Tag: water tank

  • ಬೀದರ್| ನೀರಿನ ತೊಟ್ಟಿಗೆ ಬಿದ್ದು ಬಾಲಕಿ ದುರ್ಮರಣ

    ಬೀದರ್| ನೀರಿನ ತೊಟ್ಟಿಗೆ ಬಿದ್ದು ಬಾಲಕಿ ದುರ್ಮರಣ

    ಬೀದರ್: ಮನೆಯ ಮುಂದೆ ಇರುವ ನೀರಿನ ತೊಟ್ಟಿಯಲ್ಲಿ ಬಾಲಕಿ ಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಬೀದರ್ (Bidar) ಜಿಲ್ಲೆಯ ಹುಲಸೂರು (Hulasuru) ಪಟ್ಟಣದಲ್ಲಿ ನಡೆದಿದೆ.

    ಶ್ರೀನಿಧಿ ವಿಜಯಕುಮಾರ್ ವಟ್ಟಿಗೆ(5) ಮೃತ ಬಾಲಕಿ. ಮನೆಯ ಮುಂದೆ ಗೆಳೆಯರೊಂದಿಗೆ ಆಟವಾಡುತ್ತಾ ಮೆಹೆಂದಿ ತೊಳೆಯಲು ಬಾಗಿದಾಗ ಕಾಲು ಜಾರಿ ತೊಟ್ಟಿಯಲ್ಲಿ ಬಿದ್ದು ಬಾಲಕಿ ಸಾವನ್ನಪ್ಪಿದ್ದಾಳೆ. ಇದನ್ನೂ ಓದಿ: ಮಂಗಳೂರು | ನಡುರಾತ್ರಿ ತಲ್ವಾರ್‌ ಹಿಡಿದು ಹೊಡೆದಾಡಿಕೊಂಡ ರೌಡಿಶೀಟರ್‌ಗಳು

    ಯಾರಿಗೂ ಗೊತ್ತಾಗದ ಕಾರಣ ಬಾಲಕಿ ತೊಟ್ಟಿಯಲ್ಲೇ ಸಾವನ್ನಪ್ಪಿದ್ದು, ಈ ಕುರಿತು ಹುಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಧಿಕೃತ ನಿವಾಸದಲ್ಲಿ ಅಯೋಧ್ಯೆ ಎಡಿಎಂ ಶವವಾಗಿ ಪತ್ತೆ

  • ನೀರಿನ ಟ್ಯಾಂಕ್‌ಗೆ ವಿಷಬೆರಕೆ: ವಾಟರ್‌ಮನ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

    ನೀರಿನ ಟ್ಯಾಂಕ್‌ಗೆ ವಿಷಬೆರಕೆ: ವಾಟರ್‌ಮನ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

    ರಾಯಚೂರು: ಗ್ರಾಮಕ್ಕೆ ಸರಬರಾಜಾಗುವ ನೀರಿನ ಟ್ಯಾಂಕ್‌ಗೆ (Water Tank) ವಿಷ ಬೆರಕೆಯಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ತವಗ ಗ್ರಾಮದಲ್ಲಿ ನಡೆದಿದೆ.

    ನೀರಿನ ಟ್ಯಾಂಕ್‌ಗೆ ವಿಷ ಬೆರಕೆಯಾಗಿದ್ದು, ಗ್ರಾಮ ಪಂಚಾಯಿತಿ ವಾಟರ್‌ಮನ್ (WaterMan) ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.ಇದನ್ನೂ ಓದಿ: ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದ ಪೂಜಾ ಗಾಂಧಿ

    ನೀರು ಬಿಟ್ಟ ಕೂಡಲೇ ಕೆಲ ಗ್ರಾಮಸ್ಥರು ನೀರು ವಾಸನೆ ಬರುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಕೂಡಲೇ ನೀರನ್ನು ಪರಿಶೀಲಿಸಿದಾಗ ಅನುಮಾನ ಮೂಡಿ ನೀರಿನ ಸರಬರಾಜನ್ನು ನಿಲ್ಲಿಸಲಾಗಿದೆ. ಟ್ಯಾಂಕ್ ಬಳಿ ಬೀಳುವ ನೀರು ಸಹ ನೊರೆ, ದುರ್ವಾಸನೆಯಿಂದ ಕೂಡಿದ್ದಕ್ಕೆ ಅನುಮಾನ ಮೂಡಿದೆ. ವಾಟರ್‌ಮನ್ ಆದೆಪ್ಪ ಕೂಡಲೇ ಟ್ಯಾಂಕ್ ಖಾಲಿ ಮಾಡಿದ್ದಾನೆ ಹಾಗೂ ನೀರನ್ನು ಯಾರು ಬಳಸದಂತೆ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಭಾರೀ ಅನಾಹುತ ತಪ್ಪಿದೆ.

