ್ಭಾಗದಲ್ಲಿ ಉರುಳುತ್ತಿದೆ. ಇದಕ್ಕೆ ಕೆಲ್ವಿನ್ ಹೆಲ್ಮ್‍ಹೋಲ್ಟ್ಜ್ ಮೋಡ ಎಂದು ಕರೆಯುತ್ತಾರೆ. ನಾನು ಈ ಫೋಟೋವನ್ನು ಹವಾಮಾನ ತಜ್ಞರಿಗೆ ಕಳುಹಿಸಿದ್ದೇನೆ. ಆಗ ಅವರು ಇದು ಅಪರೂಪದ ಮೋಡ ಹಾಗೂ ಇದರ ಬಗ್ಗೆ ವ್ಯಾಖ್ಯಾನ ಮಾಡಲು ಆಗುವುದಿಲ್ಲ ಎಂದು ಹೇಳಿದರು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಹಾಕುತ್ತಿದ್ದಂತೆ 600ಕ್ಕೂ ಹೆಚ್ಚು ಶೇರ್ ಪಡೆದುಕೊಂಡಿದೆ. ಅಲ್ಲದೆ 144ಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಈ ಫೋಟೋ ನೋಡಿ ಕೆಲವರು ‘ಇದು ತುಂಬಾ ಸುಂದರವಾಗಿದೆ’ ಎಂದು ಕಮೆಂಟ್ ಮಾಡಿದರೆ, ಮತ್ತೆ ಕೆಲವರು ‘ವಾವ್ ಇದು ಪೇಟಿಂಗ್ ರೀತಿ ಕಾಣಿಸುತ್ತಿದೆ’ ಎಂದು ಬಣ್ಣಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದ ನಾಲ್ವರು ಮೀನುಗಾರರ ರಕ್ಷಣೆ

    ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದ ನಾಲ್ವರು ಮೀನುಗಾರರ ರಕ್ಷಣೆ

    ಕಾರವಾರ: ಮೀನುಗಾರಿಕೆ ನಡೆಸಿ ವಾಪಾಸಾಗುತ್ತಿದ್ದ ನಾಲ್ಕು ಜನ ಮೀನುಗಾರರು ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗುತ್ತಿದ್ದರು. ಈ ವೇಳೆ ಸ್ಥಳೀಯ ಮೀನುಗಾರರು ಮುಳುಗುತ್ತಿದ್ದವರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

    ಭಟ್ಕಳದ ಬೆಳ್ನಿ ಗ್ರಾಮದ ತಿಮ್ಮಪ್ಪ ಮೊಗೇರ್, ರಾಮಚಂದ್ರ ಖಾರ್ವಿ, ಗಣಪತಿ ಖಾರ್ವಿ ಮತ್ತು ಶ್ರೀನಿವಾಸ್ ಖಾರ್ವಿ ಅವರನ್ನು ರಕ್ಷಣೆ ಮಾಡಲಾಗಿದೆ. ನಾಲ್ವರನ್ನು ಭಟ್ಕಳದ ಮುಂಡಳ್ಳಿಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

    ಈ ನಾಲ್ವರು ಅರಬ್ಬಿ ಸಮುದ್ರದಲ್ಲಿ ಪಾತಿ ದೋಣಿಯಲ್ಲಿ ಮೀನುಗಾರಿಕೆ ನಡೆಸಿ ಮರಳಿ ವಾಪಸ್ಸಾಗುತ್ತಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ದೋಣಿ ಮಗಚಿ ನಾಲ್ವರು ಮೀನುಗಾರರು ಸಮುದ್ರಪಾಲಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಪ್ರಾಣಾಪಾಯದಲ್ಲಿದ್ದ ನಾಲ್ವರನ್ನು ರಕ್ಷಿಸಿದ್ದಾರೆ.

    ಈ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಮಳೆಯ ಅಬ್ಬರ – ಅರಬ್ಬೀ ಸಮುದ್ರದಲ್ಲಿ ಬೊಬ್ಬಿರಿಯುತ್ತಿವೆ ರಕ್ಕಸ ಗಾತ್ರದ ಅಲೆಗಳು!

    ಮಳೆಯ ಅಬ್ಬರ – ಅರಬ್ಬೀ ಸಮುದ್ರದಲ್ಲಿ ಬೊಬ್ಬಿರಿಯುತ್ತಿವೆ ರಕ್ಕಸ ಗಾತ್ರದ ಅಲೆಗಳು!

    ಉಡುಪಿ: ಕರಾವಳಿಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಜೋರು ಮಳೆ ಅರಬ್ಬೀ ಸಮುದ್ರವನ್ನು ಬುಡಮೇಲು ಮಾಡುತ್ತಿದೆ. ಸಮುದ್ರ ತೀರದಲ್ಲಿ ರಕ್ಕಸ ಗಾತ್ರದ ಅಲೆಗಳು ಏಳುತ್ತಿದ್ದು, ಸಮುದ್ರ ತಟದ ಜನರು ಭಯಭೀತರಾಗಿದ್ದಾರೆ. ಕರಾವಳಿ ಕಡಲಿನ ಅಲೆಗೆ ಮೀನುಗಾರಿಕಾ ರಸ್ತೆಗಳೆಲ್ಲಾ ಕೊಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಉಡುಪಿಗೆ ಮೆಕ್ನು ಚಂಡಮಾರುತ ಎಫೆಕ್ಟ್ – 500ಮೀ. ದೂರದಿಂದ್ಲೇ ಅಬ್ಬರಿಸಿಕೊಂಡು ಅಪ್ಪಳಿಸುತ್ತಿವೆ ಅಲೆಗಳು

