Tag: water supply

  • ತುಂಗಾಭದ್ರಾ ಅಣೆಕಟ್ಟಿನಲ್ಲಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರಿನ ಸದ್ಬಳಕೆಗೆ ಕ್ರಮ: ಡಿ.ಕೆ.ಶಿವಕುಮಾರ್

    ತುಂಗಾಭದ್ರಾ ಅಣೆಕಟ್ಟಿನಲ್ಲಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರಿನ ಸದ್ಬಳಕೆಗೆ ಕ್ರಮ: ಡಿ.ಕೆ.ಶಿವಕುಮಾರ್

    ಬೆಂಗಳೂರು: ತುಂಗಾಭದ್ರಾ ಜಲಾಶಯದಲ್ಲಿ ಹೂಳು ತುಂಬಿ ವ್ಯರ್ಥವಾಗುತ್ತಿರುವ 27 ಟಿಎಂಸಿ ನೀರು ಸದ್ಬಳಕೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ತಿಳಿಸಿದರು.

    ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಬಸನಗೌಡ ಬಾದರ್ಲಿ ಅವರು, ತುಂಗಾಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿದೆ ಆದ ಕಾರಣಕ್ಕೆ ನವಲಿ ಜಲಾಶಯ ನಿರ್ಮಾಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನೆ ಕೇಳಿದರು. ಇದನ್ನೂ ಓದಿ: ಎಂಇಎಸ್ ನಿಷೇಧಕ್ಕೆ ಒತ್ತಾಯ – ಪೊರಕೆ ಹಿಡಿದು ವಾಟಾಳ್ ನಾಗರಾಜ್ ಪ್ರತಿಭಟನೆ

    ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ನಮ್ಮ ಅಧಿಕಾರಿಗಳು ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡದೇ ಪರ್ಯಾಯವಾದ ಆಲೋಚನೆ ತಿಳಿಸಿದ್ದಾರೆ. ನಮ್ಮ ಪಾಲಿನ ನೀರನ್ನು ಪಂಪ್ ಮಾಡಿಕೊಂಡು ಬಳಸಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಇದರಿಂದ ಮೂರು ರಾಜ್ಯಗಳಿಗೆ ಉಪಯೋಗವಾಗಲಿದೆ. ನಮಗೆ ಶೇ.65 ರಷ್ಟು ನೀರು, ಅವರಿಗೆ ಶೇ.35 ರಷ್ಟು ನೀರು ಉಪಯೋಗವಾಗಲಿದೆ. ಸಮತೋಲಿತ ಅಣೆಕಟ್ಟು ನಿರ್ಮಾಣ ಹಾಗೂ ಹೊಸ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ. ನಾವು ನಮ್ಮ ಪಾಲಿನ ನೀರು ಉಳಿಸಿಕೊಳ್ಳಲು ಬದ್ಧವಾಗಿದ್ದೇವೆ ಎಂದರು. ಇದನ್ನೂ ಓದಿ: ಬೆಂಗಳೂರಿನ ಬೆಡಗಿ ಜೊತೆ ಡೇಟಿಂಗ್ ಮಾಡ್ತಿದ್ದೀನಿ: ಪಾರ್ಟಿಯಲ್ಲಿ ಗೆಳತಿ ಬಗ್ಗೆ ಆಮೀರ್ ಮಾತು

    ಇದಕ್ಕಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಹಾಗೂ ಪಂಪ್ ಮಾಡಿ ನೀರು ಬಳಸಿಕೊಳ್ಳುವ ಪರ್ಯಾಯ ಯೋಜನೆ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ. ಮಾ. 18ರಂದು ಕೇಂದ್ರ ಜಲಶಕ್ತಿ ಸಚಿವರು ಪೆನ್ನಾರ್ ನದಿ ವಿಚಾರವಾಗಿ ನಮ್ಮನ್ನು ಹಾಗೂ ತಮಿಳುನಾಡಿನವರನ್ನು ಚರ್ಚೆಗೆ ಕರೆದಿದ್ದಾರೆ. ಅಂದು ನವಲಿ ಅಣೆಕಟ್ಟು ನಿರ್ಮಾಣ ಹಾಗೂ ಪರ್ಯಾಯ ಪರಿಹಾರಗಳ ಬಗ್ಗೆ ಕೇಂದ್ರ ಸಚಿವರ ಬಳಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಜೈಲುಗಳಲ್ಲಿ ಅಕ್ರಮ ಚಟುವಟಿಕೆ ತಡೆಯಲು ವಿಶೇಷ ಕ್ರಮ : ಪರಮೇಶ್ವರ್