    ದುಷ್ಕರ್ಮಿಗಳು ಜೀವಹಾನಿ ಮಾಡಲು ಈ ಕೃತ್ಯ ಎಸಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪರ್ಯಾಯ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ. ವಾಟರ್‌ಮನ್ ಆದಪ್ಪ ದೂರು ನೀಡಿದ್ದು, ಹಟ್ಟಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Mysuru Dasara: ಸುಧಾಮೂರ್ತಿ ಸಾಕಿದ ಶ್ವಾನ ಗೋಪಿಗೆ ಬಹುಮಾನ

  • 2 ವರ್ಷದ ಹೆಣ್ಣು ಮಗು ಅನುಮಾನಾಸ್ಪದ ಸಾವು – ತಾತನ ವಿರುದ್ಧವೇ ಕೊಲೆಯ ಶಂಕೆ

    2 ವರ್ಷದ ಹೆಣ್ಣು ಮಗು ಅನುಮಾನಾಸ್ಪದ ಸಾವು – ತಾತನ ವಿರುದ್ಧವೇ ಕೊಲೆಯ ಶಂಕೆ

    ಚಿಕ್ಕಬಳ್ಳಾಪುರ: ಮನೆಯ ಪಕ್ಕದ ನೀರಿನ ಸಿಮೆಂಟ್ ತೊಟ್ಟಿಯಲ್ಲಿ ಮಗುವಿನ (Child) ಮೃತದೇಹ ಪತ್ತೆಯಾಗಿದೆ. ಅನುಮಾಮಾಸ್ಪದವಾಗಿ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರೇಚನಾಯ್ಕಪಲ್ಲಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ರಾಜಶೇಖರ ರೆಡ್ಡಿ ಹಾಗೂ ಕನ್ಯಾಕುಮಾರಿ ದಂಪತಿಯ 2 ವರ್ಷದ ಮಗು ಲಲಿತ ರೆಡ್ಡಿ ಮೃತ ದುರ್ದೈವಿ. ಮಗುವಿನ ತಾಯಿ ಕನ್ಯಾಕುಮಾರಿ ಹಾಗೂ ಅವರ ಅತ್ತೆ-ಮಾವನ ನಡುವೆ ಕೌಟುಂಬಿಕ ಕಲಹವಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಸಹ ಕೊಡಲಾಗಿತ್ತು. ಹಲವು ಬಾರಿ ಆದರೂ ಅತ್ತೆ, ಸೊಸೆ, ಮಾವನ ನಡುವೆ ಅಷ್ಟಕ್ಕಷ್ಟೇ ಮಾತು ಇತ್ತು ಎನ್ನಲಾಗಿದೆ.

    ಹೀಗಿದ್ದಾಗ ತಾಯಿ ಮಗುವನ್ನು ಮನೆಯಲ್ಲಿ ಅತ್ತೆ-ಮಾವನ ಜೊತೆ ಬಿಟ್ಟು ಜಮೀನಿನ ಬಳಿ ತೆರಳಿದ್ದಾಗ ಮನೆಯಲ್ಲಿದ್ದ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ನೀರಿನ ತೊಟ್ಟಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಶಾಲಾ ಆವರಣದಲ್ಲಿ ವಾಮಾಚಾರ- ತಲೆ ಬುರುಡೆ, ನಿಂಬೆ ಹಣ್ಣು, ಕುಂಕುಮ ಪತ್ತೆ

    ಮಧ್ಯಾಹ್ನ ಜಮೀನಿನ ಬಳಿ ಇದ್ದ ಮಗುವನ್ನು ತಾತ ಸೋಮಶೇಖರ್ ರೆಡ್ಡಿ ಲಾಲಿಪಾಪ್ ಕೊಡಿಸೋದಾಗಿ ಹೇಳಿ ಕರೆದುಕೊಂಡು ಹೋಗಿದ್ದ. ಇಷ್ಟು ದಿನ ಮಗುವನ್ನು ಮಾತನಾಡಿಸದ ತಾತ 3 ದಿನಗಳಿಂದ ಮಗುವಿಗೆ ಚಾಕ್ಲೇಟ್ ಕೊಡಿಸಿ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ತಾತನೇ ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವ ಸಂಶಯ ಪೋಷಕರದ್ದಾಗಿದೆ. ಈ ಬಗ್ಗೆ ಪಾತಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಭುಗಿಲೆದ್ದ ಆಕ್ರೋಶದ ನಡುವೆಯೂ ತಮಿಳುನಾಡಿಗೆ ನೀರು; KRS ನೀರಿನ ಮಟ್ಟ 96 ಅಡಿಗೆ ಕುಸಿತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀರಿನ ಟ್ಯಾಂಕ್ ಬಿದ್ದು ಇಬ್ಬರು ಸಾವು, ಇಬ್ಬರ ಸ್ಥಿತಿ ಚಿಂತಾಜನಕ

    ನೀರಿನ ಟ್ಯಾಂಕ್ ಬಿದ್ದು ಇಬ್ಬರು ಸಾವು, ಇಬ್ಬರ ಸ್ಥಿತಿ ಚಿಂತಾಜನಕ

    ಬೆಂಗಳೂರು: ಬಹು ಮಹಡಿ ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್ (Water Tank) ಹಾಗೂ ಗೋಡೆ ಕುಸಿದು ಬಿದ್ದು ಅಮಾಯಕರಿಬ್ಬರು ಸಾವನ್ನಪ್ಪಿರುವ ಘಟನೆ ಶಿವಾಜಿ ನಗರ (Shivajinagar) ಬಸ್ ನಿಲ್ದಾಣದಲ್ಲಿ (Bus Stand) ನಡೆದಿದೆ.