    ಕಡಲ್ಕೊರೆತ ಕರಾವಳಿಗಿದು ಬೆಂಬಿಡದೆ ಕಾಡುವ ಸಮಸ್ಯೆಯಾಗಿದೆ. ಈ ಬಾರಿ ಮುಂಗಾರು ಆರಂಭವಾದ ಮೊದಲ ವಾರದಲ್ಲೇ ಸಮುದ್ರದಲ್ಲಿ ಕಡಲ್ಕೊರೆತ ಶುರುವಾಗಿದೆ. ಉಡುಪಿ ಜಿಲ್ಲೆಯ ಹೆಜಮಾಡಿಯಿಂದ ಶೀರೂರುವರೆಗೆ ಅಲ್ಲಲ್ಲಿ ರಕ್ಕಸ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿದೆ. ಮಲ್ಪೆಯ ಪಡುಕೆರೆ ವ್ಯಾಪ್ತಿಯಲ್ಲಿ ತೀವ್ರ ಕಡಲ್ಕೊರೆತವಾಗುತ್ತಿದೆ. ಇದನ್ನೂ ಓದಿ: ಅರಬ್ಬೀ ಸಮುದ್ರದ ನೀರಿನ ಬಣ್ಣ ಬದಲು- ಸ್ಥಳೀಯರಲ್ಲಿ ಆತಂಕ

    ಈ ಭಾಗದಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಪಡುಕೆರೆ ಸಿಕ್ಕಾಪಟ್ಟೆ ಡೇಂಜರಸ್. ಇಲ್ಲಿ ಒಂದು ಕಡೆಯಿಂದ ನದಿ, ಇನ್ನೊಂದು ಕಡೆಯಿಂದ ಸಮುದ್ರ, ಇವೆರಡರ ನಡುವೆ ಜನ ವಾಸಿಸಬೇಕು. ಈ ನಡುವೆ ಸಾವಿರಾರು ತೆಂಗಿನ ಮರಗಳು ಗಾಳಿಯ ರಭಸಕ್ಕೆ ನಲುಗಿಹೋಗಿದೆ.

    ಕೇರಳ, ಗೋವಾ- ಮಹಾರಾಷ್ಟ್ರದಲ್ಲಿ ಸಮುದ್ರದ ಅಬ್ಬರಕ್ಕೆ ಅಲ್ಲಿನ ಸರ್ಕಾರಗಳು ಲಗಾಮು ಹಾಕಿದೆ. ಆದರೆ ಇಲ್ಲಿ ಕಡಲ್ಕೊರೆತ ಸಾಂಪ್ರದಾಯಿಕ ಸಮಸ್ಯೆಯಾಗಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

  • ಓಖಿ ಅಬ್ಬರಕ್ಕೆ ಮದುವೆ ಮನೆಯಿಂದಲೇ ಓಟ – ಅಲೆ ಹೊಡೆತಕ್ಕೆ ಓಡಿಹೋದ ವಧು-ವರರು

    ಓಖಿ ಅಬ್ಬರಕ್ಕೆ ಮದುವೆ ಮನೆಯಿಂದಲೇ ಓಟ – ಅಲೆ ಹೊಡೆತಕ್ಕೆ ಓಡಿಹೋದ ವಧು-ವರರು

    ಮಂಗಳೂರು: ಕಡಲತೀರದಲ್ಲಿ ಮತ್ತೆ ಮತ್ತೆ ಚಂಡಮಾರುತ ಶುರುವಾಗಿದ್ದು, ಓಖಿ ಅಬ್ಬರದ ಹೊಡೆತಕ್ಕೆ ಮದುವೆ ಮನೆಯಿಂದಲೇ ವಧು-ವರ, ಸಂಬಂಧಿಕರು ಓಡಿಹೋಗಿರುವ ಘಟನೆ ಸಮಭವಿಸಿದೆ.

    ಉಳ್ಳಾಲದ ಕಡಲ ಕಿನಾರೆಯ ಸಮುದ್ರ ತೀರದಲ್ಲಿ ನಡೆಯುತ್ತಿದ್ದ ಮದುವೆಯ ವೇದಿಕೆಗೆ ರಕ್ಕಸವಾಗಿ ಅಲೆ ಬಂದು ಹೊಡೆದಿದೆ. ಸಮಾರಂಭದಲ್ಲಿ ವಧು-ವರ, ಸ್ನೇಹಿತರು, ಸಂಬಂಧಿಕರು ಸಂಭ್ರಮದಿಂದ ಡ್ಯಾನ್ಸ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ನಾಲ್ಕು ಬಾರಿ ಎಚ್ಚರಿಕೆ ಕೊಟ್ಟ ಅಲೆ ಐದನೇ ಬಾರಿ ರಭಸವಾಗಿ ವೇದಿಕೆಯ ಮೇಲೆ ಬಂದು ಅಪ್ಪಳಿಸಿದೆ.

    ಅಲೆ ಅಪ್ಪಳಿಸಿದ ರಭಸಕ್ಕೆ ವೇದಿಕೆಯ ಮೇಲಿದ್ದ ವಧು-ವರ ಸೇರಿದಂತೆ ಎಲ್ಲರೂ ಭಯದಿಂದ ಓಡಿ ಹೋಗಿದ್ದಾರೆ.