    ಈ ವಿಚಾರವಾಗಿ ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಪತ್ರ ಕೂಡ ಬರೆದಿದ್ದೇನೆ. ರಾಜಸ್ಥಾನದ ಉದಯಪುರಲ್ಲಿ ನಡೆದ ಸಮಾವೇಶದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜಲಸಂಪನ್ಮೂಲ ಸಚಿವರ ಜತೆ ಚರ್ಚೆ ಮಾಡಲಾಗಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ ಈ ಯೋಜನೆ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿ ಚರ್ಚೆ ಮಾಡಲು ಸಮಯ ನೀಡಿ ಎಂದು ಕೇಳಿದ್ದೆ. 2 ರಾಜ್ಯಗಳ ಜತೆ ಚರ್ಚೆ ಮಾಡಿದ ನಂತರ ತುಂಗಾಭದ್ರಾ ಮಂಡಳಿ ಮುಂದೆ ಈ ಯೋಜನೆಗಳ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದೆ. ಆಂಧ್ರಪ್ರದೇಶ ಸಿಎಂ ಅವರು ಈ ವಿಚಾರವಾಗಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿ ಬಣ ವೀರರ ಲಿಂಗಾಯತ ಸಭೆಗಳಿಗೆ ಹೈಕಮಾಂಡ್ ಬ್ರೇಕ್ – ಬಿವೈವಿ ವಿರುದ್ಧ ಅಮಿತ್ ಶಾಗೆ ಲಿಂಬಾವಳಿ ದೂರು

    ತುಂಗಾಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಕಾರಣಕ್ಕೆ ಸುಮಾರು 25 ರಿಂದ 30 ಟಿಎಂಸಿ ನೀರು ನಮಗೆ ಸಿಗದೇ ವ್ಯರ್ಥವಾಗುತ್ತಿದೆ. ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಸುಮಾರು 15,000 ಎಕ್ರೆ ಭೂಮಿ ಬೇಕಾಗಿದೆ. ಈ ಬಗ್ಗೆ ಈಗಾಗಲೇ ತಾಂತ್ರಿಕ ವರದಿಗಳನ್ನು ಹಾಗೂ ಡಿಪಿಆರ್ ಕೂಡಾ ತಯಾರಾಗಿದೆ. ಇದನ್ನು ತುಂಗಾಭದ್ರಾ ಬೋರ್ಡ್ ಹಾಗೂ ಆಂಧ್ರ, ತೆಲಂಗಾಣ ರಾಜ್ಯಗಳಿಗೂ ಕಳುಹಿಸಲಾಗಿದೆ ಎಂದರು. ಇದನ್ನೂ ಓದಿ: 83,00,00,00,00,000 ಕ್ರಿಪ್ಟೋ ವಂಚನೆ – ಕೇರಳದಲ್ಲಿ ಸಿಬಿಐನಿಂದ ಲಿಥುವೇನಿಯಾದ ಪ್ರಜೆ ಅರೆಸ್ಟ್‌

    ಆಂಧ್ರಪ್ರದೇಶ ಮುಖ್ಯಮಂತ್ರಿಗಳು ಸಮಯವಕಾಶ ನೀಡಿದ ತಕ್ಷಣ ನಾನೇ ಖುದ್ದಾಗಿ ಹೋಗಿ ಮಾತನಾಡುತ್ತೇನೆ. ಸಚಿವ ಬೋಸರಾಜು, ಆ ಭಾಗದ ಇತರೆ ಸಚಿವರು ಹಾಗೂ ಶಾಸಕರು ಈ ಕೆಲಸ ಆಗಲೇಬೇಕು ಎಂದು ಬೆನ್ನುಹತ್ತಿದ್ದಾರೆ. ಈಗಾಗಲೇ ನಾನು, ಬೋಸರಾಜು ಹಾಗೂ ಸಚಿವ ಸೋಮಣ್ಣ ಅವರು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಪದ್ದತಿ ಜಾರಿ ಮಾಡ್ತೀವಿ, ಸಮಯ ನಿಗದಿ ಮಾಡಲು ಆಗಲ್ಲ: ಬೋಸರಾಜು