    ಶಿವಾಜಿನಗರ ಬಸ್ ನಿಲ್ದಾಣದಲ್ಲಿರುವ ಓಕ್ ಫರ್ನೀಚರ್ ಕಟ್ಟಡದ ಮೇಲೆ 5 ಸಾವಿರ ಲೀಟರ್‌ನ ಎರಡು ನೀರಿನ ಟ್ಯಾಂಕ್ ಇರಿಸಿಲಾಗಿತ್ತು. ಬುಧವಾರ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ನೀರಿನ ಟ್ಯಾಂಕ್ ಇರಿಸಿದ್ದ ಗೋಡೆ (Wall) ಕುಸಿದು ಬಿದ್ದ ಪರಿಣಾಮ ನೀರಿನ ಟ್ಯಾಂಕ್‌ಗಳು ನಾಲ್ಕನೇ ಮಹಡಿಯಿಂದ ಕೆಳಗಡೆ ಬಿದ್ದಿವೆ. ಇದನ್ನೂ ಓದಿ: ಜಾಮೀನಿಗಾಗಿ ವಕೀಲನ ಕಿಡ್ನಾಪ್ – ರಾತ್ರಿ ಇಡೀ ಹಲ್ಲೆ ನಡೆಸಿ ಕ್ರೌರ್ಯ ಮೆರೆದ ರೌಡಿಶೀಟರ್

    ಟ್ಯಾಂಕ್ ಹಾಗೂ ಗೋಡೆ ಬಿದ್ದ ರಭಸಕ್ಕೆ ಕಟ್ಟಡದ ಕೆಳಗಡೆ ಇದ್ದ ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಅದೇ ಸಮಯಕ್ಕೆ ಎಗ್ ರೈಸ್ ಸವಿಯಲು ಬಂದಿದ್ದ ಮೂವರ ಮೇಲೆ ಟ್ಯಾಂಕ್ ಹಾಗೂ ಗೋಡೆ ಬಿದ್ದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟಿರುವ ಇಬ್ಬರಲ್ಲಿ ಒಬ್ಬರು ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಮತ್ತೊಬ್ಬರು ಗ್ರಾಹಕ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು – ಬೆಂಗಳೂರು, ಹೈದರಾಬಾದ್‌ ನಡುವೆ ಸಂಚಾರ

    ಉಳಿದ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯರ ಸಹಾಯದಿಂದ ಪೊಲೀಸರು ಹೆಚ್ಚಿನ ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಕಟ್ಟಡದ ಮಾಲೀಕ ಟ್ಯಾಂಕ್ ಇಡಲು ಅವೈಜ್ಞಾನಿಕವಾಗಿ ಕಟ್ಟಡ ಕಟ್ಟಿದ್ದರ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ಕಂಡು ಬಂದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಎಸ್‍ಇಪಿ ಜಾರಿಗೆ ಸರ್ಕಾರದ ಸಿದ್ಧತೆ – ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ

    ಸದ್ಯ ನಿರ್ಲಕ್ಷ್ಯ ಆರೋಪದಡಿ ಮಾಲೀಕರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಕಟ್ಟಡದ ಮಾಲೀಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹಂಪಿ ಬೀದಿ ಬದಿ ವ್ಯಾಪಾರಿಯ ಮಗ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಮಂಗಗಳ ಸಾವು – 3 ದಿನ ನೀರು ಕುಡಿದ ಗ್ರಾಮಸ್ಥರಲ್ಲಿ ಆತಂಕ

    ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಮಂಗಗಳ ಸಾವು – 3 ದಿನ ನೀರು ಕುಡಿದ ಗ್ರಾಮಸ್ಥರಲ್ಲಿ ಆತಂಕ

    ರಾಯಚೂರು: ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ (Drinking Water Tank) ಮಂಗಗಳು (Monkeys) ಸತ್ತು ಬಿದ್ದಿದ್ದು 3 ದಿನಗಳ ಕಾಲ ತಿಳಿಯದೇ ಅದೇ ನೀರನ್ನು ಗ್ರಾಮಸ್ಥರು ಕುಡಿದಿರುವ ಘಟನೆ ರಾಯಚೂರಿನ (Raichur) ದೇವದುರ್ಗ ತಾಲೂಕಿನ ಖಾನಾಪುರದಲ್ಲಿ ನಡೆದಿದೆ.

    ತೆರೆದ ವಾಟರ್ ಟ್ಯಾಂಕ್‌ನಲ್ಲಿ ನೀರು ಕುಡಿಯಲು ಹೋಗಿ 2 ಮಂಗಗಳು ಮೃತಪಟ್ಟಿವೆ. ಟ್ಯಾಂಕ್ ಒಳಗೆ ಇಳಿದ ಮಂಗಗಳು ಮೇಲೆ ಬರಲು ದಾರಿ ಕಾಣದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.

