Tag: Waterspout

  • ಸಮುದ್ರದಲ್ಲಿ ಕಾಣಿಸಿಕೊಂಡ ವಾಟರ್‌ಸ್ಪೌಟ್: ವಿಡಿಯೋ ನೋಡಿ

    ಸಮುದ್ರದಲ್ಲಿ ಕಾಣಿಸಿಕೊಂಡ ವಾಟರ್‌ಸ್ಪೌಟ್: ವಿಡಿಯೋ ನೋಡಿ

    ಕೌಲಾಲಂಪುರ: ಮಲೇಷ್ಯಾದಲ್ಲಿ ಭಾರೀ ಪ್ರಮಾಣದ ವಾಟರ್‌ಸ್ಪೌಟ್ (ನೀರಸುಳಿಗಂಬ) ಕಾಣಿಸಿಕೊಂಡಿದ್ದು, ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    ಮಲೇಷ್ಯಾದ ಪೆನಾಂಗ್ ದ್ವೀಪದಲ್ಲಿ ಸೋಮವಾರ ವಾಟರ್‌ಸ್ಪೌಟ್ ಕಾಣಿಸಿಕೊಂಡಿತ್ತು. ಇದರಿಂದಾಗಿ ಸ್ಥಳೀಯರಲ್ಲಿ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ಕೆಲವರು ತಮ್ಮ ಮೊಬೈಲ್‍ಗಳಲ್ಲಿ ವಾಟರ್‌ಸ್ಪೌಟ್ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಪೆನಾಂಗ್ ದ್ವೀಪದ ಸಮುದ್ರದಲ್ಲಿ ಸುಮಾರು 5 ನಿಮಿಷಗಳ ವಾಟರ್‌ಸ್ಪೌಟ್ ಕಾಲ ಕಾಣಿಸಿಕೊಂಡಿತ್ತು. ಸುರುಳಿ ಸುರುಳಿಯಾಗಿ ತಿರುಗುತ್ತಾ ಬಂದು ದಡಕ್ಕೆ ಅಪ್ಪಳಿಸಿ ಕುಸಿದುಬಿತ್ತು. ಈ ವೇಳೆ ಎತ್ತರದ ಮೇಲಿದ್ದ ನೀರು ಸ್ವಲ್ಪ ಮುಂದಕ್ಕೆ ಬಂದು ಮಳೆಯ ರೂಪದಲ್ಲಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರಿದಿಯಾಗಿದೆ.

    ವಾಟರ್‌ಸ್ಪೌಟ್ ನಿಂದಾಗಿ ಸಮುದ್ರದ ಸಮೀಪದಲ್ಲಿದ್ದ ಕೆಲವು ಕಟ್ಟಡಗಳ ಶೀಟ್‍ಗಳು ಕಿತ್ತುಹೋಗಿವೆ ಎಂದು ನೆಟ್ಟಿಗರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಇಟಲಿಯಲ್ಲಿ ಕೂಡ ಕಳೆದ ವರ್ಷ ವಾಟರ್‌ಸ್ಪೌಟ್ ಕಾಣಿಸಿಕೊಂಡಿತ್ತು. ಆಗಲೂ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದವು. ಸಮುದ್ರದಲ್ಲಿ ನೀರು ಗಾಳಿಯ ಜೊತೆ ಸೇರಿ ಸುರುಳಿ ಸುರುಳಿಯಾಗಿ ಸುತ್ತುತ್ತಾ ದಂಡೆಗೆ ಬರುವುದನ್ನು ವಾಟರ್ ಸ್ಪೌಟ್ ಎಂದು ಕರೆಯಲಾಗುತ್ತದೆ.