    ಈ ಹಿಂದಿನ ಸರ್ಕಾರಗಳು ಸಹ ಹೂಳು ತೆಗೆಯಲು ಕ್ರಮ ತೆಗೆದುಕೊಂಡಿದ್ದವು. ಈ ಬಗ್ಗೆ ನಾವು ಪ್ರಯತ್ನ ಮಾಡಿದ್ದೇವೆ. ಆದರೆ 30 ಟಿಎಂಸಿಯಷ್ಟು ನೀರು ಹಿಡಿಯುವ ಹೂಳನ್ನು ತೆಗೆದು ಎಲ್ಲಿ ಹಾಕುವುದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕಳೆದ ವರ್ಷ ತುಂಗಾಭದ್ರಾ ಅಣೆಕಟ್ಟಿನ ಗೇಟ್ ಕಿತ್ತು ಹೋದಾಗ, ನಾನು ಅಣೆಕಟ್ಟು ಉಳಿಯುವುದಿಲ್ಲ ಎಂದು ಆತಂಕಗೊಂಡಿದ್ದೆ. ನಾನು ಅಲ್ಲಿಗೆ ಭೇಟಿ ನೀಡಿದಾಗ ಇಡೀ ಡ್ಯಾಂ ಅಲ್ಲಾಡುತ್ತಿತ್ತು. ರಾತ್ರೋರಾತ್ರಿ ಅಲ್ಲಿಗೆ ತೆರಳಿ ಗೇಟ್ ದುರಸ್ಥಿಗೊಳಿಸಲು ಕ್ರಮ ತೆಗೆದುಕೊಳ್ಳಲಾಯಿತು. ತಾಂತ್ರಿಕ ತಜ್ಞರಾದ ಕನ್ನಯ್ಯ ನಾಯ್ಡು, ಜೆಎಸ್‌ಡಬ್ಲೂ ಹಾಗೂ ಇತರೇ ಸಂಸ್ಥೆಗಳ ಜತೆ ಮಾತನಾಡಿ ಎಲ್ಲರ ಪರಿಶ್ರಮದಿಂದ ಒಂದು ವಾರಕ್ಕೆ ಗೇಟ್ ದುರಸ್ಥಿ ಮಾಡಿ ನೀರು ನಿಲ್ಲಿಸಲಾಯಿತು ಎಂದು ಹೇಳಿದರು.

  • `ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ‌ ಅಧ್ಯಕ್ಷ

    `ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ‌ ಅಧ್ಯಕ್ಷ

    – ಮೋದಿ ಸರ್ಕಾರದಿಂದ ಮೆಚ್ಚುಗೆ; ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ

    ಕಲಬುರಗಿ: ಜಿಲ್ಲೆಯ ಯುವಕನೊಬ್ಬ ತನ್ನ ಮನೆ ಆಯ್ತು ಅಂತಾ ಜೀವನ ಸಾಗಿಸುತ್ತಿದ್ದ. ಆದ್ರೆ ಕಳೆದ 5 ವರ್ಷಗಳ ಹಿಂದೆ ಹೆಚ್‌.ಆರ್ ರಂಗನಾಥ್ (HR Ranganath) ಅವರ ಭೇಟಿಗೆ ಬಂದಿದ್ದ ಆ ಯುವಕನನ್ನು `ಏನಾದ್ರು ಸಾಧನೆ ಮಾಡಿ ಬಾ’ ಆಗ ನಿನ್ನ ಜೊತೆ ಮಾತನಾಡ್ತೀನಿ ಅಂತ ಹುರಿದುಂಬಿಸಿದ್ರು. ಇದನ್ನೇ ಪ್ರೇರಣೆಯಾಗಿ ತೆಗೆದುಕೊಂಡ ಆ ಯುವಕ ಗ್ರಾಮಕ್ಕೆ ಹೋಗಿ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದ. ನಂತರ ಇಡೀ ಗಣಜಲಖೇಡ ಗ್ರಾಮಕ್ಕೆ (Ganjalkhed Village) 24*7 ನೀರಿನ ಸೌಲಭ್ಯ ಕಲ್ಪಿಸಿದ. ಈಗ ಈ ಗ್ರಾಮ ರಾಜ್ಯದ ಮೊದಲ 24*7 ನೀರು ವಿತರಣೆ ಆಗುತ್ತಿರುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಕಲಬುರಗಿಯ (Kalaburagi) ಗ್ರಾಮೀಣ ಕ್ಷೇತ್ರದ ಗಣಜಲಖೇಡದಲ್ಲಿ ಈ ಹಿಂದೆ ಒಂದು ಬಿಂದಿಗೆ ನೀರು ತರಬೇಕು ಅಂದ್ರೂ ಕಿಲೋಮೀಟರ್‌ ದೂರ ಸಾಗಬೇಕಿತ್ತು. ಗ್ರಾಮಸ್ಥರ ಈ‌ ಸಮಸ್ಯೆ ಅರಿತ ಪಂಚಾಯಿತಿ ಅಧ್ಯಕ್ಷ ಶ್ರೀಧರ ಇಡೀ ಗ್ರಾಮಕ್ಕೆ ದಿನದ 24 ಗಂಟೆಯೂ ನೀರಿನ ಸೌಲಭ್ಯ ಕಲ್ಪಿಸಲು ಪ್ಲ್ಯಾನ್‌ ಮಾಡಿದ್ರು. ನೀರು ಸರಬರಾಜು ಮಾಡಲು ಪ್ಲ್ಯಾನ್ ಮಾಡಿ, ಜೆಜೆಎಂ ಸಹಯೋಗದೊಂದಿಗೆ ಇಡೀ ರಾಜ್ಯದಲ್ಲಿಯೇ ಗಣಜಲಖೇಡ ಗ್ರಾಮಕ್ಕೆ 24*7 ನೀರು ಸಪ್ಲೈ ಇರುವ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿಸಿದ್ದಾರೆ.

    ತನ್ನ ಈ ಸಾಮಾಜಿಕ ಕಾರ್ಯಕ್ಕೆ ʻಪಬ್ಲಿಕ್ ಟಿವಿʼ (Public TV) ಮುಖ್ಯಸ್ಥ ಹೆಚ್.ಆರ್ ರಂಗನಾಥ್ ಅವರೇ ಪ್ರೇರಣೆಯಾಗಿದ್ದಾರೆ ಎಂದು ಸ್ವತಃ ಶ್ರೀಧರ್‌ ಅವರು ಹೇಳಿಕೊಂಡಿದ್ದಾರೆ. 5 ವರ್ಷಗಳ ಹಿಂದೆ ʻಪಬ್ಲಿಕ್ ಟಿವಿʼ ಬೆಂಗಳೂರು ಕಚೇರಿಗೆ ಆಗಮಿಸಿ ರಂಗನಾಥ್ ಅವರನ್ನು ಭೇಟಿಯಾಗಿ ಮಾತನಾಡಲು ಅವಕಾಶ ಕೇಳಿದ್ದರು.

    ಈ ಸಂದರ್ಭದಲ್ಲಿ ಶ್ರೀಧರ್‌ಗೆ ರಂಗನಾಥ್ ಅವರು ಒಂದು ಸೆಲ್ಫಿ ನೀಡಿ, ಜೀವನದಲ್ಲಿ ಏನಾದ್ರೂ ಸಾಮಾಜಿಕವಾಗಿ ಸಾಧನೆ‌ ಮಾಡಿ ಬಾ, ಆಗ ನಿನ್ನ ಜೊತೆ ಮಾತನಾಡಿಸುತ್ತೇನೆ ಎಂಬುದಾಗಿ ಹೇಳಿದ್ದರು. ಅವರ ಮಾತನ್ನು ಸವಾಲಿನಂತೆ ಸ್ವೀಕರಿಸಿದ ಶ್ರೀಧರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಳಿಕ ಇಡೀ ಗಣಜಲಖೇಡ ಗ್ರಾಮಕ್ಕೆ ಅತ್ಯುತ್ತಮ ನೀರಿನ ಸಂಪರ್ಕ ಕಲ್ಪಿಸಿದ್ದಾರೆ. ಈ ಮೂಲಕ ರಾಜ್ಯದ ಮೊದಲ 24*7 ನೀರು ಸರಬರಾಜಾಗುವ ಗ್ರಾಮ ಎಂಬ ಹೆಗ್ಗಳಿಕೆ ಪಾತ್ರವಾಗುವಂತೆ ಮಾಡಿದ್ದಾರೆ.

    ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಧರ ಮಾಡಿದ ಈ ಕಾರ್ಯಕ್ಕೆ ಕೇಂದ್ರದ‌ ಮೋದಿ ಸರ್ಕಾರ ಸಹ‌ ಮೆಚ್ಚುಗೆ ವ್ಯಕ್ತಪಡಿಸಿದೆ. ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಶೇಷ ಆಹ್ವಾನ ನೀಡಿದೆ.

    ಈ ಹಿಂದೆಯೂ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು 5 ಕಡೆ ಬಾವಿ ತೆಗೆಸಿದ್ರು, ಆದ್ರೆ ಹನಿ ನೀರು ಸಿಕ್ಕಿರಲಿಲ್ಲ. ನಂತರ ಭೂವಿಜ್ಞಾನಿಗಳನ್ನ ಕರೆಸಿ ನೀರಿನ ಮೂಲ ಶೋಧಕ್ಕೆ ಮುಂದಾದರು. ಆಗ ಗ್ರಾಮದ ಚೆನ್ನಣ್ಣ ಎಂಬ ರೈತನ ಜಮೀನಿನಲ್ಲಿ ನೀರು ಇರುವುದು ಪತ್ತೆಯಾಯಿತು. ಆದರೆ ಭೂಮಿ ಖರೀದಿಗೆ ಪಂಚಾಯತ್ ನಲ್ಲಿ ಅವಕಾಶವಿರಲಿಲ್ಲ, ಹೀಗಾಗಿ ಗ್ರಾಮ‌ ಪಂಚಾಯಿತಿ ಅಧ್ಯಕ್ಷ ಶ್ರೀಧರ ಹಾಗೂ ಸ್ಥಳೀಯ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಢ ಅವರ ವೈಯಕ್ತಿಕ ಹಣದಿಂದ ಆ ಭೂಮಿ‌ ಖರೀದಿಸಿ ಬಾವಿ ತೊಡಿಸಿದರು. ಇದರಿಂದ ನೀರು ಸಿಕ್ಕಿತು. ಆಗ ಜೆಜೆಎಂ ಹಾಗೂ ಸರ್ಕಾರದ ಯೋಜನೆ ಬಳಸಿ ಇಡೀ ಗ್ರಾಮಕ್ಕೆ ಪ್ರತಿ‌ ಮನೆ ಮನೆಗೆ 24*7 ನೀರು ಸರಬರಾಜು ಮಾಡಲಾಗುತ್ತಿದೆ.

  • ನೀರಿನ ಟ್ಯಾಂಕ್‌ಗೆ ವಿಷಬೆರಕೆ: ವಾಟರ್‌ಮನ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

    ನೀರಿನ ಟ್ಯಾಂಕ್‌ಗೆ ವಿಷಬೆರಕೆ: ವಾಟರ್‌ಮನ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

    ರಾಯಚೂರು: ಗ್ರಾಮಕ್ಕೆ ಸರಬರಾಜಾಗುವ ನೀರಿನ ಟ್ಯಾಂಕ್‌ಗೆ (Water Tank) ವಿಷ ಬೆರಕೆಯಾಗಿರುವ ಘಟನೆ ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ತವಗ ಗ್ರಾಮದಲ್ಲಿ ನಡೆದಿದೆ.

    ನೀರಿನ ಟ್ಯಾಂಕ್‌ಗೆ ವಿಷ ಬೆರಕೆಯಾಗಿದ್ದು, ಗ್ರಾಮ ಪಂಚಾಯಿತಿ ವಾಟರ್‌ಮನ್ (WaterMan) ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ.ಇದನ್ನೂ ಓದಿ: ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮನ ಸಲ್ಲಿಸಿದ ಪೂಜಾ ಗಾಂಧಿ