    ಇದೇ ಟ್ಯಾಂಕ್‌ನಿಂದ ಇಡೀ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಮಂಗಳವಾರ ಟ್ಯಾಂಕ್ ಸ್ವಚ್ಛಗೊಳಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆ ಟ್ಯಾಂಕ್ ಸ್ವಚ್ಛಗೊಳಿಸಲು ಹೋದವರು ಮುಚ್ಚಳ ಮುಚ್ಚದೇ ಬಂದಿದ್ದರಿಂದ ಮಂಗಗಳು ಅದರಲ್ಲಿ ಮುಳುಗಿ ಸಾವನ್ನಪ್ಪಿವೆ. ಇದನ್ನೂ ಓದಿ: ಮಡಿಕೇರಿಯಲ್ಲಿ ಇಲಿ ಜ್ವರಕ್ಕೆ ಯುವಕ ಬಲಿ – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

    ಯಮನಾಳ ಗ್ರಾಮ ಪಂಚಾಯಿತಿ ಸಿಬ್ಬಂದಿ ಖಾನಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಬಗ್ಗೆ ಸರಿಯಾದ ಕ್ರಮವಹಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ಯಾಂಕ್‌ನಲ್ಲಿ ಮಂಗಗಳು ಸತ್ತು ಬಿದ್ದಿರುವ ವಿಷಯ ತಿಳಿದು ಕೆಲವರಿಗೆ ಹೊಟ್ಟೆ ತೊಳಸಿದಂತಾಗಿ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ 17ರ ಹುಡುಗನನ್ನು ಇರಿದು ಕೊಂದ 15ರ ಬಾಲಕ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಲಿತರ ನೀರಿನ ತೊಟ್ಟಿಗೆ ಮಲ ಸುರಿದು ವಿಕೃತಿ – ಹಲವರು ಅಸ್ವಸ್ಥ

    ದಲಿತರ ನೀರಿನ ತೊಟ್ಟಿಗೆ ಮಲ ಸುರಿದು ವಿಕೃತಿ – ಹಲವರು ಅಸ್ವಸ್ಥ

    ಚೆನ್ನೈ: ತಮಿಳುನಾಡಿನ (Tamil Nadu) ಗ್ರಾಮವೊಂದರಲ್ಲಿ ವಿಕೃತವಾಗಿ ಜಾತಿ ತಾರತಮ್ಯ ಮಾಡಲಾದ ಘಟನೆ ಬೆಳಕಿಗೆ ಬಂದಿದೆ. ದಲಿತರಿಗೆಂದು (Dalits) ಮೀಸಲಿಡಲಾಗಿದ್ದ ನೀರಿನ ತೊಟ್ಟಿಗೆ (Water Tank) ಕಿಡಿಗೇಡಿಗಳು ಮಾನವರ ಮಲ ಸುರಿದಿರುವ ಆಘಾತಕಾರಿ ವಿಷಯ ತಿಳಿದುಬಂದಿದೆ.

    ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಕುಡಿಯುವ ನೀರನ್ನು ಪೂರೈಸುವ 10,000 ಲೀ. ನೀರಿನ ತೊಟ್ಟಿಯಲ್ಲಿ ಅಪಾರ ಪ್ರಮಾಣದ ಮಾನವನ ಮಲ ಪತ್ತೆಯಾಗಿದೆ. ಈ ಬಗ್ಗೆ ದೂರು ನೀಡಿರುವ ಹಿನ್ನೆಲೆ ಪುದುಕೊಟ್ಟೈ ಡಿಸಿ ಕವಿತಾ ರಾಮು ಹಾಗೂ ಜಿಲ್ಲಾ ಪೊಲೀಸ್ ಮುಖ್ಯಸ್ಥ ವಂದಿತಾ ಪಾಂಡೆ ಇರಾಯೂರ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

    ವರದಿಗಳ ಪ್ರಕಾರ, ಕೆಲ ದಿನಗಳಿಂದ ಗ್ರಾಮದಲ್ಲಿ ಅನೇಕ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು. ಕುಡಿಯುವ ನೀರಿನಲ್ಲಿ ಸಮಸ್ಯೆಯಿರಬಹುದು ಎಂದು ವೈದ್ಯರು ಸೂಚಿಸಿದ ಬಳಿಕ ಗ್ರಾಮಸ್ಥರು ನೀರಿನ ಟ್ಯಾಂಕ್ ಹತ್ತಿ ಪರಿಶೀಲಿಸಿದ್ದಾರೆ. ಈ ವೇಳೆ ವಿಕೃತ ಕೃತ್ಯ ಬೆಳಕಿಗೆ ಬಂದಿದೆ.

    ಕುಡಿಯುವ ನೀರು ಹಳದಿ ಬಣ್ಣಕ್ಕೆ ತಿರುಗುವಷ್ಟು ಅಪಾರ ಪ್ರಮಾಣದ ಮಲವನ್ನು ನೀರಿನ ತೊಟ್ಟಿಗೆ ಸುರಿದಿರುವುದು ಕಂಡುಬಂದಿದೆ. ಇದಾವುದನ್ನೂ ತಿಳಿಯದೇ ಗ್ರಾಮಸ್ಥರು ಕಳೆದ 1 ವಾರದಿಂದ ಈ ನೀರನ್ನು ಸೇವಿಸುತ್ತಿದ್ದರು. ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಂತೆ ಸತ್ಯ ಬೆಳಕಿಗೆ ಬಂದಿದೆ. ಎಂದು ಗ್ರಾಮದ ರಾಜಕೀಯ ಕಾರ್ಯಕರ್ತ ಮೋಕ್ಷ ಗುಣವಲಗನ್ ಹೇಳಿದ್ದಾರೆ. ಇದನ್ನೂ ಓದಿ: 8 ತಿಂಗಳಲ್ಲಿ 46 ಕೆಜಿ ತೂಕ ಇಳಿಸಿಕೊಂಡ ದೆಹಲಿ ಪೊಲೀಸ್‌ಗೆ ಭಾರೀ ಮೆಚ್ಚುಗೆ

    ಈ ಗ್ರಾಮದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆಯಲ್ಲಿದ್ದು, ಸ್ಥಳೀಯ ಚಹಾ ಅಂಗಡಿಯಲ್ಲಿಯ್ಯೂ ಪ್ರತ್ಯೇಕ ಗ್ಲಾಸ್‌ಗಳ ವ್ಯವಸ್ಥೆ ಇದೆ. ದೇವಸ್ಥಾನದ ಆವರಣದಲ್ಲಿ ಇಂದಿಗೂ ದಲಿತರಿಗೆ ಪ್ರವೇಶವಿಲ್ಲ ಎನ್ನಲಾಗಿದೆ.

    ಅನಾರೋಗ್ಯಕ್ಕೀಡಾದ ಮಗುವೊಂದರ ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಸೆಕ್ಷನ್ 277, 328 ಅನ್ವಯ ಹಾಗೂ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿದ್ದಾರೆ.

    ಕೆಲ ದಲಿತರನ್ನು ಡಿಸಿ ಹಾಗೂ ಎಸ್‌ಪಿ ತಾವಾಗಿಯೇ ದೇವಾಲಯಗಳಿಗೆ ಕರೆದುಕೊಂಡು ಹೋಗಿದ್ದು, ಜಾತಿ ತಾರತಮ್ಯ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೀಡಾದವರ ಚಿಕಿತ್ಸೆಗೆ ಗ್ರಾಮದಲ್ಲಿ ವಿಶೇಷ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ಇದನ್ನೂ ಓದಿ: ಗ್ಯಾಂಬಿಯಾ ಬಳಿಕ ಈಗ ಉಜ್ಬೇಕಿಸ್ತಾನದಿಂದ ಆರೋಪ – 18 ಮಕ್ಕಳ ಸಾವಿಗೆ ಭಾರತದ ಸಿರಪ್ ಕಾರಣ

    Live Tv
    [brid partner=56869869 player=32851 video=960834 autoplay=true]

  • ದಲಿತ ಮಹಿಳೆ ನೀರು ಕುಡಿದರೆಂದು ಟ್ಯಾಂಕ್‌ ಖಾಲಿ ಮಾಡಿ ಗೋಮೂತ್ರದಿಂದ ಶುದ್ಧಿ!

    ದಲಿತ ಮಹಿಳೆ ನೀರು ಕುಡಿದರೆಂದು ಟ್ಯಾಂಕ್‌ ಖಾಲಿ ಮಾಡಿ ಗೋಮೂತ್ರದಿಂದ ಶುದ್ಧಿ!

    ಚಾಮರಾಜನಗರ: ದಲಿತ ಮಹಿಳೆ (Dalit Woman) ತೊಂಬೆ (ಟ್ಯಾಂಕ್‌) ನೀರು (Water) ಕುಡಿದರು ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತೊಂಬೆಯ ನೀರು ಖಾಲಿ ಮಾಡಿದ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ವೀರಶೈವ ಬೀದಿಯಲ್ಲಿ ದಲಿತ ಮಹಿಳೆಯೊಬ್ಬರು ರಸ್ತೆ ಬದಿ ಇದ್ದ ತೊಂಬೆಯಲ್ಲಿ ನೀರು ಕುಡಿದಿದ್ದರು. ಈ ಕಾರಣಕ್ಕೆ ನೀರನ್ನು ಖಾಲಿ ಮಾಡಿ, ತೊಂಬೆಗೆ ಗೋಮೂತ್ರ ಸಿಂಪಡಿಸಿ ಸ್ವಚ್ಛ ಮಾಡಿದ್ದಾರೆ ಎಂದು ಬರೆದು ಪೋಸ್ಟ್‌ ಮಾಡಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಲವ್ ಜಿಹಾದ್ ಆರೋಪ – ದೂರು ನೀಡಿದರೂ ಕ್ರಮ ಕೈಗೊಳ್ಳದ ಇನ್ಸ್‌ಪೆಕ್ಟರ್‌ ನಾಸಿರ್ ಹುಸೇನ್