    ನೀರು ಬಿಟ್ಟ ಕೂಡಲೇ ಕೆಲ ಗ್ರಾಮಸ್ಥರು ನೀರು ವಾಸನೆ ಬರುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಕೂಡಲೇ ನೀರನ್ನು ಪರಿಶೀಲಿಸಿದಾಗ ಅನುಮಾನ ಮೂಡಿ ನೀರಿನ ಸರಬರಾಜನ್ನು ನಿಲ್ಲಿಸಲಾಗಿದೆ. ಟ್ಯಾಂಕ್ ಬಳಿ ಬೀಳುವ ನೀರು ಸಹ ನೊರೆ, ದುರ್ವಾಸನೆಯಿಂದ ಕೂಡಿದ್ದಕ್ಕೆ ಅನುಮಾನ ಮೂಡಿದೆ. ವಾಟರ್‌ಮನ್ ಆದೆಪ್ಪ ಕೂಡಲೇ ಟ್ಯಾಂಕ್ ಖಾಲಿ ಮಾಡಿದ್ದಾನೆ ಹಾಗೂ ನೀರನ್ನು ಯಾರು ಬಳಸದಂತೆ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಭಾರೀ ಅನಾಹುತ ತಪ್ಪಿದೆ.

    ದುಷ್ಕರ್ಮಿಗಳು ಜೀವಹಾನಿ ಮಾಡಲು ಈ ಕೃತ್ಯ ಎಸಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಪರ್ಯಾಯ ನೀರಿನ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ. ವಾಟರ್‌ಮನ್ ಆದಪ್ಪ ದೂರು ನೀಡಿದ್ದು, ಹಟ್ಟಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: Mysuru Dasara: ಸುಧಾಮೂರ್ತಿ ಸಾಕಿದ ಶ್ವಾನ ಗೋಪಿಗೆ ಬಹುಮಾನ

  • ನೀರಿನ ಸಂಪಿನೊಳಗೆ ವ್ಯಕ್ತಿಯ ಶವ ಪತ್ತೆ-ಮೂರು ದಿನಗಳಿಂದ ಪತ್ನಿ ನಾಪತ್ತೆ

    ನೀರಿನ ಸಂಪಿನೊಳಗೆ ವ್ಯಕ್ತಿಯ ಶವ ಪತ್ತೆ-ಮೂರು ದಿನಗಳಿಂದ ಪತ್ನಿ ನಾಪತ್ತೆ

    ಬೆಂಗಳೂರು: ನೀರಿನ ಸಂಪ್ ನೊಳಗೆ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ವಾಜರಹಳ್ಳಿಯಲ್ಲಿ ಕೆಲ ದಿನದ ಹಿಂದೆ ವಾಸವಿದ್ದ, ಆಂಧ್ರ ಪ್ರದೇಶದ ಕಲ್ಯಾಣದುರ್ಗ ಮೂಲದ ಈರಲಿಂಗಪ್ಪ ಕೊಲೆಯಾದ ದುರ್ದೈವಿ. ಪೊಲೀಸರು ಈರಲಿಂಗಪ್ಪನ ಪತ್ನಿ ಈಶ್ವರಮ್ಮನ್ನೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ.

    ಪತಿ ಈರಲಿಂಗಪ್ಪನನ್ನು ಕೊಂದು ಈಶ್ವರಮ್ಮ ನಂತರ ಪ್ರಕರಣವನ್ನ ಮುಚ್ಚಿಹಾಕಲು, ನೀರಿನ ಸಂಪ್ ನೊಳಗೆ ಹಾಕಿರುವುದು ಮೆಲ್ನೋಟಕ್ಕೆ ಕಂಡುಬಂದಿದೆ. ಸುಮಾರು ಮೂರ್ನಾಲ್ಕು ದಿನಗಳ ಹಿಂದೆಯೇ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಮೃತ ದೇಹ ಸಂಪೂರ್ಣವಾಗಿ ಕೊಳೆತು ನಾರುತಿದ್ದು, ವಾಸನೆ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ.

    ಪ್ರತಿದಿನ ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಜಗಳವಾಡುತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನೂ ಹೆಂಡತಿ ಮೂರು-ನಾಲ್ಕು ದಿನದಿಂದ ನಾಪತ್ತೆಯಾಗಿರುವುದು ಇನ್ನಷ್ಟು ಅನುಮಾನಗಳಿಗೆ ಪುಷ್ಟಿ ನೀಡುವಂತೆ ಇದೆ. ಸದ್ಯ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತಿದ್ದಾರೆ.