    ವೀಡಿಯೋ ವೈರಲ್ ಆಗುತ್ತಿದ್ದಂತೆ ಈ ಘಟನೆಯ ಕುರಿತಾಗಿ ಪರಿಶೀಲನೆ ನಡೆಸಲು ತಹಶೀಲ್ದಾರ್ ಮುಂದಾಗಿದ್ದಾರೆ. ಸದ್ಯ ಗ್ರಾಮಕ್ಕೆ RI ಮತ್ತು VA ಅವರನ್ನು ಕಳುಹಿಸಿ ವರದಿ ತರಿಸಿಕೊಂಡ ತಹಶೀಲ್ದಾರ್, ನಾಳೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಅಧಿಕಾರಿಗಳು ಕೊಟ್ಟ ವರದಿ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಘಟನೆ ನಿಜವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಎಫ್‍ಐಆರ್ (FIR) ದಾಖಲು ಮಾಡಲಾಗುತ್ತದೆ ಎಂದು ಚಾಮರಾಜನಗರ ತಹಶೀಲ್ದಾರ್ ಬಸವರಾಜ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮದುವೆಗೆ ಯೋಧರನ್ನು ಆಹ್ವಾನಿಸಿದ ಜೋಡಿ – ಕರೆಯೋಲೆ ಕಂಡು ಖುಷಿ ಪಟ್ಟ ಇಂಡಿಯನ್ ಆರ್ಮಿ

    Live Tv
    [brid partner=56869869 player=32851 video=960834 autoplay=true]

  • ಕೊಟ್ಟ ಮಾತಿಗೆ ತಪ್ಪಿದ ಪಂಜಾಬ್ ಸರ್ಕಾರ – ಪೆಟ್ರೋಲ್ ಹಿಡಿದು ನೀರಿನ ಟ್ಯಾಂಕ್ ಏರಿ ಪ್ರತಿಭಟನೆಗೆ ಮುಂದಾದ ಶಿಕ್ಷಕಿಯರು

    ಕೊಟ್ಟ ಮಾತಿಗೆ ತಪ್ಪಿದ ಪಂಜಾಬ್ ಸರ್ಕಾರ – ಪೆಟ್ರೋಲ್ ಹಿಡಿದು ನೀರಿನ ಟ್ಯಾಂಕ್ ಏರಿ ಪ್ರತಿಭಟನೆಗೆ ಮುಂದಾದ ಶಿಕ್ಷಕಿಯರು

    ಚಂಡೀಗಢ:  ಪಂಚಾಬ್‍ನಲ್ಲಿ ಎಎಪಿ (AAP) ಸರ್ಕಾರ ಅಧಿಕಾರಕ್ಕೆ ಬಂದರೆ ದೈಹಿಕ ಶಿಕ್ಷಣ ಶಿಕ್ಷಕರಿಗೆ (Physical Training Teachers) ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಭಗವಂತ್ ಮಾನ್ (Bhagwant Mann) ಸರ್ಕಾರ ಇದೀಗ ಉದ್ಯೋಗ ನೀಡಲು ವಿಫಲವಾಗಿದೆ. ಇದರಿಂದ ರೊಚ್ಚಿಗೆದ್ದಿರುವ ದೈಹಿಕ ಶಿಕ್ಷಕಿಯರಿಬ್ಬರು ಪಂಜಾಬ್‍ನ ಮೋಹಾಲಿಯಲ್ಲಿ ನೀರಿನ ಟ್ಯಾಂಕ್ (Water Tank) ಮೇಲೆರಿ ಪ್ರತಿಭಟನೆಗೆ ಮುಂದಾಗಿದ್ದಾರೆ.

    ಪಂಜಾಬ್‍ನಲ್ಲಿ ದೈಹಿಕ ಬೋಧಕ (PTI) ತರಬೇತಿ ಪಡೆದ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಕ ಮಾಡುವಂತೆ ಕಳೆದ ಒಂದು ವರ್ಷದಿಂದ ಪ್ರತಿಭಟನೆ ನಡೆಯುತ್ತಿದೆ. ಈ ಹಿಂದೆ ಎಎಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರತಿಭಟನೆ ನಡೆಸುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕರಿಗೆ ನಾವು ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ನೀಡುವುದಾಗಿ ಎಎಪಿ ಭರವಸೆ ನೀಡಿತ್ತು. ಇದನ್ನೂ ಓದಿ: ಪವನ್ ಕಲ್ಯಾಣ್‍ಗಾಗಿ ಸಕ್ರಿಯ ರಾಜಕೀಯಕ್ಕೆ ಮೆಗಾಸ್ಟಾರ್ ಚಿರಂಜೀವಿ ಗುಡ್‍ಬೈ

    ಆದರೆ ಇದೀಗ ಎಎಪಿ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರು, ಈ ಭರವಸೆ ಈಡೇರಿಲ್ಲ. ಹಾಗಾಗಿ ಇಂದು ಇಬ್ಬರು ಪಿಟಿಐ ಶಿಕ್ಷಕರು ಮೊಹಾಲಿಯಲ್ಲಿ ನೀರಿನ ಟ್ಯಾಂಕ್‍ಗೆ ಪೆಟ್ರೋಲ್ ತುಂಬಿದ ಬಾಟಲಿಯೊಂದಿಗೆ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವ ಪ್ರತಿಭಟನಾನಿರತ ಆನಂದಪುರ ಸಾಹಿಬ್ ನಿವಾಸಿ ಸಿಪ್ಪಿ ಶರ್ಮಾ, ನಮಗೆ ಈ ಹಿಂದಿನ ಪಂಜಾಬ್ ಸರ್ಕಾರ ಉದ್ಯೋಗದ ಭರವಸೆ ನೀಡಿತ್ತು. ಆದರೆ ಕೊಟ್ಟಿರಲಿಲ್ಲ. ಈ ವೇಳೆ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಉದ್ಯೋಗ ನೀಡುವುದಾಗಿ ತಿಳಿಸಿತ್ತು. ಇದೀಗ ಎಎಪಿ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದಿದೆ. ಇನ್ನೂ ಕೂಡ ನಮಗೆ ಉದ್ಯೋಗ ನೀಡಿಲ್ಲ. ಸರ್ಕಾರ ನಮಗೆ ಸುಳ್ಳು ಭರವಸೆ ನೀಡಿದೆ. ಹಾಗಾಗಿ ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ. ಸರ್ಕಾರ ನಮ್ಮ ಭರವಸೆ ಈಡೇರಿಸದಿದ್ದರೆ ನಾವು ಇಲ್ಲಿಂದ ಬರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಸೇನೆಯ ಚೀತಾ ಹೆಲಿಕಾಪ್ಟರ್ ಪತನ- ಪೈಲಟ್ ಹುತಾತ್ಮ

    Live Tv
    [brid partner=56869869 player=32851 video=960834 autoplay=true]

  • ಟ್ಯಾಂಕರ್ ಹರಿದು ಬಾಲಕಿ ಸಾವು ಪ್ರಕರಣ – ಚಾಲಕ ರಖೀಬ್ ಅರೆಸ್ಟ್

    ಟ್ಯಾಂಕರ್ ಹರಿದು ಬಾಲಕಿ ಸಾವು ಪ್ರಕರಣ – ಚಾಲಕ ರಖೀಬ್ ಅರೆಸ್ಟ್

    ಬೆಂಗಳೂರು: ಹೆಚ್‍ಎಸ್‍ಆರ್ ಲೇಔಟ್ ವಾಟರ್ ಟ್ಯಾಂಕರ್ ಹರಿದು ಮೂರು ವರ್ಷದ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಚಾಲಕ ರಖೀಬ್‌ನನ್ನು ಪೊಲೀಸರು ಬಂಧಿಸಿದ್ದಾರೆ.

    ಪೊಲೀಸ್ ಠಾಣೆಯಲ್ಲಿ ಟ್ಯಾಂಕರ್ ಮಾಲೀಕ ಕಳ್ಳಾಟ ನಡೆಸಿದ್ದಾನೆ. ಚಾಲಕನ ಬದಲು ಮಾಲೀಕ ಬೇರೆ ಚಾಲಕನನ್ನ ಠಾಣೆಗೆ ಹಾಜರುಪಡಿಸಿದ್ದಾನೆ. ಈ ಮೂಲಕ ನೀರಿನ ಟ್ಯಾಂಕರ್ ಮಾಲೀಕ ಆನಂದ್ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ. ಇದನ್ನೂ ಓದಿ: ನೇರಳೆ ಮಾರ್ಗ ಮೆಟ್ರೋ ಸಂಚಾರದಲ್ಲಿಂದು ವ್ಯತ್ಯಯ

    ಹಣಕೊಟ್ಟು ರಮೇಶ್ ಬಾಬು ಎಂಬಾತನನ್ನು ಪೊಲೀಸರ ಮುಂದೆ ಹಾಜರು ಪಡಿಸಿದ್ದಾನೆ. ಪೊಲೀಸರ ತನಿಖೆ ವೇಳೆ ಅಪಘಾತ ಮಾಡಿದ ಚಾಲಕ ಬೇರೆ ವ್ಯಕ್ತಿ ಎಂಬುದು ಬೆಳಕಿಗೆ ಬಂದಿದೆ. ಹಣದಾಸೆಗೆ ಆರೋಪಿಯಂತೆ ಒಪ್ಪಿಕೊಂಡಿರುವುದಾಗಿ ರಮೇಶ್ ಬಾಬು ಹೇಳಿಕೆ ನೀಡಿದ್ದಾನೆ.

    ಇದೇ ವೇಳೆ ಅಪಘಾತ ಎಸಗಿದ ಅಸಲಿ ಚಾಲಕ ರಖೀಬ್ ಎಂಬಾತನನ್ನು ಬಂಧಿಸಲಾಗಿದೆ. ಘಟನೆ ಬಳಿಕ ರಖೀಬ್ ಪರಾರಿಯಾಗಿದ್ದ. ಇದೀಗ ಹೆಚ್‍ಎಸ್‍ಆರ್ ಲೇಔಟ್ ಸಂಚಾರಿ ಪೊಲೀಸರು ಆರೋಪಿ ಚಾಲಕನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಸಂಚಾರಿ ಪೊಲೀಸರು ಸುಮಾರು 258 ನೀರಿನ ಟ್ಯಾಂಕರ್ ಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.

    ಏನಿದು ಘಟನೆ..?: ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ವೇತ ರೆಸಿಡೆನ್ಸಿ ಅಪಾರ್ಟ್‍ಮೆಂಟ್ ಮುಂದೆ ಅಪಘಾತ ಸಂಭವಿಸಿತ್ತು. ಅಪಾರ್ಟ್‍ಮೆಂಟ್‍ಗೆ ನೀರನ್ನು ಲೋಡ್ ಮಾಡಲು ಟ್ಯಾಂಕರ್ ತರಲಾಗಿತ್ತು. ನೀರು ಲೋಡ್ ಮಾಡಿ ಮುಗಿದ ಬಳಿಕ ಟ್ಯಾಂಕರ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಅವಘಡ ನಡೆದಿದೆ. ಹಿಂದೆ ನೋಡದೆ ಚಾಲಕ ರಿವರ್ಸ್ ತೆಗೆದುಕೊಂಡಿದ್ದಾನೆ. ಈ ವೇಳೆ ವಾಹನ ಬಾಲಕಿ ಮೇಲೆ ಹರಿದಿದ್ದು, ಚಕ್ರದಡಿ ಸಿಲುಕಿ ಮೂರು ವರ್ಷದ ಬಾಲಕಿ ಪ್ರತಿಷ್ಠಾ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಹೆಚ್‍ಎಸ್ ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

  • ನ್ಯಾಯಕ್ಕಾಗಿ ನೀರಿನ ಟ್ಯಾಂಕ್ ಏರಿ ಕುಳಿತ ಕುಟುಂಬ- ಆತ್ಮಹತ್ಯೆ ಬೆದರಿಕೆ

    ನ್ಯಾಯಕ್ಕಾಗಿ ನೀರಿನ ಟ್ಯಾಂಕ್ ಏರಿ ಕುಳಿತ ಕುಟುಂಬ- ಆತ್ಮಹತ್ಯೆ ಬೆದರಿಕೆ

    ಚಿಕ್ಕಬಳ್ಳಾಪುರ: ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ ಅವರು ಜಮೀನು ವಿಚಾರದಲ್ಲಿ ಮೋಸ ಮಾಡಿದ್ದಾರೆ. ನಮಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿ ಚಿಂತಾಮಣಿ ಮೂಲದ ಕುಟುಂಬವೊಂದು ಆತ್ಮಹತ್ಯೆ ಬೆದರಿಕೆ ಒಡ್ಡುತ್ತಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಜಿಕೆವಿ ಲೇಔಟ್‍ನಲ್ಲಿ ನಡೆದಿದೆ.

    ನಿವೃತ್ತ ಡಿವೈಎಸ್ಪಿ ಕೋನಪ್ಪ ರೆಡ್ಡಿ ಅವರ ಕುಟುಂಬದ ಸದಸ್ಯರಾದ ಆಂಜನೇಯ ರೆಡ್ಡಿ ಕುಟುಂಬದ ನಾಲ್ವರು ಪುರುಷರು, ನಾಲ್ವರು ಮಹಿಳೆಯರು ಬೆಳ್ಳಂಬೆಳಗ್ಗೆ ನೀರಿನ ಟ್ಯಾಂಕ್ ಹೇರಿ ಕುಳಿತಿದ್ದು, ಜೊತೆಯಲ್ಲಿ ಪೆಟ್ರೋಲ್ ತುಂಬಿದ ಕ್ಯಾನ್ ಸಹ ಕೊಂಡೊಯ್ದಿದ್ದಾರೆ. ಕೋನಪ್ಪರೆಡ್ಡಿ ಅವರು 4 ಎಕರೆ 18 ಗುಂಟೆ ಜಮೀನು ವಿಚಾರದಲ್ಲಿ ಫೋರ್ಜರಿ ಮಾಡಿ ಮೋಸ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್

    ನಮಗೆ ನ್ಯಾಯ ದೊರಕಿಸಿ ಇಲ್ಲವೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಭೇಟಿ ನೀಡಿ ಮನವೊಲಿಸುವ ಕಾರ್ಯ ನಡೆಸುತ್ತಿದ್ದಾರೆ. ಆದರೆ ಪೊಲೀಸರ ಮನವೊಲಿಕೆಗೂ ಜಗ್ಗದ ಆಂಜನೇಯರೆಡ್ಡಿ ಕುಟುಂಬಸ್ಥರು ಹಠ ಹಿಡಿದು ನ್ಯಾಯಕ್ಕಾಗಿ ಪಟ್ಟು ಹಿಡಿದು ಕೂತಿದ್ದಾರೆ. ಇದನ್ನೂ ಓದಿ: ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು: ಡಾ.ಕೆ.ಸುಧಾಕರ್